ಕಥಾಲೋಕ

ಮತ್ತೆ ಉದಯಿಸಿದ ಸೂರ್ಯ: ವೆಂಕಟೇಶ ಪಿ.ಗುಡೆಪ್ಪನವರ

“ವಿಶ್ವವನ್ನೇ ತಲ್ಲಣಗೊಳಿಸಿ, ಈಗ ನಮ್ಮ ದೇಶಕ್ಕ ಗಂಡಾಂತರ ತಂದ ಕೋರೋನಾ ವೈರಸ್ ಹಾವಳಿಯಿಂದ ನಮ್ಮನ್ನು ರಕ್ಷಣೆ ಮಾಡಲು, ಸರ್ಕಾರ ರಾಜ್ಯದಲ್ಲಿ ಇಂದಿನಿಂದ ಹದಿನಾಲ್ಕು ದಿನಗಳ ವರೆಗೆ ಲಾಕ್‍ಡೌನ್ ಜಾರಿಗೊಳಿಸಿದೆ.ಅತ್ಯಗತ್ಯ ಸಾಮಗ್ರಿಗಳನ್ನು ಸಂಗ್ರಹ ಮಾಡಿಕೊಳ್ಳಿ,ಒಬ್ಬರಿಂದ ಒಬ್ಬರಿಗೆ ಬೇಗ ಹರಡುವ ಈ ವೈರಸ್ ಹೆಚ್ಚಾದರೆ, ಲಾಕ್‍ಡೌನ್ ಅವಧಿ ವಿಸ್ತರಣೆ ಸಹ ಆಗಬಹುದು,ಯಾರೊಬ್ಬರೂ ಯಾವೂದೇ ಕಾರಣಕ್ಕೂ ಮನೆಯಿಂದ ಹೊರಗೆ ಬರಬಾರದು, ಹೊರಗೆ ಕಾಣಿಸಿಕೊಂಡರೆ ಶಿಕ್ಷೆ ತಪ್ಪಿದಲ್ಲಿ….” ಪೋಲಿಸ್ ಜೀಪ್ ಮೇಲೆ ಹಾಕಿರುವ ಚಿಕ್ಕ ಸ್ಪೀಕರ್‍ದಲ್ಲಿನ ಮಾತುಗಳನ್ನು ಕೇಳಿಸಿಕೊಂಡ ತಿಮ್ಮಪ್ಪ ಮಾಸ್ತರ ಬೆಚ್ಚಿಬಿದ್ದನು. […]

ಕಥಾಲೋಕ

ಒಂದು ಕಡು ಬೇಸಿಗೆಯ ರಾತ್ರಿಯಂದು…: ಜೆ.ವಿ.ಕಾರ್ಲೊ

ಮೂಲ: ಆಂಬ್ರೋಸ್ ಬಿಯೆರ್ಸ್ಅನುವಾದ: ಜೆ.ವಿ.ಕಾರ್ಲೊ, ಹಾಸನ. -೧- ಹೆನ್ರಿ ಆರ್ಮ್ಸ್ಟ್ರಾಂಗ್ ನನ್ನು ನಂಬಿಸಿ ಒಪ್ಪಿಸುವುದು ಅಷ್ಟೇನೂ ಸುಲಭದ ಮಾತಾಗಿರಲಿಲ್ಲ. ಅವನನ್ನು ಭೂಮಿಯೊಳಗೆ ಹೂತಿದ್ದಂತೂ ನಿಜ. ಹೂತಿದ್ದ ಮಾತ್ರಕ್ಕೆ ತಾನು ಸತ್ತೆನೆಂದು ಒಪ್ಪಿಕೊಳ್ಳಲು ಅವನ ಯಾವತ್ತೂ ಬಂಡಾಯಕೋರ ಮನಸ್ಸು ಸಿದ್ಧವಿರಲಿಲ್ಲ. ಅಂತಿಮ ಸಂಸ್ಕಾರದ ಎಲ್ಲಾ ವಿಧಿವಿಧಾನಗಳೊಂದಿಗೆ ಅವನದೇ ಎದೆಯ ಮೇಲೆ ಅವನದೇ ಕೈಗಳನ್ನು ಜೋಡಿಸಿ ಅಂಗಾತನಾಗಿ ಪೆಟ್ಟಿಗೆಯೊಳಗೆ ಮಲಗಿಸಿದ್ದರು. ಹೆನ್ರಿ, ಅವನ ಕೈಗಳನ್ನು ಜೋಡಿಸಿದ್ದ ಬಂಧನದಿಂದ ಬಿಡಿಸಿಕೊಳ್ಳುವುದೇನೂ ದೊಡ್ಡ ವಿಷಯವಾಗಿರಲಿಲ್ಲ. ಆದರೂ, ಅದರಿಂದ ಹೆಚ್ಚೇನೂ ಉಪಯೋಗವಾಗುತ್ತಿರಲಿಲ್ಲ. ಅವನನ್ನು ಸುತ್ತುವರೆದಿದ್ದ […]

ಕಥಾಲೋಕ

ಲಾಕ್ ಡೌನ್: ಹಾಡ್ಲಹಳ್ಳಿ ನಾಗರಾಜ್

ಚೆಲುವೇಗೌಡನಿಗೆ ಮಾಮೂಲಿನಂತೆ ಬೆಳಗ್ಗೆ ಆರಕ್ಕೆ ಎಚ್ಚರವಾಯಿತು. ಹೊದಿಕೆಯೊಳಗೆ ಸದ್ದಾಗದಂತೆ ಮೆಲ್ಲಗೆ ಇನ್ನೊಂದು ಮಗ್ಗುಲಿಗೆ ಹೊರಳಿಕೊಂಡ. ನಿದ್ದೆ ಹರಿದಿದ್ದರೂ ಏಳುವ ಮನಸ್ಸಾಗಲಿಲ್ಲ. ಕಣ್ಣು ಮುಚ್ಚಿಕೊಂಡವನು ಕಿವಿ ತೆರೆದುಕೊಂಡು ಸದ್ದಿಲ್ಲದೇ ಮಲಗಲು ಯತ್ನಿಸಿದ. ತಾನು ಮಲಗಿರುವ ಪ್ಯಾಸೇಜಿನ ಹಿಂದಿನ ಬಚ್ಚಲು ಕಡೆ ಸೊಸೆಯ ಚಟುವಟಿಕೆ ನಡೆದಿತ್ತು. ಅವಳ ಗಂಡ ಹಾಗು ಮಕ್ಕಳು ಬಂದು ಹೋದ ನಂತರ ಕಕ್ಕಸ್ಸುಕೋಣೆಯನ್ನು ಬರಲಿನಿಂದ ರಪ್ ರಪ್ ಎಂದು ತೊಳೆದಳು. ಅಲ್ಲಿಂದ ಬಚ್ಚಲಿಗೆ ದಾವಿಸಿದವಳು ಬಟ್ಟೆ ಬಿಚ್ಚಿ ನಿಂತಿದ್ದ ಮಕ್ಕಳಿಗೆ ನೀರೆರೆದು ಹೊರಕಳಿಸಿ ತಾನೂ ಮೈತೊಳೆದುಕೊಂಡಳು. […]

ಕಥಾಲೋಕ

ಬದುಕು ಬಯಲಿಗೆ: ಆನಂದ ಎಸ್ ಗೊಬ್ಬಿ.

ದುಡಕಂದು ತಿನ್ನಾಕ ಅಂತ ಬೆಂಗ್ಳೂರಿಗೆ ಹೋಗಿದ್ದ ಶಂಕ್ರನ ಚಡ್ಡಿ ದೊಸ್ತ ಹಣಮಪ್ಪ ಪೋನ್ ಮಾಡಿ “ಬರ್ತೈಯಿದೀನಿ ಲೇ ಮಗ, ಕೆಲಸ ಇಲ್ಲ ಗಿಲಸ ಇಲ್ಲ. ಬಾಳ ತಿಪ್ಲ ಆಗ್ಯಾದಾ , ಹೋರಗ ಹ್ವಾದ್ರ ಸಾಕು ಪೋಲಿಸ್ರೂ ಕುಂಡಿ ಮ್ಯಾಗ ಬಾರಸದೇ ಬಾರಸಾಕ ಹತ್ಯಾರ ಲೇ ಅವರೌನ್. ನಮಗ ಸುಮ್ನೆ ಕುಂದ್ರದು ಆಗವಲ್ಲದು, ಸುಮ್ನೇ ಕುಂದ್ರು ಅಂದ್ರೇ ಎಷ್ಟು ದಿನ ಅಂತ ಕುಡ್ತಿ , ತಿಂಗ್ಳ‌ ಆಗಕ ಬಂತು, ಕೆಲಸ ಇಲ್ಲದೆ ಬಗಸಿ ಇಲ್ಲದೆ, ಹೊಟ್ಟಿ ನಡಿಬೇಕಲ್ಲಪ್ಪಾ ಮಾರಾಯ.” […]

ಕಥಾಲೋಕ

ಸಾವಿತ್ರಿ: ಸುರೇಶ್ ಮಲ್ಲಿಗೆ ಮನೆ

ಆವತ್ತು ಸೋಮಾರ ರಾತ್ರಿ ನಾನು ಒಬ್ಬಾಕೆ ಕತ್ತಲಾಗ ಹುಲಿಕಲ್ಲು ಕಾಡಾಗ ಒಣಗಿದ ಮರನಾ ಕಡೀತಿದ್ನ, ಆ ಬೆವರ್ಸಿ ಹುಲಿ ಗಿಡದ ಮಟ್ಟಿಂದ ಬಂದು ನನ್ನ ನೋಡಿ… ಘರ್… ಅಂತ ಘರ್ಜಿಸ್ತು…!!.. ಹಂಗೆ ಕತ್ತೀನ ಕೈಯಿಂದ ಹಿಡಿದು ಮೇಲಕ್ಕೆತ್ತಿ, ದೊಡ್ಡ ಕಣ್ಣುಬಿಡುತ್ತಾ, ಅಡ್ಡಿಡಿಡಿ……. ಅಡ್ಡಿಡಿಡಿ…… ಅಡ್ಡಿಡಿಡಿ…. ಅಂದೇ ನೋಡು……!!!ಅಹ್..ಹ್….ಹ್…ಹ್..ಹ್…ಹ…. ಇಲಿ ಮರಿತರ ಹೆದರಿ ಹಂದಿ ತರ ಬಿದ್ದು, ಕಾಡೊಳಗೆ ಓಡೋಯಿತು ನೋಡು…….ಅಹ್..ಹ್…ಹ್….ಹ್….ಹ್…ಹ….. ಅಂತ ನಗ್ತಾ,…… ಹುಲಿ ಮುಂದೆ ತಾನು ಒಬ್ಬಂಟಿಯಾಗಿ ತೋರಿದ ಪೌರುಷಾನ ಮುಂಜಾನೆ ತನ್ನ ಅಂಗೈ ಅಗಲದ […]

ಕಥಾಲೋಕ

ಸುಶೀಲೆ: ವರದೇಂದ್ರ ಕೆ.

ಜಮೀನ್ದಾರರ ಒಬ್ಬನೇ ಮಗ, ಕಣ್ಣಲ್ಲಿ ಸನ್ನೆ ಮಾಡಿದರೆ ಸಾಕು ತಟಕ್ಕನೆ ಕೆಲಸವಾಗಿಬಿಡುತ್ತದೆ. ಮಾತು ಆಡಿದರಂತೂ ಊರಿನ ಯಾವ ಧನಿಕನೂ ಎದುರಾಡುವಂತಿಲ್ಲ. ಅಷ್ಟೇ ಸಹಜ ನಡೆಯುಳ್ಳ ಪ್ರಾಮಾಣಿಕ ಜೀವ. ಗಾಂಭೀರ್ಯತೆಯೊಂದಿಗೆ ಕನಿಕರವೂ ತುಂಬಿಕೊಂಡ ಮುಖ. ಚಿರ ಯುವಕ, ಓದಿನಲ್ಲೂ ಚತುರನಾಗಿ ವೈದ್ಯಲೋಕಕ್ಕೆ ಕಾಲಿಟ್ಟ ಉತ್ತಮ ಕೈಗುಣವಿದೆ ಎಂಬ ಪ್ರಶಂಸೆಗೆ ಪಾತ್ರನಾದ ಸ್ಫುರದ್ರೂಪಿ ತರುಣಸುರೇಶ್ ಗೌಡನಿಗೆ ತಮ್ಮ ಮಗಳನ್ನೇ ಧಾರೆಯೆರೆಯಲು ದುಂಬಾಲುಬಿದ್ದ ಅದೆಷ್ಟೋ ಸಂಬಂಧಿಕರು ಹಿರಿಗೌಡರನ್ನು ಕೇಳಿ ಕೇಳಿ ಬಂದ ದಾರಿಗೆ ಸುಂಕವಿಲ್ಲವೆಂದು ಸೋತಮುಖದೊಂದಿಗೆ ಮರಳಿದ್ದಾರೆ. ಹಿರಿ ಧರ್ಮಗೌಡರು ತನ್ನ […]

ಕಥಾಲೋಕ

ದೀಪಗೃಹದಲ್ಲಿ ಒಂದು ರಾತ್ರಿ…..: ಜೆ.ವಿ.ಕಾರ್ಲೊ.

ಇಂಗ್ಲಿಷ್ ಮೂಲ: ಜೆ.ಎಸ್.ಫ್ಲೆಚರ್ಅನುವಾದ: ಜೆ.ವಿ.ಕಾರ್ಲೊ. ‘ಶಿವರಿಂಗ್ ಸ್ಯಾಂಡ್’ ದೀಪಗೃಹಕ್ಕೆ ಮತ್ತೊಬ್ಬ ಕಾವಲುಗಾರನಾಗಿ ಮೊರ್ಡೆಕಾಯ್ ಚಿಡ್ಡೋಕ್ ಬಂದು ಇಳಿದಾಗ , ಜೆಝ್ರೀಲ್ ಕಾರ್ನಿಶ್ ತನ್ನ ಪಾಲಿನ ಪಾಳಿಯನ್ನು ಮುಗಿಸಿ ಆಗ ತಾನೇ ನಿದ್ದೆ ಹೋಗಿದ್ದ. ಕಾರ್ನಿಶ್ ನಿದ್ದೆಯಿಂದ ಏಳುವಾಗ ತಾನು ಎದುರುಗೊಳ್ಳಲಿರುವ ಮನುಷ್ಯ ಯಾರು, ಎಂತವನು ಎಂದು ಅವನಿಗೆ ಆ ಗಳಿಗೆಯಲ್ಲಿ ಗೊತ್ತಾಗಿರುವ ಸಂಭವವಿರಲಿಲ್ಲ. ಗೊತ್ತಿದ್ದರೆ ಅವನು ಆಗಷ್ಟೇ ತಿಂಗಳ ರೇಶನ್ ಮತ್ತು ಚಿಡ್ಡೋಕನನ್ನು ಇಳಿಸಿ ಹಿಂದುರಿಗಿದ ದೋಣಿಯನ್ನು ಹತ್ತುವುದರಲ್ಲಿ ಯಾವುದೇ ಸಂಶಯವಿರಲಿಲ್ಲ! ಚಿಡ್ಡೋಕ್ ಬರುವ ಮುನ್ನ ನಾವಿಬ್ಬರೇ […]

ಕಥಾಲೋಕ

ಒಂದು ನಾಯಿಮರಿಗಾಗಿ….: ಜೆ.ವಿ.ಕಾರ್ಲೊ

ಅಂದು ಸಂಜೆ ಲಂಡನಿನಲ್ಲಿ ಮೈ ಕೊರೆಯುವಂತ ಚಳಿ. ಬಸ್ಸಿನೊಳಗೆ ಹಲ್ಲು ಕಚ್ಚಿಕೊಂಡು ಮುದುಡಿ ಕುಳಿತಿದ್ದ ಪ್ರಯಾಣಿಕರಿಗೆ ಯಾರೋ ಎಡೆಬಿಡದೆ ಚೂರಿಯಿಂದ ಕೊಚ್ಚುತ್ತಿರುವಂತ ಅನುಭವವಾಗುತ್ತಿತ್ತು. ಸದ್ದು ಮಾಡುತ್ತಾ ರೊಂಯ್ಯನೆ ಬಸ್ಸಿನೊಳಗೆ ನುಗ್ಗುತ್ತಿದ್ದ ಗಾಳಿಯಿಂದ ರಕ್ಷಣೆ ಪಡೆದುಕೊಳ್ಳಲು ಜನ ಹರಸಾಹಸ ಪಡುತ್ತಿದ್ದರು. ಬಸ್ಸು ಮುಂದಿನ ಸ್ಟಾಪಿನಲ್ಲಿ ನಿಂತಾಗ ಇಬ್ಬರು ಮಹಿಳೆಯರು, ಮತ್ತೊಬ್ಬ ಪುರುಷ ಬಸ್ಸು ಹತ್ತಿ ಖಾಲಿ ಇದ್ದ ಸೀಟುಗಳಲ್ಲಿ ಆಸೀನರಾದರು, ಮಹಿಳೆಯರಲ್ಲಿ ಒಬ್ಬಾಕೆಗೆ ಅಷ್ಟೇನೂ ವಯಸ್ಸಾಗಿರಲಿಲ್ಲ. ಆಕೆ ಸೀಲ್ ಚರ್ಮದ ಕೋಟು ಧರಿಸಿದ್ದಳು. ಅಂದಿನ ಮೇಲ್ಮಧ್ಯಮ ವರ್ಗದ ಸ್ತ್ರೀಯರ […]

ಕಥಾಲೋಕ

ಕತ್ತಲ ಗುಮ್ಮ: ಶೀಲಾ ಗೌಡ

ಕಾಲೇಜ್, ಟುಟೋರಿಯಲ್ಸ್, ಟೆಸ್ಟ್, ಪರೀಕ್ಷೆ ಬರೀ ಇದೇ ಆಗಿದೆ ನಮ್ಮ ದೈನಂದಿನ ಕೆಲಸ. ಬೇಜಾರು ಮಾಡಿಕೊಳ್ಳೋ ಹಾಗಿಲ್ಲ, ಅಕಾಸ್ಮಾತ್ತಾದರೂ ಹೇಳುವ ಹಾಗಿಲ್ಲ. ಅಪ್ಪಿ ತಪ್ಪಿ ಹೇಳಿದರೆ ಕೇಳಿದವರ ಪುಕಸಟ್ಟೆ ಭೋದನೆ ಜೊತೆಗೆ ನಗು ಮೊಗದಿಂದ ಆಲಿಸುವ ಶಿಕ್ಷೆ. ಒಟ್ಟಿನಲ್ಲಿ ಓದೋ, ಮಾರ್ಕ್ಸ್ ತೆಗೆಯೋ ರೇಸಿನಲ್ಲಿ ಓಡ್ತಿದಿವಿ. ಹೀಗೆ ತಮ್ಮ ಬೇಸರವನ್ನು ಹಂಚಿಕೊಳ್ಳುತ್ತ ಟುಟೋರಿಯಲ್ಸ ಕಡೆ ಹೆಜ್ಜೆ ಹಾಕುತಿದ್ದರು ಐವರು ಗೆಳೆಯರು. ಅರವಿಂದನ ಹಾಗೆ ನಾವೆಲ್ಲ ಡಿಪ್ಲೋಮ ಮಾಡಬೇಕಿತ್ತು ಹೀಗೆ ಒಂದೆ ಸರಿ ಟೆನ್ನಷನ್ ಇರ್ತಿರ್ಲಿಲ್ಲ ಎಂದ ಸುನಿಲನ […]

ಕಥಾಲೋಕ

ಸಾಲ: ಅನಂತ ರಮೇಶ್

1 ಹದಿನೈದು ವರ್ಷಗಳಿಂದ ಅಭ್ಯಾಸವಾಗಿ ಹೋಗಿದೆ. ಲತಾಳ ಅದೇ ವ್ಯಂಗ್ಯದ ಮಾತು. “ಸಾಹೇಬರ ಸವಾರಿ ಈವತ್ತು ಯಾವ ಕಡೆಗೆ?”. ನಾನು ಉತ್ತರಿಸುವ ಗೊಡವೆಗೆ ಹೋಗುವುದಿಲ್ಲ. ತಿಂಡಿಯೊಟ್ಟಿಗೆ ಕಾಫಿ ಲೋಟ ಟೇಬಲ್‌ಮೇಲೆ ಬಡಿಯುತ್ತಾಳೆ. ಸಾವಕಾಶ ತಿಂದು ಹೊರಡುತ್ತೇನೆ. ಆ ಸಮಯ ಮೀರುವುದಿಲ್ಲ. ಈಗ ಬೆಳಗಿನ 9:30. ಸಾಮಾನ್ಯವಾಗಿ ಎಲ್ಲರೂ ಆಫೀಸಿಗೆ ಹೊರಡುವ ಸಮಯ! ಹೊರಗೆ ರಸ್ತೆಯಲ್ಲಿ ನಡೆಯುವಾಗ, ಲತಾಳ ಬಗೆಗೆ ಕನಿಕರ ಅನ್ನಿಸುತ್ತೆ. ಅವಳಾದರೂ ಏನು ಮಾಡಿಯಾಳು? ನನಗಂತೂ ತಿಂಗಳಿಗೊಮ್ಮೆ ಸಂಬಳ ತರುವ ಕೆಲಸವಿಲ್ಲ. ಯಾವುದಾದರೂ ಮನೆ ಬಾಡಿಗೆ, […]

ಕಥಾಲೋಕ

ಇಳಾ: ಗಿರಿಜಾ ಜ್ಞಾನಸುಂದರ್‌

“ಪಿಂಕಿ, ಬಬ್ಲೂ ಬನ್ನಿ ಮನೆಗೆ… ತುಂಬ ಹೊತ್ತಾಗಿದೆ.. ಆಶಾ ಆಂಟಿ ಮನೆಗೆ ಬಂದ್ರೆ ನಿಮಗೆ ಏನು ಬೇಡ” ಅಂತ ತಮ್ಮ ಮಕ್ಕಳನ್ನು ಕರೆದುಕೊಂಡು ಹೋದಳು ಪಿಂಕು ಬಬ್ಲೂ ಅಮ್ಮ. ಆಗಲೇ ರಾತ್ರಿ ಎಂಟು ಗಂಟೆ ಆಗಿದೆ… ಇನ್ನೊಂದು ಹತ್ತು ನಿಮಿಷಕ್ಕೆ ಇನ್ನು ಆಶಾ ಆಂಟಿ ಮನೆಯಲ್ಲಿ ಉಳಿದುಕೊಂಡಿದ್ದ ೫- ೬ ಮಕ್ಕಳನ್ನೆಲ್ಲ ಅವರವರ ಮನೆಯವರು ಕರೆದುಕೊಂಡು ಹೋದರು. ಆಶಾ ಎಲ್ಲ ಮಕ್ಕಳು ಹೋದಮೇಲೆ ಸಪ್ಪೆ ಮುಖ ಹಾಕಿಕೊಂಡು ಕುಳಿತಿದ್ದಳು. ಮನೆಯೆಲ್ಲ ಚಾಕಲೇಟ್ ಪೇಪರ್ಸ್, ತಿಂಡಿ ತಿನಿಸುಗಳನ್ನು ಚೆಲ್ಲಿ […]

ಕಥಾಲೋಕ

ಸೇತುವೆ….: ಸತೀಶ್ ಶೆಟ್ಟಿ ವಕ್ವಾಡಿ.

ಅದು ಶರದೃತುವಿನ ಬೆಳಗಿನ ಜಾವ. ಮುಂಗಾರಿನ ಮೋಡಗಳು ತೆರೆಮರೆಗೆ ಸರಿದು ಆಕಾಶ ಶುಭ್ರವಾಗಿತ್ತು. ಹುಣ್ಣಿಮೆಯ ದಿನವಾಗಿದ್ದರಿಂದ ಚಂದಿರ ಬೆಳ್ಳಿಯ ಬಟ್ಟಲಂತೆ ಸುಂದರವಾಗಿ ಕಾಣಿಸುತ್ತಿದ್ದ. ಮೋಡಗಳ ಸವಾಲುಗಳಿಲ್ಲದ ಕಾರಣ ತಾರೆಗಳು ಇಡೀ ಆಗಸವನ್ನು ಆಕ್ರಮಿಸಿ ತಮ್ಮ ಆಧಿಪತ್ಯ ಸ್ಥಾಪಿಸಿ, ಭಾನ ತುಂಬೆಲ್ಲಾ ಬೆಳಕಿನ ಸರಪಳಿ ನಿರ್ಮಿಸಿದ್ದವು. ಹುಣ್ಣಿಮೆಯ ಚಂದಿರ, ರಾತ್ರಿಯ ಕತ್ತಲೆಯನ್ನೆಲ್ಲ ತನ್ನ ಒಡಲೊಳಗೆ ತುಂಬಿಕೊಂಡು ಬೆಳದಿಂಗಳ ಮಳೆಯನ್ನೇ ಸುರಿಸುತ್ತಿದ್ದ. ಪಶ್ಚಿಮದಿಂದ ಬೀಸುತ್ತಿದ್ದ ತಂಗಾಳಿ, ನುಸುಕಿನ ಮಂಜಿನ ಹನಿಗಳ ಸಾಂಗತ್ಯದಿಂದ ಚಳಿಯು ಅನ್ನಿಸಿದ ತಣ್ಣನೆಯ ವಾತಾವರಣ ಸೃಷ್ಟಿಸಿತ್ತು. ಮರಗಿಡಗಳ […]

ಕಥಾಲೋಕ

ಪ್ರೇಮನಾದ: ಸುಮ ಉಮೇಶ್

ರಾಧಮ್ಮನವರ ನಂತರ ಬಹಳ ವರ್ಷಗಳ ಮೇಲೆ ಹುಟ್ಟಿದವನೇ ಅವರ ತಮ್ಮ ಸುಧಾಕರ್. ರಾಧಮ್ಮನಿಗೂ ಸುಧಾಕರ್ ಗೂ ಅಂತರ ಹೆಚ್ಚಾಗಿದ್ದರಿಂದ ಅವನನ್ನು ಕಂಡರೆ ಎಲ್ಲರಿಗೂ ಅತೀವ ಪ್ರೀತಿ. ಅಕ್ಕನ ಮುದ್ದಿನ ತಮ್ಮ ಅವನು. ರಾಧಮ್ಮನವರ ಮದುವೆ ಆದಾಗ ಸುಧಾಕರ್ಗೆ ಕೇವಲ ಎಂಟು ವರ್ಷ. ಮದುವೆ ಆದ ವರ್ಷದೊಳಗೆ ರಾಧಮ್ಮ ಹೆಣ್ಣು ಮಗುವಿನ ತಾಯಿ ಆದಾಗ ಎಲ್ಲರಿಗೂ ಸಂತಸ. ರಾಧಳ ತಂದೆ ತಾಯಿಗೆ ದೂರದ ಒಂದು ಆಸೆ ಮೊಳೆಯಲಾರಂಭಿಸುತ್ತದೆ. ಪುಟ್ಟ ಸುರಭಿಯೇ ಮುಂದೆ ಸುಧಾಕರ್ನ ಕೈ ಹಿಡಿದು ಮೊಮ್ಮಗಳು ಮನೆ […]

ಕಥಾಲೋಕ

ಸಾರ್ಥಕ್ಯ: ಡಾ. ಅಜಿತ್ ಹರೀಶಿ

ಎಂದಿನಂತೆ ಊರ ಈಶ್ವರ ದೇವರ ಪೂಜೆ ಮುಗಿಸಿ ಜನಾರ್ದನ ಭಟ್ಟರು ದೇವಸ್ಥಾನದ ಮೆಟ್ಟಿಲಿಳಿಯುತ್ತಿದ್ದರು. ಅಲ್ಲಿಂದ ಕೂಗಳತೆಯ ದೂರದಲ್ಲೇ ಅವರ ಮನೆ. ಪೂಜೆ ಮುಗಿಸಿ ಏಳುವಾಗಲೇ ತಲೆಯಲ್ಲಿ ಏನೋ ಒಂಥರಾ ಭಾರವಾದ ಹಾಗೆ ಅವರಿಗೆ ಅನ್ನಿಸಿತ್ತು. ನಾಲ್ಕು ಹೆಜ್ಜೆ ಹಾಕಿದಾಗ ದೇಹ ತೂಗಿದಂತೆ ಭಾಸವಾಗಿತ್ತು. ಆದರೂ ಅಲ್ಲಿ ಕುಳಿತುಕೊಳ್ಳದೇ ಬೇಗ ಮನೆಗೆ ಹೋಗಿ ವಿಶ್ರಾಂತಿ ತೆಗೆದುಕೊಂಡರಾಯಿತು ಎಂದುಕೊಂಡು ಕೊನೆಯ ಮೆಟ್ಟಿಲು ಇಳಿಯುತ್ತಿದ್ದರು. ಇಡೀ ದೇಹವು ಬಾಳೆದಿಂಡನ್ನು ಕತ್ತಿಯಿಂದ ಕಡಿದಾಗ ಬೀಳುವಂತೆ ಕುಸಿದು ಬಿತ್ತು. ಕೆಲ ಕ್ಷಣಗಳ ಮಟ್ಟಿಗೆ ಅವರಿಗೆ […]

ಕಥಾಲೋಕ

ಹಣ್ಣೆಲೆಯ ಹಾಡು: ಗಿರಿಜಾ ಜ್ಞಾನಸುಂದರ್

ಎಳೆ ಬಿಸಿಲು ಅಂದವಾದ ಬೆಳಕು ಬೀರುತ್ತಾ ಎಲ್ಲೆಡೆ ಹರಡುತ್ತಿದೆ. ಅಂಗಳದಲ್ಲಿ ಆರಾಮ ಖುರ್ಚಿಯಲ್ಲಿ ಬಿಸಿಲು ಕಾಯುತ್ತ ಮೈಯೊಡ್ಡಿರುವ ಕೃಷ ದೇಹದ ವೃದ್ಧ ಶ್ರೀನಿವಾಸ. ವಯಸ್ಸು ಸುಮಾರು ೮೯- ೯೦ ಆಗಿರಬಹುದು. ಸುಕ್ಕುಗಟ್ಟಿದ ಮುಖ, ಪೂರ್ತಿ ನರೆತ ಕೂದಲು. ಹಣೆಯಮೇಲೆ ಎದ್ದು ಕಾಣುವ ಗೆರೆಗಳು, ಬೊಚ್ಚು ಬಾಯಿ. ಇಷ್ಟೆಲ್ಲದರ ಮಧ್ಯೆ ಏನನ್ನೋ ಕಳೆದುಕೊಂಡು ಹುಡುಕುತ್ತಿರುವಂಥ ಕಣ್ಣುಗಳು. ತನ್ನ ಮಕ್ಕಳು ಮೊಮ್ಮಕ್ಕಳೊಂದಿಗೆ ಸುಖವಾದ ಜೀವನ ಕಾಣುತ್ತಿರುವ ಹಿರಿಯ ಜೀವ. ದಿನವೂ ವಿಶ್ರಮಿಸುತ್ತ, ತನ್ನ ಹಿಂದಿನ ದಿನಗಳನ್ನು ನೆನೆಯುತ್ತ ಮೆಲುಕು ಹಾಕುವ […]

ಕಥಾಲೋಕ

ಕಣ್ಣಾ ಮುಚ್ಚಾಲೆ..: ಜೆ.ವಿ.ಕಾರ್ಲೊ

ಇಂಗ್ಲಿಶ್ ಮೂಲ: ಗ್ರಹಾಂ ಗ್ರೀನ್ಅನುವಾದ: ಜೆ.ವಿ.ಕಾರ್ಲೊ ಬೆಳಕು ಮೂಡುತ್ತಿದ್ದಂತೆ ಪೀಟರನಿಗೆ ತಕ್ಷಣ ಎಚ್ಚರವಾಯಿತು. ಕಿಟಕಿಯ ಗಾಜಿನ ಮೇಲೆ ಮಳೆ ರಪರಪನೆ ಬಡಿಯುತ್ತಿತ್ತು. ಅಂದು ಜನವರಿ ಐದುಅವನ ಕಣ್ಣುಗಳು ಪಕ್ಕದ ಮಂಚದ ಮೇಲೆ ಮುಸುಕು ಎಳೆದುಕೊಂಡು ಇನ್ನೂ ಮಲಗಿದ್ದ ಅವನ ತಮ್ಮ ಫ್ರಾನ್ಸಿಸನ ಮೇಲೆ ನೆಲೆಗೊಂಡವು. ಅವನಿಗೆ ತನ್ನ ಪ್ರತಿರೂಪವನ್ನೇ ನೋಡಿದಂತಾಯಿತು! ಅದೇ ಕೂದಲು, ಕಣ್ಣುಗಳು, ತುಟಿಗಳು, ಕೆನ್ನೆ.. ಅವನ ತುಟಿಗಳ ಮೇಲೆ ಮಂದಹಾಸ ಮೂಡಿತು.ಜನವರಿ ಐದು. ಮಿಸೆಸ್ ಫಾಲ್ಕನಳ ಮಕ್ಕಳ ಪಾರ್ಟಿ ನಡೆದು ಆಗಾಗಲೇ ಒಂದು ವರ್ಷವಾಯಿತೆಂದು […]

ಕಥಾಲೋಕ

ಮೂಡಿದ ಬೆಳಕು…: ಭಾರ್ಗವಿ ಜೋಶಿ

ಎಲ್ಲ ಕಡೆ ಝಗಮಗಿಸುತ್ತಿದ್ದ ದೀಪಗಳ ಸಂಭ್ರಮ. ಸಾಲು ಸಾಲು ದೀಪಗಳು ಇಡೀ ಬೀದಿಯ ಸಂಭ್ರಮ ಸೂಚಿಸುತ್ತಿತ್ತು.. ಆ ಬೀದಿಯ ಕೊನೆಯ ಮನೆಯಲ್ಲಿ ಮಾತ್ರ ಮೌನ. ಬೆಳಕು ತುಸು ಕೊಂಚ ಕಡಿಮೆಯೇ ಇತ್ತು. ಬಡವ -ಬಲ್ಲಿದ ಯಾರಾದರೇನು ಜ್ಯೋತಿ ತಾನು ಬೆಳಗಲು ಬೇಧ ಮಾಡುವುದಿಲ್ಲ ಅನ್ನೋ ಮಾತು ನಿಜವೇ? ಎಣ್ಣೆಗೆ ಕಾಸು ಇಲ್ಲದ ಬಡವರ ಮನೆಯಲ್ಲಿ ಜ್ಯೋತಿ ಉರಿದಿತೇ? ಬೆಳಕು ಚಲ್ಲಿತೇ? ಹೀಗೆ ಕತ್ತಲು ಆವರಿಸಿದ ಆ ಮನೆ, ಮನೆಯೊಡತಿ ಜಾನಕಮ್ಮ, ಪತಿ ರಾಮಣ್ಣ ಅವರ ಒಬ್ಬನೇ ಮಗ […]

ಕಥಾಲೋಕ

ಒಂಟೆ ಡುಬ್ಬ: ಡಾ. ಅಶೋಕ್. ಕೆ. ಆರ್

ಬೈಕೋಡಿಸುವಾಗ ರಶಿಕ ಕನ್ನಡ ಹಾಡುಗಳನ್ನು ಕೇಳುವುದಿಲ್ಲ.ಬ್ಲೂಟೂಥ್ ಹೆಲ್ಮೆಟ್ಟಿನಲ್ಲಿ ಸಣ್ಣಗಿನ ದನಿಯಲ್ಲಿ ಗುನುಗುತ್ತಿದ್ದುದು ಮಲಯಾಳಂ, ತಮಿಳು ಹಾಡುಗಳು.ಕನ್ನಡ ಹಾಡ್ ಹಾಕಂಡ್ರೆ ಪ್ರತಿ ಪದಾನೂ ಅರ್ಥವಾಗ್ತ ಆಗ್ತ ಹಾಡಿನ ಗುಂಗಲ್ಲಿ ಸುತ್ತಲಿನ ಪರಿಸರ ಮರ್ತೋಗ್ತದೆ, ಹಂಗಾಗಿ ಭಾಷೆ ಅರ್ಥವಾಗ್ದಿರೋ ಹಾಡುಗಳೇ ವಾಸಿ.ರಾತ್ರಿಯಿಂದ ಬೋರ್ಗರೆದಿದ್ದ ಮಳೆ ಬೆಳಿಗ್ಗೆ ವಿರಮಿಸಿತ್ತು.“ಈ ಕಡೆ ರೋಡಲ್ಲಿ ಒಂದ್ ಮೂವತ್ ಕಿಲೋಮೀಟ್ರು ಹೋದ್ರೆ ಕರ್ಮುಗಿಲು ಅನ್ನೋ ಊರು ಸಿಗ್ತದೆ. ಹೆಚ್ಚೇನಿಲ್ಲ ಅಲ್ಲಿ. ಒಳ್ಳೆ ಸನ್ ರೈಸ್ ಪಾಯಿಂಟಿದೆ ಅಲ್ಲಿ. ಮೋಡ ಇದ್ರೆ ನಿರಾಸೆಯಾಗ್ತದೆ. ನೋಡಿ. ಡಿಸೈಡ್ ಮಾಡಿ” […]

ಕಥಾಲೋಕ

ಮತ್ತೆ ವಸಂತ: ಶ್ರೇಯ ಕೆ ಎಂ

ಸ್ಮಿತಾ ಹಾಗೆಯೇ ಚೇರ್ ಗೆ ಒರಗಿದ್ದಾಳೆ. ಕಣ್ಣಂಚಲ್ಲಿ ನೀರಾಡಿದೆ. ಹಾಗೇ ಹಿಂದಿನ ನೆನಪುಗಳತ್ತ ಜಾರುತ್ತಿದೆ ಮನಸು. ಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿದ ಸ್ಮಿತಾ ಓದಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಆಟೋಟ ಸ್ಪರ್ಧೆಗಳಲ್ಲಿ ಎಲ್ಲದರಲ್ಲೂ ಮುಂದು. ಮನೆಯಲ್ಲಿ ಮುದ್ದಿನ ಮಗಳು. ಒಡಹುಟ್ಟಿದವರೊಂದಿಗೆ ಬೆಳೆದ ಸ್ಮಿತಾ ಮನೆಯವರೆಲ್ಲರ ಪಾಲಿನ ಅಚ್ಚುಮೆಚ್ಚು. ಮಧ್ಯಮವರ್ಗದ ಕುಟುಂಬವಾದರೂ ಇದ್ದುದರಲ್ಲಿಯೇ ಸುಖವಾಗಿದ್ದ ಸಂಸಾರ. ಪದವಿ ಓದಿನ ಜೊತೆಗೆ ಹಲವಾರು ಕಲೆಗಳನ್ನು ಕಲಿತವಳು. ಹೀಗೆ ಸಾಗುತ್ತಿದ್ದ ಸಂಸಾರದಲ್ಲಿ ಒಮ್ಮೆ ಅದೆಲ್ಲಿಂದಾನೋ ಒಂದು ಗಂಡಾಂತರ ಬಂದು ಸ್ಮಿತಾಳ ಬಾಳೇ ಛಿದ್ರವಾಗಿ […]

ಕಥಾಲೋಕ

ಬಯಲಾಗದ ಬಣ್ಣ: ಅನುರವಿಮಂಜು

ಶೋಭಿತಾಳ ಗಂಡ ತೀರಿಕೊಂಡು ವರ್ಷ ಕಳೆದಿದೆ, ಅವಳೀಗ ಒಂಟಿ ಜೀವನ ನಡೆಸುತ್ತಿದ್ದಾಳೆ. ನಿನ್ನ ಅಂದಿನ ಪ್ರೀತಿ ಇನ್ನು ಜೀವಂತ ಇರುವುದಾದರೆ ಅವಳನ್ನು ಮದುವೆಯಾಗಿ ಹೊಸ ಬದುಕನ್ನು ನೀಡು. ಆಕಸ್ಮಿಕವಾಗಿ ಭೇಟಿಯಾದ ಆತ್ಮೀಯ ಗೆಳೆಯ ಗೌತಮ್ ಆಚ್ಚರಿಯ ಸಂಗತಿ ತಿಳಿಸಿ ಸಲಹೆ ನೀಡಿದ. ಆತನ ಮಾತು ಕೇಳಿ ನನ್ನೊಳಗಿದ ಸೂಕ್ತ ಬಯಕೆಗಳು ಗರಿಗೆದರಿದವು. ಒಂದು ನಿರ್ಧಾರಕ್ಕೆ ಸಿದ್ದನಾದೆ, ಶೋಭಿತಾಳೊಂದಿಗೆ ಉತ್ತಮ ಸ್ನೇಹ ಸಂಬಂಧ ವಿರಿಸಿದ್ದರಿಂದ ನನ್ನ ಮಾತನ್ನು ತಿರಸ್ಕರಿಸಲಾರಳೆಂಬ ನಂಬಿಕೆ ಇತ್ತು. ಒಂಟಿ ಜೀವನ ಅವಳಿಗೂ ಬೇಸರ ತಂದಿರಬಹುದು. […]