ಕಪ್ಪಣ್ಣನ ಟೀ ಅಂಗಡಿ: ವೃಶ್ಚಿಕ ಮುನಿ.

ಒಂದು ಕಪ್ ಚಹಾ ಒಂದು ಬನ್… ಹೇ….. ಮಂಜು…. ಒಂದು ಕಪ್ ಚಹಾ… ಒಂದು ಬನ್…. ಹೇ…. ಮಂಜು… ಬೇಗ್

ಗಿರಾಕಿ ನಿಂತಾರ…. ತಗೂಡ್.. ಬಾರೋ ಲೇ…… ಗಿರಾಕಿಗಳಿಂದ ತುಂಬಿ ತುಳುಕುತ್ತಿತ್ತು.

ಇಂತಹ ಮಾತುಗಳು ಕುಪ್ಪಣ್ಣ ಚಹಾ ಅಂಗಡಿಯಲ್ಲಿ ನಿತ್ಯವು ಕೇಳುವ ಮಾತುಗಳಿವು. ಗದ್ದಲ ಗಲಾಟೆ ಸಾಮಾನ್ಯ ಆದರೂ ಜನರು ನಿಂತು ಚಾ ಕುಡಿದೆ ಹೋಗುತ್ತಿದ್ದರು. ಕಪ್ಪಣ್ಣ ಚಹಾ ಇಟ್ಟಿದ್ದರ ಹಿಂದೆ ಒಂದು ದೊಡ್ಡ ಕತೆ ಇದೆ. ಅದು ತೇಟು ಮಹಾಭಾರತ ಆಗಿರಬಹುದು, ಇಲ್ಲವೇ ರಾಮಾಯಣ ಆಗಿರಬಹುದು ಆದರೆ ಇದು ಕಪ್ಪಣ್ಣ ಚಾ ಅಂಗಡಿ ಕತೆ. ಈ ಒಂದು ಚಹಾ, ಬನ್ ಆ ಹೊತ್ತಿನ ಮುಂಜಾನೆಯ ನಾಸ್ಟ
ಆಗುತ್ತಿತ್ತು. ಬದುಕು ಕೆಲವರಿಗೆ ಸಲೀಸಾಗಿ ಒಲಿದು ಬಿಡುತ್ತದೆ. ಇನ್ನೂ ಕೆಲವರಿಗೆ ಸತಾಯಿಸುವ ಶನಿಯಂತೆ ಕಾಡಿಸುವ ಇದ್ದೇ ಇರುತ್ತದೆ. ಎರಡು ಹೊತ್ತಿನ ಊಟವನ್ನು ಹೊಂದಿಸಲು ದಿನ ಪೂರ್ತಿ ಕಷ್ಟದ ಜೊತೆ ಗುದ್ದಾಟ ಮಾಡುವ ಅನಿವಾರ್ಯತೆ ಇರುತ್ತದೆ. ಒಂದು ಹೊತ್ತಿನ ಊಟವನ್ನು ಮಿಗಿಸುವ ಈ ಚಹಾ, ಬನ್, ಬಡವರ ನಿತ್ಯ ಸಂಗಾತಿ. ಹಸಿವು ಇಂಗಿಸಲು ಇಲ್ಲವೇ ಗೆಳೆಯರ ಭೇಟಿಯ ನೆಪಕ್ಕೂ, ಖಾಲಿ ಬೇಸರಕ್ಕೂ, ಕೆಲಸದ ಬೇಜಾರು ಕಳೆಯಲು ಈ ಚಹಾ ಬೇಕೆಬೇಕು. ಹೊಟ್ಟೆ ಇದ್ದವರಿಗೆ ಹಸಿವು ಉಚಿತ ಮತ್ತು ಖಚಿತ. ಈ ಹಸಿವು ಯಾರಿಗು ಮೋಸ ಮಾಡದು. ಬಡವರಿಗೆ ಇದ್ದರೆ ಚಿಂತೆಯಾದರೆ. ಶ್ರೀಮಂತರಿಗೆ ಪ್ರತಿಷ್ಠೆ ವಿಷಯ. ಆದರೂ ಹಸಿವು ಯಾರನ್ನು ಬೇರೆ ದೃಷ್ಟಿಯಿಂದ ನೋಡುವುದು.


ಕಪ್ಪಣ್ಣನ ಟೀ ಅಂಗಡಿ, ಸಂತೆಕಾಮನಳ್ಳಿ. ಪ್ರೋ. ಕಪ್ಪಣ್ಣ. ಸಿ. ಸಿ.

ಕಪ್ಪು ಬಣ್ಣದ ತಗಡಿನ ಮೇಲೆ ಬಿಳಿ ಬಣ್ಣದಲ್ಲಿ ಬರೆದ ಅಕ್ಷರಗಳು ಕಪ್ಪಣ್ಣಗಿಂತ ಬೆಳ್ಳಗಿದ್ದವು. ಕಪ್ಪಣ್ಣನ ತಂದೆ ತನ್ನ ಮೂಲ ಊರಾದ ಬೆಡಗದಳ್ಳಿ ಬಿಟ್ಟು ಬಂದಿದ್ದ. ನಾನು ಸ್ವತಂತ್ರವಾಗಿ ಬದುಕು ಕಟ್ಟಿಕೊಳ್ಳುತ್ತೇನೆ ನಿಮ್ಮ ಹಂಗೂ ನನಗೆ ಬೇಡಾ, ನಿಮ್ಮ ಮನೆ ಮಠ ನಿಮಗೆ ಇರಲಿ ಎಂದು ಊರು ಬಿಟ್ಟ ಕಪ್ಪಣ್ಣ ತಂದೆ ಸಂತೆಕಾಮನಳ್ಳಿಗೆ ಬಂದು ಅಲ್ಲಿ ಇಲ್ಲಿ ಕೂಲಿನಾಲಿ ಮಾಡಿಕೊಂಡು ಬದುಕು ಕಟ್ಟಿಕೊಳ್ಳುವ ಪ್ರಯತ್ನದಲ್ಲಿ
ಜೊತೆಯಾದವಳು ‘ಮಾರಲಿಂಗಿ’ ಅವಳು ಅನಾಥೆ. ಸಂತೆಗೆ ಬಂದಿದ್ದ ಸಂತೆಕಾಮನಳ್ಳಿ ಸಾಹುಕಾರ ತನ್ನ ಹಣದ ಚೀಲ ಕಳೆದು ಕೊಂಡು ಒದ್ದಾಡುತ್ತಿದ್ದ. ಕೂಲಿ ಗಂಟು ಹೊತ್ತು ಕೊಂಡು ಬರುತ್ತಿರುವ ಸಮಯಕ್ಕೆ ಹಣದ ಚೀಲ ಕಪ್ಪಣ್ಣನ ಅಜ್ಜನ ಕೈಗೆ ಸಿಕ್ಕಿತು. ಏನು ತಿಳಿಯದ ಕಪ್ಪಣ್ಣನ ತಂದೆ ಅದನ್ನು ಅನಾಮತ್ತಾಗಿ ಸಾಹುಕಾರನಿಗೆ ಮರಳಿ ಕೊಟ್ಟಿದ್ದಕ್ಕೆ ಪ್ರಾಮಾಣಿಕತೆ ಮೆಚ್ಚಿ ಸಂತೆಕಾಮನಳ್ಳಿಯ ಸಂತೆಯ
ಪಕ್ಕದಲ್ಲಿ ಒಂದಿಷ್ಟು ಜಾಗ, ಹಣ ಕೊಟ್ಟು ಜೀವನ ಕಟ್ಟಿಕೋ ಎಂದರಂತೆ. ಕಪ್ಪಣ್ಣನ ತಂದೆ ಹೆಂಡತಿ ಮಾರಲಿಂಗಿಗೆ ಚಹಾ ಮಾಡುವ ಕಲೆ ಒಲಿದಿತ್ತು. ಅದನ್ನೇ ಬಳಸಿಕೊಂಡು ಚಾ ಅಂಗಡಿ ಶುರು ಮಾಡಿದ ಕಪ್ಪಣ್ಣನ ತಂದೆ. ಮಾರಿಲಿಂಗಿಯ ಸಂಸಾರ ಗುರುತಾಗಿ ಕಪ್ಪಣ್ಣ ಹುಟ್ಟಿದ.

ಯಾಕೋ ಏನೋ ಎಲ್ಲಾರೂ ಎಷ್ಟು ಹೇಳಿದರೂ ಇನ್ನೂಂದು ಮಗುವನ್ನು ಮಾಡಿಕೊಳ್ಳದ ಗೋಜಿಗೆ ಹೋಗಲಿಲ್ಲ. ಕಪ್ಪಣ್ಣನೆ ಗಂಡು ಹೆಣ್ಣು ಮಗನಾಗಿ, ಮಗಳಾಗಿ ಬೆಳದ. ಅಪ್ಪ ಹಾಕಿದ ಆಲದ ಮರ ಎನ್ನುವಂತೆ ಕಪ್ಪಣ್ಣ ಹದಿನೆಂಟನೇ ವಯಸ್ಸಿನಲ್ಲಿ ಚಾ ಅಂಗಡಿಯ ಮಾಲೀಕನಾದ. ಒಂದು ಮಳೆಗಾಲದ ರಾತ್ರಿ ಮಲಗಿದ ಕಪ್ಪಣ್ಣನ ತಂದೆ ತಾಯಿ ಬೆಳಿಗ್ಗೆ ಏಳಲೇಇಲ್ಲ. ವ್ಯಾಪಾರದ ಗುಟ್ಟು ತಿಳಿದ ಕಪ್ಪಣ್ಣನ ಸಂತೆಯಲ್ಲಿ
ಬಹುಬೇಗ ಹೆಸರು ಮಾಡಿದ. ಚಹಾದ ಕಿತ್ತಲಿ ಕೈಗೆ ಬಂದಿತ್ತು. ಅಷ್ಟೇ ವೇಗದಲ್ಲಿ ಸಂತೆಯ ಜನರಿಗೆ ಬೇಕಾದ. ಅಪ್ಪ ತೀರಿದ ನಂತರ ಇವನೇ ಅಂಗಡಿಯ ಮಾಲಿಕನಾದ. ಸುಮಾರು ವರ್ಷಗಳಿಂದ ಸಂತಯಲ್ಲಿ ಇರುವ ಈ ಅಂಗಡಿಯ ಚಹಾ ಎಂದರೆ ಎಲ್ಲರಿಗೂ ಅಚ್ಚು ಮೆಚ್ಚು. ಬೇಸರವಾದಾಗ, ಸಣ್ಣ ತಲೆನೋವು, ಮೈ ಕೈ ನೋವಿಗೂ ಕಪ್ಪಣ್ಣ ಮಾಡು ಚಹಾ ರಾಮಬಾಣದಂತಿತ್ತು. ಗಟ್ಟಿ ಹಾಲು, ಜಯಂತಿ ಟೀ ಪುಡಿ ಆಸ್ಸಾಂ ಬ್ರಾಂಡ್ ನ ಹದಕ್ಕೆ ತಕ್ಕಷ್ಟು ಸಕ್ಕರೆ, ಒಂದೇ ಅಳೆತೆಯ ಕುರಿತು ಜೊತೆಗೆ ಸುವಾಸನೆ ಎಲೆ ಹಾಕಿ ಒಂದು ಐದಾರು ನಿಮಿಷಗಳ ನಂತರ ಕುಪ್ಪಣ್ಣ ಮಾಡುವ ಚಹಾ ರೆಡಿ ಆಗಿಬಿಡುತ್ತೆ. ಒಂದು ಸಾರಿ ಕುಡಿದರೆ ಇನ್ನೊಮ್ಮೆ ಹುಡುಕಿಕೊಂಡು ಬರಬೇಕು ಅಂತಹ ರುಚಿ.

ಕುಪ್ಪಣ್ಣ ಮಾತು ಅಷ್ಟೇ ಸಿಹಿ. ಸಂತೆಯ ಆಯಕಟ್ಟಿನ ಜಾಗದಲ್ಲಿ ಇವನ ಅಂಗಡಿ. ಅಂಗಡಿ ಅಂದರೆ ಒಂದು ತಗಡಿನ ಡಬ್ಬದಂತಹ ಗೂಡಂಗಡಿ, ಚಿಕ್ಕದಾದರೂ ಚೊಕ್ಕವಾಗಿ ಇಟ್ಟುಕೊಂಡವನು ಕಪ್ಪಣ್ಣ. ಈ ಅಂಗಡಿಯ ಗಿರಾಕಿಗಳು ಎಂದರೆ ಹಮಾಲರು, ಕೈ ಪಲ್ಲೆ ಮಾರುವವರು, ಸವಾಲಿಗೆ ತರಕಾರಿ ತಂದೆ ರೈತರು, ಕೂಲಿ ಕಾರ್ಮಿಕರು, ಸಂತೆಗೆ ಬಂದ ಊರಿನ ಜನರು ಇವರುಗಳೇ ಕಪ್ಪಣ್ಣ ಅಂಗಡಿಯ ಖಾಯಂ
ಗಿರಾಕಿಗಳಾಗಿರುತಿದ್ದರು. ಮನುಷ್ಯ ಬದುಕಿನ ಹಸಿವಿನ ದೊಂಬರಾಟಕ್ಕೆ ನಿತ್ಯವೂ ತಯಾರಿ ಇರಲೇಬೇಕು ಎನ್ನುವಂತೆ ಈ ಬನ್, ಚಹಾ ಇದೆ ಟಾನಿಕ್. ಅವತ್ತು ಕೂಲಿ ಚೆನ್ನಾಗಿ ಸಿಕ್ಕರೆ ಮಧ್ಯಾಹ್ನಕ್ಕೆ ಒಂದು ಪಲಾವ್ ಮಿರ್ಜಿ. ಮತ್ತೆ ಸಂಜೆಗೆ ಅದೇ ಚಹಾ ಬನ್. ಅವತ್ತು ದುಡಿಮೆ ಹೆಚ್ಚಾಗಿದ್ದರೆ ಮಿರ್ಜಿ, ಚೋಡಾ ಮನೆಗೆ ಕಟ್ಟಿಸಿಕೊಂಡು ಹೋಗುವ ಕೂಲಿಗಳು. ಮನೆಯಲ್ಲಿ ಆದರೆ ಇಂತಹ ಚಹಾದ ರುಚಿ ಸಿಗದು. ಮಧ್ಯಮ
ವರ್ಗದವರಿಗೂ ಚಹಾಕ್ಕೂ ಅವಿನಾಭಾವ ಸಂಬಂಧವಿದೆ. ಬೆಳಗಿನ ಅರ್ಧ ಲೀಟರ್ ಹಾಲು ದಿನ ಪೂರ್ತಿ ಸಂಭಾಳಿಸುವ ಕಲೆ ಆ ವರ್ಗದ ಮಹಿಳೆಯರಿಗೆ ಸಿದ್ಧಿಸಿದೆ. ಆದರೆ ಕುಪ್ಪಣ್ಣ ಅಂಗಡಿ ಚಹಾ ಎಂದರೆ ಎಲ್ಲರಿಗೂ ಇಷ್ಟವಾಗುವ ಸಂಗತಿ. ಮನೆಯಲ್ಲಿ ಗಂಡ ಇಲ್ಲದ ಸಮಯದಲ್ಲಿ ಮನೆ ಹೆಣ್ಣು ಮಕ್ಕಳ ಕೂಡಾ ವಾರದಲ್ಲಿ ಒಂದು ದಿನವಾದರೂ ಹುಡುಗರನ್ನು ಕಳುಹಿಸಿ ಚಹಾ ತರಿಸಿಕೊಂಡು ಕುಡಿದವರೆ. ಮದುವೆ,
ಮುಂಜುವಿ, ಹುಟ್ಟಿದ ಹಬ್ಬದ, ನಾಮಕರಣ ಶುಭ ಕಾರ್ಯಗಳಿಗೆ ಮುಂಜಾನೆ ಸಂಜೆ ಕಪ್ಪಣ್ಣನ ಅಂಗಡಿಯ ಚಹಾ ಬೇಕೇಬೇಕು. ಯಾರಾದರೂ ಸತ್ತಾಗಲೂ ಪರ ಊರಿನಿಂದ ಬರುವ ಜನರಿಗೆ ಕಪ್ಪಣ್ಣನ ಅಂಗಡಿಯಲ್ಲಿಯೇ ಚಹಾ ವ್ಯವಸ್ಥಾ ಮಾಡಿರುತಿದ್ದರು. ಇನ್ನು ಚುನಾವಣೆ ಬಂದರೆ ತಾಲೂಕಿನ, ಜಿಲ್ಲಾ ನಾಯಕರಿಂದ ಚಹಾ ಮಾಡಲು ಬುಲಾವ್ ಬರುತ್ತಿತ್ತು. ಅಷ್ಟು ಪ್ರಸಿದ್ಧಿ ಪಡೆದಿತ್ತು.


ಚಲಿಸಿದ ಕಾಲದಲ್ಲಿ ಕಪ್ಪಣ್ಣ ಅಂಗಡಿಯೂ ದೊಡ್ಡದಾಯಿತು. ವ್ಯಾಪರ ಚೆನ್ನಾಗಿ ನಡೆಯಿತು ಇರುವ ಜಾಗದಲ್ಲಿ ಸ್ವಲ್ಪ ದೊಡ್ಡ ಅಂಗಡಿಯನ್ನು ಕಟ್ಟಿಸಿದ. ಅಂಗಡಿಯಲ್ಲಿ ಆಳುಕಾಳುಗಳು ಹೆಚ್ಚಾದರು. ಆದಾಯ ಹೆಚ್ಚಾಯಿತು. ಊರಿನ ಹೊರಗೆ ಮನೆ ಕಟ್ಟಿಸಿದ. ಕಪ್ಪಣ್ಣ ಮದುವೆಯಾದ ತಂದೆಯಂತೆ ಕಪ್ಪಣ್ಣನಿಗೂ ಒಂದೇಒಂದು ಗಂಡು ಸಂತಾನ ಅವನೇ ಸಂದೀಪ್. ಸಂತೆಯ ದಿನ ಬೆಳಿಗ್ಗೆ ಚಾ ಮಾಡಲು ಎಲ್ಲಾ ತಯಾರಿ
ಮಾಡುತ್ತಿದ್ದಾಗ ಸಣ್ಣ ಎದೆ ನೋವು ಕಾಣಿಸಿಕೊಂಡಿತು. ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಸೇರಿಸಿದರು ಕಪ್ಪಣ್ಣ ಉಳಿಯಲಿಲ್ಲ. ಕಪ್ಪಣ್ಣನ ಒಂದು ದಿನವೂ ಬಾಗಿಲು ಹಾಕಿದ ಚಹಾ ಅಂಗಡಿ ಅವತ್ತು ಬಾಗಿಲು ಹಾಕಿತ್ತು. ಆವತ್ತು ಕಪ್ಪಣ್ಣ ‘ಹೆಣ’ ಆದಾ. ಸ್ಟೌವ್ ಮೇಲೆ ಇಟ್ಟಿದ್ದ ಚಹಾದ ಹಬ್ಬೆ ನಿಧಾನಕ್ಕೆ ಕರಗಲು ಪ್ರಾರಂಭಿಸಿ ಹಬ್ಬೆ ಕಾಣದಾಯಿತು. ಕಪ್ಪಣ್ಣನ ಚಾ ಅಂಗಡಿಯ ಸಾಂಗತ್ಯ ತೊರೆದ, ಆದರೆ ಅಂಗಡಿಯ ಪ್ರತಿ ಬೆಂಚು,
ತಟ್ಟಿ, ಲೋಟ, ಚಾಹದ ಕಪ್ಪು ಎಲ್ಲವೂ ಅನಾಥ ಪ್ರಜ್ಞೆ ನಡುವೆ ಸುಮ್ಮನೆ ಕುಳಿತುಕೊಂಡಿದ್ದರು. ಕಪ್ಪಣ್ಣ ಮಾಡುತ್ತಿದ್ದ ಚಾಹದ ವಾಸನೆಯನ್ನು ಹಿಡಿದು ನಿತ್ಯವೂ ಅಂಗಡಿಯ ಮುಂದೆ ಟಳಾಯಿಸು ನಾಯಿ ಹೆಣದ ಮುಂದೆ ಕಣ್ಣೀರು ಹಾಕುತ್ತಾ ಕುಳಿತಿದೆ. ನಾಳೆ ಬೆಳಿಗ್ಗೆ ಅದಕ್ಕೆ ಬನ್ ಚಾಹ ಸಿಗುತ್ತದೆಯೂ ಇಲ್ಲ ಯಾರಿಗೆ ಗೊತ್ತು. ನಿಯತ್ತು ಮನುಷ್ಯನಲ್ಲಿ ಹುಡುಕಿದರು ಸಿಗುವುದು ಕಷ್ಟಸಾಧ್ಯ. ಸಂತೆಗೆ ಬರುವ ಸುತ್ತಮುತ್ತಲಿನ
ಊರಿನ ಜನಕ್ಕೆ ಕಪ್ಪಣ್ಣ ಇನ್ನಿಲ್ಲ ಎನ್ನುವುದು ಅರಗಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಎಷ್ಟೋ ಜನರು ಕಪ್ಪಣ್ಣ ಸುತ್ತ ನಂತರ ಬೇರೆ ಅಂಗಡಿಯ ಚಹಾ ರುಚಿಸದೆ ಚಹಾ ಕುಡಿಯುವುದನ್ನೇ ಬಿಟ್ಟಿದ್ದಾರೆ ಅವರು ಚಹಾ ಕುಡಿಯುವುದನ್ನು ಬಿಟ್ಟಿದ್ದು ಕಪ್ಪಣ್ಣ ನೆನಪಾಗಿಯೇ ಇರಬೇಕು. ಡಿಗ್ರಿ ಓದಿತ್ತಿದ್ದ ಕಪ್ಪಣ್ಣನ ಮಗ ಸಂಸ್ಕಾರ ಸಂಬಂಧ ಎಲ್ಲ ಕೆಲಸ ಮುಗಿಸಿದ್ದಾನೆ. ಹನ್ನೊಂದನೇ ದಿನ ಕಾರ್ಯ ಮುಗಿಸಿ ಮನೆಗೆ ಸಂದೀಪ ಚಹಾದ
ಅಂಗಡಿ ಮುಂದುವರಿಸಿದ ಆದರೆ ಕಪ್ಪಣ್ಣನ ರೀತಿಯ ಚಹಾದ ರುಚಿ ಜನರಿಗೆ ಹಿಡಿಸಲಿಲ್ಲ. ‘ಚಹಾ’ಬದುಕಿನ ದಿನ ಆರಂಭಕ್ಕೆ ಚಹಾ ಅತಿಮುಖ್ಯ. ಕಪ್ಪಣ್ಣ ಮಗ ಈಗ ಅಂಗಡಿಯ ಮಾಲೀಕ. ಚಹಾ ನಿಧಾನಕ್ಕೆ ತನ್ನ ರುಚಿಯನ್ನು ಕಳೆದುಕೊಳ್ಳುವದರಲಿದೆ.

ಆದರೂ ತಲೆಮಾರುಗಳು ಕಳೆದರೂ ಚಹಾಕ್ಕಾಗಿ ಸಾಲುಗಟ್ಟವ ಜನರು ಇದ್ದಾರೆ. ಆದರೆ ಕಟ್ಟುತ್ತಾನೆ ಕೈ ರುಚಿಗೆ ಕಪ್ಪಣ್ಣನೇ ಸಾಟಿ. ಸ್ವಲ್ಪ ಚಹಾದ ರುಚಿ ಬದಲಾಗಿದೆ ಜೊತೆಗೆ ಜನರ ಮನಸ್ಥಿತಿಯೂ ಬದಲಾಗಿದೆ. ಮಗನ ಕಾಲಕ್ಕೆ ಕಾಲಕ್ಕೂ ವ್ಯಾಪಾರ ಕುಂಟುತ್ತಾ ಸಾಗಿತ್ತು. ಸಂತೆಯ ಪುಢಾರಿ ಕೈಪಲ್ಲೆ ಕರಿಯ ಕಪ್ಪಣ್ಣನ ಚಹಾ ಅಂಗಡಿಯ ಜಾಗಕ್ಕೆ ತಕರಾರು ತೆಗೆದು ಜಗಳ ಶುರುಮಾಡಿದ. ಸಾಬೀತು
ಮಾಡವುದವಲ್ಲಿ ಅಜ್ಜನ ಹತ್ತಿರ ದಾಖಲೆ ಪತ್ರಗಳು ಯಾವುದೋ ಕಾಲದಲ್ಲಿ ಕಳೆದು ಹೋಗಿದ್ದವು ಅದನ್ನು ತಿಳಿದೆ ಕೈಪಲ್ಲೆ ಕರಿಯಾ ಈ ವರಸೆ ಶುರು ಮಾಡಿದ್ದ. ವ್ಯಾಜ್ಯ ಸ್ಥಳೀಯ ಕೋರ್ಟ್, ತಾಲೂಕು ಕೋರ್ಟ್, ಜಿಲ್ಲಾ ಕೋರ್ಟ್ ಕಚೇರಿಯಂತಾ ಮೂರೂ ನಾಲ್ಕು ವರ್ಷಗಳ ಎಳದಾಡಿತು ಹೇಗೋ ಕೊನೆಗೆ ಸುದೀಪನ ಹೋರಾಟದ ಫಲವಾಗಿ ಜಯ ಸಿಕ್ಕಿತು. ಆದರೆ ಆವಾಗಾಗಲೆ ಚಹಾ ವ್ಯಾಪಾರದಲ್ಲಿ ಆಸಕ್ತಿ ಕಳೆದುಕೊಂಡ
ಸಂದೀಪ ಅಂಗಡಿ ಮತ್ತು ಜಾಗವನ್ನು ಮಾರಾಟ ಮಾಡಿ ತಾಯಿಯನ್ನು ಕರೆದುಕೊಂಡು ಬೆಂಗಳೂರು ಸೇರಿಕೊಂಡ. ಸಂದೀಪ ಮುಂದೆ ಏನಾದ ಎನ್ನುವ ವರ್ತಮಾನ ಯಾರಿಗೂ ತಿಳಿಯಲಿಲ್ಲ.

ಬೆಂಗಳೂರಿನ ದೊಡ್ಡ ಹೋಟೆಲ್ ಕೊಟ್ಟಿದ್ದಾರಂತೆ, ನಾಲ್ಕಾರು ಕಾರು ಮಾಡಿಕೊಂಡಿದ್ದಾರಂತೆ ಅಂತೆ ಕಂತೆಗಳಿಗೆ ರೆಕ್ಕೆ ಬಂದ ಹಾರಾಡಿವೆ ಯಾವ ನೆಲೆಯನ್ನು ಕಾಣದೆ. ಎರಡು ತಲೆಮಾರುಗಳಿಂದ ಚಹಾದ ರುಚಿ ಉಣಬಡಿಸುತ್ತಿದ್ದ ಚಹಾ ಅಂಗಡಿ ಇಂದು ನೆಲ ಸಮವಾಗಿದೆ. ಬದುಕಿನ ಹಾಸು ಹೊಕ್ಕಾಗಿದ್ದ ಚಹಾ ಮರೆಯುವಂತಾಗಿದೆ. ಚಹಾದ ಗುಟುಕು ಗುಟಕಿಸುವಾಗ ಸತ್ತ ಕಪ್ಪಣ್ಣ ನೆನಪು ಬಂದೆ ಬರುತ್ತಾನೆ. ಆದರೆ
ಎಲ್ಲಿಯೆ ಚಹಾ ಕುಡಿದರೆ ಕಪ್ಪಣ ಚಹಾದ ರುಚಿ ಆ ಜಾಗಕೊಂಡವನು ದೊಡ್ಡ ಫೈವ ಸ್ಟಾರ್ ಹೋಟೆಲ್ ಕಟ್ಟಿಸಿದ್ದಾನೆ. ವಿವಿಧ ರೀತಿಯ ತಿಂಡೀ.. ತೇರವಾರಿ.. ಪಾನಿಯಗಳು.. ಎಲ್ಲವೂ ಸಿಗುತ್ತವೆ ಆದರೆ ಕಪ್ಪಣ್ಣ ಎನ್ನುವ ಪ್ರೀತಿ ತುಂಬಿದ, ಕಾಳಜಿ ಮಮತೆಯ ಮಾತುಗಾರ ಆಯಾಸ ಮರೆಸುವ ಅವನ ಕೈ ರುಚಿಯ ಚಹಾ ಸಿಗುವುದಿಲ್ಲ. ಹೊಸ ನೀರು ಬಂದಿದೆ, ಹಳೆ ನೀರು ಮುಂದೆ ಹೋಗಿದೆ. ಕಾಲ ಚಲಿಸಿದೆ ಊರು
ಬದಲಾಗಿದೆ, ತರಕಾರಿಯವರು ಮನಸ್ಥಿತಿಯು ಬದಲಾಗಿದೆ. ಬದಲಾವಣೆ ಜಗದ ನಿಯಮ ಸಂತೆಯು ವಿಶಾಲವಾಗಿದೆ. ಕಪ್ಪಣ್ಣನ ಅಂಗಡಿಗೆ ಹೊಂದಿಕೊಂಡು ಇದ್ದ ಎಲ್ಲಾ ಹಳೆಯ ಕಟ್ಟಡಗಳು ಬದಲಾಗಿ ಬರ್ಪ ಕೊರೆದು ಇಟ್ಟಂತೆ ಆಕಾರ ಬದಲಿಸಿಕೊಂಡಿವೆ. ಹಂಚು ತಗಡು, ಸಿಮೆಂಟ್ ತಾರಸಿ ಆಗಿವೆ. ಇಕ್ಕಟ್ಟಾದ ಸಂತೆ ರಸ್ತೆಗಳು ಅಗಲಹರಿವಾಣವಾಗಿವೆ. ಸಂತೆ ಅಧುನಿಕದ ಪೋಷಾಕು ತೊಟ್ಟಿದೆ. ಹಳೆಯ ತಲೆಮಾರು
ಹೊರಟು ಹೋಗಿವೆ. ಹೊಸ ತಲೆಮಾರಿನವರು ಹಳೆಯ ವ್ಯಾಪಾರ ತಂತ್ರ ತಿಳಿಯದು. ತಂತ್ರಜ್ಞಾನ ತಂತ್ರದಲ್ಲಿ ವ್ಯಾಪಾರ ಮಾಡುತ್ತಿರುವ. ಆದರೆ ಬದುಕು ಸಂಬಂಧಗಳು ನಡುವೆ ಸಿಕ್ಕು ಬೆಳೆದು ನಿಲ್ಲುವ ಬಳ್ಳಿ ಎನ್ನುವ ದೊಡ್ಡ ಸತ್ಯ ಯಾರಿಗೂ ತಿಳಿದಿಲ್ಲ. ತನ್ನ ಹಳೆಯ ಅಂಗಡಿಗೆ ಜಾಗದಲ್ಲಿ ಎದ್ದು ನಿಂತ ಹೊಸ ಕಟ್ಟಡದ ಮೇಲೆ ಕುಳಿತ ಕಪ್ಪಣ್ಣನ ಆತ್ಮ ಎಲ್ಲವನ್ನು ಕಂಡು ಮರುಕು ಪಡುತ್ತಿತ್ತು.

ವೃಶ್ಚಿಕ ಮುನಿ.


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x