ಮಾನ್ಸೀ. . . : ಗೀತಾ ನಾಗರಾಜ.

ಮುಗ್ಧ ಮಾನ್ಸಿ ಗೆ ಸಿಕ್ಕ ಮಹಾ ಒರಟು ಗಂಡ ಪರೀಕ್ಷಿತ್.
ಅವನ ಒರಟುತನಕ್ಕೆ ಬೇಸತ್ತು ಹೋಗಿದ್ದರೂ ಹೇಗೋ ಸಂಸಾರವನ್ನು ನಿಭಾಯಿಸಲೇ ಬೇಕಾದ ಅನಿವಾರ್ಯತೆ ಅವಳಿಗೆ. ಅಣ್ಣ ಸಂಪ್ರೀತನಿಗೆ ಅವಳೆಂದ್ರೆ ಪ್ರಾಣ.
ಡಬಲ್ ಡಿಗ್ರಿ ಮಾಡಿದ್ದ. ತುಂಬಾ ನೇ ಇಂಟಲಿಜೆಂಟ್.
ಪರಸ್ಪರ ಸದಾಕಾಲ ಇಬ್ಬರೂ ಕಷ್ಟ – ಸುಖಗಳನ್ನು ಹಂಚಿಕೊಳ್ಳುತ್ತಾರೆ.
ಇದೊಂದೆ ಅವರ ಮನ ತೃಪ್ತಿಹೊಂದುವ ಆಯಾಮವಾಗಿತ್ತು.

ಹೀಗೇ, ಕೆಲ ದಿನಗಳ ನಂತರ ಸಂಪ್ರೀತನಿಗೆ ಅವನದೇ ಕಂಪನಿಯ ಸ್ಟೆನೋ ಕನಕಳ ಪರಿಚಯವಾಗುತ್ತದೆ.
ಪರಿಚಯ ಪ್ರೀತಿಯಾಗಿ, ಪ್ರೀತಿ ಪ್ರೆಮವಾಗಿ, ಒಂದು ಹದಕ್ಕೆ ಬಂದಾಗ,
ಅವನೇ “ಮಾನ್ಸಿ ನಾನೊಂದು ಹುಡಗೀನ್ನ ಲವ್ವ್ ಮಾಡ್ತಾ ಇದೀನಿ ನಾಳೆ ಅವಳನ್ನು ಪರಿಚಯಿಸುವೆ “,
ಅವಳನ್ನು ಮಾನ್ಸಿಗೆ ಪರಿಚಯಿಸಿದಾಗ ಅವಳಿಗೆ ಕನಕಳನ್ನು ಎಲ್ಲಿಯೋ ನೋಡಿದ ಮುಸುಕು ನೆನಪು. ಸ್ಪಷ್ಟ ವಾಗಲಿಲ್ಲ . ತನ್ನ ಅಭಿಪ್ರಾಯದಿಂದ ಇಬ್ಬರಲ್ಲಿ ಯಾರೊಬ್ಬರೂ
ದೂರ ಸರಿಯುವ ಸ್ಥಿತಿಯಲ್ಲಿಲ್ಲ. ಹೀಗಾಗಿ
“ನಿನಗಿಷ್ಟವಾದರೆ ಸಾಕು ಅಣ್ಣ”ಜಾರಿಕೊಂಡಿದ್ದಳು.
ಏನೋ ಅವ್ಯಕ್ತ ಕಸಿವಿಸಿ “ಈಗಲೇ ತಡೆದು ಬಿಡಲಾ!?
ತಡೆಯಲಾಗಲಿಲ್ಲ. ಆಧಾರ ಸಹಿತ ಸ್ಪಷ್ಟ ಕಾರಣವಾದರೂ ಬೇಕಲ್ಲ ತನ್ನ ನಕಾರತೆಯನ್ನು ಸೂಚಿಸಲು??. . .
ಅವರಿಬ್ಬರ ಮದುವೆಯೂ ಒಂದಿಷ್ಟು ಆಡಂಬರದಿಂದಲೇ ನಡೆಯಿತು.

ಮದುವೆಯ ನಂತರ ‘ಅಣ್ಣ ನಮ್ಮೋನಾದ್ರು ಅತ್ತಿಗೆ ನಮ್ಮೋಳಾಗ್ತಳಾ’ ಅನ್ನೋ ಹಾಗೆ ಅಣ್ಣ ತಂಗಿಯರ ಸಂಬಂಧದ ಮಧ್ಯೆ ನಿಧಾನ ಕಂದಕ ಏರ್ಪಡಿಸುತ್ತಾಳೆ ಕನಕ, ಅದೂ ಸಹ ಮಾನ್ಸಿಗೆ ಅರಿವಿತ್ತು.
ಒಂದೆಡೆ ಒರಟು ಗಂಡ, ಇನ್ನೊಂದೆಡೆ . . ಇಂತಹ ಅತ್ತಿಗೆ . . . ಬಹುಶಃ ಅಣ್ಣ ಇನ್ನು ನೆನಪು ಮಾತ್ರವೇನೋ. . . .
. . . ಆ ಕಲ್ಪನೆಗಳೇ ಭೀಕರ ಎನಿಸುವಂತೆ . . ಇದರಿಂದ ಮಾನಸಿಕವಾಗಿ ನೊಂದ ಮಾನ್ಸಿ, ಅಣ್ಣನ ಖುಶಿಗಾಗಿ ತಂತಾನೇ ಅಣ್ಣನಿಂದ ದೂರವಾಗುತ್ತ ಸಾಗುವಳು.

ಪ್ರೇಮ, ಮದುವೆ,
ಮಧುಚಂದ್ರ, ಹೀಗೆ ಸಮಯ ಸವೆಯುತ್ತಿರುವಾಗ ತಂಗಿ ದೂರವಾಗುತ್ತಿರುವ ಕಲ್ಪನೆ ಬರಲೇ ಇಲ್ಲ.
ದಿನಗಳೆದಂತೆ, ಉನ್ಮಾದದ ಮದ ಇಳಿಯತೊಡಗಿದಂತೆ
ಸದಾ ಅತೃಪ್ತ, ಹಾಗೂ ವಿಕೃತ ಭಾವಗಳನ್ನೇ ಬಂಡವಾಳಾಗಿರಿಸಿಕೊಂಡ
ಚೆಲ್ಲು ಹುಡುಗಿ ಕನಕಳ ಒಂದೊಂದೋ ಮುಖವಾಡ ಕಳಚುತ್ತ ಸಾಗಿದ ಇವಳ ವರ್ತನೆ
ಸಂಪ್ರೀತನಿಗೆ ಆತಂಕ, , ಹತಾಷೆ . . ಆವರಿಸುತ್ತ ‘ಬಹುಶಃ ನಾನು ಅವಸರ ಪಟ್ಟೆ’ ಎಂಬ ಪಶ್ಚಾತಾಪದ ಭಾವ ಮೈ ಮನ ವ್ಯಾಪಿಸ ತೊಡಗಿತು.

‘ಇವಳ ಸ್ವಭಾವದ ಬಗೆಗೆ ಮಾನ್ಸಿಗೆ ಗೊತ್ತಿತ್ತಾ?ನನಗೇಕೆ ಅರಿವಾಗಲಿಲ್ಲ? , ಇವೇ ಕಾರಣಗಳಿಂದ ತನ್ನ ಸ್ಪಷ್ಟ ಅಭಿಪ್ರಾಯ ವ್ಯಕ್ತಪಡಿಸಿರಲಿಲ್ಲವೇನೋ’ ಎಂದು ಚಡಪಡಿಸಿದ. .
ಇದೊಂದು ಬಿಸಿ ತುಪ್ಪ
ಕಟ್ಟಿಕೊಂಡ ತಪ್ಪಿಗೆ . . . . .
ಎಂದು ತಿಳಿದ ಸಂಪ್ರೀತ ಬದುಕಿನ ನೆಮ್ಮದೀ ಸಹ ಸಂಪೂರ್ಣ ಹಾಳಾಗತೊಡಗಿತು.
ಈಗಾತ ಕುಡಿತದ ದಾಸನಾದ . . . . ಕನಕಳಿಗೂ ಇದೇ ಬೇಕಿತ್ತು. . ಈಗ ಆಕೆ ಒಂಥರಾ ಫ್ರೀ ಹ್ಯಾಂಡ್ ಆದಳು.
ಈ ಕುಡಿತದ ಚಟದಿಂದ ತಂಗಿಯ ನೆಮ್ಮದಿ ಸಹ ಹಾಳಾಯಿತು.
ಡಿಪ್ರೆಶನ್, ಕುಡಿತಗಳ ಅಡ್ಡಪರಿಣಾಮವಾಗಿ , ಫ್ಫುಪ್ಫುಸ, ಲಿವರ್ ಡ್ಯಾಮೇಜಾಗಿ ವಿಲಿವಿಲಸಿ ಯಾವ ಟ್ರೀಟಮೆಂಟೂ ಫಲಿಸದೇ
ಗೊಡೆಯನ್ನಲಂಕರಿಸಿದ.

ಇತ್ತ ಮಾನ್ಸೀ. . . ಗಂಡನೊಡನೆ ಹೊಂದಾಣಿಕೆ ಕಾಣದೇ ತನ್ನ ತಲ್ಲಣಗಳನ್ನು ಎಲ್ಲಿಯೂ ಹಂಚಿಕೊಳ್ಳಲಾಗದೇ ಚಡಪಡಿಸುತ್ತಿದ್ದಳು. ಆಗಾಗ ಅವಳಿಗೇ ತಿಳಿಯದಂತೆ ಕಣ್ಣೀರು ಹರಿಯುತ್ತಿತ್ತು.

ಮನಸ್ಸು ಸಾಂಗತ್ಯ ಬಯಸುತ್ತಿತ್ತು. ಆಗಾಗ ಡಿಪ್ರೆಶನ್ ಕಾಡುತ್ತಿದ್ದ ಮಾನ್ಸಿಗೆ ಹೇಗೋ ಆಕಸ್ಮಿಕವಾಗಿ ಸಂಸ್ಕಾರ್ ನ ಪರಿಚಯವಾಗುತ್ತದೆ. ಅವನೊ ಮಹಾ ಎಮೋಷನಲ್ ಮಾತುಗಾರ, ಆದರೆ ಈತ ಒಂದೊಳ್ಳೆ ನಂಬುಗೆಯ ಸ್ನೇಹಿತ ವಿಶ್ವಾಸ ಪಾತ್ರ ಇರಬಹುದೆಂದು ತಿಳಿದು ಮಾನ್ಸಿ, ಗಂಡನೊಂದಿಗೆ ಹಂಚಿ ಕೊಳ್ಳದ ಎಷ್ಟೋ ವಿಷಯಗಳನ್ನು ಸಂಸ್ಕಾರನೊಂದಿಗೆ ಹಂಚಿಕೊಳ್ಳುತ್ತಿರುತ್ತಾಳೆ.
ಒಂದುರೀತಿಯ ಅನೂಹ್ಯ ಆಕರ್ಷಣೆ. .
ಯಾವುದೋ ಒಂದು ಪ್ರೀತಿಯ ಸೆಳೆತ.
ಆದರೆ ಆತನಲ್ಲಿ ಅವಳ ಸಂವೇದನೆಗಳಿಗೆ ಸ್ಪಂದಿಸುವ ಮನೋಭಾವ ಕಂಡು ಬರದೇ ಏನೋ ಅವಸರ, ಅವಕಾಶವಾದಿತ್ವದ ಸೂಕ್ಷ್ಮ ವಾಸನೆ ಕಂಡಳು.
ಈ ಪ್ರೀತಿಯಲ್ಲಿ ಮೈಮರೆಯುವ ಮೊದಲೆ ಜಾಗೃತಳಾದಾಗ ಸಂಸ್ಕಾರನಿಗೆ ಇದ್ದ ಇನ್ನಿತರ ಚಪಲತೆ, ವಿಕೃತತೆ, ವಾಸನೆಗಳ ಸುಳಿವು ಮಾನ್ಸಿಗೆ ಬೇರೆ ಬೇರೆ ಮೂಲಗಳಿಂದ ದೊರೆಯಲಾರಂಭಿಸಿ. . .
ಕಾಲಕ್ರಮೇಣ ದುಡುಕು ಸಂಬಂಧದಲ್ಲಿ ಬಿರುಕು ಮೂಡತೊಡಗಿತು .
ಮಾನಸಿ ಅತೀ ಕಷ್ಟಪಟ್ಟು ಸಂಸ್ಕಾರ್ ನಿಂದ ದೂರವಿರಲು ಪ್ರಯತ್ನಿಸಿ ಯಶ ಸಾಧಿಸಿ ಎಲ್ಲರೊಂದಿಗೆ ನಗುನಗುತ್ತಲೇ ತನ್ನೆಲ್ಲಾ ನೋವನ್ನು ಮರೆಯಲಾರಂಭಿಸಿದಳು.
.
ಒಂದಿನ ಗಂಡನನ್ನು ಹೇಗೋ ಒಪ್ಪಿಸಿ ಅವನೊಡನೆ ಶಾಪಿಂಗಿಗೆ ಅಂತ ಕಾಂಪ್ಲೆಕ್ಸಿಗೆ ಹೋಗಿದ್ದಾಗ ಆಕಸ್ಮಿಕವಾಗಿ ಸಂಸ್ಕಾರನ ದರ್ಶನವಾಗುತ್ತದೆ ಅದೇ ಅವಳಣ್ಣನ ಹೆಂಡತಿ ಕನಕಾ ಳೊಂದಿಗೆ.
ಭೂಮಿ ಕುಸಿದು ಹೋದ ಭಾವ ಅವಳನ್ನಾಕ್ರಮಿಸಿಕೊಳ್ಳುತ್ತದೆ.
ಪ್ರಿಯಕರನ ಸ್ಥಾನ ಪಡೆದಿದ್ದ ಸಂಸ್ಕಾರ ‘ ಅಣ್ಣನ ಸ್ಥಾನ ಅಲಂಕರಿಸಿದ್ದಾನೆ. ವಿಧಿ ನನ್ನ ಜೀವನದಲ್ಲೇ ಏಕೆ ಈ ಪರಿ ಆಟ ಆಡ್ತಿದಿಯೋ ಎಂದು ಅಲವತ್ತುಕೊಂಡು!,
ತಕ್ಷಣ ಸುಧಾರಿಸಿಕೊಂಡು. . . . . ,
ತನ್ನಷ್ಟಕ್ಕೆ ತಾನೇ!, “ಕತ್ತೆಗೆ ತಕ್ಕನಾದ ಬೊಂತೆ” ಎಂಬಂತೆ ಸರಿ ಹೋಯ್ತು ಈಗ .
ಆ ಬಂಧ ಇನ್ನೆಷ್ಟು ದಿನವೋ , ಎಲ್ಲೋ ಸುಖವಾಗಿರು ಎಂದು ಆಶಿಸುತ್ತಾ ಅತೀ ದುಃಖದಿಂದ ಭಾರದ ಹೆಜ್ಜೆ ಹಾಕುತ್ತಾ ಈ ಎಳೆ ಮನದ ಮುಗ್ಧ ಮಾನಸಿ ಹೊರಟಿದ್ದಾಳೆ . . . .

-ಗೀತಾ ನಾಗರಾಜ.


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x