ವಿದೇಶದಲ್ಲಿದ್ದ ಮಗ ಶೆಟ್ಟರ ಅಂಗಡಿಗೆ ಪೋನ್ ಮಾಡಿದ್ದನು. ‘ನಾನು ಊರಿಗೆ ಬರುವದಿಲ್ಲ, ನಾನು ಮದುವೆಯಾಗಿದ್ದೇನೆ, ನೀವು ಬೇಕಾದರೆ ಇಲ್ಲಿಗೆ ಬನ್ನಿ” ಇಳಿವಯಸ್ಸಿನ ಜೀವಗಳು ಎಷ್ಟು ಪರಿಪರಿಯಾಗಿ ಬೇಡಿದರು ಮಗ ಮರಳಿ ದೇಶಕ್ಕೆ ಬರುವುದೇ ಇಲ್ಲ. ಬಂಜೆ ಎನಿಸಿಕೊಂಡ ಜೀವಕ್ಕೆ ಈ ಮಗು ಯಾಕಾಗಿ ಬಂತೋ ಏನೋ ಎಂದು ಅನಿಸಿಕೊಂಡು ಅಡಿಕೆ ತೋಟದ ನೀರಿನ ಹೊಂಡದ ಹತ್ತಿರ ಕುಳಿತ ಇಳಿ ವಯಸ್ಸಿನ ಜೀವಗಳು ಕಣ್ಣೀರು ಹಾಕಿದಾಗ ನೆನೆಪು ಹಿಂದೆ ಹೋಯಿತು.
ತೋಟದಲ್ಲಿ ಅಡಿಕೆ ಇಳಿಸಿದ ನಡುವಯಸ್ಸಿನ ಜೋಡಿ ಜೀವಗಳು ಮಧ್ಯಾಹ್ನ ಊಟಕ್ಕೆ ಕುಳಿತಿದ್ದರು. ದೂರದಲ್ಲಿ ಮಗುವಿನ ದ್ವನಿ ಕೇಳಿ, ಊಟ ಅಲ್ಲಿಯೇ ಬಿಟ್ಟು ಧ್ವನಿ ಬರುವ ದಿಕ್ಕಿಗೆ ಸಾಗಿದರು. ಮುಳ್ಳು ತುಂಬಿದ ಹಳೆಯ ಬಾವಿಯಲ್ಲಿ ಎರಡು-ಮೂರು ದಿನದ ಕೂಸು ಅಳುತ್ತಿತ್ತು, ಮೈಯಲ್ಲಿ ಇರುವೆಗಳು ಮೆತ್ತಿದ್ದರಿಂದ ಗಾಯವಾಗಿ ರಕ್ತ ಸೋರುತ್ತಿತ್ತು, ಮಗುವಿನ ಕೋರಿಕೆ ದೇವರಿಗೆ ಮಟ್ಟಿದ ತರುವಾಯ ದೇವರು ಈ ರೀತಿ ಕಾಣಿಕೆಯಾಗಿ ಕೊಟ್ಟಿರಬಹುದೆಂದು ಮಗು ಎತ್ತಿಕೊಂಡು ಸರ್ಕಾರಿ ಅಸ್ಪತ್ರೆಯಲ್ಲಿ ಚಿಕಿತ್ಸೆ ಕೊಟ್ಟು ಸರ್ಕಾರದ ನಿಯಮದ ಪ್ರಕಾರ ಮನೆಗೆ ತಂದು ಸಾಕಿದರು. ಮುದ್ದಾದ ಮಗು ಬೆಳೆದು ನಿಂತಿತು.
ಆರು ವರ್ಷ ಮುಗಿಯಿತು, ಎಲ್ಲ ಕಡೆ ಮೊದಲ ಸ್ಥಾನ, ಹದಿನಾರು ವರ್ಷ ಮುಗಿಯಿತು, ಊರಿನಲ್ಲಿನ ಶಾಲೆಯೂ ಮುಗಿಯಿತು, ನನ್ನ ಮಗನಿಗೆ ತೊಂದರೆಯಾಗಬಾರದೆಂದು ಹಾಸ್ಟೆಲ್ ಗೆ ಕಳಿಸಲು ಮುಂದಾದರು, ಖುಷಿಯಿಂದ ಹಾಸ್ಟೆಲಗೆ ಹೊರಡುವ ಸಮಯದಲ್ಲಿ ಬಸ್ ನಿಂದ ಬಿದ್ದ ಪರಿಣಾಮ ರಾಡವೊಂದ ಹೊಟ್ಟೆಗೆ ಚುಚ್ಚಿದ ಪರಿಣಾಮ ಕಿಡ್ನಿಗಳಿಗೆಗೆ ಗಾಯವಾಗಿ ಎರಡು ಕಿಡ್ನಿ ಹಾನಿಯಾದವು. ಕಿಡ್ನಿ ಕೊಡದಿದ್ದರೆ ಮಗು ಸಾಯುತ್ತದೆ ಎಂದು ಹೇಳಿದಾಗ ತಾಯಿಯ ಎದೆ ಒಡೆದುಹೋಗುತ್ತದೆ ಅದರೆ ಜೋಪಾನ ಮಾಡಿದ ಜೀವ ಬದುಕಬೇಕು ಎಂದು ತನ್ನದೊಂದು ಕಿಡ್ನಿ ಕೊಟ್ಟು ಮಗುವನ್ನು ಉಳಿಸಿಕೊಂಡರು. ಮಗು ಓದಿ ಎಂ. ಬಿ. ಬಿ. ಎಸ್ ಪದವಿ ಮುಗಿಸಿ ಡಾಕ್ಟರ್ ಅಗಿ ವಿದೇಶಕ್ಕೆ ಹಾರಿ ಹೋಗುತ್ತಾನೆ.
ಇಪ್ಪತ್ತು ಎಕರೆ ಅಡಕೆ ತೋಟ ಹೊಂದಿರುವ ಸೋಮಪ್ಪ ಮತ್ತು ಸೋಮವ್ವಳ ಜೀವನ ಸುಂದರವಾಗಿದ್ದರೂ ಸಹ ಮಕ್ಕಳೆಂದರೆ ಅಪಾರ ಪ್ರೀತಿ ಹೊಂದಿದ ಈ ಜೋಡಿ ಜೀವಗಳಿಗೆ ದೇವರು ಮಕ್ಕಳ ಭಾಗ್ಯ ಕರುಣಿಸಲೇ ಇಲ್ಲ ನಿತ್ಯವೂ ಊರು, ಸುತ್ತಮುತ್ತಲಿನ ಗ್ರಾಮ, ಪಟ್ಟಣವು ಸೇರಿದಂತೆ ಹಲವಾರು ದೇವಸ್ಥಾನ, ಮಠ, ಮಸೀದಿಗಳಿಗೆ ಹೋಗಿ ಬೇಡಿ ಕೊಂಡು ಕೊರಳಲ್ಲಿ ಕೈಯಲ್ಲಿ ಚೀಟಿ, ದಾರದ ಗಂಟೇ ತುಂಬಿ ಹೋಗಿತ್ತೇ ಹೊರತು ಮಕ್ಕಳು ಮಾತ್ರ ಆಗಲಿಲ್ಲ. ಇಷ್ಟೆಲ್ಲಾ ನಂತರ ಸಿಕ್ಕ ಮಗು ತನ್ನದೆಂದು ಜೋಪಾನ ಮಾಡಿದ ನಂತರ ಈ ಸ್ಥಿತಿ ನಿರ್ಮಾಣವಾದ ಕಾರಣ ಕೈ ಹೊತ್ತು ಕುಳಿತು ಕೊಳ್ಳದೇ ತೋಟದಲ್ಲಿ ಮತ್ತೆ ದುಡಿಮೆ ಸಾಗಿಸಿದರು.
ಸದಾಕಾಲ ಜೊತೆಯಾಗಿದ್ದ ಹಳೆಯ ರೇಡಿಯೋದಲ್ಲಿ ‘ಯಾವುದೇ ಕಾರಣಕ್ಕೂ ಮಕ್ಕಳನ್ನು ವಿದೇಶಕ್ಕೆ ಕಳಿಸಬೇಡಿ ಈ ದೇಶದ ಪ್ರತಿಭೆ ಪಲಾಯನ ಅಗುತ್ತದೆ ಜೊತೆಗೆ ಹೆತ್ತವರು ಅನಾಥರಾಗುತ್ತಾರೆ. ಎಷ್ಟೇ ದಡ್ಡರಾದರೂ, ದೊಡ್ಡವರಾದರೂ ಬುದ್ದಿವಂತರಾದರೂ ಮಗು ಕಣ್ಮುಂದೆ ಇರಲಿ, ರೈತರ ಮಕ್ಕಳು ಅನಾಥಾಶ್ರಮದಲ್ಲಿದ್ದ ಉದಾಹರಣೆಗೆ ಇಲ್ಲಿಯವರೆಗೆ ಒಂದೂ ಇಲ್ಲ, ನಮ್ಮ ಬಾಂಧವ್ಯ, ಪ್ರೀತಿ, ಮಮತೆ ಬೆಳೆಯಲಿ. ‘ ಕೇಳುವ ಧ್ವನಿಯತ್ತ ಕಿವಿಗೊಡದೆ ನೊಂದ ಮುದಿ ಜೀವಗಳು ಮಧ್ಯಾಹ್ನದ ಉಟಕ್ಕೆ ಮುಂದಾದರು. ಹಸಿರು ಹಾಸಿಗೆ ಮನಕ್ಕೆ ಇಂಪು ನೀಡಿದರೆ, ಕೋಗಿಲೆ ದ್ವನಿಯ ಕಂಪು ಮನವು ಉಲ್ಲಾಸಗೊಳಿಸಿತು. ಎಲ್ಲವೂ ಶೂನ್ಯ ಒಲವೇ ನಮ್ಮ ಬದುಕು ಎಂದೆನಿಸಿತು. ಬದುಕು ಸಾಗಿತು ಅದೊಂದು ದಿನ ಇಹಲೋಕ ತ್ಯಜಿಸಿದ ಜೀವಗಳ ಅಂತ್ಯಕ್ರಿಯೆಗೂ ಬರದ ಮಗ ಡಾ. ರವಿ ಇಂದು ಪಟ್ಟಣದಲ್ಲಿನ ಸರ್ಕಾರಿ ಆಸ್ಪತ್ರೆಯ ನೂತನ ಉದ್ಘಾಟನೆಗೆ ಬಂದಿದ್ದನು.
“ಎಲ್ಲೋ ಬಿದ್ದಿದ್ದ ಹೆತ್ತವರಿಗೆ ಬೇಡವಾದ ಮಗುವನ್ನು ಸಾಕಿ ಸಲುಹಿ ಓದಿಸಿ ವೈದ್ಯರನ್ನಾಗಿ ಮಾಡಿಸಿ ಇಹಲೋಕ ತ್ಯೆಜಿಸಿದ ನಮ್ಮೂರಿನ ದಂಪತಿಗಳ ಪುತ್ರ ಇಂದ ಆಸ್ಪತ್ರೆಯ ನೂತನ ಕಟ್ಟಡ ಉದ್ಘಾಟನೆಗೆ ಬಂದಿದ್ದಾರೆ. ‘ ಅತಿಥಿಗಳ ಮಾತು ಕೇಳಿ ಅಲ್ಲಿಂದ ತನ್ನ ಹೆತ್ತವರ ಹಳೆಯ ಮನೆಗೆ ಬಂದನು ಡಾ. ರವಿ
ಹಳೆಯ ಟ್ರಂಕ್ ಕಿತ್ತಾಕಿದಾಗ ಅಲ್ಲೊಂದು ಪತ್ರ ಸಿಕ್ಕಿತು ಆರನೆಯ ತರಗತಿಯಲ್ಲಿ ಓದುವಾಗ ಅಪಘಾತದಲ್ಲಿ ಕಿಡ್ನಿ ಕಳೆದುಕೊಂಡಾಗ ಮತ್ತೊಂದು ಸಲ ಕಿಡ್ನಿಯ ಜೊತೆಗೆ ಜೀವ ಕೊಟ್ಟ ಪತ್ರ ಅದು ಎರಡು ಬಾರಿ ಜೀವ ಕೊಟ್ಟು ಹೆತ್ತವರಿಗಿಂತ ಹೆಚ್ಚಾಗಿ ನೋಡಿದ ವೃದ್ದ ದಂಪತಿಗಳ ಮಣ್ಣಿಗೂ ಬರದೆ ಇರುವ ಈ ಮಗ ಯಾಕರ ಇರಬೇಕು ಹಣೆ ಚಚ್ಚಿಕೊಂಡನು. ಗೋಡೆಗೆ ನೇತು ಹಾಕಿದ ವೃದ್ಧ ದಂಪತಿಗಳಿಗೆ ಹಾಕಿದ ಹಾರದ ಹೂವುಗಳು ಒಣಗಿ ನನ್ನನ್ನೇ ನೋಡಿ ಅನಕಿಸುತ್ತಿದ್ದುದನ್ನು ನೋಡಿದ ರವಿ ಕುಸಿದು ಕೆಳಗೆ ಕುಳಿತನು.
–ವೆಂಕಟೇಶ ಪಿ. ಗುಡೆಪ್ಪನವರ