ಹಾದಿಗಳಿಲ್ಲದ ಬದುಕು: ರೇಷ್ಮಾ ಎ.ಎಸ್.

ಆಕೆ ನನ್ನ ಸಹೋದ್ಯೋಗಿ ಮಾತ್ರವಲ್ಲದೆ ನನ್ನ ಆತ್ಮೀಯ ಗೆಳತಿಯೂ ಆಗಿದ್ದಾಕೆ. ವಯಸ್ಸಿನಲ್ಲಿ ನನಗಿಂತ ಸಾಕಷ್ಟು ಹಿರಿಯಳಾಗಿದ್ದರೂ ಸ್ನೇಹಕ್ಕೇನೂ ಕೊರತೆ ಇರಲಿಲ್ಲ. ತಂದೆಯನ್ನು ಕಳೆದುಕೊಂಡು ವಯಸ್ಸಾದ ತಾಯಿ, ಚಿಕ್ಕ ತಂಗಿಯೊಡನಿರುತ್ತಿದ್ದ ಆಕೆ ಸಾಧಾರಣ ರೂಪವಂತೆಯಾಗಿದ್ದರೂ ಉದ್ಯೋಗಸ್ಥಳಾದ್ದರಿಂದ ಮದುವೆಯಾಗಲು ಮುಂಬರುತ್ತಿದ್ದ ಗಂಡುಗಳಿಗೇನೂ ಕೊರತೆ ಇರಲಿಲ್ಲ. ಎಲ್ಲ ಸರಿ ಇದೆಯಲ್ಲ ಎಂದು ಉಳಿದವರಿಗೆಲ್ಲ ಅನಿಸುತ್ತಿದ್ದರೂ ಆಕೆ ಕೊನೆಯಲ್ಲಿ ಏನಾದರೂ ಒಂದು ಕಾರಣ ನೀಡಿ ಮದುವೆ ನಿರಾಕರಿಸಿ ಬಿಡುತ್ತಿದ್ದಳು. ಒಬ್ಬ ವರನಂತೂ ನಮಗೆಲ್ಲ ತುಂಬಾ ಸೂಕ್ತನಾದವನು ಎಂದೆನಿಸಿದ್ದು ಆಕೆ ಏನೋ ನೆವ ತೆಗೆದು … Read more

ನಗೀ ನವಿಲು ಆಡುತ್ತಿತ್ತ: ರೇಷ್ಮಾ ಎ.ಎಸ್.

ಕೊಪ್ಪದಿಂದ ಬಾಳೆಹೊನ್ನೂರಿಗೆ ಜಯಪುರದ ಮೇಲಿನ ಮಾರ್ಗವಲ್ಲದೇ ಇನ್ನೊಂದು ಮಾರ್ಗವೂ ಇದೆ. ಅದು ಮೇಲ್ಪಾಲು ರಸ್ತೆ. ಇದು ಎರೆಡು ಕಿ.ಮೀ. ಕಡಿಮೆ ಇದ್ದು ಟಿಕೆಟ್ ದರ ಒಂದು ರೂ. ಕಡಿಮೆ ಇದ್ದರೂ ಜಯಪುರ ರಸ್ತೆ ಬಿಟ್ಟು ಈ ರಸ್ತೆಯಲ್ಲಿ ಪಯಣಿಸುವವರು ಕಡಿಮೆ. ಬೇರೆ ಬಸ್ ಸಿಗದಿದ್ದಾಗ, ಇಲ್ಲವೇ ಈ ಮಾರ್ಗದಲ್ಲಿಯೇ ಮನೆಗಳಿದ್ದವರು, ಈ ಮಾರ್ಗದಲ್ಲಿರುವ ಊರುಗಳಿಗೆ ಹೋಗಬೇಕಾದವರು ಮಾತ್ರ ಇತ್ತ ಕಡೆ ಪಯಣಿಸುತ್ತಾರೆ. ಕಾರಣ ತುಂಬ ಹಾಳಾದ ರಸ್ತೆ. ಆಮೆ ನಡಿಗೆಯಲ್ಲಿ ತಿರುವು ರಸ್ತೆಯಲ್ಲಿ ಸಾಗುತ್ತಾ ಮಧ್ಯ ಮಧ್ಯ … Read more

ಬೆಳದಿಂಗಳ ಕಡಲಲ್ಲಿ ನೆನಪಿನ ಅಲೆಗಳು:ರೇಷ್ಮಾ ಎ.ಎಸ್.

ಬೆಳಿಗ್ಗೆ ನಾಲ್ಕೂವರೆಗೆ ಪ್ರತಿನಿತ್ಯ ಏಳಲೇಬೇಕಾದ ಅನಿವಾರ್ಯುತೆ ನನ್ನದು. ಎಷ್ಟೇ ಕಾಳಜಿ ವಹಿಸಿದರೂ ಒಮ್ಮೊಮ್ಮೆ ತಡವಾಗಿ ಎಚ್ಚರವಾಗಿ ಇಡೀ ದಿನದ ಕಾರ್ಯಕ್ರಮವೆಲ್ಲಾ ಅಸ್ತವ್ಯಸ್ತವಾಗಿ ಸಾಕೋ ಸಾಕಾಗಿ ಹೋಗುವುದೂ ಉಂಟು. ಕೆಲದಿನಗಳ ಹಿಂದೆ ಒಳ್ಳೆಯ ನಿದ್ರೆಯಲ್ಲಿದ್ದಾಗ ಕಾಗೆಗಳ ಕರ್ಕಶ ಕೂಗಿನಿಂದ ಬಡಿದೆಬ್ಬಿಸಿದಂತಾಗಿ ಗಡಬಡಿಸಿ ಕಣ್ಣು ಬಿಟ್ಟೆ. ಕಿಟಕಿಯತ್ತ ನೋಡಿದಾಗ ಬೆಳ್ಳನೆಯ ಬೆಳಕು. ಆಯ್ತು, ಬೆಳಗಾಗೇ ಬಿಟ್ಟಿತು. ಈ ದಿನವೆಲ್ಲ ನನ್ನದು ಹಾಳು. ಹಾಳು ನಿದ್ದೆ ಎಂದು ಶಪಿಸುತ್ತಾ ಗಡಿಯಾರದತ್ತ ನೋಡಿದರೆ ರಾತ್ರಿ ಎರಡು ಗಂಟೆಯಷ್ಟೇ. ಅಚ್ಚರಿಯಿಂದ ಕಿಟಕಿಯ ಬಳಿ ಬಂದುನಿಂತು … Read more

ಆ ಹಸಿದ ಕಣ್ಣುಗಳಲ್ಲಿ ಉರಿದ ಬೆಂಕಿ: ರೇಷ್ಮಾ ಎ.ಎಸ್.

ಮಕ್ಕಳು ಆಟದ ಬಯಲಿನಲ್ಲಿ ಸೈಕಲ್ ಕಲಿಯುತ್ತಲಿದ್ದರು. ಜೊತೆಗೆ ಹೋಗಿದ್ದ ನಾನು ಮೈದಾನದಂಚಿನಲ್ಲಿ ಹುಲ್ಲಿನ ಮೇಲೆ ಕರ್ಚೀಫು ಹಾಸಿ ಕುಳಿತಿದ್ದೆ. ಆಗೀಗ ಅತ್ತಿತ್ತ ದೃಷ್ಟಿ ಹರಿಯುತ್ತಿತ್ತು. ಒಂದಷ್ಟು ದೂರದಲ್ಲಿ ಒಂದು ಅಲೆಮಾರಿ ಸಂಸಾರ. ಮೈದಾನದ ಒಂದು ಪಕ್ಕಕ್ಕೆ ಇದ್ದ ರಂಗಮಂಟಪವೇ ಅವರ ತತ್ಕಾಲದ ಬಿಡದಿ. ಎಣ್ಣೆ ಕಾಣದ ಕೆದರಿದ ಕೂದಲ, ಪಳಪಳನೆ ಮಿನುಗುವ ಕಂಗಳ, ಹರಕಲು ಬಟ್ಟೆಯಲ್ಲೂ ಗುಂಡುಗುಂಡಾಗಿ ಕಾಣುವ ಮೂವರು ಮಕ್ಕಳು ಆಟದ ಬಯಲಿನಲ್ಲಿ ಸೈಕಲ್ ಕಲಿಯುತ್ತಲಿದ್ದರು. ಜೊತೆಗೆ ಹೋಗಿದ್ದ ನಾನು ಮೈದಾನದಂಚಿನಲ್ಲಿ ಹುಲ್ಲಿನ ಮೇಲೆ ಕರ್ಚೀಫು ಹಾಸಿ … Read more

ಕೋತಿ ಮತ್ತು ಮನುಷ್ಯ: ರೇಷ್ಮಾ ಎ.ಎಸ್.

ಬಣ್ಣದ ಒಂದು ಇಡೀ ಸೀರೆಯನ್ನೇ ತಲೆಗೆ ರುಮಾಲಾಗಿ ಸುತ್ತಿ ಒಂದು ಚುಂಗನ್ನು ಹೆಗಲ ಮೇಲೆ ಬರುವಂತೆ ಇಳಿ ಬಿಟ್ಟಿದ್ದಾನೆ. ದೊಡ್ದ ಪೊದೆ ಮೀಸೆ, ಹಣೆಯಲ್ಲೊಂದು ಹಳದಿ ನಾಮ, ಮಾಸಲು ಕಪ್ಪು ಕೋಟು, ಎಂದೋ ಬಿಳಿಯಾಗಿದ್ದಿರಬಹುದಾದ ಪಂಚೆ, ಹೆಗಲಿಗೆ ಒಂದು ಚಿಂದಿ ಜೋಳಿಗೆ, ಒಂದು ಕೈಯಲ್ಲಿ ಬಣ್ಣದ ಬೇಗಡೆ ಹಚ್ಚಿದ ಕೋಲು, ಇನ್ನೊಂದು ಕೈಯ ದಾರದ ತಿದಿಯಲ್ಲಿ ಕಟ್ಟಿದುದು ಒಂದು ಧಡೂತಿ ಮಂಗ. ಅದೇ ಗಲ್ಲಿಯ ಮಕ್ಕಳಿಗೆಲ್ಲರಿಗೆ ಆಕರ್ಷಣೆಯಾಗಿದ್ದುದುದು. ಆ ಮಂಗಕ್ಕೆ ಬಣ್ಣ ಬಣ್ಣದ ಬಟ್ಟೆಗಳ ಚೂರುಗಳನ್ನು ಚೌಕಚೌಕವಾಗಿ … Read more

“ಹಾ! ಪುರುಷ ಜಗತ್ತೇ…”:ರೇಷ್ಮಾ ಎ.ಎಸ್.

ಸೀರೆಯ ನಿರಿಗೆಗಳನ್ನು ಜೋಡಿಸುತ್ತಾ ಹಾಸಿಗೆಯಲ್ಲಿ ಮಲಗಿದ್ದ ಪುಟ್ಟ ಮಗುವನ್ನಾಕೆ ನೋಡಿದಳು. ಮಗುವಿನ ಮುಖ ಬಾಡಿದ ಹೂವಿನಂತೆ ಸೊರಗಿತ್ತು. ಕಣ್ಣುಗಳು ಜ್ವರದ ತಾಪದಿಂದ ಬಸವಳಿದು ಒಣಗಿದ ಗುಲಾಬಿ ದಳದಂತಾಗಿದ್ದವು. ಜ್ವರ ಬಿಟ್ಟ ಸೂಚನೆಯಾಗಿ ಹಣೆಯ ಮೇಲೆ ಮೂಡಿದ್ದ ಬೆವರ ಹನಿಗೆ ಹಣೆಯಂಚಿನ ಗುಂಗುರು ಕೂದಲು ತೊಯ್ದು ಅಂಟಿಕೊಂಡಿತ್ತು. ಅವಳು ಸೆರಗಿನಿಂದ ಬೆವರನ್ನು ಹಗುರವಾಗಿ ಮಗುವಿಗೆ ಎಚ್ಚರವಾಗದಂತೆ ಒರೆಸಿದಳು. ರಾತ್ರಿಯಿಡೀ ಮಗು ಮಲಗಿರಲಿಲ್ಲ. ಜ್ವರದಿಂದ ಚಡಪಡಿಸುತ್ತಿತ್ತು. ಹನ್ನೊಂದು ಘಂಟೆಯವರೆಗೆ ಹೇಗೋ ಕುಳಿತಿದ್ದ ಅವಳ ಪತಿ "ಇನ್ನು ನಂಗಾಗೋಲ್ಲ, ನಿದ್ರೆ ಕೆಟ್ರೆ … Read more

ಹೆಣ್ಣು:ಎರಡು ಚಿತ್ರಗಳು-ರೇಷ್ಮಾ ಎ.ಎಸ್.

ಗೆಳತಿಯ ತಂಗಿ ಅಂಜಲಿಗೆ ಮಗುವಾಗಿದೆ, ಮೂರನೆಯದು. ನರ್ಸಿಂಗ್ ಹೋಂಗೆ ಮಗು-ಬಾಣಂತಿಯನ್ನು ನೋಡಲು ಹೋಗಿದ್ದೆ. ಮುದ್ದಾದ ಹೆಣ್ಣು ಮಗು ತೊಟ್ಟಿಲಲ್ಲಿ  ಮಲಗಿತ್ತು. ಗುಲಾಬಿ ಬಣ್ಣ, ಕಪ್ಪು ಗುಂಗುರು ಕೂದಲು, ಸುಂದರ ಮಗು. ಆದರೆ ಮಗುವಿನ ತಾಯಿಯ ಕಣ್ಣುಗಳು ಕೆಂಪಡರಿ ಊದಿಕೊಂಡಿದ್ದವು, ತುಂಬಾ ಅತ್ತ ಹಾಗೆ. ಗೆಳತಿ ಮತ್ತು ಅವಳ ತಾಯಿಯ ಮುಖ ಒಣಗಿ ಕಳಾಹೀನವಾಗಿತ್ತು. ಆಶ್ಚರ್ಯದಿಂದ ಕಾರಣ ಕೇಳಿದಾಗ ಬಾಣಂತಿ ಬಿಕ್ಕಳಿಸಿ ಅಳತೊಡಗಿದಳು. ಗೆಳತಿ ಸಪ್ಪೆ ಮುಖದಿಂದಲೇ ಬಾಯಿಬಿಟ್ಟಳು. "ಈ ಸಾರಿ ಗಂಡು ಮಗೂನೇ ಆಗುತ್ತೇಂತ ಎಲ್ರೂ ತುಂಬಾ … Read more