ಪೀಗ: ಡಾ. ಶಿವಕುಮಾರ್‌ ಡಿ ಬಿ

ಪರ್ನಳ್ಳಿ ಗಂಗಪ್ಪ ಅಲಿಯಾಸ್ ಪೀಗ ತಂದೆಯ ಕಾರಣದಿಂದಾಗಿ ಸಮಾಜದ ನಿರ್ಲಕ್ಷಕ್ಕೆ ಗುರಿಯಾಗಿದ್ದ. ಈತನ ತಂದೆ ನಾಗಪ್ಪ ಕುಡುಕ. ಹೆಂಡತಿ ಮಕ್ಕಳ ಮೇಲೆ ಒಂದು ಚೂರು ಜವಾಬ್ದಾರಿ ಇಲ್ಲದವ, ಊರಿನ ಯಾವುದೋ ಒಂದು ಜಗಳದಲ್ಲಿ ಕಾಲಿಗೆ ಗಾಯ ಅದು ಗ್ಯಾಂಗ್ರಿನ್ ಆಗಿ ಗುಣಪಡಿಸಲಾಗದೆ ಸತ್ತ. ಈ ನಾಗಪ್ಪನಿಗೆ ಹುಟ್ಟಿದವರು ಮೂರು ಜನ ಗಂಡು ಮಕ್ಕಳು. ಮೂರು ಜನರ ಶಿಕ್ಷಣ ಬಾಲ್ಯದಲ್ಲಿಯೇ ಮೊಟಕಾಯಿತು. ತಾಯಿಯ ಮಾತನ್ನು ಕೇಳದ ಈ ಮೂವರು ಐದು, ಆರರವರೆಗೂ ಶಾಲೆಯಲ್ಲಿ ಕಲಿಯಲಿಲ್ಲ. ಹೊಲ ಗದ್ದೆ ಬಯಲುಗಳಲ್ಲಿ ಸುತ್ತುವುದು, ಮಾವಿನಕಾಯಿ, ಹಲಸು, ತೆಂಗು ಕದಿಯುವುದು, ಮಾಲೀಕರ ಕೈಗೆ ಸಿಕ್ಕಿಹಾಕಿಕೊಂಡು ಏಟು ತಿನ್ನುವುದು, “ಅಪ್ಪ ನ್ಯಾಯ್ವಾಗಿದ್ರಲ್ವ ಇವು ಕಲಿಯದು” ಎಂದು ಉಗಿಸಿಕೊಳ್ಳುವುದು ಇದೇ ನಿತ್ಯ ರಾಮಾಯಣವಾಗಿತ್ತು. ಪೀಗ ತನ್ನ ತಂದೆಗೆ ಎರಡನೆಯ ಮಗ. ಹಿರಿಯವನು ಬಸಪ್ಪ. ಕಿರಿಯವನು ನಿಂಗಪ್ಪ. ಪೀಗ ನೋಡುವುದಕ್ಕೆ ಒಣಕಲು ತಡಿಕೆಯಂತೆ ಕಾಣುತ್ತಿದ್ದರಿಂದಲೇ ಮೊದಲು ಪೀರ, ಪೀರ ಎಂದು ಜನ ಕರೆಯುತ್ತಿದ್ದರು. ಆತ ಬೆಳೆದಂತೆ ಕೆಲವರು ಪೀರ ಪದದ ಜೊತೆ ಹಳ್ಳಿ ಸೇರಿಸಿ ಪರ್ನಳ್ಳಿ ಎಂದು, ಮಕ್ಕಳು ಪರ್ನ ಳ್ಳಿ ಗಂಗಪ್ಪ ಎಂದು ಕರೆಯುತ್ತಿದ್ದರು. ಬರುಬರುತ್ತಾ ಹೆಸರು ಉದ್ದವಾಯಿತೆಂದು ಈತನ ಸ್ನೇಹಿತರು ಪರ್ನುಳ್ಳಿಯಿಂದ ಪೀ ಅನ್ನು ಗಂಗಪ್ಪನಿಂದ ಗವನ್ನು ತೆಗೆದು ಸೇರಿಸಿ ಪೀಗ ಎಂದು ಮರು ನಾಮಕರಣ ಮಾಡಿದ್ದರು.

ಹಿರಿಮಗ ಬಸಪ್ಪ ಭತ್ತದ ಲಾರಿ ಹತ್ತಿ ಮೂಟೆ ಹೊರುವ ಕೆಲಸ ಮಾಡುತ್ತಿದ್ದನು. ತಾಯಿ ಸಾಕಮ್ಮ ಎಷ್ಟೇ ಅಂಗಲಾಚಿದರೂ ಲಾರಿ ಹತ್ತಿ ಒಮ್ಮೆ ಹೋದವನು ಮತ್ತೇ ಬರಲೇ ಇಲ್ಲ. ಕಿರಿಯವನಂತೂ ಕೆಲಸ ಕಾರ್ಯ ಒಂದನ್ನೂ ಮಾಡದೆ ಬೀಡಿ ಸೇದುತ್ತ ಅವರಿವರನ್ನು ಬೀಡಿ ಕೇಳುತ್ತ ಸಾಕಮ್ಮ ಕೂಲಿ ಮಾಡಿ ತಂದದ್ದನ್ನು ತಿಂದು ಬದುಕುತ್ತಿದ್ದ ಸೋಮಾರಿ. ಸಧ್ಯಕ್ಕೆ ತಕ್ಕ ಮಟ್ಟಿಗೆ ಈಗ ಪೀಗನೇ ವಾಸಿ ಅನ್ನಿ. ಸಾಕಮ್ಮ “ಹಿರಿ ಮಗ ಎಲ್ಲೋ ಹೋದ. ಇವಂಗಾದ್ರೂ ಒಂದು ಮದ್ವೆ ಮಾಡಿ ಬಿಡೋಣ” ಎಂದು ನಿರ್ಧರಿಸಿದ್ದಳು. ಆದರೆ ಅವಳಿಗೂ ಗೊತ್ತು, ತನ್ನ ಮಗನಿಗೆ ಹೆಣ್ಣು ತರುವುದು ಅಷ್ಟು ಸುಲಭದ ಮಾತಲ್ಲವೆಂದು. ಆದರೂ ತನ್ನ ನೆಂಟರಿಗೆ, ಹೆಣ್ಣು ತೋರಿಸುವ ಬ್ರೋಕರ್ಗಳಿಗೂ ಹೇಳಿದ್ದಳು. ಆ ಬ್ರೋಕರ್ಗಳಂತೂ “ಅಮ್ಮ ನಿನ್ ಮಗನ್ಗೆ ನೀನೆ ದುಡ್ಡು ಕೊಟ್ಟು ಮದ್ವೆ ಮಾಡ್ಕೋತೀನಿ ಅಂದ್ರು ಯಾರೂ ಹೆಣ್ಣು ಕೊಡಲ್ಲ ಬಿಡು” ಎಂದುಬಿಟ್ಟಿದ್ದರು. ಆದರೆ ಸಾಕಮ್ಮ ಸುಮ್ಮನೆ ಕೂರಲಿಲ್ಲ. ನಾಲ್ಕಾರು ಕಡೆ ವಿಚಾರಿಸುತ್ತಲೇ ತಿರುಗುತ್ತಿದ್ದಳು. ಪೀಗನಿಗೆ ತಾಯಿಯ ಸುತ್ತಾಟ ನೋಡಿ “ನಂಗ ಯಾರೂ ಹೆಣ್ ಕೊಡೋದು ಬ್ಯಾಡ ಬುಡವ್ವ. ನನ್ ಹಣಬರ ಇದ್ದಂಗಾಯ್ತದ” ಎನ್ನುತ್ತಿದ್ದ. ಆದರೆ ಸಾಕಮ್ಮ “ರ್ಲಾ ನಿಂಗ ಗೊತ್ತಾಗಲ್ಲ ಇನ್ನೆರಡ್ ವರ್ಷ ಆದ್ರ ನಿಂಗ ಹೆಣ್ಣ ಯಾರ್ ಕೊಟ್ಟರೂ ಈಗ ನಿಂಗ ಇಪ್ಪತ್ತೆಂಟ್ ವರ್ಷ ಆಗದ. ನೋಡಕ್ಕ ಸಣ್ಣಕ್ಕಿದ್ದಯ್ ಅಷ್ಟಿಯ ಅದ್ಕ ವಯ್ಸು ಕಾಣಲ್ಲ” ಎನ್ನುತ್ತಿದ್ದಳು.

ಪೀಗನಿಗೆ ತನ್ನ ಕುಟುಂಬದ ಹಿನ್ನೆಲೆ ಜನರಿಗೆ ಯಾವ ರೀತಿಯಲ್ಲಿ ಪರಿಚಯವಾಗಿದೆ ಎಂಬುದರ ಅರಿವಿತ್ತು. “ನನ್ನ ಯಾವ ಹೆಣ್ಣು ಒಪ್ಕಳಲ್ಲ ಬುಡವ್ವ. ನೋಡಕ್ಕೂ ಚೆನ್ನಾಗಿ ಕಾಣಲ್ಲ. ನಮ್ ಅಪ್ಪ ಸರಿಯಿಲ್ಲ. ಆಸ್ತೀನೂ ಇಲ್ಲ. ಮನ ನೋಡುದ್ರ ಹಳದು. ಏನ್ ಅದ ಅಂತ ಹೆಣ್ ಕೊಟ್ಟರೂ ಬುಡು” ಎಂದು ಅಮ್ಮನಿಗೆ ಸಮಾಧಾನ ಮಾಡುತ್ತಿದ್ದ. ಸಾಕಮ್ಮನಿಗೆ ಮಗನ ಮಾತುಗಳನ್ನು ಕೇಳಿದಾಗ ಬೇಸರವಾಗುತ್ತಿತ್ತು. ಹೀಗೆ ಒಂದು ದಿನ ತನ್ನ ಗಂಡನ ದುಷ್ಟಬುದ್ದಿ, ಬೇಜವಾಬ್ದಾರಿ, ಕುಟುಂಬದ ಮೇಲೆ ಕಾಳಜಿ ಇಲ್ಲದಿರುವ ಅವನ ನಡೆತೆಗಳಿಂದ ಕುಟುಂಬದ ಸ್ಥಿತಿ ಹೀಗಾಯ್ತೆಂದು ಯೋಚಿಸುತ್ತಾ ಕುಳಿತಿರುವಾಗ ಪೀಗ “ರೇಷನ್ ಕಾರ್ಡ್ ಕೊಡು ಅಕ್ಕಿ ತಕ್ಕಂಡ್ ಬತ್ತಿನಿ ಆ ಮುದೇವಿ ನಿಂಗ ಬಂದಿಲ್ವ ಮನ್ಗ ಇನ್ನುವೀ” ಎಂದ. ಸಾಕಮ್ಮ “ಅವ್ನು ಅಪ್ನಂಗಿಯ ಕಣ ತಕ್ಕ ಅವ್ನ್ ದಾರೀನೇ ಹಿಡ್ಕಂಡವ್ನ ಕಣಪ್ಪ. ನೀನಾರ ಮನ ಉಳಿಸು. ನನ್ ಮಾತ್ ಕೇಳು” ಎಂದಳು. ಪೀಗ “ನಿನ್ ಮಾತ್ ಕೇಳ್ದೆ ಇನ್ ಯಾರ್ ಮಾತ್ ಕೇಳ್ಲಿ ಬುಡವ್ವ” ಎಂದವನೆ ಕೈಯಲ್ಲೊಂದು ಚೀಲದೊಂದಿಗೆ ರೇಷನ್ ಕಾರ್ಡ್ ಹಿಡಿದು ಸೊಸೈಟಿಗೆ ಹೊರಟ.

ರೇಷನ್ ಅಂಗಡಿಯ ಮಾಲೀಕ ಮಂಜಣ್ಣ ಏನೋ ಪೀಗ ನಿಮ್ಮವ್ವ ಹೆಣ್ ನೋಡಕ್ಕ ಸ್ಯಾನೆ ದಿನ್ದಿಂದ್ಲು ಸ್ಟಾಟ್ ಮಾಡವ್ಳಂತೆ. ಈ ವರ್ಷವಾರ ಊಟ ಕೊಡ್ಸಿಯಾ ಏನಾ, ನೀ ಹಿಂಗ ನುಲಿಯದ್ ನೋಡುದ್ರ ಈ ವರ್ಷ ಗ್ಯಾರಂಟಿ ಕಣ ಬುಡು” ಎಂದು ರೇಗಿಸಿದನು. ಪೀಗ “ನಮ್ಗ ಯಾರ್ ಹೆಣ್ ಕೊಟ್ಟರೂ ಬುಡಣ್ಣ. ನಮ್ಮಪ್ಪ ಮಾಡಿರೋ ಘನಾಂದಾರಿ ಕೆಲ್ಸಕ್ಕ” ಎಂದು ನೋವಿನಿಂದಲೇ ನುಡಿದನು. ಸೊಸೈಟಿ ಮಂಜಣ್ಣ “ಬುಡ್ಲ ಯಾವಳೋ ಋಣ ತಿಂದಿರವ್ಳು ಸಿಕ್ತಳ” ಎಂದವನೇ ಅಕ್ಕಿ, ರಾಗಿ, ಗೋದಿ, ಸಕ್ಕರೆ ಎಲ್ಲವನ್ನು ಅಳತೆ ಮಾಡಿ ಅಕ್ಕಿಯನ್ನು ಚೀಲದಲ್ಲಿಯೂ ಉಳಿದವನ್ನು ಪ್ಲಾಸ್ಟಿಕ್ ಬ್ಯಾಗುಗಳಲ್ಲಿಯೂ ತೂಗಿ ಕೊಟ್ಟ. ಮನೆಯ ದಾರಿ ಹಿಡಿದ ಪೀಗ ದಾರಿಯುದ್ದಕ್ಕೂ “ಋಣ ತಿಂದಿರವ ಅದೆಲ್ಲಿ ಇದ್ದಳೋ ನಂಗೆ ಗೊತ್ತಿಲ್ಲ ಕಣಪ್ಪ” ಎಂದು ಗೊಣಗುತ್ತಲೇ ನಡೆದ. ಪೀಗ ನಾಲ್ಕಾರು ಜನ ಸೇರುವ ಕಡೆ, ಸಭೆ ಸಮಾರಂಭಗಳಲ್ಲಿ ಸೇರುತ್ತಿರಲಿಲ್ಲ. ಏಕೆಂದರೆ ಅಲ್ಲಿ ಯಾರೂ ಅವನಿಗೆ ಬೆಲೆ ಕೊಡುತ್ತಿರಲಿಲ್ಲ. ಕೊನೆಯ ಪಕ್ಷ ಒಂದು ಸಣ್ಣ ನಗುವನ್ನು ಅವನ ಕಡೆಗೆ ಯಾರೂ ಬೀರುತ್ತಿರಲಿಲ್ಲ. ಒಂದು ತರಹದ ಹಿಂಸೆ ಅವಮಾನ ಎಲ್ಲವನ್ನು ಪೀಗ ಸಹಿಸಿಕೊಂಡು ಈಗ ತಾಯಿಯನ್ನೇ ಮದುವೆ, ಸಮಾರಂಭಗಳಿಗೆ ಕಳುಹಿಸುತ್ತಿದ್ದ. ಆದರೆ ತನಗೆ ಯಾವ ಕೂಲಿ ಕೆಲಸ ಸಿಕ್ಕರೂ ನಿಯತ್ತಾಗಿ ದುಡಿಯುವುದನ್ನು ಕಲಿತಿದ್ದ. ಇಷ್ಟಾದರೂ ಯಾರೂ ಅವನನ್ನು ಸುಲಭವಾಗಿ ನಂಬುತ್ತಿರಲಿಲ್ಲ. ಒಂದು ರೀತಿಯ ಅನುಮಾನ, ತಾತ್ಸಾರದಿಂದಲೇ ಜನ ಅವನನ್ನು ನೋಡುತ್ತಿದ್ದರು. ಇದೆಲ್ಲವೂ ಪೀಗನಿಗೆ ಬೇಸರ ತರಿಸಿದ್ದವು. ದುಡಿಮೆ ಮತ್ತು ಮನೆ ಎಂತಲೇ ಜೀವನ ಸಾಗಿಸುತ್ತಿದ್ದ.

ಅದೊಂದು ದಿನ ಪಟೇಲರು ಚೀಲಕ್ಕೆ ಹತ್ತಿ ತುಂಬುವ ಕೆಲಸಕ್ಕಾಗಿ ಪೀಗನಿಗೆ ಅನಿವಾರ್ಯವಾಗಿ ಬೇರೆಯ ಆಳುಗಳು ತಕ್ಷಣಕ್ಕೆ ಸಿಗದ ಕಾರಣ ಬೇರೊಬ್ಬ ಕೂಲಿಯವನಿಂದ ಹೇಳಿ ಕಳುಹಿಸಿದ್ದರು. ಪಟೇಲರ ಮನೆ ಕೆಲಸ ಎಂದರೆ ನಿರ್ಲಕ್ಷ್ಯ ಮಾಡುವಂತಿಲ್ಲ. ಊರಿಗೆ ನ್ಯಾಯ ಪಂಚಾಯ್ತಿ ಹೇಳುವ ಹಾಗೂ ಆರ್ಥಿಕವಾಗಿ ಸಧೃಢರಾಗಿರುವ ಪಟೇಲರೂ ಹತ್ತೂರಿಗೂ ಗೊತ್ತು. ಹಾಗಾಗಿ ತಡ ಮಾಡದೆ “ಅವ್ವೋ, ಪಟೇಲ್ರು ಹತ್ತಿ ತುಂಬಕ್ಕ ರ್ದತರ ಹೊಯ್ತಿನಿ” ಎಂದವನೆ ಹೊರಟ. ಪಟೇಲರು ಸುಮಾರು ಹತ್ತು ಎಕರೆಗೂ ಹೆಚ್ಚು ಹತ್ತಿ ಬೆಳೆದಿದ್ದರು. ಒಂದು ಸಲ ಹೊಲದಲ್ಲಿ ಹತ್ತಿ ಬಿಡಿಸಿದರೆ ಪಟೇಲರ ಮನೆಯಲ್ಲವೂ ಹತ್ತಿಯಲ್ಲಿಯೇ ಮುಳುಗಿ ಹೋಗುತ್ತಿತ್ತು. ಅದನ್ನು ಸರಿಯಾದ ರೇಟಿಗೆ ಮಾರಿ ಮನೆಯನ್ನು ಸ್ವಚ್ಚ ಮಾಡುವುದೇ ಒಂದು ದೊಡ್ಡ ತಲೆನೋವಾಗಿತ್ತು. ಪಟೇಲರ ಮನೆಯಲ್ಲಿ ಈಗಾಗಲೇ ಹತ್ತು ಹದಿನೈದು ಜನ ಹತ್ತಿ ತುಂಬುತ್ತಿದ್ದರು. ಪೀಗನೂ ಹೋದ. ಇಪ್ಪತ್ತು ಮೂಟೆಯಲ್ಲಿ ಈಗಾಗಲೇ ಹತ್ತಿ ತುಂಬಲಾಗಿತ್ತು. ಇನ್ನೂ ಹೆಚ್ಚು ಹತ್ತಿಯ ರಾಶಿ ಕಾಣುತ್ತಿತ್ತು. ಪಟೇಲರು “ಲೇ ಪೀಗ ರ್ಲಯ ಬೇಗ್ನ ತುಂಬಿ. ಲಾರಿ ಬರೋ ಹೊತ್ತಾಯ್ತು” ಎಂದರು. ಪೀಗ “ಆಯ್ತು ಬುಡಿ ತುಂಬ್ತಿವಿ” ಎಂದು ಚೀಲಗಳಿಗೆ ಹತ್ತಿ ತುಂಬಲು ಆರಂಭಿಸಿದ. ಪಟೇಲರ ಸೊಸೆ ಸಾವಿತ್ರಿ ಎಲ್ಲರಿಗೂ ಟೀ ಮಾಡಿ ಕೊಟ್ಟಳು. ಟೀ ಕುಡಿಯುವ ಸಲುವಾಗಿ ಹತ್ತಿ ತುಂಬುವುದನ್ನು ಕೊಂಚ ಹೊತ್ತು ಎಲ್ಲ ನಿಲ್ಲಿಸಿದರು. ಸಾವಿತ್ರಿ ತನ್ನ ಮೂರು ವರ್ಷದ ಮಗಳನ್ನು “ಇಲ್ಲೇ ಟಿ. ವಿ ನೋಡ್ತಾ ಇರು ಚಿನ್ನಿ, ನಾನು ಸ್ನಾನ ಮಾಡ್ಕಂಡು ಬತ್ತಿನಿ” ಎಂದವಳೆ ಮನೆಯಲ್ಲಿದ್ದ ಹಳೆಯಕಾಲದ ಚಿಕ್ಕ ಕಬ್ಬಿಣದ ಬೀರುವಿನ ಬಳಿ ಇದ್ದ ಚಿಕ್ಕದೊಂದು ಕುರ್ಚಿಯ ಮೇಲೆ ಕೂರಿಸಿ ಸ್ನಾನದ ಮನೆಗೆ ಹೋದಳು. ಆದರೆ ಮಗು ಮಾತ್ರ ಆ ಕಡೆ ಈ ಕಡೆ ಓಡಾಡುತ್ತಾ ತನ್ನ ವಯಸ್ಸಿಗೆ ತಕ್ಕ ಹಾಗೆ ಆಟವಾಡುತ್ತಿತ್ತು. ಹತ್ತಿ ತುಂಬುತ್ತಿದ್ದವರ ಬಳಿಯೂ ಹೋಗಿ ಕಿಲ ಕಿಲ ನಗುತ್ತ ಓಡೋಡಿ ಬರುತ್ತಿತ್ತು.

ಹತ್ತಿ ತುಂಬುವವರಿಗೆ ಒಂದು ರೀತಿ ಮನರಂಜನೆಯೂ ಸಿಗುತ್ತಿತ್ತು. ಸಾವಿತ್ರಿ ಸ್ನಾನದ ಮನೆಯಿಂದ ಓಡೋಡಿ ಬಂದವಳೆ ಬೆಳಗಿನ ಅಡುಗೆಯನ್ನು ಸಿದ್ಧಮಾಡಲು ಈಗಾಗಲೇ ತಡವಾಗಿದೆಯೆಂದೂ ಮಾವನವರು ಮತ್ತೆ ಲೇಟಾದರೆ ಏನಾದರೂ ಅನ್ನಬಹುದೆಂದೂ ಗೊಣಗುತ್ತಲೇ ಪಾತ್ರೆಗಳನ್ನು ಸದ್ದುಮಾಡುತ್ತಿದ್ದಳು. ಇತ್ತ ಬಹಳ ಹೊತ್ತಿನ ತನಕವೂ ಈ ಹತ್ತಿ ತುಂಬುವ ಕೆಲಸ ಸಾಗಿ ಒಟ್ಟು ೫೬ ಹತ್ತಿಮೂಟೆಗಳು ತಮ್ಮ ತಮ್ಮ ಎತ್ತರಕ್ಕೆ ಅನುಗುಣವಾಗಿ ಜಾತ್ರೆಯಲ್ಲಿ ತೇರನ್ನು ನೋಡಲು ಜನ ಸಾಲಾಗಿ ನಿಂತಂತೆ ನಿಂತಿದ್ದವು. ಹತ್ತಿ ತುಂಬುತ್ತಿದ್ದ ಆಳುಗಳೆಲ್ಲರೂ ಪಟೇಲರಿಗೆ ಹೇಳಿ ಹೊರಟರು. ಪೀಗನು “ಅಣ್ಣ ಬತ್ತಿನಿ” ಎಂದು ಅಲ್ಲಿಂದ ಹೊರಟ. ಪಟೇಲರ ಜಾಯಮಾನವೆಂದರೆ ಕೈ ಮೇಲೆ ಕಾಸು ಕೊಟ್ಟು ದುಡಿಸಿಕೊಳ್ಳುವುದಲ್ಲ. ಕೆಲಸವಾದಮೇಲೆ ಮೂರು ದಿನ, ವಾರ, ಕೆಲವೊಮ್ಮೆ ತಿಂಗಳುಗಳಾದರೂ ಆಶ್ಚರ್ಯವಿಲ್ಲ. ಅದರಲ್ಲೂ ಸಮ ಪ್ರಮಾಣದ ಕೂಲಿಯೆಂದೇನೂ ಇಲ್ಲ. ಯರ್ಯಾಂರಿಗೆ ಎಷ್ಟೆಷ್ಟು ಕೊಡಬೇಕೆನಿಸುತ್ತದೋ ಅಷ್ಟಷ್ಟನ್ನು ಮಾತ್ರ ಕೊಡುತ್ತಿದ್ದರು. ಯಾರಿಗೂ ಅದನ್ನು ಪ್ರಶ್ನೆ ಮಾಡುವ ಧೈರ್ಯವಿರಲಿಲ್ಲ. “ತಡ ಲಾರಿ ಏನಾರ ಬಂತ ನೋಡ್ತಿನಿ” ಎಂದವರೆ ಪಟೇಲರು ಮನೆಯಿಂದ ಹೊರಟರು. ಒಂದು ಅರ್ಧಗಂಟೆ ಸಮಯ ಕಾದು ಲಾರಿ ಬಾರದ್ದರಿಂದ ಮನೆಗೆ ವಾಪಸ್ಸು ಬಂದರು. ಪಟೇಲರು ಮನೆಗೆ ಬಂದಾಗ ಸೊಸೆ ಸಾವಿತ್ರಿ ಒಂದೇ ಸಮನೆ ಅಳುತ್ತಿದ್ದಳು.

ಪಟೇಲರ ಮಗ ಶಂಕ್ರಪ್ಪ “ನಿಂಗೆ ಬುದ್ದಿ ಇಲ್ವ ತಾಳಿ ಚೇನ ಆ ಕಬ್ಣದ್ ಬೀರು ಮ್ಯಾಲ ಯಾಕಿಟ್ಟಿದ್ದ, ಈಗ ಅದು ಏನಾಯ್ತು ಅಂತ ಕಾಣವಪ್ಪ” ಎನ್ನುತ್ತಲೇ ಸಾವಿತ್ರಿಯ ಮೇಲೆ ರೇಗುತ್ತಿದ್ದ. ಪಟೇಲರು ಸಂದರ್ಭವನ್ನು ಸರಿಯಾಗಿ ಗ್ರಹಿಸಲಾರದೆ ಸೊಸೆಯ ಕೆಂಪಾದ ಕಣ್ಣುಗಳನ್ನೇ ನೋಡುತ್ತ “ಏನಾಯ್ತವ್ವ” ಎಂದರು. ಸಾವಿತ್ರಿ “ಮಾವ ಸ್ನಾನ ಮಾಡ್ಕಂಡು ಬರವ್ ಅನ್ಕಂಡು ತಾಳಿಸರವ ಈ ಚಿಕ್ ಬೀರು ಮ್ಯಾಲ ಇಟ್ಟು ಹೋಗಿದ್ದಿ, ಈಗ್ ನೋಡುದ್ರ ಅದು ಕಾಣ್ತಾ ಇಲ್ಲ” ಎಂದು ಗದ್ಗದಿತ ಧ್ವನಿಯಲ್ಲಿಯೇ ಹೇಳಿದಳು. ಪಟೇಲರು “ಮನಲಿ ಹುಡ್ಕುದ್ರಿಲಾ ಎಲ್ಲಾ ಜಾಗನುವೀ” ಎಂದರು. ಸಾವಿತ್ರಿ “ಹ್ಲೂಂ ಮಾವ

ಯಾವ್ ಸಂದಿ ಗುಂದೀಲೂ ಇಲ್ಲ” ಎಂದಳು. ಪಟೇಲರು ಕೊಂಚ ಹೊತ್ತು ಅನುಮಾನಿಸಿ “ನೀ ಸ್ನಾನ ಮಾಡಕ್ಕ ಹೋಗದ್ನ ಯರ್ಯಾುರ ಹತ್ತಿ ತುಂಬೋರು ನೋಡುದ್ರ” ಎಂದು ಸೊಸೆಯನ್ನು ಕೇಳಿದರು. ಸಾವಿತ್ರಿ “ಮಾವ ನಂಗ ಅಲ್ಲಿ ಯರ್ಯಾ್ರಿದ್ರೂ ಅಂತ ಗೊತ್ತಿಲ್ಲ ಆದ್ರ ಪೀಗ ಅನ್ನವ ಕೂಸ ಹತ್ತಿ ತುಂಬತವು ಬರಬ್ಯಾಡ ಹೋಗು ಅನ್ಕಂಡು ಇತ್ಲಗಿ ಕಳಿಸ್ತಿದ್ದ ಅಷ್ಟಿಯ” ಎಂದಳು. ಪಟೇಲರಿಗೆ ಈಗ ಖಾತ್ರಿಯಾಗಿ ಈ ಕೆಲ್ಸ ಪೀಗಂದೇ ಎನ್ನುವ ಗುಮಾನಿ ಮೂಡಿತು.

ತಡಮಾಡದೆ ಥಟ್ಟನೆ ತಮ್ಮ ಮಗ ಶಂಕ್ರಪ್ಪನಿಗೆ ಪೀಗನನ್ನು ಕರೆದುಕೊಂಡು ಬರುವಂತೆ ಹೇಳಿ ಕಳುಹಿಸಿದರು. ಪೀಗ ಹತ್ತಿ ತುಂಬಿ ಮೈಯಲ್ಲಾ ಧೂಳಾಗಿದ್ದರಿಂದ ಸ್ನಾನ ಮಾಡಿ ಪಡಸಾಲೆಯಲ್ಲಿ ಕೂತಿದ್ದ. ಶಂಕ್ರಪ್ಪ ಬಂದವನೆ “ಲೇ ಪೀಗ ಬಲ ಇಲ್ಲಿ ಮನ್ಗ ವಸಿ ಕೆಲ್ಸ ಅದ ನಿನ್ತವು” ಎಂದನು. ಪೀಗ “ಈಗ್ತಾನೆ ಹತ್ತಿ ತುಂಬಿ ಬಂದಿವ್ನಿ ಕಣಣ್ಣ ಪುನ ಯಾವ್ ಕೆಲ್ಸ ಆಗ್ಲಿಯ ಹೇಳ್ಬಾರ್ದ” ಎಂದ. ಶಂಕ್ರಪ್ಪ “ಹೇ ಅದ್ಕೆಲ್ಲ ಕಣ ಬಲ” ಎಂದ. “ಸರಿ ನಡಿರೆಪ್ಪ ಅಮೆಲ ಪಟೇಲ್ರು ಬೀದೀಲಿ ಕಂಡ್ರ ಬಯ್ತರ” ಎಂದವನೆ ಶಂಕ್ರಪ್ಪನನ್ನು ಪೀಗ ಹಿಂಬಾಲಿಸಿದ. ಪಟೇಲರ ಮನೆಯನ್ನು ಪೀಗ ತಲುಪುತ್ತಿದ್ದಂತೆಯೇ ಅವನ ಪ್ರವೇಶವನ್ನೇ ಎದುರು ನೋಡುತ್ತಿದ್ದ ಪಟೇಲರು ಅವನ ಆಗಮನವನ್ನು ಕಂಡೊಡನೇ ಮತ್ತಷ್ಟು ಉದ್ರಿಕ್ತರಾಗಿ “ಬಾ ಬಾ ಬಡ್ಡೀಮಗನೇ ಪೀಗ ನೀನು ಹತ್ತಿ ತುಂಬಕ್ಕ ಬಂದ್ಯೋ ಇಲ್ಲ ನಿನ್ ಜೋಬ ತುಂಬುಸ್ಕಳಕ್ಕ ಬಂದ್ಯೋ” ಎಂದರು. ಪಟೇಲರ ಕೆಂಡಮಂಡಲವಾದ ಮಾತುಗಳು, ಅವರ ಉರಿ ಕಣ್ಣು, ಕೋಪ ಎಲ್ಲವೂ ಪೀಗನಿಗೆ ಗಾಬರಿ ತಂದವು. ಅಲ್ಲಿ ಏನಾಗಿದೆ ಪಟೇಲರು ಏಕೆ ಈಗೆ ನನ್ನನ್ನು ಪ್ರಶ್ನಿಸುತ್ತಿದ್ದಾರೆಂಬ ಅರಿವು ಅವನಿಗೆ ಇರದಿದ್ದ ಕಾರಣ ಬಿಟ್ಟ ಕಣ್ಣು ಬಿಟ್ಟಂತೆಯೇ ಪಟೇಲರ ಧ್ವನಿಗೆ ಹೆದರಿ ನಡುಗಲಾರಂಭಿಸಿದ. ಪೀಗ ಭಯದಿಂದಲೇ “ಅಣ್ಣ ಅದೇನ ರ್ಯಾ ಗಿ ಹೇಳಿ” ಎಂದ. ಪಟೇಲರು ಮತ್ತಷ್ಟು ತಾಳ್ಮೆ ಕಳೆದುಕೊಂಡು “ಲೇ ಬಡ್ಡೀಮಗನೆ ಮಡ್ಗುಡ ಚಿನ್ನುದ್ ಚೈನಾ” ಎಂದು ಕುರ್ಚಿಯಿಂದ ಎದ್ದವರೇ ನೇರವಾಗಿ ಪೀಗನ ಕೊರಳಪಟ್ಟಿಯ್ನನೇ ಹಿಡಿದರು. ಪೀಗನ ಎದೆ ಬಡಿತ ಮತ್ತಷ್ಟು ಜೋರಾಯ್ತು, ಧ್ವನಿ ನಡುಗಲಾರಂಭಿಸಿತು. ದೇಹ ಕಂಪಿಸಿತು. ಮಾತು ಬಾಯಿಯಿಂದ ಹೊರ ಬರಲು ಶಕ್ತಿಯೇ ಇಲ್ಲದಂತಾಯ್ತು. ಸಂಕಟ ಹಾಗೂ ಭಯ ತುಂಬಿದ ಧ್ವನಿಯಿಂದಲೇ “ಅಣ್ಣ ನೀವ್ ಏನ್ ಹೇಳ್ತಾ ಇದ್ದರಿ; ಯಾವ್ ಚೈನು, ನನ್ನ ಯಾಕ್ ಕೇಳ್ತಾ ಇದ್ದರಿ ನಂಗ ಏನೂ ಗೊತ್ತಿಲ್ಲ. ನಾ ಯಾಕ್ ನಿಮ್ ಮನ ಚೈನ ಮುಟ್ಲಿ ಇಲ್ಲ ಕಣ್ಣ ನನ್ನಾಣುವೀ ನಾ ಅಂತ ಮನಹಾಳ್ ಕೆಲ್ಸ ಮಾಡಿಲ್ಲ” ಎನ್ನುತ್ತಲೇ ಆತನ ಕಣ್ಣಾಲಿಗಳು ತೇವಗೊಂಡವು. ಆದರೆ ಪಟೇಲರೂ ಪೀಗನ ಮುಖವನ್ನು ನೋಡುವ ಸ್ಥಿತಿಯಲ್ಲೇ ಇರಲಿಲ್ಲ. “ಲೇ ನಿಮ್ಮಪ್ಪ ಎಂಥ ಹಲ್ಕ ಬಡ್ಡೀಮಗ, ಹರಾಮಿ; ಅವ್ನ ರಕ್ತ ನಿಂದು ಇಲ್ಲಿ ಹತ್ತಿ ತುಂಬಕ್ಕ ಬಂದಿದ್ದವ್ರಲ್ಲಿ ನಿನ್ ಬುಟ್ರ ಇಂಥ ಕೆಲ್ಸವ ಯಾವನೂ ಮಾಡಕ್ಕ ಛಾನ್ಸೇ ಇಲ. ್ಲ ರ್ಯಾ ದಿಯಾಗಿ ಚೈನ ಕೊಟ್ರ ಗೆದ್ದ ಇಲ್ಲಾಂದ್ರ ಮಗ್ನ ನಿನ್ ರತ್ತ ಕುಡುದ್ಬುಡ್ತಿನಿ ಅಷ್ಟಿಯ” ಎಂದರು.

ಪೀಗ ಮಾಡದೇ ಇರುವ ತಪ್ಪುಗಳಿಗೆ ಅನೇಕ ಕಣ್ಣುಗಳು ಈಗಾಗಲೇ ಅವನನ್ನು ಸಾಕಷ್ಟು ಸಲ ಹೊಣೆಗಾರನನ್ನಾಗಿ ಮಾಡಿದ್ದವು. ಅದು ಪೀಗನಿಗೆ ಅಭ್ಯಾಸವಾಗಿತ್ತು. ಆದರೆ ಈ ಸಲ ಪಟೇಲರಂಥವರಿಂದಲೇ ಈ ಆರೋಪ ಬರುತ್ತಿರುವುದಕ್ಕೆ ಪೀಗ ತಲ್ಲಣಿಸಿಹೋಗಿದ್ದ. ನೋವಿನ ದನಿಯಲ್ಲೇ “ಅಣ್ಣೋ ನಮ್ಮಪ್ಪ ಕೆಟ್ಟವ್ನೆ ಒಪ್ಕತಿನಿ. ಆದ್ರ ನಾನು ನಮ್ ಅಪ್ನಥರ ಆಗ್ಬಾರ್ದು ಅಂತ ಕೂಲಿನಾಲಿ ಮಾಡ್ಕಂಡು ಬದುಕ್ತಾ ಇವ್ನಿ. ನನ್ ಮ್ಯಾಲ ಇಂಥ ದೊಡ್ ತಪ್ನ ಹಾಕ್ಬೇಡಿ” ಎಂದು ಪಟೇಲರಿಗೆ ಕೈ ಮುಗಿಯುತ್ತಲೇ ಬಾಯಿಯನ್ನು ದಾಟಿ ಕೆಳಗೆ ಇಳಿಯುತ್ತಿದ್ದ ಕಣ್ಣೀರನ್ನು ಒರೆಸಿಕೊಂಡ. ಆದರೆ ಪಟೇಲರು ಈಗಾಗಲೇ ಪೀಗನನ್ನು ಕಳ್ಳನೆಂದು ತೀರ್ಮಾನಿಸಿದ್ದರು. ಹೀಗಾಗಿ ಅವನ ಮಾತುಗಳು ಪಟೇಲರ ಕೋಪವನ್ನು ಮತ್ತಷ್ಟು ಹೆಚ್ಚಿಸುವುದಕ್ಕೆ ಬೆಂಕಿಯನ್ನು ಹೆಚ್ಚಿಸಲು ತುಪ್ಪ ಸುರಿಯುವಂತೆ ಕೇವಲ ಇಂಧನವಾದವು. ರ್ರ್ನೇ, ಮಗನ ಕಡೆ ತಿರುಗಿದವರೇ “ಲೇ ಶಂಕ್ರ ಮಾಡ್ಲ ಪೋನ್ನ ಪೊಲೀಸ್ನೊರ್ಗಣ ಈ ಮಗನ್ನ ಕಟ್ಟಾಕ್ಲ ಪೊಲೀಸ್ನೋರು ಬರಗಂಟ. ನಾಕ್ ಬುಟ್ರ ಚೈನ್ನ ಕಕ್ತನ. ಪೊಲೀಸ್ನೊರ್ಗೊ ಇಂಥ ಕಳ್ರುನ ಬಾಯ್ ಬುಡ್ಸೋದು ಗೊತ್ತು” ಎಂದರು. ಶಂಕ್ರಪ್ಪ ತಂದೆಯ ಮಾತಿಗೆ ಮರು ಮಾತಾಡದೆ ಮನೆಯ ಲ್ಯಾಂಡ್‌ ಲೈನಿನಿಂದ ಪೊಲೀಸ್ ಸ್ಟೇಷನ್ಗೆ ಕರೆ ಮಾಡಿದ. ಪೊಲೀಸರು ಪಟೇಲರ ಮನೆಯ ಕೇಸು ಎಂದೊಡನೆಯೇ ಇನ್ಸ್ಪೆಕ್ಟರ್ ಸಮೇತವಾಗಿ ಕರೆ ಸ್ವೀಕರಿಸಿದ ಒಂದು ಗಂಟೆಯ ಒಳಗೆ ಬಂದರು. ಊರಿನ ಜನ “ಇದೇನಪ್ಪ ಪಟೇಲರ ಮನ ಮುಂದ ಪೊಲೀಸ್ ಜೀಪು” ಎಂದು ಜಮಾವಣೆಗೊಂಡರು. ಆದರೆ ಪಟೇಲರ ಮನೆ ಒಳಗೆ ಹೋಗುವ ಧೈರ್ಯ ಮಾಡದೆ ಹಿಂದೇಟು ಹಾಕುತ್ತಿದ್ದರು. ಪೊಲೀಸರು ಪಟೇಲರ ಮನೆ ಒಳಗೆ ಪ್ರವೇಶಿಸಿದಾಗ ಪೀಗನು ಹಗ್ಗದಿಂದ ಮರದ ಕಂಬವೊಂದರಲ್ಲಿ ಬಂಧಿಯಾಗಿದ್ದ. ಆತನ ಮುಖವೆಲ್ಲ ದುಖಃದಿಂದ ಬಾಡಿ ಹೋಗಿತ್ತು. ಕಣ್ಣುಗಳು ಕೆಂಪಗಾಗಿದ್ದವು.

ಇನ್ಸ್ಪೆಕ್ಟರ್ ಪೀಗನನ್ನು ನೋಡಿ “ಓಹೋ ಇವ್ನೇನಾ ಆಸಾಮಿ, ಏನ್ ಪಟೇಲ್ರೇ ಮರ್ಕೇಣಜಿ ಮಾಂಸನೂ ಇಲ್ಲ ಇವ್ನತ್ರ. ಇವ್ನು ಕಳ್ತನ ಮಾಡ್ತನ” ಎಂದರು. ಪಟೇಲರು “ಹಂಗನ್ಬೇಡಿ ಸಾ ಇವ್ರಪ್ಪ ಕುಡ್ಕ, ಕಳ್ ನನ್ಮಗ. ಮಾಡ್ಬಾರ್ದು ಮಾಡಿ ಮಾಡಿ ರೋಗ ಬಂದು ಸತ್ತ. ಇನ್ನು ಇವ್ನ ಅಣ್ಣ ಭತ್ತದ ಲಾರೀಲಿ ಹೋದವ ಮನ್ಗ ಇನ್ನೂ ಬಂದಿಲ್ಲ. ಇವ್ನ ಕಿರಿ ತಮ್ಮ ಅಂತೂ ಕೇಡಿ. ಮೋಟು ಬೀಡಿ ಸೇದ್ಕಂಡು ಊರ್ ಹೈಕ್ಳ ಹಾಳ್ಮಾಡ್ಕಂಡು ನಿಂತವ್ನ. ಇನ್ನು ಇವ್ನೇನ್ ಸಾಚ್ವಾ ನೀವೇ ಹೇಳಿ” ಎಂದರು. ಪೀಗ “ಅಣ್ಣ ಹಂಗನ್ಬೇಡಿ ನಾನು ಕದ್ದಿಲ್ಲ” ಎಂದು ಮತ್ತೆ ಬಿಕ್ಕಳಿಸಿ ಅಳತೊಡಗಿದ. ಪಟೇಲರು “ನಾವು ಕೇಳುದ್ರ ಇವ್ನು ಬಾಯ್ ಬುಡಲ್ಲ, ನೀವೆ ಸ್ಟೇಷನ್ಗೆ ರ್ಕಂ ಡು ಹೋಗಿ ನಾಕ್ ಬುಡಿ. ಸಾ ಅದು ೪೦ ಗ್ರಾಂ ಚೈನು ಸಾ ಏನಿಲ್ಲಾಂದ್ರು ಎಂಬತ್ಸಾವ್ರ ಆಯ್ತದೆ” ಎಂದರು. ಇನ್ಸ್ಪೆಕ್ಟರ್ “ಲೇ ಇಲ್ಲೇ ಬಾಯ್ ಬಿಟ್ರೆ ಬುಟ್ಬುಡ್ತಿನಿ ಇಲ್ಲಾ ರ್ಕಂ ಡ್ ಹೋಗಿ ಏರೋಪ್ಲೇನ್ ಹತ್ತುಸ್ತೀನಿ” ಎಂದು ಪೀಗನ ಕುತ್ತಿಗೆ ಹಿಡಿದು ಕೇಳಿದರು. ಪೀಗ “ಇಲ್ಲ ಸಾ ನಾ ಅಂತವ್ನಲ್ಲ. ನಾನು ಕದ್ದಿಲ್ಲ” ಎಂದ. ಇನ್ಸ್ಪೆಕ್ಟರ್ಗೂ ಸಿಟ್ಟು ಏರತೊಡಗಿತ್ತು ತಮ್ಮ ಸಹೋದ್ಯೋಗಿಗೆ “ರೀ ಮುನಿಸ್ವಾಮಿ ಹಗ್ಗ ಬಿಚ್ಚಿ ಕರ್ಕೊಳ್ರಿ ಅವನನ್ನ ಸ್ಟೇಷನ್ನಿಗೆ, ಅಲ್ಲಿ ಬಾಯಿ ಬಿಡ್ತಾನೆ” ಎಂದು ಪೀಗನ ಕಣ್ಣನ್ನೇ ನೋಡಿ ಬೆಂಕಿಯುಂಡೆ ಉಗುಳುವ ಜ್ವಾಲಾಮುಖಿಯಂತೆ ಆರ್ಭಟಿಸಿದರು. ಪೊಲೀಸರು ಹಗ್ಗ ಬಿಚ್ಚುತ್ತಿದ್ದಂತೆಯೇ ಪೀಗ ಪಟೇಲರ ಕಾಲನ್ನು ಹಿಡಿದು ಬೇಡಿದ “ಅಣ್ಣ ನಾನು ಏನೂ ತಪ್ಪು ಮಾಡಿಲ್ಲ. ನನ್ನ ಪೊಲೀಸವ್ರ ಜೊತಲಿ ಕಳ್ಸಬೇಡಿ, ಅವ್ರು ಹೊಡಿತಾರ, ನಾನು ಏನೂ ಕದ್ದಿಲ್ಲ ಅಣ್ಣೋ ನನ್ನ ನಂಬಿ” ಎಂದು ಅಂಗಲಾಚಿದ.

ಪಟೇಲರು ಕಾಲಿನಿಂದ ಜಾಡಿಸಿ ಪೀಗನನ್ನು ತಳ್ಳಿದರು. ಪಟೇಲರು ಕಾಲಿನಿಂದ ತಳ್ಳಿದ ರಭಸಕ್ಕೆ ತೂರಿಕೊಂಡು ತೊಟ್ಟಿ ಅಂಚಿಗೆ ಹೋಗಿ ಬಿದ್ದನು. ಗಾರೆ ತೊಟ್ಟಿಯ ತುದಿ ತಲೆಗೆ ಗುದ್ದಿ ರಕ್ತಸ್ರಾವವಾಗತೊಡಗಿತು. ಇನ್ಸ್ಪೆಕ್ಟರ್ “ಬಿಡಿ ಪಟೇಲ್ರೇ ಇವ್ನ ನಾವ್ ವಿಚಾರಿಸ್ತೀವಿ” ಎನ್ನುತ್ತ ಪೀಗನನ್ನು ಕರೆದುಕೊಂಡು ಜೀಪಿನ ಬಳಿ ಬಂದರು. ಇಷ್ಟೆಲ್ಲಾ ಜರುಗುವ ವೇಳೆಗೆ ಊರಿನ ಜನ ಜೀಪಿನ ಬಳಿ ದ್ವಿಗುಣಗೊಂಡಿತ್ತು. ಪೀಗನನ್ನು ಎಳೆದುಕೊಂಡು ಹೋಗುತ್ತಿದ್ದುದನ್ನು ಕಂಡ ಜನ ತಲೆಗೊಬ್ಬರಂತೆ ಏನೇನೋ ಗೊಣಗುತ್ತ ಪೀಗನನ್ನು ದೃಷ್ಟಿಸಿ ನೋಡುತ್ತಿದ್ದರು. ಅದರಲ್ಲಿ ಒಬ್ಬಾತ ಪೋಲಿಸರನ್ನು “ಸಾ, ಯಾಕ ಸಾ ಪೀಗನ್ನ ಯಳ್ಕ ಹೊಯ್ತಾ ಇದರಿ” ಎಂದ. ಅದಕ್ಕೆ ಪೊಲೀಸ್ ಮುನಿಸ್ವಾಮಿ “ಹಾಂ ಅವ್ನು ಪಟೇಲ್ರ ಮನಲಿ ಕಳ್ತನ ಮಾಡವ್ನೆ ಅದ್ಕೆ ಮಂಗ್ಳರ್ತಿ ಮಾಡುವ ಅಂತ ಸ್ಟೇಷನ್ನಿಗೆ ಕರ್ಕೊಂಡು ಹೋಗ್ತಾ ಇದಿವಿ” ಎಂದ. ತನ್ನೂರಿನ ಜನ ತನ್ನನ್ನು ಈಗ ಕಳ್ಳನೆಂದು ನೋಡುತ್ತಿದ್ದಾರೆ ಎಂಬ ವಿಚಾರವೇ ಪೀಗನ ಹೃದಯವನ್ನು ಚೂರು ಮಾಡಿತ್ತು. ಕಣ್ಣೀರು ಒಂದೇ ಸಮನೆ ಹರಿಯತೊಡಗಿತು. “ಸಾ ಬುಡಿ ಸಾ ನಾ ಕಳ್ತನ ಮಾಡಿಲ್ಲ ಸಾ” ಎಂದು ಕೈ ಮುಗಿದು ಪೊಲೀಸರನ್ನು ಗೋಗರೆದ. ಆದರೆ ಪೊಲೀಸರು “ಹತ್ತೋ ಗಾಡಿನ ಸುವರ್, ಅನ್ನ ಕೊಡೋ ಧಣಿ ಇವ್ರು ಇಲ್ಲೇ ಕದಿತಿಯ, ಮಾಡೋದ್ ಮಾಡಿ ಇಲ್ಲಾ ಅಂತ ಬೇರೆ ಹೇಳ್ತೀಯ” ಎಂದು ಜೀಪಿಗೆ ಪೀಗನನ್ನು ತಳ್ಳಿದರು. ಪೀಗ ಜೀಪತ್ತಿದವನೆ ತನ್ನೆರಡು ಕಾಲುಗಳ ಮಧ್ಯೆ ತಲೆ ಬಾಗಿಸಿಕೊಂಡು ಒಂದೇ ಸಮನೆ ಅಳತೊಡಗಿದ. ಅಷ್ಟರಲ್ಲಾಗಲೇ ಒಬ್ಬಾತ ಪೀಗನ ತಾಯಿಗೆ ಪಟೇಲರ ಮನೆಯ ಮುಂದೆ ಆಗುತ್ತಿದ್ದ ಅವಾಂತರಗಳನ್ನೆಲ್ಲ ತಿಳಿಸಿದ್ದ. ಸಾಕಮ್ಮ ಓಡೋಡಿ ಬರುವಷ್ಟರಲ್ಲಿ ಜೀಪು ಹೊರಟಿತು.

ಸಾಕಮ್ಮ ಪಟೇಲರನ್ನು “ಅಣ್ಣೋ ನನ್ ಮಗ ಅಂತವ್ನಲ್ಲ ಅವನ್ನ ಹಿಂಗ್ ಪೊಲೀಸ್ರುಗ ಹಿಡ್ಕೊಟ್ರಲ್ಲ ನೀವು” ಎಂದು ಗೋಳಾಡತೊಡಗಿದಳು. ಪಟೇಲರು “ಏನ ನಿನ್ ಮಗ ಬಾರಿ ಸಾಚ ಕಣ ಇರು, ವಸಿ ಪೊಲೀಸ್ನವ್ರು ನಾಕ್ ಬುಟ್ರ ಎಲ್ಲಿ ಚೈನ ಮಡ್ಗಿನಿ ಅಂತ ಹೇಳ್ತನ ಅಮೇಲ ನೋಡು ನಿನ್ ಮಗ ಒಳ್ಳೆಯವ್ನ, ಕೆಟ್ಟವ್ನ ಅಂತ” ಎಂದರು. ಊರ ಜನರು “ಇದೇನಪ್ಪ ಇವ್ನಾರ ನ್ಯರ್ವಾ್ಗನ ಅನ್ಕಂಡ್ರ ಇವ್ನುವಿ ಅಪ್ನಂಗಿಯ ಆದ್ನಲ್ಲ” ಎನ್ನುತ್ತ ಮಾತನಾಡುತ್ತಿದ್ದರು. ಸಾಕಮ್ಮ “ರ್ರ್ಪ್ಪ ನನ್ ಮಗ ಏನ್ ಅವರಪ್ನಂಗ ಆಗಿಲ್ಲ ಕಣ. ಯಾರ ಮಾಡಿರ ತಪ್ಪ ನನ್ ಮಗನ್ ತಲ ಮೇಲ ಹಾಕ್ತಾವ್ರ ಆ ದೇವ್ರು ಅವ್ರ ಮನ ಹಾಳ್ ಮಾಡ್ಲಿ ಕಣಪ್ಪ ನನ್ ಮಗುನ್ ಶಾಪ ತಟ್ಲಿ” ಎಂದು ನೆಲಕ್ಕೆ ಕುಸಿದಳು. ಸಾಕಮ್ಮನ ಮನೆಯ ಪಕ್ಕದ ಹೆಂಗಸು ಸಾಕಮ್ಮನಿಗೆ ಸಂತೈಸಿ “ಬಾ ಸಾಕವ್ವ ಪೊಲೀಸ್ನವ್ರು ಏನ್ ಮಾಡಿರು; ಕೇಳ್ತರ ಅವ್ನು ಕದ್ದಿಲ್ಲ ಅಂದ್ರ ಎಲ್ ತಂದ್ ಕೊಟ್ಟನು, ಅಮೇಲ್ ಮನ್ಗ ಅವ್ರಿಯ ವಾಪ್ಸಿ ಕಳುಸ್ತರ ಕಣ ಬಾ” ಎಂದು ಮನೆಗೆ ಕರೆದುಕೊಂಡು ಹೋದಳು.

ಇತ್ತ ಪೊಲೀಸಿನವರು ಸ್ಟೇಷನ್ನಿನಲ್ಲಿ ಎಷ್ಟೇ ಕೇಳಿದರು ಪೀಗ “ಅಯ್ಯೋ ಸಾ ನಂಗ ಹೊಡಿಬೇಡಿ, ಸಾ ನಾ ಕದ್ದಿಲ್ಲ ಸಾ” ಎನ್ನುತ್ತಲೇ ಪೊಲೀಸರ ಕಾಲು ಹಿಡಿಯುತ್ತಿದ್ದ. ಇನ್ಸ್ಪೆಕ್ಟರ್ ಪಟೇಲರ ಮನೆಗೆ ಫೋನ್ ಮಾಡಿದರು. ಪಟೇಲರ ಸೊಸೆ ಸಾವಿತ್ರಿ ರಿಸೀವ್ ಮಾಡಿ “ಮಾವ ಲಾರಿ ಬಂತು ಅದ್ಕ ಹತ್ತಿ ಲೋಡ್ ಮಾಡ್ಸಕ ಹೋಗವ್ರ, ಅವ್ನು ಬಾಯ್ ಬುಟ್ನ ಸಾ” ಎಂದಳು. ಇನ್ಸ್ಪೆಕ್ಟರ್ “ಆ ವಿಷ್ಯ ಮಾತಾಡೋಣ ಅಂತ್ಲೆ ಫೋನ್ ಮಾಡ್ದೆ ಕಣಮ್ಮ, ಅವ್ನು ಕದ್ದಿಲ್ಲಂತ ಹೇಳ್ತಾನೇ ಅವ್ನೆ” ಎಂದರು. ಸಾವಿತ್ರಿ “ಮಾವ ಮನ್ಗ ಬಂದಾಗ ಹೇಳ್ತಿನಿ ಸಾ” ಎಂದಳು. ಇನ್ಸ್ಪೆಕ್ಟರ್ “ಆಯ್ತು ಕಣಮ್ಮ” ಎಂದು ಫೋನಿಟ್ಟರು.

ಹತ್ತಿಮೂಟೆಗಳನ್ನು ಸಾಗಿಸುವ ಲಾರಿ ಊರಿಗೆ ಬಂತು. ಹತ್ತಿಯನ್ನು ಕೊಳ್ಳುವ ವ್ಯಾಪಾರಿ ಹತ್ತಿಮೂಟೆಗಳನ್ನು ಎರಡೆರಡರಂತೆ ತೂಕದ ಯಂತ್ರದಲ್ಲಿ ಇರಿಸಿ ಸರಿಯಾದ ತೂಕವನ್ನು ನೋಡಿಕೊಳ್ಳುತ್ತಿದ್ದ. ಒಂದಿಬ್ಬರು ಕಾರ್ಮಿಕರು ತೂಕದ ಯಂತ್ರಕ್ಕೆ ಹಾಕುವುದಕ್ಕೆ ಮುಂಚೆ ಚಾಕುವಿನಿಂದ ಹತ್ತಿಮೂಟೆಗಳ ಮಧ್ಯಬಾಗವನ್ನು ಕತ್ತರಿಸಿ ಚೀಲದೊಳಗಿನ ಹತ್ತಿಯ ಗುಣಮಟ್ಟವನ್ನು ಪರೀಕ್ಷಿಸುತ್ತಿದ್ದರು. ಇದಕ್ಕೆ ಕಾರಣ ಕೆಲವರು ಕಳಪೆ ಗುಣಮಟ್ಟದ ಹತ್ತಿಯನ್ನು ಚೀಲದ ಮಧ್ಯಭಾಗದಲ್ಲಿ ಸೇರಿಸಿ ಚೀಲದ ಮೇಲೆ ಉತ್ತಮ ಗುಣಮಟ್ಟದ ಹತ್ತಿಯನ್ನು ಇಟ್ಟು ವ್ಯಾಪಾರಿಗೆ ಮೋಸ ಮಾಡುತ್ತಿದ್ದರು. ಈ ಮೋಸವನ್ನು ತಿಳಿದೇ ವ್ಯಾಪಾರಿಗಳು ಈ ಕ್ರಮ ಅನುಸರಿಸುತ್ತಿದ್ದರು. ಪಟೇಲರ ಮನೆಯ ಹತ್ತಿಮೂಟೆಗಳನ್ನು ಇದೇ ಪ್ರಕಾರವಾಗಿ ಪರೀಕ್ಷಿಸಲಾಗುತ್ತಿತ್ತು. ಒಂದು ಹತ್ತಿಮೂಟೆಯ ಮಧ್ಯಭಾಗವನ್ನು ಸೀಳಿ ಹತ್ತಿ ಪರೀಕ್ಷಿಸುತ್ತಿರಲಾಗಿ ಹತ್ತಿಯ ಒಳಗಿನಿಂದ ತಾಳಿಸರವೊಂದು ದೊಪ್ಪನೆ ನೆಲದ ಮೇಲೆ ಬಿದ್ದಿತು. ಪಟೇಲರು ಹತ್ತಿಯ ಗುಣಮಟ್ಟವನ್ನು ಪರೀಕ್ಷಿಸುತ್ತಿರುವವರನ್ನು ತದೇಕ ಚಿತ್ತದಿಂದ ನೋಡುತ್ತಿರುವಾಗ ಈ ದೃಶ್ಯ ಮೊದಲಿಗೆ ಅವರ ಕಣ್ಣಿಗೆ ಕಂಡಿತು. ಓಡೋಡಿ ಬಂದವರೆ “ಲೇ ರ್ಲತ, ರ್ಲಲ ವಸಿ ಅಯ್ಯೋ! ತಾಳಿಸರ ಹತ್ತಿಮೂಟ್ದೊಳ್ಗ ಸೇರ್ಕಂಡಿತ್ತಲ್ಲಪ್ಪ, ಅಯ್ಯೋ ಪೀಗ ಕದ್ದ ಅಂತ ಪೊಲೀಸ್ನೋರ್ಗ ಹಿಡ್ಕೊಟ್ನಲ್ಲ, ಎಂಥ ಕೆಲ್ಸ ಆಗೋಯ್ತು, ಈಗ ಏನ್ಮಾಡದು ಲೇ ಶಂಕ್ರ ನೀನು ಹತ್ತಿ ತೂಗುಸ್ತಾ ಇರು ನಾನು ಪೊಲೀಸ್ನೋರ್ಗ ಫೋನ್ ಮಾಡಿ ತಾಳಿಸರ ಸಿಕ್ತು ಅಂತ ಹೇಳಿ ಅವ್ನ ಬುಟ್ಬುಡಿ ಅಂತೀನಿ” ಎಂದವರೆ ಸರಸರನೆ ಮನೆ ಕಡೆಗೆ ಹೆಜ್ಜೆ ಹಾಕುತ್ತ ನಡೆದರು. ಸೊಸೆ ಸಾವಿತ್ರಿಗೆ “ಅಯ್ಯೋ ತಕ್ಕವ್ವ ನಿನ್ ಸರವಾ ಎಲ್ಲಿಟ್ಟಿದ್ದ ನೀನು, ಹತ್ತಿ ಮೂಟಲಿ ಸಿಕ್ತು ನಿನ್ ಮಗ್ಳು ಕೈಗ ಸಿಕ್ಕಂಗ ಏನಾರ ಇಟ್ಟಿದ್ಯ, ಅದು ತಕ್ಕಂಡು ಹೋಗಿ ಹತ್ತಿ ಗುಡ್ಡಲಿ ಇಟ್ಟುದ ಅನ್ನಂಗದ, ಆ ಪಾಯಿ ಪೀಗ ಅನ್ಯಾಯ್ವಾಗಿ ಏಟು ತಿಂದ್ನಲ್ಲವ್ವ. ಥೂ ನಿಮ್ಮಿಂದ ಎಂಥ ಕೆಲ್ಸ ಆಗೋಯ್ತು” ಎಂದು ಒಂದೇ ಸಮನೆ ಲ್ಯಾಂಡ್ಲೈನಿನಿಂದ ಪೊಲೀಸ್ ಸ್ಟೇಷನ್ನಿಗೆ ಕರೆ ಮಾಡಿದರು.

ಆದರೆ ಮೂರ್ನಾಲ್ಕು ಬಾರಿ ಕರೆ ಮಾಡಿದರೂ ಸ್ಟೇಷನ್ನಿನ ಯಾರೂ ಕರೆ ಸ್ವೀಕರಿಸಲಿಲ್ಲ. ಪಟೇಲರು “ಒಳ್ಳೆ ಎಡವಟ್ಟು ಆಯ್ತಲ್ಲ” ಎಂದವರೆ ತಾವು ಮಾಡಿದ ತಪ್ಪಿಗೆ ಒಳಗೊಳಗೆ ಕುಂದುತ್ತ ಆ ಕಡೆ ಈ ಕಡೆ ಓಡಾಡುತ್ತಿದ್ದರು. ಹತ್ತಿಮೂಟೆಯಲ್ಲಿ ಪಟೇಲರ ಸೊಸೆಯ ಚಿನ್ನದ ತಾಳಿಸರ ಸಿಕ್ಕ ವಿಷಯ ಶರವೇಗದಲ್ಲಿ ಇಡೀ ಊರಿಗೆ ಹಬ್ಬಿತು. ಸಾಕಮ್ಮ ಮತ್ತು ಅವಳ ಕಿರಿಮಗ ನಿಂಗಪ್ಪ ಓಡೋಡಿ ಪಟೇಲರ ಮನೆಗೆ ಬಂದರು. “ಅಯ್ಯಯೋ ನನ್ ಮಗುನ್ನ ಅನ್ಯಾಯ್ವಾಗಿ ಪೊಲೀಸ್ನವ್ರ ಕೈಗ ಹಿಡ್ಕೊಟ್ರಲ್ಲಣ್ಣ. ನಾನು ಎಷ್ಟು ಹೇಳುದ್ರುವೀ ನನ್ ಮಾತ್ನ ನೀವು ನಂಬ್ನೇ ಇಲ್ಲ. ಟೇಷನ್ಲಿ ಎಷ್ಟ್ ಹೊಡ್ದಿದ್ದರೋ ಏನ ಅವ್ನ, ಮೊದ್ಲು ರ್ಕ್ ಬನ್ನಿ ಹೋಗಿ, ಅಲ್ಲಿಗಂಟ ನಾ ನಿಮ್ ಮನ ಬುಟ್ಟು ಹೋಗಲ್ಲ” ಎಂದು ಸಾಕಮ್ಮ ಪಟ್ಟು ಹಿಡಿದು ಕುಳಿತಳು. ತನ್ನ ಅಣ್ಣನಿಗೆ ಇಂತ ಸ್ಥಿತಿ ತಂದ ಪಟೇಲರನ್ನು ನಿಂಗಪ್ಪ ದುರು ದುರನೇ ನೋಡುತ್ತಲೇ “ನೀವ್ ಯಾವ್ ಸೀಮ ಪಟೇಲ್ರ ಸ್ವಾಮಿ, ನಮ್ ಅಣ್ಣ ಏನ್ ಕಳ್ಳ ಅಂತ ಹಿಡ್ಕೊಟ್ಟಿದ್ದರಿ, ನಂದು ಬೇಕಾದ್ರ ಕೈ ವಸಿ ಸುದ್ವಿಲ್ಲ ಅಂದ್ರ ಜನ, ದೇವ್ರು ನಂಬ್ತನ. ಆದ್ರ ನಮ್ಮಣ್ಣ ದೇವ್ರಂತೆವ ಅಂಥೆವ್ನ ಜೈಲ್ಗ ಕಳ್ಸಿದ್ದರಿ ನೀವು, ಅವನ್ಗ ಏನಾರ ಹೆಚ್ಚುಕಮ್ಮಿ ಆದ್ರ ನಾನು ಸುಮ್ಕಿರಲ್ಲ” ಎಂದನು. ಪಟೇಲರಿಗೆ ದಿಕ್ಕೇ ತೋಚದಂತಾಯ್ತು. ಮಗ ಶಂಕ್ರಪ್ಪ ಮನೆಗೆ ಬಂದ. ಪಟೇಲರು “ನಡಿ ಶಂಕ್ರ ಟೇಷನ್ಗ ಹೋಗಿ ಪೀಗುನ್ನ ಬುಡ್ಸಿ ರ್ಕಸ ಬರವು” ಎನ್ನುತ್ತ ಮಗನ ಜೊತೆ ಬೈಕು ಹತ್ತಿ ಹೊರಟರು. ಊರಿನ ಜನ ಒಂದು ರೀತಿಯ ಗೊಂದಲದಲ್ಲಿ ನಿಂತಿದ್ದರು. “ಇದೇನವ್ವ ಆ ತಾಯಿ ವಸಿ ರ್ಯಾ ಗಿ ನೋಡ್ಕಬಾರ್ದ ಅನ್ಯಾಯ್ವಾಗಿ ಆ ಗಂಡು ಪೀಗುನ್ಗ ಪೊಲೀಸ್ನವ್ರು ಹೊಡಿಯಂಗ ಮಾಡುದ್ಲು ಪುಣ್ಯಾತ್ಗಿತ್ತಿ, ಪಟೇಲ್ರುವಿ ದುಡುಕ್ಬುಟ್ರು ಆ ಪುಣ್ಯಾತ್ಮನ್ಗ ವಸಿ ಕ್ಯಾಣ ಜಾಸ್ತಿ, ಮಕ್ಳು ಮರಿ ಮನಲಿ ಇದ್ದಾಗ ಆ ತಾಯಿ ಚೈನ ಬೀರು ಮ್ಯಾಲ ಯಾಕಿಟ್ಲು” ಎಂದೆಲ್ಲಾ ಮಾತನಾಡಿಕೊಳ್ಳುತ್ತಿದ್ದರು.

ಪೊಲೀಸ್ ಸ್ಟೇಷನ್ನಿನ ಬಳಿ ಬೈಕು ನಿಲ್ಲಿಸುತ್ತಿದ್ದಂತೆಯೇ ಪಟೇಲರಿಗೆ ಆಂಬುಲೆನ್ಸ್ ಒಂದು ಸ್ಟೇಷನ್ನಿನ ಮುಂಬಾಗದಲ್ಲಿ ನಿಂತಿರುವುದು ಕಂಡಿತು. ಪಟೇಲರು ಅದನ್ನು ನೋಡುತ್ತಲೇ ಸ್ಟೇಷನ್ನಿನ ಒಳಗೆ ಹೋದರು. ಇನ್ಸ್ಪೆಕ್ಟರ್ ತಲೆಮೇಲೆ ಕೈಹೊತ್ತು ಕುಳಿತಿದ್ದರು. ಪಟೇಲರು ಅವರನ್ನು ಮಾತನಾಡಿಸಬೇಕೆನ್ನುವಷ್ಟರಲ್ಲಿಯೇ ಪೀಗನನ್ನು ಆಸ್ಪತ್ರೆಯ ಸಿಬ್ಬಂದಿ ಸ್ಟ್ರೆಚ್ಚರ್ನಲ್ಲಿ ಮಲಗಿಸಿಕೊಂಡು ಆಂಬುಲೆನ್ಸಿನತ್ತ ವೇಗವಾಗಿ ಹೋಗುತ್ತಿದ್ದ ದೃಶ್ಯ ಕಂಡಿತು. ಶಂಕ್ರಪ್ಪ ಆಸ್ಪತ್ರೆಯ ಸಿಬ್ಬಂದಿಗೆ ಏನಾಯ್ತೆಂದು ಕೇಳಿದಾಗ ಒಬ್ಬಾತ “ಅಯ್ಯೋ ಈ ಪುಣ್ಯಾತ್ಮ ಒಳ್ಳೆ ಕಡ್ಡಿ ಹಂಗೆ ಅವ್ನೆ ಹೊಟ್ಟೇಲಿ ನಾಕ್ ಕೆ. ಜಿ. ಮಾಂಸನೂ ಇಲ್ಲ ಪೊಲೀಸ್ರು ಕೊಟ್ ಏಟ್ಗೆ ಶಿವನ್ ಪಾದ ಸೇರ್ಕೊಂಡವ್ನೆ ಲಾಕಪ್ ಡೆತ್ ಆಗಿದೆ” ಎಂದ. ಪಟೇಲರಿಗೆ ಕೈ ಕಾಲುಗಳು ನಡುಗ ತೊಡಗಿದವು. ಶಂಕ್ರಪ್ಪನ ಎದೆ ಝಲ್ಲೆಂದು ಕಣ್ಣುಗಳು ಮಂಜಾದವು. ನಿಂತ ನೆಲವೇ ಬಿರಿದಂತಹ ಅನುಭವ ಇಬ್ಬರಿಗೂ ಆಯ್ತು. ಇನ್ಸ್ಪೆಕ್ಟರ್ ಪಟೇಲರನ್ನು ನೋಡಿ “ಪಟೇಲ್ರೇ ನೋಡ್ರಿ ನೀವ್ ಹೇಳಿದ್ರಿ ಅಂತ ಈ ಮನುಷ್ಯನ್ಗೆ ಒಂದೆರೆಡು ಏಟು ಕೊಟ್ವಿ ಅಷ್ಟಕ್ಕೆ ಸತ್ತೋದ್ನಲ್ರಿ. ಈಗ ನನ್ ಕೆಲ್ಸಕ್ಕೆ ಗಂಡಾಂತರ ತಂತಲ್ರಿ ನಿಮ್ ಸೊಸೆ ಚಿನ್ನದ ಚೈನಿನ ಕೇಸು. ನನ್ ಸಂಸಾರನೇ ಬೀದಿಗೆ ಬರೋ ಅಂಗೇ ಆಯ್ತಲ್ರಿ” ಎನ್ನುತ್ತಿರುವಾಗಲೇ ಸ್ಟೇಷನ್ನಿನ ಫೋನು ರಿಂಗಣಿಸಿತು.

ಕರೆ ಸ್ವೀಕರಿಸಿದ ಇನ್ಸ್ಪೆಕ್ಟರ್ಗೆ ಆ ಕಡೆಯಿಂದ “ರೀ ಶಶಿಧರ್ ನೀವು ಮನುಷ್ಯರೇನ್ರಿ, ಹೆಂಗ್ರಿ ನೀವು ಹೊಡೆದ್ರಿ, ಚಾರ್ಜ್ ಶೀಟ್ ಹಾಕ್ದೆ ಎಫ್. ಐ. ಆರ್ ಹಾಕ್ದೆ, ಅಪರಾಧಿ ಸ್ಥಾನದಲ್ಲಿ ಇರೋ ವ್ಯಕ್ತಿನ ಕೋರ್ಟ್ಗೆ ಒಪ್ಪಿಸ್ದೇ ಅದೇಗ್ರೀ ಚಾರ್ಜ್ ಮಾಡಿದ್ರೀ ನೀವು, ನಿಮ್ಗೆ ಕಾನೂನು ಗೊತ್ತಿಲ್ವ, ನೀವೂ ಯಾವ್ ಸೀಮೆ ಆಫೀರ್ರುಪ, ಥೂ ಹೋಗ್ರಿ ಮನೆಗೆ ಹೋಗಿ ಸಗಣಿ ಬಾಚಿ ಹೋಗ್ರಿ, ನೀವು ಅದಿಕ್ಕೆ ಲಾಯಕ್ಕು ಯು ಆರ್ ಸಸ್ಪೆಂಡೆಡ್ ಆ ನಿಮ್ ಜೊತೆ ಇದ್ನಲ್ಲ ಆ ಮುನಿಸ್ವಾಮಿ ಅವುನ್ಗು ಹೇಳಿ ನೀವು ಅಲ್ಲೇ ಇರಿ ನಾನು ಬರೋ ರ್ಗು ಅಲ್ಲಾಡ್ಬೇಡಿ ಮಹಜರ್ ಮಾಡ್ಬೇಕು, ನಿಮ್ಮನ್ನ ಎನಕ್ವೆರಿ ಮಾಡ್ಬೇಕು ಬಾಡಿದು ಪೋಸ್ಟಮಾರ್ಟಮ್ ರಿಪರ್ಟ್ಧ ಬಂದ್ಮೇಲೆ ಇನ್ನೇನಾಗುತ್ತೋ ಅನ್ಬವ್ಸಿ” ಎಂದರು. ಇನ್ಸ್ಪೆಕ್ಟರ್ಗೆ ಇಷ್ಟು ಬೇಗ ಈ ಸ್ಟೇಷನ್ನಿನ ವರ್ತಮಾನ ತಮ್ಮ ದೊಡ್ಡ ಸಾಹೇಬರಿಗೆ ಹೇಗೆ ತಲುಪಿತೆಂದು ತಮ್ಮ ಸಿಬ್ಬಂದಿಯನ್ನೊಮ್ಮೆ ನೋಡಿ ನಿಟ್ಟುಸಿರು ಬಿಟ್ಟು ನಿಂತಲ್ಲೇ ಕುಸಿದು ಕುರ್ಚಿಯಲ್ಲಿ ಕೂತರು. ಪಟೇಲರು “ಸಾ” ಎಂದರು. ಸಿಟ್ಟಿನಿಂದ ಇನ್ಸ್ಪೆಕ್ಟರ್ “ರೀ ಹೋಗ್ರಿ ಇಲ್ಲಿಂದ ನಮ್ ಜೀವ್ನ ಹಾಳ್ಮಾಡಿದ್ರಿ ನೀವು” ಎಂದು ಗದರಿದರು. ಪಟೇಲರು ದಿಕ್ಕು ತೋಚದೆ ಸ್ಟೇಷನ್ನಿನ ಈಚೆ

ಬಂದರು. ಆ್ಯಂಬುಲೆನ್ಸಿನ ಒಳಗೆ ಪೀಗನ ಕೈಗಳಿಗೆ ಅಂಟಿರುವ ರಕ್ತದ ಕಲೆಗಳು ಶವದ ಮೇಲೆ ಬಿಳಿ ಬಟ್ಟೆಯನ್ನು ಹೊದಿಸಿದ್ದರೂ ಬಟ್ಟೆಯನ್ನು ದಾಟಿ ಕಾಣುತ್ತಿದ್ದವು. ಪಟೇಲರು ನೋಡು ನೋಡುತ್ತಿದ್ದಂತೆಯೇ ಶವಪರೀಕ್ಷೆಗೆ ಪೀಗನ ಮೃತದೇಹವನ್ನು ಹೊತ್ತ ಆ್ಯಂಬುಲೆನ್ಸ್ ಹೊರಟಿತು. ಆ್ಯಂಬುಲೆನ್ಸಿನ ಹೊಗೆಯ ಪೈಪಿನಿಂದ ರ್ರ್ನೆಯ ಹೊಗೆ ಪಟೇಲರ, ಶಂಕ್ರಣ್ಣನ ಮುಖಕ್ಕೆ ಬಡಿಯಿತು. ದಟ್ಟವಾದ ಧೂಳಿನೊಂದಿಗೆ ವಾಹನ ಮರೆಯಾಯ್ತು. ಪೀಗನೂ ಮರೆಯಾದ.

-ಡಾ. ಶಿವಕುಮಾರ್‌ ಡಿ ಬಿ


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x