ಅಪರೂಪಕ್ಕೊಂದ್ ಮದ್ವಿಗಿ ಹೋಗಿದ್ನಿರಿ (ಭಾಗ-೩):ರುಕ್ಮಿಣಿ ಎನ್.

ಹಿಂದಿನ ಭಾಗ ಓದಲು ಇಲ್ಲಿ ಕ್ಲಿಕ್ಕಿಸಿ ಮನಸಿಗೆ ಹೌಸಿ ತರು ಮಲ್ನಾಡ್ ಸೀಮಿ ಅಲ್ಲ ಬಟ್ಟಾ ಬಯಲ್ ಸೀಮಿ ರೀ ನಮ್ದು. ದಾರಿ ಆಚಿಕ್-ಇಚಿಕ್ ಪೀಕ್ ಜಾಲಿ ಗಿಡಗೋಳ್, ಅಲ್ಲೆಟ್ ಇಲ್ಲೆಟ್ ಹಸಿ ಬಿಸಿ ಬೆಳದ್ ನಿಂತ ಬಂಬಲಕ್ಕಿ, ಹಂಗ ಬಂದಕ್ಯಾಸ್ ಸೊಡ್ಡನ್ ಮಕಕ್ಕ ಬಡದ್ ನೆತ್ತಿ ಸುಟ್ಟ ಹೋಗ್ತೈತೆನೋ ಅನ್ನು ಸುಡು-ಸುಡು ಬಿಸಲ್. ಕೆಂಡ್ ಉಡ್ಯಾಗಿಟ್ಕೊಂಡ್ ಬೀಸೂ ಬಿರುಗಾಳಿ, ಉರಿ ಉರಿ ಝಳ. ಗಾಳಿ ಪದರಿನ್ಯಾಗ್ ಕಟ್ಕೊಂಡ್ ಬರು ಹಾಳ್ ಮಣ್ಣ ಮಕದ ಮ್ಯಾಲ್ ಮನಿ … Read more

ಅಪರೂಪಕ್ಕೊಂದ್ ಮದ್ವಿಗಿ ಹೋಗಿದ್ನಿರಿ (ಭಾಗ-೨):ರುಕ್ಮಿಣಿ ಎನ್.

ಆ ತೆಗ್ಗಿಮನಿ ಸಿದ್ದಕ್ಕನ್ ಹೆಸರ ಎತ್ತುಗೊಡ್ದ, ದೂರ್ನಿಂದ ಅಕಿ ಬರುದ್ ಕಾಣ್ತ್. ಬರಿಮೈ ಮುಕ್ಳಿ ಹುಡುಗನ್ ಬಗಲಾಗ ಕುಂದ್ರಸ್ಕೊಂಡ್, ಹುಡುಗನ ಚಡ್ಡಿ ಸೊಂಟದಾಗ ತುರ್ಕೊಂಡ್, ಇನ್ನೊಂದ್ ಕಡೆ ಹುಡ್ಗಿ ಕೈ ಹಿಡದ್ ದರಾ-ದರಾ ಎಳ್ಕೋತ್ ಬರಾಕತ್ತಿದ್ಳು. ಅಕೀ ಆ ಕೂಸಿನ್ ಕೈ ಎಳಿಯು ಕಡ್ತಕ್ಕ, ಹುಡುಗಿದ್ ರಟ್ಟಿ ನೂಸ್ತಿತ್ತ್ ಯಾಂಬಾಲ್(ಯಾರಿಗೆ ಗೊತ್ತು). ಒಂದ್ ಸವ್ನಿ ರೊಂಯ್ ಅಂತ ಅಳಾಕತ್ತಿತ್ ಹುಡುಗಿ.  ಕಣ್ಣಾಗೀನ್ ನೀರ್ ಕಪಾಳಕ್ಕ್ ಬಂದ್ರ, ಮೂಗನ್ಯಾಗಿನ್ ಸುಂಬಳ್ ಬಾಯಾಗ್ ಇಳ್ಯಾಕತ್ತಿತ್. ದೊಡ್ಡ್  ಗಾಡ್ಯಾಗ್ ಹತ್ತಾಕ್ ಏನರ … Read more

ಅಪರೂಪಕ್ಕೊಂದ್ ಮದ್ವಿಗಿ ಹೋಗಿದ್ನಿರಿ: ರುಕ್ಮಿಣಿ ಎನ್.

ಹುಟ್ಟಿದಾಗಿನಿಂದ ಇವತ್ತಿನವರ್ಗು ನಾ ಮದ್ವಿ ಮುಂಜಿ, ಜಾತ್ರೀ ಅಂತ್ ಹೇಳಿ ಊರೂರ್ ತಿರಿಗಿದ್ ಭಾಳ ಕಡಿಮಿ ರೀ. ಮದ್ವಿಅಂದ್ರ್ ಸಿನಿಮಾದಾಗ್ ನೋಡು ಸೀನ್ ಅಷ್ಟ್ ಗೊತ್ತಿತ್ರ್ ನಂಗ್. ಅದರೀ.. ಹುಡುಗನ ಕಡೆಯಿಂದ ಅವನ್ ಗೆಳ್ಯಾರು, ಹುಡುಗಿ ಕಡೆಯಿಂದ ಅಕಿ ಗೆಳತ್ಯಾರು, ಮದ್ವಿ ಒಂದ್ ವಾರ್ ಇರುತ್ಲೇನ್ ಬರಾತಾರು. ಏನೇನರ ಕೆಂತಿ ಮಾಡ್ತಾರು, ಯಾರಗೋ ಯಾರದೋ ಮ್ಯಾಲ್ ಲವ್ವ್ ಅಕ್ಕೈತಿ… ಮದ್ವಿ ದಿನ, ಊಟ ಮದಲ್ ಇರ್ತೈತಿ. ಆಮ್ಯಾಕ್ ಅಕ್ಕಿಕಾಳ್ ಒಗಿತಾರು. ಮದ್ವಿ ಆತ್ ಆತ್ ಅನುಗುಡ್ದ, ಹುಡುಗಿ … Read more

ಅಪರಿಚಿತ: ರುಕ್ಮಿಣಿ ಎನ್.

ಆಗ ಸಮಯ ಅಪರಾಹ್ನದ ೩ ಘಂಟೆ ೨೦ ನಿಮಿಷಗಳು. ದಾದರ್ ನಿಂದ ಧಾರವಾಡಕ್ಕೆ ಹೋಗುವ ಮುಂಬೈ-ಧಾರವಾಡ ಎಕ್ಸ್‌ಪ್ರೆಸ್ ಟ್ರೈನ್ ಹೊರಡುವುದು ಕೇವಲ ೫ ನಿಮಿಷಗಳು ಮಾತ್ರ ಬಾಕಿ ಇತ್ತು. ಅತ್ತಲಿಂದ ಒಬ್ಬ ತರುಣೆ ಟ್ರೈನ್ ತಪ್ಪಿ ಹೋಗಬಹುದೆಂಬ ಭೀತಿಯಲ್ಲಿ, ಅಕ್ಕ-ಪಕ್ಕದವರನ್ನು ಲೆಕ್ಕಿಸದೇ ಎದುರಿಗೆ ಬಂದವರನ್ನು ನೂಕುತ್ತ, ಮತ್ತೆಲ್ಲೋ ಕಣ್ಣಾಡಿಸುತ್ತ ಓಡುತ್ತಲೇ ಇದ್ದಳು. ಟ್ರೈನ್ ಹಸಿರು ನಿಶಾನೆ ತೋರಿಸಿ ಕೊನೆಗೊಮ್ಮೆ ಹಾರ್ನ್ ಹಾಕಿ ಇನ್ನೇನು ಹೊರಟೆ ಬಿಟ್ಟಿತು ಅನ್ನೋವಷ್ಟರಲ್ಲಿ ಅವಳು ಟ್ರೈನ್ ಹತ್ತಿಬಿಟ್ಟು, ಸ್ವಲ್ಪ ತಡವಾಗಿದ್ದರೂ ಟ್ರೈನ್ ತಪ್ಪಿ … Read more

ಶಾಂತಿ ನಿವಾಸ: ರುಕ್ಮಿಣಿ ಎನ್.

ಎಷ್ಟೋ ದಿನಗಳಿಂದ ತೆರೆದುಕೊಂಡಿದ್ದ ಮನೆ-ಕಿಟಕಿ ಬಾಗಿಲುಗಳು ತೆರೆದುಕೊಂಡತೆಯೇ ಇದ್ದವು. ರಭಸವಾಗಿ ಬಿದ್ದ ಮಳೆಗೆ ಮಣ್ಣಿನ ಮೇಲ್ಛಾವಣಿ ಕುಸಿದು ಬಿದ್ದಿತ್ತು. ಕಿಟಕಿ ಬಾಗಿಲುಗಳಲ್ಲಿ ಜೇಡರ ಮಹಾರಾಯ ಸುಖಾಂತವಾಗಿ ತನ್ನ ಸುತ್ತ ಬಲೆಯನ್ನು ಹೆಣೆದುಕೊಂಡು ಮನೆ ತುಂಬಾ ಮುತ್ತಿಗೆ ಎಂಬಂತೆ ತನ್ನ ಸಾಮ್ರಾಜ್ಯ ವಿಸ್ತರಿಸುತ್ತಲೇ ಇದ್ದ. ಮನೆಯ ಪಕ್ಕದಲ್ಲಿ ಇದ್ದ ಬೇವಿನ ಮರದ ಫಲ-ಪುಷ್ಪಗಳು ಮನೆಯ ಮೆಟ್ಟಿಲುಗಳನ್ನು ಶೃಂಗರಿಸಿದ್ದವು. ಸಂಜೆಯಾಗುತ್ತಿದ್ದಂತೆ ಕಟ್ಟೆಗೆ ಕೂತು ಹರಟುತ್ತಿದ್ದ ವಯೋವೃದ್ದರ ಬಾಯಲ್ಲಿ ಎದುರಿನಲ್ಲಿದ್ದ ಹಾಳು ಬಿದ್ದ  ಮನೆಯ ಕತೆಯೇ ವಿಷಯ ವಸ್ತುವಾಗಿರುತ್ತಿತ್ತು. ಆ ಮನೆಯ … Read more

ನಿರ್ಮಲ: ರುಕ್ಮಿಣಿ ಎನ್.

ಬಡತನ, ಅಸಮಾನತೆ, ಅತ್ಯಾಚಾರ, ಜಾತೀಯತೆ, ರಾಜಕೀಯ ಅರಾಜಕತೆಯಿಂದ ತುಂಬಿ ತುಳುಕುತ್ತಿದ್ದ ಕೆಸರಿನಲ್ಲಿ ಬಿರಿಯಿತೊಂದು ನೈದಿಲೆ ನಿರ್ಮಲ. ನಿರ್ಮಲ ತಾಯಿಗೆ ಒಬ್ಬಳೇ ಮಗಳು. ವರದಕ್ಷಿಣೆಯ ಕಿರುಕುಳದಿಂದ ಗಂಡನಿಂದ ಬೇರೆಯಾದ ನಿರ್ಮಲಳ ತಾಯಿ ಶಾರದೆಗೆ ತಾಯಿಯ ಮನೆಯಲ್ಲಿ ಆಶ್ರಯ ಕೂಡ ಸಿಕ್ಕಲಿಲ್ಲ. ಎಷ್ಟಾದರೂ ಹೆತ್ತ ಹೆಣ್ಣು ಕುಲಕ್ಕೆ ಹೊರಗೆ ಅನ್ನೋ ಕಾಲ ಅದು. ಕಣ್ಮರೆಯಲ್ಲಿ ಇದ್ದರೆ ಗಾಳಿಮಾತುಗಳನ್ನು ಸೃಷ್ಟಿಸುವರು ಎಂದರಿತ ಶಾರದೆ ಜನರ ಮಾತುಗಳಿಗೆ ಗ್ರಾಸವಾಗಕೂಡದು ಎಂದು ಹುಟ್ಟೂರಲ್ಲೇ ಬಾಡಿಗೆಯ ಮನೆಯೊಂದನ್ನ ಮಾಡಿಕೊಂಡು ಜೀವನ ಎಂಬ ರಣರಂಗದಲ್ಲಿ ಇಳಿದುಬಿಟ್ಟಳು. ಆ … Read more

ಪಶ್ಚಾತಾಪ ಮತ್ತು ಕ್ಷಮೆ: ರುಕ್ಮಿಣಿ ಎನ್.

ಯಾರಾದರೂ ನಮಗೆ ಕೆಡುಕನ್ನು ಮಾಡಿದಲ್ಲಿ ಅಥವಾ ತಪ್ಪು ರೀತಿಯಲ್ಲಿ ನಮ್ಮೊಂದಿಗೆ ವರ್ತಿಸಿದಲ್ಲಿ, ನಾವವರನ್ನು ಕ್ಷಮಿಸುವುದರಲ್ಲಿ ಒಳಿತಿದೆ. ಕಹಿ ಘಟನೆಯ ಕುರಿತು ಇಲ್ಲವೇ ಕೆಡುಕು ಬಯಸಿದ ವ್ಯಕ್ತಿಯ ಕುರಿತು ಪದೇ ಪದೇ ಯೋಚಿಸಿದರೆ  ಸೇಡಿಗೆ ಸೇಡು ತೀರಿಸಿಕೊಳ್ಳಬೇಕೆಂಬ ಪ್ರತಿಕಾರದ ಮನೋಭಾವ ನಮ್ಮಲ್ಲಿ ಹುಟ್ಟುತ್ತದೆ. ಮನಸ್ಸಿನ ನೆಮ್ಮದಿಯನ್ನು ಹಾಳು ಮಾಡುತ್ತದೆ, ನಮ್ಮ ಸುತ್ತೆಲ್ಲ ಸಂತಸದ ಹೊನಲಿದ್ದರೂ ಅದನ್ನು ನಾವು ಗುರುತಿಸುವುದೇ ಇಲ್ಲ.  ಇದಕ್ಕೆಲ್ಲ ಒಂದೇ ಪರಿಹಾರ ಸ್ನೇಹಿತರೆ, ತಪ್ಪು ಮಾಡಿದವರ ಎದುರಲ್ಲಿಯೇ ಕುಳಿತು ಮಾತನಾಡಿ.  “ನೀನೆಷ್ಟೇ ತಪ್ಪು ಮಾಡಿದರೂ, ನನಗೆ … Read more

ತಪ್ಪಿತಸ್ಥರಿಗೆ ಮರಣದಂಡನೆಯೊಂದೇ ಶಿಕ್ಷೆಯೇ? :ರುಕ್ಮಿಣಿ ಎನ್.

ಕಳೆದ ಡಿಸೆಂಬರ್ ನಲ್ಲಿ ನಡೆದ ದೆಹಲಿ ಅತ್ಯಾಚಾರ ಕೇಸು ಎಲ್ಲರ ಮನದಲ್ಲೂ ಹಸಿಗೋಡೆಯ ಮೇಲೆ ಹರಳು ನೆಟ್ಟಂತಿದೆ. ಸುದ್ದಿ ಹರಡುತ್ತಿದ್ದಂತೆ, ಅತ್ಯಾಚಾರಿಗಳ ವಿರುದ್ಧ ಕೇಳಿ ಬಂದ ಮಾತುಗಳು: “ಅತ್ಯಾಚಾರಿಗಳಿಗೆ ಮರಣ ದಂಡನೆ ವಿಧಿಸಬೇಕು”, “ಲಿಂಗ ನಿಷ್ಕ್ರಿಯಗೊಳಿಸಬೇಕು”. ಹೀಗೆ ಮಾಡಿದರೆ ತಪ್ಪಿತಸ್ಥರಿಗೆ ತಮ್ಮ ತಪ್ಪಿನ  ಅರಿವಾಗಬಲ್ಲುದೆ? ತಪ್ಪನ್ನು ತಿದ್ದಿಕೊಳ್ಳಲು ಅವಕಾಶಗಳೇ ಇಲ್ಲವೇ? ಅವರುಗಳು ಮಾಡಿದ್ದು ದೊಡ್ಡ ತಪ್ಪು ನಾನು ಒಪ್ಪುವೆ. ಆದರೆ, ತಪ್ಪು ತಿದ್ದಿಕೊಳ್ಳಲು ಅವಕಾಶ ನೀಡದೆ ಮರಣದಂಡನೆ ವಿಧಿಸುವುದು ಅದೆಷ್ಟು ಸರಿ ಎನ್ನುವುದು ನನ್ನ ಪ್ರಶ್ನೆ. ನಮ್ಮ … Read more