ನನ್ನೊಳಗಿನ ಗುಜರಾತ (ಭಾಗ 10): ಚಿನ್ಮಯ್ ಮಠಪತಿ

  ಅವು ತುಂಬು ಸಿಹಿಯಾದ ಅನುಭವಗಳು. ಅವುಗಳ ಕಡೆಗೆಯೇ ಸಾಗಿ ಮತ್ತೆ ಮತ್ತೆ ಅಲ್ಲಿಗೆ ನುಸುಳುತ್ತಿತ್ತು ಮನಸ್ಸು, ತುಂಬು ಚಿತ್ತವನ್ನು ತನ್ನ ಬೆನ್ನೇರಿಸಿಕೊಂಡು. ಎಷ್ಟೇ ಪ್ರಯತ್ನ ಪಟ್ಟರು ಆ ವಲಯದಿಂದ ಹೊರ ಬರಲಾಗಲೇ ಇಲ್ಲ. ಯಾಕೆ ನಾವು  ಒಮ್ಮೊಮ್ಮೆ ಇನ್ನೊಬ್ಬರು ಧಾರೆ ಎರೆವ ಪ್ರೀತಿ ವಿಶ್ವಾಸಗಳ ಅಭಿಮಾನಿಗಳಾಗಿ ಬಿಡುತ್ತೇವೆ? ಅವರನ್ನು ಅಷ್ಟಾಗಿ ಹಚ್ಚಿಕೊಂಡು ಬಿಡುತ್ತೇವೆ ? ಅವರ ಜೊತೆಗಾರಿಕೆ, ಸಾಂಗತ್ಯಕ್ಕೆ ಹಾತೋರೆಯುತ್ತೇವೆ? ಅವರಿಲ್ಲದ ಕ್ಷಣಗಳಲ್ಲಿ ಅವರಿಗಾಗಿ ಕನವರಿಸುತ್ತೇವೆ? ಎಲ್ಲವುಗಳಿಗೆ ಉತ್ತರವಂತೂ ಇದ್ದೆ ಇದೇ. ಅದೇ ಪ್ರೀತಿ ವಿಶ್ವಾಸವಲ್ಲವೇ? … Read more

ನನ್ನೊಳಗಿನ ಗುಜರಾತ (ಭಾಗ 9): ಚಿನ್ಮಯ್ ಮಠಪತಿ

  ಬದಲಾಗುತ್ತಿರುವ ಜೀವನ ಕ್ರಮವನ್ನೊಮ್ಮೆ ಸಿಂಹಾವಲೋಕನ ಮಾಡಬೇಕು. ಇಂತಹ ಒಂದು ಅವಲೋಕನ ಮಾಡಿದರೆ, ಎಷ್ಟೋ ವಿಸ್ಮಯಗಳು ನಮ್ಮನ್ನು ಯಾವದೋ ಒಂದು ಮಾಯಾಲೋಕಕ್ಕೆ ಕರೆದೊಯ್ದು ಒಂದು ಸುತ್ತು ಸುತ್ತಾಡಿಸಿಕೊಂಡು ಬರುತ್ತವೆ.  ಈ ನಡುವೆ ನಮ್ಮಲ್ಲಿ ಹಲವಾರು ಪ್ರಶ್ನೆಗಳು ಹುಟ್ಟುತ್ತವೆ ಮತ್ತು ಉತ್ತರವನ್ನು ಕೆಲವೊಂದಿಷ್ಟು ಪ್ರಶ್ನೆಗಳು ಕಂಡುಕೊಳ್ಳುತ್ತವೆ. ಕೆಲವು ಪ್ರಶ್ನೆಗಳು ಪ್ರಶ್ನೆಗಳಾಗಿಯೇ ಉಳಿಯುತ್ತವೆ. ಮೊನ್ನೆ, ನೆನ್ನೆ ಮತ್ತು ಇವತ್ತೆಂಬ ಈ ಪುಟ್ಟ ಕಾಲಾಂತರದಲ್ಲಿ ಕಾಣ ಸಿಗುವ ಅಮೋಘ ಬದಲಾವಣೆಗಳ ಜೊತೆ,  ಚೂರು ಹಿಂದೆ ಸರಿದು ಹಿಂದಿನ ವಿದ್ಯಮಾನಗಳನ್ನು ಅವಲೋಕಿಸಿದರೆ ಅದರ … Read more

ನನ್ನೊಳಗಿನ ಗುಜರಾತ್ (ಭಾಗ 8): ಚಿನ್ಮಯ್ ಮಠಪತಿ

ಪ್ರಾರ್ಥಿಸುವ ತುಟಿಗಳಿಗಿಂತ ಸಹಾಯದ ಹಸ್ತಗಳು ದೊಡ್ಡವು ಅಂತೆ. ನಿಜ ! ಆವತ್ತು ಹಿಂದೆ ಮುಂದೆ ನೋಡದೆಯೇ ಸಮಯಕ್ಕೆ ಗಮನ ಕೊಡದೇ, ಮೆಹಸಾನಾದಿಂದ ಗಾಂಧಿ ನಗರಕ್ಕೆ ಪ್ರಯಾಣ ಬೆಳೆಸಿದ್ದೆ. ಯಾವದೋ ಕೆಲಸದ ಮೇಲೆ  ಮೆಹಸಾನಾ ನಗರಕ್ಕೆ ಹೋಗಿದ್ದ ನಾನು, ಅಲ್ಲಿಂದ ಬಿಡುವಾಗ ಸಮಯ ಸರಿಯಾಗಿ ಏಳು ಗಂಟೆಯಾಗಿತ್ತು. ಸೀದಾ ಗಾಂಧಿ ನಗರಕ್ಕೆ ಬಸ್ಸು ಇರದ ಕಾರಣ ಹಿಮ್ಮತ್ತ ನಗರದವರೆಗೆ ಹೋಗುವ ಬಸ್ಸು ಹಿಡಿದು ಪ್ರಯಾಣ ಬೆಳೆಸಿದೆ. ದಿನವಿಡೀ ಉರಿ ಬಿಸಿಲಲ್ಲಿ ಸುತ್ತಾಡಿ ತುಂಬ ಸುಸ್ತಾಗಿದ್ದೆ. ಅಲ್ಲಿಂದ ಬಸ್ಸು ಹೊರಟ … Read more

ಹೆಣ್ಣಿಲ್ಲದೆ ಮನೆಯೊಂದು ಮನೆಯಲ್ಲ: ಸಿ ಎಸ್ ಮಠಪತಿ

ಲೇ ಊಂಟಗೇಡಿ “ನೀನು ಹೆಣ್ಣಾಗಿ ಹುಟ್ಟ ಬಾರದಿತ್ತಾ.. ನೀ ಹೆಣ್ಣಾಗಿ ಹುಟ್ಟಿದ್ರ ನಾಳೆ ಮದ್ವಿ ಆದ್ ಮ್ಯಾಗ ಒಂದೆರಡ ಮಕ್ಳನ್ನ ಹಡ್ದು ಅವ್ನ ಬಾಳ್ ಚೆಲೋತಂಗೆ ಸಾಕ್ತಿದ್ದಿ. ಆ ದೇವ್ರ್ ನಿನ್ನ ಯಾಕರ ಗಂಡಾಗಿ ಹುಟ್ಸಿದಾ ಅನ್ಸಾಕತ್ತೈತಿ ನಂಗ” ಖರೇನ್ ಹೇಳ್ ತೀನಿ, ನೀ ಏನರಾ ಹೆಣ್ಣಾಗಿ ಹುಟ್ಟಿದ್ದಿ ಅಂದ್ರ, ನನ್ನ ಮಮ್ಮಗಗ ತಗೋಂಡು ಮನಿ ಸ್ವಸಿ ಮಾಡ್ಕೊಂಡ್ ಬಿಡ್ತಿದ್ನಿ.! ದೇವ್ರು ಮೋಸ ಮಾಡ್ದಾ.  ತಪ್ಪಾಗಿ ನಿನ್ನ ಗಂಡ್ಸಾಗಿ ಹುಟ್ಸಿದಾ..!! ನಮ್ಮ “ಬಸವ್ವ” ಆಯಿ ಹಿಂಗಂತ ನಂಗ … Read more

ನನ್ನೊಳಗಿನ ಗುಜರಾತ್ (ಭಾಗ 7): ಸಿ.ಎಸ್. ಮಠಪತಿ

ಗುಜರಾತಿನಲ್ಲಿರುವ ತನಕ ನನ್ನಲ್ಲಿ ಒಂದೇ ಒಂದು ಅಪಸ್ವರವಿದ್ದದ್ದು , ಗುಜರಾತಿನ ತಿಂಡಿ ತಿನಿಸುಗಳ ಬಗ್ಗೆ. ನಮ್ಮೂರು ನಮಗೆ ಅಂದ, ನಮ್ಮೂರ ತಿಂಡಿ ತಿನಿಸುಗಳು ನಮಗೆ ಚೆಂದ ಎಂಬ ಮಾತು ಒಂದು ಕಾರಣವಾಗಿರಬೇಕು. ಮಹಾನಗರಗಳಲ್ಲಿ ಸಿಗುವಂತಹ ಆಹಾರಗಳು ಒಂದು ರೀತಿಯಲ್ಲಿ ನಮ್ಮ ದಕ್ಷಿಣ ಭಾರತೀಯರಿಗೆ ಸ್ವಲ್ಪ ಹಿಡಿಸಬಹುದು . ಆದರೆ, ಗ್ರಾಮೀಣ ಪ್ರದೇಶದ ಆಹಾರಗಳು ಸುತಾರಾಂ ಹಿಡಿಸುವುದೇ ಇಲ್ಲ. ಗ್ರಾಮೀಣ ಪ್ರದೇಶದ ಜನರಿಗೆ ಬೆಳಗಿನ ಒಳ್ಳೆಯ ತಿಂಡಿಯ ಅಭಿರುಚಿಯೂ ಇಲ್ಲ. ಅದರಲ್ಲೂ ಹೊಲ ಗದ್ದೆಗಳಲ್ಲಿ ಕೆಲಸ ಮಾಡುವ ಜನರಿಗೆ … Read more

ನನ್ನೊಳಗಿನ ಗುಜರಾತ್..!!! ಭಾಗ – 6: ಸಿ.ಎಸ್. ಮಠಪತಿ

  ನಲ್ಮೆಯ ಒಂದು ಗೆಳೆತನ, ಒಲವಿನ ಸೆಳೆತನ, ಕಣ್ಣಂಚಿನ ಅಭಯ, ಆಪತ್ತಿನ ಸಹಾಯ ಹಸ್ತ, ವಿದಾಯದಲ್ಲಿನ ಭಾವೊದ್ವೇಗದಿ ಹಚ್ಚಿಕೊಂಡ ಎರಡು ಮನಗಳ ನಡುವಿನ ಬಿಗಿಯಾದ ಆಲಿಂಗನ,  ಎಲ್ಲೋ ಒಂಟಿತನದ ದಿನಗಳಲ್ಲಿ ಜಂಟಿಯಾಗಿ, ಏಕಾಂಗಿ ಬದುಕಿನ ನೊಗಕ್ಕೆ ಹೆಗಲಕೊಟ್ಟು ಸಿಹಿ-ಕಹಿ, ಸೋಲು-ಗೆಲುವು, ಸಕಲ ಏರಿಳಿತಗಳಲ್ಲಿ ಜೊತೆಸಾಗುವ ಜೀವ. ಅಬ್ಬಾ…!!  ಹೆಕ್ಕಿ- ಹೆಕ್ಕಿ ಹೊರ ಬರಸೆಳೆದು ನೆನೆಯಲೋ ಅಥವಾ ಬರೆಯಲೋ ಕುಳಿತರೆ ಒಂದೇ ,ಎರಡೇ? ಏಕಾಂಗಿ  ಬೆತ್ತಲೆ ಹುಟ್ಟು ಸಾವಿನ ನಡುವೆ, ವ್ಯಾಖ್ಯಾನಿಸಲಾಗದಷ್ಟು ಭಾವ ತುಮುಲಗಳು. ಭಾವ ಜೀವಿಗಳಾಗಿ ಬದುಕಿದರೆ, … Read more

ನನ್ನೊಳಗಿನ ಗುಜರಾತ…!!! ಭಾಗ-5 : ಚಿನ್ಮಯ್ ಮಠಪತಿ

ನಾವು ಹುಟ್ಟಿಬಿಟ್ಟಿದ್ದೇವೆ ಮನುಷ್ಯರಾಗಿ. ವೇದ ಪುರಾಣಗಳಲ್ಲಿ ಹಾಡಿ ಹೊಗಳಿದ್ದಾರಲ್ಲವೆ? ಮನುಷ್ಯ ಜನ್ಮ ದೊಡ್ಡದು ಎಂದು?  ಯಾಕೆ, ಪ್ರಪಂಚದೆಲ್ಲ ಪ್ರಾಣಿಗಳಂತೆಯೇ ಒಂದೇ ಪ್ರಾಕೃತಿಕ ರೀತಿ ನೀತಿಗಳಂತೆ ಜನಿತ, ಈ ನಮ್ಮ ಮನುಜ ಕುಲಕ್ಕೆಷ್ಟೇ ಬೇರೆ ಯಾವ ಅನ್ಯ ಜೀವಿಗೂ ಸಿಗದಂತಹ ಮಾನ್ಯತೆ , ಗೌರವ ! ಸೃಷ್ಟಿ ಕರ್ತನಿಂದ ವಿಶೇಷ ಸ್ಪರ್ಶದ ಜೊತೆಗೆ, ಸುಂದರ ಆಕಾರ ಅವತಾರ!.  ಪಾಪ, ದೇವರ ದಡ್ಡತನದಿಂದಲೇ ನಾವು “ಹೋಮೊಶೆಪಿಯ್” ನಿಂದ ಹಲವಾರು ರೂಪ ರೇಶಗಳನ್ನು ದಾಟಿ, ಇವತ್ತು ಯಂತ್ರಮಾನವ (ರೋಬೊಟ್) ಹಂತಕ್ಕೆ ತಲುಪಿದ್ದೇವೆ … Read more

ನನ್ನೊಳಗಿನ ಗುಜರಾತ…!!! ಭಾಗ-4

ಯಾಕೋ ಮನಸ್ಸು ಒಮ್ಮೊಮ್ಮೆ ಅಗಣಿತ ಮುಖವಾಡಗಳನ್ನು ಹಾಕುತ್ತದೆ. ಹಾಕಿ, ಜಗದ ಜನರ ಮುಂದೆ ಏನೆಲ್ಲ ತಾನೇ ಆಗಿ ಗಿರ್ರೆಂದು ತಿರುಗುವ ಬುಗುರಿಯ ಹಾಗೆ ತಿರುಗುತ್ತದೆ. ತುತ್ತೂರಿಯಾಗಿ ಏರು ದನಿಯಲ್ಲಿ ಕೂಗಿ, ಮಾರ್ದನಿಸಿ ಸದ್ದು ಗದ್ದಲೆಬ್ಬಿಸಿ ಒಳಮಾನಸದೊಳು ಭೀಮ ಅಲೆಗಳನ್ನು ಎಬ್ಬಿಸುತ್ತದೆ. ನೃತ್ಯ ಕಲಾ ಪ್ರವೀಣೆ ಚೆಂದುಳ್ಳಿ ಚೆಲುವೆ ನರ್ತಕಿಯಾಗಿ ಕುಣಿಯುತ್ತದೆ. ಬುಗುರಿಯಾಗಿ ಸುತ್ತಿ, ತುತ್ತೂರಿಯಾಗಿ ಕೂಗಿ, ನರ್ತಕಿಯಾಗಿ ಕುಣಿದು, ತಾನಷ್ಟೆ ಒಳ ಸುಖಿಸಿ, ಸ್ಖಲಿಸಿ ಎಲ್ಲವುಗಳನ್ನು ಅನುಭವಿಸುವ ಹಕ್ಕನ್ನು ತಾನೇ ಪಡೆದಿದ್ದರೆ, ಅದರ ಹಿಂದಿಂದೆಯೇ ಬಿಡಿಸಿಕೊಳ್ಳಲಾಗದ ಸೂತ್ರದಂತೆ … Read more

ನನ್ನೊಳಗಿನ ಗುಜರಾತ…! ಭಾಗ 3

ಯಾರಿಗುಂಟು ಯಾರಿಗಿಲ್ಲ…!! ಇದನ್ನು ಅದೃಷ್ಟ ಅನ್ನುತ್ತಿರೊ ಅಥವಾ ದುರಾದೃಷ್ಟ ಅನ್ನುತ್ತಿರೊ ನಾನರಿಯೆ. ಆದರೆ, ನಾನು ಮಾತ್ರ ಬಾಲ್ಯದಲ್ಲಿಯೇ ಈ ಬದುಕಿನ ಆದಿ ಅಂತ್ಯಗಳೆಂಬ ಜನನ ಮರಣಗಳನ್ನು ಬಲು ಸನಿಹದಿಂದ ಕಣ್ಣು ತುಂಬ ಕಂಡವನು. ಅವುಗಳ ಅರ್ಥವನ್ನು ತಿಳಿಯುವ ಮೊದಲೇ ಬೆಳ್ಳಿ ಪರದೆಯ ಮೇಲೆ ಮೂಡಿ ಬರುವ ಅದ್ದೂರಿ ವೈಭವಿಕ ಚಲನಚಿತ್ರದ ದೃಶ್ಯದಂತೆ ಎರಡರ ಜೀವಂತ ದೃಶ್ಯವಿದ್ಯಮಾನಗಳನ್ನು ಕಂಡು, ಬುದ್ಧಿ ಬೆಳೆಯುತ್ತಿದ್ದಂತಯೇ ಅವುಗಳ ಆಳ ಮತ್ತು ವಿಸ್ತಾರಗಳನ್ನು ತಿಳಿಯುವ ಪ್ರಯತ್ನಕ್ಕೆ ಇಳಿದವನು. ಪುಟ್ಟು ಊರಲ್ಲಿ ಹುಟ್ಟಿ, ಗ್ರಾಮೀಣ ಬದುಕನ್ನು … Read more

ನನ್ನೊಳಗಿನ ಗುಜರಾತ..!!! ಭಾಗ-2

  ಆಗಷ್ಟ ತಿಂಗಳಲ್ಲಿ ನಮ್ಮ ಕರ್ಣಾಟಕದೆಲ್ಲೆಡೆ ಮುಂಗಾರು ಮಳೆಗಾಲ, ನಾವುಗಳು ಇಲ್ಲಿದ್ದುಕೊಂಡು ಸೂಯ್ಯೆಂದು ಸುರಿವ ಮಳೆಯ ಜೊತೆಗೆ ಚೆಂದದ ತಂಪನೆಯ ಹವಾಮಾನವನ್ನು ಸವಿಯುತ್ತಿರುತ್ತೇವೆ. ಆದರೆ, ಭೌಗೋಳಿಕವಾಗಿ ಇಲ್ಲಿಗೂ ಮತ್ತು ಗುಜರಾತಿನ ಹವಾಮಾನಕ್ಕೂ ತುಂಬಾ ವ್ಯತ್ಯಾಸವಿದೆ. ಆ ಆಗಷ್ಟ ಮಾಸದಲ್ಲಿ ಅಲ್ಲಿದ್ದಂತಹ ತಾಪಮಾನ ಸರಿ ಸುಮಾರು 42’ ಡಿಗ್ರಿ ಸೆಲ್ಸಿಯಸ್. ಉರಿಯುವ ಕೆಂಡದಂತಹ ತಾಪಮಾನಕ್ಕೆ ಬಳಲಿ ಬೆಂಡಾಗಿ ಅವರ ಮನೆ ತಲುಪಿದೆ. ಆ ಮೊದಲೇ ರಂಜನ ಪಟೇಲ್ ರವರನ್ನು ನಾನು ಒಂದೆರಡು ಬಾರಿ ನಮ್ಮ ಕರ್ಣಾಟಕಕ್ಕೆ ಬಂದಾಗ ಭೇಟಿಮಾಡಿದ್ದೆ. … Read more

ನನ್ನೊಳಗಿನ ಗುಜರಾತ..!!!

ಜೀವನಯೆಂದರೇನು? ಎಂಬ ಈ ಜಟಿಲ ಪ್ರಶ್ನೆಗೆ ನನ್ನ ಮನಸ್ಸು ತಡಬಡಿಸುತ್ತ ಇಲ್ಲಿಯವರೆಗೂ ಅದೆಷ್ಟು ಉತ್ತರ ನೀಡಿದೆಯೋ ಏನೋ. ಬಾಲ್ಯದ ದಿನಗಳಲ್ಲಿಯೇ ನನ್ನ ಮನಸ್ಸಿಗೆ ಆ ದೇವರು ಯವ್ವನವನ್ನು ನೀಡಿಯಾಗಿತ್ತೇನೊ. ಆವತ್ತಿನಿಂದ ಇವತ್ತಿನವರೆಗೂ ತನ್ನನ್ನೇ ತಾನು ಪ್ರಶ್ನಿಸುತ್ತ ತನಗೆ ತಾನೆ ಉತ್ತರಿಸುತ್ತಿರುವ ನನ್ನ ಮನಸಿಗೆ, ಇದೊಂದು ನಿರಂತರ ಕೆಲಸವಾಗಿ ಹೋಗಿದೆ. ಅಂಥದುದರಲ್ಲಿ ಒಂದಿಷ್ಟು ಉತ್ತರಗಳು ನೆಮ್ಮದಿ ನೀಡಿವೆಯಾದರು ಇನ್ನು ನಿಖರ ಉತ್ತರಕ್ಕಾಗಿ ಕಾಯುತ್ತಿದೆ. ನನು ಏಳನೆ ತರಗತಿ ಓದುವಾಗ ಈ ಪ್ರಶ್ನೆಗೆ ಎರಡು ಉತ್ತರವನ್ನು ಬರೆದು ನನ್ನ ಪುಸ್ತಕದಲಿ … Read more