ಲವ್ ಕ್ರುಷಾದ್: ಎಫ್ ಎಂ ನಂದಗಾವ
ರಾಜ್ಯದ ಸಚಿವ ಸಂಪುಟದ ನಡುವಯಸ್ಸಿನ ಹಿರಿಯ ಸದಸ್ಯ, ಗೃಹ ಖಾತೆಯ ಜವಾಬ್ದಾರಿ ಹೊತ್ತ ಸಚಿವ ಕೆ.ಟಿ.ಕಿರಣ ಅವರು, ಅಂದು ಸಂಗಮನೂರು ನಗರ ಪೊಲೀಸ್ ಠಾಣೆಗೆ ಭೇಟಿಕೊಡುವವರಿದ್ದರು. ಸಮಯ ನಿಗದಿ ಆಗಿರಲಿಲ್ಲ. ಊರಲ್ಲಿನ ಅವರ ಪಕ್ಷದ ನಾಯಕ ಹಿರಿಯಣ್ಣ ನಾಯ್ಕ ಎಂಬುವವರ ಮಗಳು ಮಂಗಳಾಳ ಮದುವೆಗೆ ಅವರು ಬಂದಿದ್ದರು. ಅವರ ಈ ಖಾಸಗಿ ಭೇಟಿಯನ್ನು ಅಧಿಕೃತಗೊಳಿಸುವ ಉದ್ದೇಶದಿಂದ ಸಂಗಮನೂರು ನಗರ ಪೊಲೀಸ್ ಠಾಣೆಯ ಭೇಟಿಯ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಬಾಲ್ಯದಿಂದಲೇ ಸಂಘಟನೆಯ ಶಾಖೆಯಲ್ಲಿ ಪ್ರಾಥಮಿಕ ಸದಸ್ಯತ್ವ ಹೊಂದಿ, ಅದರಲ್ಲಿಯೇ ಬೆಳೆಯುತ್ತಾ … Read more