ಅಂತರ್ಜಾಲ ಪತ್ರಿಕೆ ನಡೆಸುವವರ ಕಷ್ಟಸುಖಗಳು: ನಟರಾಜು ಎಸ್.‌ ಎಂ.

ಪಂಜುವಿಗೆ ಎಂಟು ವರ್ಷಗಳು ತುಂಬಿ ಒಂಬತ್ತನೇ ವರ್ಷಕ್ಕೆ ಕಾಲಿಟ್ಟಿತು. ಇಷ್ಟು ಸುದೀರ್ಘ ಕಾಲ ಕನ್ನಡದಲ್ಲಿ ನೆಲೆ ನಿಂತ ಅಂತರ್ಜಾಲ ಪತ್ರಿಕೆಗಳು ಬೆರಳೆಣಿಕೆಯಷ್ಟು ಮಾತ್ರ.. ಒಮ್ಮೊಮ್ಮೆ ಅಂತರ್ಜಾಲ ಪತ್ರಿಕೆಗಳನ್ನು ನಡೆಸೋದು ಒಂದು ರೀತಿಯಲ್ಲಿ ಸುಲಭ ಮತ್ತೊಂದು ರೀತಿಯಲ್ಲಿ ಬಲು ಕಠಿಣ. ಸುಲಭ ಯಾಕೆಂದರೆ ಇವತ್ತು ಒಂದಷ್ಟು ದುಡ್ಡು ಖರ್ಚು ಮಾಡಿದರೆ ಚಂದದ ವೆಬ್‌ ಸೈಟ್‌ ಗಳನ್ನು ಒಂದಷ್ಟು ಗಂಟೆಗಳಲ್ಲಿ ತಯಾರು ಮಾಡಿಬಿಡಬಹುದು. ಆದರೆ ವೆಬ್ ತಯಾರು ಮಾಡಿದ ಮೇಲೆ ಅದನ್ನು ನಡೆಸೋದು ಕಠಿಣ. ಯಾಕೆಂದರೆ ಮೊದಲಿಗೆ ವೆಬ್‌ ಸೈಟ್‌ … Read more

ಇಂದಿರಾ ಕ್ಯಾಂಟೀನ್‌ ಹೆಸರನ್ನು ಡಾ. ಅಂಬೇಡ್ಕರ್‌ ಕ್ಯಾಂಟೀನ್‌ ಅಂತ ಮರುನಾಮಕರಣ ಮಾಡೋಕೆ ಆಗುತ್ತಾ?: ಡಾ. ನಟರಾಜು ಎಸ್.‌ ಎಂ.

ನಮ್ಮೂರಿನ ಬಳಿ ಒಂದು ಗಾರ್ಮೆಂಟ್ಸ್ ಫ್ಯಾಕ್ಟರಿ ಇದೆ. ಅಲ್ಲಿ ಸಾವಿರಾರು ಜನ ಕೆಲಸ ಮಾಡುತ್ತಾರೆ. ಪುಟ್ಟ ಹಳ್ಳಿಯಲ್ಲಿ ತೆರೆದುಕೊಂಡ ಈ ಗಾರ್ಮೆಂಟ್ ಫ್ಯಾಕ್ಟರಿ ನಮ್ಮ ಕಡೆಯ ಅನೇಕ ಜನರಿಗೆ ಉದ್ಯೋಗ ಕಲ್ಪಿಸಿದೆ. ದೂರದ ಊರುಗಳಿಂದಲೂ ಸಹ ಜನ ಬಂದು ಅಲ್ಲಿ ದುಡಿಯುತ್ತಾರೆ. ಫ್ಯಾಕ್ಟರಿ ಅಕ್ಕ ಪಕ್ಕ ಸಣ್ಣಪುಟ್ಟ ಅಂಗಡಿ, ಹೋಟೆಲ್ ಗಳು ತೆರೆದುಕೊಂಡಿವೆ. ಫ್ಯಾಕ್ಟರಿ ಊಟದ ಸಮಯ ಮತ್ತು ಬಿಟ್ಟ ಸಮಯದಲ್ಲಿ ಇಲ್ಲಿನ ಅಂಗಡಿ ಮತ್ತು ಹೋಟೆಲ್ ಗಳಲ್ಲಿ ಸಣ್ಣಪುಟ್ಟ ವ್ಯಾಪಾರ ವಹಿವಾಟು ನಡೆಯೋದು ಸಹಜ. ಸಣ್ಣಪುಟ್ಟ … Read more

ಕೋಳಿ ಮತ್ತು ಕೊರೋನ: ಡಾ. ನಟರಾಜು ಎಸ್. ಎಂ.

ವರ್ಷ ಎರಡು ಸಾವಿರದ ಹದಿಮೂರರ ಡಿಸೆಂಬರ್ ತಿಂಗಳು ಅನಿಸುತ್ತೆ. ಜಲ್ಪಾಯ್ಗುರಿಯಲ್ಲಿ ತುಂಬಾ ಚಳಿ ಇತ್ತು. ಒಂದು ಮುಂಜಾನೆ ಯಾವುದೋ ರೋಗ ಪತ್ತೆ ಹಚ್ಚಲು ನಮ್ಮ ಟೀಮ್ ಜೊತೆ ಕಾರಿನಲ್ಲಿ ಹೊರಟ್ಟಿದ್ದೆ. ನನ್ನ ಜೊತೆ ನನ್ನ ಡಾಟ ಮ್ಯಾನೇಜರ್, ಇಬ್ಬರು ಹೆಲ್ತ್ ವರ್ಕರ್ಸ್ ಮತ್ತು ಡ್ರೈವರ್ ಇದ್ದ. ಹೆಲ್ತ್ ವರ್ಕರ್ ಆಗಿದ್ದ ತೊರಿಕ್ ಸರ್ಕಾರ್ ಗೆ ಅವತ್ತು ತುಂಬಾ ಕೆಮ್ಮಿತ್ತು. ಕೆಮ್ಮಿದ್ದರೂ ಆತ ಮಾರ್ಗ ಮಧ್ಯೆ ಆಗಾಗ ಸಿಗರೇಟ್ ಸೇದುತ್ತಲೇ ಇದ್ದ. ಆತ ಮುಂದೆ ಡ್ರೈವರ್ ಪಕ್ಕ ಕುಳಿತ್ತಿದ್ದ. … Read more

ಫೇಸ್ ಬುಕ್ ಗೆಳೆಯರಿಗೊಂದು ಪತ್ರ: ನಟರಾಜು ಎಸ್. ಎಂ.

ಹಾಯ್ ಫ್ರೆಂಡ್ಸ್, ಹೇಗಿದ್ದೀರ? ಎಷ್ಟೊಂದು ದಿನಗಳೇ ಆಗಿಹೋಯಿತು ನಿಮ್ಮೊಡನೆ ಸರಿಯಾಗಿ ಮಾತನಾಡಿ. ಒಂದಷ್ಟು ವರುಷಗಳ ಹಿಂದೆ ಹೀಗೆ ಸುಮ್ಮನೆ ಕಣ್ಣಿಗೆ ಬಿದ್ದ ಫೇಸ್ಬುಕ್ ನಲ್ಲಿ ಅಪರಿಚಿತರಾಗಿದ್ದ ನಾವು ಪರಿಚಿತರಾಗುತ್ತ ಹೋದ್ವಿ. ಈ ಪರಿಚಯಗಳಿಗೆ ಈಗ ವರುಷಗಳ ಸಂಭ್ರಮ. ಮೊನ್ನೆ ಮೊನ್ನೆ ಫೇಸ್ ಬುಕ್ ನಮ್ಮ ಗೆಳೆತನಗಳನ್ನು ಪುಟ್ಟ ವಿಡಿಯೋ ರೂಪದಲ್ಲಿ ಸಮ್ಮರಿ ಮಾಡಿ ನಮ್ಮ ಮುಂದಿಟ್ಟಿದೆ. ಈ ತರಹದ ವಿಡಿಯೋವನ್ನು ಫೇಸ್ಬುಕ್ ನೀಡುತ್ತಿರುವುದು ಇದು ಮೊದಲಲ್ಲ. ಆದರೂ ಯಾಕೋ ಈ ವಿಡಿಯೋಗಳು ವಿಶೇಷ ಅನಿಸುತ್ತಿದೆ. ಯಾಕೆಂದರೆ ಈ … Read more

ಕವಿತೆ ಕಳ್ಳರಿದ್ದಾರೆ ಎಚ್ಚರಿಕೆ!!!: ನಟರಾಜು ಎಸ್. ಎಂ.

ಪಿಯುಸಿಯ ದಿನಗಳವು. ಯಾವುದೋ ಮುದ್ದು ಕನಸಿಗೆ ಬಿದ್ದು ಕವಿತೆ ಬರೆಯಲು ಶುರು ಮಾಡಿದ್ದೆ. ಬರೆದ ಕವಿತೆಯನ್ನು ತರಗತಿಯಲ್ಲಿ ಓದಬೇಕೆಂಬ ಹಪಹಪಿ ಇತ್ತು. ಅಂದು ಕ್ಲಾಸಿಗೆ ಸರ್ ಇನ್ನೂ ಬಾರದಿದ್ದ ಕಾರಣ ಕ್ಲಾಸಿನಲ್ಲಿ ಹರಟುತ್ತಾ ಕುಳಿತ್ತಿದ್ದ ಸಹಪಾಠಿಗಳಿಗೆ ಅಚ್ಚರಿಯಾಗುವಂತೆ ಡಯಾಸ್ ಬಳಿ ನಿಂತು "ಇವತ್ತು ಒಂದೆರಡು ಕವಿತೆ ಓದಬೇಕು ಅಂದುಕೊಂಡಿದ್ದೇನೆ" ಎಂದಿದ್ದೆ. ನನ್ನ ಮಾತಿಗೆ ಗಲಾಟೆಯಲ್ಲಿ ತೊಡಗಿದ್ದ ಕ್ಲಾಸ್ ಒಂದು ಹಂತಕ್ಕೆ ಸೈಲೆಂಟ್ ಆಗಿ ಹೋಗಿತ್ತು. ಹಿಂದಿನ ಬೆಂಚಿನ ಒಂದಿಬ್ಬರು ಗೆಳೆಯರು "ಎಲ್ಲಾ ಸೈಲೆಂಟ್ ಆಗ್ರಪ್ಪಾ ನಟ ಕವಿತೆ … Read more

ಪಂಜುವಿನ ಕನ್ನಡ ಪದಗಳ ಮೆರವಣಿಗೆಗೆ ನೂರರ ಸಂಭ್ರಮ: ನಟರಾಜು ಎಸ್. ಎಂ.

ಡಿಸೆಂಬರ್ 3, 2014 ರಂದು ವಿಶ್ವ ವಿಕಲ ಚೇತನರ ದಿನದ ಸಲುವಾಗಿ ಎನ್ ಜಿ ಓ ಒಂದರ ಕಾರ್ಯಕ್ರಮಕ್ಕೆ ಹೋಗಬೇಕಿತ್ತು. ಅವತ್ತೇ ಪಶ್ಚಿಮ ಬಂಗಾಳದ ಸಿಎಂ ನಾನಿರುವ ಪುಟ್ಟ ಊರಾದ ಜಲ್ಪಾಯ್ಗುರಿಗೆ ಆಗಮಿಸಿದ್ದರು. ಆ ಕಾರಣಕ್ಕೆ ಇಡೀ ಊರಿನ ತುಂಬಾ ಬಂದೋಬಸ್ತಿನ ವಾತಾವರಣವಿತ್ತು. ಆ ಎನ್ ಜಿ ಓ ಆಫೀಸಿನ ಹತ್ತಿರದ ಪ್ರವಾಸಿ ಮಂದಿರದಲ್ಲಿ ಸಿಎಂ ತಂಗಿದ್ದ ಕಾರಣ ಆ ಎನ್ ಜಿ ಓ ಗೆ ಮಧ್ಯಾಹ್ನದವರೆಗೂ ತನ್ನ ಕಾರ್ಯಕ್ರಮಗಳನ್ನು ಶುರು ಮಾಡಲು ಒಂಚೂರು ತೊಂದರೆಯೇ ಆಗಿತ್ತು. … Read more

ಕಾಪಾಡಿ ಎಂದು ಕೂಗುವ ಕೂಗುಗಳ ನಿರ್ಲಕ್ಷಿಸುವ ಬದಲು..: ನಟರಾಜು ಎಸ್. ಎಂ.

ಕಳೆದ ವಾರದ ಒಂದು ಮುಂಜಾನೆ ನನ್ನ ರೂಮಿನಿಂದ ಒಂದಷ್ಟು ದೂರದಲ್ಲಿರೋ ಪ್ಲಾಟಿನಲ್ಲಿ ಯಾರೋ ಕಿರುಚಿದ ಸದ್ದಾಯಿತು. ಆ ಸದ್ದು ನಿದ್ದೆಗಣ್ಣಿನಲ್ಲಿ ನನ್ನೊಳಗೆ ಒಂದು ಆತಂಕವನ್ನು ಸೃಷ್ಟಿಸಿದರೂ ಹೊರಗೆ ನಲ್ಲಿಯಲ್ಲಿ ಬೀಳುವ ನೀರು ಹಿಡಿಯುವ ಅಕ್ಕ ಪಕ್ಕದ ಮನೆಯ ಹೆಂಗಸರು ಆ ಪ್ಲಾಟಿನಲ್ಲಿ ಏನೂ ನಡೆದೇ ಇಲ್ಲವೇನೋ ಎಂಬುವಂತೆ ತಮ್ಮ ಬಕೆಟ್ ಗಳಿಗೆ ನೀರು ತುಂಬಿಕೊಳ್ಳುತ್ತಿರುವ ಸದ್ದು ಕೇಳಿ ನಾನು ಹಾಸಿಗೆ ಮೇಲೆ ಹಾಗೆಯೇ ಸುಮ್ಮನೆ ಕಣ್ಮುಚ್ಚಿದೆ. ಆ ಪ್ಲಾಟಿನಿಂದ ಕೇಳಿ ಬರುತ್ತಿದ್ದ ಆ ಕಿರುಚುವ ದನಿ  ಕ್ಷಣ ಕ್ಷಣಕ್ಕೂ ತಾರಕ್ಕೇರುತ್ತಿತ್ತು. ಹೊರಗೆ ಹೋಗಿ ಅಲ್ಲಿ … Read more

ಹೇಗಿದ್ದ ಹೇಗಾದ ಗೊತ್ತಾ: ನಟರಾಜು ಎಸ್. ಎಂ.

ಮೊನ್ನೆ ಶನಿವಾರ ಯೂ ಟ್ಯೂಬ್ ನಲ್ಲಿ ಒಂದಷ್ಟು ಹಿಂದಿ ಕಾಮಿಡಿ ಶೋ ಗಳನ್ನು ನೋಡುತ್ತಾ ಕುಳಿತ್ತಿದ್ದೆ. ಹಿಂದಿಯ ರಿಯಾಲಿಟಿ ಶೋ ಗಳಲ್ಲಿ ತಮ್ಮ ಕಾಮಿಡಿಗಳಿಂದಲೇ ಮಿಂಚಿದ ರಾಜು ಶ್ರೀವತ್ಸವ್, ಕಪಿಲ್ ಶರ್ಮ, ಸುನಿಲ್ ಪಾಲ್ ಹೀಗೆ ಹಲವರ ವಿಡೀಯೋಗಳು ನೋಡಲು ಸಿಕ್ಕಿದ್ದವು. ಒಂದು ರಿಯಾಲಿಟಿ ಶೋ ನ ವಿಡೀಯೋದಲ್ಲಿ ಕಾಮಿಡಿಯನ್ ಜೋಕ್ ಹೇಳಿ ಮುಗಿಸುವ ಮುಂಚೆಯೇ ದೊಡ್ಡದಾಗಿ ಸುಮ್ಮ ಸುಮ್ಮನೆ ನಗುವ ನವಜ್ಯೋತ್ ಸಿದ್ದುವಿನ ಅಬ್ಬರದ ನಗುವನು ನೋಡಿ "ಈ ಯಪ್ಪಾ ಜೋಕ್ ಅಲ್ಲದಿದ್ದರೂ ಸುಮ್ಮ ಸುಮ್ಮನೆ … Read more

ಅತಿಥಿ ಸಂಪಾದಕರ ನುಡಿ

ನಮಗೆ ನಾಳೆಗಳಿಲ್ಲ, ಏಕೆಂದರೆ ಈ ನೆಲದಲ್ಲಿ ಮಕ್ಕಳಿಗೆ ನಾವು ಭವಿಷ್ಯ ಉಳಿಸುತ್ತಿಲ್ಲ. ಮಹಾಮಾರಿಯೊಂದರಂತೆ ಈ ದಿನಗಳನ್ನು ಸಂಪೂರ್ಣವಾಗಿ ಆವರಿಸಿಕೊಂಡಿರುವ ’ ಮಕ್ಕಳ ಮೇಲಿನ ದೌರ್ಜನ್ಯ’ ಎನ್ನುವ ಮನೋಭಾವದೆಡೆಗೆ ನನ್ನ ಧಿಕ್ಕಾರವಿರಿಸಿಯೇ ಈ ಸಂಚಿಕೆಯನ್ನು ನಿಮ್ಮ ಮುಂದೆ ಇರಿಸಲಾಗಿದೆ. ಜಗತ್ತಿನ ಯಾವ ಮಗುವಿನ ಯಾವುದೇ ನೋವಿಗೂ ಕುಳಿತಲ್ಲೇ ಮಮ್ಮಲ ಮರುಗುವ, ಮಾತ್ರವಲ್ಲ ಮಕ್ಕಳ ಕಣ್ಣೀರು ಒರೆಸಲು ತನ್ನ ಕೈಲಾದಷ್ಟು ಕೆಲಸವನ್ನೂ ಮಾಡುವ ಪಪ್ಪನ ಮಗಳಾಗಿ ಇಂತಹ ವಿಷಯದ ಬಗ್ಗೆ ಸಂಚಿಕೆಯ ಸಂಪಾದಕತ್ವ ನನ್ನ ಪಾಲಿಗೆ ಬಂದದ್ದನ್ನು ಹೆಮ್ಮೆಯಿಂದಲೇ ಸ್ವೀಕರಿಸಿ … Read more

ಮಕ್ಕಳ ಬಾಳಿನ ಬೆಳಕಿನ ಪಂಜು ಆಗೋಣ: ನಟರಾಜು ಎಸ್. ಎಂ.

ಒಂದು ಭಾನುವಾರ ಬೆಳಿಗ್ಗೆ ಗೆಳತಿಯೊಡನೆ ಫೋನಿನಲ್ಲಿ ಮಾತನಾಡುತ್ತಿದ್ದಾಗ ಆಕೆ  "  ಇವತ್ತು ಒಂದು ನ್ಯೂಸ್ ನೋಡಿದೆ. ನಾಲ್ಕು ವರ್ಷದ ಹುಡುಗಿಯನ್ನು ಹತ್ತು ವರ್ಷದ ಹುಡುಗ ಅತ್ಯಾಚಾರ ಮಾಡಿದ್ದಾನೆ. ಆ ನ್ಯೂಸ್ ನೆನೆಸಿಕೊಂಡರೆ ಭಯ ಆಗುತ್ತೆ ಜೊತೆಗೆ ನಾವು ಯಾವ ಲೋಕದಲ್ಲಿ ಬದುಕುತ್ತಿದ್ದೇವೆ ಅಂತ ಅನಿಸುತ್ತೆ." ಎಂದು ಹೇಳಿ ಮೌನ ತಾಳಿದಳು. ಅವಳ ಮಾತುಗಳ ಕೇಳಿ ಮನಸ್ಸು ಒಂದು ಶೂನ್ಯ ಭಾವಕ್ಕೆ ಶರಣಾಗಿತ್ತು. ಕಾಕತಳೀಯವೆಂಬಂತೆ ಅಚನಕ್ಕಾಗಿ ಆ ದಿನವೇ ಜಿಲ್ಲಾ ಮಟ್ಟದ "ಮಕ್ಕಳ ಮೇಲಿನ ದೌರ್ಜನ್ಯ ತಡೆ" ಕುರಿತ … Read more

ಇಲ್ಲಿ ಎಲ್ಲವೂ ಬದಲಾಗುತ್ತದೆ: ನಟರಾಜು ಎಸ್. ಎಂ.

2006 ರ ಮೇ ತಿಂಗಳ 11ನೇ ದಿನ ಕೋಲ್ಕತ್ತಾದಲ್ಲಿ ವಿಧಾನ ಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗಿತ್ತು. ಅಂದು ನಾನು ಓದುತ್ತಿದ್ದ ನ್ಯೂಸ್ ಪೇಪರ್ ನ ಮುಖಪುಟದಲ್ಲಿ ನಗುತ್ತಿರುವ ಬುದ್ಧದೇವ್ ಭಟ್ಟಾಚಾರ್ಯರ ಮುಖವನ್ನು ಕಾರ್ಟೂನ್ ಮಾಡಿ ನೂರಾ ಎಪ್ಪತ್ತೈದು ಬಾರಿ ಪ್ರಿಂಟ್ ಮಾಡಿದ್ದರು. 175 ಅಂದು ಸಿಪಿಎಂ ಪಕ್ಷ ಪಡೆದಿದ್ದ ಒಟ್ಟು ಸೀಟುಗಳ ಸಂಖ್ಯೆಯಾಗಿತ್ತು. ಸಿಪಿಎಂನ ವಿರೋಧಪಕ್ಷವಾದ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ್ ಕಾಂಗ್ರೆಸ್ ಕೇವಲ 30 ಸೀಟುಗಳನ್ನು ಪಡೆದಿತ್ತು. ಒಟ್ಟು 294 ಸೀಟುಗಳಿರುವ ಬೆಂಗಾಳದ ವಿಧಾನ ಸಭೆಯಲ್ಲಿ … Read more

ಫೇಸ್ ಬುಕ್ ಮತ್ತು ಗುಂಪುಗಾರಿಕೆ: ನಟರಾಜು ಎಸ್. ಎಂ.

ಫೇಸ್ ಬುಕ್ ಗೆ 2010ರ ಜನವರಿ ತಿಂಗಳಲ್ಲಿ ಸೇರಿದ್ದೆ. ಆ ವರುಷ ಪೂರ್ತಿ ಬೆರಳೆಣಿಕೆಯಷ್ಟು ಗೆಳೆಯರಷ್ಟೇ ನನ್ನ ಫೇಸ್ ಬುಕ್ ಫ್ರೆಂಡ್ ಗಳಾಗಿದ್ದರು. ಆ ಗೆಳೆಯರಲ್ಲಿ ಹೆಚ್ಚಿನ ಗೆಳೆಯರೆಲ್ಲರೂ ನಾನು ಓದಿದ ಕಾಲೇಜುಗಳಲ್ಲಿದ್ದ ಗೆಳೆಯರೇ ಆಗಿದ್ದರು. ಆಗಾಗ ನನ್ನ ವಾಲ್ ನಲ್ಲಿ ಯಾವುದಾದರೂ ಇಂಗ್ಲೀಷ್ ಶುಭಾಷಿತ ಹಾಕಿಕೊಳ್ಳುವುದನ್ನು ಬಿಟ್ಟರೆ 2010 ರ ಕೊನೆಗೆ ಕೈಗೆ ಸಿಕ್ಕ ಹೊಸ ಕ್ಯಾಮೆರಾದ ಫೋಟೋಗಳನ್ನು ಅಪ್ ಲೋಡ್ ಮಾಡುವುದನ್ನು ಕಲಿತ್ತಿದ್ದೆ. ಆ ಫೋಟೋಗಳಿಗೆ ಆಗ ಎಷ್ಟು ಲೈಕ್ ಮತ್ತು ಕಾಮೆಂಟ್ ಬಂದಿವೆ … Read more

ದೇವರ ಹೆಣ ನಿಮಗೆ ಇಷ್ಟ ಅಲ್ವಾ?: ನಟರಾಜು ಎಸ್. ಎಂ.

ಒಂದೂರಲ್ಲಿ ಒಂದು ಗಟ್ಟಿಮುಟ್ಟಾದ ಆರೋಗ್ಯವಂತ ಹಸು ಕಾಡಿಗೆ ಮೇಯಲು ಹೋಗಿ ಇದ್ದಂಕ್ಕಿದ್ದಂತೆ ಕಾಡಿನಲ್ಲೇ ಸತ್ತು ಹೋಗಿರುತ್ತದೆ. ತನ್ನ ಮಾವನ ರೇಡಿಯೋ ರಿಪೇರಿಯ ಕಲೆಯನ್ನು ಒಬ್ಬ ಹುಡುಗ  ತದೇಕಚಿತ್ತದಿಂದ ನೋಡುತ್ತಾ ಕುಳಿತ್ತಿರುತ್ತಾನೆ. ಯಾರೋ ಬಂದು ಹಸು ಸತ್ತು ಹೋಗಿರುವ ಸುದ್ದಿಯನ್ನು ಆ ಹುಡುಗನ ಮಾವನಿಗೆ ತಿಳಿಸಿದಾಗ ಆ ಹುಡುಗನ ಮಾವ "ಮಗ, ತಗೋಳು ಸೈಕಲ್ ನ." ಎಂದು ಹೇಳಿ ಮನೆ ಒಳಗೆ ಹೋದವನು ಒಂದು ಚೂರಿ, ಮಚ್ಚು, ಕುಡ್ಲು, ಹಾಗು ಎರಡು ಪ್ಲಾಸ್ಟಿಕ್ ಚೀಲದೊಂದಿಗೆ ಮನೆಯಿಂದ ಹೊರಗೆ ಬರುತ್ತಾನೆ. … Read more

ಯಾರ ಜೊತೆ ಯಾವಾಗ ಎಲ್ಲಿ ಎಷ್ಟು ಕುಡೀಬೇಕು ಅಥವಾ ಕುಡಿಯಬಾರದು ಎನ್ನುವುದು ತಿಳಿದರೆ: ನಟರಾಜು ಎಸ್ ಎಂ

ಸಾವಿರದ ಒಂಬೈನೂರ ತೊಂಬತ್ತೊಂಬತ್ತರಲ್ಲಿ ಬೆಂಗಳೂರಿಗೆ ಕಾಲಿಟ್ಟ ಹೊಸತು. ನಮ್ಮೂರಿನ ಒಂದಷ್ಟು ಗೆಳೆಯರು ಎಂ.ಜಿ. ರೋಡಿನ ಹತ್ತಿರವಿರುವ ಹಾಸ್ಟೆಲ್ ನಲ್ಲಿದ್ದರು. ಆ ಗೆಳೆಯರಲ್ಲಿ ಒಂದಷ್ಟು ಜನ ಹಾಸ್ಟೆಲ್ ಗೆ ಸೇರಿದ್ದು ಡಿಗ್ರಿ ಓದಲಿಕ್ಕಾದರೂ ಹೊಟ್ಟೆಪಾಡಿಗಾಗಿ ಪಾರ್ಟ್ ಟೈಮ್ ಕೆಲಸಗಳನ್ನು ಮಾಡುತ್ತಿದ್ದರು. ಊರಿನಿಂದ ಯಾರಾದರು ಹುಡುಗರು ಸ್ಕೂಲನ್ನೋ ಕಾಲೇಜನ್ನೋ ಅರ್ಧಕ್ಕೆ ಬಿಟ್ಟು ಹೊಟ್ಟೆಪಾಡಿಗಾಗಿ ಬೆಂಗಳೂರಿಗೆ ಬಂದರೆ ಅವರು ಮೊದಲು ಬಂದಿಳಿಯುತ್ತಿದ್ದ ಜಾಗ ಅದೇ ಆ ಎಂ.ಜಿ. ರೋಡಿನ ಹಾಸ್ಟೆಲ್ ಆಗಿತ್ತು. ಹಾಗೆ ಬಂದಿಳಿದ ಹುಡುಗರಿಗೆ ಊಟ ತಿಂಡಿ ಮಲಗಲಿಕ್ಕೆ ಜಾಗವನ್ನು … Read more

ಸಂಬಂಧಗಳು ಆರೋಗ್ಯಕರವಾಗಿ ಅರಳಲಿ, ಉಳಿಯಲಿ, ಬೆಳೆಯಲಿ ಎಂಬ ಆಶಯದಿಂದ: ನಟರಾಜು ಎಸ್. ಎಂ.

ಒಬ್ಬ ವ್ಯಕ್ತಿಗೆ ಮದುವೆಯಾಗಿತ್ತು. ಎದೆ ಎತ್ತರಕ್ಕೆ ಬೆಳೆದ ಮಗನೂ ಇದ್ದ. ನೌಕರಿಯ ನಿಮಿತ್ತ ಬೇರೊಂದು ಊರಿಗೆ ವರ್ಗಾವಣೆಯಾಗಿ ಬರುವಾಗ ಹೆಂಡತಿ ಮಕ್ಕಳನ್ನು ತನ್ನೂರಿನಲ್ಲೇ ಬಿಟ್ಟು ಬಂದಿದ್ದ. ಹೊಸ ಊರು, ಹೊಸ ಆಫೀಸ್, ಹೊಸ ಜನಗಳ ನಡುವೆ ಒಂದು ಹುಡುಗಿ ಹೇಗೋ ಈ ಸಂಸಾರಸ್ಥನ ಕಣ್ಣಿಗೆ ಬಿದ್ದಿದ್ದಳು. ಆತನ ವಯಸ್ಸು ಸುಮಾರು 46. ಆಕೆಗೆ ಕೇವಲ 26 ವರ್ಷ ವಯಸ್ಸು. ಒಂದೇ ಆಫೀಸಿನಲ್ಲಿ ಇಬ್ಬರು ನೌಕರರಾಗಿದ್ದ ಕಾರಣ ಇಬ್ಬರಿಗೂ ಸ್ನೇಹವಾಯಿತು. ಸ್ನೇಹ ಪ್ರೇಮಕ್ಕೆ ತಿರುಗಲು ಹೆಚ್ಚು ಸಮಯ ಬೇಕಾಗಿರಲಿಲ್ಲ. … Read more

ಇತಿಹಾಸವನ್ನು ಓದುವ ಬದಲು ಒಮ್ಮೊಮ್ಮೆ ಕಿವಿಗೊಟ್ಟು ಕೇಳಬೇಕು: ನಟರಾಜು ಎಸ್. ಎಂ.

ನಮ್ಮ ಆಫೀಸಿನಲ್ಲಿ ಇಬ್ಬರು ಡ್ರೈವರ್ ಇದ್ದಾರೆ. ಒಬ್ಬ ತುಂಬಾ ಚುರುಕು ಮತ್ತು ಆಫೀಸ್ ಕೆಲಸದಲ್ಲಿ ಆಸಕ್ತಿ ಉಳ್ಳವನಾದರೆ ಮತ್ತೊಬ್ಬ ಮಹಾನ್ ಸೋಮಾರಿ. ಫೀಲ್ಡ್ ವಿಸಿಟ್ ಗಳಿಲ್ಲದ ದಿನ ಆ ಸೋಮಾರಿ ನನ್ನ ಚೇಂಬರ್ ಗೆ ಬಂದು "ರಾಜು ದಾ ಇವತ್ತು ಯಾವುದು ಫೀಲ್ಡ್ ವಿಸಿಟ್ ಇಲ್ಲವಾ? ಕೆಲಸ ಇಲ್ಲದೆ ತುಂಬಾ ಬೇಜಾರಾಗಿದೆ. ಯಾವುದಾದರು ಪ್ರೊಗ್ರಾಮ್ ಇದ್ದರೆ ತಿಳಿಸಿ" ಎಂದು ಕೇಳುತ್ತಾನೆ. ಫೀಲ್ಡ್ ವಿಸಿಟ್ ಇರುವ ದಿನ ಇವತ್ತು ಗಾಡಿ ರಿಪೇರಿ ಇದೆ ರಾಜು ದಾ ಎಂದು ಹೇಳುತ್ತಲೋ … Read more

ಮೈಸೂರ್ ಸ್ಯಾಂಡಲ್ ಸೋಪು ಮತ್ತು ಬೆನ್ನುಜ್ಜೋ ಕಲ್ಲು:ನಟರಾಜು ಎಸ್. ಎಂ.

ಮೊನ್ನೆ ಮೈ ಸೋಪು ತೆಗೆದುಕೊಳ್ಳಲೆಂದು ಗೆಳೆಯನೊಬ್ಬನ ಜೊತೆ ಅಂಗಡಿಯೊಂದಕ್ಕೆ ಹೋಗಿದ್ದೆ. ಅಂಗಡಿಯ ಒಳಗೆ ಎರಡೂ ಕಡೆಗಳಲ್ಲಿ ಸೌಂದರ್ಯವರ್ಧಕಗಳನ್ನು ಮಾರಲು ಒಂದಷ್ಟು ಹುಡುಗಿಯರು ಕುಳಿತ್ತಿದ್ದರು. ವಿಧ ವಿಧದ ಕಂಪನಿಗಳ ಲಿಪ್ ಸ್ಟಿಕ್, ನೈಲ್ ಪಾಲಿಶ್, ಡಿಯೋಡರೆಂಟ್, ಶಾಂಪೂ, ಐ ಲೈನರ್ ಇತ್ಯಾದಿ ರಾಶಿ ರಾಶಿ ಸೌಂದರ್ಯವರ್ಧಕಗಳು ಅವರು ಕುಳಿತ್ತಿದ್ದ ಜಾಗದಲ್ಲಿ ಗಾಜಿನ ಕಪಾಟಿನೊಳಗೆ ಅಲಂಕೃತಗೊಂಡಿದ್ದವು. ಅವರೂ ಸಹ ಅದೇ ಕಂಪನಿಗಳ ಸೌಂಧರ್ಯವರ್ಧಕಗಳನ್ನು ಉಪಯೋಗಿಸಿ ವಿಧವಿಧವಾಗಿ ಅಲಂಕೃತಗೊಂಡಿದ್ದರು. ಸುಮ್ಮನಾದರು ಅವರು ಹಚ್ಚಿಕೊಂಡ ಲಿಪ್ ಸ್ಟಿಕ್, ಹಾಕಿಕೊಂಡಿರುವ ಪೌಡರ್ ನೋಡಿದಾಗ ಅವರು … Read more

ಕನಸುಗಾರನ ಒಂದು ಸುಂದರ ಕನಸು: ನಟರಾಜು ಎಸ್. ಎಂ.

ಜನವರಿ ತಿಂಗಳ ಒಂದು ದಿನ ನಾಟಕವೊಂದನ್ನು ನೋಡಲು ಬರುವಂತೆ ಹುಡುಗನೊಬ್ಬ ಆಮಂತ್ರಣ ನೀಡಿದ್ದ. ಆ ದಿನ ಸಂಜೆ ಆರು ಗಂಟೆಗೆ ಜಲ್ಪಾಯ್ಗುರಿಯ ಆರ್ಟ್ ಗ್ಯಾಲರಿ ತಲುಪಿದಾಗ ಆ ಕಲಾಮಂದಿರವನ್ನು ನೋಡಿ ನಾನು ಅವಕ್ಕಾಗಿದ್ದೆ. ಆ ಪುಟ್ಟ ಊರಿನಲ್ಲಿ ಅಷ್ಟೊಂದು ದೊಡ್ಡ ಸುಸಜ್ಜಿತ ಕಲಾಮಂದಿರವಿರುವುದ ಕಂಡು ಖುಷಿ ಸಹ ಆಗಿತ್ತು. ಸುಮಾರು ಎಂಟುನೂರು ಜನ ಕೂರುವಷ್ಟು ಜಾಗವಿರುವ ಇಡೀ ಕಲಾಮಂದಿರ ಜನರಿಂದ ಕಿಕ್ಕಿರಿದು ತುಂಬಿತ್ತು. ಎಷ್ಟೋ ವರ್ಷಗಳ ನಂತರ ನಾಟಕವೊಂದನ್ನು ನೋಡಲು ಹೋಗಿದ್ದೆ. ನಾಟಕ ನೋಡುತ್ತಿದ್ದೇನೆ ಎಂಬ ಖುಷಿಯ … Read more

ಓದುವ ಬರೆಯುವ ಸುಖಕ್ಕೆ ಸೀಮಾರೇಖೆಗಳ ಹಂಗೇಕೆ: ನಟರಾಜು ಎಸ್. ಎಂ.

ಕೋಲ್ಕತ್ತಾದಲ್ಲಿದ್ದ ದಿನಗಳಲ್ಲಿ ಕನ್ನಡ ಪೇಪರ್ ಗಳು ಸಿಗದ ಕಾರಣ ಟೈಮ್ಸ್ ಆಫ್ ಇಂಡಿಯಾ ಪೇಪರ್ ಓದುವ ಅಭ್ಯಾಸವಿತ್ತು. ಬೆನೆಟ್ ಕೋಲೆಮನ್ ಕಂಪನಿ ಹೆಸರಿನಲ್ಲಿ 390 ರೂಪಾಯಿಯ ಚೆಕ್ ಒಂದರ ಜೊತೆ ಆ ಪೇಪರ್ ನ ಚಂದಾದಾರರಾಗುವ ಅರ್ಜಿಯೊಂದನ್ನು ಸ್ಥಳೀಯ ಪೇಪರ್ ವೆಂಡರ್ ಗೆ ನೀಡಿದರೆ ಒಂದು ವರ್ಷ ಪೂರ್ತಿ ಆ ಪೇಪರ್ ಮನೆ ಬಾಗಿಲಿಗೆ ಬಂದು ಬೀಳುತ್ತಿತ್ತು. ಆ ಒಂದು ವರ್ಷದಲ್ಲಿ ಪಡೆದ ಪೇಪರ್ ಗಳನ್ನು ತೂಕಕ್ಕೆ ಹಾಕಿದರೆ ಸುಮಾರು 200 ರೂಪಾಯಿ ತೂಕ ಹಾಕಿದ ಪೇಪರ್ … Read more

ಯುವ ಪ್ರಕಾಶಕನೊಬ್ಬನ ಅಂತರಾಳದ ಮಾತುಗಳು: ನಟರಾಜು ಎಸ್. ಎಂ.

ಒಮ್ಮೆ ಪುಸ್ತಕವೊಂದನ್ನು ಪ್ರಕಟಿಸುವ ಕನಸು ಕಂಡಿದ್ದೆ. ಗೆಳೆಯನೊಬ್ಬ ತಾನೆ ಆ ಪುಸ್ತಕವನ್ನು ತನ್ನ ಪ್ರಕಾಶನದ ಮೂಲಕ ಪ್ರಕಟಿಸುವೆನೆಂದು ಮಾತು ನೀಡಿದ್ದ. ಟೈಪಿಂಗ್ ನಿಂದ ಹಿಡಿದು ಕರಡು ಪ್ರತಿ ತಿದ್ದುವ ಕೆಲಸವನ್ನು ಸಹ ಶ್ರದ್ಧೆಯಿಂದ ಮಾಡಿ ಮುಗಿಸಿ, ಪುಸ್ತಕ ಪ್ರಕಟವಾಗುತ್ತದೆ ಎಂದು ಆಸೆಯಿಂದ ಬರೋಬ್ಬರಿ ಹತ್ತು ತಿಂಗಳು ಜಾತಕ ಪಕ್ಷಿಯಂತೆ ಕಾದಿದ್ದೆ. ಕವರ್ ಪೇಜ್ ಡಿಸೈನ್ ನಿಂದ ಹಿಡಿದು ಸಣ್ಣ ಪುಟ್ಟ ಕೆಲಸಗಳವರೆಗೆ ಎಲ್ಲವೂ ಮುಗಿದು ಆ ಪುಸ್ತಕ ಅಚ್ಚಿಗೆ ಹೋಗುವುದಷ್ಟೇ ಬಾಕಿ ಇತ್ತು. ವಿಪರ್ಯಾಸವೆಂದರೆ ಆ ಗೆಳೆಯ … Read more

ಕನ್ನಡ ರಾಜ್ಯೋತ್ಸವದ ದಿನ ಸಿಕ್ಕಿದ ಗೆಳೆತನ: ನಟರಾಜು ಎಸ್ ಎಂ

ಕಳೆದ ವರ್ಷದ ಅಕ್ಟೋಬರ್ ತಿಂಗಳ ಕೊನೆಯ ದಿನ ಅಂತರ್ಜಾಲ ಪತ್ರಿಕೆಯೊಂದರಲ್ಲಿ “ಕರೆಂಟು ಹೊಡೆಸಿಕೊಂಡ ಡಿಎನ್ಯೆಯೂ, ವಿಮಾನ ಹತ್ತಿದ ಕಾರ್ಟೂನೂ..” ಎಂಬ ಲೇಖನ ಓದಲು ಸಿಕ್ಕಿತ್ತು. ಆ ಲೇಖನ ಓದುತ್ತಿದ್ದಂತೆ ಯಾಕೋ ಆ ಲೇಖಕನ ಭಾಷಾ ಶೈಲಿ ಸಿಕ್ಕಾಪಟ್ಟೆ ಇಷ್ಟವಾಯಿತು. ಆ ಲೇಖನಕ್ಕೆ”ತುಂಬಾ ಚಂದದ ಲೇಖನ.. ಶುಭವಾಗಲಿ” ಎಂದು ಪ್ರತಿಕ್ರಿಯೆ ನೀಡಿದ್ದೆ. ನನ್ನ ಪ್ರತಿಕ್ರಿಯೆಗೆ ಧನ್ಯವಾದ ತಿಳಿಸಿದ ಲೇಖಕನಿಂದ ಆ ದಿನವೇ ಫೇಸ್ ಬುಕ್ ನಲ್ಲಿ ಫ್ರೆಂಡ್ ರಿಕ್ವೆಸ್ಟ್ ಬಂದು ನಾವಿಬ್ಬರು ಫೇಸ್ ಬುಕ್ ಫ್ರೆಂಡ್ಸ್ ಆದೆವು. ಮಾರನೆಯ … Read more

ಮಗು ಹುಟ್ಟಿದ ಖುಷಿಗೋ, ಸತ್ತವರ ನೆನಪಿಗೋ ಒಂದೊಂದು ಗಿಡ ನೆಡುತ್ತಾ ಬಂದಿದ್ದರೆ…

  ಅರಳೀ, ಹೊಂಗೆ, ಮಾವು, ಬೇವು, ನೇರಳೆ, ತೆಂಗು, ಹುಣಸೇ, ಸೀಬೆ, ಹೀಗೆ ಸಾಮಾನ್ಯವಾಗಿ ಕಾಣಸಿಗುವ ಕಾಣ ಸಿಗುತ್ತಿದ್ದ ಮರಗಳನ್ನು ಹೆಸರಿಸುತ್ತಾ ಹೋದರೆ ಆ ಮರಗಳ ಬರೀ ಚಿತ್ರಗಳಷ್ಟೇ ನಮ್ಮ ಕಣ್ಣ ಮುಂದೆ ಬರುವುದಿಲ್ಲ. ಬದಲಿಗೆ ಅವುಗಳ ಎಲೆ ಹೂವು ಹಣ್ಣು ನೆರಳು ತಂಪು ಹೀಗೆ ಏನೆಲ್ಲಾ ನಮ್ಮ ಅನುಭವಕ್ಕೆ ಬರುತ್ತದೆ. ಮರಗಳು ನಮ್ಮ ಬಾಲ್ಯದಲ್ಲಿ ನಮ್ಮೊಡನೆ ಬೆರೆತು ಹೋಗಿದ್ದ ಅನನ್ಯ ಜೀವಿಗಳು. ಮರಕೋತಿ ಆಟಗಳಿಂದ ಹಿಡಿದು ದೆವ್ವದ ಕತೆಗಳವರೆಗೆ, ಪಠ್ಯ ಪುಸ್ತಕದ ಪಾಠಗಳಲ್ಲಿ "ಅಶೋಕನು ಸಾಲು … Read more

ಕ್ಯಾನ್ಸರ್ ಕಾಯಿಲೆ ಹಾಗೆಯೇ ಇದೆ ಅದರ ವೈದ್ಯನಿಗೆ ಪ್ರಶಸ್ತಿ ಸಿಕ್ಕಿದೆ…

ಜಾತೀಯತೆ ನಮ್ಮ ಸಮಾಜಕ್ಕಂಟಿದ ಕ್ಯಾನ್ಸರ್ ತರಹದ ಮಾರಕ ಕಾಯಿಲೆ ಎಂದು ಬಹಳ ಹಿಂದಿನಿಂದಲೂ ಕೇಳಿ ಬರುತ್ತಿರುವ ಮಾತು. ಆ ಕಾಯಿಲೆಯನ್ನು ನಮ್ಮ ಸಮಾಜದಿಂದ ನಿರ್ಮೂಲನೆ ಮಾಡಬೇಕು ಎಂದು ಪಣತೊಟ್ಟವರಿಗಿಂತ ಈ ಸಮಾಜದ ತುಂಬ ಜನರ ಬುದ್ದಿ ಮತ್ತು ಮನಸ್ಸುಗಳಲ್ಲಿ ಅದನ್ನು ಎಷ್ಟು ಸಾಧ್ಯವೋ ಅಷ್ಟು ಹರಡಬೇಕು ಎನ್ನುವವರ ಸಂಖ್ಯೆ ಈ ದಿನಗಳಲ್ಲಿ ಜಾಸ್ತಿ ಎಂದರೆ ತಪ್ಪಾಗಲಾರದು. ಒಂದೆಡೆ ಹಾಗೆ ಜಾತೀಯತೆಯನ್ನು ಹರಡಿ ಇಡೀ ಸಮಾಜವನ್ನೇ ರೋಗಗ್ರಸ್ತ ಸಮಾಜವನ್ನಾಗಿ ನಿರ್ಮಾಣ ಮಾಡಬೇಕು ಎಂದು ಕನಸು ಕಾಣುವವರ ಮಧ್ಯೆ ಈ … Read more

ಹಂಚದ ಹೊರತು ಹರಡುವುದು ಕಷ್ಟ….

ಇತ್ತೀಚೆಗೆ ತುಂಬು ಲೇಖನವೊಂದನ್ನು ಬರೆದು ಎಷ್ಟೋ ದಿನಗಳಾಗಿಬಿಟ್ಟಿದೆ. ಒಂದೆರಡು ಗಂಟೆ ಒಂದೆಡೆ ಕುಳಿತು ಶ್ರದ್ಧೆಯಿಂದ ಬರೆದರೆ ಚಂದವಾದ ಬರಹಗಳನ್ನು ಕಟ್ಟಿಕೊಡುವುದು ಕಷ್ಟದ ಕೆಲಸವೇನಲ್ಲ. ಆದರೆ ಆ ರೀತಿ ಕುಳಿತು ಬರೆಯುವ ಶ್ರದ್ದೆಯನ್ನು ನಮ್ಮದಾಗಿಸಿಕೊಳ್ಳುವುದು ಕಷ್ಟದ ಕೆಲಸ. ಕೆಲವೊಮ್ಮೆ ನಮ್ಮೊಳಗಿನ ಶ್ರದ್ಧೆ, ಸೃಜನಶೀಲತೆ ಒಂದು ದಿನ ಹಠಾತ್ತನೆ ಮಾಯವಾಗಿ “ಏನು ಬರೆಯೋದು ಏನು ಮಾಡೋದು” ಎಂಬ ಭಾವನೆ ತುಂಬಿದ ಶೂನ್ಯತೆಯ ದಿನಗಳು ನಮ್ಮಲ್ಲಿ ಹುಟ್ಟಿಸಿಬಿಡುತ್ತವೆ. ಕೆಲವು ದಿನಗಳ ಹಿಂದೆ ಆ ರೀತಿ ಶೂನ್ಯತೆ ನನ್ನೊಳಗೆ ಮೂಡಿದ ಒಂದು ದಿನ … Read more

ವಾರ ಮೂರು….. :)))

  ಕಳೆದ ವಾರ ಫೇಸ್ ಬುಕ್ ನಲ್ಲಿ ಚಿಕ್ಕಲ್ಲೂರು ಅನ್ನೋ ಹೆಸರು ನೋಡಿ ಆಶ್ಚರ್ಯವಾಗಿತ್ತು.  ಹಿರಿಯ ಪತ್ರಕರ್ತರಾದ ಕುಮಾರ ರೈತ ಅವರು ಚಿಕ್ಕಲ್ಲೂರು ಜಾತ್ರೆಯ ಚಿತ್ರಗಳನ್ನು ಫೇಸ್ ಬುಕ್ ನಲ್ಲಿ ಹಂಚಿಕೊಳ್ಳುವುದರ ಜೊತೆಗೆ "ಜನಪದ ನಾಯಕ ಸಿದ್ದಪ್ಪಾಜಿ ಸ್ಮರಣೆಗೆ ಚಾಮರಾಜನಗರ ಜಿಲ್ಲೆ, ಕೊಳ್ಳೇಗಾಲ ತಾಲೂಕಿನ ಚಿಕ್ಕಲ್ಲೂರಿನಲ್ಲಿ ಜಾತ್ರೆ ನಡೆಯುತ್ತದೆ. ಜ. 27ರಂದು ನಾನು ಹೋಗಿದ್ದೆ. ಅಲ್ಲಿನ ಚಂದ್ರಮಂಡಲದ ಬೆಂಕಿ ಎತ್ತ ಹೆಚ್ಚು ಉರಿಯುವುದೋ ಅತ್ತ ಮುಂದಿನ ಹಂಗಾಮಿನಲ್ಲಿ ಸಮೃದ್ಧತೆ ಇರುತ್ತದೆ ಎಂಬುದು ನಂಬಿಕೆ" ಎಂಬ ಸಾಲನ್ನು  ಫೋಟೋಗಳ … Read more

ದ್ವಿತೀಯ ಸಂಚಿಕೆ ನಿಮ್ಮ ಮಡಿಲಿಗೆ….

  ಸಹೃದಯಿಗಳೇ, ಪಂಜುವಿನ ದ್ವಿತೀಯ ಸಂಚಿಕೆಯನ್ನು ನಿಮ್ಮ ಮಡಿಲಿಗೆ ಹಾಕುವ ಮೊದಲು ಪಂಜುವಿನ ಮೊದಲ ಸಂಚಿಕೆಗೆ ನೀವು ತೋರಿದ ಪ್ರೀತಿ ಪ್ರೋತ್ಸಾಹ ಸಹಕಾರಕ್ಕೆ ನಾನು ತುಂಬು ಹೃದಯದ ವಂದನೆಗಳನ್ನು ಸಲ್ಲಿಸಬೇಕು. ನಿಮ್ಮ ಪ್ರೀತಿ ಪಂಜುವಿನ ಮೇಲೆ ಹೀಗೆಯೇ ಇರಲಿ. ಒಮ್ಮೆ ಅಂತರ್ಜಾಲ ತಾಣವೊಂದರಲ್ಲಿ ಲೇಖನವೊಂದನ್ನು ಬರೆದಿದ್ದಾಗ ಆತ್ಮೀಯರೊಬ್ಬರು ಕರೆ ಮಾಡಿ "ನೀವು ಬರೆದಿರೋದನ್ನು ಓದುಗರು ಓದ್ತಾ ಇರ್ತಾರೆ. ಸುಮ್ಮಸುಮ್ಮನೆ ಏನೇನೋ ಬರೆಯಲು ಹೋಗಬೇಡಿ." ಎಂದು ಎಚ್ಚರಿಸಿದ್ದರು. ಅಂತರ್ಜಾಲ ತಾಣದಲ್ಲಿ ಬರೆಯುವ ಪ್ರಕಟಿಸುವ ಸ್ವಾತಂತ್ರ್ಯವಿದೆಯೆಂದು ನಮ್ಮಿಚ್ಚೆಯಂತೆ ಬರೆಯುತ್ತಾ ಪ್ರಕಟಿಸುತ್ತಾ … Read more

ಪಂಜು ಕುರಿತು…

  ಜೇಬಿನಲ್ಲಿ ದುಡ್ಡಿಲ್ಲದಿದ್ದರೂ ಕಣ್ಣೊಳಗೆ ಕನಸುಗಳಿರಬೇಕು ಎಂದು ಬಲವಾಗಿ ನಂಬಿರುವವನು ನಾನು. ಆ ನಂಬಿಕೆಯ ಫಲವೇ ಈ "ಪಂಜು" ಅಂತರ್ಜಾಲ ತಾಣ. ದೂರದೂರಿನಲ್ಲಿ ಕುಳಿತು ಒಬ್ಬ ಸಾಮಾನ್ಯ ಓದುಗನಂತೆ ಕನ್ನಡದ ಸಾಹಿತ್ಯ ತಾಣಗಳಿಗಾಗಿ ಅಂತರ್ಜಾಲದಲ್ಲಿ ಹುಡುಕಾಡುವಾಗ, ಕೇವಲ ಸಾಹಿತ್ಯ ಸಂಬಂಧಿತ ಬರಹಗಳಷ್ಟೇ ತುಂಬಿರುವ ಅಂತರ್ಜಾಲ ತಾಣ ಕಣ್ಣಿಗೆ ಕಂಡಿದ್ದು ಅಪರೂಪ. ದಿನ ನಿತ್ಯ ಹೆಚ್ಚು ಓದಿಗೆ ಸಿಕ್ಕುವ ಫೇಸ್ ಬುಕ್ ನಂತಹ ಪ್ರಭಾವಿ ಅಂತರ್ಜಾಲ ತಾಣದಲ್ಲಿ ಸಾಹಿತ್ಯವೆಂದರೆ ಬರೀ ಕವನಗಳು ಚುಟುಕಗಳು ಎನ್ನುವಂತಹ ವಾತಾವರಣ ಇಂದಿನ ದಿನಗಳಲ್ಲಿ … Read more