ಅತೀ ಕಡಿಮೆ ದರದಲ್ಲಿ ಅಮರನಾಥನ ಯಾತ್ರೆ ಹಾಗೂ ದೇವರ ದಯೆಯನ್ನು ಕಣ್ಣಾರೆ ಕಂಡದ್ದು..: ಶ್ರೇಯ ಕೆ ಎಂ

ಪ್ರವಾಸ, ದೇಶ ಸುತ್ತು ಕೋಶ ಓದು ಎನ್ನುವ ನಾಣ್ಣುಡಿಯಂತೆ ಪುಸ್ತಕ ಓದುವುದು ಚಿಕ್ಕಂದಿನಿಂದ ಇದ್ದ ಹವ್ಯಾಸ, ಅದರ ಜೊತೆ ದೇಶ ಸುತ್ತುವುದು ಕೂಡ. ಅಂದರೆ ಚಿಕ್ಕಂದಿನಿಂದ ನಮ್ಮ ಕರ್ನಾಟಕದ ಪ್ರತೀ ಪ್ರದೇಶವನ್ನು ಸುತ್ತಿದ್ದೇನೆ. ಆದರೆ ಕನ್ಯಾಕುಮಾರಿ ಯಿಂದ ಕಾಶ್ಮೀರದ ವರೆಗೆ ಇಡೀ ಭಾರತ ಸುತ್ತುವುದು ಕೂಡ ಒಂದು ಕನಸು. ಈ ಕನಸಿಗೆ ಸಾಕಾರಗೊಂಡಿದ್ದು ಮೊನ್ನೆಯ ಅಮರನಾಥ ಯಾತ್ರೆ. ಕರ್ನಾಟಕದಿಂದ ಶುರುವಾಗಿ,ದೆಹಲಿ, ಅಂಬಾಲ, ಕಾಟ್ರಾ,ಕಾಶ್ಮೀರ, ರಾಜಸ್ತಾನ್, ಗುಜರಾತ್ ಹೀಗೆ ಭಾರತ ವನ್ನು ಒಂದು ಸುತ್ತು ಪ್ರದಕ್ಷಿಣೆ ಹಾಕಿದ ರೀತಿಯಲ್ಲಿ … Read more

ಎರಡು ಧರ್ಮಗಳಿಗೆ ಒಂದೇ ಗುಡಿ (ಕಾಂಬೋಡಿಯಾ ಭಾಗ-3): ಎಂ ನಾಗರಾಜ ಶೆಟ್ಟಿ

ಇಲ್ಲಿಯವರೆಗೆ ನಾವು ಉಳಿದುಕೊಂಡಿದ್ದ ಹೋಟೆಲಲ್ಲಿ ಉಪಾಹಾರ ಮುಗಿಸಿ ಹೊರಗೆ ಬರುವಾಗ ರಾ ತಯಾರಾಗಿ ನಿಂತಿದ್ದ. ಸಮಯಕ್ಕೆ ಸರಿಯಾಗಿ ಅವನು ಬಂದಿದ್ದರಿಂದ ಖುಷಿಯಾಯಿತು. ಹಿಂದಿನ ದಿನದ ಹಣ ಪೂರ್ತಿ ತೆಗೆದುಕೊಂಡಿದ್ದರಿಂದ ಬರುತ್ತಾನೋ, ಇಲ್ಲವೋ ಎನ್ನುವ ಸಣ್ಣ ಅನುಮಾನವಿತ್ತು. ಕಾರು ಹತ್ತುವ ಮುನ್ನ, ಇತಿಹಾಸ್‌ ಪಕ್ಕದ ಶಾಪಿನಿಂದ ನೀರಿನ ಬಾಟಲುಗಳನ್ನು ಕೊಂಡ. ಅವನ ಹತ್ತಿರವಿದ್ದ ರಿಯಲ್‌ಗಳು ಮುಗಿದಿತ್ತು. ಅವನು ಕೊಟ್ಟ 20 ಡಾಲರ್‌ಗೆ ಅಂಗಡಿಯಾಕೆ ಚಿಲ್ಲರೆ ಕೊಟ್ಟಳು. ಸಿಯಾಮ್‌ ರೀಪ್‌ನಿಂದ ಸ್ವಲ್ಪ ದೂರ ಹೋದ ಕೂಡಲೇ ಅಂಗೋರ್‌ವಾಟ್‌ನ ಗೋಪುರಗಳು ಕಾಣುತ್ತವೆ. … Read more

ಭೂಲೋಕದಲ್ಲಿ ಅಪ್ಸರೆಯರು (ಕಾಂಬೋಡಿಯಾ ಭಾಗ-2): ಎಂ ನಾಗರಾಜ ಶೆಟ್ಟಿ

ಹಿಂದಿನ ಸಂಚಿಕೆಯಲ್ಲಿ… ಟೋನ್ಲೆ ಸಾಪ್‌ನಿಂದ ಹೊರಡುವಾಗ ಸಂಜೆ ಗಂಟೆ ಏಳಾಗಿರಲಿಲ್ಲ. ಸುಮ್ಮನೆ ಸುತ್ತಾಡಿ ಕಾಲ ಕಳೆಯುವ ಬದಲು ಸಾಂಸ್ಕೃತಿಕ ಕಾರ್ಯಕ್ರಮವೇನಾದರೂ ಇದೆಯೇ ಎಂದು ʼರಾʼ ನೊಡನೆ ವಿಚಾರಿಸಿದೆವು. ಸಾಮಾನ್ಯವಾಗಿ ಪ್ರತಿಯೊಂದು ಊರಿನಲ್ಲೂ ಅಲ್ಲಿಯದೇ ಹಾಡು,ನೃತ್ಯ ಪರಂಪರೆ ಇರುತ್ತದೆ. ಕೆಲವೊಮ್ಮೆ ನಮ್ಮ ಸಮಯಕ್ಕೆ ಅವು ದೊರಕುವುದಿಲ್ಲ. ತಿರುವನಂತಪುರದಲ್ಲಿ ಕಥಕ್ಕಳಿಯನ್ನು ನೋಡಬೇಕೆಂಬಾಸೆ ಇದ್ದರೂ ಅಲ್ಲಿಗೆ ಹೋದಾಗ ಪ್ರದರ್ಶನವಿರಲಿಲ್ಲ.ಕಾಂಬೋಡಿಯಾದಲ್ಲಿ ʼಅಪ್ಸರಾ ನೃತ್ಯʼ ಬಹಳ ಚೆನ್ನಾಗಿರುತ್ತದೆ ಎನ್ನುವುದನ್ನು ಕೇಳಿದ್ದೆ. ರಾ, ಸಿಯಾಮ್‌ರೀಪಲ್ಲಿ ಪ್ರತಿದಿನ ಒಂದಲ್ಲೊಂದು ಕಡೆ ಅಪ್ಸರಾ ನೃತ್ಯ ಪ್ರದರ್ಶನಗಳು ಇರುತ್ತಿತ್ತು, ಕೋವಿಡ್ … Read more

ತೇಲುವ ಗ್ರಾಮಗಳ ಮುಳುಗುವ ಬದುಕು: ಎಂ ನಾಗರಾಜ ಶೆಟ್ಟಿ

ವಿಸ್ತೀರ್ಣದಲ್ಲಿ ಕರ್ನಾಟಕಕ್ಕಿಂತ ಸ್ವಲ್ಪವೇ ಚಿಕ್ಕದಾದ ದಕ್ಷಿಣ ಏಷ್ಯಾದ ಪುಟ್ಟ ರಾಷ್ಟ್ರ ಕಾಂಬೋಡಿಯಾ. ಕಾಂಬೋಡಿಯಾದ ಜನಸಂಖ್ಯೆ ಒಂದು ಕೋಟಿ ಎಂಬತ್ತು ಲಕ್ಷ. ಅದರಲ್ಲಿ ಸುಮಾರು ಒಂದು ಲಕ್ಷ ಜನರು ತೇಲುವ ಗ್ರಾಮಗಳಲ್ಲಿ ವಾಸಿಸುತ್ತಾರೆ. ಕಾಂಬೋಡಿಯಾದಲ್ಲಿ ಏಳುನೂರು ತೇಲುವ ಗ್ರಾಮಗಳಿವೆಯೆಂದು ಹೇಳಲಾಗುತ್ತಿದೆ. ಕಾಂಬೋಡಿಯಾಕ್ಕೆ ಬರುವ ಪ್ರಯಾಣಿಕರಿಗೆ ವಿಶ್ವದ ಅತಿ ಹೆಚ್ಚು ವಿಸ್ತೀರ್ಣದ ಅಂಗೋರವಾಟ್ ದೇವಾಲಯ ಹೇಗೋ, ಹಾಗೆಯೇ ತೇಲುವ ಗ್ರಾಮಗಳು ಕೂಡಾ ಆಕರ್ಷಣೆಯ ಕೇಂದ್ರಗಳು. ಲಕ್ಷಾಂತರ ಜನರನ್ನು ಬಲಿ ಪಡೆದ ಪೋಲ್‌ಪಾಟ್‌ರಂತಹ ಸರ್ವಾಧಿಕಾರಿಯನ್ನು ಕಂಡ ಕಾಂಬೋಡಿಯವನ್ನು ನೋಡಬೇಕೆಂದು ಬಹಳ ವರ್ಷಗಳಿಂದ … Read more

ಕಲ್ಬುರ್ಗಿಯಲ್ಲೊಂದು ಬುದ್ಧವಿಹಾರ: ವೈ. ಬಿ. ಕಡಕೋಳ

ಬಿಸಿಲ ನಾಡು ಕಲ್ಬುರ್ಗಿ ಎಂದ ಕೂಡಲೇ ನಮಗೆ ನೆನಪಾಗುವುದು ಇಲ್ಲಿನ ಶರಣ ಬಸವೇಶ್ವರ ದೇಗುಲ ಮತ್ತು ವಿಶ್ವವಿದ್ಯಾಲಯ. ತೊಗರಿ ನಾಡೆಂದು ಪ್ರಸಿದ್ದವಾದ ಕಲ್ಬುರ್ಗಿಯಲ್ಲೊಂದು ವಿಶಿಷ್ಟ ಬುದ್ಧವಿಹಾರವಿದೆ. ಇದನ್ನು ನೋಡಲೇಬೇಕು. ಇದು ನಗರದಿಂದ ದೂರವಿರುವ ಕಾರಣ ಸ್ವಂತ ವಾಹವಿದ್ದರೆ ಅನುಕೂಲ ಇಲ್ಲವೇ ಅಟೋ ಅಥವ ಸೇಡಂ ಕಡೆಗೆ ಹೋಗುವ ಬಸ್ ಮೂಲಕ ಇಲ್ಲಿಗೆ ಬರಬಹುದು. ಅಥವ ನಗರ ಸಾರಿಗೆ ಬಸ್ ಮೂಲಕವೂ ಬರಬಹುದು. ಇದು ನಗರದಿಂದ 7 ಕಿ. ಮೀ ಅಂತರದಲ್ಲಿದೆ. ಸೇಡಂ ಕಡೆಗೆ ಸಂಚರಿಸುವ ಬಸ್ ರಸ್ತೆಯಲ್ಲಿ … Read more

ಗುಲ್ಬರ್ಗ ವೈಷ್ಣೋದೇವಿ ಮಂದಿರ: ವೈ. ಬಿ. ಕಡಕೋಳ

ಗುಲ್ಬರ್ಗ ಕರ್ನಾಟಕದ ಹೈದ್ರಾಬಾದ್ ಕರ್ನಾಟಕ ಎಂದು ಕರೆಸಿಕೊಂಡ ಜಿಲ್ಲೆಗಳನ್ನೊಳಗೊಂಡ ಜಿಲ್ಲಾ ಪ್ರದೇಶ. ಇದು ಬೆಂಗಳೂರಿನಿಂದ 613 ಕಿ. ಮೀ ಅಂತರದಲ್ಲಿದ್ದು ಶರಣಬಸವೇಶ್ವರ ಅಪ್ಪ ಅವರಿಂದ ಪ್ರಸಿದ್ದಿ ಪಡೆದದ್ದು. ಬೀದರ ಶ್ರೀರಂಗಪಟ್ಟಣ ಹೆದ್ದಾರಿಯ ಫಲವಾಗಿ ಸಾಕಷ್ಟು ವಾಹನ ಸೌಕರ್ಯದ ಜೊತೆಗೆ ದಕ್ಷಿಣ ಭಾರತದಿಂದ ಉತ್ತರ ಭಾರತಕ್ಕೆ ಸಾಗುವ ರೈಲುಗಳು ಗುಲ್ಬರ್ಗ ಮೂಲಕ ಹಾಯ್ದು ಹೋಗುವ ಮೂಲಕ ಇದು ಸಾರಿಗೆ ಸೌಕರ್ಯಕ್ಕೆ ಹೇಳಿ ಮಾಡಿಸಿದ ಸ್ಥಳ. ಇಲ್ಲಿನ ಇಸ್ಲಾಮಿಕ್ ಶೈಲಿಯ ಗುಂಬಜ್ಗಳು. ಬುದ್ದ ವಿಹಾರ ಮಂದಿರ. ಶರಣ ಬಸವೇಶ್ವರ ಅಪ್ಪ … Read more

ಅಲಪಿಯ ಹೌಸ್ ಬೋಟ್ ಎಂಬ ಸ್ವರ್ಗದತುಣುಕು!: ಭಾರ್ಗವ ಎಚ್ ಕೆ

ಸಮುದ್ರದದಂಡೆಗೆ ಬೌಂಡರಿ ಗೆರೆಗಳಂತೆ ಕಾಣುವ ಕಬ್ಬಿಣದ ರೈಲು ಹಳಿಗಳು!. ಅದರ ಮೇಲೆ ಎಡೆಬಿಡದೆ ಅತ್ತಿಂದಿತ್ತ ಓಡಾಡುವ ಕೊಂಕಣ ರೈಲುಗಳು. ಆ ಹಳಿಯ ದಾರಿಯಲ್ಲೊಂದು ಅಲಪಿ ಎಂಬ ಕುಟ್ಟ ನಾಡು!. ರೈಲಿನಲ್ಲಿ ಪಯಣಿಸುವಾಗ ಒಂದು ದಿಕ್ಕಿನಲ್ಲಿ ಮೀನು ಹಿಡಿಯುವ ಬೋಟ್ ಗಳು ಕಣ್ಣಿಗೆ ಕಂಡರೆ, ಇನ್ನೊಂದು ದಿಕ್ಕಿನಲ್ಲಿ ವೈಭವದ ಹವಾನಿಯಂತ್ರಿತ ನಯನ ಮನೋಹರ ಹೌಸ್ ಬೋಟ್ ಗಳ ಇರುವೆ ಸಾಲು! ಹೆಂಡತಿ, ಮಗಳೊಂದಿಗೆ ಕುಟುಂಬ ಸಮೇತ ದೇವರ ನಾಡಿನ ಪ್ರಸಿದ್ಧ ಹೌಸ್ ಬೋಟ್ ಪ್ರವಾಸಿ ತಾಣವಾದ ಅಲಪಿ ಊರಿಗೆ … Read more

ಕೃಷ್ಣೆಯಿಂದ ಸಾಗಿ ಕೃಷ್ಣೆಯವರೆಗೆ: ಶ್ರೀ.ಎಂ.ಎಚ್.ಮೊಕಾಶಿ

ಒಂದು ದಿನ ಸಂಜೆ ತಂಪಾದ ಗಾಳಿ ಬೀಸುತ್ತಿತ್ತು, ಆಕಾಶದಲ್ಲಿ ಮೋಡಕವಿದ ವಾತಾವರಣವಿತ್ತು. ಇಂಥ ಚುಮುಚುಮು ಚಳಿಯಲ್ಲಿ ನಾವೆಲ್ಲ ನಾಲ್ಕೈದು ಗೆಳೆಯರು ಕೂಡಿ ಹರಟೆ ಹೊಡೆಯುತ್ತಿದ್ದೆವು. ಕೆಲ ಸಮಯದ ನಂತರ ಗೆಳೆಯರೆಲ್ಲರೂ ಕೂಡಿ ಟೀ ಕುಡಿಯಲು ಹೋಟೆಲ್ ಗೆ ಹೋದೆವು. ಅಲ್ಲಿ ಹಲವಾರು ವಿಷಯಗಳ ಚರ್ಚೆನಡೆಸುತ್ತಿರುವಾಗ ಗೆಳೆಯನೊಬ್ಬನು ಇಂಥ ಒಳ್ಳೆಯ ಕ್ಲೈಮೇಟ್ ನಲ್ಲಿ ಯಾಕೆ ನಾವೆಲ್ಲರೂ ಒಂದೆರಡು ದಿನ ಟೂರ್ ಗೆ ಹೋಗಬಾರದು ಎಂದನು. ಅದಕ್ಕೆ ಒಬ್ಬ ಗೆಳೆಯನು ಸಧ್ಯ ಮಳೆಗಾಲದಲ್ಲಿ ಟೂರ್ ಬೇಡ ಎಂದನು. ಆಗ ಇನ್ನೊಬ್ಬ … Read more

ಹಿಮಾಲಯವೆಂಬ ಸ್ವರ್ಗ (ಕೊನೆಯ ಭಾಗ): ವೃಂದಾ ಸಂಗಮ್

ಇಲ್ಲಿಯವರೆಗೆ ಮುಂದೆ ರಾಜಘಾಟ್ ಗೆ ತೆರಳಿದೆವು.  ದೆಹಲಿಯ ಸುಡು ಬಿಸಿಲಿಗೆ ನಾವಾಗಲೇ ಸುಸ್ತು ಹೊಡೆದಿದ್ದೆವು. ಹೆಚ್ಚಿನವರು ಗಾಡಿಯಲ್ಲಿಯೇ ಕುಳಿತಿದ್ದರು. ಮಹಾತ್ಮ ಗಾಂಧಿಯವರ ಸಮಾಧಿಯ ಮುಂದೆ ನಿಂತಾಗ ನನಗರಿವಿಲ್ಲದೆಯೇ ತ್ಯಾಗ, ಬಲಿದಾನಗಳ ನಮ್ಮ ಸ್ವಾತಂತ್ರ್ಯ ಚಳುವಳಿಯ ಹರಿಕಾರ ಗಾಂಧೀಜಿ. ಅಹಿಂಸೆ, ಸತ್ಯ ಎಂಬ ಎರಡು ಪ್ರಬಲವಾದ  ಅಸ್ತ್ರಗಳಿಂದ   ಬ್ರಿಟಿಷ್ ಸಾಮ್ರಾಜ್ಯವನ್ನು ಬಗ್ಗಿಸಿ ನಮಗೆ ಸ್ವಾತಂತ್ರ್ಯ ತಂದುಕೊಟ್ಟ ಮಹಾಚೇತನ. ಅಲ್ಲಿ ನಿಂತಾಗ ಮೂಡಿದ್ದು ಧನ್ಯತೆಯ ಕುಸುಮಗಳು – ಕಣ್ಣಲ್ಲಿ ಎರಡು ಹನಿಗಳು. ಹಿಂದಿರುಗುವಾಗ, ದಾರಿಯಲ್ಲಿ ಕಂಡು ಬಂದದ್ದು ಕಿಸಾನ್ ಘಾಟ್, … Read more

ಹಿಮಾಲಯವೆಂಬ ಸ್ವರ್ಗ (ಭಾಗ 9): ವೃಂದಾ ಸಂಗಮ್

ಇಲ್ಲಿಯವರೆಗೆ ಮಥುರ ಶ್ರೀಕೃಷ್ಣನ ಜನ್ಮಸ್ಥಾನ. ಈ ಪ್ರದೇಶವನ್ನು ಬ್ರಜ್‌ಭೂಮಿ ಎಂದು ಕರೆಯುತ್ತಾರೆ. ಶ್ರೀಕೃಷ್ಣನ ಕಥೆಗಳು ಹಾಗು ಸ್ಥಳ ಪುರಾಣಗಳ ಬಗ್ಗೆಯೂ ನಾನೇನೇ ಹೇಳಿದರು ಅದು ಸಂಪೂರ್ಣವಾಗಲು ಸಾಧ್ಯವಿಲ್ಲ. ಮನುವಿನ ಮೊಮ್ಮಗ ಧ್ರುವ ತನ್ನ ತಾಯಿಯ ಸವತಿ ಸುರುಚಿ ಕೊಡುತ್ತಿದ್ದ ಹಿಂಸೆ ಅನುಭವಿಸುತ್ತಿದ್ದಾಗ ನಾರದರ ಉಪದೇಶದಂತೆ ಮಧುವನದಲ್ಲಿ ತಪಸ್ಸನ್ನು ಆಚರಿಸುತ್ತಾನೆ. ಇಲ್ಲಿ ನಿತ್ಯ ಹರಿಸಾನ್ನಿಧ್ಯವಿದೆ ಎಂದು ನಾರದರು ಧ್ರುವನಿಗೆ ತಿಳಿಸುತ್ತಾರೆ. "ಪುಣ್ಯಂ ಮಧುವನಂ ಯತ್ರ ಸಾನ್ನಿಧ್ಯಂ ನಿತ್ಯದಾ ಹರಿಃ ". ಮುಂದೆ ಮಧು ಎಂಬ ರಾಕ್ಷಸ ಇಲ್ಲಿ ಮಧುರಾ … Read more

ಹಿಮಾಲಯವೆಂಬ ಸ್ವರ್ಗ (ಭಾಗ 8): ವೃಂದಾ ಸಂಗಮ್

ಇಲ್ಲಿಯವರೆಗೆ  ರಾತ್ರಿ ಹರಿದ್ವಾರದಲ್ಲಿ ನಮ್ಮ ಕೊಚ ಕೊಚ ಕೊಯಾಂ ಕೊಯಾಂ ನೆಂಟರು, ಬಡೇ ಹನುಮಾನ ಮಂದಿರದಲ್ಲಿ, ನಮಗಿಂತ ಮೊದಲೇ. ಅವರೆಲ್ಲ ಬದರಿಯ ವಿಷಯ ಮಾತಾಡುತ್ತಿದ್ದರು. ನನ್ನ ಪಕ್ಕದಲ್ಲಿ ಊಟಕ್ಕೆ ಕುಳಿತವಳು, ಎದುರಿಗೆ ಇದ್ದವಳಿಗೆ ಆ ದಿನ ನಡೆದ ಘಟನೆಯ ಬಗ್ಗೆ ತನ್ನ ಗಂಡನ ಪ್ರಶಂಸೆ ಮಾಡುತ್ತಿದ್ದಳು. ನನಗೆ ಬದರಿ ದೇವಸ್ಥಾನದ ಮುಂದೆ ಫೋಟೋ ತೆಗೆಸಿಕೊಳ್ಳಬೇಕೆಂದಿತ್ತು. ಆದರೆ ಆತ ಬೇಡ ಎಂದು ಬಿಟ್ಟ. ನನಗೆ ತುಂಬಾ ಬೇಜಾರಾಯಿತು. ಆಮೇಲೆ ಎಲ್ಲರೂ ಫೋಟೋ ತೆಗೆಸಿಕೊಂಡಿದ್ದು ನೋಡಿ, ಬಾ ನಾವೂ ತೆಗೆಸಿಕೊಳ್ಳೋಣ … Read more

ಹಿಮಾಲಯವೆಂಬ ಸ್ವರ್ಗ (ಭಾಗ 7): ವೃಂದಾ ಸಂಗಮ್

ಇಲ್ಲಿಯವರೆಗೆ  ಬದರೀಕ್ಷೇತ್ರವು ಉತ್ತರ ಪ್ರದೇಶದ (ಈಗ ಉತ್ತರಾಂಚಲ್) ಚಮೋಲಿ ಜಿಲ್ಲೆಯ ಗಡ್‌ವಾಲ್ ಪ್ರದೇಶದಲ್ಲಿ ಅಲಕ್‌ನಂದಾ ನದಿಯ ತೀರದಲ್ಲಿದೆ. ಈ ಕ್ಷೇತ್ರವು ಸಮುದ್ರ ಮಟ್ಟಕ್ಕಿಂತ ಸುಮಾರು 103೦೦ ಅಡಿ ಎತ್ತರದಲ್ಲಿದ್ದು, ಊರು ಹಾಗೂ ದೇವಾಲಯದವರೆಗೂ ವಾಹನ ಚಲಿಸುವ ರಸ್ತೆಯಿದೆ. ನರ ಮತ್ತು ನಾರಾಯಣ ಎಂಬ ಎರಡು ಪರ್ವತಗಳು ಈ ಕಣಿವೆ ಪ್ರದೇಶದ ಕಾವಲುಗಾರರಂತೆ ನಿಂತಿವೆ. ಹಿನ್ನೆಲೆಯಲ್ಲಿ 215೦೦ ಅಡಿ ಎತ್ತರದ ಘನ ಗಾಂಭೀರ್ಯ ನೀಲಕಂಠ ಪರ್ವತ ತನ್ನ ತಲೆ ಮೋಡಗಳಲ್ಲಿ ಮುಚ್ಚಿಕೊಂಡು ನಿಂತಿದೆ. ದೇವಾಲಯದ ಮುಂದೆ ಕೊರೆಯುವ ಅಲಕ್‌ನಂದ … Read more

ಹಿಮಾಲಯವೆಂಬ ಸ್ವರ್ಗ (ಭಾಗ 6): ವೃಂದಾ ಸಂಗಮ್

ಇಲ್ಲಿಯವರೆಗೆ  ಸಾಯಂಕಾಲ ಹೃಷಿಕೇಶಕ್ಕೆ. ಇದು ಭಾರತದ ಉತ್ತರಾಖಂಡ ರಾಜ್ಯದ ಡೆಹ್ರಾಡೂನ್ ಜಿಲ್ಲೆಯಲ್ಲಿರುವ ಒಂದು ಪಟ್ಟಣ. ಹಿಮಾಲಯಕ್ಕೆ ಹೆಬ್ಬಾಗಿಲೆನಿಸಿಕೊಳ್ಳುತ್ತದೆ ಹೃಷಿಕೇಶ ವಿಷ್ಣುವಿನ ಒಂದು ಹೆಸರು. ಇದರ ಅರ್ಥ ಇಂದ್ರಿಯಗಳ ಒಡೆಯ ಎಂಬುದಾಗಿದೆ. ಈ ಸ್ಥಳದಲ್ಲಿ ರೈಭ್ಯ ಋಷಿಯ ತಪಸ್ಸಿಗೆ ಒಲಿದು ವಿಷ್ಣು ಹೃಷಿಕೇಶನಾಗಿ ಪ್ರತ್ಯಕ್ಷನಾದನೆಂದು ಒಂದು ಕಥೆಯಿದೆ.  ಸ್ಕಂದ ಪುರಾಣದಲ್ಲಿ ಈ ಸೀಮೆಯು ಕುಬ್ಜಾಮ್ರಕ ಎಂದು ಹೆಸರಿಸಲ್ಪಟ್ಟಿದೆ. ಐತಿಹಾಸಿಕವಾಗಿ ಹೃಷಿಕೇಶ ಕೇದಾರ ಖಂಡದ ಭಾಗ. ಇಂದಿನ ಗಢ್ವಾಲ್ ಪ್ರದೇಶವು ಹಿಂದೆ ಕೇದಾರ ಖಂಡ ವೆಂದು ಕರೆಯಲ್ಪಡುತ್ತಿತ್ತು.         … Read more

ಹಿಮಾಲಯವೆಂಬ ಸ್ವರ್ಗ (ಭಾಗ 5): ವೃಂದಾ ಸಂಗಮ್

ಇಲ್ಲಿಯವರೆಗೆ  ಅದು ಥಮ್ಸಾ ನದಿಯಂದು ಹೇಳಿದರು. ಲಂಡನ್ ನಗರದ ಥೇಮ್ಸ ನದಿಯನ್ನು ನೆನಪಿಸಿಕೊಂಡು ಥಮ್ಸಾ ನದಿಯನ್ನು ನೋಡಿದೆವು. ಭಾರತದಲ್ಲಿಲ್ಲದ್ದು ಲಂಡನ್ ನಲ್ಲೇನಿದೆ.  ದೇವಸ್ಥಾನದ ಸುತ್ತಲು ಹುಲ್ಲು ಚಿಕ್ಕ ಚಿಕ್ಕ ಗುಡ್ಡೆಯಾಗಿ ಬೆಳೆದಿತ್ತು. ಸೀತೆ ಭೂಮಿಯ ಒಳಗೆ ಸೇರುವ ಸಮಯದಲ್ಲಿ, ಸೀತೆಯನ್ನು ಮೇಲೆತ್ತಲು ಆಕೆಯ ಕೂದಲನ್ನು ಹಿಡಿದು ಎಳೆದರಂತೆ ರಾಮ ಲಕ್ಷ್ಮಣರು. ಅದು ಹಿಡಿ ಹಿಡಿಯಾಗಿ ಅವರ ಕೈಲ್ಲಿಯೇ ಉಳಿಯಿತಂತೆ. ಅದೇ ಈ ಹುಲ್ಲು. ಅದನ್ನು ಈಗ ದನ ಕರುಗಳೂ ತಿನ್ನಲಾರವು ಎಂದರು. ಈಗ ಕೆಲ ದಿನಗಳ ಹಿಂದೆ … Read more

ಹಿಮಾಲಯವೆಂಬ ಸ್ವರ್ಗ (ಭಾಗ 4): ವೃಂದಾ ಸಂಗಮ್

ಇಲ್ಲಿಯವರೆಗೆ ನಾವು ಮೊದಲು ಹೋದದ್ದು ಥಾಯ್ಲ್ಯಾಂಡ್ ದೇಶದ ಚೈತ್ಯಕ್ಕೆ. ಇದು ಥಾಯಿ ಶೈಲಿಯ ಕಟ್ಟಡವಾಗಿದ್ದು ಸುಮಾರು ದೊಡ್ಡದಾಗಿದೆ. ಇದನ್ನು ಕಟ್ಟಿ 4೦ ವರ್ಷಗಳಾಗಿದ್ದವು (1998 ರಲ್ಲಿ). ಬುದ್ಧನ ಪ್ರತಿಮೆ ನಾಲ್ಕುವರೆ ಟನ್ ಭಾರದ ಅಷ್ಟಧಾತು ಎಂಬ ಸಾಮಗ್ರಿಯಿಂದ ಮಾಡಲ್ಪಟ್ಟಿದೆಯಂತೆ. ಚಿನ್ನದ ಪಾಲೀಶ್ ಹಾಕಿರುವ ಈ ಪ್ರತಿಮೆಯ ವೆಚ್ಚ ಹದಿನಾರು ಲಕ್ಷ ರುಪಾಯಿಗಳಾಗಿದ್ದವಂತೆ. ಪ್ರತಿಮೆಯನ್ನು ಇಲ್ಲಿಯ ರೀತಿಯಂತೆ ಒಂದು ಗಾಜಿನ ಪೆಟ್ಟಿಗೆಯಲ್ಲಿರಿಸಲಾಗಿದೆ. ಚೈತ್ಯವು ಬಹಳ ಸುಂದರವಾಗಿದೆ – ಗೋಡೆಗಳು, ನೆಲ, ಮೇಲಿನ ಛಾವಣಿ ಎಲ್ಲ ಸುಂದರವಾದ ರಂಗು-ರಂಗಾದ ಕೆತ್ತನೆ/ಚಿತ್ರಕಲೆಗಳಿಂದ … Read more

ಹಿಮಾಲಯವೆಂಬ ಸ್ವರ್ಗ (ಭಾಗ 3): ವೃಂದಾ ಸಂಗಮ್

ಇದುವರೆಗೂ ಶಿವನೇ ನಮಗೆ ಕಣ್ಮಾಯ ಮಾಡಿದ್ದನೋ ತಿಳಿಯದು. ಅಲ್ಲಿಯೇ ಸೈಕಲ್ ರಿಕ್ಷಾದಲ್ಲಿ ನಮ್ಮಿಂದ ತಪ್ಪಿಸಿಕೊಂಡ ಅವರೆಲ್ಲರೂ ಕೂಡ ಇದೇ ರೀತಿ ಕಾಯ್ದು ಹುಡುಕಿ, ಇದಿಷ್ಟೂ ಪೂಜೆ ಮುಗಿಸಿಕೊಂಡ ನಿಂತಿದ್ದಾರೆ. ಸರಿ ಎಲ್ಲರೂ ಒಂದಾಗಿ ಕೃಷ್ಣ ಮಠಕ್ಕೆ ಹಿಂದಿರುಗಿದೆವು. ಅಲ್ಲಿ ಧಾರ್ಮಿಕ ಕಾರ್ಯಗಳನ್ನು ಮಾಡಿಸುವವ ಚಿಕ್ಕ ವಯಸ್ಸಿನ ಹುಡುಗ. ವೇದವ್ಯಾಸ, ಅನಂತಪುರ ಜಿಲ್ಲೆಯವನಂತೆ. ನೋಡಲು ಉಡುಪಿ ಮಠದವರಂತೆಯೇ ಇದ್ದ. ತಮಾಷೆಯಾಗಿ ಮಾತಾಡುತ್ತಿದ್ದ. ತೆಲಗು ಕನ್ನಡ ಎರಡೂ ಗೊತ್ತಿತ್ತು. ಅವನು ಬನಾರಸ ವಿಶ್ವವಿದ್ಯಾಲಯದಲ್ಲಿ ಸಂಗೀತ ವಿಭಾಗದಲ್ಲಿ ಕೊಳಲು ವಿದ್ವತ್ ಕಲಿಯುತ್ತಿದ್ದಾನಂತೆ. … Read more

ಹಿಮಾಲಯವೆಂಬ ಸ್ವರ್ಗ (ಭಾಗ 2): ವೃಂದಾ ಸಂಗಮ್

ಹರನ ಜಡೆಯಿಂದ, ಹರಿಯ ಅಡಿಯಿಂದ, ಋಷಿಯ ತೊಡೆಯಿಂದ ಇಳಿದು ಬಂದ ಗಂಗೆ, ಸಗರನ ಮಕ್ಕಳಿಗೆ ಮೋಕ್ಷ ಕೊಟ್ಟ ಗಂಗೆ, ಭೀಷ್ಮ ಪಿತಾಮಹನ ತಾಯಿ ಗಂಗೆ, ಶಂತನು ಮಹರಾಜನ ಪ್ರೇಮಿ ಗಂಗೆ, ಜಹ್ನು ಋಷಿಯಿಂದ ಜಾಹ್ನವಿಯಾದ ಗಂಗೆ, ಭಗೀರಥನಿಂದ ಭಾಗೀರಥಿಯಾದ ಗಂಗೆ, ಪರಮ ಪಾವನೆ, ಪ್ರತಿಯೊಬ್ಬ ಭಾರತೀಯನ ಮನೆಯಲ್ಲಿರುವ ಗಂಗೆ, ‘ಗಂಗೆಗೇ ಕೊಳೆ ಸೋಕದು ಪಾಪದಾ ಫಲ ತಟ್ಟದು’ ಎಂದು ನಾವು ಮಲಿನಗೊಳಿಸಿದ ಗಂಗೆ, ಕೋಟ್ಯಾನು ಕೋಟಿ ಭಾರತೀಯರ ಪಾಪ ತೊಳೆದು ಈಗ ಕೋಟ್ಯಾನು ಕೋಟಿ ರೂಪಾಯಿಯ ಒಡತಿಯಾಗಿ … Read more

ಹಿಮಾಲಯವೆಂಬ ಸ್ವರ್ಗ (ಭಾಗ 1): ವೃಂದಾ ಸಂಗಮ್

ದೇಶ ನೋಡು ಅಥವಾ ಕೋಶ ಓದು ಅಂತಾರೆ. ಈಗೆಲ್ಲ ವರ್ಷಕ್ಕೊಂದು ಫಾರಿನ್ ಟ್ರಿಪ್ ಜಸ್ಟ ಕಾಮನ್ ಆಗಿದೆ. ಊರು ಸುತ್ತೋದು ಅಥವಾ ದೇಶ ಸುತ್ತೋದು ತುಂಬಾ ಅನುಭವಗಳನ್ನ ನೀಡುತ್ತವೆ ಅಂತನೇ ಈ ಮಾತು ಹಿರಿಯರು ಹೇಳುವುದು. ಈ ಅನುಭವಗಳನ್ನು ಪಡೆಯುವುದಕ್ಕಾಗಿಯೇ ಈಗಿನ ಕಾಲದವರಿಗಾಗಿ ಟ್ರೆಕ್ಕಿಂಗ್ ರಾಫ್ಟಿಂಗ ಎಲ್ಲಾ ಇವೆ. ಆದರೂ ಕೂಡಾ ಹಿಂದಿನ ಕಾಲದ ಪವಿತ್ರ ಯಾತ್ರೆಗಳೂ ಇನ್ನೂ ಚಾಲ್ತಿಯಲ್ಲಿವೆ. ಅಮರನಾಥ ಯಾತ್ರೆ ಮುಂತಾದವುಗಳಿಗೆ ಎಷ್ಠೋ ದಿನ ಕಾಯಬೇಕಾಗುತ್ತದೆ.  ಕಾಶೀಯಾತ್ರೆ ಎಂದರೆ ನೆನಪಾಗುವುದು, ತ್ರಿವೇಣಿಯವರು ತಮ್ಮ ಕಾಶೀಯಾತ್ರೆ … Read more

ಬೆಳ್ಳಿತೆರೆಯಲ್ಲಿ `ಮೇಲುಕೋಟೆ’ಯ ದೃಶ್ಯಕಾವ್ಯ!: ದಂಡಿನಶಿವರ ಮಂಜುನಾಥ್

ಕನ್ನಡವೂ ಸೇರಿದಂತೆ ವಿವಿಧ ಭಾಷೆಗಳ ಸಿನಿಮಾಗಳನ್ನು ನೋಡುತ್ತಿದ್ದಾಗ ಖಂಡಿತಾ ನೀವು ಅದರಲ್ಲಿ ಕಲ್ಯಾಣಿಯೊಂದರ ಹಿನ್ನೆಲೆ ಹೊಂದಿರುವ ಬೆಟ್ಟದ ತುದಿಯಲ್ಲಿ ದೇವಾಲಯದ ಗೋಪುರದ ದೃಶ್ಯವನ್ನು ಆಗಾಗ ನೋಡುತ್ತಿರುತ್ತೀರಿ.  ಹೆಚ್ಚಾಗಿ ಕಾಡುಗಳ ದೃಶ್ಯಗಳಲ್ಲಿ ಈ ಸ್ಥಳದ ಪರಿಚಯ ನಿಮಗಾಗಿರುತ್ತದೆ. ಇದು ನಮ್ಮ ನಾಡಿನ ಸ್ಥಳವೇ ಆಗಿದೆ ಎಂದು ತಿಳಿದಾಗ ನಿಜಕ್ಕೂ ನಿಮಗೆ ಆಶ್ಚರ್ಯವಾಗುವುದರಲ್ಲಿ ಅನುಮಾನವೇ ಇಲ್ಲ. ಅದುವೇ ಮೇಲುಕೋಟೆಯ ಮೋಹಕ ದೃಶ್ಯಕಾವ್ಯ. ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಈ ಸ್ಥಳ ಹಲವು ಭಾಷೆಗಳ ಚಿತ್ರರಂಗದವರನ್ನು ತನ್ನತ್ತ ಆಕರ್ಷಿಸುವುದರಲ್ಲಿ ಯಶಸ್ವಿಯಾಗಿದೆ. ಉತ್ತಮ ಶೂಟಿಂಗ್ ಸ್ಪಾಟ್ … Read more

ಶಿಲ್ಪ ಕಲೆಯ ತವರು: ಕೈದಾಳ: ದಂಡಿನಶಿವರ ಮಂಜುನಾಥ್

ಮುಂಬೈನಿಂದ ಬಂದಿದ್ದ ಗೆಳೆಯ ಸಿನಿಮಾ ಛಾಯಾಗ್ರಾಹಕ ಶಿವಕುಮಾರ್ ಮತ್ತು ನಾನು ತುಮಕೂರಿನಿಂದ ಬೆಳ್ಳಂಬೆಳಿಗ್ಗೆ ಚಹಾ ಕುಡಿದು ಶಿಲ್ಪಕಲೆಯ ತವರೂರಾದ ಕೈದಾಳದತ್ತ ಪ್ರಯಾಣ ಬೆಳೆಸಿದವು. ಸೂರ್ಯ ಆಗ ತಾನೇ ಉದಯಿಸಿದ್ದರೂ ಸಹ ಚುಮುಚುಮು ಚಳಿಯ ವಾತಾವರಣ ನಮ್ಮ ಮನಸ್ಸಿಗೆ ಮುದ ನೀಡುತ್ತಿತ್ತು. ಕನ್ನಡನಾಡಿನ ಶಿಲ್ಪಕಲೆಗಳಿಗೆ ಪ್ರಸಿದ್ಧವಾದ ದೇವಾಲಯಗಳನ್ನು ಕೆತ್ತಿದ ಅಮರಶಿಲ್ಪಿ ಎಂದು ಹೆಸರಾದ ಜಕಣಾಚಾರಿಯ ಜನ್ಮಸ್ಥಳವನ್ನು ನೋಡುವ ಕುತೂಹಲ ನಮ್ಮಲ್ಲಿತ್ತು. ತುಮಕೂರು ನಗರದಿಂದ ಕುಣಿಗಲ್ ಮಾರ್ಗದಲ್ಲಿ ಕೇವಲ ನಾಲ್ಕು ಕಿಲೋಮೀಟರ್ ಸಾಗಿದ ನಮ್ಮ ಕಾರು ಕೆಲವೇ ನಿಮಿಷಗಳಲ್ಲಿ ಗೂಳೂರು … Read more

ಹಿಮಾಲಯದಲ್ಲೊಂದು ಸೈಕಲ್ ಪಯಣ: ಡಾ. ಸುಪ್ರಿಯಾ ಸಿಂಗ್

                        ಹಿಮಾಚಲ ಪ್ರದೇಶದ ಮನಾಲಿಯಿಂದ ಜಮ್ಮು ಕಾಶ್ಮೀರದ ಲೇಹ್, ಲಡಾಖ್‍ಗೆ  ಸೈಕಲ್ ಪಯಣ ಮಾಡುವುದು, ವಿಶ್ವದ ಅತ್ಯಂತ ಕಠಿಣ ಮತ್ತು ಸಾಹಸದ ಪಯಣಗಳಲ್ಲಿ ಒಂದು ಎಂದು ಪರಿಗಣಿಸಲಾಗುತ್ತದೆ.   ಹಿಮಾಲಯದ ಸೌಂದರ್ಯ ಸವಿಯುತ್ತ ಸಾಗುವ ಪಯಣ ಸಂತೋಷ ನೀಡುವುದು ನಿಜ, ಆದರೆ ಸೈಕಲ್ ಸವಾರನ ಕೌಶಲ್ಯ, ತಾಳ್ಮೆ ಮತ್ತು ಧೈರ್ಯವನ್ನು ಪರೀಕ್ಷಿಸುವಲ್ಲಿ ರಸ್ತೆಗಳು ಮೊದಲು. ಕೆಲವಡೆ ಚೆನ್ನಾಗಿರುವ ರಸ್ತೆಗಳಿದ್ದರೆ, ಅನೇಕ ಕಡೆ ಕಚ್ಚಾ … Read more

ಎಪ್ಪತ್ತೇಳು ಮಲೆಯ ಸುಂದರ ಪ್ರವಾಸಿ ತಾಣ ಮಲೆಯ ಮಹದೇಶ್ವರ ಬೆಟ್ಟ: ವಸಂತ ಬಿ ಈಶ್ವರಗೆರೆ

ಅಮೂಲ್ಯ ಸಸ್ಯರಾಶಿ, ಜೀವರಾಶಿಗಳಿಂದ ತುಂಬಿದಂತ ಪ್ರದೇಶ, ಬಿಸಿಲಿನ ಕಿರಣಗಳು ಭುವಿಗೆ ಸೋಂಕದಂತಿರುವ ದಟ್ಟ ಕಾನನ, ಒಂದಾನೊಂದು ಕಾಲದಲ್ಲಿ ಕುಖ್ಯಾತ ನರಹಂತಕ ಕಾಡುಗಳ್ಳ ವೀರಪ್ಪನ್ ಆಶ್ರಯ ತಾಣವೂ ಆಗಿದ್ದ ಪ್ರವಾಸಿ ತಾಣವೇ, ಮಲೆಯ ಮಹದೇಶ್ವರ ಬೆಟ್ಟ. ಒಂದು ಕಾಲದಲ್ಲಿ ವೀರಪ್ಪನ್ ಅಡಗುತಾಣವಾಗಿದ್ದಾಗ, ಮಲೆಯಮಹದೇಶ್ವರ ಬೆಟ್ಟಕ್ಕೆ ಬರೋದಕ್ಕೆ ಜನರು ಭಯ ಪಡುತ್ತಿದ್ದರು. ಸಂಜೆ 6 ಗಂಟೆಯ ನಂತ್ರ ಕೊಳ್ಳೆಗಾಲದಿಂದ, ಮಲೆ ಮಹದೇಶ್ವರ ಬೆಟ್ಟಕ್ಕೆ ಹೋಗವ ಮಾರ್ಗವನ್ನ ಮುಚ್ಚಲಾಗುತ್ತಿತ್ತು. ಆದರೇ ಆ ಕಾಲ ಹಿಂದೆ ಸರಿಸು, ನರಹಂತಕ ವೀರಪ್ಪನ್ ಇತಿಹಾಸದ ಪುಟಗಳಲ್ಲಿ … Read more

ಒಂದು ದಿನ ಆರು ಸುತ್ತಾಣ: ವಸಂತ ಬಿ ಈಶ್ವರಗೆರೆ

ಸೂರ್ಯ ಪುತ್ರರಾಗಿ ಬಿಟ್ಟಿರುವ ನಮಗೆಲ್ಲ, ಸಿಗೋದು ಒಂದೇ ಒಂದು ದಿನ ವಾರಾಂತ್ಯ ರಜೆ. ಆ ರಜೆಯನ್ನೇ ಹೊಂದಿಸಿಕೊಂಡ ಪ್ರವಾಸಕ್ಕೆ ಸಿದ್ದವಾದರೇ, ಖಂಡಿತ ಒಂದೇ ದಿನದಲ್ಲಿ ಆರು ಸುತ್ತಾಣಗಳನ್ನ ಬೆಂಗಳೂರಿಗೆ 75 ಕಿಲೋ ಮೀಟರ್ ದೂರದ ಚಿನ್ನದ ನಾಡು ಕೋಲಾರ ಜಿಲ್ಲೆಯ ಸುತ್ತಮುತ್ತಲಿನಲ್ಲಿ ನೋಡಬಹುದು. ಧಾರ್ಮಿಕ ಸ್ಥಳಗಳಾದ ಈ ಪ್ರವಾಸಿತಾಣಗಳಿಗೆ ಭೇಟಿ ಕೊಟ್ಟು, ಭಕ್ತಿಯ ಭಾವನೆಯನ್ನ ಮನದಲ್ಲಿ ತುಂಬಿಕೊಳ್ಳುತ್ತಾ, ಸಂಭ್ರಮದಲ್ಲಿ ಒಂದೇ ಒಂದು ರಜೆಯ ಮಜೆಯನ್ನ ಅನುಭವಿಸಬಹುದು.  ಜಾಲೀ ರೈಡ್ ಮಾಡೋ ಪ್ರವಾಸ ಹೊರಟರೂ, ಸಂಸಾರ ಸಮೇತರಾಗಿ ಹೊರಟರೂ, … Read more

ಕಲೆಯ ಬೀದಿಯಲ್ಲೊಂದು ಹುಡುಗಾಟದ ಹುಡುಕಾಟ: ಭಾಗ್ಯಾ ಭಟ್.

  ಹಸಿರ ನಾಡಲ್ಲಿ, ಕಾಫೀ ಘಮದಲ್ಲಿ, ಸುರಿವ ತುಂತುರು ಮಳೆಯಲ್ಲಿ, ಬೀಳೋ ಮಂಜು ಹನಿಗಳ ಜೊತೆ ಆಟವಾಡೋ ತವಕದಲ್ಲಿ. ಎಲ್ಲವೂ ಇದೆ ಈ ಊರಲ್ಲಿ. ಖುಷಿಯಾದಾಗ ಕುಣಿಯೋಕೆ, ಬೇಜಾರಾದಾಗ ಸುಮ್ಮನೇ ಕೂರೋಕೆ, ಪ್ರಶಾಂತವಾಗಿ ಮನದೊಟ್ಟಿಗೆ ಮಾತಾಡೋಕೆ, ವಾರಾಂತ್ಯಕ್ಕೊಂದು ಚಂದದ ಅಪ್ಪುಗೆಯ ವಿದಾಯ ಹೇಳೋಕೆ, ಸ್ನೇಹಿತರ ಜೊತೆ ಮಸ್ತಿ ಮಾಡೋಕೆ. ..ಎಲ್ಲಾ ಭಾವಗಳಿಗೂ ಸಾಥ್ ನೀಡೋಕೆ ಬೇರೆ ಬೇರೆಯದೇ ಸ್ಥಳಗಳಿವೆ ಇಲ್ಲಿ ಎಲ್ಲಾ ಭಾವಗಳನ್ನೂ ಅದರದರದೇ ರೀತಿ ಜೋಪಾನ ಮಾಡೋಕೆ. ..ಪ್ರಕೃತಿಯ ಜೊತೆಗಿನ ಒಡನಾಡಿಗಳಿಗೆ ತೀರಾ ಖುಷಿ ಆಗೋ … Read more

ಕವಿಮನೆ: ಶಂಕರಾನಂದ ಹೆಚ್. ಕೆ., ಶೋಭಾ ಶಂಕರಾನಂದ

ಮರೆಯಲು ಸಾಧ್ಯವೇ? ಆ ಕ್ಷಣ…… .. ’ಓ ನನ್ನ ಚೇತನ ಆಗು ನೀ ಅನಿಕೇತನ’  ’ನೂರು ದೇವರನೆಲ್ಲ ನೂಕಾಚೆ ದೂರ ಭಾರತಾಂಬೆಯೆ ದೇವಿ ನಮಗಿಂದು ಪೂಜಿಸುವ ಬಾರ’  ’ಸತ್ತಂತೆ ಬದುಕುವುದಕ್ಕಿಂತ ಸತ್ತು ಬದುಕುವುದು ಲೇಸು’ ಹೀಗೆ ಹತ್ತು ಹಲವು ಸಾಲುಗಳಿಗೆ ಜೀವ ತುಂಬಿರುವ ಕಲ್ಲುಗಳು ಹಾಗೂ ಫಲಕಗಳನ್ನು ನೋಡುವ ಭಾಗ್ಯ ಒಂದು ದಿನ ನನ್ನದಾಗುವುದು ಎಂದು ನಾನು ಊಹಿಸಿರಲಿಲ್ಲ. ನಮ್ಮ ನಾಡಿನ ಮಹಾನ್ ಕವಿ ಡಾ!! ಕುವೆಂಪು ರವರ ಜನ್ಮ ಸ್ಥಳ, ಕುಪ್ಪಳ್ಳಿಗೆ ಹೋಗಬೆಕೆನ್ನುವ ತುಡಿತ ನನ್ನನ್ನು … Read more

ಹೀಗೊಂದು ಪರ್ಯಟನೆ: ದಿವ್ಯ ಆಂಜನಪ್ಪ

ಈ ಗಿಜಿಬಿಜಿ ಜಂಜಾಟದ ಬದುಕಿನಲ್ಲಿ ವಯಸ್ಸಿಗೂ ಮೀರಿದ ವೈರಾಗ್ಯಗಳು ಮನೆ ಮಾಡಿ ನಾನೇ ನಾನಲ್ಲವೇನೋ ಎಂದೆನಿಸುವಷ್ಟು ಈ ಐದಾರು ವರ್ಷಗಳನ್ನು ಹೀಗೆಯೇ ಕಳೆದುಬಿಟ್ಟಿದ್ದೆ. ಉತ್ತಮವಾದ ಅಂಶವೆಂದರೆ ಅನಿಸಿದ್ದೆಲ್ಲವನ್ನೂ ಬರೆದುಬಿಡುವುದು ಒಂದು ಖಯಾಲಿಯಾಗಿ ಜೀವನಕ್ಕೊಂದು ಹೊಸ ಹುರುಪನ್ನು ಕಂಡುಕೊಂಡಿದ್ದೆ. ಈ ಅಕ್ಷರ ದಾರಿ ಕಾಣಿಸಿದ ಆ ಎಲ್ಲಾ ಸ್ನೇಹಿತರನ್ನೂ ನಾನು ಎಂದಿಗೂ ನೆನೆಯುವೆನು. ಹೀಗಿರುವಾಗ ನನ್ನ ಬಾಲ್ಯ ಸ್ನೇಹಿತೆಯೊಬ್ಬಳು ಕಳೆದ ತಿಂಗಳು ಜುಲೈನ ಒಂದು ದಿನ ಸಂಜೆ ಕರೆ ಮಾಡಿ, ''ಒಂದು ದಿನದ ಟ್ರಿಪ್ ಕಣೆ, ನಾವು ನಮ್ಮ … Read more

ಪಕ್ಷಿ ವೀಕ್ಷಣೆಗೊಂದು ದಿನ: ಡಾ. ಅಶೋಕ್ ಕೆ. ಆರ್.

ಇತ್ತೀಚಿನ ದಿನಗಳಲ್ಲಿ ವಾರಾಂತ್ಯದ ಪ್ರವಾಸವೆಂದರೆ ದೂರವೂ ಅಲ್ಲದ ತುಂಬಾ ಹತ್ತಿರವೂ ಅಲ್ಲದ ಉತ್ತಮ ಹೋಟೆಲ್ಲಿಗೋ, ಸಕಲ ಐಷಾರಾಮಿ ಸೌಲಭ್ಯಗಳಿರುವ ರೆಸಾರ್ಟಿಗೋ ಹೋಗಿ ವಾರಪೂರ್ತಿ ಮನೆ ಆಫೀಸಿನಲ್ಲಿ ಮಾಡಿದ್ದನ್ನು ವಾರಾಂತ್ಯದಲ್ಲಿ ಹೊಸ ಜಾಗದಲ್ಲಿ ಮಾಡುವುದಷ್ಟೇ ಆಗಿಹೋಗಿದೆ. ಪ್ರಕೃತಿ ಸೌಂದರ್ಯ ಸವಿಯಲು ಹೋಗುವವರ ಸಂಖೈಯೂ ಹೆಚ್ಚುತ್ತಿದೆಯಾದರೂ ಬಹಳಷ್ಟು ಮಂದಿ ನಿರ್ಮಲ ಸ್ಥಳಗಳನ್ನು ಮಲಿನಗೊಳಿಸಿ ಹಿಂದಿರುಗುತ್ತಾರೆ. ಇಂತಹವರ ಕಾರಣದಿಂದಾಗಿ ಹೆಚ್ಚು ಪ್ರಸಿದ್ಧವಲ್ಲದ ತಾಣಗಳ ಕುರಿತು ಮಾಹಿತಿ ಒದಗಿಸುವುದಕ್ಕೆ ಕೊಂಚ ಹಿಂಜರಿಕೆ ಇರುವುದು ಸುಳ್ಳಲ್ಲ. ಪಕ್ಷಿ ವೀಕ್ಷಕರಿಗೆ, ಛಾಯಾಗೃಹಕರಿಗೆ ಕೊಕ್ಕರೆ ಬೆಳ್ಳೂರು ಚಿರಪರಿಚಿತ. … Read more

ಮಂಜಿನ ಮುಸುಕಲ್ಲೂ ಮಾಸದ ಸ್ನೇಹ ಪಯಣ: ಭಾಗ್ಯ ಭಟ್

ಎಲ್ಲಿ ನೋಡಿದರಲ್ಲಿ ಹಸಿರ ಸೊಬಗು… ದಾರಿಯುದ್ದಕೂ ಮನವ ಮುದ್ದಿಸೋ ತಂಪು ಗಾಳಿಯ ಇಂಪು… ತಿಳಿ ನೀಲ ಆಗಸದಿ ಮೆರವಣಿಗೆ ಹೊರಡೋ ಮೋಡಗಳು… ಚಂದದ ಊರಿದು, ಪಕ್ಕಾ ಮಲೆನಾಡ ತಂಪ ಉಣಬಡಿಸೋ ಕಾಫೀ ನಾಡು. ಅದೆಷ್ಟೋ ಚಂದದ ಬೆಟ್ಟ ಗುಡ್ಡಗಳಿಂದ ಕಣ್ಮನ ತಣಿಸುತಿರೋ ಚಿಕ್ಕಮಗಳೂರ ಮುಳ್ಳಯ್ಯನಗಿರಿ, ಬಾಬಾಬುಡನ್ ಗಿರಿ, ಕಲ್ಲತಗಿರಿಗಳ ಸುತ್ತೋ, ನಿಸರ್ಗದ ಅಚ್ಚರಿಗಳ ಸಮೀಕರಿಸೋ ಸಣ್ಣದೊಂದು ಭಾಗ್ಯ ಸಿಕ್ಕಿದ್ದು ಇಲ್ಲಿಗೆ ಬಂದು ವರ್ಷವೊಂದಾದ ಮೇಲೆ.. ಇಲ್ಲಿ ದಕ್ಕಿದ್ದ, ಪಡೆದುಕೊಂಡ ಚಂದದ ಅನುಭವಗಳ ಪದಗಳಲಿ ಹಿಡಿಯೋದು ಕಷ್ಟವೇನೋ…. ಈ … Read more

ಕಾನನದ ನೀರವತೆಯ ನಡುವೆ ರೈಲು ಹಳಿಗಳ ಮೇಲೊಂದು ಪಯಣ (ಕೊನೆಯ ಭಾಗ): ನಿಶಾಂತ್ ಜಿ.ಕೆ.

ಇಲ್ಲಿಯವರೆಗೆ ಆಗ್ಲೇ ನಮ್ಮ ಪಯಣ ಅಥವಾ ನಡಿಗೆ ಸ್ಟಾರ್ಟ ಆಗಿ ೪ ಘಂಟೆಗಳ ಮೇಲಾಗಿತ್ತು ಅನ್ಸುತ್ತೆ, ನಡಿತಾ ಹಾಗೇ ಮುಂದೆ ಹೋದೊರಿಗೆ ಕಣ್ಣಿಗ್ ಬಿತ್ತು ನೋಡಿ ಗೋವಾ ರಾಜ್ಯದ ಭಾಗಕ್ಕೆ ಒಳಪಟ್ಟಿದ್ದ ಒಂದು ಸಣ್ಣ ರೈಲು ನಿಲ್ದಾಣ. ಅಲ್ಲೆ ಹಳಿಗಳ ದುರಸ್ಥಿ ಕಾರ್ಯ ನಿರ್ವಹಿಸುತ್ತಿದ್ದ ಕಾರ್ಮಿಕರನ್ನು ಇನ್ನೆಷ್ಟು ದೂರ ಎಂದು ವಿಚಾರಿಸಿದಾಗ   ಅವರು ಹೇಳಿದ್ದು ಕೇಳಿ ನಮ್ ಹುಡ್ಗುರೆಲ್ಲಾ ತಕ್ಷಣ ಹೌಹಾರಿ ಉಸ್ಸಪ್ಪಾ ಎಂದ್ರು..ನಾವಿನ್ನು ಆ ರೈಲ್ವೇ ಸ್ಟೇಷನ್ ಇಂದ ಸುಮಾರು ೮ ಕಿ.ಮೀ ಕ್ರಮಿಸಬೇಕಿತ್ತು. … Read more

ಕಾನನದ ನೀರವತೆಯ ನಡುವೆ ರೈಲು ಹಳಿಗಳ ಮೇಲೊಂದು ಪಯಣ (ಭಾಗ 1): ನಿಶಾಂತ್ ಜಿ.ಕೆ.

ನಡೆದೂ ನಡೆದೂ ಸುಸ್ತಾಗಿತ್ತು ಆಗಲೇ ಸುದೀರ್ಘ ಐದು ಘಂಟೆಗಳ ಕಾಲದ ದುರ್ಗಮ ಹಾದಿ ಸವೆದು ಹೋಗಿತ್ತು, ಅಬ್ಬಾ ಇನ್ನು ನಡೆಯಲಾಗುವುದಿಲ್ಲ ಎಂದು ಏದುಸಿರು ಬಿಡುತ್ತಾ ಕೂತಾಗ ಮೈ ತಾಗಿದ ತಣ್ಣನೆಯ ಮುತ್ತಿನಂತ ಮಂಜಿನ ಹನಿ ಸ್ಪೂರ್ತಿ ನೀಡಿ ಮತ್ತೆ ಮುಂದಡಿಯಿಡಲು ಸಹಕರಿಸಿತ್ತು. ಹಾಗೆಯೇ ಇನ್ನು ಸ್ವಲ್ಪ ದೂರ ಕ್ರಮಿಸಿದ ನಂತರ ಸಿಕ್ಕ ಸೌಂದರ್ಯದ ಗಣಿ ಆರು ಘಂಟೆಗಳ ಕಾಲದ ಹಿಂದಿನ ದುರ್ಗಮ ಹಾದಿಯಲ್ಲಿ ಸಾಗಿದ ಆಯಾಸವನ್ನೆಲ್ಲಾ ಮರೆಸಿ ಎಲ್ಲರನ್ನು ಮಂತ್ರಮುಗ್ದರನ್ನಾಗಿಸಿತ್ತು.  ಅಯ್ಯೋ ಇದೇನಿದು ಕಥೆ ಸ್ಟಾರ್ಟ್ ಮಾಡೋಕು … Read more