ಗಾಂಧಿಯ ತತ್ವ ಚಿಂತನೆ ರಾಜಕೀಯ ಸಿದ್ಧಾಂತದ ಪ್ರಸ್ತುತತೆಯನ್ನು ಪ್ರಶ್ನಿಸುವ ಕಾದಂಬರಿ “ಸುಳಿ”: ಎಂ.ಜವರಾಜ್
“ಈ ಕಾಲದ ಸೂಕ್ಷ್ಮ ಅರ್ಥ ಆಗೋಲ್ಲ ಗುರು. ಇವರೆಲ್ಲ ಇನ್ನೂ ಹಳೆಯ ಕಾಲದ ಗಾಂಧಿವಾದಿಗಳು. ಪೂರ್ತಿ ಗಾಂಧಿವಾದ ಮೇಲೆ ಈಗ ರಾಜಕೀಯ ಮಾಡಲು ಆಗೋಲ್ಲ. ಇವರೆಲ್ಲ ಯಾವಾಗ ಬದಲಾಗ್ತಾರೋ?”(ಅಧ್ಯಾಯ -1, ಪು.35) ಈ ಕಾದಂಬರಿಯಲ್ಲಿ ಮುಖ್ಯಮಂತ್ರಿ ನಂಬುಗೆಯ “ಅನಿಕೇತನ” ಎನ್ನುವ ಪಾತ್ರದ ಧ್ವನಿ ಇದು. ಈ ಧ್ವನಿಯ ಒಳಾರ್ಥ, ಕಾದಂಬರಿ ಮತ್ತು ಕಾದಂಬರಿಕಾರರ ಒಂದಿಡೀ ಧ್ವನಿ ಇದ್ದಂತಿದೆ! ಪ್ರಚಲಿತ ರಾಜಕೀಯ ವಿದ್ಯಮಾನ ಆಧಾರಿತ “ಸುಳಿ” – ಹಿಂದಿನ ಮೂರು ದಶಕಗಳ ಘಟನಾವಳಿ ಮತ್ತು ಇವತ್ತಿನ ರಾಜಕೀಯ ನೆಲೆಯಿಂದ … Read more