ಗಂಜಿ
ಕತೆ ತೀರಾ ದೊಡ್ಡದಾಗಿರದೆ ನಾಲ್ಕೈದು ಸಾಲುಗಳಲ್ಲಿ ಕತೆ ಆಶಯವನ್ನು ಪರಿಣಾಮಕಾರಿಯಾಗಿ ಬಿಂಬಿತವಾಗಿದ್ದರೆ ಅದು ಮನಸಿಗೆ ಇಳಿದು ಬಹುಕಾಲ ಉಳಿಯುತ್ತದೆ ಎನ್ನುವ ತತ್ವ ನಂಬಿ ಇಂತಹ ಎರಡು ದಿನಗಳಿಂದ ಕತೆ ಬರೆಯಲು ಒದ್ದಾಡುತ್ತಿದ್ದ ಹೊಸ ಕತೆಗಾರನಿಗೆ ಹೇಗೋ ಎರಡು ಬಾರಿ ತನ್ನ ನೆಚ್ಚಿನ ಜಾಗಕ್ಕೆ ಹೋಗಿ ಕುಳಿತು ಬರೆಯಲು ಪ್ರಯತ್ನಿಸುತ್ತಿದ್ದ, ಒಂದೇ ಒಂದು ಸಾಲು ಹೊರಬಂದಿರಲಿಲ್ಲ. ಆದರೆ ಪಕ್ಕದ ಮನೆಯ ರಂಗವ್ವ ಮನೆಗೆ ಬಂದು ಎರಡು ದಿನ ಆಯಿತು ಯಾವುದೇ ಕೆಲಸ ಇಲ್ಲ. ಊಟಕ್ಕೆ ಸರಿಯಾಗಿ ದಿನಸಿಯೂ ಇಲ್ಲ. ಒಂದೆರೆಡು ಕೆಜಿ ಅಕ್ಕಿ ಕೊಡಿ ಮಕ್ಕಳಿಗೆ ಗಂಜಿಯಾದರೂ ಮಾಡಿ ಹಾಕುವೆ ಅಂದಾಗ ಕತೆಯ ಮೊದಲ ಸಾಲು ಹೊಳೆದ್ದಿತ್ತು.
ಇನ್ನಿಲ್ಲ
ರಾಧೆ ಹೆಸರಿನ ಅವಳು ನಿತ್ಯವೂ ಬೆಟ್ಟದ ಕಲ್ಲು ಬೆಂಚಿನ ಮೇಲೆ ಕುಳಿತು ಕಾಯುತ್ತಿದ್ದಳು,ಕಾಯುತ್ತಲೇ ಇದ್ದಳು. ನೀ ಅಲ್ಲಿಯೇ ಇರು ನಾ ಖಂಡಿತಾ ಬರುವೆ ಎಂದ ರಮಣ ಎನ್ನುವ ಹೆಸರಿನವವನ ವಾರವಾದರೂ ಸುಳಿವಿಲ್ಲ. ಇವತ್ತು ನವಮಿ ಆಕಾಶದಲ್ಲಿ ಸಂಜೆ ನಕ್ಷತ್ರ ಬಂದು ಹೇಳಿದಂತಾಯಿತು ಹೇ ಕೇಳೇ ನಿನ್ನ ಪಾಲಿಗೆ ರಮಣ ಇನ್ನಿಲ್ಲ. ಬೆಟ್ಟದಡಿಯಲ್ಲಿ ರಾಧೆ ಅಲ್ಲಿಯೇ ಕಲ್ಲಾದಳು.ಈಗ ಅದು ಪ್ರೇಮಿಗಳ ನೆಚ್ಚಿನ ತಾಣ.
ಫಸಲು
ಕಳೆದ ಎರಡೂವರೆ ವರ್ಷಗಳಿಂದ ಕೈ ಕೊಟ್ಟಿದ್ದ ಫಸಲು ಈ ವರ್ಷದ ಭರಪೂರಾಗಿತ್ತು.ಆ ಬೆಳೆ ಮಾರಿ ಬಂದ ಹಣದಲ್ಲಿ ಮಗಳ ಮದುವೆಯನ್ನು ಅದ್ದೂರಿಯಾಗಿ ಮಾಡುವ ಕನಸು ಕಾಣುತ್ತಾ ಹೊಲದ ಕಡೆ ಹೊರಟಿದ್ದ ರಾಮಯ್ಯನ ಮೇಲೆ ಹುಣಸಿ ಮರದ ಕೊಂಬೆ ಮುರಿದು ಬಿದ್ದು ಅಸುನೀಗಿದ. ಅತ್ತ ಕಡೆ ಮಗಳ ಮದುವೆಯೂ ಮುರಿದು ಬಿತ್ತು.
ಟೀ..
ಬೆಳಗಿನಿಂದ ಇಪ್ಪತ್ತು ಬಾರಿ ಆಯಿತು ಬರಿ ಟೀ ತಾ…..ಟೀ ತಾ…..ಬೈಯುತ್ತಾ ಮತ್ತೆ ಟೀ ಕೊಟ್ಟಳು ಸಾವಿತ್ರಿ. ಶಿವಪುತ್ರ ಆಫೀಸಿಗೆ ಹೊರಟ. ಸಂಜೆ ಆಫೀಸಿನಿಂದ ಬಂದ ಶಿವಪುತ್ರ ಒಂದೂ ಮಾತನಾಡದೆ ಸುಮ್ಮನೆ ಕೋಣೆ ಸೇರಿದ. ರೀ… ರೀ… ಟೀ ಮಾಡಿದ್ದೇನೆ ಎಂದು ಸಾವಿತ್ರಿ ಅಡುಗೆ ಮನೆಯಿಂದ ಹೊರಬಂದು ನೋಡಿದಾಗ ತನ್ನ ‘ಡೈಯಾಬಿಟ್ಸ್ ರಿಪೋರ್ಟ್’ ಅವಳ ಕಣ್ಣ ಮುಂದಿಟ್ಟ ಮೌನವಾದ. ಅವನ ಕಣ್ಣುಗಳು ಹೇಳುತ್ತಿದ್ದವು ಇನ್ನ ಮೇಲೆ ನಾ ಟೀ.. ಕುಡಿಯಲ್ಲ ಇವಳೇ ಎಂದ. ಅಡುಗೆ ಮನೆಯಲ್ಲಿ ಗ್ಯಾಸ್ ನ ಮೇಲೆ ಟೀ ಕುದಿಯುತ್ತಿತ್ತು. ಅವಳು ಮನಸು ಒದ್ದೆಯಾಯಿತು ಕಣ್ಣು ಜಿನುಗಿದ್ದವು.
ರೇಷನ್
ಮೂರು ದಿನ ಆಯಿತು ಹೋಗಿ ಬಂದಿದ್ದೆ ಬಂತು ಕೈಗೆ ಸಿಗ್ತಾ ಇಲ್ಲ. ಇವತ್ತು ಕಡೆ ದಿನ ತಪ್ಪಿದರೆ ಮುಗಿತು, ನಾಳೆ ಅವನು ಹುಡುಕಿದರೂ ಸಿಗುವುದಿಲ್ಲ.ಈ ರೇಷನ್ ತರಲು ಎಪ್ಪತ್ತು ರೂಪಾಯಿಗಾಗಿ ಸಂಜೆಯವರೆಗೂ ಅಲೆದಿದ್ದೇ ಬಂತು ಎಲ್ಲಿಯೂ ಹಣ ಸಿಗಲಲ್ಲಿ. ಹೇಗೋ ಏನೋ ಇವತ್ತು ಹಣ ಸಿಕ್ಕಿದೆ.ಇವತ್ತು ತಪ್ಪಿ ನಾಳೆಹೋದೆ “ಸ್ಟಾಕ್ “ಇಲ್ಲ ಎಂದು ಉತ್ತರ ಬಂತು. ಕಂಕುಳಲ್ಲಿದ್ದ ಮಗುವಿನ ಕಣ್ಣಿನಲ್ಲಿ ಊಟ ಕನಸು ಮಿನುಗುತ್ತಿತು. ನನ್ನ ಕರುಳಿನ ಸಂಕಟ ಹೆಚ್ಚಾಯಿತು.
-ವೃಶ್ಚಿಕ ಮುನಿ (ಪ್ರವೀಣಕುಮಾರ ಸುಲಾಖೆ.)