ನಜ಼ರುದ್ದೀನ್‌ ಕತೆಗಳು: ಗೋವಿಂದ ರಾವ್ ವಿ. ಅಡಮನೆ

೧. ಕೋಳಿ ಮಾರಾಟಗಾರ ನಜ಼ರುದ್ದೀನ್‌ ಒಂದು ದಿನ ನಜ಼ರುದ್ದೀನ್‌ ಪೇಟೆಬೀದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಕೆಲವು ವ್ಯಾಪಾರಿಗಳು ಪುಟ್ಟಪುಟ್ಟ ಗಿಳಿಗಳನ್ನು ತಲಾ ಒಂದಕ್ಕೆ ೨೦೦ ದಿನಾರ್‌ಗಳಂತೆ ಮಾರಾಟ ಮಾಡುತ್ತಿದ್ದದ್ದನ್ನು ಗಮನಿಸಿದ. ಅವನು ಆಲೋಚಿಸಿದ: ‘ಇಷ್ಟು ಪುಟ್ಟದಾಗಿರುವ ಒಂದು ಗಿಳಿಗೆ ೨೦೦ ದಿನಾರ್‌ ಬೆಲೆ ಇದ್ದರೆ ನನ್ನ ಮನೆಯಲ್ಲಿ ಇರುವ ದೊಡ್ಡ ಕೋಳಿಯ ಬೆಲೆ ಖಂಡಿತವಾಗಿಯೂ ೨೦೦ ದಿನಾರ್‌ಗಳಿಗಿಂತ ಅನೇಕ ಪಟ್ಟು ಹೆಚ್ಚು ಇರಲೇಬೇಕು.’ ಮಾರನೆಯ ದಿನ ನಜ಼ರುದ್ದೀನ್‌ ಪೇಟೆಬೀದಿಗೆ ತನ್ನ ಕೋಳಿಯಡನೆ ಬಂದ, ದೊಡ್ಡ ಮೊತ್ತದ ಹಣಕ್ಕೆ ಅದನ್ನು … Read more

ನಜ಼ರುದ್ದೀನ್‌ ಕತೆಗಳು: ಗೋವಿಂದ ರಾವ್ ವಿ. ಅಡಮನೆ

೧. ನಜ಼ರುದ್ದೀನ್‌ ಹಣ್ಣುಗಳನ್ನು ಮಾರಿದ್ದು ಬೇಸಿಗೆಯಲ್ಲಿ ವಿಪರೀತ ಸೆಕೆ ಇದ್ದ ಒಂದು ದಿನ ನಜ಼ರುದ್ದೀನ್‌ ಹಣ್ಣುಗಳನ್ನು ಮಾರುತ್ತಿದ್ದ.  ಗಿರಾಕಿ: “ಒಂದು ಮಿಣಿಕೆ ಹಣ್ಣಿನ ಬೆಲೆ ಎಷ್ಟು?” ನಜ಼ರುದ್ದೀನ್‌: “ನಾಲ್ಕು ದಿನಾರ್‌ಗಳು.” ಗಿರಾಕಿ: “ಮಿತಿಮೀರಿದ ಬೆಲೆ ಹೇಳುತ್ತಿರುವೆ. ಅಷ್ಟು ಹೆಚ್ಚು ಬೆಲೆ ಹೇಗೆ ಕೇಳುತ್ತಿರುವೆ? ನಿನಗೇನು ನ್ಯಾಯ ನೀತಿ ಎಂಬುದೇ ಇಲ್ಲವೇ?” ನಜ಼ರುದ್ದೀನ್‌: “ಇಲ್ಲ. ನೀವು ಹೇಳುತ್ತಿರುವ ಯಾವ ಸರಕುಗಳೂ ನನ್ನ ಹತ್ತಿರ ದಾಸ್ತಾನು ಇಲ್ಲ!” ***** ೨. ನಜ಼ರುದ್ದೀನ್‌ನ ರೋಗಪೀಡಿತ ಕತ್ತೆ ತನ್ನ ರೋಗಪೀಡಿತ ಕತ್ತೆಯ ಹತ್ತಿರ … Read more

ನಜ಼ರುದ್ದೀನ್‌ ಕತೆಗಳು: ಗೋವಿಂದ ರಾವ್ ವಿ. ಅಡಮನೆ

೧. ನಜ಼ರುದ್ದೀನ್‌ ಒಂದು ಹೊತ್ತಿನ ಊಟ ತಯಾರಿಸಲು ಸಹಾಯ ಮಾಡುವುದು ಮಾಂಸ, ಅಕ್ಕಿ ಹಾಗು ತರಕಾರಿ ಉಪಯೋಗಿಸಿ ಒಂದು ಹೊತ್ತಿನ ಊಟ ತಯಾರಿಸಲು ಅಗತ್ಯವಾದ ಸಾಮಗ್ರಿಗಳನ್ನು ನಜ಼ರುದ್ದೀನ್‌ ಹಾಗು ಅವನ ಗೆಳೆಯ ಕೊಂಡುತಂದರು. ಗೆಳೆಯ: “ನಜ಼ರುದ್ದೀನ್‌ ನೀನು ಅನ್ನ ಮಾಡು ನಾನು ತರಕಾರಿಗಳನ್ನು ಬೇಯಿಸುತ್ತೇನೆ.” ನಜ಼ರುದ್ದೀನ್‌: “ನಿಜ ಹೇಳುವುದಾದರೆ ಅನ್ನ ಮಾಡುವುದು ಹೇಗೆಂಬುದರ ಕುರಿತು ನನಗೇನೂ ಗೊತ್ತಿಲ್ಲ.” ಗೆಳೆಯ: “ಸರಿ ಹಾಗಾದರೆ, ನೀನು ತರಕಾರಿ ಕತ್ತರಿಸು ನಾನು ಅನ್ನ ಮಾಡುತ್ತೇನೆ.” ನಜ಼ರುದ್ದೀನ್‌: “ನಿಜ ಹೇಳುವುದಾದರೆ ನನಗೆ ತರಕಾರಿ … Read more

ನಜ಼ರುದ್ದೀನ್‌ ಕತೆಗಳು: ಗೋವಿಂದ ರಾವ್ ವಿ. ಅಡಮನೆ

೧. ಒಲೆ ನಜ಼ರುದ್ದೀನ್‌ ತನ್ನ ಮನೆಯ ಅಂಗಳದಲ್ಲಿ ಒಲೆಯೊಂದನ್ನು ನಿರ್ಮಿಸಿದ. ತದನಂತರ ನೆರೆಹೊರೆಯವರನ್ನು ಕರೆದು ಅದನ್ನು ತೋರಿಸಿದ. ಅವರ ಪೈಕಿ ಒಬ್ಬ ಹೇಳಿದ, “ಒಲೆಯೇನೋ ಚೆನ್ನಾಗಿದೆ. ಉತ್ತರಾಭಿಮುಖವಾಗಿರುವುದರಿಂದ ಚಳಿಗಾಲದಲ್ಲಿ ಬೀಸುವ ಶೀತಗಾಳಿಗೆ ಬೆಂಕಿ ಬೇಗನೆ ನಂದಿ ಹೋಗುತ್ತದೆ.” ನಜ಼ರುದ್ದೀನ್‌ ಆ ಒಲೆಯನ್ನು ಕಿತ್ತುಹಾಕಿ ದಕ್ಷಿಣಾಭಿಮುಖವಾಗಿ ಇರುವ ಇನ್ನೊಂದು ಒಲೆಯನ್ನು ನಿರ್ಮಿಸಿದ. ತದನಂತರ ನೆರೆಹೊರೆಯವರನ್ನು ಕರೆದು ಅದನ್ನು ತೋರಿಸಿದ. ಅವರ ಪೈಕಿ ಒಬ್ಬ ಹೇಳಿದ, “ಒಲೆಯೇನೋ ಗಟ್ಟಿಮುಟ್ಟಾಗಿ ಬಲು ಚೆನ್ನಾಗಿದೆ. ಆದರೂ ದಕ್ಷಿಣಾಭಿಮುಖವಾಗಿರುವುದರಿಂದ ಒಂದು ನಿರ್ದಿಷ್ಟ ದಿಕ್ಕಿನಿಂದ ಗಾಳಿ … Read more

ನಜ಼ರುದ್ದೀನ್‌ ಕತೆಗಳು: ಗೋವಿಂದ ರಾವ್ ವಿ. ಅಡಮನೆ

೧. ಕುದುರೆ ವ್ಯಾಪಾರಿ ಮಾರುಕಟ್ಟೆಯಲ್ಲಿ ಕುದುರೆ ವ್ಯಾಪಾರಿಯೊಬ್ಬ ತಾನು ಮಾರುತ್ತಿದ್ದ ಕುದುರೆಯ ಗುಣಗಾನ ಮಾಡುತ್ತಿದ್ದದ್ದನ್ನು ಕೇಳುತ್ತಾ ನಿಂತಿದ್ದ ನಜ಼ರುದ್ದೀನ್‌. “ಇಡೀ ಹಳ್ಳಿಯಲ್ಲಿ ಇರುವ ಕುದುರೆಗಳ ಪೈಕಿ ಅತ್ಯಂತ ಉತ್ಕೃಷ್ಟವಾದ್ದು ಇದು. ಇದು ಮಿಂಚಿನ ವೇಗದಲ್ಲಿ ಓಡುತ್ತದೆ. ಎಷ್ಟುಹೊತ್ತು ಓಡಿದರೂ ಸುಸ್ತಾಗುವುದೇ ಇಲ್ಲ. ನಿಜ ಹೇಳಬೇಕೆಂದರೆ, ಈಗ ನೀವು ಈ ಕುದುರೆಯನ್ನೇರಿ ಇಲ್ಲಿಂದ ಹೊರಟರೆ ಬೆಳಗ್ಗೆ ೫ ಗಂಟೆಯ ವೇಳೆಗೆ ಸಮರ್‌ಕಂಡ್‌ನಲ್ಲಿ ಇರುತ್ತೀರಿ.” ತಕ್ಷಣ ನಜ಼ರುದ್ದೀನ್‌ ಪ್ರತಿಕ್ರಿಯಿಸಿದ: “ಅಯ್ಯೋ ದೇವರೇ! ಅಷ್ಟು ಬೆಳಗಿನ ಜಾವ ಸಮರ್‌ಕಂಡ್‌ ಸೇರಿ ಮಾಡಬೇಕಾದದ್ದು … Read more

ನಜ಼ರುದ್ದೀನ್‌ ಕತೆಗಳು: ಗೋವಿಂದ ರಾವ್ ವಿ. ಅಡಮನೆ

೧. ಜ್ಞಾನೋದಯವಾಗುವಿಕೆ ಒಂದು ದಿನ ನಜ಼ರುದ್ದೀನ್‌ ತನ್ನ ಅನುಯಾಯಿಗಳೊಂದಿಗೆ ಪೇಟೆಬೀದಿಯಲ್ಲಿ ಹೋಗುತ್ತಿದ್ದ. ನಜ಼ರುದ್ದೀನ್‌ ಮಾಡುತ್ತಿದ್ದದ್ದನ್ನೆಲ್ಲ ಅನುಯಾಯಿಗಳು ಅಂತೆಯೇ ನಕಲು ಮಾಡುತ್ತಿದ್ದರು. ತುಸು ದೂರ ನಡೆದ ನಂತರ ನಜ಼ರುದ್ದೀನ್ ಕೈಗಳನ್ನು ಮೇಲೆತ್ತಿ ಗಾಳಿಯಲ್ಲಿ ಆಡಿಸುತ್ತಿದ್ದ, ತದನಂತರ ತನ್ನ ಪಾದಗಳನ್ನು ಮುಟ್ಟಿ “ಹು ಹು ಹು” ಎಂಬುದಾಗಿ ಕಿರುಚುತ್ತಾ ಮೇಲಕ್ಕೆ ಹಾರುತ್ತಿದ್ದ. ತಕ್ಷಣ ಅನುಯಾಯಿಗಳೂ ಅಂತೆಯೇ ಮಾಡುತ್ತಿದ್ದರು.  ಇದನ್ನು ಕುತೂಹಲದಿಂದ ನೋಡಿದ ಒಬ್ಬ ವ್ಯಾಪಾರಿ ನಜ಼ರುದ್ದೀನ್‌ನನ್ನು ಕೇಳಿದ, “ನೀನೇನು ಮಾಡುತ್ತಿರುವೆ ಮಿತ್ರಾ? ಇವರೆಲ್ಲರೂ ನಿನ್ನನ್ನು ಏಕೆ ಅನುಕರಿಸುತ್ತಿದ್ದಾರೆ?” ನಜ಼ರುದ್ದೀನ್‌ ಉತ್ತರಿಸಿದ, … Read more

ನಜ಼ರುದ್ದೀನ್‌ ಕತೆಗಳು: ಗೋವಿಂದ ರಾವ್ ವಿ. ಅಡಮನೆ

೧. ಬಲು ಚಳಿ ಚಳಿಗಾಲದಲ್ಲಿ ವಿಪರೀತ ಚಳಿ ಇದ್ದ ಒಂದು ದಿನ ದಪ್ಪನೆಯ ಉಣ್ಣೆ ಬಟ್ಟೆಗಳನ್ನು ಧರಿಸಿದ್ದಾತನೊಬ್ಬ ಬಲು ತೆಳುವಾದ ಸಾಧಾರಣ ಬಟ್ಟೆ ಧರಿಸಿದ್ದ ನಜ಼ರುದ್ದೀನ್‌ನನ್ನು ಗಮನಿಸಿದ. ಅವನು ಕೇಳಿದ, “ಮುಲ್ಲಾ, ಇಷ್ಟೊಂದು ಬಟ್ಟೆ ಧರಿಸಿದ್ದರೂ ನನಗೆ ತುಸು ಚಳಿಯಾಗುತ್ತಿದೆ. ನೀನಾದರೋ ಬಟ್ಟೆಯೇ ಇಲ್ಲವೇನೋ ಅನ್ನಬಹುದಾದಷ್ಟು ಕಮ್ಮಿ ಬಟ್ಟೆ ಧರಿಸಿದ್ದರೂ ಈ ಶೀತಹವೆಯಿಂದ ಪ್ರಭಾವಿತನಾಗಿಲ್ಲ, ಏಕೆ?” ನಜ಼ರುದ್ದೀನ್‌ ಉತ್ತರಿಸಿದ, “ಕಾರಣ ಇಷ್ಟೇ: ನನ್ನ ಹತ್ತಿರ ಇನ್ನೂ ಹೆಚ್ಚು ಬಟ್ಟೆಗಳಿಲ್ಲ, ಎಂದೇ ಚಳಿಯನ್ನು ಅನುಭವಿಸಲು ಸಾಧ್ಯವಿಲ್ಲ. ನಿಮ್ಮ ಹತ್ತಿರವಾದರೋ … Read more

ನಜ಼ರುದ್ದೀನ್‌ ಕತೆಗಳು: ಗೋವಿಂದ ರಾವ್ ವಿ. ಅಡಮನೆ

೧. ನಾವು ಪಕ್ಕಾ ಕೆಲಸಗಾರರು ಒಮ್ಮೆ ನಜ಼ರುದ್ದೀನ್ ನ್ಯಾಯಾಧೀಶನಾಗಿ ಕಾರ್ಯ ನಿರ್ವಹಿಸುತ್ತಿದ್ದ. ಒಂದು ದಿನ ಒಬ್ಬಾತ ಅವನ ಹತ್ತಿರ ಓಡಿ ಬಂದು ಹೇಳಿದ, “ಈ ಹಳ್ಳಿಯ ಗಡಿಯ ಸಮೀಪದಲ್ಲಿ ನನ್ನನ್ನು ಲೂಟಿ ಮಾಡಿದ್ದಾರೆ. ಕಳ್ಳ ನನ್ನ ಹತ್ತಿರವಿದ್ದ ಎಲ್ಲವನ್ನೂ ಕಿತ್ತುಕೊಂಡಿದ್ದಾನೆ – ನನ್ನ ಪಾದರಕ್ಷೆಗಳು, ನನ್ನ ಷರಾಯಿ, ನನ್ನ ಅಂಗಿ, ನನ್ನ ಮೇಲಂಗಿ, ನನ್ನ ಕಂಠಹಾರ, ನನ್ನ ಕಾಲುಚೀಲಗಳನ್ನೂ ಬಿಡಲಿಲ್ಲ – ನನ್ನ ಹತ್ತಿರವಿದ್ದ ಎಲ್ಲವನ್ನೂ ಕಿತ್ತುಕೊಂಡ. ಅವನನ್ನು ಪತ್ತೆಹಚ್ಚಿ ನನಗೆ ನ್ಯಾಯ ಕೊಡಿಸಿ.” ನಜ಼ರುದ್ದೀನ್‌ ಹೇಳಿದ, … Read more

ನಜ಼ರುದ್ದೀನ್‌ ಕತೆಗಳು: ಗೋವಿಂದ ರಾವ್ ವಿ. ಅಡಮನೆ

ನಜ಼ರುದ್ದೀನ್‌ ಕತೆಗಳು: ಗೋವಿಂದ ರಾವ್ ವಿ. ಅಡಮನೆ ೧. ದೈವೇಚ್ಛೆ ಮುಲ್ಲಾ ನಜ಼ರುದ್ದೀನನೂ ಇತರ ಇಬ್ಬರು ಸಂತರೂ ಮೆಕ್ಕಾಗೆ ಯಾತ್ರೆ ಹೋದರು. ಅವರ ಪ್ರಯಾಣದ ಅಂತಿಮ ಭಾಗದಲ್ಲಿ ಒಂದು ಹಳ್ಳಿಯ ಮೂಲಕ ಹೋಗುತ್ತಿದ್ದರು. ಅವರ ಹತ್ತಿರವಿದ್ದ ಹಣ ಹೆಚ್ಚುಕಮ್ಮಿ ಮುಗಿದಿತ್ತು; ಅರ್ಥಾತ್ ಬಹು ಸ್ವಲ್ಪ ಉಳಿದಿತ್ತು. ಆ ಹಳ್ಳಿಯಲ್ಲಿ ಅವರು ಸಿಹಿ ತಿನಿಸು ಹಲ್ವಾ ಕೊಂಡುಕೊಂಡರು. ಆದರೆ ಅದು ಮೂರು ಮಂದಿಗೆ ಸಾಲುವಷ್ಟು ಇರಲಿಲ್ಲ, ಮೂವರೂ ಬಹು ಹಸಿದಿದ್ದರು. ಮಾಡುವುದೇನು? – ಪಾಲು ಮಾಡಿದರೆ ಯಾರ ಹಸಿವನ್ನೂ … Read more

ನಜ಼ರುದ್ದೀನ್‌ ಕತೆಗಳು: ಗೋವಿಂದ ರಾವ್ ವಿ. ಅಡಮನೆ

೧. ವೇಗ ಹೆಚ್ಚಿದಷ್ಟೂ — ಮುಲ್ಲಾ ನಜ಼ರುದ್ದೀನ್‌ ತನ್ನ ತೋಟದಲ್ಲಿ ಯಾವುದೋ ಬೀಜ ಬಿತ್ತನೆ ಮಾಡುತ್ತಿದ್ದ. ಬಿತ್ತನೆ ಮಾಡುತ್ತಾ ಮುಂದೆಮುಂದೆ ಹೋದಂತೆ ಬೀತ್ತನೆ ಮಾಡುವ ವೇಗ ಹೆಚ್ಚುತ್ತಿದ್ದದ್ದನ್ನು ಅವನ ಹೆಂಡತಿ ನೋಡಿ ಹೇಳಿದಳು, “ಮುಲ್ಲಾ, ಅದೇಕೆ ಅಷ್ಟು ವೇಗವಾಗಿ ಬೀಜಗಳನ್ನು ಎರಚುತ್ತಿರುವೆ? ನಿಧಾನವಾಗಿ ಜಾಗರೂಕತೆಯಿಂದ ಬೀಜ ಬಿತ್ತುವುದು ಒಳ್ಳೆಯದಲ್ಲವೇ?” ನಜ಼ರುದ್ದೀನ್‌ ಹೇಳಿದ, “ಸಾಧ್ಯವಿಲ್ಲ. ಏಕೆಂದರೆ ಇನ್ನು ಹೆಚ್ಚು ಬೀಜ ಉಳಿದಿಲ್ಲ. ಅದು ಮುಗಿಯುವುದರೊಳಗಾಗಿ ಬಿತ್ತನೆ ಕೆಲಸ ಮುಗಿಸಬೇಕಾಗಿದೆ!” ***** ೨. ಅಂದುಕೊಳ್ಳುವಿಕೆಗಳು ಖ್ಯಾತ ಮುಲ್ಲಾ ನಜ಼ರುದ್ದೀನನನ್ನು ಒಬ್ಬಾತ … Read more

ನಜ಼ರುದ್ದೀನ್‌ ಕತೆಗಳು: ಗೋವಿಂದ ರಾವ್ ವಿ. ಅಡಮನೆ

೧. ನೀನೇಕೆ ಇಲ್ಲಿರುವೆ? ಒಂದು ದಿನ ನಜ಼ರುದ್ದೀನ್‌ ನಿರ್ಜನ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ. ಕತ್ತಲಾಗುತ್ತಿದ್ದಾಗ ಕುದುರೆ ಸವಾರರ ತಂಡವೊಂದು ಅವನತ್ತ ಬರುತ್ತಿದ್ದದ್ದನ್ನು ನೋಡಿದ. ಅವನ ಕಲ್ಪನಾಶಕ್ತಿ ಬಲು ಚುರಕಾಗಿ ಕಾರ್ಯೋನ್ಮುಖವಾಯಿತು. ಅವರು ತನ್ನನ್ನು ದರೋಡೆ ಮಾಡಲೋ ಅಥವ ತನ್ನನ್ನು ಸೈನ್ಯಕ್ಕೆ ಸೇರಿಸಿಕೊಳ್ಳಲೋ ಬರುತ್ತಿದ್ದಾರೆಂದು ಅವನು ಊಹಿಸಿಕೊಂಡು ಭಯಭೀತನಾದ. ಭಯ ಎಷ್ಟು ತೀವ್ರವಾಗಿತ್ತೆಂದರೆ ಅವರಿಂದ ತಪ್ಪಿಸಿಕೊಳ್ಳಲೇಬೇಕೆಂಬ ಛಲ ಮೂಡಿ ಪಕ್ಕದಲ್ಲಿದ್ದ ಎತ್ತರದ ಗೋಡೆಯೊಂದನ್ನು ಹೇಗೋ ಹತ್ತಿ ಇನ್ನೊಂದು ಪಕ್ಕಕ್ಕೆ ಹಾರಿದ. ಅದೊಂದು ಸ್ಮಶಾನ ಎಂಬುದು ಅವನಿಗೆ ಆಗ ತಿಳಿಯಿತು. … Read more

ನಜರುದ್ದೀನ್‌ ಕತೆಗಳು: ಗೋವಿಂದ ರಾವ್ ವಿ. ಅಡಮನೆ

೧. ವಿದ್ವಾಂಸ ಸಾರಥಿ ಮುಲ್ಲಾ ನಜರುದ್ದೀನ್‌ ಒಮ್ಮೆ ಕುದುರೆಗಾಡಿಯ ಸಾರಥಿಯ ಕೆಲಸವನ್ನು ಮಾಡಲು ಒಪ್ಪಿಕೊಂಡ. ಒಂದು ದಿನ ಆತ ಪಟ್ಟಣದ ಕುಖ್ಯಾತ ಭಾಗಕ್ಕೆ ಮಾಲಿಕನನ್ನು ಒಯ್ಯಬೇಕಾಗಿತ್ತು. ಗಮ್ಯಸ್ಥಾನ ತಲುಪಿದ ನಂತರ ಗಾಡಿಯಿಂದಿಳಿದ ಮಾಲಿಕ ಸಲಹೆ ನೀಡಿದ, “ಬಲು ಜಾಗರೂಕನಾಗಿರು. ಇಲ್ಲಿ ತುಂಬಾ ಕಳ್ಳರಿದ್ದಾರೆ.” ತುಸು ಸಮಯ ಕಳೆದ ನಂತರ ಹೊಸ ಸಾರಥಿ ಏನು ಮಾಡುತ್ತಿದ್ದಾನೆಂಬುದನ್ನು ತಿಳಿಯಲು ಇಚ್ಛಿಸಿದ ಮಾಲಿಕ ತಾನಿದ್ದ ಮನೆಯ ಕಿಟಕಿಯೊಂದರಿಂದ ತಲೆ ಹೊರಹಾಕಿ ಬೊಬ್ಬೆಹಾಕಿದ, “ಎಲ್ಲವೂ ಸರಿಯಾಗಿದೆಯಷ್ಟೆ? ಈಗ ನೀನೇನು ಮಾಡುತ್ತಿರುವೆ?” “ಒಬ್ಬ ವ್ಯಕ್ತಿ … Read more

ನಜರುದ್ದೀನ್‌ ಕತೆಗಳು: ಗೋವಿಂದ ರಾವ್ ವಿ. ಅಡಮನೆ

೧. ಸಿಹಿ ಜಗಳಗಳು ಒಂದು ದಿನ ಮುಲ್ಲಾ ನಜರುದ್ದೀನ್‌ ತನ್ನ ಹೆಂಡತಿಯೊಂದಿಗೆ ಜಗಳವಾಡಿದ. ಅವನ ಕಿರುಚಾಟ ಕೇಳಲಾಗದೆ ಅವನ ಹೆಂಡತಿ ನೆರೆಮನೆಗೆ ಓಡಿಹೋದಳು. ಮುಲ್ಲಾ ಅವಳ ಹಿಂದೆಯೇ ಅಲ್ಲಿಗೂ ಹೋದ. ನೆರೆಮನೆಯವರು ಬಲು ಕಷ್ಟದಿಂದ ಇಬ್ಬರನ್ನೂ ಸಮಾಧಾನಪಡಿಸಿ ಚಹಾ ಹಾಗು ಮಿಠಾಯಿಗಳನ್ನು ಕೊಟ್ಟರು. ತಮ್ಮ ಮನೆಗೆ ಹಿಂದಿರುಗಿದ ನಂತರ ಪುನಃ ಮುಲ್ಲಾ ಜಗಳವಾಡಲಾರಂಭಿಸಿದ. ಹೊರಗೋಡಲೋಸುಗ ಅವನ ಹೆಂಡತಿ ಬಾಗಿಲು ತೆಗೆದೊಡನೆ ಮುಲ್ಲಾ ಸಲಹೆ ನೀಡಿದ, “ಈ ಸಲ ಬೇಕರಿಯವನ ಮನೆಗೆ ಹೋಗು. ಅವನು ಸ್ವಾದಿಷ್ಟವಾದ ಕೇಕ್‌ಗಳನ್ನು ತಯಾರಿಸುತ್ತಾನೆ!” … Read more

ನಜರುದ್ದೀನ್‌ ಕತೆಗಳು: ಗೋವಿಂದ ರಾವ್ ವಿ. ಅಡಮನೆ

೧. ಸಮಸ್ಯೆಗೆ ಹೋಜ ಸೂಚಿಸಿದ ಪರಿಹಾರ ಒಂದು ದಿನ ಹೋಜ ತನ್ನ ಪರಿಚಯದವನೊಬ್ಬನನ್ನು ರಸ್ತೆಯಲ್ಲಿ ಸಂಧಿಸಿದ. ಆ ಮನುಷ್ಯ ಚಿಂತಾಕ್ರಾಂತನಾಗಿದ್ದಂತೆ ಗೋಚರಿಸುತ್ತಿದ್ದದ್ದರಿಂದ ಹೋಜ ಅವನನ್ನು ಕಾರಣ ವಿಚಾರಿಸಿದ. “ನನಗೊಂದು ಭಯಾನಕ ಕನಸು ಬೀಳುತ್ತಿದೆ,” ವಿವರಿಸಿದ ಆತ, “ನನ್ನ ಮಂಚದ ಕೆಳಗೆ ಒಂದು ಪೆಡಂಭೂತವೊಂದು ಅಡಗಿ ಕುಳಿತಿರುವಂತೆ ಪ್ರತೀ ದಿನ ರಾತ್ರಿ ಕನಸು ಬೀಳುತ್ತಿದೆ. ಎದ್ದು ನೋಡಿದರೆ ಅಲ್ಲೇನೂ ಇರುವುದಿಲ್ಲ. ಎಂದೇ ನಾನೀಗ ವೈದ್ಯರ ಹತ್ತಿರ ಹೋಗುತ್ತಿದ್ದೇನೆ. ೧೦೦ ದಿನಾರ್‌ ಶುಲ್ಕ ಕೊಟ್ಟರೆ ಇದಕ್ಕೆ ಚಿಕಿತ್ಸೆ ನೀಡುವುದಾಗಿ ಹೇಳಿದ್ದಾರೆ.” … Read more

ನಜ಼ರುದ್ದೀನ್‌ ಕತೆಗಳು: ಗೋವಿಂದ ರಾವ್ ವಿ. ಅಡಮನೆ

  ೧. ಧೂಳಿನಲ್ಲಿ ಹೋಜ ನಜ಼ರುದ್ದೀನ್‌ ಹೋಜನ ಹತ್ತಿರ ಒಂದು ಎಮ್ಮೆ ಇತ್ತು. ಅದರ ಕೊಂಬುಗಳ ನಡುವಿನ ಅಂತರ ಗಮನಾರ್ಹವಾಗಿ ದೊಡ್ಡದಾಗಿತ್ತು. ಆ ಕೊಂಬುಗಳ ನಡುವೆ ಕುಳಿತುಕೊಳ್ಳಬೇಕೆಂಬ ಪ್ರಬಲ ಅಪೇಕ್ಷೆ ಹೋಜನಿಗೆ ಆಗಾಗ್ಗೆ ಉಂಟಾಗುತ್ತಿದ್ದರೂ ಅಂತು ಮಾಡಲು ಧೈರ್ಯವಾಗುತ್ತಿರಲಿಲ್ಲ. ಒಂದು ದಿನ ಹೋಜ ಮನೆಯ ಅಂಗಳದಲ್ಲಿ ಏನೋ ಮಾಡುತ್ತಿದ್ದಾಗ ಆ ಎಮ್ಮೆ ಬಂದು ಅವನ ಹತ್ತಿರವೇ ಮಲಗಿತು. ಆದದ್ದಾಗಲಿ ಎಂಬ ಮೊಂಡ ಧೈರ್ಯದಿಂದ ಹೋಜ ಅದರ ಕೊಂಬುಗಳ ನಡುವೆ ಕುಳಿತು ಸಂಭ್ರಮದಿಂದ ಹೆಂಡತಿಗೆ ಹೇಳಿದ, “ನನಗೀಗ ಸಿಂಹಾಸನದ … Read more

ನಜರುದ್ದೀನ್‌ ಕತೆಗಳು: ಗೋವಿಂದ ರಾವ್ ವಿ. ಅಡಮನೆ

    ೧. ಹೋಜನ ಕತ್ತೆ ನಜರುದ್ದೀನ್‌ ಹೋಜ ತನ್ನ ಕತ್ತೆಯನ್ನು ಮಾರುಕಟ್ಟೆಗೆ ಒಯ್ದು ೩೦ ದಿನಾರ್‌ಗಳಿಗೆ ಮಾರಿದ. ಅದನ್ನು ಕೊಂಡುಕೊಂಡವನು ತಕ್ಷಣವೇ ಕತ್ತೆಯನ್ನು ಹರಾಜಿನಲ್ಲಿ ಮಾರಲು ನಿರ್ಧರಿಸಿದ. “ಅತ್ಯುತ್ತಮ ಗುಣಮಟ್ಟದ ಈ ಪ್ರಾಣಿಯನ್ನು ನೋಡಿ!” ದಾರಿಹೋಕರನ್ನು ತನ್ನತ್ತ ಆಕರ್ಷಿಸಲೋಸುಗ ಅವನು ಬೊಬ್ಬೆಹಾಕಲಾರಂಭಿಸಿದ. “ಇದಕ್ಕಿಂತ ಉತ್ತಮವಾದ ಕತ್ತೆಯನ್ನು ನೀವು ಎಂದಾದರೂ ನೋಡಿದ್ದೀರಾ? ನೋಡಿ, ಇದು ಎಷ್ಟು ಸ್ವಚ್ಛವಾಗಿದೆ, ಎಷ್ಟು ಬಲವಾಗಿದೆ.” ಆ ಕತ್ತೆಯ ಇನ್ನೂ ಅನೇಕ ಒಳ್ಳೆಯ ಗುಣಗಳನ್ನು ಪಟ್ಟಿಮಾಡಿದ. ಇದನ್ನೆಲ್ಲ ಕೇಳಿದ ಒಬ್ಬಾತ ಅದಕ್ಕೆ ೪೦ … Read more

ನಜರುದ್ದೀನ್‌ ಕತೆಗಳು: ಗೋವಿಂದ ರಾವ್ ವಿ. ಅಡಮನೆ

  ೧. ಕಿಕ್ಕಿರಿದ ಮನೆ ಮುಲ್ಲಾ ನಜರುದ್ದೀನ್ ನೆರೆಮನೆಯವನೊಂದಿಗೆ ಒಂದು ದಿನ ಮಾತನಾಡುತ್ತಿರುವಾಗ ಆತ ಬಲು ಸಂಕಟ ಪಡುತ್ತಿರುವವನಂತೆ ಕಾಣುತ್ತಿದ್ದ. ಅವನಿಗೇನು ತೊಂದರೆ ಇದೆ ಎಂಬುದನ್ನು ಮುಲ್ಲಾ ವಿಚಾರಿಸಿದ. ತನ್ನ ಮನೆಯಲ್ಲಿ ಸ್ಥಳಾವಕಾಶದ ಕೊರತೆ ಇರುವುದನ್ನು ಆತ ವಿವರಿಸುತ್ತಾ ಹೇಳಿದ, “ನನ್ನದು ಬಲು ಚಿಕ್ಕ ಮನೆ, ಮುಲ್ಲಾ. ನಾನು, ನನ್ನ ಹೆಂಡತಿ, ನನ್ನ ಮೂರು ಮಕ್ಕಳು, ನನ್ನ ಅತ್ತೆ ಎಲ್ಲರೂ ಇಷ್ಟು ಚಿಕ್ಕ ಮನೆಯಲ್ಲಿ ಒಟ್ಟಿಗೇ ವಾಸ ಮಾಡಬೇಕಾಗಿದೆ. ಸ್ಥಳ ಕಮ್ಮಿ ಇರುವುದರಿಂದ ಓಡಾಡಲು ಸ್ಥಳವೇ ಇಲ್ಲ.” … Read more

ಸೂಫಿ ಕತೆಗಳು: ಗೋವಿಂದ ರಾವ್ ವಿ. ಅಡಮನೆ

ವಿದ್ವಾಂಸನೂ ಸೂಫಿಯೂ ಒಬ್ಬ ವಿದ್ವಾಂಸ ಸೂಫಿಯೊಬ್ಬನಿಗೆ ಹೇಳಿದ, “ನಮ್ಮ ತಾರ್ಕಿಕ ಪ್ರಶ್ನೆಗಳು ನಿಮಗೆ ಅರ್ಥವೇ ಆಗುವುದಿಲ್ಲವೆಂಬುದಾಗಿ ನೀವು ಸೂಫಿಗಳು ಹೇಳುತ್ತೀರಿ. ಅಂಥ ಒಂದು ಪ್ರಶ್ನೆಯನ್ನು ನೀವು ಉದಾಹರಿಸಬಲ್ಲಿರಾ?” ಸೂಫಿ ಹೇಳಿದ, “ಖಂಡಿತ. ಅದಕ್ಕೊಂದು ಉದಾಹರಣೆ ನನ್ನ ಹತ್ತಿರ ಇದೆ. ನಾನೊಮ್ಮೆ ರೈಲಿನಲ್ಲಿ ಪಯಣಿಸುತ್ತಿದ್ದೆ. ಆ ರೈಲು ಏಳು ಸುರಂಗಗಳ ಮೂಲಕ ಹಾದುಹೋಯಿತು. ಆ ವರೆಗೆ ರೈಲಿನಲ್ಲಿ ಪಯಣಿಸದೇ ಇದ್ದ ಹಳ್ಳಿಗಾಡಿನವನೊಬ್ಬ ನನ್ನ ಎದುರು ಕುಳಿತಿದ್ದ. ರೈಲು ಏಳು ಸುರಂಗಗಳನ್ನು ದಾಟಿದ ನಂತರ ಅವನು ನನ್ನ ಭುಜ ತಟ್ಟಿ … Read more

ಸೂಫಿ ಕತೆಗಳು: ಗೋವಿಂದ ರಾವ್ ವಿ. ಅಡಮನೆ

೧. ಪಕ್ಷಿಗಳು ಇರುವುದೇ  ಹಾರಾಡುವುದಕ್ಕಾಗಿ ಒಂದು ದಿನ ಹಸ್ಸಿದ್‌ನ ಮುಮುಕ್ಷು ಜೂಸಿಯಾ ಎಂಬಾತ ಪರ್ವತ ಪ್ರದೇಶದಲ್ಲಿ ಅಡ್ಡಾಡುತ್ತಿದ್ದಾಗ ಒಬ್ಬ ತನ್ನ ಮನೆಯ ಹೊರಗೆ ಪಂಜರದಲ್ಲಿ ಬಂಧಿಸಿ ಇಟ್ಟಿದ್ದ ಅನೇಕ ಪಕ್ಷಿಗಳನ್ನು ನೋಡಿದ. ಜೂಸಿಯಾ ಪಂಜರದ ಬಾಗಿಲು ತೆರೆದ — ಏಕೆಂದರೆ ಪಕ್ಷಿಗಳು ಇರುವುದೇ ಹಾರಾಡುವುದಕ್ಕಾಗಿ — ಎಲ್ಲ ಪಕ್ಷಿಗಳೂ ಹಾರಿಹೋದವು. ಪಂಜರದ ಮಾಲಿಕ ತನ್ನ ಮನೆಯಿಂದ ಹೊರಗೋಡಿಬಂದು ಕೇಳಿದ, “ಇದೇನು ಮಾಡಿದೆ ನೀನು?” ಜೂಸಿಯಾ ಹೇಳಿದ, “ಪಕ್ಷಿಗಳಿರುವುದೇ ಹಾರಾಡುವುದಕ್ಕಾಗಿ. ನೋಡು, ನೋಡು, ಹಾರಾಡುವಾಗ ಅವು ಎಷ್ಟು ಸುಂದರವಾಗಿ … Read more

ಸೂಫಿ ಕತೆಗಳು: ಗೋವಿಂದ ರಾವ್ ವಿ. ಅಡಮನೆ

೧. ಶಿಷ್ಯನಾಗಿರುವುದು ಬಲು ಕಷ್ಟದ ಕೆಲಸ ಸೂಫಿ ಮುಮುಕ್ಷು ಜುನ್ನೈದ್‌ನ ಹತ್ತಿರ ಅವನ ಶಿಷ್ಯನಾಗಲೋಸುಗ ಒಬ್ಬ ವ್ಯಕ್ತಿ ಬಂದನು. ಜುನ್ನೈದ್‌ ಬಹಳ ಹೊತ್ತು ಅವನನ್ನೇ ದಿಟ್ಟಿಸಿ ನೋಡಿದ. ಪರಿಣಾಮವಾಗಿ ಆ ವ್ಯಕ್ತಿ ತುಸು ಅಸ್ಥಿರಮನಸ್ಕನಾದ, ಜುನ್ನೈದ್‌ ಏಕೆ ಇಷ್ಟು ಹೊತ್ತು ಮೌನವಾಗಿ ತನ್ನನ್ನು ದಿಟ್ಟಿಸಿ ನೋಡುತ್ತಿದ್ದಾನೆ ಎಂಬುದು ಅರ್ಥವಾಗದೆ.  ಕೊನೆಗೊಮ್ಮ ಜುನ್ನೈದ್‌ ಹೇಳಿದ, “ಶಿಷ್ಯನಾಗಿರುವುದು ಬಲು ಕಷ್ಟದ ಕೆಲಸ.” ಆ ವ್ಯಕ್ತಿ ಹೇಳಿದ, “ಅಂತಾದರೆ ನಾನು ಹಿಂಬಾಲಕನಾಗಿರಲೂ ಸಿದ್ಧನಿದ್ದೇನೆ.” ಜುನ್ನೈದ್‌ ಹೇಳಿದ, “ಅದು ಇನ್ನೂ ಕಷ್ಟದ ಕೆಲಸ. … Read more

ಸೂಫಿ ಕತೆಗಳು: ಗೋವಿಂದ ರಾವ್ ವಿ. ಅಡಮನೆ

೧. ಭರವಸೆ, ಭಯ, ಜ್ಞಾನ ಸೂಫಿ ಮುಮುಕ್ಷು ಹಸನ್‌ ಮರಣಶಯ್ಯೆಯಲ್ಲಿದ್ದಾಗ ಯಾರೋ ಒಬ್ಬ ಕೇಳಿದ, “ಹಸನ್‌ ನಿನ್ನ ಗುರು ಯಾರು?” “ನೀನು ತುಂಬ ತಡಮಾಡಿ ಈ ಪ್ರಶ್ನೆ ಕೇಳಿರುವೆ. ಈಗ ಸಮಯವಿಲ್ಲ, ನಾನು ಸಾಯುತ್ತಿದ್ದೇನೆ.” “ನೀನೊಂದು ಹೆಸರು ಮಾತ್ರ ಹೇಳಬೇಕಷ್ಟೆ. ನೀನಿನ್ನೂ ಬದುಕಿರುವೆ, ನೀನಿನ್ನೂ ಉಸಿರಾಡುತ್ತಿರುವೆ, ಆದ್ದರಿಂದ ಸುಲಭವಾಗಿ ನನಗೆ ನಿನ್ನ ಗುರುವಿನ ಹೆಸರು ಹೇಳಬಹುದು.” “ಅದು ಅಷ್ಟು ಸುಲಭವಲ್ಲ. ಏಕೆಂದರೆ ನನಗೆ ಸಹಸ್ರಾರು ಗುರುಗಳಿದ್ದರು. ಅವರ ಹೆಸರುಗಳನ್ನು ಹೇಳಲು ನನಗೆ ಅನೇಕ ತಿಂಗಳುಗಳು, ಅಲ್ಲ, ವರ್ಷಗಳು … Read more

ಸೂಫಿ ಕತೆಗಳು: ಗೋವಿಂದ ರಾವ್ ವಿ. ಅಡಮನೆ

೧. ಡ್ರ್ಯಾಗನ್‌  ಕೊಲ್ಲುವವ ಅಂದುಕೊಳ್ಳುತ್ತಿದ್ದವನ ಕತೆ ತಾನೊಬ್ಬ ಡ್ರ್ಯಾಗನ್‌ ಬೇಟೆಗಾರ ಎಂಬುದಾಗಿ ಹೇಳಿಕೊಳ್ಳುತ್ತಿದ್ದವನೊಬ್ಬ ಡ್ರ್ಯಾಗನ್‌ ಹಿಡಿಯಲೋಸುಗ ಪರ್ವತ ಪ್ರದೇಶಕ್ಕೆ ಹೋದನು. ಪರ್ವತ ಶ್ರೇಣಿಯಲ್ಲೆಲ್ಲ ಡ್ರ್ಯಾಗನ್‌ಗಾಗಿ ಹುಡುಕಾಡತೊಡಗಿದ. ಕೊನೆಗೆ ಅತ್ಯಂತ ಎತ್ತರದ ಪರ್ವತವೊಂದರಲ್ಲಿ ಅತೀ ಎತ್ತರದಲ್ಲಿದ್ದ ಗುಹೆಯೊಂದರಲ್ಲಿ ಬೃಹತ್ ಗಾತ್ರದ ಡ್ರ್ಯಾಗನ್‌ನ ಘನೀಕೃತ ದೇಹವೊಂದನ್ನು ಆವಿಷ್ಕರಿಸಿದ. ಅದನ್ನು ಆತ ಬಾಗ್ದಾದ್‌ಗೆ ತಂದನು. ಅದನ್ನು ತಾನು ಕೊಂದದ್ದಾಗಿ ಘೋಷಿಸಿ ಅಲ್ಲಿನ ನದಿಯ ದಡದಲ್ಲಿ ಪ್ರದರ್ಶನಕ್ಕೆ ಇಟ್ಟನು. ಡ್ರ್ಯಾಗನ್‌ ಅನ್ನು ನೋಡಲು ನೂರುಗಟ್ಟಲೆ ಸಂಖ್ಯೆಯಲ್ಲಿ ಜನ ಬಂದರು.  ಬಾಗ್ದಾದ್‌ನ ಬಿಸಿ ವಾತಾವರಣ … Read more

ಸೂಫಿ ಕತೆಗಳು: ಗೋವಿಂದ ರಾವ್ ವಿ. ಅಡಮನೆ

೧. ಮಂಗಗಳನ್ನು ಹಿಡಿಯುವುದು ಹೇಗೆ? ಒಂದಾನೊಂದು ಕಾಲದಲ್ಲಿ ಚೆರಿ ಹಣ್ಣುಗಳನ್ನು ಬಲು ಇಷ್ಟಪಡುತ್ತಿದ್ದ ಮಂಗವೊಂದಿತ್ತು. ಒಂದು ದಿನ ಅದಕ್ಕೆ ರಸಭರಿತ ಚೆರಿ ಹಣ್ಣೊಂದು ಗೋಚರಿಸಿತು. ಆ ಹಣ್ಣನ್ನು ಪಡೆಯಲೋಸುಗ ಮಂಗ ಮರದಿಂದ ಇಳಿದು ಬಂದಿತು. ಆ ಹಣ್ಣು ಒಂದು ಶುಭ್ರವಾದ ಗಾಜಿನ ಸೀಸೆಯೊಳಗಿತ್ತು. ವಿವಿಧ ರೀತಿಯಲ್ಲಿ ಪ್ರಯತ್ನಿಸಿದ ನಂತರ ಸೀಸೆಯ ಕತ್ತಿನೊಳಕ್ಕೆ ಕೈತೂರಿಸಿ ಹಣ್ಣನ್ನು ಹಿಡಿಯಬಹುದು ಎಂಬುದನ್ನು ಅದು ಪತ್ತೆಹಚ್ಚಿತು. ಅಂತೆಯೇ ಕೈತೂರಿಸಿ ಹಣ್ಣನ್ನು ಹಿಡಿದುಕೊಂಡಿತಾದರೂ ಮುಷ್ಟಿಯಲ್ಲಿ ಹಣ್ಣನ್ನು ಹಿಡಿದುಕೊಂಡಾಗ ಅದರ ಗಾತ್ರ ಸೀಸೆಯ ಕತ್ತಿನ ಗಾತ್ರಕ್ಕಿಂತ … Read more

ಸೂಫಿ ಕತೆಗಳು: ಗೋವಿಂದ ರಾವ್ ವಿ. ಅಡಮನೆ

೧. ಅರಬ್ಬನ ಅಶ್ಲೀಲ ಬಯ್ಗುಳವೂ ದೇವರ ಸಂದೇಶವೂ ಒಂದು ದಿನ ಪ್ರವಾದಿ ಮೊಹಮ್ಮದ್‌ರು ಮಸೀದಿಯೊಂದರಲ್ಲಿ ಬೆಳಗಿನ ಪ್ರಾರ್ಥನೆ ಸಲ್ಲಿಸುತ್ತಿದ್ದರು. ಅವರೊಂದಿಗೆ ಪ್ರಾರ್ಥನೆ ಸಲ್ಲಿಸುತ್ತಿದ್ದವರ ಪೈಕಿ ಇಸ್ಲಾಂನಲ್ಲಿ ಮೇಲೇರಬಯಸುತ್ತಿದ್ದ ಅರಬ್ಬನೊಬ್ಬನಿದ್ದ. ಆ ದಿನ ಕೊರಾನ್‌ನಲ್ಲಿ “ನಾನೇ ನಿಮ್ಮ ನಿಜವಾದ ದೇವರು” ಎಂಬ ಅರ್ಥವಿರುವ ಫೆರೋನ ಹೇಳಿಕೆ ಉಳ್ಳ ಶ್ಲೋಕವನ್ನು ಮಹಮ್ಮದ್‌ರು ಪಠಿಸುತ್ತಿದ್ದಾಗ ಅದನ್ನು ಕೇಳಿದ ಅರಬ್ಬನು ಕೋಪೋದ್ರಿಕ್ತನಾಗಿ ಪ್ರಾರ್ಥನೆಯನ್ನು ನಿಲ್ಲಿಸಿ ಬೊಬ್ಬೆ ಹೊಡೆದ: “ಸೂಳೆಮಗ*, ಬಡಾಯಿಕೋರ!” ಪ್ರವಾದಿಗಳು ತಮ್ಮ ಪ್ರಾರ್ಥನೆ ಮುಗಿಸಿದ ಕೂಡಲೆ ಅವರ ಸಹಚರರು ಅರಬ್ಬನಿಗೆ ಛೀಮಾರಿ … Read more

ಸೂಫಿ ಕತೆಗಳು: ಗೋವಿಂದ ರಾವ್ ವಿ. ಅಡಮನೆ

೧. ನೂರಿ ಬೆ ಎಂಬಾತನ ಪುರಾತನ ಪೆಠಾರಿ ಚಿಂತನಶೀಲ ನೂರಿ ಬೆ ಅಲ್ಬೇನಿಯಾದ ಒಬ್ಬ ಗೌರವಾನ್ವಿತ ನಿವಾಸಿ. ತನಗಿಂತ ಬಹಳಷ್ಟು ಚಿಕ್ಕವಳಾಗಿದ್ದವಳೊಬ್ಬಳನ್ನು ಅವನು ಮದುವೆಯಾಗಿದ್ದ. ಒಂದು ದಿನ ಅವನು ಮಾಮೂಲಿಗಿಂತ ಬೇಗನೆ ಮನೆಗೆ ಹಿಂದಿರುಗಿದಾಗ ಅವನ ಅತ್ಯಂತ ವಿಧೇಯ ಸೇವಕನೊಬ್ಬ ಓಡಿ ಬಂದು ಹೇಳಿದ, “ನಿಮ್ಮ ಹೆಂಡತಿ, ಅರ್ಥಾತ್ ನಮ್ಮ ಯಜಮಾನಿ ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದಾರೆ. ಅವರ ಕೊಠಡಿಯಲ್ಲಿ ಒಬ್ಬ ಮನುಷ್ಯ ಹಿಡಿಸಬಹುದಾದಷ್ಟು ದೊಡ್ಡ ಪೆಠಾರಿಯೊಂದಿದೆ. ಅದು ನಿಮ್ಮ ಅಜ್ಜಿಯದ್ದು. ನಿಜವಾಗಿ ಅದರಲ್ಲಿ ಕಸೂತಿ ಕೆಲಸ ಮಾಡಿದ ಪುರಾತನ … Read more

ಸೂಫಿ ಕತೆಗಳು: ಗೋವಿಂದ ರಾವ್ ವಿ. ಅಡಮನೆ

೧. ತಂದೆ, ಮಗ ಹಾಗು ಕತ್ತೆ ತಂದೆ ಹಾಗು ಮಗ ತಮ್ಮ ಕತ್ತೆಯೊಂದಿಗೆ ನಡೆದುಕೊಂಡು ಮಾರುಕಟ್ಟೆಗೆ ಹೋಗುತ್ತಿದ್ದರು. ಅದೇ ದಾರಿಯಲ್ಲಿ ಹೋಗುತ್ತಿದ್ದ ಹಳ್ಳಿಯವನೊಬ್ಬ ಹೇಳಿದ, “ನೀವೆಂಥ ಮೂರ್ಖರು. ಕತ್ತೆ ಇರುವುದೇ ಸವಾರಿ ಮಾಡಲೋಸುಗವಲ್ಲವೆ?” ಇದನ್ನು ಕೇಳಿದ ತಂದೆ ಮಗನನ್ನು ಕತ್ತೆಯ ಮೇಲೆ ಕುಳ್ಳಿರಿಸಿದ. ಇಂತು ಅವರು ಪ್ರಯಾಣ ಮುಂದುವರಿಸಿದರು. ಸ್ವಲ್ಪ ಸಮಯದ ನಂತರ ಅವರು ಒಂದು ಗುಂಪಾಗಿ ಹೋಗುತ್ತಿದ್ದ ಕೆಲವರನ್ನು ಸಂಧಿಸಿದರು. ಅವರ ಪೈಕಿ ಒಬ್ಬ ಹೇಳಿದ, “ನೋಡಿ, ನೋಡಿ. ಆ ಯುವಕ ಎಷ್ಟು ಸೋಮಾರಿ! ತನ್ನ … Read more

ಸೂಫಿ ಕತೆಗಳು: ಗೋವಿಂದ ರಾವ್ ವಿ. ಅಡಮನೆ

೧. ಹೊಸತಾಗಿ ಮತಾಂತರಗೊಂಡವನು ಒಂದು ಊರಿನಲ್ಲಿ ಒಬ್ಬ ಮುಸಲ್ಮಾನ ಹಾಗು ಒಬ್ಬ ಕ್ರೈಸ್ತಮತೀಯ ಸ್ನೇಹಿತರು ನೆರೆಹೊರೆವಾಸಿಗಳಾಗಿದ್ದರು. ಇವರೀರ್ವರಲ್ಲಿ ಪ್ರತಿಯೊಬ್ಬನಿಗೂ ಇನ್ನೊಬ್ಬನ ಯೋಗಕ್ಷೆಮದ ಕಾಳಜಿ ಇದ್ದದ್ದರಿಂದ ಆರೋಗ್ಯದ ಹಾಗು ಇನ್ನಿತರ ಖಾಸಗಿ ವಿಷಯಗಳ ಕುರಿತು ಆಗಾಗ್ಗೆ ವಿಚಾರವಿನಿಮಯ ಮಾಡಿಕೊಳ್ಳುತ್ತಿದ್ದರು. ಬಲು ಶ್ರದ್ಧೆಯಿಂದ ಇಸ್ಲಾಂ ಮತಾಚರಣೆಗಳನ್ನು ಮಾಡುತ್ತಿದ್ದ ಮುಸಲ್ಮಾನನು ತನ್ನ ಮತದ ಹಿರಿಮೆಯನ್ನು ಬಹುವಾಗಿ ಹೇಳುತ್ತಿದ್ದದ್ದರ ಪರಿಣಾಮವಾಗಿ ಕ್ರೈಸ್ತಮತೀಯನು ಇಸ್ಲಾಂ ಮತಕ್ಕೆ ಮಾತಾಂತರಗೊಂಡನು.  ಮತಾಂತರಗೊಂಡ ಮಾರನೆಯ ದಿನ ಬೆಳಗಿನ ಜಾವದಲ್ಲಿ ಅವನ ಮನೆಯ ಬಾಗಿಲನ್ನು ಯಾರೋ ಜೋರಾಗಿ ಬಡಿಯುತ್ತಿದ್ದದರಿಂದ ಅರೆನಿದ್ದೆಯಲ್ಲಿದ್ದ … Read more

ಸೂಫಿ ಕತೆಗಳು: ಗೋವಿಂದ ರಾವ್ ವಿ. ಅಡಮನೆ

೧. ಮೂವರು ಯಾತ್ರಿಕರ ಕತೆ ಸುದೀರ್ಘವೂ ದಣಿಸಬಲ್ಲದ್ದೂ ಆದ ಯಾತ್ರೆಯ ಅವಧಿಯಲ್ಲಿ ಮೂವರು ಅಪರಿಚಿತರು ಸಂಗಾತಿಗಳಾಗಿ ತಮ್ಮೆಲ್ಲ ಸಂಪನ್ಮೂಲಗಳನ್ನು ಒಟ್ಟುಗೂಡಿಸಿ ಸುಖದುಃಖಗಳನ್ನು ಹಂಚಿಕೊಂಡು ಪಯಣಿಸುತ್ತಿದ್ದರು. ಅನೇಕ ದಿನಗಳು ಪಯಣಿಸಿದ ನಂತರ ಒಂದು ದಿನ ತಮ್ಮ ಹತ್ತಿರ ಒಂದು ತುಣುಕು ಬ್ರೆಡ್‌ ಮತ್ತು ಒಂದು ಗುಟುಕು ನೀರು ಮಾತ್ರ ಉಳಿದಿರುವ ಸಂಗತಿ ಅವರ ಗಮನಕ್ಕೆ ಬಂದಿತು. ಈ ಆಹಾರ ಮೂವರ ಪೈಕಿ ಯಾರಿಗೆ ಸೇರಬೇಕೆಂಬುದರ ಕುರಿತು ಅವರು ಜಗಳವಾಡಲು ಆರಂಭಿಸಿದರು. ಅದರಿಂದ ಏನೂ ಪ್ರಯೋಜನವಾಗಲಿಲ್ಲ. ಉಳಿದಿದ್ದ ಬ್ರೆಡ್‌ ಹಾಗು … Read more

ಸೂಫಿ ಕತೆಗಳು: ಗೋವಿಂದ ರಾವ್ ವಿ. ಅಡಮನೆ

೧. ಕೋಡಂಗಿ ಒಬ್ಬಾತ ಮನೋವೈದ್ಯರನ್ನು ಭೇಟಿ ಮಾಡಿ ಹೇಳಿದ, “ ಡಾಕ್ಟರೇ, ನಾನು ಯಾವಾಗಲೂ ಮಂಕಾಗಿರುತ್ತೇನೆ. ನಾನೇನೇ ಮಾಡಿದರೂ ಮಂಕಾಗಿಯೇ ಇರುತ್ತೇನೆ. ಇದಕ್ಕೇನು ಪರಿಹಾರ ಎಂಬುದೇ ತಿಳಿಯುತ್ತಿಲ್ಲ.” ಮನೋವೈದ್ಯರು ಅವನನ್ನು ನೇರವಾಗಿ ನೋಡುತ್ತಾ ಹೇಳಿದರು, “ನನ್ನ ಜೊತೆಯಲ್ಲಿ ಕಿಟಕಿಯ ಹತ್ತಿರ ಬಾ.” ಇಬ್ಬರೂ ಕಿಟಕಿಯನ್ನು ಸಮೀಪಿಸಿದಾಗ ಮನೋವೈದ್ಯರು ಹೊರಗೆ ಒಂದು ದಿಕ್ಕಿನತ್ತ ತೋರಿಸುತ್ತಾ ಹೇಳಿದರು, “ಅಲ್ಲೊಂದು ಡೇರೆ ಕಾಣುತ್ತಿದೆಯಲ್ಲವೇ?. ಅದೊಂದು ಸರ್ಕಸ್ಸಿನ ಡೇರೆ. ಆ ಸರ್ಕಸ್‌ ನಿಜವಾಗಿಯೂ ಬಲು ಚೆನ್ನಾಗಿದೆ. ಅದರಲ್ಲೊಬ್ಬ ನಿಜವಾಗಿಯೂ ಜನಗಳನ್ನು ನಗಿಸಬಲ್ಲ ಕೋಡಂಗಿಯೊಬ್ಬನಿದ್ದಾನೆ. … Read more

ಸೂಫಿ ಕತೆಗಳು: ಗೋವಿಂದ ರಾವ್ ವಿ. ಅಡಮನೆ

೧. ವ್ಯಾಧಿಗ್ರಸ್ತ ರಾಜನ ಕತೆ ರಾಜನೊಬ್ಬ ಭೀಕರ ಕಾಯಿಲೆಯಿಂದ ನರಳುತ್ತಿದ್ದ. ನಿರ್ದಿಷ್ಟ ಲಕಷ್ಣಗಳುಳ್ಳ ವ್ಯಕ್ತಿಯೊಬ್ಬನ ಪಿತ್ತಕೋಶವನ್ನು ಬಿಟ್ಟರೆ ರಾಜ ಅನುಭವಿಸುತ್ತಿದ್ದ ನೋವಿಗೆ ಪರಿಹಾರವೇ ಇಲ್ಲವೆಂಬುದಾಗಿ ವೈದ್ಯರ ತಂಡವೊಂದು ತೀರ್ಮಾನಿಸಿತು. ಅಂಥ ವ್ಯಕ್ತಿಯನ್ನು ಹುಡುಕುವಂತೆ ರಾಜ ತನ್ನ ಸೇವಕರಿಗೆ ಆಜ್ಞಾಪಿಸಿದ. ಪಕ್ಕದ ಹಳ್ಳಿಯಲ್ಲಿಯೇ ಅಗತ್ಯವಾದ ಎಲ್ಲ ಲಕ್ಷಣಗಳೂ ಇದ್ದ ಆದಿಲ್‌ ಎಂಬ ಹುಡುಗನನ್ನು ಅವರು ಪತ್ತೆಹಚ್ಚಿದರು. ರಾಜನು ಅವನ ತಂದೆತಾಯಿಯರನ್ನು ಬರಹೇಳಿ ಅವರನ್ನು ಸಂತೋಷಪಡಿಸಬಲ್ಲ ಅನೇಕ ಉಡುಗೊರೆಗಳನ್ನು ನೀಡಿದ. ಬಲು ಉನ್ನತ ಶ್ರೇಣಿಯ ನ್ಯಾಯಾಧೀಶನೊಬ್ಬ ರಾಜನ ಪ್ರಾಣ ಉಳಿಸಲೋಸುಗ … Read more