ಕಥಾಲೋಕ

ವ್ಯಾಘ್ರತೀರ್ಥ ಮತ್ತು ಕೆಂಚಿ ಕಟ್ಟೆ: ಜಗದೀಶ ಸಂ.ಗೊರೋಬಾಳ

ಭುವನೇಶ್ವರದಿಂದ ಇನ್ನೂರೈವತ್ತು ಮೈಲು ದೂರದಲ್ಲಿ ವ್ಯಾಘ್ರತೀರ್ಥವೆಂಬ ಪುಟ್ಟ ಹಳ್ಳಿ. ಆ ಹಳ್ಳಿಯಲ್ಲಿ ಇರುವುದೇ ಬೆರಳೆಣಿಕೆಯಷ್ಟು ಮನೆಗಳು. ಇರುವ ಮನೆಗಳಲ್ಲೂ ದುಡಿವ ಶಕ್ತಿ ಇರುವವರೆಲ್ಲ ಸಮೀಪದ ನಗರಗಳಿಗೆ ವಲಸೆ ಹೋಗಿದ್ದರು. ಬರಗಾಲದ ಬಾದೆಯಿಂದ ಬೆಂದ ಕುಟುಂಬಗಳು ಇತ್ತ ಹಳ್ಳಿಯನ್ನೂ ಬಿಡದೆ ಗತಕಾಲದ ವೈಭವವನ್ನು ನೆನೆಯುತ್ತಾ ದಿನಕಳೆಯುತ್ತಿದ್ದವು. “ಹಿಂದೆ ಈ ಊರಲ್ಲಿ ಭಯಂಕರವಾದ ಕಾಡಿತ್ತು. ಕಾಡಿನಲ್ಲಿ ಕ್ರೂರಮೃಗಗಳಿದ್ದವು. ಅಲ್ಲಲ್ಲಿ ನೀರಿನ ಹೊಂಡಗಳೂ ಸಾಕಷ್ಟಿದ್ದವು. ಊರಾಚೆ ಇರುವ ದೊಡ್ಡ ಹೊಂಡವೇ ವ್ಯಾಘ್ರತೀರ್ಥ. ಇದಕ್ಕ ಆ ಹೆಸರು ಬರಲು ಕಾರಣ ಯಾವಾಗಲೂ ಈ […]

ಕಥಾಲೋಕ

ಸಂಬಂಧಗಳು: ವೈ. ಬಿ. ಕಡಕೋಳ

ಆ ದಿನ ಎಂದಿನಂತಿರಲಿಲ್ಲ. ವಿಜಯ ಪೂರ್ಣ ಆಯಾಸಗೊಂಡಿದ್ದ. ಮನೆಯಲ್ಲಿ ಕುಟುಂಬದ ಎಲ್ಲ ಸದಸ್ಯರಿಗೂ ಇವರ ಆರೋಗ್ಯದ ಕುರಿತು ಚಿಂತೆ ಆರಂಭವಾಗಿತ್ತು. ತಮ್ಮ ಪುಟ್ಟ ಹಳ್ಳಿಯಲ್ಲಿನ ವೈದ್ಯರು ‘ನಿಮೋನಿಯ’ ಆಗಿದೆ ಎಂದು ಮೂರು ದಿನಗಳ ಕಾಲ ಸೈಲಾಯಿನ್ ಹಚ್ಚಿದ್ದರು. ಆರೋಗ್ಯ ಬಿಗಡಾಯಿಸತೊಡಗಿತು. ಪಕ್ಕದ ಶಹರಕ್ಕೆ ಹೋದರೆ ಅವರು ಕೋವಿಡ್ ಟೆಸ್ಟ ಮಾಡಿಸಿಕೊಂಡು ಬರಲು ಸೂಚಿಸಿದರು. ಅಲ್ಲಿ ‘ನೆಗೆಟಿವ್’ ಬಂದರೂ ‘ನ್ಯೂಮೇನಿಯ’ ಇದೆ ಎಂದು ಗೊತ್ತಾದ ಮೇಲೂ ತಮ್ಮ ಆಸ್ಪತ್ರೆಯಲ್ಲಿ ಸೌಲಭ್ಯಗಳು ಇಲ್ಲ ನಗರ ಪ್ರದೇಶದ ದೊಡ್ಡ ದೊಡ್ಡ ಆಸ್ಪತ್ರೆಗಳಲ್ಲಿ […]

ಕಥಾಲೋಕ

ತುಂಬಿದ ಮಡಿಲು: ಭಾರ್ಗವಿ ಜೋಶಿ…..

ಅಂದು ನಸುಕಿನಲ್ಲಿ ನಾಲ್ಕನೇ ದಿನದ ನೀರು ಹಾಕಿಕೊಂಡು ಅಡುಗೆ ಮನೆ ಹತ್ತಿರ ಬರುತ್ತಿದ್ದ ಪದ್ಮಾವತಿಗೆ ಒಳಗಡೆ ಅತ್ತೆ ರಮಾಬಾಯಿ ಒಲೆ ಮುಂದೆ ಕುಳಿತು ಕಾಫಿ ಮಾಡುತ್ತ ಹೇಳುತ್ತಿದ್ದರು ಮಾತು ಜೋರು ಜೋರಾಗಿ ಕೇಳಿಸುತ್ತಿತ್ತು. ತಾಯಿ ಮಾತಿಗೆ ಎದುರು ಕುಳಿತ ಶ್ರೀನಿವಾಸ ಹೂಂ ಗುಟ್ಟುತ್ತಿದ್ದ. “ಅಲ್ಲೋ ಶ್ರೀನಿ, ನಿನ್ ಮದುವೆ ಆಗಿ ಐದು ವರ್ಷ ಆತು, ಇನ್ನು ಮಕ್ಕಳು, ಮರಿ, ಸುದ್ದಿನೇ ಇಲ್ಲೆಲ್ಲೋ? ನೋಡು ಇನ್ನು ತಡ ಮಾಡಬೇಡ. ನನ್ ಮಾತು ಕೇಳು. ಇನ್ನೊಂದು ಮದುವೆ ಮಾಡಿಕೊಂಡು ಬಿಡು […]

ಕಥಾಲೋಕ

ಆಕ್ರಮಣ (ಕೊನೆಯ ಭಾಗ): ಜೆ.ವಿ. ಕಾರ್ಲೊ

ಇಲ್ಲಿಯವರೆಗೆ ಲೆನಿಂಜೆನ್ನನಿಗೆ ಒಮ್ಮೆಲೇ ಸಿಡಿಲು ಹೊಡೆದಂತೆ ಜ್ಞಾಪಕಕ್ಕೆ ಬಂದಿತು: ಔಟ್ ಹೌಸಿನಲ್ಲಿ ಈ ವರೆಗೆ ಉಪಯೋಗಿಸದಿದ್ದ ಎರಡು ಫೈರ್ ಎಂಜಿನುಗಳು ಹಾಗೇ ತುಕ್ಕು ಹಿಡಿದು ಬಿದ್ದಿದ್ದವು. ಲೆನಿಂಜೆನ್ ಅವಗಳನ್ನು ಹೊರಗೆಳೆಸಿ ಪೆಟ್ರೊಲ್ ಟ್ಯಾಂಕಿಗೆ ಜೋಡಿಸಿದ. ಅಷ್ಟರಲ್ಲಿ ಕೆಲವು ಇರುವೆಗಳು ಮೇಲೆ ಹತ್ತಿದ್ದವು. ಫೈರ್ ಎಂಜಿನುಗಳು ಸ್ಟಾರ್ಟ್ ಆಗುತ್ತಲೇ ಪೆಟ್ರೊಲನ್ನು ಇರುವೆಗಳ ಮೇಲೆ ಹರಿಸಿ ಮತ್ತೆ ಅವುಗಳನ್ನು ಕಾಲುವೆಗೆ ದಬ್ಬಲಾಯಿತು ಮತ್ತು ಕಾಲುವೆಗೆ ಮೊದಲಿನಂತೆ ಪೆಟ್ರೋಲು ಹರಿಯಲಾಂಭಿಸಿತು. ಕೆಲ ಹೊತ್ತಿನ ಮಟ್ಟಿಗಾದರೂ ಲೆನಿಂಜೆನ್ ಇರುವೆಗಳನ್ನು ತಡೆಯುವುದರಲ್ಲಿ ಯಶಸ್ವಿಯಾಗಿದ್ದ. ಆದರೂ […]

ಕಥಾಲೋಕ

ಆಕ್ರಮಣ (ಭಾಗ ೩): ಜೆ.ವಿ. ಕಾರ್ಲೊ

ಇಲ್ಲಿಯವರೆಗೆ ಜಿಂಕೆಯ ಗ್ರಾಚ್ಚಾರ ಕೆಟ್ಟು ರಾಕ್ಷಸ ಇರುವೆಗಳ ಆಕ್ರಮಣಕ್ಕೆ ತುತ್ತಾಗಿತ್ತು. ಮೊಟ್ಟ ಮೊದಲಿಗೆ ಕಣ್ಣುಗಳ ಮೇಲೆ ಆಕ್ರಮಣ ನಡೆಸುವುದೇ ಈ ಇರುವೆಗಳ ವಿಶಿಷ್ಠತೆಯಾಗಿತ್ತು. ಬೇಟೆಯನ್ನು ಕುರುಡಾಗಿಸಿ ಅಸಹಾಯಕ ಸ್ಥಿತಿಗೆ ದೂಡುವುದೇ ಇರುವೆಗಳ ಕಾರ್ಯಾಚರಣೆಯ ಗುಟ್ಟಾಗಿತ್ತು. ತನ್ನ ಹೆಗಲಿನ ಮೇಲಿದ್ದ ಕೋವಿಯಿಂದ ಲೆನಿಂಜೆನ್ ಆ ಪ್ರಾಣಿಯನ್ನು ನೋವಿನಿಂದ ಮುಕ್ತಗೊಳಿಸಿ ತನ್ನ ಜೇಬುಗಡಿಯಾರವನ್ನು ಹೊರತೆಗೆದು ಸಮಯವನ್ನು ನೋಡಿ೮ದ. ನೋಡಲು ಕಿರಿಕಿರಿ ಅನಿ೯ಸಿದರೂ ಅವನೂ ಮುಂದಿದ್ದ ದೃಶ್ಯವನ್ನು ನೋಡಿದ.. ಆರು ನಿಮಿಷ. ಕೇವಲ ಆರು ನಿಮಿಷಗಳು. ಜಿಂಕೆಯ ಅಸ್ಥಿಪಂಜರ ಅವನ ಎದುರಿಗೆ […]

ಕಥಾಲೋಕ

ಗೆಳೆಯನಲ್ಲ (ಕೊನೆಯ ಭಾಗ): ವರದೇಂದ್ರ ಕೆ.

ಇಲ್ಲಿಯವರೆಗೆ (11) “ತಪ್ಪು ಮಾಡುವುದು ಸಹಜ, ಅದನ್ನು ಅರಿತು ಪಶ್ಚಾತ್ತಾಪದಿಂದ ಬದಲಾಗಿ ಉತ್ತಮ ವ್ಯಕ್ತಿ ಆಗುವವನೇ ನಿಜವಾದ ಮನುಜ. ನಾವು ಖಂಡಿತ ನಿಮ್ಮನ್ನು ಕ್ಷಮಿಸುತ್ತೇವೆ, ನಿಮ್ಮ ಮೇಲಿನ ಕೋಪವೆಲ್ಲ ಪ್ರೀತಿಗೆ ಇಂದು ಇಳಿದಿದೆ. ಅವಳ ಮನದಲ್ಲಿನ ನೋವು ಇಂದು ಹೊರ ಬಂದು ಅವಳ ಮನಸು ನಿರಾಳವಾಗಿದೆ. ಪ್ರೀತಿ ಇಷ್ಟು ನೊಂದಕೊಂಡ ಮನುಷ್ಯನಿಗೆ ಮತ್ತೆ ನೋವು ಕೊಡುವುದು ತರವಲ್ಲ. ನಿಮ್ಮ ಸ್ನೇಹ ಯಾವತ್ತಿಗೂ ಚಿರಾಯುವಾಗಿರಬೇಕು. ನೀನೂ ನಿನ್ನ ಸ್ನೇಹಿತನ ತಪ್ಪನ್ನು ಮನ್ನಿಸಬೇಕು ಎಂದು ಪ್ರೀತಿಗೆ ಹೇಳುತ್ತಾನೆ ಸಂಪತ್. ಸಂತೋಷ್ […]

ಕಥಾಲೋಕ ಪಂಜು-ವಿಶೇಷ

ಆಕ್ರಮಣ (ಭಾಗ 2): ಜೆ.ವಿ. ಕಾರ್ಲೊ

ಇಲ್ಲಿಯವರೆಗೆ ತಾನೊಬ್ಬ ಮಹಾನ್ ಬುದ್ಧಿವಂತ ಎಂದು ತಿಳಿದುಕೊಂಡಿರುವ ಮನುಷ್ಯನಿಗೆ ಒಂದು ಯಕಃಶ್ಚಿತ್ ಇರುವೆ ಯೋಚಿಸಲು ಶಕ್ತವಾಗಿರುವುದಷ್ಟೇ ಅಲ್ಲದೆ ಯೋಜನೆಯನ್ನೂ ರೂಪಿಸಲೂ ಶಕ್ತವಾಗಿರುತ್ತದೆ ಎಂದರೆ ನಂಬುವುದು ಕಷ್ಟವೇ. ಲೆನಿಂಜೆನ್ನನ ಐರೋಪ್ಯ ಬುದ್ಧಿವಂತಿಕೆ ಮತ್ತು ಬ್ರೆಜಿಲಿನ್ನಿಯರರ ದೇಶಿ ಬುದ್ಧಿವಂತಿಕೆ ಈ ಇರುವೆಗಳ ಬುದ್ದಿವಂತಿಕೆಗೆ ಸರಿಸಾಟಿಯಾಗಬಲ್ಲುದೇ? ನಿಜ. ಲೆನಿಂಜೆನ್, ಇರುವೆಗಳು ಒಳಗೆ ಬರದಂತೆ ನೀರಿನ ಕಾಲುವೆಯನ್ನೇನೋ ನಿರ್ಮಿಸಿದ್ದ. ಲೆನಿಂಜೆನ್ನನ ಯೋಜನೆ ಏನೇ ಇರಲಿ.. ಅದನ್ನು ಹಾಳುಗೆಡುವುದೇ ಇರುವೆಗಳ ಪ್ರತಿಯೋಜನೆಯಾಗಿತ್ತು. ಸಂಜೆ ನಾಲ್ಕರಷ್ಟೊತ್ತಿಗೆ ಇರುವೆಗಳ ಆಕ್ರಮಣದ ಅಂತಿಮ ರೂಪುರೇಷೆಗಳು ತಯಾರಾದಂತೆ ಕಾಣಿಸಿತು. ಕಾಲುವೆಯೊಂದೇ […]

ಕಥಾಲೋಕ

ಗೆಳೆಯನಲ್ಲ (ಭಾಗ 5): ವರದೇಂದ್ರ ಕೆ.

ಇಲ್ಲಿಯವರೆಗೆ… (9) ಪ್ರೀತಿಯ ತಂದೆ ಬಂದು “ಅಳಿಯಂದ್ರೆ, ಗೋಪಾಲಯ್ಯ ಎಂದರೆ ಯಾರು? ಒಂದೇ ಸಮನೆ ನಿಮ್ಮ ತಾಯಿಯವರು, ಗೋಪಾಲಯ್ಯ ಕೊಲೆ ಕೊಲೆ ಎನ್ನುತ್ತಿದ್ದಾರೆ. ಬೇಗ ಬನ್ನಿ” ಎನ್ನುತ್ತಾರೆ. ಗೋಪಾಲಯ್ಯ ಹೋ ನನ್ನ ತಂದೆಯವರನ್ನು ಕೊಲ್ಲಿಸಿದವನು ಎಂದು ಆಗಾಗ ಅಮ್ಮ ಹೇಳುತ್ತಿದ್ದರು. ಈಗ್ಯಾಕೆ ಅವನ ಹೆಸರು ಹೇಳುತ್ತಿದ್ದಾರೆ. ಎಂದು ಆಶ್ಚರ್ಯದಿಂದ ಒಳ ಓಡುತ್ತಾನೆ. ಕಮಲಮ್ಮಗೆಎಚ್ಚರವಾಗಿರುತ್ತೆ. ಅಮ್ಮಾ, ಏನಾಯಿತಮ್ಮ? ಎಂದಾಗ ಬೆಳಿಗ್ಗೆ ಗೋಪಾಲಯ್ಯನ ಹಾಗೆಯೇ ಇದ್ದವ ಯಾರೋ ನಮ್ಮ ಮನೆ ಮುಂದೆ ಬಂದಿದ್ದ, ನಿಮ್ಮಪ್ಪನನ್ನು ಕೊಲ್ಲಿಸಿದ್ದು ಸಾಕಾಗಲಿಲ್ಲವೇನೋ, ಮತ್ಯಾರನ್ನು ಕೊಲ್ಲಲು […]

ಕಥಾಲೋಕ ಪಂಜು-ವಿಶೇಷ

ಜೀವನದ ಆಸೆ ಆಕಾಂಕ್ಷೆಗಳು ಹಾಗೂ…..?: ಶೀಲಾ ಎಸ್.‌ ಕೆ.

ಒಂದು ಲೋಟ ಕಾಫಿ ಕೊಡ್ತಿಯಾ ಪದ್ಮ ಎಂದು ಹಜಾರಕ್ಕೆ ಬಂದು ಕುಳಿತರು ನಂಜುಂಡಪ್ಪ. ಕೈಯಲ್ಲಿ ಕಾಫಿ ಲೋಟ ಹಿಡಿದು ಬಂದ ಪದ್ಮ ತುಂಬ ಸುಸ್ತಾದವರಂತೆ ಕಾಣುತಿದ್ದಿರಿ ಎಂದು ಕೇಳಿದರು, ಆಗ ತಾನೇ ಕೆಲಸ ಮುಗಿಸಿ ಬಂದಿದ್ದ ತನ್ನ ಗಂಡನನ್ನ. ಸ್ವಲ್ಪ ಕೆಲಸ ಜಾಸ್ತಿ ಈಗ ಮೊದಲಿನಂತೆ ಅಲ್ಲ ಎಲ್ಲ ಹೊಸ ಹೊಸ ಪ್ರಯೋಗಗಳು, ಹೊಸ ಬಗೆಯ ಕೋಚಿಂಗ್ ಅಂತಾರೆ, ಈಗ ಅದನ್ನು ಕಲಿಯಲು ಅಥವಾ ಅಳವಡಿಸಿಕೊಳ್ಳಲು ಸ್ವಲ್ಪ ಸಮಯ ಹಾಗು ಶ್ರಮವಾಗುತ್ತಿದೆ ಅಷ್ಟೆ ಎಂದರು. ಸರಿ ಬೇಗ […]

ಕಥಾಲೋಕ

ಬಂಜೆ ಪದಕ್ಕೆ ಪುಲ್ಲಿಂಗ ಏನು?: ಗಿರಿಜಾ ಜ್ಞಾನಸುಂದರ್

“ಚಪಾತಿ ಹೊತ್ತಿಹೋಗ್ತಿದೆ, ಸ್ವಲ್ಪ ನೋಡ್ಬಾರ್ದಾ?” ತನ್ನ ಅತ್ತೆಯ ಕೂಗಿನಿಂದ ವರ್ತಮಾನಕ್ಕೆ ಬಂದಳು ಪ್ರೀತಿ. “ಅಡುಗೆಮನೆಲ್ಲಿದೀಯ….. ಮಾಡೋ ಕೆಲ್ಸದ ಕಡೆ ಗಮನ ಇರ್ಲಿ” ಅಂದು ಯಾಕೋ ಅವಳ ಅತ್ತೆ ಕಮಲಾ ಸ್ವಲ್ಪ ಖಾರವಾಗಿಯೇ ಇದ್ದಳು. ಪ್ರೀತಿಗೆ ಏನು ಹೇಳಲು ತೋಚದೆ ಸುಮ್ಮನೆ ತಲೆ ಬಗ್ಗಿಸಿ ಚಪಾತಿ ಮಾಡುವ ಕಡೆ ಗಮನ ಮಾಡಿದ್ದಳು. ” ಏನ್ರಿ, ನೆನ್ನೆ ಸೀತಮ್ಮನ ಮನೆಗೆ ಕುಂಕುಮಕ್ಕೆ ಹೋಗಿದ್ದೆ. ಅವಳ ಮಗನ ಮಾಡುವೆ ಮಾಡಿ ಇನ್ನು ೩ ವರ್ಷ ಆಗಿಲ್ಲ…. ಆಗ್ಲೇ ಮನೆಲ್ಲಿ ಅವಳಿ ಜವಳಿ […]

ಕಥಾಲೋಕ

ಆಕ್ರಮಣ (ಭಾಗ 1): ಜೆ.ವಿ. ಕಾರ್ಲೊ

ಮೂಲ: ಕಾರ್ಲ್ ಸ್ಟೀಫನ್ ಸನ್ ಅನುವಾದ: ಜೆ.ವಿ. ಕಾರ್ಲೊ “ಒಂದು ವೇಳೆ ಅವು ದಿಕ್ಕು ಬದಲಿಸಿದರೆ, ಬೇರೆ ಮಾತು.. ಆದರೆ ಹಾಗೆಂದು ಭಾವಿಸಲು ಯಾವುದೇ ಆಧಾರಗಳಿಲ್ಲ. ಅವು ನಿಮ್ಮ ತೋಟದ ಕಡೆಗೇ ಬರುತ್ತಿವೆ. ಹೆಚ್ಚೆಂದರೆ ಇನ್ನು ಎರಡು ದಿವಸ!” ಲೆನಿಂಜೆನ್ನನ ಮುಖದ ಮೇಲೆ ಆತಂಕದ ಗೆರೆಗಳು ಮೂಡಿದವು. ತನ್ನ ನಂದಿ ಹೋಗಿದ್ದ ದಪ್ಪನೆಯ ಚಿರೂಟನ್ನು, ಹಸಿದವನಂತೆ ಗಬಗಬನೆ ಸೇದತೊಡಗಿದ. ಅವನಿಗೆ ಸುದ್ಧಿ ಕೊಡಲು ಬಂದಿದ್ದ ಜಿಲ್ಲಾಧಿಕಾರಿಯ ಮುಖದ ಮೇಲೂ ಚಿಂತೆಯ ಗೆರೆಗಳು ಮೂಡಿದ್ದವಷ್ಟೇ ಅಲ್ಲದೆ ಅವನು ಯಥೇಚ್ಛವಾಗಿ […]

ಕಥಾಲೋಕ

ಮರೆಯಲಾಗದ ಮದುವೆ (ಭಾಗ 6): ನಾರಾಯಣ ಎಮ್ ಎಸ್

ಇಲ್ಲಿಯವರೆಗೆ -೬- ರಾತ್ರಿ ಎರಡು ಘಂಟೆಗೆ ರೈಲು ನೆಲ್ಲೂರನ್ನು ತಲುಪಿತು. ಅದು ಎಲ್ಲರೂ ಹೆಣಗಳಂತೆ ನಿದ್ರಿಸುವ ಹೊತ್ತು. ಕಳ್ಳ ಕಾಕರು ಸಕ್ರಿಯರಾಗುವ ಹೊತ್ತು. ಸಾಮಾನ್ಯವಾಗಿ ಆ ಸಮಯದಲ್ಲಿ ರೈಲ್ವೇ ಪೋಲೀಸರು ಪ್ರಯಾಣಿಕರನ್ನು ಜಾಗೃತಗೊಳಿಸುವುದು ಪದ್ಧತಿ. ಅದರಂತೆ ನೆಲ್ಲೂರಿನಲ್ಲಿ ರೈಲುಹತ್ತಿದ ಇಬ್ಬರು ರೈಲ್ವೇ ಪೋಲೀಸರು “ನಿಂ ನಿಂ ಬೆಲೆಬಾಳೋ ವಸ್ತು ಜೋಪಾನಾ… ಕಿಟ್ಕಿ ಬಾಗ್ಲು ಹಾಕ್ಕಳೀ…ಒಡವೆ ವಸ್ತ್ರ ಜೋಪಾನಾ…” ಎಂದು ಪ್ರತಿಬೋಗಿಯಲ್ಲೂ ಕೂಗುತ್ತಾ ಬರುತ್ತಿದ್ದರು. ಅಯ್ಯರ್ ಬೋಗಿಯಲ್ಲಿಯೂ ಬಂದು ಕೂಗುತ್ತಿದ್ದಂತೆ ಅಯ್ಯರ್ ತಂಡಕ್ಕೆ ಸೇರದ ಅಲ್ಲಿದ್ದ ಪ್ರಯಾಣಿಕನೊಬ್ಬ “ಬೋಗಿ […]

ಕಥಾಲೋಕ

ಮರೆಯಲಾಗದ ಮದುವೆ (ಭಾಗ 5): ನಾರಾಯಣ ಎಮ್ ಎಸ್

ಇಲ್ಲಿಯವರೆಗೆ -೪- ದಿನಕಳೆದಂತೆ ಕಾವಶ್ಶೇರಿಯ ದನದಕೊಟ್ಟಿಗೆಯಲ್ಲಾದ ಮುಖಭಂಗದ ನೆನೆಪು ಮಾಸಿದಂತಾಗಿ ಕೊನೆಗೆ ಗುರುತುಸಿಕ್ಕದಂತೆ ಅಯ್ಯರ್ ಮನದಾಳದಲ್ಲೆಲ್ಲೋ ಹೂತುಹೋಗಿತ್ತು. ಹೆಚ್ಚೂಕಮ್ಮಿ ವರುಷ ಎರಡು ವರುಷಕ್ಕೊಂದರಂತೆ ಅಯ್ಯರ್ ಒಬ್ಬೊಬ್ಬರೇ ಹೆಣ್ಣುಮಕ್ಕಳ ಮದುವೆ ಮಾಡಿಮುಗಿಸಿದರು. ಅವುಗಳ ಪೈಕಿ ಯಾವುದಾದರೊಂದು ಮದುವೆಗೆ ಮುಕ್ತಾ ಬಂದಿದ್ದರೆ ಮಾಸಿದ ನೆನಪು ಮತ್ತೆ ಹಸಿರಾಗುತ್ತಿತ್ತೇನೋ! ಆದರೆ ಹೈದ್ರಾಬಾದಿನ ಬ್ಯಾಂಕಿನಲ್ಲಿ ಗುಮಾಸ್ತರಾಗಿದ್ದ ಮುರಳೀಧರರಿಗೆ ಉದ್ಯೋಗದಲ್ಲಿ ಭಡ್ತಿ ದೊರೆತಂತೆಲ್ಲಾ ಮೂರುನಾಲ್ಕು ವರ್ಷಗಳಿಗೊಮ್ಮೆ ಬಾಂಬೆ, ಡೆಲ್ಲಿ, ಕಲ್ಕತ್ತಾ, ಎಂದು ವರ್ಗವಾಗುತ್ತಲೇ ಇತ್ತು. ಅಲ್ಲದೇ ಉದ್ಯೋಗನಿಮಿತ್ತ ಕಾಲಿಗೆಚಕ್ರಕಟ್ಟಿಕೊಂಡಂತೆ ಸುತ್ತುತ್ತಿದ್ದ ಅವರಿಗೆ ಮದುವೆ ಮುಂಜಿಗಳೆಂದು […]

ಕಥಾಲೋಕ

ಮರೆಯಲಾಗದ ಮದುವೆ (ಭಾಗ 4): ನಾರಾಯಣ ಎಮ್ ಎಸ್

ಇಲ್ಲಿಯವರೆಗೆ ಅಂದು ವೈಕುಂಠಸಮಾರಾಧನೆ. ಹನ್ನೆರಡು ದಿನದ ಅಶುಭ ಕಳೆದು ನಡೆಯುತ್ತಿದ್ದ ಶುಭಕಾರ್ಯವದು. ನೆಂಟರಷ್ಟರಿಂದ ತುಂಬಿದ ಮನೆ ಚಟುವಟಿಕೆಗಳ ಗಿಜಿಗಿಜಿಯಿಂದ ತುಂಬಿತ್ತು. ಅಂದಿನ ಸಮಾರಂಭ ಮುಗಿಸಿ ಅಯ್ಯರ್ ಮರುದಿನ ತಿರುವಾರೂರಿಗೆ ಹೊರಡುವವರಿದ್ದರು. ಬೆಳಗಿನ ಕಾಫಿ ಕುಡಿದು ಕೊಳಕ್ಕೆ ಹೋಗಿ ಸ್ನಾನ ಮುಗಿಸಿದ ಅಯ್ಯರ್ ಆಗಷ್ಟೆ ಮನೆಗೆ ಹಿಂತಿರುಗಿ ಹಜಾರದಲ್ಲಿ ಕುಳಿತಿದ್ದ ಇನ್ನೂ ಐದಾರು ಜನರೊಂದಿಗೆ ಕುಳಿತು ತಿಂಡಿತಿನ್ನುತ್ತಿದ್ದರು. ಅಷ್ಟರಲ್ಲಿ ಸಾಲಾಗಿ ಕುಳಿತಿದ್ದವರಿಗೆಲ್ಲಾ ಚಟ್ನಿ ಬಡಿಸಿಕೊಂಡು ಬಂದ ಮುಕ್ತಾಳನ್ನು ಕಂಡ ಅಯ್ಯರಿನ ಸ್ಥಿಮಿತ ತಪ್ಪಿದಂತಾಯಿತು. ಚಿಕ್ಕಚಿಕ್ಕ ವಿಷಯಗಳು ಮಾಡುವ ದೊಡ್ಡ […]

ಕಥಾಲೋಕ

ಗೆಳೆಯನಲ್ಲ (ಭಾಗ 4): ವರದೇಂದ್ರ ಕೆ.

ಇಲ್ಲಿಯವರೆಗೆ… (7) ಇತ್ತ ಕಮಲಮ್ಮ ಸಂಪತ್ಗೆ ಫೋನ್ ಮಾಡಿ ಪ್ರೀತಿ ತವರು ಮನೆಗೆ ಹೋದ ವಿಷಯ ತಿಳಿಸಿ, ಮನೆಗೆ ಬೇಗ ಬರಲು ಹೇಳುತ್ತಾಳೆ. ಸಂಜೆ ಆಯಿತು ಮಗ ಮನೆಗೆ ಬರುವ ಸಮಯ ಬದಲಾಗಿದೆ, ಫೋನ್ ಮಾಡಿದರೆ ಸ್ವೀಕರಿಸುವುದಿಲ್ಲ. ಸ್ವೀಕರಿಸಿದರೂ ಸರಿಯಾಗಿ ಮಾತನಾಡುವುದಿಲ್ಲ. ಯಾವಾಗಲೂ ಏನೋ ಚಿಂತೆಯಲ್ಲಿರುವಂತೆ ಕಾಣಿಸುತ್ತಾನೆ. ಮದುವೆಯಾಗಿ ಹೊಸತರಲ್ಲಿ ಹೇಗಿರಬೇಕು? ಸಂಪತ್ನ ವಿಚಾರಿಸಬೇಕು ಮನೆಗೆ ಬಂದ ಕೂಡಲೆ ಎಂದು ಕಮಲಮ್ಮ ಕಾದು ಕೂಡುತ್ತಾರೆ. ತಡರಾತ್ರಿ ಮನೆಗೆ ಬಂದ ಸಂಪತ್ ಅನ್ನು ತಾಯಿ ವಿಚಾರಿಸುತ್ತಾಳೆ, “ಸಂಪತ್, ಪ್ರೀತಿ […]

ಕಥಾಲೋಕ

ಮರೆಯಲಾಗದ ಮದುವೆ (ಭಾಗ 3): ನಾರಾಯಣ ಎಂ ಎಸ್

   ಇಲ್ಲಿಯವರೆಗೆ -೩- ಇತ್ತೀಚೆಗೆ ಸೀತಮ್ಮನ ತಂದೆಯವರ ಆರೋಗ್ಯ ಕ್ಷೀಣಿಸಿ ಹಾಸಿಗೆ ಹಿಡಿದುಬಿಟ್ಟಿದ್ದರು. ಮಧುರಮ್ಮನವರಲ್ಲೂ ಮುಂಚಿನ ಕಸುವು ಉಳಿದಿರಲಿಲ್ಲ. ಹಾಗಾಗಿ ಈ ಬಾರಿ ತನ್ನ ಏಳನೇ ಹೆರಿಗೆಗೆ ಸೀತಮ್ಮ ಕಾವಶ್ಯೇರಿಗೆ ಹೋಗಲಿಲ್ಲ. ಆದರೆ ಬಸುರಿ ಹೆಂಗಸಿಗೆ ತಗುಲಿದ ಟಯ್ಫಾಡ್ ಖಾಯಿಲೆ ಸೀತಮ್ಮಳನ್ನು ಹಣಿದುಬಿಟ್ಟಿತು. ಸಾಲದ್ದಕ್ಕೆ ಏಳನೇ ತಿಂಗಳಿಗೆ ಗರ್ಭಪಾತವೂ ಆಗಿಹೋಯಿತು. ಸೀತಮ್ಮಳ ಪುಣ್ಯ! ಅವಳ ಆಯಸ್ಸು ಗಟ್ಟಿಯಿದ್ದಿರಬೇಕು. ತಿರವಾರೂರಿನಲ್ಲಿ ಉಳಿಯದೆ ವಾಡಿಕೆಯಂತೆ ಕಾವಶ್ಯೇರಿಗೆ ಹೋಗಿಬಿಟ್ಟಿದ್ದರೆ ಏನೇನೂ ವೈದ್ಯಕೀಯ ಸೌಕರ್ಯಗಳಿಲ್ಲದ ಆ ಕುಗ್ರಾಮದಲ್ಲಿ ಅವಳು ಬದುಕುಳಿಯುತ್ತಿದ್ದದು ಅನಮಾನವೇ. ಒಂದೆರಡು […]

ಕಥಾಲೋಕ

ಗೆಳೆಯನಲ್ಲ (ಭಾಗ 3): ವರದೇಂದ್ರ ಕೆ.

(5) ಆ ದಿನ ರಾತ್ರಿ, ಸಂಪತ್ಗೂ ರಿಪ್ಲೈ ಮಾಡದೆ ಅತೀವ ದುಃಖದಿಂದ ಮಲಗಿಬಿಟ್ಟಳು. ಮರುದಿನ ಎದ್ದು, ತಲೆ ಸ್ನಾನ ಮಾಡಿ ದೇವರಿಗೆ ದೀಪ ಹಚ್ಚಿ, ಆದ ದುರ್ಘಟನೆಯನ್ನು ನೆನೆದು ಕಣ್ಣೀರಾದಳು. ಮುಖ ಸಪ್ಪೆ, ಕಣ್ಣುಗಳಲ್ಲಿ ಕಾಂತಿ ಇಲ್ಲ. ಮದುವೆ ಆಗುವ ಹುಡುಗಿಗೆ ಇರುವ ಲವಲವಿಕೆ ಇಲ್ಲ. ತವರು ಮನೆ ಬಿಟ್ಟು ಹೋಗುವ ದುಃಖ ಇರಬಹುದೆಂದು ಎಲ್ಲರೂ ಸುಮ್ಮನಾದರು. ಸಂತೋಷ್ ನಿಂದ ಮೆಸೇಜೂ ಇಲ್ಲ, ಕರೆನೂ ಇಲ್ಲ. ಎಂದಿನಂತೆ ಸಂಪತ್ನ ಜೊತೆ ಮಾತನಾಡುತ್ತಿದ್ದರೂ, ಮನಸಲ್ಲಿ ಮಾತ್ರ ಮೋಸ ಮಾಡುತ್ತಿರುವೆನೆಂಬ […]

ಕಥಾಲೋಕ

ಐರ್ಲೆಂಡಿನಲ್ಲಿ ಹಾವುಗಳೇ ಇಲ್ಲವಂತೆ!: ಜೆ.ವಿ.ಕಾರ್ಲೊ.

ಇಂಗ್ಲಿಶಿನಲ್ಲಿ: ಫ್ರೆಡ್ರಿಕ್ ಫೊರ್ಸೈತ್ ಸಂಗ್ರಹಾನುವಾದ: ಜೆ.ವಿ.ಕಾರ್ಲೊ. ಕೆಲಸ ಕೇಳಿಕೊಂಡು ಬಂದಿದ್ದ ಹೊಸ ಹುಡುಗನ ಕಡೆಗೆ ಮ್ಯಾಕ್ವೀನ್ ತಲೆ ಎತ್ತಿ ಕೊಂಚ ಹೊತ್ತು ನೋಡಿದ. ಅವನಿಗೆ ಸಮಧಾನವಾಗಲಿಲ್ಲ. ತನ್ನಷ್ಟಕ್ಕೆ ತಲೆಯಲ್ಲಾಡಿಸಿದ. ಈ ಮೊದಲು ಕೆಲಸ ಕೇಳಿಕೊಂಡು ಇಂತವರು ಯಾರೂ ಅವನ ಬಳಿ ಬಂದಿರಲಿಲ್ಲ. ಹಾಗಂತ ಅವನೇನು ನಿರ್ದಯಿಯಾಗಿರಲಿಲ್ಲ. ಹುಡುಗನಿಗೆ ಕೆಲಸ ಅಷ್ಟೊಂದು ಜರೂರಿಯಾಗಿದ್ದು ಎಲ್ಲರಂತೆ ಕೆಲಸ ಮಾಡುವಂತವನಾಗಿದ್ದರೆ ಅವನದೇನು ಅಭ್ಯಂತರವಿರಲಿಲ್ಲ. “ಇದು ಲೆಕ್ಕ-ಪತ್ರ ಬರೆದಿಡುವ ಕುರ್ಚಿ ಕೆಲಸ ಅಲ್ಲ, ಮೈಮುರಿಯುವಂತ ಕೆಲಸ ಕಣಪ್ಪ. ಯೋಚಿಸು.” ಎಂದ ತನ್ನ ಬೆಲ್ಫಾಸ್ಟ್ […]

ಕಥಾಲೋಕ

ಮರೆಯಲಾಗದ ಮದುವೆ (ಭಾಗ 2): ನಾರಾಯಣ ಎಂ ಎಸ್

ಇಲ್ಲಿಯವರೆಗೆ ಮದುವೆ ನಿಶ್ಚಯವಾದ ಮನೆಗಳು ಸಡಗರ ಸಂಭ್ರಮಗಳಿಂದ ತುಂಬಿಹೋಗುವುದು ಸಹಜ. ಇನ್ನು ಇಲ್ಲಿ ತೀರ ಎರಡೇ ತಿಂಗಳಲ್ಲಿ ಮದುವೆ ಗೊತ್ತಾಗಿರುವಾಗ ಕೇಳಬೇಕೆ? ಮಾಡಲು ಬೆಟ್ಟದಷ್ಟು ಕೆಲಸಗಳಿದ್ದವು. ವಿಶಾಖಪಟ್ಟಣದ ಕೃಷ್ಣಯ್ಯರ್ ಮನೆಯಲ್ಲಿ ಮದುವೆ ತಯಾರಿಯ ಕಲರವದ ತಾಂಡವ ಜೋರಾಗೇ ನಡೆದಿತ್ತು. ಹಾಗಂತ ತಿರುವಾರೂರಿನ ಗಂಡಿನ ಮನೆಯಲ್ಲೇನೂ ಕಡಿಮೆ ಗದ್ದಲವಿರಲಿಲ್ಲ. ಮುದ್ರಿಸಬೇಕಿದ್ದ ಲಗ್ನಪತ್ರಿಕೆಯ ವಿನ್ಯಾಸ, ಕರೆಯಬೇಕಿದ್ದ ಅತಿಥಿಗಳ ಪಟ್ಟಿ, ಕೊಡಬೇಕಿದ್ದ ಉಡುಗೊರೆಗಳು, ತೆಗೆಯಬೇಕಾದ ಜವಳಿ, ಗೊತ್ತುಮಾಡಬೇಕಿದ್ದ ಫೋಟೋಗ್ರಾಫರ್ ಒಂದೇ… ಎರಡೇ? ಪ್ರತಿಯೊಂದಕ್ಕೂ ಚರ್ಚೆ, ಸಮಾಲೋಚನೆ ಅಭಿಪ್ರಾಯ ಭೇದಗಳಿಂದ ದಿನವಿಡೀ ಮನೆ […]

ಕಥಾಲೋಕ

ಗೆಳೆಯನಲ್ಲ (ಭಾಗ 2): ವರದೇಂದ್ರ ಕೆ.

ಇಲ್ಲಿಯವರೆಗೆ.. 3 ತನ್ನನ್ನು ಹುಡುಗ ನೋಡಿ ಹೋಗಿದ್ದು, ಅವನು ತನ್ನನ್ನು ಒಪ್ಪಿದ್ದು. ಮನೆಯಲ್ಲಿ ಎಲ್ಲರಿಗೂ ಇಷ್ಟವಾಗಿದ್ದು, ತಾನೂ ಒಪ್ಪಿದ್ದು ಎಲ್ಲ ವಿಷಯವನ್ನು ಸಂತೋಷ್ಗೆ ಹೇಳಬೇಕೆಂದು ಎಷ್ಟು ಪ್ರಯತ್ನಿಸಿದರೂ ಸಂತೋಷ್ ಸಂಪರ್ಕಕ್ಕೆ ಸಿಗ್ತಾನೇ ಇರ್ಲಿಲ್ಲ. ಮದುವೆ ಆಗುವ ಹುಡುಗ ಸಂಪತ್ನ ಫೋಟೋ ಕಳಿಸಬೇಕು ಎಂದು ಎಷ್ಟು ಬಾರಿ ಅಂದುಕೊಂಡರೂ ಸಂತೋಷ್ ಸಂಪರ್ಕಕ್ಕೆ ಸಿಗದ ಕಾರಣ ಸುಮ್ಮನಾದಳು. ಮದುವೆ ದಿನವೂ ಗೊತ್ತಾಯ್ತು, ಪ್ರೀತಿ ತನ್ನ ಎಲ್ಲ ಸ್ನೇಹಿತರಿಗೆ ಬರಲು ತಿಳಿಸಿದಳು. ಹಾಗೆ ಸಂತೋಷ್ಗೆ ಕಾಲ್ ಮಾಡಿ ಹೇಳಬೇಕು. ನನ್ನ ಮದುವೆ […]