ಪಂಚಮಿ ಹಬ್ಬಾ ಉಳದಾವ ದಿನ ನಾಕ, ಅಣ್ಣಾ ಬರಲೇಯಿಲ್ಲಾ ಕರಿಯಾಕ: ಸುಮನ್ ದೇಸಾಯಿ

ಶ್ರಾವಣ ಮಾಸಾ ಬಂತಂದ್ರ ಅತ್ತಿ ಮನ್ಯಾಗಿನ ಹೆಣ್ಣಮಕ್ಕಳಿಗೆ ಎನೊ ಒಂಥರಾ ಹುರಪಿರತದ,ಪಂಚಮಿ ಹಬ್ಬಕ್ಕ ತವರುಮನಿಗೆ ಹೋಗೊ ಸಂಭ್ರಮದಾಗ ಭಾಳ ಖುಷಿಲೆ ತನ್ನ ಕರಿಲಿಕ್ಕೆ ಬರೊ ಅಣ್ಣ ಅಥವ ತಮ್ಮನ ದಾರಿಕಾಯಕೊತ,     "ಪಂಚಮಿ ಹಬ್ಬಾ ಉಳದಾವ ದಿನ ನಾಕ,,,  ಅಣ್ಣಾ ಬರಲೇಯಿಲ್ಲಾ ಕರಿಯಾಕ……….." ಅಂತ ತನ್ನೊಳಗ ತಾನ ಹಾಡು ಹಾಡಕೊತ,ತವರುಮನ್ಯಾಗಿನ್ ಪಂಚಮಿ ಹಬ್ಬದ ಸಂಭ್ರಮನ ತನ್ನ ಗೆಳತ್ಯಾರಿಗೆ ಹೆಳ್ಕೊತಿರತಾಳ."  "ನನ್ನ ತವರಲ್ಲಿ ಪಂಚಮಿ ಭಾರಿ,.  ಮಣ ತೂಕದ ಬೆಲ್ಲಾ ಕೊಬ್ಬರಿ,. ಅಳ್ಳು ಅವಲಕ್ಕಿ, ತಂಬಿಟ್ಟು ಸೂರಿ,,. … Read more

ದ್ರೌಪದಿಗೇಕೆ ಪತಿಗಳೈವರು??: ಸುಮನ್ ದೇಸಾಯಿ

ನಮ್ಮ ಭಾರತದ ಸಂಸ್ಕೃತಿಯು ಬಹಳಷ್ಟು ಪುರಾಣ, ಪುಣ್ಯ ಕಥೆಗಳ ನೆಲೆಗಟ್ಟಿನ ಮ್ಯಾಲೆ ನಿಂತದ. ಪ್ರಾಚೀನ ಪೌರಾಣಿಕ ಕಾಲದೊಳಗಿನ ವಿಚಾರಗಳನ್ನ ಸೂಷ್ಮವಾಗಿ ಪರಿಶೀಲಿಸಿದಾಗ ಎಲ್ಲ ಘಟನೆ, ಅವತಾರಗಳ ಹಿಂದೆನು ಒಂದೊಂದು ಉದ್ದೇಶದ ನಿಮಿತ್ತ ಕಾಣಿಸ್ತದ. ಒಂದೊಂದ ಘಟನೆನು ಮುಂದ ದೊಡ್ಡದೊಂದು ಇತಿಹಾಸನ ಸೃಷ್ಠಿ ಮಾಡೇದ. ಒಂದೊಂದು ಮಹಾ ಇತಿಹಾಸದ ಹಿಂದ ಕಥೆ, ಉಪಕಥೆಗಳ ಜೋಡಣೆಯ ಹಂದರನ ಅದ. ಮೂಲಪೂರುಷನ ಅವತಾರದ ಹಿಂದನು ಒಂದೊಂದು ನಿಮಿತ್ತನ ಅದ ಅನ್ನೊದು ಜಗಪ್ರಸಿದ್ಧ. ಒಂದ ದಿನಾ ಹಿಂಗ ಕೂತಾಗ ಯೋಚನೆ ಬಂತು ಅದೇನಂದ್ರ … Read more

ಬೇಸಿಗೆಯ ರಜೆ(ಸಜೆ): ಸುಮನ್ ದೇಸಾಯಿ

ಬ್ಯಾಸಗಿ ರಜಾ ಮುಗಿದು ಮತ್ತ ಶಾಲಿ ಶುರುವಾದ್ವು. ಇಷ್ಟು ದಿನದ ರಜೆಯ ಮಜಾ ಅನುಭವಿಸಿದ ಮಕ್ಕಳಿಗೆ ಶಾಲೆಗೆ ಹೋಗಲಿಕ್ಕೆ ಎನೊ ಒಂದು ಹುರುಪು ಇರ್ತದ. ಹೊಸಾ ಪುಸ್ತಕ, ಹೊಸಾ ಬ್ಯಾಗು, ಮತ್ತ ಇಷ್ಟು ದಿನ ಬಿಟ್ಟ ಇದ್ದ ಗೆಳೆಯ/ಗೆಳತಿಯರನ್ನ ನೋಡೊ ಕಾತುರ, ಸೂಟಿಯೊಳಗ ತಾವು ಏನೆನೆಲ್ಲ ನೋಡಿದ್ದು, ಆಟ ಆಡಿದ್ದು ಎಲ್ಲ ಸುದ್ದಿಯನ್ನು ಸ್ನೇಹಿತರ ಮುಂದ ಹೇಳ್ಕೊಳ್ಳೊ ಕಾತುರ ಇರ್ತದ.   ಆದ್ರ ಈಗಿನ ಮಕ್ಕಳಿಗೆ ರಜೆನು ಸಜೆ ಹಂಗಿರ್ತದ ಅಂತ ನಂಗ ಅನಿಸ್ತದ. ನಾ ಭಾಳ … Read more

ನನ್ನೊಳಗಿನ ಗೆಳತಿ: ಸುಮನ್ ದೇಸಾಯಿ

    ಅದೊಂದು ಸುಂದರ ಸಂಜೆ. ಪಾರ್ಕಿನೊಳಗ ಅವರಿಗಾಗಿ ಕಾಯಿಕೊಂಡು ಕೂತಿದ್ದೆ. ಇಗೀಗಷ್ಟೆ ಅವರ ಪರಿಚಯ ಆಗಿತ್ತು. ದಿನಾಲು ವಾಕಿಂಗ್ ಬರ್ತಿದ್ರು. ಸುಮಾರು ೫೩ ರ ಅಂಚಿನ ಅವರು, ಅದ್ರ ಹಂಗ ಅನಿಸ್ತಿದ್ದಿಲ್ಲ. ನಲವತ್ತೈದರ ಆಸು ಪಾಸು ಅನಿಸ್ತಿತ್ತು. ತಿಳಿಯಾದ ಬಣ್ಣ, ಸ್ವಲ್ಪ ಕೋಲೆನ್ನಬಹುದಾದ ಮುಖ, ಕಂಡು ಕಾಣದಂತೆ ನಗುವ ಕಣ್ಣುಗಳು, ಧೀಮಂತ ಮುಖಕ್ಕೆ ಒಪ್ಪುವ ಕನ್ನಡಕ. ಸ್ನೆಹಮಯವಾದ ಸಂಯಮದಿಂದ ಕೂಡಿದ ಮಾತುಗಳು. ಇತ್ತೀಚಿಗ್ಯಾಕೊ ಮನಸ್ಸಿಗೆ ಹತ್ತರ ಆಗ್ಲಿಕತ್ತಿದ್ರು. ಆವತ್ತ ಅವರನ್ನ ನೋಡಿದ ಮೊದಲ ದಿನ, ನನ್ನ … Read more

ಗಂಡ ಒಬ್ಬ ಸೆನ್ಸಿಟಿವ್ ಗೆಳೆಯನಂತೆ ಯಾಕಿರೋಲ್ಲ/ಯಾಕಾಗೋಲ್ಲ?: ಸುಮನ್ ದೇಸಾಯಿ

ಕಪ್ಪುಗಟ್ಟಿರುವ ಆಕಾಶ, ಹೆಪ್ಪುಗಟ್ಟಿರುವ ವಿಷಾದವನ್ನು ಹೆಚ್ಚಿಸುವ ಬಣ್ಣ. ಟೆರೇಸ್ ಮೇಲೆ ಒಬ್ಬಳೇ ಕುಳಿತಿದ್ದೇನೆ. ಮಾತನಾಡುವಾಸೆ. ಅವನು ಜತೆಗಿಲ್ಲ. ಮತ್ತದೇ ಬೇಸರ. ಅದೇ ಸಂಜೆ, ಅದೇ ಏಕಾಂತ. ಅದೇನೋ ಗೊತ್ತಿಲ್ಲ, ಸಂಜೆಗೂ ಬೇಸರಕ್ಕೂ ಎಲ್ಲಿಲ್ಲದ ನಂಟು. ಸಂಜೆಯಾಗುತ್ತಿದ್ದಂತೆ ಮನಸ್ಸು ಮಾತನಾಡಲು ಹಾತೊರೆಯುತ್ತದೆ. ಮನಸ್ಸಿನ ಮಾತು ಕೇಳಿಸಿಕೊಳ್ಳುವವರಿಗಾಗಿ ಹುಡುಕಾಡುತ್ತದೆ. ಮೊಬೈಲ್ನಲ್ಲಿರೋ ಕಾಂಟ್ಯಾಕ್ಟ್ ನಂಬರುಗಳನ್ನೆಲ್ಲಾ ತಡಕಾಡುತ್ತೇನೆ. ಒಬ್ಬರೂ ಸಿಗಲೊಲ್ಲರು. ಹಾಗೆ ಸಿಕ್ಕಿದವರೆಲ್ಲರ ಜತೆ, ಇದ್ದಬದ್ದವರ ಜತೆ ಮನಸ್ಸನ್ನ ಬಿಚ್ಚಿಡಲಾಗುತ್ತದಾ, ಹಂಚಿಕೊಂಡು ಹಗುರಾಗಬಹುದಾ? ಇಲ್ಲವೇ ಇಲ್ಲ. ಅದಕ್ಕೂ ಒಂದು ವಿಶ್ವಾಸಾರ್ಹತೆ ಬೇಕು. ಸ್ನೇಹದ … Read more

ಪಥ್ಥರ್ ದಿಲವಾಲೆ ಫಡ್ಡು (ಗುಂಡಪಂಗಳಾ): ಸುಮನ್ ದೇಸಾಯಿ

ಹೋದವಾರ ಸಂಜಿಮುಂದ ನಮ್ಮ ತಮ್ಮ ತನ್ನ ಗೆಳೆಯಾ ರಮ್ಯಾ(ರಮೇಶ)ನ್ನ ಕರಕೊಂಡ ನಮ್ಮನಿಗೆ ಬಂದಿದ್ದಾ. ಅವತ್ತ ರವಿವಾರಾ ಮುಂಝಾನೆ ದ್ವಾಸಿ ಮಾಡಿದ್ದೆ. ಇನ್ನು ಹಿಟ್ಟು ಉಳದಿತ್ತು. ನನ್ನ ತಮ್ಮಾ ಅಕ್ಕಾ ಹಸಿವ್ಯಾಗಲಿಕತ್ತದ ಎನರೆ ಮಾಡಿಕೊಡು ಅಂದಾ ಅದಕ್ಕ ನಾ " ತಡಿ ಮುಂಝಾನಿದು ಹಿಟ್ಟ ಅದ ಬಿಸಿ ಬಿಸಿ ಫಡ್ಡ ಮಾಡಿಕೊಡತೇನಿ ಅಂದೆ" ಅದಕ್ಕ ಅವನ ಗೇಳೆಯಾ ಘಾಬರ್ಯಾಗಿ "ಅಕ್ಕಾರ ನಿಮಗ ಕೈ ಮುಗಿತೇನಿರಿ ನೀವ ಎನ್ಕೊಟ್ರು ತಿಂತೇನಿ ಆದ್ರ ಫಡ್ಡ ಮಾತ್ರ ಕೋಡಬ್ಯಾಡ್ರಿ ಅಂದು ಮಾರಿ ಹುಳ್ಳಗ … Read more

ಬೆಳಕಿನ ಕಡೆಗೆ: ಸುಮನ್ ದೇಸಾಯಿ

ಭಾಳ ವರ್ಷದ್ದ ಮ್ಯಾಲೆ ನಮ್ಮ ಅಮ್ಮನ ತವರೂರಾದ ಹಳ್ಳಿಗೆ ಹೊಗಬೇಕಾದ ಪ್ರಸಂಗ ಬಂತು. ಸಣ್ಣಂದಿರತ ಅಲ್ಲೆ ಆಡಿ ಬೆಳೆದು ದೊಡ್ಡವರಾದ ಸಿಹಿ ನೆನಪುಗಳ ಗಂಟನ ಇತ್ತು. ಊರು ಹೇಂಗೆಂಗ ಹತ್ರ ಬರಲಿಕತ್ತು ಹಂಗಂಗ ಹಳೆನೆನಪುಗಳು ತಾಜಾ ಆಗಲಿಕ್ಕತ್ತುವು. ಊರು ಅಂದಕೂಡಲೆ ಪ್ರೀತಿಯ ಗೆಳತಿ ಸುಧಾ ನೆನಪಾಗಲಿಕತ್ತಳು.  ಗಂಡ, ಮನಿ ಮಕ್ಕಳು ಸಂಸಾರ ಅಂತ ನಂದೆ ಆದಂಥಾ ಲೋಕದೊಳಗ ಮುಳುಗಿ ಹೋಗಿದ್ದೆ. ಹಿಂಗಾಗಿ ಊರಿನ ಯಾವ ಸುದ್ದಿಗೊಳು ಗೊತ್ತಾಗ್ತನ ಇರಲಿಲ್ಲ. ಆವಾಗೊಮ್ಮೆ ಇವಾಗೊಮ್ಮೆ ಊರಿನ ಸುದ್ದಿ ಕಿವಿಗೆ ಬಿಳತಿದ್ವು. … Read more

ಗಯೆಯೊ-ಮಾಯೆಯೊ: ಸುಮನ್ ದೇಸಾಯಿ

ಮೊನ್ನೆ ಕಾಶಿಯಾತ್ರೆಗೆ ಹೋದಾಗ, ಪಿತೃಕಾರ್ಯ ಮಾಡಿಸಲಿಕ್ಕಂತ ’ಗಯಾ’ ಕ್ಷೇತ್ರಕ್ಕ ಹೋದ್ವಿ. ಅಲ್ಲೆ ದೂರ ದೂರದಿಂದ ಬಂದ ಜನರನ್ನ ನೋಡಿ ಆಶ್ಚರ್ಯ ಆಗಿತ್ತು. ’ಗಯಾ ತೀರ್ಥ’ ಅಂತ ಕರೆಸಿಕೊಳ್ಳೊ ಈ ಕ್ಷೇತ್ರದೊಳಗ ಪಿತೃಗಳನ್ನುದ್ದೇಶಿಸಿ ಶ್ರಾದ್ಧ ದಾನಾದಿಗಳನ್ನ ಮಾಡೊದರಿಂದ ಪಿತೃದೇವತೆಗಳಿಗೆ ಅಕ್ಷಯ ಲೋಕ ಪ್ರಾಪ್ತಿ ಆಗ್ತದ, ಮತ್ತ ಅವರು ಸಂತುಷ್ಟರಾಗಿ ಆಯುರಾರೋಗ್ಯ, ಐಶ್ವರ್ಯಾದಿಗಳನ್ನ ಕೊಡ್ತಾರಂತ ಪ್ರತೀತಿ ಅದ.        ಉರಿಯೊ ಬಿಸಿಲೊಳಗ, ’ಗಯೆಯ’ ಆ ಮಹಾಸ್ಮಶಾನದೊಳಗ ಸುತ್ತಲು ಸುಡುವ ಚಿತೆಗಳ ನಡುವ ಕಾಲುರಿ ಸಹಿಸಿಕೊಳ್ತಾ, ಶ್ರಾದ್ಧಾದಿಕರ್ಮಗಳನ್ನ ಮಾಡಲಿಕ್ಕಂತ … Read more

ಬದುಕು ಜಟಕಾ ಬಂಡಿ, ವಿಧಿ ಅದರ ಮಾಲೀಕ: ಸುಮನ್ ದೇಸಾಯಿ

ನಸಿಕಲೆ ೫.೩೦ ಗಂಟೆ ಹೊತ್ತದು, ಬಾಗಲಾ ಬಾರಿಸಿದ ಸಪ್ಪಳಕ್ಕ ಎಚ್ಚರಾತು, ಶ್ರೀ ಬಂದ್ಲಂತ ಕಾಣಸ್ತದ ಅಂತ ಹೋಗಿ ಬಾಗಲಾ ತಗದೆ. ನೀರಿಕ್ಷಿಸಿದ ಪ್ರಕಾರ ಆಕಿನ ನಿಂತಿದ್ಲು.ಯಾಕೊ ಭಾಳ ಖಿನ್ನ ಆಗಿತ್ತು ಮುಖಾ.ಪ್ರಯಾಣದ ಆಯಾಸ ಇರಬಹುದು ಅಂತ ಸುಮ್ನಾದೆ. ಅಕಿ ಹೋಗಿ ಮುಖಾ ತೊಳ್ಕೊಂಡ ಬರೊದ್ರಾಗ,ಬಿಸಿ ಬಿಸಿ ಚಹಾ ಮಾಡ್ಕೊಂಡ ಬಂದು ಆಕಿಗೊಂದ ಕಪ್ಪ್ ಕೊಟ್ಟು ನಾನು ಆಕಿ ಮುಂದನ ಕುತೆ.ಆದ್ರು ಯಾಕೊ ಆಕಿ ಎನೊ ಚಿಂತಿ ಮಾಡಲಿಕತ್ತಾಳ ಅನಿಸ್ತು. ಯಾಕಂದ್ರ ನನ್ನ ರೂಮ್ ಮೇಟ್, ಸಹೊದ್ಯೋಗಿ,ನನ್ನ ಜೀವನದ … Read more

ಸುಖದ ವ್ಯಾಧಿ: ಸುಮನ್ ದೇಸಾಯಿ

ಮುಂಝಾನೆ ನಸುಕಿನ್ಯಾಗ ಮೂಲಿಮನಿ ನಿಂಗವ್ವನ ಕೋಳಿ ಕೂಗಿದ್ದ ಕೇಳಿ ’ಪಾರು’ ಗ ಎಚ್ಚರಾತು. ದಿನಾ ಹಿಂಗ ಒದರಿ ಒದರಿ ತಂಗಳ ನಿದ್ದಿ ಕೆಡಸತಿದ್ದ ಕೋಳಿಗೆ ಹಿಡಿಶಾಪಾ ಹಾಕಿ ಮತ್ತ ಹೊಚಕೊಂಡ ಮಲಗತಿದ್ದ ಪಾರು, ಇವತ್ತ ಹಂಗ ಮಾಡಲಿಲ್ಲ. ಆವತ್ತ ತನ್ನ ಪ್ರೀತಿಯ ಅಕ್ಕನ ಊರಿಗೆ ಹೋಗೊದಿತ್ತು. ಲಗು ಲಗು ಎದ್ದು ಮಾರಿ ತೊಳಕೊಂಡು, ಅಡುಗಿ ಮನಿಗೆ ಬಂದ್ಲು. ಆಗಲೆ ಅವ್ವ ಮಗಳ ಊರಿಗೆ ಬುತ್ತಿಗೆಂತ ರೊಟ್ಟಿ, ಪಲ್ಯಾ, ಸಜ್ಜಿಗಿ ವಡಿ, ಕೆಂಪಖಾರ, ಮೊಸರನ್ನ ಎಲ್ಲಾ ಮಾಡಿ ಮುಗಿಸಿ, … Read more

ಯಶಸ್ಸಿನ ಗುಟ್ಟು…ಅಧ್ಯವಸಾಯ: ಸುಮನ್ ದೇಸಾಯಿ

ನಾವು ಮಾನವ ಜನ್ಮ ತಳೆದಿದ್ದು ಒಂದೇ ರಾತ್ರಿಯಲ್ಲಲ್ಲ. ಯುಗಯುಗಾಂತರಗಳಲ್ಲಿ ಸುಮಾರು ಎಂಭತ್ನಾಕು ಕೋಟಿ ಜೀವರಾಶಿಯಾಗಿ ಪರಿವರ್ತನೆಯಾಗಿದ್ದೇವೆ,ಈ ಮಾನವ ಜನ್ಮ ಅತ್ಯಂತ ದುರ್ಲಭವಾದುದು. ನಮ್ಮ ಐದು ಬೆರಳುಗಳು ಹೇಗೆ ಸಮನಾಗಿರುವ್ದಿಲ್ಲವೋ ಹಾಗೆಯೇ ಪ್ರತಿ ಮನುಷ್ಯನ ಆಂತರಿಕ ಶಕ್ತಿಯು ಕೂಡಾ ಭಿನ್ನ ವಿಭಿನ್ನವಾಗಿರುತ್ತದೆ. ಭಗವಂತನ ದಿವ್ಯ ಸನ್ನಿಧಿಯಲ್ಲಿ ಏಕನಿಷ್ಠೆಯಿಂದ ಪ್ರಾರ್ಥನೆ ಮಾಡುವದರಿಂದ ನಮ್ಮಲ್ಲಿಯ ಆಂತರಿಕ ಶಕ್ತಿ ದ್ವಿಗುಣವಾಗುವದರ ಜೊತೆಗೆ ದೇಹಕ್ಕೆ ವಿಶೇಷ ಚೈತನ್ಯ ಲಭಿಸುತ್ತದೆ.ಹಾಗಂತ ಬರೀ ಮೂರೂ ಹೊತ್ತು ಭಗವಂತನ ಮುಂದೆ ಮಂಡಿಯೂರಿ ಪ್ರಾರ್ಥಿಸುವದರಿಂದ ಏನನ್ನು ಸಾಧಿಸಲು ಸಾಧ್ಯವಿಲ್ಲ. ನಾವುಗಳು … Read more

ಕಾಲದ ಚಕ್ರವು ತಿರುಗುವುದೊ ಜ್ವಾಕಿ,, ಮುಪ್ಪೆಂಬ ಶೈಶವ ಬರುವುದೊ ನಕ್ಕಿ: ಸುಮನ್ ದೇಸಾಯಿ

    ರವಿವಾರ ಸಂಜಿಮುಂದ ವಾಕಿಂಗ್‌ಗೆಂತ ಪಾರ್ಕಿಗೆ ಹೋಗಿದ್ದೆ. ಅಲ್ಲೆ ಒಂದ ಬೆಂಚಿನ ಮ್ಯಾಲೆ ವಯಸ್ಸಾದ ಇಬ್ಬರು ಅಜ್ಜಾ-ಅಜ್ಜಿ ಕೂತಿದ್ರು. ದಿನಾ ನೋಡತಿದ್ದೆ ಅವರನ್ನ. ಅವರನ್ನ ನೋಡಿ ಒಂಥರಾ ಖುಷಿನು ಆಗತಿತ್ತು. ಇಳಿವಯಸ್ಸಿನ್ಯಾಗ ಒಬ್ಬರಿಗೊಬ್ಬರು ಜೊಡಿಯಾಗಿ ದಿನಾ ಈ ಹೊತ್ತಿನ್ಯಾಗ ಆ ಪಾರ್ಕಿಗೆ ಬರತಿದ್ರು. ಅವತ್ತ ಅವರನ್ನ ಮಾತಾಡ್ಸಬೇಕನಿಸಿ ಹತ್ರ ಹೋಗಿ ಮಾತಾಡಿಸಿದೆ. ನಾ ಹಂಗ ಅವರ ಹತ್ರ ಹೋಗಿ ಮಾತಾಡ್ಸಿದ್ದು ಆ ದಂಪತಿಗಳಿಗೆ ಭಾಳ ಖುಷಿ ಆತು. ಹತ್ರ ಕೂಡಿಸಿಕೊಂಡು ಭಾಳ ಅಂತಃಕರಣದಿಂದ ಮಾತಾಡ್ಸಿದ್ರು. ಅವರ … Read more

ಚೈತ್ರದ ಯುಗಾದಿ ಸಂಭ್ರಮ: ಸುಮನ್ ದೇಸಾಯಿ

ಮಾಸಗಳೊಳಗ ಮೊದಲನೆ ಮಾಸ ಚೈತ್ರ ಮಾಸ, ಅದರೊಳಗ ಬರೊ ಸಂವತ್ಸರದ ಮೊದಲನೆ ಹಬ್ಬ ಯುಗಾದಿ. ಯುಗಾದಿ ಅಂದಕೂಡಲೆ ನೆನಪಾಗೊದು, ಬೇವು ಬೆಲ್ಲ. ಈ ಬೇವು ಬೆಲ್ಲದ ಸಂಪ್ರದಾಯ ಯಾವಾಗ ಶುರು ಆತೊ ಗೊತ್ತಿಲ್ಲಾ, ಆದ್ರ ಭಾಳ ಅರ್ಥಪೂರ್ಣ ಪದ್ಧತಿ ಅದ. ಜೀವನದಾಗ ಬರೋ ಸುಖ-ದುಖಃ ಸಮಾನಾಗಿ ತಗೊಂಡು, ಧೈರ್ಯಾದಿಂದ ಎನಬಂದ್ರುನು ಎದರಸಬೇಕು ಅನ್ನೊ ಸಂದೇಶವನ್ನ ಸಾರತದ.  ಚೈತ್ರ ಮಾಸ ಅಂದ್ರ ಫಕ್ಕನ ನೆನಪಾಗೊದು ಹಸಿರು, ಯಾಕಂದ್ರ ಚಳಿಗಾಲದಾಗ ಬರಡಾಗಿ ನಿಂತ್ತಿದ್ದ ಗಿಡಾ, ಮರಾ, ಬಳ್ಳಿಗೊಳು ಚಿಗುರೊ ಕಾಲಾ. ನಂಗಿನ್ನು … Read more

ಮನೆಯೆ ಮೊದಲ ಪಾಠಶಾಲೆ: ಸುಮನ್ ದೇಸಾಯಿ

ಮೊನ್ನೆ ಗದಗ ಜಿಲ್ಲೆಯ ೬ನೇ ಸಾಹಿತ್ಯ ಸಮ್ಮೆಳನಕ್ಕ ಹೋಗಿದ್ದೆ. ಅಲ್ಲೆ ಮಕ್ಕಳ ಕಾವ್ಯವಿಹಾರ ಅನ್ನೊ ಒಂದು ಮಕ್ಕಳ ಕವಿಗೊಷ್ಠಿ ಎರ್ಪಡಿಸಿದ್ರು. ಮಕ್ಕಳು ಏನ ಕವಿತೆ ಬರಿಬಹುದು ಅಂತ ಕೂತುಹಲದಿಂದ ನೋಡ್ಲಿಕತ್ತಿದ್ದೆ. ವೇದಿಕೆ ಮ್ಯಾಲೆ ಒಂದ ಹತ್ತು ಮಕ್ಕಳಿದ್ರು. ಕವಿಗೊಷ್ಠಿ ಶುರುವಾದ ಮ್ಯಾಲೆ ಅ ಮಕ್ಕಳ ಪ್ರತಿಭೆ ನೋಡಿ ಆಶ್ಚರ್ಯ ಅನಿಸ್ತು. ಒಬ್ಬರಕಿಂತಾ ಒಬ್ಬರು ಸುಂದರವಾದ ಕವನಗಳನ್ನ ರಚಿಸಿದ್ರು. ಆ ಕವನಗಳಳೊಗ ಬೆರಗು, ಸೊಗಸು, ಮತ್ತ ಪ್ರಸ್ತುತ ಸಮಾಜದಲ್ಲಿಯ ಸಮಸ್ಯೆಗಳ ನೆರಳಿತ್ತು. ಮಕ್ಕಳ ಈ ಸೂಷ್ಮ ಗ್ರಹಣ ಶಕ್ತಿ … Read more

ಮರೆಯಾಗುತ್ತಿರುವ ಜಾನಪದ ಸೊಗಡು: ಸುಮನ್ ದೇಸಾಯಿ

  ಇಂದಿನ ದಿವಸಗಳೊಳಗ ನವ್ಯಕಾವ್ಯಗಳ ಆರ್ಭಟಗಳ ಅಡಿಯೊಳಗ ಜಾನಪದ ಕಾವ್ಯಗಳ ಸೊಗಡು ಮರಿಯಾಕ್ಕೊತ ಹೊಂಟದ. ಈ ಜನಪದ ಸಿರಿ ಹೆಚ್ಚಾಗಿ ಹಳ್ಳಿಗೊಳೊಳಗ ನೋಡಲಿಕ್ಕೆ ಸಿಗತದ. ಹಳ್ಳಿಗಳೊಳಗ ಜೀವನ ಶೂರುವಾಗೊದ ಈ ಜನಪದ ಸೊಗಡಿನ ಹಾಡುಗಳಿಂದ. ಹಳ್ಳಿ ಜನರಲ್ಲೆ ಅಕ್ಷರಜ್ಞಾನ ಇಲ್ಲಂದ್ರು ಜೀವನದ ಅನುಭವಗೊಳ ಲಾಲಿತ್ಯವನ್ನ ಪದಕಟ್ಟಿ ಹಾಡುವ ಕಲೆ ಇರ್‍ತದ. "ಮುಂಝಾನೆ ಎದ್ದು ನಾ ಯಾರನ್ನ ನೆನೆಯಲಿ" ಅಂತ ದೈವಿಕ ಭಾವನೆಯಿಂದ ದಿನ ನಿತ್ಯದ ಬದುಕಿನ ಬಂಡಿ ಎಳಿಲಿಕ್ಕೆ ಅನುವಾಗ್ತಾರ. ದೈನಂದಿನ ಕೆಲಸಗಳಿಗೆ ಜಾನಪದದ ಸಾಹಿತ್ಯದ ರೂಪ ಕೊಟ್ಟು … Read more

ಕಳ್ಳೆ-ಮಳ್ಳೆ ಕಪಾಟ ಮಳ್ಳೆ: ಸುಮನ್ ದೇಸಾಯಿ

ಮನ್ನೆ ರವಿವಾರ ಮಧ್ಯಾನಾ ಉರಿ ಉರಿ ಬಿಸಲ ಝಳಾ ತಡಕೊಳ್ಳಾರ್ದಕ್ಕ ಬಾಗಿಲಿಗೆ ತಲಿಕೊಟ್ಟ ಮಲಕೊಂಡ್ಡಿದ್ದೆ, ಹಿಂಗ ಜಂಪ ಹತ್ತ್ಲಿಕತ್ತಿತ್ತು ಅಷ್ಟರಾಗ ತಂಪಸೂಸ ಗಾಳಿ ಬಿಸಲಿಕತ್ತು. ಕಣ್ಣ ತಗದು ನೋಡೊದ್ರಾಗ ಮಳಿ ಬರೊಹಂಗಾಗಿ ಜೋರ ಮಾಡ ಹಾಕಿತ್ತು. ಇನ್ನೆನು ಹಿತ್ತಲಕ್ಕ ಹೋಗಿ ಒಣಗಿದ್ದ ಅರಬಿ ತಕ್ಕೊಂಡ ಬರೊದ್ರಾಗ ಹನಿ ಹನಿ ಮಳಿ ಶುರು ಆಗೆಬಿಡ್ತು. ನೋಡ್ ನೋಡೊದ್ರಾಗ ದಪ್ಪ ದಪ್ಪ ಹನಿ ಜೊಡಿ ಆಣಿಕಲ್ಲು ಬಿಳಿಕ್ಕತ್ವು.ಕಣ್ಣ ಮುಚ್ಚಿ ಕಣ್ಣ ತಗಿಯೋದ್ರಾಗ ಅಂಗಳದ ತುಂಬ ಬೆಳ್ಳಗ ಮಲ್ಲಿಗಿ ಹೂವಿನ ರಾಶಿ … Read more

ಜಾಗತಿಕರಣದಲ್ಲಿ ಮಹಿಳೆಯ ಸ್ಥಿತಿ-ಗತಿ: ಸುಮನ್ ದೇಸಾಯಿ

             ಜಾಗತಿಕರಣ ಪ್ರವೇಶಿಸಿದ ಈ ಹೊತ್ತನೊಳಗ ಭಾರತದ ಮಹಿಳೆಯರ ಸ್ಥಿತಿಗತಿಯೊಳಗ  ಇತ್ಯಾತ್ಮಕ ಬದಲಾವಣೆಗಳಾಗ್ಯಾವೆನು ಅನ್ನೊ ಪ್ರಶ್ನೆಗೆ ಸಮರ್ಪಕವಾದ ಉತ್ತರ ಸಿಗೊದೆಯಿಲ್ಲಾ. ಯಾಕಂದ್ರ ಜಾಗತಿಕರಣ ಯಜಮಾನ ಸಂಸ್ಕೃತಿಯನ್ನ ಪೋಷಿಸಲಿಕತ್ತದ. ಗಂಡಸಿಗೆ ಮುಕ್ತವಾದ ವಾತಾವರಣ ಕಲ್ಪಿಸಿಕೊಟ್ಟು, ಹೆಣ್ಣನ್ನ ಮತ್ತದೆ ಹಳೆಯ ಚೌಕಟ್ಟಿನೊಳಗ ಕೂಡಿಸೊ ಪ್ರಯತ್ನ ನಡದದ.  ನಮ್ಮ ದೇಶದ ಬಹಳಷ್ಟು ಕಾನೂನು ಮತ್ತ ಕಾಯಿದೆಗಳು ಶೋಷಿತರ, ಮಹಿಳೆಯರ ಪರವಾಗಿ ಅವ ಆದ್ರ ಅವೆಲ್ಲಾ ಕಾಗದದ ಮ್ಯಾಲಿನ ಹುಲಿಗಳಾಗಿನ ಉಳಕೊಂಡಾವ. ಸಂವಿಧಾನ ಬಂದು ಇಷ್ಟು … Read more

ಕಾಣುವ ಅನಾಚಾರಕ್ಕೆ, ಕಾಣದ ಅಸಮಂಜಸ ಉಪಮೆಗಳೇಕೆ?: ಸುಮನ್ ದೇಸಾಯಿ

   ಈಗೀಗ ದೇಶದೊಳಗ ಅತ್ಯಾಚಾರದ ಪ್ರಕರಣಗೊಳು ಅತೀ ಸರ್ವೆ ಸಾಮಾನ್ಯ ಅನ್ನೊ ಹಂಗ ನಡಿಲಿಕತ್ತಾವ. ಮನುಷ್ಯನ ಮನಸ್ಥಿತಿ ಎಷ್ಟು ವಿಕೃತಿಗಳ ಕಡೆಗೆ ವಾಲೆದಂದ್ರ ಇವತ್ತ ಸಂಬಂಧಗಳ ಪವಿತ್ರತೆಯನ್ನು ಸುದ್ಧಾ ಮರೆತು ಮನುಷ್ಯ ಮೃಗಗಳಂಗ ವರ್ತಿಸ್ಲಿಕತ್ತಾನ. ಇಂಥಾ ವಿಕೃತ ಮನಸಿಗೆ, ಸಣ್ಣ ಮಕ್ಕಳು, ಅಕ್ಕ ತಂಗಿ, ಕಡಿಕ ತಾ ಹಡದ ಮಗಳು ಅನ್ನೊದನ್ನು ಮರೆತು ಕಾಮಾಂಧ ಆಗ್ಯಾನ. ಗಾಂಧೀ ಅಜ್ಜನ ರಾಮ ರಾಜ್ಯದ ಕನಸು ನೆನಸಾಗೊ ಯಾವ ಲಕ್ಷಣಗಳು ಈ ಯುಗಾಂತ್ಯದ ತನಕಾ ಇಲ್ಲಾ ಅನಿಸ್ತದ.  ರಾಮ ರಾಜ್ಯ … Read more

ಮಸಣದಲ್ಲಿ ಮಿಲನ: ಸುಮನ್ ದೇಸಾಯಿ

ಫೆಬ್ರುವರಿ ತಿಂಗಳ ಒಂದು ಸಂಜೆ. ಇತ್ಲಾಗ ಬ್ಯಾಸಗಿನು ಅಲ್ಲ, ಅತ್ಲಾಗ ಚಳಿಗಾಲನು ಅಲ್ಲಾ ಅಂಥ ದಿನಗಳವು. ಒಂಥರಾ ನಸುಸೆಖೆ ಬರೆತ ತಂಪಿನ ವಾತಾವರಣ. ಹುಣ್ಣಿವಿ ಇತ್ತಂತ ಕಾಣಸ್ತದ ಸಂಜಿ ಸರಿಧಂಗ ಬೆಳದಿಂಗಳ ಹೂವು ಹಾಸಲಿಕತ್ತಿತ್ತು. ಊರ ಹೊರಗಿನ ಸುಡಗಾಡಿನ್ಯಾಗ ಒಂದ ನಮೂನಿ ಅತೃಪ್ತಭಾವದ ತಂಗಾಳಿಯೊಂದು ಮಂದವಾಗಿ ಬಿಸಲಿಕ್ಕೆ ಶೂರುವಾತು. ಮಸಣದೊಳಗ ಹರಡಿದ್ದ ತರಗೆಲಿಗೊಳು ಹವರಗ ಸರಿದಾಡಲಿಕತ್ವು. ಸೂಂಯ್ಯನ್ನೊ ಸುಳಿಗಾಳಿ ಮಲಗಿದ ಆತ್ಮಗಳನ್ನ ಎಬ್ಬಿಸೊ ಅಲಾರಾಂನಂಗ ಅನಿಸ್ತಿತ್ತು. ಅದಕ್ಕಾಗಿನ ಕಾಯ್ಲಿಕತ್ತಿತ್ತು ಅನ್ನೊಹಂಗ ಸುಡಗಾಡಿನ ನಡುವಿದ್ದ ಸಮಾಧಿಯಿಂದ ಒಂದು ಆಕೃತಿ … Read more

ಕಾಲೇಜಿನ ಆ ದಿನಗಳು: ಸುಮನ್ ದೇಸಾಯಿ

ನೆನಪುಗಳ ಹಾರದ ಗುಚ್ಛವನ್ನು ಹೇಂಗ ಬಿಡಸಬೇಕೊ ತಿಳಿಯಂಗಿಲ್ಲ,.. ಯಾವ ಎಳಿ ಹಿಡದರು ಇದ ಮೊದಲು ಇದ ಮೊದಲು ಅನಿಸ್ತದ. ಹೀಂಗ ಒಂದ ದಿನಾ ಸಂಜಿ ಮುಂದ ಮನಿ ಹತ್ರ ನ ಇದ್ದ ಪಾರ್ಕಿಗೆ ವಾಕಿಂಗ ಹೋಗಿದ್ದೆ. ನನ್ನ ಮಗ ಮತ್ತು ಮಗಳು ಆಟ ಆಡಲಿಕತ್ತಿದ್ರು, ಸ್ವಲ್ಪ ಹೊತ್ತು ಅವರ ಜೊತಿಗೆ ಆಡಿ ಬಂದು ಅಲ್ಲೇ ಇದ್ದ ಒಂದು ಬೇಂಚ್ ಮ್ಯಾಲೆ ಕುತೆ. ಎಷ್ಟು ಛಂದ ಬಾಲ್ಯ ಅಲ್ಲಾ? ಯಾವ ಕಪಟತನ ಇರಂಗಿಲ್ಲಾ.ಎಷ್ಟ ಹಿತಾ ಇರತದ ಗತಿಸಿಹೊದ ನೆನಪುಗಳನ್ನು … Read more

ಬಾದಾಮಿಯ ಬನಶಂಕರಿ ಜಾತ್ರಿ ಸಂಭ್ರಮ: ಸುಮನ್ ದೇಸಾಯಿ

      'ಬನದಹುಣ್ಣಿಮಿ’ ಮುಂದ ಬನಶಂಕರಿ ಜಾತ್ರಿ ಭಾಳ ದೊಡ್ಡ ಪ್ರಮಾಣದಾಗ ಆಗತದ, 1 ತಿಂಗಳ ತನಕಾ ಇರ್ತದ,ಎಲ್ಲೆಲ್ಲಿಂದೊ ಜನಾ ಬರ್ತದ,ನೋಡಬೇಕ ಆ ಛಂದಾನ, ಸುತ್ತಮುತ್ತಲ ಹಳ್ಳ್ಯಾಗಿನ ಮಂದಿ ಬಂಡಿ ಕಟಗೊಂಡ ಜಾತ್ರಿ ಮಾಡಲಿಕ್ಕೆ ಬರತಾರ. ಬಂಡಿಯೊಳಗ ವ್ಯವಸ್ಥಾ ಹೆಂಗಿರತದ ಗೊತ್ತೇನ ಈಗಿನ ನಿಮ್ಮ ವಿಮಾನದಾಗ ಹೊದ್ರು ಅದರಷ್ಟ ಆರಾಮ ಅನಸಂಗಿಲ್ಲ, ಬಂಡ್ಯಾಗ ಮೆತ್ತಗ ಹುಲ್ಲ ಹಾಸಿ ಮ್ಯಾಲೆ ಜಮಖಾನಿ ಹಾಸಿ ಕುಡಲಿಕ್ಕೆ ಎಷ್ಟ ಮಸ್ತ ಮೆತ್ತಗ ಹಾಸಿಗಿ ಮಾಡಕೊಂಡಿರತಾರ ಮತ್ತ ಅಡಗಿ ಮಾಡಲಿಕ್ಕೆ ಎನೇನು … Read more

ಗೊಂಜಾಳ ಮಾರೊ ಹುಡುಗ: ಸುಮನ್ ದೇಸಾಯಿ ಅಂಕಣ

ಎಷ್ಟೊ ವರ್ಷಗಳ ಮ್ಯಾಲೆ ಅಜ್ಜಿ ಊರಿಗೆ ಬಂದಿದ್ದೆ. ಖುಷಿ ಆಗಿತ್ತ ಆಕಿಗೆ ನನ್ನಕಿಂತಾ, ಮರಿಮೊಮ್ಮಕ್ಕಳನ್ನ ನೋಡಿ. ನನ್ನ ಮದವಿ ಆದಮ್ಯಾಲೆ ಬಂದಿದ್ದೇನ ಇಲ್ಲಾ ನಾನು. ಆಡಿಬೆಳೆದ ಊರಿನ ಮಣ್ಣಿನ ವಾಸನಿಗೆ ಮನಸು ಅರಳಿತ್ತು. ನನಗ ಅಜ್ಜಿ ಊರಾಗ ಭಾಳ ಮಂದಿ ಗೇಳತ್ಯಾರ ಇದ್ರು. ಎಷ್ಟು ನಕ್ಕು ನಲಿತಿದ್ವಿ ದಿನಾಪೂರ್ತಿ. ವಾಪಸ್ ಊರಿಗೆ ಹೋಗಬೇಕಾದ್ರ ಮುಂದಿನ ಸರತೆ ಬರೊತನಕಾ ಆಗೊವಷ್ಟು ಖುಷಿಯ ಕ್ಷಣಗಳ ನೆನಪಿನ ದೊಡ್ಡ ಗಂಟನ್ನ ಮನಸಿನ್ಯಾಗ ಹೊತಗೊಂಡ ಹೋಗ್ತಿದ್ದೆ. ಅದನ್ನೆಲ್ಲಾ ಈಗ ನೆನಪ ಮಾಡಕೊಂಡ್ರ ಎಷ್ಟ … Read more

ಸತ್ತವರ ಬಾಯಾಗ ಮಣ್ಣು-ಇದ್ದವರ ಬಾಯಾಗ ಹೋಳಿಗಿ-ತುಪ್ಪಾ: ಸುಮನ್ ದೇಸಾಯಿ

ಈಗ ಸ್ವಲ್ಪ ದಿವಸದ್ದ ಹಿಂದ ಒಂದರಮ್ಯಾಲೊಂದ ಗಣ್ಯರ ನಿಧನದ ಸುದ್ದಿ ಕೇಳಿದ್ವಿ. ಒಂದ ಘಳಿಗಿ ಹಿಂಗಾಗಬಾರದಿತ್ತು ಅನಿಸಿದ್ರು, ರಜಾ ಸಿಕ್ತಲ್ಲಾ ಅಂತ ಖುಷಿ ಆದವರ ಹೆಚ್ಚು. ಎಲ್ಲಾರು ಸೂಟಿ ಸಿಕ್ಕಿದ್ದಕ್ಕ ಒಂದ ನಮುನಿ ಖುಷಿಯ ಮುಗುಳ್ನಗಿ ಮುಖದಮ್ಯಾಲೆ  ತಂದಕೊಂಡು “ ಅಯ್ಯ ಪಾಪ ಹಿಂಗಾಗಬಾರದಿತ್ತ ” ಅಂತ ಅಂದವರ ಭಾಳ ಮಂದಿ. ಜಗತ್ತು ಎಷ್ಟ ವಿಚಿತ್ರ ಅಲ್ಲಾ? ನಮ್ಮ ಉತ್ತರ ಕರ್ನಾಟಕದ್ದ ಕಡೆ ಒಂದು ಆಡು ಮಾತದ ಎನಂದ್ರ “ ಸತ್ತವರ ಬಾಯಾಗ ಅಷ್ಟ ಮಣ್ಣು, ಉಳಿದವರಿಗೆ … Read more

ಮರೆಯಾಗುತ್ತಿರುವ ಮದುವೆಮನೆಯ ಸಂಭ್ರಮಗಳು: ಸುಮನ್ ದೇಸಾಯಿ

ಮೊನ್ನೆ ಸಂಜಿಮುಂದ ಮನಿ ಹತ್ರ ಇರೊ ವೇಂಕಪ್ಪನ ಗುಡಿಗೆ ಹೋಗಿದ್ವಿ. ಅಲ್ಲೆ ಇದ್ದ ಕಲ್ಯಾಣಮಂಟಪದಾಗ ಮದುವಿ ಇತ್ತಂತ ಕಾಣಸ್ತದ. ಬ್ಯಾಂಡ ಭಂಜಂತ್ರಿಯವರು ಮಸ್ತ ಯಾವದೊ ಒಂದ ಸಿನೇಮಾ ಹಾಡಿನ ಬಾಜಾ ಬಾರಿಸ್ಲಿಕತ್ತಿದ್ರು. ಈಗೆಲ್ಲಾ ಕಡೆ ಒಂದ ಹೊಸಾ ಪಧ್ಧತಿ ಎದ್ದದ ಎನಂದ್ರ ಈ ಉತ್ತರಭಾರತದ ಕಡೆ ಮದುವಿಗೊಳೊಳನ್ಯಾಗ ಹೆಂಗ ವರನ್ನ ಕುದರಿಮ್ಯಾಲೆ ಕೂಡಿಸಿಕೊಂಢ ಬ್ಯಾಂಡ ಬಾಜಾ ಬಾರಿಸ್ಕೊತ, ಡ್ಯಾನ್ಸ ಮಾಡ್ಕೊತ ಕರ್ಕೊಂಡ ಬರತಾರ ಹಂಗ ಇಲ್ಲೆನು ವೇಂಕಪ್ಪನ ಗುಡಿಯಿಂದ ಕುದರಿಮ್ಯಾಲ ವರನ್ನ ಕುಡಿಸಿ ಬ್ಯಾಂಡ ಬಾಜಾ ಬಾರಿಸ್ಕೋತ,ಸಣ್ಣ … Read more

ಛೂಕು ಭೂಕು ರೈಲು: ಸುಮನ್ ದೇಸಾಯಿ

ಮಧ್ಯಾಹ್ನ ೧.೩೦ ಆಗಿತ್ತು, ಮಂತ್ರಾಲಯದ ರೇಲ್ವೆ ಸ್ಟೆಷನ್ನ್ಯಾಗ ಗುಲಬರ್ಗಾಕ್ಕ ಹೋಗೊ ಟ್ರೇನಿನ ಸಲುವಾಗಿ ಕಾಯಕೊತ ನಿಂತಿದ್ವಿ. ಮಂತ್ರಾಲಯದಾಗ ರಾಯರ ಸನ್ನಿಧಿಯೊಳಗ ಹೆಂಗ ಮೂರ ದಿನಾ ಕಳದ್ವು ಗೊತ್ತಾಗಲೆಯಿಲ್ಲಾ. ರಾಯರ ಸನ್ನಿಧಿ ಅಂದ್ರ ಅಮ್ಮನ ಮಡಿಲಿನ್ಯಾಗ ಮಲ್ಕೊಂಡಷ್ಟ ಹಿತಾ ಇರತದ.ಮನಸ್ಸು ಪ್ರಶಾಂತ ಇರತದ. ವಾಪಸ ಊರಿಗೆ ಹೋಗ್ಲಿಕ್ಕೆ ಮನಸಾಗಲಾರದ ಒಲ್ಲದ ಮನಿಸಿನಿಂದ ಸ್ಟೇಷನ್ನಿಗೆ ಬಂದ ನಿಂತಿದ್ವಿ. ಮುಂಬೈಕ್ಕ ಹೋಗೊ ಟ್ರೇನ್ ಬಂತು ನಾವು ಲೇಡಿಸ್ ಬೋಗಿಯೊಳಗ ಹತ್ತಿದ್ವಿ. ಬೋಗಿ ಪೂರ್ತಿ ಖಾಲಿನ ಇತ್ತು. ನಮ್ಮ ಫ್ಯಾಮಿಲಿಯವರ ಮಾತ್ರ ಇದ್ವಿ. … Read more

ಆ ಕಾಲಾ ಹಂಗ ರೀ.. ಈ ಕಾಲಾ ಹಿಂಗ ರೀ.. ಯಾವ ಕಾಲಾ ಛಂದ ರೀ…..?: ಸುಮನ್ ದೇಸಾಯಿ

ಮನ್ನೆ ಮಧ್ಯಾನ್ಹಾ ಆಫೀಸನ್ಯಾಗ ಹಿಂಗ ಸುಮ್ನ ಕೂತಿದ್ವಿ. ಅಂಥಾದ್ದೇನು ಕೆಲಸಾ ಇದ್ದಿದ್ದಿಲ್ಲಾ. ನಮ್ಮ ಜೋಡಿ ಕೆಲಸಾ ಮಾಡೊ ಹುಡಗಿ ಸವಿತಾ ಇಂಟರನೇಟ್ ನ್ಯಾಗ ಇ-ಪೇಪರ ಓದ್ಲಿಕತ್ತಿದ್ಲು. ಹಂಗ ಓದಕೊತ, ” ಮೆಡಮ್ಮ ರಿ ಬಂಗಾರದ ರೇಟ್ ಮೂವತ್ತೆರಡು ಸಾವಿರದಾ ಐದುನೂರಾ ಚಿಲ್ಲರ ಆಗೇತಂತ  ನೋಡ್ರಿ. ಹಿಂಗಾದ್ರ ಎನ ಬಂಗಾರದ ಸಾಮಾನ ಮಾಡಿಸ್ಕೊಳ್ಳಾಕ ಆಕ್ಕೇತರಿ. ಹಿಂದಕಿನ ಮಂದಿ ತಲ್ಯಾಗ ಬಂಗಾರದ ಹೂವಿನ ಚಕ್ಕರ  ಮತ್ತ ಭಂಗಾರದ ಕ್ಯಾದಗಿ, ಹೆರಳಮಾಲಿ ಮಾಡಿಸಿಕೊಂಡ ಹಾಕ್ಕೊತ್ತಿದ್ರಂತ ರಿ, ಈಗ ನಮಗ ಲಗೂಮಾಡಿ ಕಿವ್ಯಾಗ … Read more

ಪಿನ್ನಿ-ಪಲ್ಲು ಪ್ರಹಸನ: ಸುಮನ್ ದೇಸಾಯಿ ಅಂಕಣ

  ಪಿನ್ನಿ ಮಾಡಿಕೊಟ್ಟ ದಪ್ಪ ದಪ್ಪ ಥಾಲಿಪೆಟ್ಟಿನ ನಾಷ್ಟಾ ಗಡದ್ದಾಗಿ ತಿಂದು ಪೆಪರ್ ಓದಕೊತ ಕುತಿದ್ದಾ ಪಲ್ಲ್ಯಾ (ಪಲ್ಲಣ್ಣ). ಅಲ್ಲೆ ಅವನ ಬಾಜುಕ್ಕ ಪಿನ್ನಿ ಸಾಕಿದ್ದ ನಾಯಿ “ ಬ್ರೌನಿ “ ನು ಕೂತು ತುಕಡಿಸ್ಲಿಕತ್ತಿತ್ತು. ಒಬ್ಬರಿಗೊಂದ ಇನ್ನೊಬ್ಬರಿಗೊಂದ ಎಲ್ಲೆ ಬ್ಯಾರೆ ಬ್ಯಾರೆ ಮಾಡೊದಂತ, ಪಿನ್ನಿ ನಾಯಿಗು ಮತ್ತ ಪಲ್ಲ್ಯಾಗು ಒಂದಸಲಾ ದಪ್ಪ ದಪ್ಪನ್ನು 4 ಥಾಲಿಪೆಟ್ಟ ಮಾಡಿ ತಿನ್ನಿಸಿ ಕೈಬಿಟ್ಟಿದ್ಲು. ಗಡದ್ದ ಹೊಟ್ಟಿ ತುಂಬಿದ್ರಿಂದ ನಾಯಿಗು ಮೈ ವಝ್ಝಾ ಆಗಿ ಅಲ್ಲೆ ಮೆತ್ತನ್ನ ಕಾರ್ಪೇಟ್ ಮ್ಯಾಲೆ … Read more

ಉಡಪಿ ರಾಯನ್ ಹೋಟೆಲ್: ಸುಮನ್ ದೇಸಾಯಿ ಅಂಕಣ

ಒಂದು ದಿನಾ ಉಡಪಿರಾಯನ ಹೋಟೆಲು ತೆರೆದಿತ್ತ….. ಮಸಾಲಿ ದ್ವಾಸಿ ವಾಸನೆ ನಮ್ಮ ಮೂಗಿಗೆ ಬಡಿತಿತ್ತಾ….. ಖಾರಾ ಚಕ್ಕುಲಿ ಶೇವು ಚಿವಡಾ ಗೆಳತನ ಮಾಡಿದ್ವ… ಬುಟ್ಟ್ಯಾಗಿನ ಉದ್ದಿನವಡಿ ಎದ್ದೆದ್ದ ಬರ್ತಿದ್ವ….. ಅಂಟಿನ ಉಂಡಿ ಶಟಗೊಂಡ ಹೋಗಿ ಡಬ್ಬ್ಯಾಗ ಕೂತಿತ್ತ…….. ಚಹಾ ಕುಡಿದರ ಪಾನಪಟ್ಟಿ ಓಡೊಡಿ ಬರತಿತ್ತ……. ಇದೇಲ್ಲಾ ಆದಮ್ಯಾಲೆ ನಾಲ್ಕ ರೂಪಾಯಿ ಬಿಲ್ಲ ಆಗಿತ್ತ…. ಅದನ್ನ ನೋಡಿ ನನ್ನ ಎದಿ ಝಲ್ಲ ಅಂದಿತ್ತ………….. ಈ ಹಾಡನ ನಮ್ಮ ಅಮ್ಮ ಸಣ್ಣವರಿದ್ದಾಗ ತಮ್ಮ ವಾರಿಗಿ ಗೇಳ್ತ್ಯಾರ ಜೋಡಿ ಹಾಡತಿದ್ರಂತ… ಆವಾಗಿನ್ನು … Read more

ತೇಲಿದ ಹೆಣ: ಸುಮನ್ ದೇಸಾಯಿ

ಮಧ್ಯಾಹ್ನ ಹನ್ನೆರಡು ಗಂಟೆದ ಹೊತ್ತು, ವೈಶಾಖ ಮಾಸದ ಖಡಕ ಬಿಸಿಲಿನ್ಯಾಗ ನಮ್ಮ ಊರಿನ ಬಸ್ಸಿನ್ಯಾಗ ಕೂತು ಯಾವಾಗ ಊರ ಮುಟ್ಟತೇನೊ ಅಂತ ಚಡಪಡಿಸ್ಕೊತ ಕೂತಿದ್ದೆ. ಮುಂಝಾನೆ ಹತ್ತು ಘಂಟೆ ಆಗಿದ್ರು ಬಿಸಲು ಭಾಳ ಚುರುಕ್ಕ ಇತ್ತು. ಹೌದು ಎಷ್ಟ ವರ್ಷ ಆಗಿಹೊದ್ವು ಹಳ್ಳಿಕಡೆ ಹೋಗಲಾರದ, ಒಂದ ಏಳೆಂಟ ವರ್ಷರ ಆಗಿರಬೇಕು. ಖಿಡಕ್ಯಾಗಿಂದ ಬಿಸಿ ಗಾಳಿ ಒಳಗ ಬಂದು ಮಾರಿಗೆ ಬಡಿಲಿಕತ್ತಿತು, ಮನಸ್ಸು ಹಿಂದಿನ ನೆನಪುಗಳ ಹತ್ರ ಓಡಿ ಓಡಿ ಹೊಂಟಿತ್ತು. ಎಂಥಾ ಆರಾಮದ ದಿನಗೊಳವು. ನನ್ನ ಮದುವಿಯಾದ … Read more

ಒಲವಿನ ಶಾಪ:ಸುಮನ್ ದೇಸಾಯಿ ಅಂಕಣ

ಮೂರುಸಂಜಿ ಆರು ಘಂಟೆ ಆಗಿತ್ತು. ಮಾಗಿಯ ಕಾಲ ಇದ್ದದ್ದರಿಂದ ಲಗೂನ ಕತ್ತಲಿ ಆವರಿಸಲಿಕತ್ತಿತ್ತು. ಎಂಟು ದಿನದಿಂದ ಒಂದ ಸಮನಾ ಕಾಯ್ದ ಜ್ವರದಿಂದ ಮೈಯ್ಯಾಗ ನಿಶಕ್ತಿ, ಆಯಾಸ ತುಂಬಿದ್ವು. ಮಕ್ಕಳು ಇನ್ನು ಟ್ಯೂಶನ್ ನಿಂದ ಬಂದಿರಲಿಲ್ಲ. ಅವರು ಕೆಲಸದ ಮ್ಯಾಲೆ ಊರಿಗೆ ಹೋಗಿದ್ರು. ಏಕಾಂಗಿಯಾಗಿರೊದು ನಂಗ ಹೊಸದೆನಲ್ಲಾ. ಆದ್ರ ಯಾಕೊ ಇವತ್ತ ಈ ಏಕಾಂಗಿತನ ಅಸಹನೀಯ ಆಗಿತ್ತು. ಸಣ್ಣಾಗಿ ತಲಿಶೂಲಿ ಶುರುವಾಗಿತ್ತು. ಬಿಸಿ ಚಹಾ ಬೇಕನಿಸಿತ್ತು. ಎದ್ದು ಕೂತ್ರ ಕಡಕೊಂಡ ಬಿಳತೇನೊ ಅನ್ನೊ ಅಷ್ಟು ಆಯಾಸ. ಯಾರರ ಹತ್ರ … Read more