ಕಥಾಲೋಕ

ನೀಚನ ಸಾವು: ಮಂಜು ಡಿ ಈಡಿಗೆರ್

ಓದೋಕ್ಕೆ ಅಂತ ರೂಮ್ ಮಾಡ್ಕೊಂಡು ಕೊಪ್ಪಳ ದಲ್ಲೇ ಇದ್ದೆ. ದಿನ ಬೆಳಗ್ಗೆ ರನ್ನಿಂಗು ವರಮಪ್ಪು ವರ್ಕೌಟು ಮಾಡೋದು ನನ್ನ ದಿನ ನಿತ್ಯದ ಅಭ್ಯಾಸ ಆಗಿತ್ತು. ಹಾಗಾಗಿ ದಿನ ಬೆಳಗ್ಗೆ ಸ್ಟೇಡಿಯಂಗೆ ಪ್ರಾಕ್ಟೀಸ್ ಗೆ ಹೋಗ್ತಾ ಇದ್ದೆ. ಸಂಡೇ ಪ್ರಾಕ್ಟೀಸ್ ಮುಗಿಸಿಕೊಂಡು ರೂಮ್ಗೆ ಬಂದೆ. ನನ್ನ ರೂಮಿನ ಪಕ್ಕ ಮನೆ ಖಾಲಿ ಆಗಿತ್ತು, ಅದಕ್ಕೆ ಯಾರೋ ಹೊಸಬರು ಬಂದಾಗೆ ಇತ್ತು. ನನ್ನ ರೂಮು ಮತ್ತೆ ಅವರ ಮನೆ ಎರಡು ಪಕ್ಕದಲೆ ಇರುವುದರಿಂದ ಯಾರು ಎಂದು ಗಮನಿಸಬೇಕಾಯಿತು. ಮನೆ ಇಂದ ಆಚೆ ಒಬ್ಬ ಯಂಗ್ ಆಗಿರೋ ಲೇಡಿ ಹೊರಗಡೆ ಬಂದ್ರು ತುಂಬಾ ಎಂಗ ಆಗಿದ್ರು ನೋಡಿದ್ರೆ ಅವರಿಗೆ ಮದುವೆ ಆಗಿಲ್ಲ ಅನಿಸುತ್ತಿತ್ತು. ಆದರೂ ಕೊರಳಲ್ಲಿ ಮಾಂಗಲ್ಯ ಸರ ನೇತಾಡುತ್ತಿತ್ತು. ಅದನ್ನು ನೋಡಿ ಮದುವೆಯಾಗಿದೆ ಅಂತ ಕನ್ಫರ್ಮ್ ಆಯ್ತು. ತುಂಬಾ ಬ್ಯೂಟಿಫುಲ್ ಆಗಿದ್ದರು ಯಂಗ್ ಲೇಡಿ. ಅವತ್ತು ಅದೇ ಏನು! ನನ್ನ ಗ್ರಹಚಾರನೋ! ಅದೃಷ್ಟನೋ ಗೊತ್ತಿಲ್ಲ. ಅವರು ನನ್ನ ಕಣ್ಣಿಗೆ ಬಿದ್ದರೂ. ನೋಡಕ್ಕೆ ತುಂಬಾ ಚೆನ್ನಾಗಿದ್ದರೂ.

ಒಂದೇ ಮಾತಲ್ಲಿ ಹೇಳಬೇಕಂದ್ರೆ ಈಗಿನ ಹೀರೋಯಿನಿಯರಿಗೆ ಹೋಲಿಸಬೇಕೆಂದರೆ ಅದಿತ್ಯ ಪ್ರಭುದೇವ್ ಅವರಿಗಿಂತ ತುಂಬಾ ಚೆನ್ನಾಗಿ ಇದ್ದರು ವಿಥೌಟ್ ಮೇಕಪ್ನಲ್ಲಿ, ಅವರನ್ನ ನೋಡಿದ್ರೆ ನೋಡುತ್ತಾನೆ ಇರಬೇಕು ಅನಿಸುತ್ತಾ ಇತ್ತು. ಮನಸಲ್ಲಿ ಒಂದು ಆಸೆ ಶುರುವಾಯಿತು ಅವರನ್ನ ಹೇಗಾದ್ರೂ ಮಾಡಿ ಮಾತನಾಡಿಸಲೆ ಬೇಕು ಅಂತ ನನ್ನ ಮನಸ್ಸು ಪಟ್ಟು ಇಡಿಯಿತು. ಅವರು ಹೊರಗಡೆ ಬಂದಾಗ ಮುಖವೆಲ್ಲ ಬಾಡಿತ್ತು,ಏನು ಸ್ಯಾಡ್ ಮೊಡ್ ಅಲ್ಲಿ ಇದ್ದಾಗೆ ಇದ್ದರೂ. ಅವರನ್ನ ಮತನಾಡಿಸಬೇಕು ಅಂತ ಮನಸ್ಸು ಆತುರಿಯುತ್ತಿತ್ತು. ಹೇಗೆ ಮಾತನಾಡಿಸೋದು ಗೊತ್ತಿಲ್ಲ ಪರಿಚಯವಂತು ಮೊದಲೇ ಇಲ್ಲ. ನನಿಗೆ ಸ್ವಲ್ಪ ಪರಿಚಯ ಆದ್ರೆ ನಾನು ಬಿಡುವ ಮಗನೇ ಅಲ್ಲ. ಮಹಡಿ ಮೇಲಗಡೆ ಓದೋಕೆ ಅಂತ ಬುಕ್ಸು ಹಿಡುಕೊಂಡು ಹೋದರುನು, ಓದಿದ್ದಕ್ಕಿಂತ ಅವರನ್ನು ನೋಡಿದ್ದೇ ಹೆಚ್ಚು. ಮನಸ್ಸು ಅವರನ್ನು ನೋಡಬೇಕು ಅನ್ನಿಸ್ತಾ ಇತ್ತು. ಅವರು ನನ್ನ ಒಂದು ಸಾರಿನು ನೋಡಿರ್ಲಿಲ್ಲ. ನಾನು ಅವರ ದಿನಾ ನೋಡ್ತಾ ಇದ್ದೆ. ಎರಡು ದಿನ ತುಂಬಾ ಸರ್ಕಸ್ ಮಾಡಿದೆ,ಅವರು ನನ್ನ ನೋಡಲಿ ಅಂತ. ಅವರು ಅದೇಗೂ ನನ್ನ ನೋಡೇಬಿಟ್ರು. ಬರೀ ನೋಡಿದ್ದರೆ ಏನು ಆಗುತ್ತಿರಲಿಲ್ಲ. ಆದರೆ ಅವರು ನೋಡಿದ ಆ ನೋಟ ಅವರ ಮುಖದಲ್ಲಿ ಆ ಸ್ಮೈಲ್, ಎಂಥ ಹುಡುಗರನ್ನು ಹುಚ್ಚೆಬ್ಬಿಸಿಬಿಡುವಂತಿತ್ತು. ಆ ಒಂದು ಕ್ಷಣ ಮನಸ್ಸಿಗೆ ಸ್ವರ್ಗನೆ ರಫ್ ಅಂತ ಪಾಸ್ ಆದಾಗೆ ಆಯಿತು.

ಹಾಗೆ ಎರಡು ಮೂರು ದಿನಗಳು ಕಳೆದು ಹೋದವು. ಅವರು ನನ್ನ ನೋಡಿದಾಗೆಲ್ಲ ಸ್ಮೈಲ್ ಮಾಡ್ತಾನೆ ಇರ್ತಿದ್ರು. ಅವರ ಸ್ಮೈಲಲ್ಲಿ ಏನೋ ಒಂದು ಮ್ಯಾಜಿಕ್ ಇತ್ತು. ನನ್ನ ಇಗ್ನೊಟೈಸರ್ ಮಾಡಿದಾಗೆ ಆಗ್ಬಿಟ್ಟಿತ್ತು, ಅವರ ಆ ಒಂದು ನಗು. ಅವರನ್ನು ಒಂದು ಸಾರಿ ಆದರೂ ಅವರನ ಕೈ ಕುಲಿಕಿ ಮಾತಾಡಿಸಬೇಕು ಅಂತ ಆಸೆ ಹೆಚ್ಚಾಗುತ್ತಾನೆ ಇತ್ತು.ಅವರು ಕೂಡ ಒಂತರ ಆಸೆಯಿಂದ ನನ್ನನ್ನ ಬಯಸಿದಾಗೆ ಅನಿಸುತ್ತಿತ್ತು.

ಒಂದಿನ ಹಾಗೆ ಪ್ರಾಕ್ಟೀಸ್ ಮುಗಿಸಿಕೊಂಡು ಬರಬೇಕಾದರೆ, ಯಾರು ಒಬ್ಬರು”ಹಲೋ ಮಿಸ್ಟರ್ ಬಾಯ್” ಅಂತ ಹೇಳಿ ಸ್ವೀಟ್ ಆದ ವಾಯ್ಸ್ ನಿಂದ ನನ್ನ ಕರೆದಾಗ ಆಯಿತು. ಹಿಂದೆ ತಿರುಗಿ ನೋಡಿದರೆ ಆ ಯಂಗ್ ಲೇಡಿ ನಿಂತಿದ್ದರು. ನನಗೆ ಒಂದು ಕಡೆ ಖುಷಿ ಇನ್ನೊಂದು ಕಡೆ ಭಯ ಹೆಚ್ಚಾಯಿತು. ನಾನು ಅವರನ್ನು ನೋಡ್ತಾ ಇರೋದು ತಪ್ಪಾಗಿ ತಿಳ್ಕೊಂಡಿದ್ದಾರಾ? ಅಥವಾ ನನ್ನ ಜೊತೆ ಮಾತನಾಡಿಸಬೇಕು ಅಂತನ ಬಂದಿದ್ದಾರಾ? ಒಂದು ಕಡೆ ಭಯ ಮತ್ತೆ ಇನ್ನೊಂದು ಕಡೆ ಖುಷಿಯಾಯಿತು.

ಏನೇ ಇರಲಿ ಅಂತ ಗಟ್ಟಿ ಧೈರ್ಯ ಮಾಡಿ ನಿಂತೆ ಬಿಟ್ಟೆ. “ಹಲೋ ಮಿಸ್ಟರ್ ಬಾಯ್, ಸ್ವಲ್ಪ ಬನ್ನಿ” ಅಂತ ಕರೆದರು. ನಾನು ಅವರ ಹತ್ತಿರಕ್ಕೆ ಹೋದಾಗ,ಅವರು “ರೂಮ್ ನಲ್ಲಿ ನೀವು ಒಬ್ಬರೇನಾ ಇರೋದು, ಸ್ಟಡಿ ಮಾಡ್ತಾ ಇದ್ದೀರಾ? ಅಂತ ಕೇಳಿದರು. ಹೌದು ಮೇಡಂ ಸ್ಟಡಿ ಮಾಡ್ತಾ ಇರೋದು ಆದರೆ ಒಬ್ಬನೇ ಇಲ್ಲ ನನ್ನ ಜೊತೆ ಫ್ರೆಂಡ್ಸ್ ಇದ್ದಾರೆ ಅವರು ಎಲ್ಲ ಊರಿಗೆ ಹೋಗಿದ್ದಾರೆ ಮೇಡಂ ಅಂತ ಹೇಳಿದೆ. “ಓ ಹೌದಾ! ಸರಿ ಹಂದಾಗೆ..!ನಿಮ್ಮ ಹೆಸರು.?” ಅಂತ ಕೇಳಿದರು. ನಾನು ಅದಕ್ಕೆ ಮಂಜು ಅಂತ ಹೇಳಿದೆ. ಅದಕ್ಕೆ ಸೋ ನೈಸ್ ನೇಮ್ ಅಂತ ನಗುತ್ತಾ.” ನನ್ನ ಹೆಸರು ಶರ್ಮಿಳ” ಅಂತ ಹೇಳಿದರು. ನಾನು ಅದಕ್ಕೆ ನಿಮ್ಮ ನಮೆ ಕೂಡ ತುಂಬಾ ಚನಾಗಿದೆ ಅಂತ ಹೇಳಿದೆ. ಥ್ಯಾಂಕ್ಯೂ ಮಂಜು ಅಂತ ಸ್ಮೈಲ್ ಮಾಡ್ತಾ ಹೇಳಿದರು.( ಆ ಹೆಸರಿಗಿಂತ ನೀವೇ ತುಂಬಾ ಹಾಟ್ ಆ್ಯಂಡ್ ಸ್ವೀಟ್ ಇದೀರಾ ಅಂತ ನನ್ನ ಮನಸ್ಸಿನಲ್ಲೆ ಅಂದುಕೊಂಡೆ).
ಮಂಜು ಒಂದು ಸ್ಮಾಲ್ ಹೆಲ್ಪ್ ಮಾಡ್ತೀರಾ ಅಂತ ಅವರು ಕೇಳಿದರು. ನನಿಗೆ ತುಂಬಾ ಖುಷಿ ಆಯಿತು. ಮನಸ್ಸಿನೊಳಗೆ ಖುಷಿಪಡುತ್ತಾ. ಹಾ ಮೇಡಂ ಮಾಡ್ತೀನಿ ಏನು ಹೇಳಿ ಅಂತ ಕೇಳಿದೆ. ಅದಕ್ಕೆ ಅವರು ಅದೂ…. ಇಲ್ಲಿ ಬಟ್ಟೆ ಒಣಗಾಕೋ ಹಗ್ಗ ಕಟ್ಟಾಗಿದೆ ಅದನ್ನ ಸ್ವಲ್ಪ ಮೇಲ್ಗಡೆ ಕಟ್ಟಿ ಕೊಡ್ತೀರಾ ಅಂತ ಕೇಳಿದರು. ನಾನು ಅದಕ್ಕೆ ಅಯ್ಯೋ ಅಷ್ಟೇನಾ ಅಂತ ಹೇಳಿ ಅವರ ಗೇಟ್ ಒಳಗಡೆ ಹೋಗಿ ಕಟ್ ಆಗಿರೋ ಹಗ್ಗನ ತಗೊಂಡು ಮೇಲ್ಗಡೆ ಕಟ್ಟೋಕೆ ಹೋದೆ. ಅವರು ಕೂಡ ನನಗೆ ಕಟ್ಟೋಕೆ ಸಹಾಯ ಮಾಡತೊಡಗಿದರು. ಹಗ್ಗ ಕಟ್ಟಿ ಕೆಳಗೆ ಇಳಿದೇ. ಥ್ಯಾಂಕ್ ಯೂ ಸೋ ಮಚ್, ಸ್ವಲ್ಪ ವೇಟ್ ಮಾಡಿ ಅಂತ ಹೇಳಿ ಒಳಗಡೆ ಹೋದರು. ಒಳಗಿಂದ ಒಂದು ಪ್ಲೇಟ್ ಅಲ್ಲಿ ಬಿಸ್ಕೆಟ್ ಮತ್ತೆ ಟೀ ತೆಗೆದುಕೊಂಡು ಬಂದರು. ತಗೋಳಿ ಅಂತ ಹೇಳಿದರು. ಬೇಡ ಮೇಡಂ, ನಾನ್ ಜಸ್ಟ್ ಇವಾಗ್ ತಾನೇ ಟೀ ಕುಡಿದು ಬಂದಿದ್ದೇನೆ ಬೇಡ ಅಂತ ಹೇಳಿದೆ. ಅದಕ್ಕೆ ಅವರು ಪರವಾಗಿಲ್ಲ ತಗೊಳ್ಳಿ ಅಂತ ಅಂದ್ರು.

ಅವರು ಕೊಟ್ಟ ಟೀ ಕುಡಿತಾ ಅವರನ್ನೇ ನೋಡ್ತಾ ತುಂಬಾ ಚೆನ್ನಾಗಿದೆ ಟೀ ಅಂತ ಹೇಳಿದೆ.ಅದಕ್ಕೆ ಅವರು ಹೌದ ಟೀ ಅಷ್ಟೇ ಚೆನ್ನಾಗಿದೆನಾ ಅಂತ ಕೇಳಿದರು. ಅದಕ್ಕೆ ನಾನು “ಬಿಸ್ಕೇಟು ಚೆನ್ನಾಗಿದೆ ಜೊತೆಗೆ ನೀವು ತುಂಬಾ ಚೆನ್ನಾಗಿದ್ದೀರಾ” ಅಂತ ಹೇಳಿದೆ ಅದಕ್ಕೆ ಅವರು ಸ್ಮೈಲ್ ಮಾಡ್ತಾ ಟೀ ಕಪ್ನ ಒಳಗೆ ತಗೊಂಡು ಹೋದರು. ಮತ್ತೆ ವಾಪಸ್ ಬಂದರು ಸರಿ ಮೇಡಂ ನಾನು ಹೋಗ್ಬಹುದೇ ಅಂತ ಕೇಳಿದೆ. ಆ ಸರಿ ಹೋಗಿ ಅಂತ ಹೇಳಿದರು. ಮತ್ತೇನು ಗೊತ್ತಿಲ್ಲ ಒಂದು ನಿಮಿಷ ಅಂತ ಹೇಳಿದರು ನಾನು ನಿಂತೆ “ಇಫ್ ಯು ಡೋಂಟ್ ಮೈಂಡ್, ಫ್ರೀ ಇದ್ರೆ ಸಂಡೆ ಶಾಪಿಂಗ್ ಗೆ ಬರ್ತೀರಾ” ಅಂತ ಕೇಳಿದರು. “ನಾನು ಬರಬೇಕಾ? !” ಅಂತ ಕೇಳಿದೆ.”ಹಾ ನನಗೆ ಈ ಊರು ಹೊಸದು ಯಾರು ಪರಿಚಯ ಇಲ್ಲ ಹಾಗಾಗಿ ನನಗೆ ಸ್ವಲ್ಪ ಮಾರ್ಕೆಟ್ ನ ತೋರಿಸಿದ್ರೆ ಚೆನ್ನಾಗಿರುತ್ತೆ” ಅಂತ ಹೇಳಿದರು. “ಅಯ್ಯೋ ನಮ್ ಕೊಪ್ಪಳ, ಅದ್ರಲ್ಲಿ ಏನಿದೆ ಮಣ್ಣು,ಬನ್ರೀ ಮೇಡಂ ತೋರಿಸ್ತೀನಿ”ಅಂತ ಹೇಳಿದೆ. ಮತ್ತೆ ಮಾತು ಮುಂದುವರಿಸಿ ನಿಮಗೆ ಏನಾದರೂ ಸಾಮಗ್ರಿ ಬೇಕಾದ್ರೆ ಹೇಳಿ ನಾನೇ ತಂದು ಕೊಡುತ್ತೇನೆ. “ಏನೇ ಸಹಾಯ ಬೇಕಿದ್ರೂ ಕೇಳಿ ಅಗತ್ಯವಾಗಿ ಮಾಡಿಕೊಳ್ಳುತ್ತೇನೆ” ಅಂತ ಹೇಳಿದೆ.

ಅದಕ್ಕೆ ಅವರು ತುಂಬಾ ಖುಷಿಯಿಂದ,” ಆಯ್ತು, ಥ್ಯಾಂಕ್ಯೂ ಸೋ ಮಚ್ ಮಂಜು, ನೀವೇನ್ ಅನ್ಕೊಂಡ್ನಲ್ಲ ಅಂತ ಅಂದ್ರೆ ನಿಮ್ಮ ಕಾಂಟಾಕ್ಟ್ ನಂಬರ್ ಸಿಗುತ್ತಾ” ಅಂತ ಕೇಳಿದರು.ರೋಗಿ ಬಯಸಿದ್ದೂ ಅದನ್ನೇ ವೈದ್ಯ ಹೇಳಿದ್ದೂ ಅದನ್ನೇ.ಅಂತ ಮನಸ್ಸಿನಲ್ಲೇ ಖುಷಿ ಪಡುತ್ತಾ. ಹಾ.. ತಾಗೊಳಿ ಅಂತ ಹೇಳಿ ಅವರ ಮೊಬೈಲ್ ತಗೊಂಡು ನನ್ನ ನಂಬರ್ ಅವರ ಮೊಬೈಲ್ ನಲ್ಲಿ ಟೈಪ್ ಮಾಡಿ ಕೊಟ್ಟೆ. ಅವರು ನನ್ ನಂಬರಿಗೆ ಕಾಲ್ ಮಾಡಿ ಕಟ್ ಮಾಡಿದರು ಅವರ ನಂಬರ್ ನನ್ ಕಡೆ ಸೇವ್ ಮಾಡ್ಕೊಂಡೆ. ಅಂದ ಹಾಗೆ ಮೇಡಂ ನಿಮ್ಮ ಮನೆಯಲ್ಲಿ ನೀವು ಒಬ್ರೆನಾ ಇರೋದು ಅಂತ ಕೇಳಿದೆ. “ಹಾ… ಈಗ ಸದ್ಯಕ್ಕೆ ನಾನು ಒಬ್ಬಳೇ ಇರೋದು” ಅಂದರು.” ಆದ್ರೆ ನಿಮ್ಮ ಯಜಮಾನರು ಏಲ್ಲಿ ಇರುತ್ತಾರೆ” ಅಂತ ಕೇಳಿದೆ. ಅದಕ್ಕೆ ಅವರು “ಮೈಸೂರು ನಲ್ಲಿ ರೈಲ್ವೆ ಡಿಪಾರ್ಟ್ಮೆಂಟ್ ಅಲ್ಲಿ ಜಾಬ್ ಮಾಡ್ತಾ ಇದ್ದಾರೆ ಇನ್ನು ಒನ್ ಮಂತ್ ನಲ್ಲಿ ಇಲ್ಲಿಗೆ ಟ್ರಾನ್ಸ್ಫರ್ ಇದೆ. ನಂದು ಇಲ್ಲಿಗೆ ಟ್ರಾನ್ಸ್ಫರ್ ಆಯ್ತು ಹಾಗಾಗಿ ನಾನು ಇಲ್ಲಿಗೆ ಶಿಫ್ಟ್ ಆಗಿದ್ದೇನೆ” ಅಂತ ಹೇಳಿದರು ಅದಕ್ಕೆ “ನಿಮ್ಮದು ಯಾವ ಊರು ನೀವು.. ಜಾಬ್ ಮಾಡ್ತೀರಾ, ಯಾವ ಜಾಬ್ ಅಂತ ಕೇಳಿದೆ. ಅದಕ್ಕೆ ಅವರು ನಮ್ಮದು ಹಾಸನ್, ಅಗ್ರಿಕಲ್ಚರ್ ಆಫೀಸ್ ಅಲ್ಲಿ work ಮಾಡ್ತೀನಿ ಅಂತ ಹೇಳಿದರು. “ನೀವೇನು ಓದುತ್ತಾ ಇರೋದು” ಅಂತ ಕೇಳಿದರು. ಅದಕ್ಕೆ ನಾನು ಬಿಎ ಫಸ್ಟ್ ಇಯರ್ ಅಂತ ಹೇಳಿದೆ.”ಓ ಹೌದಾ” ಅಂತ ಹೇಳಿದರು ” ಹಾ ಹೌದ ಮೇಡಂ ಸರಿ ಏನಾದ್ರೂ ಇದ್ರೆ call ಮಾಡಿ ಮೇಡಂ ಅಂತ ಹೇಳಿ.ಅಲ್ಲಿಂದ ನನ್ನ ರೂಮ್ ಗೆ ಬಂದೆ.

ಏನೇ ಕೆಲಸ ಇದ್ದರೂ ಫೋನ್ ಮಾಡ್ತಿದ್ರು. ನಾನು ಹೋಗಿ ಅವರ ಕೆಲಸನಾ ಮುಗಿಸಿ ಕೊಟ್ಟು ಬರ್ತಿದ್ದೆ. ಹಾಗೆ ಅವರ ಜೊತೆ ನನಗೆ ಒಳ್ಳೆ ಸ್ನೇಹ ಸಂಬಂಧ ಬೆಳೆಯಿತು ಸ್ನೇಹ ತುಂಬಾ ಹತ್ತಿರವಾಯಿತು. ಅವರು ನನ್ನ ಜೊತೆ ನಡೆದುಕೊಳ್ಳುವ ರೀತಿ ತುಂಬಾ ವಿಚಿತ್ರವಾಗಿತ್ತು. ಒಂದೊಂದು ಸಾರಿ ನನ್ನನ್ನ ಮಗು ತರ ನೋಡ್ತಾ ಇದ್ರು, ಇನ್ನೂ ಒಂದು ಸಾರಿ ಫ್ರೆಂಡ್ಸ್ ತರ ಟ್ರೀಟ್ ಮಾಡ್ತಾ ಇದ್ರು, ಇನ್ನೂ ಒಂದು ಸಾರಿ ನನ್ನ ಮೇಲೆ ತುಂಬ ಕಾಳಜಿ,ಪ್ರೀತಿ ತೋರಿಸ್ತಾ ಇದ್ದರು. ನನಗೆ ಗೊತ್ತಿಲ್ಲದ ಹಾಗೆ ಅವ್ರ್ ಮೇಲೆ ಒಂದು ಫೀಲ್ ಶುರುವಾಯಿತು. ಏನು ಗೊತ್ತಿಲ್ಲದ ಹಾಗೆ ಅವರನ್ನ ಮನಸ್ಸು ಬಯಸುತ್ತಿತ್ತು. ಹುಡುಗೀರನ್ನ ಪ್ರೀತಿಸಿದರೆ ಎಲ್ಲಾ ನಾವೇ ಖರ್ಚು ಮಾಡಬೇಕಾಗುತ್ತದೆ. ಆದರೆ ಇವರನ್ನ ಪಟಾಯಿಸಿದರೆ ಎಲ್ಲಾ ಖರ್ಚು ಅವರೇ ನೋಡಿಕೊಳ್ಳುತ್ತಾರೆ ಮತ್ತು ಅತಿಯಾದ ಪ್ರೀತಿ ಕಾಳಜಿ ತೋರಿಸುತ್ತಾರೆ, ಅವರ ಆಸೆಗಳನ್ನು ಈಡೇರಿಸಿದರೆ ಸಾಕು ಎಂದು ಮನಸ್ಸು ಹೇಳುತ್ತಿತ್ತು.ಅವರನ್ನು ನೋಡಿದಾಗೆಲ್ಲ ನನ್ನ ಮನಸ್ಸು. ಮನಸ್ಸಿನಲ್ಲಿ ವಿಪರೀತ ಆಸೆಗಳು ಹುಚ್ಚು ಭಾವನೆಗಳು. ಅವರ ತೋರಿಸುವಂತ ಕಾಳಜಿ ಪ್ರೀತಿ ನನ್ನನ್ನ ಮನಸ್ಸನ್ನ ಹುಚ್ಚು ಎಬ್ಬಿಸಿತ್ತು. ಅವರನ್ನ ಹೇಗಾದರೂ ಮಾಡಿ ಸೇರಲೇಬೇಕು, ದೇಹದ ಮಿಲನಕ್ಕಾಗಿ ಮನಸ್ಸು ಭಾವ ಆತುರಿತಾ ಇತ್ತು ಎಂಬ ಭಾವನೆ ಶುರುವಾಯಿತು. ನನ್ನೊಡನೆ ಅವರು ನಡೆದುಕೊಳ್ಳುವ ವರ್ತನೆ ವಿಚಿತ್ರವಾಗಿತ್ತು. ಅವರನ್ನು ಹೇಗೆ ಕೇಳುವುದು ಈ ವಿಷಯವನ್ನು ಎಂದು ಗೊಂದಲಕ್ಕೆ ಈಡಾಗಿಬಿಟ್ಟಿದ್ದೆ.

ಬೆಳ್ಳಂ ಬೆಳಗ್ಗೆ ಕಾಲ್ ಬಂತು ಕಾಲ್ ಅವರದ್ದೇ ಆಗಿತ್ತು, ರಿಸೀವ್ ಮಾಡಿದೆ. “ಹೇ ಮಂಜು ಬೇಗ ರೆಡಿಯಾಗು, ಶಾಪಿಂಗ್ ಹೋಗೋಣ” ಅಂತ ಹೇಳಿ ಕಾಲ್ ಕಟ್ ಮಾಡಿದರು. ಯಾಕೆ ಏನು ಅಂತ ಕೇಳಲಿಲ್ಲ. ಎದ್ದ್ ರೆಡಿಯಾಗಿ ಹೊರಗಡೆ ಬಂದೆ,ಇಬ್ಬರು ಅವರ ಸ್ಕೂಟಿ ಮೇಲೆ ಹೋದೆವು. ಅವರೇ ಡ್ರೈವಿಂಗ್ ಮಾಡ್ತಾ ಇದ್ರು ಹಿಂದುಗಡೆ ನಾನು ಕೂತಿದ್ದೆ ನನ್ನ ಕೈ ಅವರ ಸೊಂಟಕ್ಕೆ ತಾಗುತ್ತಿತ್ತು. ಅದನ್ನು ಗಮನಿಸಿದರೂ, ಅವರು ಏನನ್ನು ಹೇಳದೆ ಸುಮ್ಮನೆ ಇದ್ದರು. ಬಟ್ಟೆ ಶಾಪಿಗೆ ಕರೆದುಕೊಂಡು ಹೋದರು ಅವರಿಗೆ ಬೇಕಾದ ಬಟ್ಟೆಗಳನ್ನೆಲ್ಲ ತೆಗೆದುಕೊಂಡು ನನಗೆ ಒಂದು ಜೊತೆ ಪ್ಯಾಂಟ್ ಟಿ-ಶರ್ಟ್ ತೆಗೆದುಕೊಂಡು “ಚೆನ್ನಾಗಿದೆಯಲ್ಲ ? ಅಂತ ಕೇಳಿದರು”. ನಾನು ಯಾರಿಗೆ ಮೇಡಂ ಈ ಡ್ರೆಸ್ ಅಂತ ಕೇಳಿದೆ. “ಮನೆಗೆ ಬಾ, ಎಲ್ಲ ಹೇಳ್ತೀನಿ” ಅಂತ ಹೇಳಿದರು. ಶಾಪಿಂಗ್ ಮುಗಿಸಿಕೊಂಡು ಮನೆಗೆ ಬಂದೆವು. ಇವತ್ತು ಅವರು ತುಂಬಾ ಖುಷಿಯಾಗಿದ್ದರು. ಮಧ್ಯಾಹ್ನ ಆಗಿತ್ತು ಮನೆ ಒಳಗಡೆ ಹೋಗಿ ಜ್ಯೂಸ್ ತಂದು ಕೊಟ್ಟರು. ಅದನ್ನು ಕುಡಿಯುತ್ತಾ ಕೇಳಿದೆ. “ಮೇಡಂ ಇವತ್ತು ನೀವು ತುಂಬಾ ಖುಷಿಯಾಗಿದ್ದೀರಾ? ಏನು ಕಾರಣ” ಅಂತ ಕೇಳಿದೆ.

ಅದಕ್ಕೆ ಅವರು ಖುಷಿಗೆಲ್ಲ ನೀನೇ ಕಣೋ ಕಾರಣ ಎಂದರು. ನಾನು ಆಶ್ಚರ್ಯದಿಂದ ” ನಾ..ನಾ..!” ಅಂತ ಕೇಳಿದೆ. “ಹೂ ಕಣೋ ಮಂಜು, ನಿನ್ನಿಂದ ನಾನ್ ತುಂಬಾ ಖುಷಿಯಾಗಿದಿನಿ “ಅಂತ ಹೇಳಿದರು. “ಆದರೆ ನನ್ನದೊಂದು ಆಸೆ ಇದೆ ಅದನ್ನ ಇಡೇರಿಸುತ್ತೀಯಾ” ಅಂತ ಹೇಳಿ ಒಂದು ಕ್ಷಣ ಮೌನವಾಗಿ ಬಿಟ್ಟರು. (ನಿಮ್ಮ ಆಸೆ ಏನು ಅಂತ ನನಗೆ ಗೊತ್ತು, ನನ್ನ ಆಸೆ ಮತ್ತು ನಿಮ್ಮ ಆಸೆ ಎರಡು ಒಂದೇ ಅಲ್ಲವೇ ಅಂತ ಮನಸ್ಸಲ್ಲೇ ಅಂದುಕೊಂಡು ಖುಷಿಪಟ್ಟು,ಅದೇ ಮಿಲನದ ಆಸೆ ಇರಬಹುದು ಎಂದುಕೊಂಡೆ.) ಒಂದು ಕ್ಷಣ ಮೌನ ಮುರಿದು “ಆ ಹೇಳಿ ಮೇಡಂ ನಿಮ್ಮ ಆಸೆಯೇ ಹೇಳಿ ಅದನ್ನು ನಾನು ನೆರವೇರಿಸುತ್ತೇನೆ” ಅಂತ ಹೇಳಿದೆ. ಅದಕ್ಕೆ ಅವರು ಇನ್ನ ಮೇಲಿಂದ ನನಗೆ ಮೇಡಂ ಅಂತ ಕರೆಯಬೇಡಿ ಅಂತ ಅಂದು ಸುಮ್ಮನಾದರು. ಒಂದು ಕ್ಷಣ ನನಗೆ ಖುಷಿ ಆಯಿತು. ಯಾಕೆ ಅಂತ ಕಾರಣನು ನನಗೆ ಅರ್ಥವಾಗಿತ್ತು. ಆದರೂ ಕೇಳಿದೆ ಯಾಕೆ ಮೇಡಂ, ಅಂತ ಕರಿಬಾರದು ಅಂತ ಕೇಳಿದೆ. ಅದನ್ನೆಲ್ಲ ಇವಾಗ ಹೇಳಲ್ಲ ಇವತ್ತು ರಾತ್ರಿ ಹೇಳುತ್ತೇನೆ ನೀನು ಇವಾಗ ಹೋಗಿ ಬೇಗ ರೆಡಿಯಾಗಿ ಡ್ರೆಸ್ ನ ಹಾಕೊಂಡು ಸರಿಯಾಗಿ 8 ಗಂಟೆಗೆ ಬಾ ನಿನಗೆ ಒಂದು ಸರ್ಪ್ರೈಸ್ ಇದೆ ಕೊಡುತ್ತೇನೆ ಅಂತ ಹೇಳಿದರು. ಜಾಸ್ತಿ ಏನು ಕೇಳಿದೆ ಸರಿ ಆಯ್ತು ನಿಮ್ಮನ್ನ ಏನಂತ ಕರಿಬೇಕು ಅಂತ ಕೇಳಿದೆ. ಈ ಸದ್ಯಕ್ಕೆ ಏನು ಹೇಳಲ್ಲ ರಾತ್ರಿ ಬರ್ತಿಯಲ್ಲ ಅವಾಗ ಹೇಳ್ತೀನಿ ಅಂತ ನನ್ನ ಕೆನ್ನೆನ ಸವರುತ್ತ ತಲೆ ಮೇಲೆ ಕೈ ಆಡಿಸುತ್ತಾ ನನ್ನ ಗಲ್ಲನ ಗಿಲಿಕಿ ಹೇಳಿದರು. ಅವರು ಹೇಳಿದ ತಕ್ಷಣಕ್ಕೆ ತುಂಬಾ ಖುಷಿಯಿಂದ ಆಯ್ತು ನಾ ಬರುತ್ತೇನೆ ಅಂತ ಹೇಳಿ ರೂಂಗೆ ಬಂದೆ.

ಅಯ್ಯೋ…. ರಾತ್ರಿ 8:00 ಯಾವಾಗ ಆಗುತ್ತೋ ಅಂತ ಕಾಯುತ್ತಾ ಗಡಿಯಾರವನ್ನೇ ನೋಡುತ್ತಾ… ಕುಳಿತುಕೊಂಡಿದ್ದೆ. ಕೊನೆಗೂ 8:00 ಹಾಗೆ ಬಿಟ್ಟಿದ್ದು ನನ್ನ ಆಸೆ ಇಡೀ ಇರುವ ಸಮಯ ಬಂದೇ ಬಿಟ್ಟಿತ್ತು ಎಂದುಕೊಂಡು ಬೇಗ ಬೇಗ ಅವರು ಕೊಟ್ಟ ಡ್ರೆಸ್ಸನ್ನು ಹಾಕೊಂಡು ರೆಡಿಯಾಗಿ ಅವರ ಮನೆಗೆ ಹೋದೆ. ಅವರು ನೋಡುತ್ತಾ ಒಂದು ಕ್ಷಣ ನನ್ನ ನಾನೇ ಮೈ ಮರೆತುಬಿಟ್ಟೆ. ಬ್ಲಾಕ್ ಕಲರ್ ಸೇರಿ, ಪಿಂಕ್ ಕಲರ್ ಬ್ಲೌಸ್ ಅವರ ಸಾಫ್ಟ್ ಹೇರ್, ತೆಳ್ಳಗೆ ಇರುವ ಅವರ ಐಬ್ರು ತುಂಬಾ ಅಟ್ರಾಕ್ಟಿವ್ ಆಗಿ ಕಾಣುತ್ತಿದ್ದರು. ಅವರ ಬಾಡಿ ಸ್ಟ್ರಕ್ಚರ್ ತುಂಬಾ ಅಟ್ಟ್ರಾಕ್ಟಿವ್ ಆಗಿತ್ತು. ತುಂಬಾ ಮಾಡ್ರನ್ ಆಗಿದ್ದರು ಕೂಡ ಸಾರಿನ ಸಕ್ಕತ್ತಾಗಿ ತೊಟ್ಟಿದ್ದರು. ತುಂಬಾ ಬ್ಯೂಟಿಫುಲ್ ಆಗಿ ಅಪ್ಸರೆಯ ತರ ಕಾಣ್ತಾ ಇದ್ರು. ಅವರನ್ನು ನೋಡ್ತಾ ಇದ್ರೆ ಎಂತವರು ಕೂಡ ಒಂದು ಕ್ಷಣ ಕಂಟ್ರೋಲ್ ತಪ್ಪು ಹಾಗೆ ಇದ್ದರು. ಒಂದು ಕ್ಷಣ ಅವರನ್ನ ನೋಡಿ ನಾನು ಕೂಡ ಕಂಟ್ರೋಲ್ ತಪ್ಪಿ ಹೋದೆ. ಅವರು ನನ್ನ ಹತ್ತಿರಕ್ಕೆ ಬಂದ ನನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡಿದರು ಆ ನೋಟ ಒಂದು ಕ್ಷಣ ನನ್ನನ್ನ ಮರೆತು ಹೋಗು ಹಾಗೆ ಇತ್ತು. ಬ್ಲಾಕ್ ಸಾರಿಗೆ ಅವರ ಸೊಂಟ ಬೆಳ್ಳಗೆ ಸಾಫ್ಟ್ ಆಗಿ ಕಾಣ್ತಾ ಇತ್ತು. ಅದನ್ನು ನೋಡಿದ ಆ ಕ್ಷಣಕ್ಕೆ ನನ್ನ ಇಂದ್ರೆಗಳೆಲ್ಲ ಕಂಟ್ರೋಲ್ ತಪ್ಪಿ ಹೋಗಿದ್ದವು. ಮನೆಯಲ್ಲ ಲೈಟಿನಿಂದ ಜಗಮಗಿಸುತ್ತಿತ್ತು ಟೇಬಲ್ ಮೇಲೆ ಕೇಕ್ ಒಂದು ರೆಡಿಯಾಗಿತ್ತು.

ಅವರು ತುಂಬಾ ರೆಡಿಯಾಗಿದ್ದರು ಅದನ್ನು ನೋಡಿ ಏನಿರಬಹುದು ಎಂದು ಮನಸ್ಸಲ್ಲಿ ಆಲೋಚನೆ ಓಡುತ್ತಿತ್ತು. ಅವರು ಹತ್ತಿರಕ್ಕೆ ಬಂದು ಆ ಬಾ ಮಂಜು ನಿನಗಾಗಿ ಕಾಯ್ತಾ ಇದ್ದೆ ಎಂದರು. ಏನ್ ಇವತ್ತು ಫುಲ್ ಗ್ರಾಂಡ್ ಇದೆ ಮನೆಯಲ್ಲ. ಕೇಕ್ ಬೇರೆ ರೆಡಿಯಾಗಿದೆ. ಏನು ಇವತ್ತು ನಿಮ್ಮ ಬರ್ತಡೆ ನಾ ಮೇಡಂ ಅಂತ ಕೇಳಿದೆ.ಅದಕ್ಕೆ ಅವರ ಮೌನವಾಗಿದ್ದರು. ನಂತರ ಅವರು ಮೌನ ಮುರಿದು ಮಾತು ಮುಂದುವರಿಸಿದರು. ಅವರು ನನ್ನ ಹತ್ತಿರಕ್ಕೆ ಬಂದು ನನ್ನ ಕೈ ಹಿಡಿದು ನನ್ನದೊಂದು ಆಸೆ ಇದೆ ಇಡೇರಿಸುತ್ತೀಯಾ? ಮಂಜು” ಎಂದು ಕೇಳಿದರು.” ಹಾ.. ಮೇಡಂ ಹೇಳಿ ಏನು ಹೇಳಿ” ಅಂತ ಕೇಳಿದೆ. ನನ್ನ ಕೈಯನ್ನು ಗಟ್ಟಿಯಾಗಿ ಹಿಡಿದು. “ನಮ್ಮ ಯಜಮಾನ್ರು ಮನೆಯಲ್ಲಿ ಇರುವುದಿಲ್ಲ. ಹಾಗಾಗಿ ನನಗೆ ಒಂಟಿತನ ಕಾಡುತ್ತಿದೆ, ನನ್ನ ನೋವುಗಳನ್ನು ಹಂಚಿಕೊಳ್ಳಲು ಭಾವನೆಗಳನ್ನು ಹೇಳಿಕೊಳ್ಳಲು ಯಾರು ಇಲ್ಲದಂಗಾಗಿದೆ. ಅಂತ ಹೇಳುತ್ತಾ ನನ್ನ ಗಟ್ಟಿಯಾಗಿ ತಬ್ಬಿಕೊಂಡು ಬಿಟ್ಟರು. ಆ ಕ್ಷಣಕ್ಕೆ ನನ್ನ ಇಂದ್ರಿಯೆಗಳೆಲ್ಲ, ಕಂಟ್ರೋಲ್ ತಪ್ಪಿ ಹೋಗಿ ಬಿಟ್ಟಿದ್ದವು. ಇನ್ನೇನು ಆಗುತ್ತೆ ಅನ್ನೋದು ಗೊತ್ತಿಲ್ಲದ ಹಾಗೆ ನನ್ನ ಕೈಗಳು ಅವರ ದೇಹದ ಮೇಲೆ ಸ್ಪರ್ಶಿಸತೊಡಗಿದವು. ಇನ್ನೇನು ಅವರ ಸೊಂಟನ ಗಟ್ಟಿಯಾಗಿ ಹಿಡಿದುಕೊಳ್ಳಬೇಕು, ಅನ್ನುವಷ್ಟರಲ್ಲಿ ಬಿಕ್ಕಿ ಬಿಕ್ಕಿ ಅಳತೊಡಗಿದರು. ಸಡನ್ಲೀ ನನ್ನ ಎರಡು ಕೈಯನ್ನು ಹಿಂದಕ್ಕೆ ತೆಗೆದುಕೊಂಡು ಏನಾಯ್ತು ಎಂದು ಕೇಳುವಷ್ಟರಲ್ಲಿ ಕೋಣೆಯಿಂದ ಒಬ್ಬ ವ್ಯಕ್ತಿ ಹೊರಗಡೆ ಬಂದರು.

ಅವರು ಯಾರು ಎಂದು ತುಂಬಾ ಆಶ್ಚರ್ಯದಿಂದ ಗಾಬರಿಯಿಂದ ಇವರನ್ನು ಹಿಂದಕ್ಕೆ ಸರಿಸಿದೆ. ಹಾಗ ನನ್ನ ಕೈ ಹಿಡಿದು ಅವರು. “ರೀ, ನಾ ಹೇಳ್ತಿದ್ದಲ್ಲ ನಮ್ಮ ಪ್ರಜ್ವಲ್ ಇದ್ದಾಗೆ ಇದಾನ ಅಂತ ಹೇಳ್ತಿದ್ನಲ್ಲ ಅದೇ ಹುಡುಗ ಇವನು” ಅಂತ ಆ ವ್ಯಕ್ತಿಗೆ ಇವರು ಹೇಳಿದರು ನನಗೆ ತುಂಬಾ ಆಶ್ಚರ್ಯವಾಯಿತು! ಏನಾಗ್ತಿದೆ ಎಂದು ಆ ಕ್ಷಣ ನನೆಗೆ ಗೊತ್ತಾಗ್ಲಿಲ್ಲ.

ಕೋಣೆ ಇಂದ ಹೊರಗಡೆ ಬಂದ ಆ ವ್ಯಕ್ತಿ ನನ್ನ ಹತ್ತಿರಕ್ಕೆ ಬಂದು. ಹೌದು ಕಣೆ ನೀನು ಹೇಳಿದ್ದು ನಿಜ ಇದೆ! ಇವನು ನಮ್ ಪ್ರಜ್ವಲ್ ಆಗೇ ಇದಾನೆ ಅಂತ ಅವರು ಉದ್ಘಾರ ಮಾಡಿದರು. ಒಂದು ಕ್ಷಣ ನಾನು ದಂಗಾಗಿ ನಿಂತೆ “ಪ್ರಜ್ವಲ್ ಅಂದ್ರೆ ಯಾರು?” ಅಂತ ಕೇಳಿದೆ. ಅದಕ್ಕೆ ಅವರು ಅಲ್ಲೇ ಟೇಬಲ್ ಮೇಲಿದ್ದ ಒಂದು ಫೋಟೋನಾ ತೆಗೆದುಕೊಂಡು ಬಂದು ನನಗೆ ತೋರಿಸಿದರು. ಆ ಫೋಟೋದಲ್ಲಿ ನನ್ನಾಗೆ ಇರೋ ಒಂದು ಭಾವಚಿತ್ರವಿತ್ತು. ಅದು ನಾನೇ ಇರಬಹುದು ಎಂಬ ಸಂಶಯ ಶುರುವಾಯಿತು. ಅರೆ ಈ ಫೋಟೋ ನಾನಿದ್ದಾಗಿದೆ ಅಲ್ಲ ಯಾರು ಇದು ಎಂದು ಕೇಳಿದೆ. ಅದಕ್ಕೆ ಅವರು ಇವನು ನನ್ನ ಮಗ ಪ್ರಜ್ವಲ್ ಅಂತ ಹೇಳಿದರು. ಆಗಿದ್ರೆ ಎಲ್ಲಿದ್ದಾನೆ ನಿಮ್ಮ ಮಗ ಅಂತ ಕೇಳಿದೆ. ಅದಕ್ಕೆ ಅವರು ಈ ಫೋಟೋಕ್ಕೆ ಮಾತ್ರ ಸೀಮಿತ ಆಗಿದ್ದಾನೆ ಅಂತ ಕಣ್ಣಲ್ಲಿ ನೀರು ಹಾಕುತ್ತಾ ಹೇಳಿದರು. ನನಗೆ ಏನು ಅರ್ಥವಾಗಲಿಲ್ಲ. ಅಂದ್ರೆ..? ಅಂತ ಉದ್ಘಾರ ಮಾಡಿದೆ.

ಅದಕ್ಕೆ ಅವರು ನನ್ನ ಮಗ ನಿನ್ನ ವಯಸ್ಸಿನವನೆ ಇದ್ದಪ್ಪ ಅವನು ಯಾವುದೋ ಒಂದು ಹುಡುಗಿನ ಪ್ರೀತಿಸಿ ನಮಗೂ ಹೇಳದೆ ತಾನೆ ಒಂದು ತಪ್ಪು ನಿರ್ಧಾರ ತೆಗೆದುಕೊಂಡು ಸೂಸೈಡ್ ಮಾಡಿಕೊಂಡುಬಿಟ್ಟನಪ್ಪ ಅಂತ ಇಬ್ಬರೂ ಗಳಗಳನೆ ಅತ್ತೆ ಬಿಟ್ಟರು. ಒಂದು ಕ್ಷಣ ಮೌನವಾಗಿ ನಂತರ ಆ ವ್ಯಕ್ತಿ ಮಾತು ಮುಂದುವರಿಸಿ” ಇವತ್ತು ಅವನ ಬರ್ತಡೆ ಇದೆ ಆದರೆ ಅವನಿಲ್ಲ. ಆದರೆ ಇವಳು ನಿನ್ನನ್ನು ನೋಡಿದ ಕ್ಷಣದಿಂದ ಅವನನ್ನು ಮರೆತು. ಅವನೇ ನೀನೆಂದು ಭಾವಿಸಿ ನೀನೆ ನಮ್ಮ ಮಗ ಎಂದು ಕೊಂಡಳು ಅವಳು ಖುಷಿಯಾಗಿರುವುದು, ನಿನ್ನ ನೋಡಿದ ದಿನದಿಂದ ಹಾಗಾಗಿ ನಿನ್ನ ಜೊತೆ ಇದ್ದ ಕ್ಷಣಗಳನ್ನೆಲ್ಲ ನನಗೆ ಹೇಳುತ್ತಿದ್ದಳು. ಹಾಗಾಗಿ ನಾನು ಬರೋದು ಸ್ವಲ್ಪ ತಡವಾಯಿತು ಅವನ ಬರ್ತಡೆ ದಿನ ನಿನ್ನನ್ನು ನನ್ನ ಮಗನಾಗಿ ದತ್ತಕ್ಕೆತೆಗೆದುಕೊಳ್ಳಬೇಕೆನ್ನುವ ಅವಳ ಆಸೆಯಾಗಿದೆ ಅದಕ್ಕೆ ನಿಮ್ಮ ಮನೆಯಲ್ಲಿ ಒಪ್ಪಿಗೆ ಕೊಟ್ಟರೆ ಚೆನ್ನಾಗಿ ಇರುತ್ತೆ. ಅದಕ್ಕಾಗಿ ಇವತ್ತೇ ಆ ವಿಷಯವನ್ನು ಪ್ರಸ್ತಾಪ ನಿನ್ನ ಮುಂದೆ ಮಾಡುತ್ತಿದ್ದೇವೆ. ನಿನಗೆ ಒಪ್ಪಿಗೆ ಇದ್ದರೆ ನಮಗೆ ನೀನು ಮಗನಾಗಿ ಇರುತ್ತೀಯ. ದಯವಿಟ್ಟು ಅವಳ ಆಸೆಯನ್ನು ಈಡೇರಿಸು. ಇಲ್ಲ ಅನ್ನಬೇಡ ಅಂತ ಅಂಗಲಾಚಿ ಕೇಳಿಕೊಂಡರು.

ಆ ಮಾತಿಗೆ ನಾನು ಏನು ಹೇಳಬೇಕು ಎಂದು ತೋಚದೆ ಒಂದು ನಿಮಿಷ ಮೌನವಾಗಿ. ನಾನು ವಾಶ್ ರೂಮ್ಗೆ ಹೋಗಿ ಬರುತ್ತೇನೆ ಅಂತ ಹೇಳಿ. ವಾಷಿಂಗ್ ಹೋಗಿ ಡೋರ್ ಅನ್ನ ಹಾಕಿಕೊಂಡು ಕನ್ನಡಿ ಮುಂದೆ ನಿಂತುಕೊಂಡು ನನ್ನ ಕೈಯಿಂದ ತಲೆಗೆ ಜಜ್ಜಿಕೊಂಡೆ ನನ್ನ ಎರಡು ಕೆನ್ನೆಗೂ ರಪ.. ರಪ.. ರಪ.. ಅಂತ ಜೋರಾಗಿ ಬಡೆದುಕೊಂಡೆ. ಯಾಕೆಂದರೆ ನನ್ನೊಳಗೆ ಕಾಮ ತುಂಬಿ ತುಳುಕಾಡುತ್ತಿತ್ತು.ಅವರ ಪ್ರೀತಿ ಯಾವು ಎಂದು ಅರಿಯದೆ ಕಾಮ ಕುರುಡಾಗಿತ್ತು. ನೀಚ ಬುದ್ಧಿ ಕಾಮದ ಆಸೆಗೆ ಆತುರಿಯುತ್ತಿತ್ತು. ಆ ಒಂದು ಕ್ಷಣ ನನ್ನನ್ನ ನೀಚ ಮನಸ್ಸನ್ನು ಚುಚ್ಚಿ ಕೊಂದಿತ್ತು. ನೀಚ ಬುದ್ಧಿ ನೀಚ ಮನಸ್ಸು ನಾಚಿಕೆಟ್ಟ ಯೋಚನೆಗಳು. ಮನಸ್ಸು ಭಾವನೆಗಳನ್ನು ಅರಿಬಿಟ್ಟ ತಪ್ಪಿಗೆ ನಾನೇ ಕಾರಣ ಎಂದು. ಆ ನೀಚನನ್ನ ನನ್ನೊಳಗೆ ನಾನೇ ಕೊಂದುಬಿಟ್ಟೆ. ಮನಸ್ಸಿನೊಳಗೆ ನಡೆಯುವ ತಪ್ಪಿಗೆ ಶಿಕ್ಷೆ ಯಾವುದು? ಅದಕ್ಕೆ ಶಿಕ್ಷಿಸುವರು ಯಾರು?. ನನ್ನೊಳಗೆ ನಾನಾ ಅರಿತುಕೊಂಡೆ. ತಪ್ಪುಗಳನೆಲ್ಲ, ಒಪ್ಪಿಗೆ ಇಲ್ಲದೆ ತಪ್ಪು ನಡೆಯಲಾರದು. ತಪ್ಪು ಒಪ್ಪಿ ಕೊಳ್ಳುವವನು ಮನುಷ್ಯನಾಗುತ್ತನೆ. ತಪ್ಪನ್ನ ಸರಿಪಡಿಸೋಕೆ ಅವಕಾಶ ಇದೆನಾ? ಎಂದು ಅರಿತುಕೊಂಡು. ಗಳಗಳನೆ ಅತ್ತು ಕಣ್ಣೀರು ಒರೆಸಿಕೊಂಡೆ. ನನ್ನೊಳಗೆ ಇದ್ದ ನೀಚನನ್ನು ನಾನೇ ಕೊಂದು ಮುಖ ತೊಳೆದುಕೊಂಡು ಹೊರಗೆ ಬಂದು ಅವರ ಮುಂದೆ ನಿಂತೆ. ಅವರಿಬ್ಬರ ಮುಖದಲ್ಲಿ ಸಂಭ್ರಮ ತುಂಬಿತ್ತು.

ಆಗ ಅವರಿಬ್ಬರು ನನ್ನ ಹತ್ತಿರಕ್ಕೆ ಬಂದು. ನೀನು ನಮ್ಮ ಮಗನಾಗಿ ಇರುತ್ತೀಯ ಎಂದು ಕೇಳಿದಾಗ. ಮನಸ್ಸನ್ನು ಶಾಂತಗೊಳಿಸಿ ಎದೆ ಉಸಿರು ಬಿಡುತ್ತಾ. ನಿಮ್ಮ ಮಗನಾಗಿ ಇರಲು ನನಗೆ ಯೋಗ್ಯತೆ ಇದೇನಾ? ಅಂತ ನನಗೆ ನಾನೇ ಪ್ರಶ್ನೆ ಸುತ್ತ ಮನಸೊಳಗೆ ಅಂದುಕೊಂಡೆ.

ಮೇಡಂ ಹತ್ತಿರಕ್ಕೆ ಬಂದು ನನಗೆ ಒಂದೇ ಒಂದು ಸಾರಿ ಅಮ್ಮ ಅಂತ ಕರೀತೀಯ ಅಂತ ಕೇಳಿದಾಗ ನನಗೆ ಗೊತ್ತಿಲ್ಲದ ಹಾಗೆ ಕಣ್ಣಂಚಲಿ ನೀರು ಹಾದು ಹೋಗಿತ್ತು. ಅವರ ಮಾತಿಗೆ ನನ್ನ ಮೌನವೇ ಉತ್ತರವಾಗಿತ್ತು. ಅವರಿಬ್ಬರು ಹತ್ತಿರಕ್ಕೆ ಬಂದು ಗಟ್ಟಿಯಾಗಿ ತಬ್ಬಿಕೊಂಡು ನನ್ನ ಕೈ ಇಂದ ಕ್ಯಾಂಡಲ್ ಹಚ್ಚಿಸಿ ನನ್ನ ಕೈಗೆ ನೆಪ್ ಕೊಟ್ಟು ಕೇಕ್ ಕಟ್ ಮಾಡಿಸಿ ನನಗೆ ತಿನಿಸಿದಾಗ. ಅಂದು ಆ ತಂದೆ-ತಾಯಿಗಳ ಪ್ರೀತಿಯ ಅಮೃತ ತುತ್ತು ಆಗಿತ್ತು. ಅವತ್ತೆ ಅರಿವಾಗಿತ್ತು ತಂದೆ ತಾಯಿಯ ಪ್ರೀತಿ ಏನೆಂದು. ನಿಷ್ಕಲ್ಮಶ ಪ್ರೀತಿ ಮುಂದೆ ನೀಚನ ಸಾವು.

ಮಂಜು ಡಿ ಈಡಿಗೆರ್

ಕನ್ನಡದ ಬರಹಗಳನ್ನು ಹಂಚಿ ಹರಡಿ

Leave a Reply

Your email address will not be published. Required fields are marked *