ಆ ಹಸಿದ ಕಣ್ಣುಗಳಲ್ಲಿ ಉರಿದ ಬೆಂಕಿ: ರೇಷ್ಮಾ ಎ.ಎಸ್.


ಮಕ್ಕಳು ಆಟದ ಬಯಲಿನಲ್ಲಿ ಸೈಕಲ್ ಕಲಿಯುತ್ತಲಿದ್ದರು. ಜೊತೆಗೆ ಹೋಗಿದ್ದ ನಾನು ಮೈದಾನದಂಚಿನಲ್ಲಿ ಹುಲ್ಲಿನ ಮೇಲೆ ಕರ್ಚೀಫು ಹಾಸಿ ಕುಳಿತಿದ್ದೆ. ಆಗೀಗ ಅತ್ತಿತ್ತ ದೃಷ್ಟಿ ಹರಿಯುತ್ತಿತ್ತು. ಒಂದಷ್ಟು ದೂರದಲ್ಲಿ ಒಂದು ಅಲೆಮಾರಿ ಸಂಸಾರ. ಮೈದಾನದ ಒಂದು ಪಕ್ಕಕ್ಕೆ ಇದ್ದ ರಂಗಮಂಟಪವೇ ಅವರ ತತ್ಕಾಲದ ಬಿಡದಿ. ಎಣ್ಣೆ ಕಾಣದ ಕೆದರಿದ ಕೂದಲ, ಪಳಪಳನೆ ಮಿನುಗುವ ಕಂಗಳ, ಹರಕಲು ಬಟ್ಟೆಯಲ್ಲೂ ಗುಂಡುಗುಂಡಾಗಿ ಕಾಣುವ ಮೂವರು ಮಕ್ಕಳು ಆಟದ ಬಯಲಿನಲ್ಲಿ ಸೈಕಲ್ ಕಲಿಯುತ್ತಲಿದ್ದರು. ಜೊತೆಗೆ ಹೋಗಿದ್ದ ನಾನು ಮೈದಾನದಂಚಿನಲ್ಲಿ ಹುಲ್ಲಿನ ಮೇಲೆ ಕರ್ಚೀಫು ಹಾಸಿ ಕುಳಿತಿದ್ದೆ. ಆಗೀಗ ಅತ್ತಿತ್ತ ದೃಷ್ಟಿ ಹರಿಯುತ್ತಿತ್ತು. ಒಂದಷ್ಟು ದೂರದಲ್ಲಿ ಒಂದು ಅಲೆಮಾರಿ ಸಂಸಾರ. ಮೈದಾನದ ಒಂದು ಪಕ್ಕಕ್ಕೆ ಇದ್ದ ರಂಗಮಂಟಪವೇ ಅವರ ತತ್ಕಾಲದ ಬಿಡದಿ. ಎಣ್ಣೆ ಕಾಣದ ಕೆದರಿದ ಕೂದಲ, ಪಳಪಳನೆ ಮಿನುಗುವ ಕಂಗಳ, ಹರಕಲು ಬಟ್ಟೆಯಲ್ಲೂ ಗುಂಡುಗುಂಡಾಗಿ ಕಾಣುವ ಮೂವರು ಮಕ್ಕಳಲ್ಲದೇ ರಂಗಮಂದಿರದ ಮೇಲ್ಚಾವಣಿಗೆ ಹಗ್ಗ ಹಾಕಿ ಗೋಣಿಯಿಂದ ತಯಾರಿಸಿದ ಬಟ್ಟೆದೊಟ್ಟಿಲಲ್ಲಿ ಬೇರೆ ಒಂದು ಕೂಸಿರಬೇಕು. ಒಣಕಲು ಮೈಯ್ಯ, ಹರಕಲು ಸೀರೆಯ ಆ ಮನೆ(?)ಯೊಡತಿ ಮೂರು ಕಲ್ಲುಗಳನ್ನು ಇರಿಸಿ ಆಯ್ದು ತಂದಿದ್ದ ಒಣ ಪುರುಳೆಗಳನ್ನೊಡ್ಡಿ ಬೆಂಕಿ ಮಾಡಿದಳು. 

ಅಷ್ಟರಲ್ಲಿ ಕಪ್ಪು ಮಸಿ ಹಿಡಿದ ಅಲ್ಯುಮಿನಿಯಂ ಪಾತ್ರೆಯಲ್ಲಿ ಹಿಂಬದಿಯ ಶಾಲೆಯಂಗಳದ ಟ್ಯಾಂಕಿಯಲ್ಲಿ ಎಂದೋ ಶೇಖರವಾಗಿದ್ದ ನೀರನ್ನು ಹಿಡಿದು ತಂದ ಹುಡುಗ. ಒಲೆಯ ಮೇಲೆ ನೀರಿಟ್ಟು ಕುದಿಯತೊಡಗಿದೊಡನೆ ಬಟ್ಟೆಗಂಟೊಂದರಲ್ಲಿದ್ದ ಹಿಟ್ಟನ್ನು ತೆಗೆದು, ಅದರಲ್ಲಿದ್ದ ಕಸವೋ ಹುಳವೋ ಏನನ್ನೋ ಆರಿಸಿ ಚೆಲ್ಲಿ ಆ ಹಿಟ್ಟನ್ನು ಕುದಿವ ನೀರಿಗೆ ಸೇರಿಸಿ ಅಲ್ಲೆ ಬಿದ್ದಿದ್ದ ಕೋಲಿನ ತುಂಡೊಂದರಲ್ಲಿ ಗೊಟಾಯಿಸತೊಡಗಿದಳು. ಒಲೆಯ ಸುತ್ತ ಕುಕ್ಕರುಗಾಲಲ್ಲಿ ಕೂತಿದ್ದ ಮಕ್ಕಳು ಏನೋ ನಡೆಯುತ್ತಿದೆ ಮಹತ್ತರವಾದುದು ಎಂಬಂತೆ ಹಿಟ್ಟನ್ನೇ ಬೆಂಕಿಯನ್ನೇ ನೋಡುತ್ತಿದ್ದವು. ಹಿಟ್ಟನ್ನು ಉಂಡೆ ಕಟ್ಟಿ ತಟ್ಟೆಯೊಂದರಲ್ಲಿ ಆರಲಿಟ್ಟು ಆಕೆ ರಂಗಮಂದಿರದ ಮೆಟ್ಟಿಲೊಂದರ ಮೇಲೆ ತುಸು ನೀರು ಸುರಿವಿ ತೊಳೆದು ಅದರ ಮೇಲೆ ಕೆಲವು ಒಣಮೆಣಸಿನಕಾಯಿಗಳು, ಹುಣಸೇಕಾಯಿ, ತುಸು ಉಪ್ಪು ಹಾಕಿ ದೊಡ್ಡ ಕಲ್ಲೊಂದರಿಂದ ಅರೆಯತೊಡಗಿದಳು. ಪ್ರತಿದಿನ ಕನಿಷ್ಟ ಸಾವಿರ ಹೆಜ್ಜೆಗಳಾದರೂ ನಡೆದಾಡುವ ಮೆಟ್ಟಿಲುಗಳವು. ಚಟ್ನಿ ತಯಾರಾಯಿತು. ತಟ್ಟೆಯ ಮೇಲಿನ ಮುದ್ದೆಗಳ ಮೇಲೆ ಆ ಕೆಂಪು ರಸ ಸುರಿದಳಾಕೆ. ಎಲ್ಲಾ ನಾಲ್ವರು ತಟ್ಟೆಯ ಸುತ್ತ ಕುಳಿತು  ಗಬಗಬನೆ ಹಿಟ್ಟು ನುಂಗತೊಡಗಿದರು. ಕಣ್ಣುಗಳಲ್ಲಿ ಮಿನುಗು, ಮುಖದಲ್ಲಿ ತೃಪ್ತಿ.

ಸೈಕಲ್ ಹೊಡೆದು ಸಾಕಾದ ಮಕ್ಕಳು ಮನೆಗೆ ಹೊರಡೋಣವೆಂದಾಗ ಎದ್ದು ಹುಲ್ಲು ಕೊಡವಿಕೊಂಡು ಹೋಗುವಾದ ತಲೆಯಲ್ಲಿ ಅದೇ ದೃಶ್ಯ ಸುಳಿಯುತ್ತಿತ್ತು. ಅಲ್ಲಿ ಧೂಳು, ಇಲ್ಲಿ ಗಲೀಜು, ಇದು ತಿಂದ್ರೆ ಆ ರೋಗ ಬರುತ್ತದೆ, ಅದು ತಿಂದ್ರೆ ಈ ರೋಗ ಬರುತ್ತೆ… ಪಾತ್ರೆ ತೊಳೆದಷ್ಟೂ ತೃಪ್ತಿಯಿಲ್ಲ. ನೀರನ್ನು ಶೋಧಿಸಿ ಬಿಸಿಮಾಡಿ ಫಿಲ್ಟರ್‌ನಲ್ಲಿ ಹಾಕಿ ಕುಡಿದರೂ ಏನೋ ಅಳುಕು. ವಿಟಮಿನ್, ಪ್ರೋಟೀನ್ ಎಷ್ಟಿದೆ? ಇಲ್ಲವೇ ಫ್ಯಾಟ್ ಜಾಸ್ತಿ ಆಯಿತೇ? ಹಾಲಿನ ಪಾತ್ರೆಯ ಮುಚ್ಚುಳ ಅರ್ಧ ತೆಗೆದಿತ್ತು, ಚೆಲ್ಲಿ ಬಿಡು ಬೇಡ ಎಂದೆಲ್ಲ ತಲೆಬಿಸಿ ಪ್ರತಿಕ್ಷಣ ಮಾಡುತ್ತಾ, ಲೆಕ್ಕಾಚಾರ ಹಾಕುತ್ತಾ ಬದುಕಿದರೂ ವರ್ಷವೊಂದಕ್ಕೆ ಕಡಿಮೆ ಎಂದರೂ ಎರೆಡು-ಮೂರು ಸಾವಿರಗಳನ್ನು ವೈದ್ಯರಿಗೆ ತೆರುವ ನನ್ನಂತಹ ವಿದ್ಯಾವಂತರೆನಿಸಿಕೊಂಡವರ ಸಂಸಾರವನ್ನು ಈ ಅಲೆಮಾರಿಗಳ ಬದುಕಿನೊಂದಿಗೆ ಹೋಲಿಸಿದಾಗ ವಿಚಿತ್ರವೆನಿಸಿತು. ಸಾಹಿತಿಯೋರ್ವರು ಹೇಳಿರುವಂತೆ ’ಅಜ್ಞಾನದಲ್ಲಿರುವುದೂ ಒಂದು ರೀತಿಯ ಸುಖವೇ’ ಎಂಬುದು ನಿಜವಲ್ಲವೇ ಎನಿಸಿತು.

*****
ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

5 Comments
Oldest
Newest Most Voted
Inline Feedbacks
View all comments
Raghavendra
Raghavendra
10 years ago

ಮತ್ತೊಮ್ಮೆ ಓದಬೇಕೆನಿಸಿತು…

Akhilesh Chipli
Akhilesh Chipli
10 years ago

ಬೆಳ್ಳಿ ಚಮಚ, ಲೋಟವನ್ನು ಕುದಿಸಿ, ಫೆರೆಕ್ಸ್ ಕುಡಿದ ಮಕ್ಕಳು
ಸದಾ ರೋಗಿಗಳು

ಟಾರು ರೋಡಿನಲ್ಲಿ ಬೀರಿದ ಮಂಡಕ್ಕಿ ತಿಂದ ಮಕ್ಕಳಲ್ಲಿ ಉಕ್ಕುವ
ಆರೋಗ್ಯವನ್ನು ಕಂಡಿದ್ದೇನೆ. ವಾಸ್ತವ ಚಿತ್ರಣ. ಚೆನ್ನಾಗಿದೆ.

Rajendra B. Shetty
10 years ago

ಹಳೆಯ ಬೀರ್ಬಲ್ಲನ ಕಥೆ ನೆನಪಾಯಿತು – ಕಾಡಿನಲ್ಲಿರುವ ಗಿಡಕ್ಕೆ ನೀರು ಯಾರು ಎರೆಯುತ್ತಾರೆ? ಆದರೆ, ನಮ್ಮ ಹೂದೋಟದಲ್ಲಿರುವ ಗಿಡಕ್ಕೆ ನೀರು ಹೊಯ್ಯಲೇ ಬೇಕು.
ಲೇಖನ ಚೆನ್ನಾಗಿದೆ.

ಪ್ರಶಾ೦ತ ಕಡ್ಯ

ಲೇಖನ ಚೆನ್ನಾಗಿದೆ.

Mahantesh Yaragatti
Mahantesh Yaragatti
10 years ago

ishta aytu madam………

5
0
Would love your thoughts, please comment.x
()
x