ಆಸೆ
ಊರೆಂದರೆ ಅದು ಎಲ್ಲ ಊರುಗಳಂತ ಊರಾಗಿರಲಿಲ್ಲ, ಅದೇನೊ ಅದೊಂತರ ರೀತಿ ನೀತಿಯೆಂಬಂಗೆ ಕಾಣ್ತ್ತಿರಲಿಲ್ಲ. ಆ ಊರಿನ ಮೊಗ್ಗುಲಿಗೆ ಹೋಗಿ ನಿಂತು ನಿಗಾ ಮಾಡಿದರೆ, ಅಲ್ಲಿ ಒಂದು ಕೇರಿಯಲ್ಲ, ಅದು ಒಂದು ಬೀದಿಯು ಅಲ್ಲ, ಏನೋ ಒಂತರ ಲೆಕ್ಕ ಬುಕ್ಕಕ್ಕೆ ಕಾಣದ ಮನೆಗಳು. ಈ ತಗ್ಗಿನೊಳಗೆ ನಾಕೈದು ಮನೆಗಳು, ಆ ಎತ್ತರಕ್ಕೆ ಮೂರು ನಾಕು ಮನೆಗಳು, ಈ ಬಾಗಕ್ಕೆ ನೋಡಿದರೆ ಎರೆಡೆ ಎರಡು ಮನೆಗಳು, ಆ ಪಕ್ಕಕ್ಕೆ ನೋಡಿದರೆ ಒಂದೊ ಎರಡೊ ಮನೆಗಳು, ಇಂತ ಸಾಲು ಮೂಲೆ ಕಾಣದ ಊರೊಳಗೆ ಮುತ್ತೈದೆ ತನಕ್ಕೆಂಬಂತೆ ಇದ್ದದ್ದು ಒಂದೇ ಒಂದು ಮಣ್ಣಿನ ರೋಡು. ಅದು ಓಬಿರಾಯನ ಕಾಲದ ರೋಡು, ಅವರ ಅಜ್ಜ ಮುತ್ತಜ್ಜರ ಕಾಲ್ದಿಂದ ಎದೆಕೊಟ್ಟು ಹಾಸಿಮಲಗಿರುವ ರೋಡ್ನಲ್ಲಿ. ರಾಶಿ ರಾಶಿ ದೂಳು, ಅದು ದನಕರುಗಳ ಪಾದದಲ್ಲಿ, ನರಮಾನವರ ನಡಿಗೆಯಲ್ಲಿ, ಆಟೊ ಸ್ಕೂಟರುಗಳಲ್ಲಿ, ಟೆಂಪೊ ಟ್ರಾಕ್ಟರಗಳಲ್ಲಿ, ಯಾರ ಮುಲಾಜು ನೋಡ್ದಂಗೆ, ರಂಗು ರಂಗಾಗಿ ಮೆರೆಯುತ್ತಿತ್ತು. ಮುಂಗಾರಿನೊಳಗೆ ಮಳೆ ಉಯಿದರಂತು, ಪಾದ ಕಚ್ಚಿಕೊಳ್ಳದ ನೆಲದೊಳಗೆ, ಊರಿನ ಜನವೆಲ್ಲ ಪಾಡು ಪಟ್ಟು ಪಾದ ಊರ ಬೇಕಾಗಿತ್ತು. ಎಷ್ಟೊ ಸಲ ಹಿಂದು ಮುಂದೆನದಂಗೆ, ಜರ್ರನೆ ಆಯತಪ್ಪಿ ಬಿದ್ದಿರುವುದುಂಟು. ಈ ರಾಜ್ಯಕ್ಕಾಗಿ ಈ ದೇಶಕ್ಕಾಗಿ, ಗದ್ದುಗೆ ಏರಬೇಕಾಗಿದ್ದ ಗನಂದಾರಿ ಗುಣವಂತರೆಲ್ಲ ಬಂದೋದ್ರುವೆ. ನಮ್ಮೂರಿನ ರೋಡುಮಾತ್ರ ಸರಿಯೋಗ್ಲಿಲ್ಲ, ಎಂದು ಊರಲ್ಲಿ ಉಸಿರಾಡುತ್ತಿರುವವರೆಲ್ಲರ ಬಾಯೊಳಗು. ಈ ಗಳಿಗೇಲು ಆ ರೋಡಿನ ವಿಷಯ, ಬುಸ ಬುಸನೆ ಕಾವಾಡ್ತಾನೆ ಇರುತೈತೆ. ಆ ಮಣ್ಣಿನ ರಸ್ತೆ ಬಿಟ್ಟು ಮುಂದಕ್ಕೋಗಿ ನೋಡಿದರೆ, ಅಲ್ಲೊಂದು ದೊಡ್ಡ ಅರಳಿ ಮತ್ತು ಬೇವಿನ ಮರವಿರುವ ಬುಡದಲ್ಲಿ. ವಿಸ್ತಾರವಾದ ಜಗುಲಿ ಕಟ್ಟೆ, ಅದರ ಮ್ಯಾಲೆ ಕೆಲಸ ಕಾರ್ಯಕ್ಕೆ ಅಷ್ಟಾಗಿ ತಲೆ ಕೆಡೆಸಿಕೊಂಬದ, ಗಂಡಸರೆನ್ನುವವರು ಮಾತ್ರ ಗಂಟೆ ಗಟ್ಲೆ ಕುಂತುಕೊಂಡು. ಹಿಂದಾಗೋದ ಭೂತದ ಗೆಪುತಿಗಳನ್ನ, ಈಗಾಗುತ್ತಿರುವ ವರ್ತಮಾನದ ಅವಾಂತರಗಳನ್ನ, ಮುಂದಾಗುವ ಭವಿಷ್ಯದ ಆತಂಕಗಳನ್ನ, ಒಬ್ಬರ ಬಾಯಿಂದ ಇನ್ನೊಬ್ಬರ ಬಾಯೊಳಗೆ. ರೂಪಾಂತರ ಗೊಳ್ಳುವ ಆ ಸಮೇವಿನೊಳಗೆ. ಅಲ್ಲಿ ಕುಂತವರ ಮೈಮ್ಯಾಲೆ, ನಡುವಾಸಿ ಬನೀನು ನಿಕ್ಕರುಗಳು ಕಚ್ಚಿಕೊಂಡಿದ್ದರೆ. ಗೌಡಣ್ಣನೆಂಬೋನು ಗರಿ ಗರಿಯಂತ, ಶರ್ಟು ಬಿಳಿ ಪಂಚೆ ತೊಟ್ಟುಕೊಂಡು. ತಲೆಯ ನೆತ್ತಿತುಂಬ ಅಳ್ಳೆಣ್ಣೆ ಮೆತ್ತಿಕೊಂಡು. ಮೂತಿಕೆಳಗೆ ಒಂದಿಷ್ಟು ದಾಡಿ ಬೆಳಸಿಕೊಂಡು, ಅಲ್ಲಿ ಅರಳಿ ಕಟ್ಟೆ ಮ್ಯಾಲೆ ಕುಂತಿದ್ದ ಗುಂಪಿನವರ ಮದ್ಯೆ. ಕುಂತು ಬಿಡುತ್ತಿದ್ದವನ ಗತ್ತು ಗಮ್ಮತ್ತು, ಇಡಿಯಲಾರದಷ್ಟಾಗುತ್ತಿತ್ತು. ಯಾಕೆಂದರೆ ಅವನೊಬ್ಬ ಆರು ಮೂರು ಮಾಡುವ. ಮೂರು ಆರು ಮಾಡುವ ಅಸಾದ್ಯದ ಆಸಾಮಿಯೆಂದು, ಅವನ ಸುತ್ತ ಮುತ್ತ ಅಂಟಿಕೊಂಡಿರೊ, ಜನಗಳೆ ಆಗಾಗ ಮಾತಾಡ್ಕಳ್ತಿದ್ರು. ಅಂತ ಸಮೇವುಗಳೇನಾರ ಹುಟ್ಟಿಕೊಂಡರೆ, ಈ ಭೂಮಿಯೆಂಬ ತತ್ವದಮ್ಯಾಲೆ ನಿಂತಿರುವ, ಆ ಊರಿನವರ ಸುಖ ದುಃಖವೆಂಬ ಏರು ಪೇರುಗಳಿಗೆ. ಇವನೆ ವಾರಸುದಾರನೆಂಬಂತೆ ಓಡಾಡ್ತ್ತಿದ್ದ, ಅದು ಓಡಾಡೋದು ಅಂದ್ರೆ, ಅವನು ಎರಡು ಮುಖವಾಡದವನು. ನಿಯತ್ತಾಗಿ ಅರ್ದ ಕೆಲಸ ಮಾಡೀರೆ. ಊರೊಳಗೆ ನಾನೆ ಮುಖ್ಯವಾಗ್ಬೇಕು ಅನ್ನಂಗೆ, ಇನ್ನರ್ದ ಕೆಲಸ ಮಾಡ್ತಿದ್ದ.
ಇಂತ ಜನ ಮೆಚ್ಚೊ ಕೆಲಸ ಮಾಡೋ ಗೌಡಣ್ಣನೆಂಬೋನು, ಓದಿದ್ದುಮಾತ್ರ ನೆಟ್ಟಗೆ ಹೈಸ್ಕೂಲು ದಾಟ್ಲಿಲ್ಲ. ಒಂದರಿಂದ ಐದನೆ ತರಗತಿವರಗು ಇದ್ದ ಇದ್ದೂರಿನ ಇಸ್ಕೂಲು ದಾಟಿ. ಬೇರೂರಿನ ಆರನೆ ತರಗತಿಗೆ ಸೇರಲು, ಹುಡುಗರಿಗು ಪೋಷಕರಿಗು, ಅದೇನೊ ಸಾಹಸಕ್ಕೆ ಕೈ ಹಾಕಿದಂತೆ, ಅಂತ ದುಬಾರಿ ಎನ್ನಿಸುವ ಸಂದರ್ಭದೊಳಗೆ. ನಾಕು ಮೈಲಿ ದೂರವಿರುವ ಇಸ್ಕೂಲಿಗೆ. ಸೇರಬೇಕಾದ್ದವರು ಮುಂದಿನ ತರಗತಿಗೆಂದು ಸೇರುದ್ರೆ ಸೇರ್ತಿದ್ರು. ಇಲ್ಲವಂದ್ರೆ ಇಲ್ಲವೆ ಇಲ್ಲ? ಇಂತ ಸೌಲಭ್ಯವಂಚಿತ ಊರೊಳಗೆ. ಎಸ್, ಎಸ್, ಎಲ್, ಸಿ ವರಗು ಮೂರು ನಾಕು ಮೈಲಿ ನೆಲ ನಡದು. ಓದಲು ಮುಂದಾದ ಗೌಡಣ್ಣನಿಗೆ, ಗಣಿತ ಇಂಗ್ಲೀಷು ಎನ್ನವ ಎರಡು ಪುಸ್ತಕಗಳು ಮಾತ್ರ, ಏನೇನು ಪಾಡು ಪಟ್ರು ನೆಟ್ಟಗೆ ಅರ್ಥವಾಗ್ದಂಗಾಗಿ. ವರ್ಷ ವರ್ಷವು ಫೇಲಾಗಕ್ ನಿಂತಗಂಡ, ಅವನೆಷ್ಟು ಸಲ ಪರೀಕ್ಷೆ ಕಟ್ಟೀರು ಅಷ್ಟು ಸಲವು ಫೇಲಾಗುತ್ತಿದ್ದನ್ನ ನೋಡಿ. ಲೇ ಅಪ್ಪಯ್ಯ ನೀನಿಂಗೆ ಸಲ ಸಲ ಕಟ್ಟೋದು ಬ್ಯಾಡ? ಫೇಲಾಗೋದು ಬ್ಯಾಡ? ನೀನು ಕುಣುದಂಗೆಲ್ಲ ನಾವು ಕುಣಿಯಾಕೆ ನಮ್ಮತ್ರ ದುಡ್ಡಿರಲ್ಲ ಕಣಲ? ಎಂದ ಅವನ ಅಪ್ಪ ತಮ್ಮಣ್ಣನ ಮಾತಿಗೆ, ಒಂದೆರೆಡು ದಿನ ಕಿನ್ನನಾಗಿ ಕುಂತು ಬಿಟ್ಟಿದ್ದ, ಇದೊಂದು ಸಲ ಈ ಹುಡುಗನನ್ನ ಎಂಗಾದ್ರು ಮಾಡಿ ಈ ಎಸ್, ಎಲ್, ಸಿ ಅಂಬೊ ಭೂತವನ್ನ ದಾಟಿಸ್ಬುಡಿ ಸಾ. ಎಂದು ಅವನ ಇಸ್ಕೂಲಿನ ಮೇಷ್ಟ್ರುಗಳತ್ರ ಗೌಡಣ್ಣನ ಅಪ್ಪನೆನ್ನುವವನು ಬಡಕಂಡ್ ಬಡಕಂಡು ಸಾಕಾಗಿದ್ದ. ಅವನ ಮೇಷ್ಟ್ರುಗಳು ಕೂಡ ಪಾಸು ಮಾಡೊ ಅಂತ ಪ್ಲಾನುಗಳನ್ನೆಲ್ಲ ಮಾಡೀರು. ತಿರುಗಿ ತಿಮ್ಮಪ್ಪನ ಲಾಗ ಹಾಕೀರುವೆ, ಅವನು ಮಾತ್ರ ಎಸ್, ಎಲ್, ಸಿ ಯೊಳಗೆ ಪಾಸ್ ಆಗಲೇ ಇಲ್ಲ. ಗೌಡಣ್ಣನ ಜೊತೇಲಿ ಓದುತ್ತಿದ್ದ ಹುಡುಗರು ಮಾತ್ರ, ಬಂದು ಬಳಗ, ನೆರೆ ಹೊರೆ, ಎನ್ನುವ ಅವರವರ ಕಳ್ಳು ಬಳ್ಳಿಗಳನ್ನ ಕೈ ಬಿಟ್ಟು. ಮಾಯಾನಗರವೆಂಬ ಬೆಂಗಳೂರಿನಲ್ಲಿ ಮನಸ್ಸು ಮಾಡಿ. ಅಲ್ಲೊಂದು ಬದುಕು ಕಟ್ಟಿಕೊಂಬುವ ಸಲುವಾಗಿ. ಊರು ಕೇರಿಯನ್ನ ಬಿಟ್ಟೋಗಿದ್ದರು. ಆದ್ರೆ ಗೌಡಣ್ಣನೆನ್ನುವ ಈ ಆಸಾಮಿ ಮಾತ್ರ. ಮನೇಲಿ ಮಾಡಿದ್ದನ್ನ ಒತ್ತೊತ್ತಿಗೆ ಉಂಡುಂಡು. ಯಾವ ಕೆಲಸ ಕಾರ್ಯವನ್ನು ಮುಟ್ಟುದಂಗೆ, ಅಲ್ಲು ಇಲ್ಲು ಅಲ್ಲಂಡೆ ಹೊಡಿತಿದ್ದವನ ಮುಂದೆ. ಕಾಲವೆಂಬೋದು ಉರುಳುರುಳಿ ಅವನ ಮೈಯ್ಯಿ ಮನಸ್ಸು ಬಲಿಯಾಕ್ ನಿಂತಕಂತು. ಅಂಗೆ ಬಲಿತಿದ್ದವನು ನೋಡ ನೋಡುತ್ತ ಊರಿನ ಜನರ ಮುಂದೆ ಆಗಾಗ ಅವನ ದೊಡ್ಡಸ್ತಿಕೆ ತೋರಿಸಿಕೊಳ್ಳಲು ಹುನ್ನಾರ ಮಾಡುತ್ತಿದ್ದವನು, ಊರಲ್ಲಿ ನಡೆಯುವ ಗ್ರಾಮದೇವತೆಯ ಹಬ್ಬಕ್ಕಾಗಲಿ, ಕಡೇ ಕಾರ್ತೀಕದಲ್ಲಿ ನಡೆಯುವ ಆರತಿ ಉತ್ಸವಗಳಿಗಾಗಲಿ, ಕಾರಬ್ಬದಲ್ಲಿ ನಡೆಯುವ ದನಕರುಗಳ ಮೆರವಣಿಗೆಗಾಲಿ, ಅಂಗೇನಾದರು ಯಾರ್ದಾರ ಮನೆಗಳಲ್ಲಿ ಸಮೇವು ಮೀರಿ ನಡೆಯುವ ಸಂಕಟಗಳಿಗಾಗಲಿ. ಅವನೆ ಊರಿಗೆ ಮುಂಚೆ ಮುಂದೆ ಬಿದ್ದು ನಿಬಾಯಿಸುವಂತ, ಮೂರು ನಾಕು ಮುಖಂಡರ ಮದ್ಯೆ ಎದ್ದು ಕೂರುವಂತ ದೊಡ್ಡ ಮನುಷ್ಯನಾಗಿ ಗುರುತಿಸಿಕೊಂಡ ಗೌಡಣ್ಣನೆಂಬೋನು. ಯಾವಾಗ್ಲು ಬಿಳಿ ಪಂಚೆ ಶರ್ಟು ತೊಟ್ಟಕೊಂಡು, ವಿಪರೀತ ಗತ್ತು ಗಮ್ಮತ್ತಿನಿಂದ ಓಡಾಡೋಕೆ ಶುರುವಚ್ಚಿಕೊಂಡ. ಇಂತ ಘನತೆ ಗೌರವವನ್ನ ಹೆಚ್ಚಿಸಿಕೊಂಡ ಗೌಡಣ್ಣನಿಗೆ, ಹೆಣ್ಣು ಕೊಡಲು ನಾಮುಂದು ತಾಮುಂದು ಅನ್ನುವಂತ ಜನ ಹುಟ್ಟಿಕೊಂಡರು.
ಅವಳು ಆಗಿನ್ನ ಹೆಣ್ಣಾಗಿ, ನೆಟ್ಟಗೆ ಲೋಕವನ್ನು ಅರ್ಥ ಮಾಡಿಕೊಳ್ಳಲು ಎಣಗಾಡುತ್ತಿದ್ದ ಹದಿನೈದು ವರ್ಷದ ಹೆಣ್ಣು ಮೊಗ ನರಸಮ್ಮನೆಂಬುವವಳ ಮನೇಲಿ. ಇವಳು ತಂದೆಗೆ ತಲೆ ಮಗಳಾಗಿ ಹುಟ್ಟಿದ್ದವಳು ಗಕ್ಕನೆ ಹೆಣ್ಣಾಗಿ ಕುಂತುಬಿಟ್ಲು, ಇವಳ ಬೆನ್ನಿಂದೆ ಇನ್ನು ಮೂರುಜನ ಹೆಣ್ಣು ಮಕ್ಕಳು, ಒಬ್ಬಳಿಂದೆ ಒಬ್ಬಳು ಮೈನೆರೆದು ಕುಂತರೆ? ಎಲ್ಲರು ಮನೇಲಿ ಸಾಲು ಗಟ್ಟಿ ಹೆಣ್ಣಾದರೆ? ಇವರಿಗೆ ಗಂಡುಗಳನ್ನ ಎಲ್ಲಿಂದ ಹೊಂಚ್ಬೇಕು? ಅಂಬೊ ಚಿಂತೆಯಲ್ಲಿ ಕುಂತಿದ್ದ ಕುಟುಂಬದೊಳಿಕ್ಕೆ. ಹೆಣ್ಣು ಬೇಕೆಂದು ಎಂಟ್ರಿ ಕೊಟ್ಟ ಗೌಡಣ್ಣನಿಗೆ, ಅವಳು ನರಸಮ್ಮನೆನ್ನುವವಳು ನೋಡಲು ಮುದ್ದು ಮುದ್ದಾಗಿ ಕಂಡಿದ್ದಳು. ತಗಿ ಚಿಗಪ್ಪ ಈ ಹುಡುಗಿಗಿಂತ ಹಡುಗಿ ಇನ್ನೆಲ್ಲವಳೆ? ಸುಮ್ಮನೆ ಎಪ್ಪತ್ತಾರು ನೋಡೋದು ಬ್ಯಾಡ? ಮದುವೆ ಅಂತ ಆದ್ರೆ. ನಾನು ಈ ಹುಡುಗೀನೆ ಮದುವೆ ಆಗೋದು, ಅಂತ ಅವನಪ್ಪನತ್ತಿರ ಹೇಳಾಕಾಗ್ದಿದ್ದವನು, ಅವನ ಚಿಗಪ್ಪನತ್ರ ಹಠ ಮಾಡ್ಕೊಂಡು ಹೇಳ್ತಾ ಕುಂತು ಬುಟ್ಟ.
ನರಸಮ್ಮನೆಂಬ ಆ ಹೆಣ್ಣು ಮಗಳು ಕೂಡ ಅಷ್ಟೆ ನಯಾ ನಾಜೋಕಿನ ಹೆಣ್ಣುಡುಗಿ. ಮಾತಾಡಲು ತುಟಿಬಿಚ್ಚೀರೆ ಇದ್ದದ್ದು ಇದ್ದಂಗೆ ವದರಿ ಬಿಡುತ್ತಿದ್ದವಳು. ಬದುಕು ಬಾಳಿಗೆ ಮುಂದು ಬಿದ್ದು ಬಗ್ಗಿದರೆ, ನಾಕು ಜನ ಮಾಡುವ ಬದುಕನ್ನ ಇವಳೊಬ್ಬಳೆ ಮಾಡಿ ಮುಗಿಸುವ ಗಟ್ಟಿಗಾತಿ ಹುಡುಗಿ. ಗೌಡಣ್ಣನ ಹೆಣುತಿಯಾಗಿ ಬಲಗಾಲು ಮುಂದಿಕ್ಕಿ, ಅವನ ಮನೆಯ ಬಾಗ್ಲು ದಾಟಿ ಬಂದಿದ್ದಳು. ಅವಳು ಬರುವಾಗ ಆ ಗಂಡ ಮನೆ, ಊರು, ಹೊಸಬರು, ಬದುಕು ಬಾಳು, ಅನ್ನುವ ತರಾವರಿಗಳನ್ನ ಅವಳ ಎದೆ ತುಂಬ ತುಂಬಿಕೊಂಡು ಬಂದಿದ್ದÀಳು. ಅದರಲ್ಲು ಆ ಗಂಡ ಅವನ ಜೊತೆ ಸುತ್ತಾಟ ದೇವಸ್ಥಾನ, ಜಾತ್ರೆ, ಸಂತೆ, ಸಿನಿಮಾ, ಮಕ್ಕಳು, ಬದುಕು, ಎನ್ನವ ಅಗಾದ್ವಾದ ಕನಸುಗಳನ್ನ ಕೂಡಿಟ್ಟುಕೊಂಡು ಬಂದ ನರಸಮ್ಮನಿಗೆ, ಇಲ್ಲಿ ಅವಳ ವಿರುದ್ದವಾದ ಅವಳ ಮನಸ್ಸಿಗೆ ಮೆಚ್ಚುಗೆಯಾಗದ ಸಮೇವುಗಳು(ಸಂದರ್ಭಗಳು) ಕಾಡಲಾರಂಬಿಸಿದವು, ಅಂದರೆ ಮನೆಯಲ್ಲಿ ಎಲ್ಲರು ನಕ್ಕಾಗ ಮಾತ್ರ ಇವಳು ನಗಬೇಕು, ಅವರು ಮಾತಾಡ್ದಾಗ ಮಾತ್ರ ಇವಳು ಮಾತಾಡ್ಬೇಕು, ಅವಳಿಗೆ ಅವಳೆದೆಯ ನಗುವು ಮಾತುಗಳೆಂಬೋವು ಸ್ವಂತಕ್ಕಿಲ್ಲವೆನಿಸಿತು. ರಾತ್ರೆಲ್ಲ ಗೌಡಣ್ಣನ ಮೊಗ್ಗುಲಿಗೆ ಮೊಗ್ಗುಲಾಗಬೇಕಿತ್ತು. ಬೆಳಕರಿದು ಎದ್ದರೆ ವಿಪರೀತ ಕೆಲಸ ಕಾರ್ಯಗಳನ್ನೆಲ್ಲ ಇವಳ ತಲೆಮ್ಯಾಲೆ ಒರಗಿಸಿ ಬಿಡುವಂತ ಬಾವ ಬಾವನೆಣುತಿ, ಅತ್ತೆ ಮಾವ, ಇನ್ನು ಮದುವೆಯಿಲ್ಲದ ಒಬ್ಬ ಚಿಕ್ಕ ನಾದುನಿಯವರೆಲ್ಲ ಸೇರಿಕೊಂಡು. ನರಸಮ್ಮನನ್ನ ಮಾತಿನೊಳಗೆ ಬದುಕಿನೊಳಗೆ ಭಾವನೆಯೊಳಗೆ ತುಳಿಯಾಕ್ ನೋಡ್ತ್ತಿದ್ರು, ಮನೆಯ ಒಳಗು, ಹೊರಗು, ಸಣ್ಣುದು ಪುಟ್ಟುದು, ಕುಂತರು ನಿಂತರು, ಯಾವುದೊಂದಕ್ಕು ನರಸಮ್ಮನನ್ನೆ ಬಳಸಿಕೊಳ್ಳತ್ತಿದ್ದ, ಆ ಮನೆಯ ಹಿರಿಯರು ಕಿರಿಯರೆಲ್ಲ, ಅವಳುನ್ನ ಅಸಡ್ಡೆಯಾಗಿ ಮತ್ತು ಸದರವಾಗಿ ನೋಡಾಕ್ ನಿಂತರು. ಇನ್ನು ಆ ಗಂಡನಾದ ಗೌಡಣ್ಣನೆಂಬೋನು ದಿನಗಳು ಸವದಂಗೆಲ್ಲ ಆ ಹುಡುಗಿ ಕಡೆ ನಿಗಾ ಕಡಿಮೆ ಮಾಡಾಕ್ ನಿಂತಕಂಡ. ಯಾಕೆಂದರೆ ಅವನ ಮನಸ್ಸಿನೊಳಗೊಂದು ದುಡ್ಡೆಂಬೊ ದೊಡ್ಡ ದೆವ್ವವೊಂದು ಹೊಕ್ಕಿಕೊಂಡು. ಲೇ ಲೋಕ ಇವತ್ತು ಬರೆ ದುಡ್ಡಿರೋರುನ್ನೆ ನೋಡುತೈತ್ಕಣಲ. ಮದ್ಲು ದುಡ್ಡು ಕಣ್ಲ, ಆಮ್ಯಾಲ್ ಕೆಲಸ ಕಣಲ, ದುಡ್ಡಿನ್ ಮುಂದೆ ಎಲ್ಲ, ಅದಿಲ್ಲದಿದ್ರೆ ಏನೂ ಇಲ್ಲ? ಅನುತ ಅವನು ಮಾತಾಡಲು ಬಾಯಿ ತಗದಾಗೆಲ್ಲ, ಪ್ರಾಕ್ಟೀಸ್ ಮಾಡಿಕೊಂಡಿದ್ದ ಗೌಡಣ್ಣನ ಮುಂದೆ ನರಸಮ್ಮನೆಂಬ ಹೆಣುತಿ. ಏನೊಂದು ದೂಸುರ ಮಾತಾಡದಂಗಾದ್ಲು, ಬರಿ ರಾತ್ರಿ ಹೊತ್ತಿನಲ್ಲಿ ಮಾತ್ರವೆ, ಇವನ ಮೊಗ್ಗುಲಿಗೆ ಅವಳು ಬೇಕಾದಂತ ಹೆಣ್ಣಾಗಿ ಕಾಣುತ್ತಿದ್ದಳು. ಮತ್ತೆ ಬೆಳಕರಿದರೆ ಬದುಕು ಮಾಡು ಹಿಟ್ಟುಣ್ಣು, ಹೆಚ್ಚಿಗೆ ಬಾಯೋದಂಗೆ ಮಾತಾಡುಬ್ಯಾಡ. ಎಂದು ಕಡ್ಡಿ ತುಂಡಾಗಂಗೆ ಹೇಳ್ತ್ತಿದ್ದ ಗೌಡಣ್ಣನಿಗೆ, ಕೈಯ್ಯಿ ನೋಯುಬಾರದು ಮೈಯ್ಯಿ ನೋಯುಬಾರದು, ದುಡ್ಡು ಮಾತ್ರ ಜೇಬು ತುಂಬತಿರ್ಬೇಕು. ಎನ್ನುವ ಬಾರಿ ಕಿಲಾಡಿ ಆಸಾಮಿಗೆ, ಆ ದುಡ್ಡೇನ್ನುವುದು ಯಾವ್ ಯಾವ್ ಮೂಲದಿಂದ ಬರಬಹುದು, ಎಂಬ ಲೆಕ್ಕಾಚಾರದೊಳಗೆ ಮೂವತ್ತು ಮೂರುಗಳಿಗೇಲು ಒದ್ದಾಡ್ತಿದ್ದ. ಆದರೆ ಗೌಡಣ್ಣನೆಣುತಿ ಮಾತ್ರ ಅವರ ಕುಟುಂಬಕ್ಕೆ ವಿರುದ್ದವಾದವಳು. ಅನುವು ತನುವು, ದಯೆ ದಾಕ್ಷಿಣ್ಯ, ನಮ್ಮವರು ತಮ್ಮವರು ಅಂತ ನೆಚ್ಚಿಕೊಂಡು ಬಂದವಳಿಗೆ. ಬೆಳಕರಿದರೆ ಸಾಕು ಶರೀರದ ಬಾದೆಯೊಳಗೆಲ್ಲ ಅತಿ ಮುಖ್ಯವಾದ ಬಾದೆ. ಅದು ಲೆಟ್ರಿನ್ನಿಗೋಗುವ ಬಾದೆಯೆನ್ನುವುದು ಬಹುದೊಡ್ಡ ಸಮಸ್ಯೆಯಾಗಿ ಅವಳನ್ನ ಕಾಡಾಕ್ ನಿಂತಕಂತು.
ಅದು ಯಾಕೆಂದರೆ ಅವಳು ಹುಡುಗಿಯಿಂದಲು, ಈ ಲೆಟ್ರಿನ್ನಿಗೆ ಹೋಗುವ ವಿಚಾರದಲ್ಲಿ ಬೇಕಾದಷ್ಟು ಪಾಡು ಪಟ್ಟುಕೊಂಡು ಬಂದವಳು. ಅವಳ ತವರು ಮನೆಯಲ್ಲೆ ಅದಕ್ಕಾಗಿ ಪರಿಹಾರವನ್ನು ಕೂಡ ಕಂಡುಕೊಂಡು ಬಂದಿದ್ದವಳಿಗೆ. ಇಲ್ಲಿ ಗಂಡನ ಮನೆಯೊಳಗೆ ಶೌಚಕ್ಕಾಗಿ ಬಳಸುವ, ಯಾವ ಸೌಲಭ್ಯವು ಇಲ್ಲದಂತಾಗಿ ಏನೇನೊ ಪಾಡು ಪಡುವಂತಾಗಿತ್ತು. ಈ ಲೆಟ್ರಿನ್ನು ಮತ್ತು ಮೂತ್ರದ ಎರಡು ಸಂದರ್ಭದಲ್ಲು, ಬಾಲ್ಯದಲ್ಲಿ ನಾನಾತರದ ಪಾಡು ಪಟ್ಟ ಹುಡುಗಿಗೆ. ಗಂಡನ ಮನೆಯಲ್ಲಿ ಯಾವಾಗಲು ಚೊಂಬಿಡುಕೊಂಡು ಹೊರಗಡೆ ಹೋಗುವ ಗಳಿಗೆಯೊಳಗೆ ದಿನವು ಅವಳ ಬಾಲ್ಯದ ದಿನಗಳು ನೆನಪಾಗುತ್ತಿದ್ದವು. ಅವಳು ಒಂದನೆ ತರಗತಿಗೆ ಇಸ್ಕೂಲಿಗೆ ಸೇರಿಕೊಂಡ ಲಾಗಾಯಿತಿನಿಂದ, ಅವಳ ವಾರಿಗೆ ಹುಡುಗಿಯರ ಜೊತೆಯಲ್ಲಿ ಇಸ್ಕೂಲಿನಲ್ಲಿ ಮೂತ್ರಮಾಡಲು ಆಚೆ ಹೋಗುವಾಗಲೆಲ್ಲ. ಮೇಷ್ಟ್ರುಗಳತ್ತಿರ ಹೇಳಲು ನಾಚಿಕೆ ಪಡುತ್ತಿದ್ದ ಹುಡುಗಿಯರು ಹಲವಾರು ಸಮಸ್ಯೆಗಳನ್ನ ಎದುರಿಸಿದ್ದರು. ಹನ್ನೆರೆಡು ಘಂಟೆಗೊಂದು ಸಾರಿ, ಮದ್ಯಾನ ಮೂರು ಗಂಟೆಗೊಂದು ಸಾರಿ, ಅವರವರ ತರಗತಿ ಮೇಷ್ಟ್ರುಗಳು ಮೂತ್ರ ಮಾಡಲು ಹುಡುಗರನ್ನೆಲ್ಲ ಆಚೆ ಬಿಡುತ್ತಿದ್ದರು. ಮೊದ್ಲು ಮೊದ್ಲೆÉಲ್ಲ ಅವಳ ಇಸ್ಕೂಲಿನಿಂದೆ, ಬಸವರಾಜಪ್ಪನ ಮನೆಹಿಂದಿನ ಬಣವೆ ಮರೆಯಲ್ಲಿ ಬಚ್ಚಿಟ್ಟುಕೊಂಡು ಮೂತ್ರ ಮಾಡಿ ಬರ್ತಿದ್ರು. ಬೆಳಗಿನಿಂದ ಸಂಜೆವರುಗು ದನಾ ಹೊಡಕಂಡು ಹೋಗುತ್ತಿದ್ದ ಬಸವರಾಜಪ್ಪನಿಗೆ, ಅವನ ಮನೆಯ ಪಕ್ಕದಲ್ಲಿ ಇಷ್ಟೊಂದು ಮೂತ್ರದ ವಾಸನೆ ಬರಲಾಗಿ. ಇದು ಇಸ್ಕೂಲಿನುಡುಗರ ಪಜೀತಿಯೆಂದು ಗೊತ್ತಾಗ್ಬಿಡುತು. ಅವನೊಂದು ದಿನ ದನಾ ಮೇಯಿಸಲು ಹೋಗ್ದಂಗೆ, ಮನೇಲೆ ಕಾವಲು ಕುಂತಿದ್ದವನು. ಒಳ್ಳೆ ಮಟ ಮಟ ಮದ್ಯಾನ ಹನ್ನೆರೆಡು ಘಂಟೇಲಿ, ಬಣವೆ ಮೊಗ್ಗುಲಿಗೆ ಮೂತ್ರ ಮಾಡಾಕ್ ಬಂದಿದ್ದ, ಎರಡು ಮೂರು ಹೆಣ್ಣುಮಕ್ಕಳ ಜಡೆ ಇಡುಕೊಂಡು, ದರದರನೆ ಇಸ್ಕೂಲಿನ ಆಪೀಸು ರೂಮಿಗೆ ಎಳುಕೊಂಡು ಬಂದಿದ್ದ. ಆ ಬಸವರಾಜಪ್ಪನ ಕೈಯೊಳಗೆ ಈ ನರಸಮ್ಮನು ಇದ್ದಳು. ಸಾ ಈ ಲೌಡಿ ಮುಂಡೇರು ನಮ್ ಬಣವೆ ಮೊಗ್ಗುಲಿಗೆ ಬಂದು ದಿನಾ ಉಚ್ಚೆ ಉಯ್ಯಿತಾರಲ್ಲ ಸಾ. ಇದೇನಾ ದಿನಾ ನೀವು ಪಾಠ ಮಾಡಿರೋದು? ಎಂದವನ ವ್ಯಂಗ್ಯದ ಮಾತಿಗೆ, ಅಲ್ರಿ ಬಸವರಾಜಣ್ಣ ಏನೋ ಹೆಣ್ಣು ಮಕ್ಕಳು ಗೊತ್ತಿಲ್ಲದೆ ಬಂದವರೆ. ಇನ್ನೊಂದಿನ ಕಳಸಲ್ಲ ಬುಡ್ರಿ. ಇವು ನಿಮ್ ಮಕ್ಕಳೆ ಅಂತ ಬುಟ್ಟುಬುಡ್ರಿ ಅಂದ ಮೇಷ್ಟ್ರು ಮಾತನ್ನ ಕೇಳಿಸಿಕೊಂಡ ಬಸವರಾಜಪ್ಪ. ರೀ ಮೇಷ್ಟ್ರೇ ಯಾವ್ ಮಕ್ಕಳಾದ್ರೇನ್ರೀ? ನಮ್ ಬಣವೆ ಜಾಗಾನೆಲ್ಲ ಕುಲುಗೆಡಿಸಿ ಗಬ್ಬು ನಾತಾ ಮಾಡವರಲ್ರಿ. ಎಂದ ಬಸವರಾಜಪ್ಪನ ಎದುಸಿರು ಬಸ ಬಸನೆ ಈಚೆ ಬಂತು, ಸಿಟ್ಟಕಾ ಬ್ಯಾಡ ಬಸವರಾಜಣ್ಣ ಏನೊ ಹೆಣ್ಣು ಮಕ್ಕಳು ಮುಚ್ಚು ಮರೆ ಬೇಕಂತ ಅಲ್ಲಿಗೆ ಬಂದು ಉಯಿದಿರಬೇಕು. ನಾವ್ಯಾರು ಕಳಿಸಿಲ್ಲ ಸ್ವಾಮಿ, ಇವತ್ತಿನಿಂದ ಬುದ್ದಿ ಹೇಳ್ತೀವಿ ಬುಡ್ರಿ, ಎಂದು ಹೆಡ್ ಮೇಷ್ಟ್ರು ಇನ್ನೊಂದು ಸಲ ನಯವಾಗಿ ಹೇಳಿದ ಮಾತಿಗೆ. ಬಸವರಾಜಪ್ಪನ ಮೈ ಬಗ ಬಗನೆ ಉರಿ ಹತ್ತಿ. ರೀ ಮೇಷ್ಟ್ರೇ ಚೆನ್ನಾಗೇಳ್ತೀರ ಕಣ್ರಿ. ಮುಚ್ಚು ಮರೆ ಬೇಕಂದ್ರೆ ನಿಮ್ಮನೆ ಬಾಗ್ಲಿಂದಕ್ಕೆ ಕರ್ಕಂಡೋಗಿ ಉಯಿಸಕಳ್ರಿ. ನಮ್ ಕೊಂಪೆ ಬಾಗ್ಲು ಯಾಕ್ರಿ ಹಾಳ್ಮಾಡಸ್ತೀರ? ಅಂತ ಮೈಮ್ಯಾಲೆ ಬಂದವನಂತೆ ಬೈದಾಡಿದ್ದ, ಆ ಘಳಿಗೇಲಿ ಹೆಡ್ ಮೇಷ್ಟ್ರುಗು ತಾರಾ ಮಾರಿ ಸಿಟ್ಟು ಬಂದು, ಅಲ್ಲಿಗೋಗಿದ್ದ ಹೆಣ್ಣು ಮಕ್ಕಳನ್ನೆಲ್ಲ ಹಿಗ್ಗಾ ಮುಗ್ಗಾ ಬೈದುಬಿಟ್ಟಿದ್ರು. ನಾಳೆಯಿಂದ ಟಾಯ್ಲೆಟ್ಟಿಗೆ ಬಿಟ್ಟಾಗ, ಆ ಗುಂಡಯ್ಯನ ಹಳ್ಳದೊಳಕ್ಕೋಗಿ ಉಯಿದುಬರ್ರಿ ಅಂತ ಮೇಷ್ಟ್ರು ಆಜ್ಞೆ ಮಾಡೀರು. ಹುಡುಗಿಯರು ಆ ತೋಪಿಗೆ ಹೋಗಿ ಬರುತ್ತಿದ್ದ ಒಂದೆರೆಡು ವಾರಕ್ಕೆ, ಸಾ ನಾವು ಟಾಯ್ಲೆಟ್ಟಿಗಂತ ಆ ಹಳ್ಳದೊಳಿಕ್ಕೆ ಇಳುದ್ರೆ ಸಾಕು ಸಾ. ನಮ್ಮೂರಲ್ಲಿರೊ ತಿಕ್ಕಲ ಸೀನ ಅಂಬೋನು, ಬಂದು ಬಗ್ಗಿ ಬಗ್ಗಿ ನೋಡ್ತ್ತಾನೆ ಸಾ. ಎಂದು ಹೇಳುತ್ತಿದ್ದ ಹೆಣ್ಣುಮಕ್ಕಳ ಮ್ಯಾಲೆ, ಆ ತಿಕ್ಕಲ ಸೀನ ಒಂದು ದಿನ ಕಲ್ಲುಗಳನ್ನ ಬೀರಾಕು ಶುರುವಚ್ಚಿಕೊಂಡ. ಅಂತದ್ದೊಂದು ಕಲ್ಲು ಎಸೆದ ಸಮೇವಿನೊಳಗೆ, ಅದು ಏಳನೆ ತರಗತಿ ಮೀನಾಕ್ಷಿ ಎನ್ನುವವಳ ಕಣ್ಣುಬ್ಬಿಗೆ ತಗುಲಿತ್ತು. ಆ ಹುಡುಗಿ ಕೀರಾಡ್ತ ಬಂದವಳ ಹಣೆಯ ಮೇಲೆ, ಹರಿಯುತ್ತಿದ್ದ ರಕುತವನ್ನ ಕಂಡು. ಊರ್ನವರು ಮತ್ತು ಮೀನಾಕ್ಷಿಯ ಅಪ್ಪ ಅವಳ ಅಮ್ಮ ಎಲ್ಲಾರು ಓಡು ಬಂದ್ರು. ಅವಳ ಅಪ್ಪ ಈಸಲ ಬಂದೋನೆ ಬಂದು, ಎಡ್ ಮೇಷ್ಟ್ರುನ್ನ ಕೊಳ್ಳು ಪಟ್ಟಿ ಹಿಡುಕೊಂಡು, ಲೇ ನೀನು ಯಾವ್ ಸೀಮೆ ಹೆಡ್ಮೇಷ್ಟ್ರಲ?ಇವತ್ತು ಆ ಹುಡುಗಿಗೆ ಕಲ್ಲು ಬಿದೈತೆ ಬಚ್ಚಾವಾಗಿದ್ದೀಯ, ಬದ್ಲಾಗಿ ಆ ಹುಡುಗಿ ತಲೆನೆ ಹೊಡದೋಗಿದ್ರೆ ನೀನ್ ಕಟ್ಟಿಕೊಡತೀಯೇನಲೆ? ಎಂದ ಬಸವರಾಜಪ್ಪನ ಮಾತಿಗೆ, ಏನ್ರಿ ನೀವು ಹೊಟ್ಟಿಗೆ ಮಣ್ಣು ತಿಂತೀರೊ? ಅನ್ನ ತಿಂತೀರೊ? ಆ ಮೊಗಾನ ಕಲ್ಲಲ್ಲಿ ಹೊಡೀರಿ ಅಂತ, ನಿಮ್ಮೂರ್ನವರಿಗೆ ನಾನ್ಹೇಳ್ಕÉೂಟ್ಟಿದ್ದೀನೇನ್ರಿ? ಮಾತಾಡೋವಾಗ ಪ್ರಜ್ಞೆ ನೆಟ್ಟಗಿರಲಿರ್ರಿ, ಅಂತ ಮೇಷ್ಟ್ರು ಸ್ವಲ್ಪ ವೀರಾವೇಷವಾಗೆ ಮಾತಾಡೀರು. ಅಲ್ರಿ ಮೇಷ್ಟ್ರೆ ಇವತ್ತೊ ನಾಳಿಕ್ಕೊ ಹೆಣ್ಣಾಗೊ ಹೆಣ್ಣು ಮಕ್ಕಳು, ಇಲ್ಲೇ ಇಸ್ಕೂಲಿನ ಅಕ್ಕ ಪಕ್ಕದಲ್ಲೆಲ್ಲಾದ್ರು ಬೇಲಿ ಮರೆಯಾಗೆ ಉಯ್ಯಾಕೇಳ್ರಿ. ಅಷ್ಟು ದೂರದ ಹಳ್ಳದೊಳಿಕ್ಕೆ ಯಾಕ್ ಕಳಸ್ತ್ತೀರ? ಎಂದು ಒಬ್ಬರಿಗೊಬ್ಬರು ತಾರಾ ಮಾರಿಯಾಗಿ ಜಗಳವಾಡುವಾಗ. ಲೇ ತಗಿಯಲ ಅವನ್ಯಾವೋನೊ ಹುಚ್ಚುನನಮಗ ಹೊಡದಿರಾದಿಕೆ, ಮೇಷ್ಟ್ರೇನ್ಮಾಡ್ತಾರಲ?ಆ ತಿಕ್ಕಲನನ ಮಗುನ್ನ ಕರಸಿ ನಿಮ್ಮುಡುಗಿನ ಕಲ್ಲಲ್ಲಿ ಹೊಡಿ ಅಂತ ಹೇಳವರೇನಲ? ಎಂದು ಅಲ್ಲಿಗೆ ಬಂದಿದ್ದ ಊರವರ ಮಾತಿಗಾಗಲೆ, ಕಾಂಪೋಂಡಿನ ತುಂಬ ಜಮಾಯಿಸಿದ್ದ ಜನವನ್ನೆಲ್ಲ ದಾಟಿಕೊಂಡ ಹೆಡ್ ಮೇಷ್ಟ್ರು. ಆ ಮೀನಾಕ್ಷಿ ಎಂಬ ವಿದ್ಯಾರ್ಥಿಯನ್ನ ತನ್ನ ಬೈಕಿನಮ್ಯಾಲೆ ಕೂರಿಸಿಕೊಂಡೋಗಿ, ಮಧುಗಿರಿಯ ಆಸ್ಪತ್ರೆಯೊಳಗೆ ತೋರಿಸಿಕೊಂಡು ಬಂದ್ರು.
ಮತ್ತೆ ಮಾರನೆ ದಿನದಿಂದ ಹೆಣ್ಣು ಮಕ್ಕಳೆಲ್ಲ, ಆರನೆ ತರಗತಿ ರೂಮಿನ ಹಿಂದಗಡಿಕ್ಕೆ ಟಾಯ್ಲೆಟ್ಟಿಗೋಗಬೇಕೆಂದು ಅನೌನ್ಸ್ ಆಯಿತು. ಅಂಗಾದ ಮೂರೆ ದಿನಕ್ಕೆ ಸಾ ನಾನು ಆ ರೂಮಲ್ಲಿ ಕುಂತು ಪಾಠ ಮಾಡಾಕಾಗಲ್ಲ ಸಾ. ತುಂಬ ಸ್ಮೆಲ್ಲು ಸಾ ಅಂತ, ಅವೆಲ್ಲ ಹೆಡ್ಮೇಷ್ಟ್ರು ಜವಬ್ದಾರಿ ಕಣ್ರಿ, ನಾವ್ಯಾಕ್ ಮಾಡಾನ? ಅವೆಲ್ಲ ಅವರೆ ಕಣ್ರಿ ಬರೆಯೋದು ನಾವ್ಯಾಕ್ ಬರಿಯಾನ? ಎಂದು ದಿನಂಪ್ರತಿ ತಾನಾಯಿತು ತನ್ನ ರೂಮಾಯಿತು, ಎನ್ನುವ ಲೆಕ್ಕಾಚಾರದೊಳಗೆ ಇಸ್ಕೂಲಿಗೆ ಬರುತ್ತಿದ್ದ ಗೋಪಾಲ್ ಮೇಷ್ಟ್ರು, ಆರನೆ ತರಗತಿಗೆ ಹೆಜ್ಜೆ ಇಕ್ಕದಂಗಾದ್ರು, ಇಂತ ಸಮಸ್ಯೆಗಳಲ್ಲೆಲ್ಲ ಮೂತ್ರ ಮಾಡಲು ಶಾಲೆಯ ಮೊಗ್ಗುಲಲ್ಲಿ ಜಾಗವಿಲ್ಲದ ಸಮಸ್ಯೆ ದೊಡ್ಡದಾಗಿ ಕಾಡಲಾರಂಬಿಸಿ. ಅದು ಹೆಡ್ ಮೇಷ್ಟ್ರು ತಲೆಯೊಳಗೆ ಉಳುವಾಗಿ ಹೊಕ್ಕಿದ್ದ ದಿನಗಳು ಉರುಳುತ್ತಿರುವಾಗ. ಸೆಂಟ್ರಲ್ ಗೌರ್ಮೆಂಟಿನಿಂದ ಎಸ್, ಎಸ್, ಎ ಯೋಜನೆಯೆನ್ನುವುದೊಂದು ಹುಟ್ಟಿಕೊಂಡು. ಶಾಲೆಗಳ ಮೂಲಭೂತ ಸೌಕರ್ಯಗಳಲ್ಲಿ, ಶೌಚಾಲಯಗಳು ಕಡ್ಡಾಯವಾಗಿರಬೇಕೆನ್ನುವ ನಿಯಮದಡಿ. ಇವರ ಶಾಲೆಗು ಒಳ್ಳೆಯ ಶೌಚಾಲಯಗಳು ನಿರ್ಮಾಣವಾದವು ಅಲ್ಲಿಂದೀಚಿಗೆ ಹೆಡ್ಮೇಷ್ಟ್ರು ನಿರಾಳವಾದಂಗಾದ್ರು. ಊರಲ್ಲಿ ಇದರ ಸ್ವಚ್ಚತೆ ಮತ್ತು ಗೌಪ್ಯತೆಯನ್ನ ಅರಿತ ಮೂರು ನಾಕು ಪೋಷಕರು. ಅವರ ಸ್ವಂತ ದುಡ್ಡಿನೊಳಗೆ ಶೌಚಾಲಯಗಳನ್ನ ಕಟ್ಟಿಕೊಂಡ ಸಮೇವಿನಲ್ಲೆ, ನರಸಮ್ಮನ ಮನೆಯಲ್ಲು ವಯಸ್ಸಿಗೆ ಬರೊ ಹೆಣ್ಣು ಮಕ್ಕಳವರೆ, ನಮ್ಮನೇಲು ಒಂದು ಲೆಟ್ರಿನ್ ರೂಮಿರಲಿ ಎಂದುಕೊಳ್ಳುತ್ತಿದ್ದ, ಅವರ ಅಮ್ಮನ ಮಾತಿಗೆ ಕಟ್ಟು ಬಿದ್ದು. ನರಸಮ್ಮನ ಅಪ್ಪ ಮನೆಯ ಹಿಂಬಾಗ ಶೌಚಾಲಯವನ್ನ ಕಟ್ಟಿಸಿಕೊಟ್ಟಿದ್ದ. ಅಂಗಾಗೆ ನರಸಮ್ಮ ನಾಕನೆ ತರಗತಿ ಹುಡುಗಿಯಾಗಿಂದ್ಲು. ಈ ತನಕ ಅವಳೆಲ್ಲು ಬಯಲು ಶೌಚಕ್ಕೆ ಹೋದವಳೆ ಅಲ್ಲ. ಆದರೀಗ ಅವಳ ಗಂಡನ ಮನೇಲಿ ಅಂತ ಶೌಚಾಲಯವನ್ನ ನಿರ್ಮಿಸಿ, ಎರಡು ಮೂರು ವರ್ಷವಾಗಿತ್ತಂತೆ. ಆದರು ಅದನ್ನಯಾರು ಬಳಸ್ ಬಾರದೆನ್ನುವ ಗೌಡಣ್ಣನ ಆಜ್ಞೆಯೊಳಗೆ ಮುಚ್ಚಿದ ಬಾಗಿಲು ಮುಚ್ಚಿದಂಗೆ ಇತ್ತು, ಅದು ಯಾಕೆಂದು ನರಸಮ್ಮನಿಗೆ ಮನೆಯಲ್ಲಿ ಯಾರು ನೆಟ್ಟಗೆ ಹೇಳದಾದರು. ಆದರೆ ಅವಳ ಎದುರು ಮನೆಯ ಮಂಜಿ ಎಂಬ ಹೆಣ್ಣು ಮಗಳೊಬ್ಬಳೊಬ್ಬಳು, ಈಗ ನಾಕೈದು ತಿಂಗಳ ಕೆಳಗೆ. ಹಟ್ಟಿ ಮಾರಮ್ಮನ ಹಬ್ಬಕ್ಕೆ ಬಂದಿದ್ದಾಗ, ಆ ಮಂಜಮ್ಮನೆಂಬುವ ಹುಡುಗಿಯ ಜೊತೆ. ಈ ನರಸಮ್ಮ ಪ್ಲಾಸ್ಟೀಕ್ ಚೆಂಬಲ್ಲಿ ನೀರಿಡುಕೊಂಡು ಹೋಗಿದ್ದಾಗ. ಇದೇ ಶೌಚದ ಅದ್ವಾನದ ಕತೆಯನ್ನ ಮಾತಾಡಿಕೊಂಡು, ಊರಾಚೆಯ ಬೇಲಿ ಸಾಲುಗಳ ಕಡೆ ಹೋಗುವಾಗ. ಯಕ ನಿನ್ ಗೌಡ ಮುನ್ನೂರು ಮೂವತ್ತು ಗಳಿಗೇಲು ದುಡ್ಡು ದುಡ್ಡು ಅಂತ ಒದ್ದಾಡ್ತಿರತಾನ್ ಕಣಕ, ಖರ್ಚು ಮಾಡೀರೆ ಇನ್ನೆಲ್ಲಿ ಅವನಪ್ಪನ ಗಂಟು ಓಡೋಗ್ತದೊ ಅಂತ ಬಾಳುತಿರೋನು. ಇನ್ನು ನಿನಗೆ ಲೆಟ್ರಿನ್ ರೂಮಿನ ಬಾಗಲನ್ನ ಎಲ್ಲಿ ತಗುಸ್ತ್ತಾನೆ ಎಂದು ಒಗಟಾಗಿ ಮಾತಾನಾಡಿದ್ದಳು. ಅವಳ ಮಾತಿನ ಜಾಡನ್ನ ಗಮನಿಸಿದ ನರಸಮ್ಮ ಸರಿಯಾದ ಕಾರಣ ಕೇಳಿದಾಗ. ಯಕ ಆ ರೂಮು ಕಟ್ಟಿಸುವಾಗ ಅದರ ಕೆಳಗೆ ಪಿಟ್ಟೆ ತಗಸದಂಗೆ ಕಟ್ಟಿಸಿಬಿಟ್ಟವನೆ, ಎಂದ ಮಂಜಮ್ಮಳ ಮಾತಿನೊಳಗೆ ಅರ್ಥ ಸಿಕ್ಕಿದ ನರಸಮ್ಮ. ಅದಿಕ್ಕೆ ಇರ್ಬೇಕ್ ಕಣೆ ಅದುನ್ನ ಬಳಸ್ ಬ್ಯಾಡಿ? ಅದುನ್ ಬಳಸ್ ಬ್ಯಾಡಿ? ಅಂತ ನಾನು ಬಂದು ಈಸೊರ್ಸವಾದ್ರು ಬಡಕಂತಲೆ ಇರ್ತ್ತಾನೆ, ತಿರುಗಿ ಮನ್ನೆ ದಿನ ಅವರಮ್ಮ ಮೇಯಿಸಿಕಂಡು ಬರ್ತಾಳೆನುತ, ಎರಡು ಕುರಿಮರಿ ತಂದು ಆ ರೂಮಿನೊಳಗೆ ಕಟ್ಟಾಕ್ತಾ ಅವರೆ. ಅಂದ ನರಸಮ್ಮನ ಮಾತಿಗೆ, ಊನಕ್ಕ ನಿನ್ ಗೌಡನಂತ ಗೌಡ್ರು ಇನ್ನೊಂದಿಬ್ರಿದ್ರೆ ಊರು ಉದ್ದಾರ ಆದಂಗೆ ಕಣಕ. ಎಂದ ಮಂಜಿಯಿಂದ ಆ ಸತ್ಯವನ್ನ ತಿಳುಕೊಂಡ ನರಸಮ್ಮ. ಯಾರು ಕೂಟೆ ಏನೂ ದೂಸುರ ಮಾತಾಡದಂಗೆ ಇರುತ್ತಿದ್ದಳಾದರು. ಯಾಕೊ ಬೆಳಿಗ್ಗೆಯೆದ್ದು ಬಯಲುಕಡೆ ಹೋಗಬೇಕೆಂದರೆ ಇರುಸು ಮುರುಸು ಆಗುತ್ತಿತ್ತು. ಅಂತದ್ದರಲ್ಲಿ ಅವಳೀಗ ಏಳುತುಂಬಿ ಎಂಟುತಿಂಗಳ ಬಸುರಿ ಬ್ಯಾರೆ,
ಬಯಲು ಶೌಚ ತಪ್ಪಿಸುವ ಉದ್ದೇಶದಿಂದ, ಕೇಂದ್ರ ಹಾಗು ರಾಜ್ಯ ಸರ್ಕಾರಗಳು. ಕೋಟ್ಯಂತರ ರೂಪಾಯಿಗಳ ಅನುದಾನವನ್ನ, ಗ್ರಾಮ ಪಂಚಾಯಿತಿಗಳಿಗೆ ಬಿಡುಗಡೆ ಮಾಡಿದ್ದು. ಗ್ರಾಮಗಳ ಅನೈರ್ಮಲ್ಯವನ್ನು ಹೋಗಲಾಡಿಸಬೇಕಿದ್ದ ಗ್ರಾಮ ಪಂಚಾಯಿತಿಗಳಲ್ಲಿ ನಿರ್ಲಕ್ಷವೆಂಬೋದು ಉಂಟಾಗಿ, ಊರಿನ ಸೌಕರ್ಯಗಳನ್ನ ತಿಳಿದು ಕೊಳ್ಳುತ್ತಿದ್ದ ಪುಡಿ ರಾಜಕೀಯದ ಗೌಡನೆಂಬೋನು. ಈಗ್ಗೆ ಐದಾರು ವರ್ಷಗಳ ಕೆಳಗೆ ಅವನ ಮನೆಯ ಶೌಚಾಲಯಕ್ಕೆಂದು, ಗ್ರಾಮ ಪಂಚಾಯಿತಿಯಿಂದ ಬಂದಿದ್ದ ದುಡ್ಡು ತಗಂಡು. ಪಾಯ ತಗಿಸಿ ರೂಮುಕಟ್ಟಿಸಿದ, ಆ ಲೆಟ್ರಿನ್ ರೂಮು ಕಟ್ಟುವಾಗ ಪಿಟ್ ಗುಂಡಿಯೆ ತಗಸದಂತೆ. ಮೇಲೆ ಲೆಟ್ರಿನ್ ಬೇಸನ್ ಕೂರಿಸಿ ಬಿಲ್ ಮಾಡಿಸಿಕೊಂಡಿದ್ದ. ಅಷ್ಟಕ್ಕೆಸುಮ್ಮನಿರಲಾರದ ಭೂಪ ಅದೇ ಲೆಟ್ರಿನ್ ರೂಮಿಗೆ ಒಂದೆರೆಡು ವಷರ್À ಸುಣ್ಣ ಬಣ್ಣ ಬಳಿಸಿ. ನಕಲಿ ದಾಖಲೆಗಳನ್ನ ರೆಡಿ ಮಾಡಿಕೊಂಡು ಎರಡು ಮೂರುಸಲ ಬಿಲ್ ಮಾಡಿಸಿಕೊಂಡ. ಅಂಗೆ ಅವನ ಮಾತಿನಂತೆ ನಡೆಯುವ ಮತ್ತೆ ಅವನ ಮಾತು ಕೇಳುವ. ಮೂರು ನಾಕು ಜನರಿಗು ಇಂತದ್ದೆ ಐಡಿಯಾಕೊಟ್ಟು ಅವರ ಲೆಟ್ರಿನ್ರೂಮುಗಳನ್ನು ಕುಲಾ ಕರ್ಮ ಕೆಡಿಸಿದ್ದವನು, ಅವನ ಮನೇಲು ಯಾರು ಲೆಟ್ರಿನ್ ರೂಮು ಬಳಸದಂಗೆ ತುಂಬಾ ನಿರ್ಭಂದವಾಗಿ ಎಚ್ಚರಿಸಿಬಿಟ್ಟಿದ್ದ, ಅಂತವನ ಮನಿಗೆ ಬಲಗಾಲು ಮುಂದಿಕ್ಕಿ ಬಾಗ್ಲು ದಾಟಿ ಬಂದ ನರಸಮ್ಮನಿಗೆ, ಲೆಟ್ರಿನ್ ರೂಮಿನದೆ ಬಹುದೊಡ್ಡಚಿಂತೆಯಾಗಿ ಕಾಡಾಕ್ ಶುರುವಾಗಿತ್ತು.
ಮನೆಗೆ ಬಂದ ಹೊಸೊಸದರಲ್ಲಿ ಆ ಶೌಚಕ್ಕಾಗಿ ಬಯಲ ಕಡೆ ಚೊಂಬಿಡುಕೊಂಡು ಹೋಗುವಾಗ ನರಸಮ್ಮನ ಮನಸ್ಸು ಮೈಯ್ಯಿಗೆ ಮರ್ಯಾದೆಯಿಲ್ಲವೇನೊ? ಅಂದುಕೊಂಡು ಒದ್ದಾಡುತಿದ್ಲು. ಸ್ವಾಮಿ ಒಂದಿಸ ನಿನ್ ಮನೇಲಿ ಹಿಟ್ಟೇ ಉಣ್ಣು ಬ್ಯಾಡ ಅನ್ನು ಉಪಾವಾಸ ಇರ್ತ್ತೀನಿ. ಆದ್ರೆ ಚೊಂಬಿಡುಕೊಂಡು ಬಯಲ್ಕಡೆ ಹೋಗು ಅಂಬೋದುನ್ನ ಮಾತ್ರ ಹೇಳು ಬ್ಯಾಡಕಣಪ್ಪ?ನಾನೇನು ವಾಲೆ ಕೇಳುತಿಲ್ಲ? ಜುಮುಕಿ ಕೇಳುತಿಲ್ಲ? ಇರೊ ಲೆಟ್ರಿನ್ನು ರೂಮನ್ನ ನಾನೊಬ್ಬಳಾದ್ರು ಬಳಸಂಗೆ ಮಾಡು ಮಾರಾಯ. ಅಂತ ಅಂಗಲಾಚಿ ಬೇಡಿದವಳ ಮಾತಿಗೆ. ಅಮ್ಮಣ್ಣಿ ಮನೆಯವರೆಲ್ಲ ಎಂಗೊ ಅಂಗೆ ನೀನು ಹೊಂದಿಕೊಂಡು ಬಿದ್ದಿರ್ಬೇಕು. ನೀನು ಮಾರಾಜನ ಮೊಮ್ಮಗಳು ಬಂದಿದ್ದೀಯ ಅಂತ, ಕೇಳಿದ್ದಕ್ಕೆಲ್ಲ ನಾವು ಆಕಾಶದ ಮ್ಯಾಲಿಂದ ಉಪ್ಪುರಿಗೆ ಇಳಸಾಕಾಗಲ್ಲ? ಇಲ್ಲ ನೀನು ಕೇಳೋ ಸೌಕರ್ಯಕ್ಕೆಲ್ಲ ನಾನು ಖಜಾನೆ ಇಕ್ಕಿಲ್ಲ. ಇಷ್ಟುವಿದ್ರೆ ಇರು, ಕಷ್ಟವಾದ್ರೆ ರೈಟೇಳು, ಎಂದು ಅವಳ ಎದೆಯಾಗಿನ ಯಾವ ಆಸೆಯ ಮಾತು ಎಂತ ಗಳಿಗೇಲು ಈಚೆ ಬಂದ್ರು. ಊರಿಗೆ ಮುಂಚೆಯೆ ಗಂಡನೆಂಬೊ ಗನಂದಾರಿ ನನಮಗನೆ, ದಯೆ ದಾಕ್ಷಿಣ್ಯವಿಲ್ದಂಗೆ ಬೈಯ್ಯುತ್ತಿದ್ದ. ಅದರೊಳಗಾಗಿ ನರಸಮ್ಮನ ವಾರಗಿತ್ತಿ ಮತ್ತು ಅತ್ತೆಯ ಪಾರು ಪತ್ಯೆಯೊಳಗೆ, ಎಲ್ಲರ ಬದುಕು ಬಾವನೆಗಳು, ಆಸೆ ನಿರಾಸೆಗಳು ಶಬುದ ಮಾಡ್ದಂಗಾಗಿ. ಅವರೇಳೊ ಕೆಲಸ ಕಾರ್ಯಗಳಿಗೆ ಬೆನ್ನು ಬಗ್ಗಿಸಿಕೊಂಡವಳ ಸ್ವಾತÀಂತ್ರಕ್ಕೆ. ಐನಾತಿ ಗಂಡನೆ ಮುಳುವಾಗಿದ್ದು ನೋಡಿ ತೆಪ್ಪಗೆ ತಲೆ ಕೆಡಿಸಿಕೊಂಬದೆ, ಊರಾಚೆಯೊಳಗಿದ್ದ ಬೇಲಿಪೊದೆಯೊಳಕ್ಕೆ ಚೊಂಬಿಡುಕೊಂಡು ಹೋಗಿ ಬರಾದನ್ನ ಕಲಿತುಕೊಂಡ್ಲು. ಅಂತವಳ ಮುಂದಿದ್ದ ಗಂಡನಿಗೆ ದುಡ್ಡು ದುಡ್ಡು, ಮೂರೊತ್ತು ದುಡ್ಡಿನ ಚಿಂತೇಲೆ ತೇಲಿಕೊಂಡಿದ್ದವನ ಹೆಣುತಿ ನರಸಮ್ಮನ ಬಸುರೆಂಬೋದು. ಎಂಟು ತುಂಬಿ ಒಂಬತ್ತು ತಿಂಗಳಿಗೆ ಬಲಿಯಾಕಿಡಿಯಿತು, ಇದು ಮದ್ಲೇನೇದೆ ಗಂಡಾಗ್ಲಿ, ಅಂತ ಅತ್ತೆ ಮತ್ತು ಗಂಡನ ಆಸೆಯೆನ್ನುವುದು ಹಗಲು ಇರುಳು ಗಗ್ಗರಿಯುತ್ತಿರುವಾಗ, ಆ ಮನೆಯ ದೊಡ್ಡ ಸೊಸಿಗೆ ಎರಡೂ ಹೆಣ್ಣು ಮಕ್ಕಳೆ ಆಗಿದ್ದವು. ಅವರ ವಂಶದ ಹೆಸರೇಳಾಕೆ ಗಂಡುಮೊಗ ಬೇಕೇ ಬೇಕು ಅಂದುಕೊಂಡವರ ಜತೆಯಲ್ಲಿ. ಅರುವಿನಿಂದ ಬದುಕು ಹುಡುಕಿಕೊಂಬುತ್ತಿದ್ದ ನರಸಮ್ಮನಿಗೆ, ಹೆಣ್ಣೊ? ಗಂಡೊ? ಅವೇನು ನಾವು ಕೈಯಲ್ಲಿ ಮಾಡಿಕ್ಕೆಣುವ ಗೊಂಬೆಗಳ? ದೇವರು ಕೊಟ್ಟಿದ್ದು ನಾವು ಪಡೀಬೇಕು, ಅಂತ ಎಷ್ಟೋ ಸಲ ಸಮಾದಾನ ಮಾಡಿಕೊಳ್ಳುತ್ತಿದ್ದರು. ಗಂಡಾದರೇನು? ಹೆಣ್ಣಾದರೇನು? ಎಲ್ಲರು ಒಂದುದಿನ ಬದುಕು ನೀಚಿ ಮಣ್ಣಿಗೋಗುವುದೆ ತಾನೆ ಅನ್ನುವ ಅರಿವಿಲ್ಲದವರ ಮದ್ಯೆ ಎಣಗಾಡುತ್ತಿದ್ದ ನರಸಮ್ಮನಿಗೆ. ಇನ್ನು ಹದಿನೈದು ದಿನಕ್ಕೆ ಎರಿಗೆಯಾಗುತ್ತದೆಯೆಂದು ಡಾಕ್ಟ್ರು ಟೈಮ್ ಕೊಟ್ಟಿದ್ರು.
ಅಂತ ನರಸಮ್ಮನಿಗೆ ಒಂದು ಬೆಳ್ಳಂಬೆಳಿಗ್ಗೆ ಶೌಚಕ್ಕೆ ಹೋಗ್ಬೇಕನಸುತು. ತುಂಬಿದ ಬಿಮ್ಮನಿಸಿ ಒಬ್ಬಳೆ ಹೊರಗಡೆ ಹೋಗಾದು ಬ್ಯಾಡವೆಂದು, ದಿನವು ಅವಳ ಬಾವನ ಮಗಳನ್ನ ಜೊತೇಲಿ ಕರೆದುಕೊಂಡು ಹೋಗುತಿದ್ಲು. ಆವತ್ತು ಅವಳಿಗೇನು ಮುಚ್ಚಿಕೊಂಡಿತ್ತೊ? ಏನೊ? ಆ ಹುಡುಗಿಯನ್ನ ಬಿಟ್ಟು ಅಂಗೆ ಒಬ್ಬಳೆ ಹೋದ ನರಸಮ್ಮನಿಗೆ, ಊರಾಚೆಯ ಬೇಲಿಪೊದೆಯಲ್ಲಿ ಲೆಟ್ರಿನ್ನಿಗೆ ಕುಂತಿರುವಾಗಲೆ ಹೆರಿಗೆಯಾಗಿಬಿಡುತು. ಅವಳು ಅಲ್ಲೆ ಸುಸ್ತಾಗಿ ಬಿದ್ದುಬಿಟ್ಟಿದ್ಲು, ಅದೆಷ್ಟೋತ್ತಾಗಿತ್ತೋ ಏನೊ? ಯಾರಿಗು ಗೊತ್ತಾಗಿಲ್ಲ, ಮುದ್ದಾದ ಗಂಡು ಮೊಗವೊಂದನ್ನ ಐದಾರು ನಾಯಿಗಳು, ರೋಡಿಗೆ ಎಳುಕೊಂಡು ಬಂದು ತಿನ್ನವಾಗ. ಯಾರೊ ಊರಿನಲ್ಲಿ ಓಡಾಡುವ ಅದೇ ದಾರಿಯಲ್ಲಿ ಹೋಗುತ್ತಿದ್ದ ಒಂದಿಬ್ಬರು ಗಂಡಸರು ನೋಡಿಕೊಂಡು. ನಾಯಿಗಳನ್ನ ಅಟ್ಟಾಡಿಸುತ್ತ, ಊರೊಳಕ್ಕೆ ಓಡೋಗಿ ಗೌಡನ ಮನೇರಿಗೆ ಸುದ್ದಿ ಮುಟ್ಟಿಸಿದ ಪುಣ್ಯಾತುಮರ ಮಾತಿಗೆ, ದಡಾ ಬಡಾಯಿಸಿಕೊಂಡು ಮನೆಯವರೆಲ್ಲ ಓಡ್ಬಂದು ನೋಡ್ತ್ತಾರೆ. ನರಸಮ್ಮ ಆಗಿನ್ನ ಅರ್ದಂಬರ್ದ ಕಣ್ಣು ತಗಿಯುತ್ತಿದ್ದವಳ ಮುಂದೆ, ರಕುತ ವಿಪರೀತವಾಗಿ ಮಣ್ಣು ಸೇರಿತ್ತು. ಅಲ್ಲಿಗೆ ಬಂದವರೆಲ್ಲ ಎಲ್ಲಿ ಮೊಗಾ, ಮೊಗ ಎಲ್ಲಿ, ಎಂದು ತಡಬಡಾಯಿಸುವ ಹೊತ್ತಿಗಾಗಲೆ. ದೂರದಲ್ಲಿ ನಾಯಿಗಳನ್ನ ಓಡಿಸುತ್ತಿದ್ದ ಗಂಡಸರ ಅಬ್ಬರಕ್ಕೆ. ಇವರ ಮುಂದೆಯೆ ತಪ್ಪಿಸಿಕೊಂಡೋಗುತ್ತಿದ್ದ ನಾಯಿಯ ಬಾಯಲ್ಲಿ, ಕೆಂಪು ಕೆಂಪಾದ ಎಳೆಯ ಕೈಯ್ಯೊಂದು ಜೋತಾಡುತ್ತಿತ್ತು.
ಊರೆಂದರೆ ಅದು ಎಲ್ಲ ಊರುಗಳಂತ ಊರಾಗಿರಲಿಲ್ಲ, ಅದೇನೊ ಅದೊಂತರ ರೀತಿ ನೀತಿಯೆಂಬಂಗೆ ಕಾಣ್ತ್ತಿರಲಿಲ್ಲ. ಆ ಊರಿನ ಮೊಗ್ಗುಲಿಗೆ ಹೋಗಿ ನಿಂತು ನಿಗಾ ಮಾಡಿದರೆ, ಅಲ್ಲಿ ಒಂದು ಕೇರಿಯಲ್ಲ, ಅದು ಒಂದು ಬೀದಿಯು ಅಲ್ಲ, ಏನೋ ಒಂತರ ಲೆಕ್ಕ ಬುಕ್ಕಕ್ಕೆ ಕಾಣದ ಮನೆಗಳು. ಈ ತಗ್ಗಿನೊಳಗೆ ನಾಕೈದು ಮನೆಗಳು, ಆ ಎತ್ತರಕ್ಕೆ ಮೂರು ನಾಕು ಮನೆಗಳು, ಈ ಬಾಗಕ್ಕೆ ನೋಡಿದರೆ ಎರೆಡೆ ಎರಡು ಮನೆಗಳು, ಆ ಪಕ್ಕಕ್ಕೆ ನೋಡಿದರೆ ಒಂದೊ ಎರಡೊ ಮನೆಗಳು, ಇಂತ ಸಾಲು ಮೂಲೆ ಕಾಣದ ಊರೊಳಗೆ ಮುತ್ತೈದೆ ತನಕ್ಕೆಂಬಂತೆ ಇದ್ದದ್ದು ಒಂದೇ ಒಂದು ಮಣ್ಣಿನ ರೋಡು. ಅದು ಓಬಿರಾಯನ ಕಾಲದ ರೋಡು, ಅವರ ಅಜ್ಜ ಮುತ್ತಜ್ಜರ ಕಾಲ್ದಿಂದಲು ಎದೆಕೊಟ್ಟು ಹಾಸಿಮಲಗಿರುವ ರೋಡ್ನಲ್ಲಿ. ರಾಶಿ ರಾಶಿ ದೂಳು, ಅದು ದನಕರುಗಳ ಪಾದದಲ್ಲಿ, ನರಮಾನವರ ನಡಿಗೆಯಲ್ಲಿ, ಆಟೊ ಸ್ಕೂಟರುಗಳಲ್ಲಿ, ಟೆಂಪೊ ಟ್ರಾಕ್ಟರಗಳಲ್ಲಿ, ಯಾರ ಮುಲಾಜು ನೋಡ್ದಂಗೆ. ರಂಗು ರಂಗಾಗಿ ಮೆರೆಯುತ್ತಿತ್ತು. ಮುಂಗಾರಿನೊಳಗೆ ಮಳೆ ಉಯಿದರಂತು, ಪಾದ ಕಚ್ಚಿಕೊಳ್ಳದ ನೆಲದೊಳಗೆ, ಊರಿನ ಜನವೆಲ್ಲ ಪಾಡು ಪಟ್ಟು ಪಾದ ಊರ ಬೇಕಾಗಿತ್ತು. ಎಷ್ಟೊ ಸಲ ಹಿಂದು ಮುಂದೆನದಂಗೆ, ಜರ್ರನೆ ಆಯತಪ್ಪಿ ಜನರು ಬಿದ್ದಿರುವುದುಂಟು. ಈ ರಾಜ್ಯಕ್ಕಾಗಿ ಈ ದೇಶಕ್ಕಾಗಿ, ಗದ್ದುಗೆ ಏರಬೇಕಾಗಿದ್ದ ಗನಂದಾರಿ ಗುಣವಂತರೆಲ್ಲ. ಗೆದ್ದು ಬಂದೋದ್ರುವೆ, ನಮ್ಮೂರಿನ ರೋಡುಮಾತ್ರ ಸರಿಯೋಗ್ಲಿಲ್ಲ, ಎಂದು ಊರಲ್ಲಿ ಉಸಿರಾಡುತ್ತಿರುವವರೆಲ್ಲರ ಬಾಯೊಳಗು. ಈ ಗಳಿಗೇಲು ಆ ರೋಡಿನ ವಿಷಯ ಬಂದಾಗ, ಬುಸ ಬುಸನೆ ಕಾವಾಡ್ತಾನೆ ಇರುತೈತೆ. ಆ ಮಣ್ಣಿನ ರಸ್ತೆ ಬಿಟ್ಟು ಮುಂದಕ್ಕೋಗಿ ನೋಡಿದರೆ, ಅಲ್ಲೊಂದು ದೊಡ್ಡ ಅರಳಿ ಮತ್ತು ಬೇವಿನ ಮರವಿರುವ ಬುಡದಲ್ಲಿ. ವಿಸ್ತಾರವಾದ ಜಗುಲಿ ಕಟ್ಟೆ, ಅದರ ಮ್ಯಾಲೆ, ಕೆಲಸ ಕಾರ್ಯಕ್ಕೆ ಅಷ್ಟಾಗಿ ತಲೆ ಕೆಡೆಸಿಕೊಂಬದ, ಗಂಡಸರೆನ್ನುವವರು ಮಾತ್ರ, ಗಂಟೆ ಗಟ್ಟಲೆ ಕುಂತುಕೊಂಡು. ಹಿಂದಾಗೋದ ಭೂತದ ಗೆಪುತಿಗಳನ್ನ, ಈಗಾಗುತ್ತಿರುವ ವರ್ತಮಾನದ ಅವಾಂತರಗಳನ್ನ, ಮುಂದಾಗುವ ಭವಿಷ್ಯದ ಆತಂಕಗಳನ್ನ, ಒಬ್ಬರ ಬಾಯಿಂದ ಇನ್ನೊಬ್ಬರ ಬಾಯೊಳಗೆ, ರೂಪಾಂತರ ಗೊಳ್ಳುವ ಆ ಸಮೇವಿನೊಳಗೆ. ಅಲ್ಲಿ ಕುಂತವರ ಮೈಮ್ಯಾಲೆ, ನಡುವಾಸಿ ಬನೀನು ನಿಕ್ಕರುಗಳು ಕಚ್ಚಿಕೊಂಡಿದ್ದರೆ. ಗೌಡಣ್ಣನೆಂಬೋನು ಗರಿ ಗರಿಯಂತ ಶರ್ಟು ಬಿಳಿ ಪಂಚೆ ತೊಟ್ಟುಕೊಂಡು. ತಲೆಯ ನೆತ್ತಿತುಂಬ ಅಳ್ಳೆಣ್ಣೆ ಮೆತ್ತಿಕೊಂಡು. ಮೂತಿಕೆಳಗಿನ ಗಡ್ಡದ ಮ್ಯಾಲೆ, ಒಂದಿಷ್ಟು ದಾಡಿ ಬೆಳಸಿಕೊಂಡು, ಅಲ್ಲಿ ಅರಳಿ ಕಟ್ಟೆ ಮ್ಯಾಲೆ ಕುಂತಿದ್ದ ಗುಂಪಿನವರ ಮದ್ಯೆ. ಕುಂತು ಬಿಡುತ್ತಿದ್ದವನ ಗತ್ತು ಗಮ್ಮತ್ತು. ಅವನೊಳಗಿನ ಅವನಿಗೆ ಇಡಿಯಲಾರದಷ್ಟಾಗುತ್ತಿತ್ತು. ಯಾಕೆಂದರೆ ಅವನೊಬ್ಬ ಆರು ಮೂರು ಮಾಡುವ. ಮೂರನ್ನ ಆರು ಮಾಡುವ ಅಸಾದ್ಯದ ಆಸಾಮಿಯೆಂದು, ಅವನ ಸುತ್ತ ಮುತ್ತ ಅಂಟಿಕೊಂಡಿರೊ, ಜನಗಳೆ ಆಗಾಗ ಮಾತಾಡ್ಕಳ್ತಿದ್ರು. ಅಂತ ಸಮೇವುಗಳೇನಾರ ಹುಟ್ಟಿಕೊಂಡರೆ, ಈ ಭೂಮಿಯೆಂಬ ತತ್ವದಮ್ಯಾಲೆ ನಿಂತಿರುವ, ಆ ಊರಿನವರ ಸುಖ ದುಃಖವೆಂಬ ಏರು ಪೇರುಗಳಿಗೆ. ಇವನೆ ವಾರಸುದಾರನೆಂಬಂತೆ ಓಡಾಡ್ತ್ತಿದ್ದ, ಅದು ಓಡಾಡೋದು ಅಂದರೆ. ಅವನ ಓಡಾಟದಲ್ಲಿ ಅವನಿಗೆ ಗೊತ್ತು ಗುರಿಯಿಲ್ಲದೆ, ಮುಖವಾಡಗಳನ್ನ ಬದಲಾಯಿಸಿಕೊಂಬುತ್ತಿದ್ದ. . ನಿಯತ್ತಾಗಿ ಅರ್ದ ಕೆಲಸ ಮಾಡೀರೆ. ಊರೊಳಗೆ ನಾನೆ ಮುಖ್ಯವಾಗ್ಬೇಕು ಅನ್ನುವಂತ, ಇನ್ನರ್ದ ಕೆಲಸಗಳನ್ನು ಮಾಡ್ತಿದ್ದ.
ಇಂತ ಜನ ಮೆಚ್ಚೊ ಕೆಲಸ ಮಾಡೋ ಗೌಡಣ್ಣನೆಂಬೋನು, ಓದಿದ್ದುಮಾತ್ರ ನೆಟ್ಟಗೆ ಹೈಸ್ಕೂಲು ದಾಟ್ಲಿಲ್ಲ. ಒಂದರಿಂದ ಐದನೆ ತರಗತಿವರಗು, ಇದ್ದ ಇದ್ದೂರಿನ ಇಸ್ಕೂಲು ದಾಟಿ. ಬೇರೂರಿನ ಆರನೆ ತರಗತಿಗೆ ಸೇರಿಕೊಳ್ಳಲು, ಹುಡುಗರಿಗು ಪೋಷಕರಿಗು ಅದೇನೊ ಸಾಹಸಕ್ಕೆ ಕೈ ಹಾಕಿದಂತೆ, ಅಂತ ದುಬಾರಿ ಎನ್ನಿಸುವ ಸಂದರ್ಭದೊಳಗೆ, ನಾಕು ಮೈಲಿ ದೂರವಿರುವ ಇಸ್ಕೂಲಿಗೆ ಸೇರಬೇಕಾದ್ದವರು. ಮುಂದಿನ ತರಗತಿಗೆಂದು ಸೇರುದ್ರೆ ಸೇರ್ತಿದ್ರು. ಇಲ್ಲವಂದ್ರೆ ಇಲ್ಲವೆ ಇಲ್ಲ? ಇಂತ ಸೌಲಭ್ಯವಂಚಿತ ಊರೊಳಗೆ, ಎಸ್, ಎಸ್, ಎಲ್, ಸಿ ವರಗು ಮೂರು ನಾಕು ಮೈಲಿ ನೆಲ ನಡದು. ಓದಲು ಮುಂದಾದ ಗೌಡಣ್ಣನಿಗೆ, ಗಣಿತ ಇಂಗ್ಲೀಷು ಎನ್ನವ ಎರಡು ಪುಸ್ತಕಗಳು ಮಾತ್ರ, ಏನೇನು ಪಾಡು ಪಟ್ರು ನೆಟ್ಟಗೆ ಅರ್ಥವಾಗ್ದಂಗಾಗಿ. ವರ್ಷ ವರ್ಷವು ಫೇಲಾಗಕ್ ನಿಂತಗಂಡ, ಅವನೆಷ್ಟು ಸಲ ಪರೀಕ್ಷೆ ಕಟ್ಟೀರು, ಅಷ್ಟು ಸಲವು ಫೇಲಾಗುತ್ತಿದ್ದನ್ನ ನೋಡಿ. ಲೇ ಅಪ್ಪಯ್ಯ ನೀನಿಂಗೆ ಸಲ ಸಲ ಪರೀಕ್ಷೆ ಕಟ್ಟೋದು ಬ್ಯಾಡ? ಫೇಲಾಗೋದು ಬ್ಯಾಡ? ನೀನು ಕುಣುದಂಗೆಲ್ಲ ನಾವು ಕುಣಿಯಾಕೆ, ನಮ್ಮತ್ರ ದುಡ್ಡಿರಲ್ಲ ಕಣಲ? ಎಂದ ಅವನ ಅಪ್ಪ ತಮ್ಮಣ್ಣನ ಮಾತಿಗೆ, ಒಂದೆರೆಡು ದಿನ ಕಿನ್ನನಾಗಿ ಕುಂತು ಬಿಟ್ಟಿದ್ದ, ಇದೊಂದು ಸಲ ಈ ಹುಡುಗನನ್ನ ಎಂಗಾದ್ರು ಮಾಡಿ. ಈ ಎಸ್, ಎಲ್, ಸಿ ಅಂಬೊ ಭೂತವನ್ನ ದಾಟಿಸ್ಬುಡಿ ಸಾ. ಎಂದು ಅವನ ಇಸ್ಕೂಲಿನ ಮೇಷ್ಟ್ರುಗಳತ್ರ. ಗೌಡಣ್ಣನ ಅಪ್ಪನೆನ್ನುವವನು, ಬಡಕಂಡ್ ಬಡಕಂಡು ಸಾಕಾಗಿದ್ದ. ಅವನ ಮೇಷ್ಟ್ರುಗಳು ಕೂಡ, ಪಾಸು ಮಾಡೊ ಅಂತ ಪ್ಲಾನುಗಳನ್ನೆಲ್ಲ ಮಾಡೀರು. ತಿರುಗಿ ತಿಮ್ಮಪ್ಪನ ಲಾಗ ಹಾಕೀರುವೆ, ಅವನು ಮಾತ್ರ ಎಸ್, ಎಲ್, ಸಿ ಯೊಳಗೆ ಪಾಸ್ ಆಗಲೇ ಇಲ್ಲ. ಇಂಗೆಗೌಡಣ್ಣನ ಜೊತೇಲಿ ಓದುತ್ತಿದ್ದ ಹುಡುಗರು ಮಾತ್ರ, ಪರೀಕ್ಷೆಲಿ ಸೋತು ಸೋತು ಕೈ ಚೆಲ್ಲಿದವರು. ಕೊನಿಗೆ ಬಂದು ಬಳಗ, ನೆರೆ ಹೊರೆ, ಎನ್ನುವ ಅವರವರ ಕಳ್ಳು ಬಳ್ಳಿಗಳನ್ನ ಕೈ ಬಿಟ್ಟು. ಮಾಯಾನಗರವೆಂಬ ಬೆಂಗಳೂರಿನಲ್ಲಿ ಮನಸ್ಸು ಮಾಡಿ. ಅಲ್ಲೊಂದು ಬದುಕು ಕಟ್ಟಿಕೊಂಬುವ ಸಲುವಾಗಿ. ಊರು ಕೇರಿಯನ್ನ ಬಿಟ್ಟೋಗಿದ್ದರು. ಆದರೆ ಗೌಡಣ್ಣನೆನ್ನುವ ಈ ಆಸಾಮಿ ಮಾತ್ರ. ಮನೇಲಿ ಮಾಡಿದ್ದನ್ನ ಒತ್ತೊತ್ತಿಗೆ ಉಂಡುಂಡು. ಯಾವ ಕೆಲಸ ಕಾರ್ಯವನ್ನು ಮುಟ್ಟುದಂಗೆ, ಅಲ್ಲು ಇಲ್ಲು ಅಲ್ಲಂಡೆ ಹೊಡಿತಿದ್ದವನ ಮುಂದೆ. ಕಾಲವೆಂಬೋದು ಉರುಳುರುಳಿ ಅವನ ಮೈಯ್ಯಿ ಮನಸ್ಸು ಬಲಿಯಾಕ್ ನಿಂತಕಂತು. ಅಂಗೆ ಬಲಿಯುತಿದ್ದವನು ನೋಡ ನೋಡುತ್ತ. ಊರಿನ ಜನರ ಮುಂದೆ, ಆಗಾಗ ಅವನ ದೊಡ್ಡಸ್ತಿಕೆ ತೋರಿಸಿಕೊಳ್ಳಲು ಹುನ್ನಾರ ಮಾಡಲಾರಂಬಿಸಿದ, ಊರಲ್ಲಿ ನಡೆಯುವ ಗ್ರಾಮದೇವತೆಯ ಹಬ್ಬಕ್ಕಾಗಲಿ, ಕಡೇ ಕಾರ್ತೀಕದಲ್ಲಿ ನಡೆಯುವ ಆರತಿ ಉತ್ಸವಗಳಿಗಾಗಲಿ, ಕಾರಬ್ಬದಲ್ಲಿ ನಡೆಯುವ ದನಕರುಗಳ ಮೆರವಣಿಗೆಗಾಲಿ, ಅಂಗೇನಾದರು ಯಾರ್ದಾರ ಮನೆಗಳಲ್ಲಿ. ಸಮೇವು ಮೀರಿ ನಡೆಯುವ ಸಂಕಟಗಳಿಗಾಗಲಿ. ಅವನೆ ಕುದ್ದಾಗಿ ಊರೆಲ್ಲರಿಗಿಂತ, ಮೊದಮೊದಲಿಗೆ ಮುಂದೆ ಬಿದ್ದು ನಿಬಾಯಿಸುವಂತ, ಮೂರು ನಾಕು ಮುಖಂಡರ ಮದ್ಯೆ, ಎದ್ದು ಕೂರುವಂತ ದೊಡ್ಡ ಮನುಷ್ಯನಾಗಿ. ಗುರುತಿಸಿಕೊಂಡ ಗೌಡಣ್ಣನೆಂಬೋನು. ಯಾವಾಗ್ಲು ಬಿಳಿ ಪಂಚೆ ಶರ್ಟು ತೊಟ್ಟಕೊಂಡು, ಗತ್ತು ಗಮ್ಮತ್ತಿನಿಂದ ಊರೊಳಗೆ ಓಡಾಡೋಕೆ ಶುರುವಚ್ಚಿಕೊಂಡವನನ್ನು ಗಮನಿಸಿದ ಜನವೆಂಬೋರು. ಹುಡುಗ ಭಯವಾದೋನು. ಗುಣವಂತ, ಜನರ ಕಷ್ಟಸುಖಕ್ಕಾಗುವವನು ಎಂಬ ಎಗ್ಗಳಿಕೆಗೆ ಪಾತ್ರನಾಗ ತೊಡಗಿದ. ಇಂತ ಘನತೆ ಗೌರವವನ್ನ ಹೆಚ್ಚಿಸಿಕೊಂಡ ಗೌಡಣ್ಣನಿಗೆ, ಹೆಣ್ಣು ಕೊಡಲು ನಾಮುಂದು ತಾಮುಂದು ಅನ್ನುವಂತ ಜನ ಹುಟ್ಟಿಕೊಂಡರು.
ಅವಳು ಆಗಿನ್ನ ಹೆಣ್ಣಾಗಿ, ನೆಟ್ಟಗೆ ಲೋಕವನ್ನು ಅರ್ಥ ಮಾಡಿಕೊಳ್ಳಲು ಎಣಗಾಡುತ್ತಿದ್ದ ಹದಿನೈದು ವರ್ಷದ ಹೆಣ್ಣು ಮೊಗ. ನರಸಮ್ಮನೆಂಬುವವಳ ಮನೇಲಿ. ಇವಳು ತಂದೆಗೆ ತಲೆ ಮಗಳಾಗಿ ಹುಟ್ಟಿದ್ದವಳು ಗಕ್ಕನೆ ಹೆಣ್ಣಾಗಿ ಕುಂತುಬಿಟ್ಲು, ಇವಳ ಬೆನ್ನಿಂದೆ ಇನ್ನು ಮೂರುಜನ ಹೆಣ್ಣು ಮಕ್ಕಳು, ಒಬ್ಬಳಿಂದೆ ಒಬ್ಬಳು ಮೈನೆರೆದು ಕುಂತರೆ? ಎಲ್ಲರು ಮನೇಲಿ ಸಾಲು ಗಟ್ಟಿ ಹೆಣ್ಣಾದರೆ? ಇವರಿಗೆ ಗಂಡುಗಳನ್ನ ಎಲ್ಲಿಂದ ಹೊಂಚ್ಬೇಕು? ಅಂಬೊ ಅನುಮಾನದ ಚಿಂತೆಯಲ್ಲಿ ಕುಂತಿದ್ದ ಕುಟುಂಬದೊಳಿಕ್ಕೆ. ಹೆಣ್ಣು ಬೇಕೆಂದು ಎಂಟ್ರಿ ಕೊಟ್ಟ ಗೌಡಣ್ಣನಿಗೆ, ಅವಳು ನರಸಮ್ಮನೆನ್ನುವವಳು. ನೋಡಲು ಮುದ್ದು ಮುದ್ದಾಗಿ ಕಂಡಿದ್ದಳು. ತಗಿ ಚಿಗಪ್ಪ ಈ ಹುಡುಗಿಗಿಂತ ಹಡುಗಿ ಇನ್ನೆಲ್ಲವಳೆ? ಸುಮ್ಮನೆ ಎಪ್ಪತ್ತಾರು ನೋಡೋದು ಬ್ಯಾಡ? ಮದುವೆ ಅಂತ ಆದ್ರೆ. ನಾನು ಈ ಹುಡುಗೀನೆ ಮದುವೆ ಆಗೋದು, ಅಂತ ಅವನಪ್ಪನತ್ತಿರÀ ಹೇಳಾಕಾಗ್ದಿದ್ದವನು, ಅವನÉದೆಗಂಟಿಕೊಂಡು ಮಾತಾಡುತ್ತಿದ್ದ ಚಿಗಪ್ಪನತ್ತಿರ. ಹಠ ಮಾಡ್ಕೊಂಡು ಹೇಳ್ತಾ ಕುಂತು ಬುಟ್ಟ.
ನರಸಮ್ಮನೆಂಬ ಆ ಹೆಣ್ಣು ಮಗಳು ಕೂಡ, ಅಷ್ಟೆ ನಯಾ ನಾಜೋಕಿನ ಹೆಣ್ಣುಡುಗಿ. ಮಾತಾಡಲು ತುಟಿಬಿಚ್ಚೀರೆ ಇದ್ದದ್ದು ಇದ್ದಂಗೆ ವದರಿ ಬಿಡುತ್ತಿದ್ದವಳು. ಬದುಕು ಬಾಳಿಗೆ ಮುಂದು ಬಿದ್ದು ಬಗ್ಗಿದರೆ, ನಾಕು ಜನ ಮಾಡುವ ಬದುಕನ್ನ, ಇವಳೊಬ್ಬಳೆ ಮಾಡಿ ಮುಗಿಸುವ ಗಟ್ಟಿಗಾತಿ ಹುಡುಗಿ. ಗೌಡಣ್ಣನ ಹೆಣುತಿಯಾಗಿ ಬಲಗಾಲು ಮುಂದಿಕ್ಕಿ, ಅವನ ಮನೆಯ ಬಾಗಿಲಿಗೆ ಬಲಗಾಲು ಮುಂದಿಕ್ಕಿ. ಬದುಕು ತಬ್ಬಿಕೊಂಬುವ ಸಲುವಾಗಿ ಬಂದಿದ್ದಳು. ಅವಳು ಬರುವಾಗ ಆ ಗಂಡ ಮನೆ, ಊರು, ಹೊಸಬರು, ಬದುಕು ಬಾಳು, ಅನ್ನುವ ತರಾವರಿಗಳನ್ನ, ಅವಳ ಎದೆ ತುಂಬ ಪೇರಿಸಿಕೊಂಡೆ ಬಂದಿದ್ದಳು, ಅದರಲ್ಲು ಆ ಗಂಡ ಅವನ ಜೊತೆ ಸುತ್ತಾಟ ದೇವಸ್ಥಾನ, ಜಾತ್ರೆ, ಸಂತೆ, ಸಿನಿಮಾ, ಮಕ್ಕಳು, ಉಣ್ಣುವ, ಉಡುವ, ಎಂಬ ಅಗಾದ್ವಾದ ಕನಸುಗಳನ್ನ, ಕೂಡಿಟ್ಟುಕೊಂಡು ಬಂದ ನರಸಮ್ಮನಿಗೆ,
ಗಂಡನ ಮನೆಯಲ್ಲಿ ಯಾವುದು ತೃಪ್ತಿ ಕೊಡಲಿಲ್ಲ, ದಿನ ಕಳದಂತೆ ಕಳದಂತೆ, ಎಲ್ಲರನ್ನು ಕಚ್ಚಿಕೊಂಡು, ಹೊಂದಿಕೊಳ್ಳಬೇಕೆನ್ನುವ ಮನೆಯಲ್ಲಿ. ಅವಳಿಗೆ ವಿರುದ್ದವಾದ ಕೆಲಸಗಳು, ಅಮ್ಮಯ್ಯ ನಾವೇಳೀದ್ದು ನೀನು ಮಾಡ್ ತಾ ಹೋಗು. ಹೆಚ್ಚಿಗೆ ಕೆಮ್ಮು ಬ್ಯಾಡ? ಅತ್ತೆಯೆಂಬೋಳ ಆಜ್ನೆಯ ಕೈಗಳು ಬಲವಾಗಿ ಬೀಸಲಾರಂಬಿಸಿದ್ದವು. ನರಸಮ್ಮನ ಮನಸ್ಸಿಗೆ ಮೆಚ್ಚುಗೆಯಾಗದ ಸಮೇವುಗಳು(ಸಂದರ್ಭಗಳು) ಬೇಕಾದಷ್ಟು ಅಂದರೆ ಅವಳ ಮನೆಯಲ್ಲಿ ಎಲ್ಲರು ನಕ್ಕಾಗ ಮಾತ್ರ ಇವಳು ನಗಬೇಕು, ಅವರು ಮಾತಾಡ್ದಾಗ ಮಾತ್ರ ಇವಳು ಮಾತಾಡ್ಬೇಕು, ಅವಳಿಗೆ ಅವಳೆದೆಯ ನಗುವು ಮಾತುಗಳೆಂಬೋವು ಸ್ವಂತಕ್ಕಿಲ್ಲದಂಗೆ ತುಳಿಯತೊಡಗಿದರು. . ರಾತ್ರೆಲ್ಲ ಗೌಡಣ್ಣನ ಮೊಗ್ಗುಲಿಗೆ ಮೊಗ್ಗುಲಾಗಬೇಕಿತ್ತು. ಬೆಳಕರಿದು ಎದ್ದರೆ ವಿಪರೀತ ಕೆಲಸ ಕಾರ್ಯಗಳನ್ನೆಲ್ಲ. ಇವಳೊಬ್ಬಳÀ ತಲೆಮ್ಯಾಲೆ ಒರಗಿಸಿ ಬಿಡುವಂತ ಬಾವ ಬಾವನೆಂಡತಿಯ ಕಾಟಬ್ಯಾರೆ ಇವರ ಜೊತಿಗೆ ಅತ್ತೆ ಮಾವ, ಇನ್ನು ಮದುವೆಯಿಲ್ಲದ ಒಬ್ಬ ಚಿಕ್ಕ ನಾದುನಿಯೆಂಬೋಳು ಸೇರಿಕೊಂಡು. ನರಸಮ್ಮನನ್ನ ಮಾತಿನೊಳಗೆ, ಬದುಕಿನೊಳಗೆ, ಭಾವನೆಯೊಳಗೆ, ಅವರವರಜಾಣತನದಲ್ಲಿ ಚಿವುಟುತ್ತಿದ್ದರು. ಮನೆಯ ಒಳಗು, ಹೊರಗು, ಸಣ್ಣುದು ಪುಟ್ಟುದು, ಕುಂತರು ನಿಂತರು, ಯಾವುದೊಂದಕ್ಕು ನರಸಮ್ಮನನ್ನೆ ಬಳಸಿಕೊಳ್ಳತ್ತಿದ್ದ, ಆ ಮನೆಯ ಹಿರಿಯರು ಕಿರಿಯರೆಲ್ಲ, ಅವಳುನ್ನ ಅಸಡ್ಡೆಯಾಗಿ. ಮತ್ತು ಸದರವಾಗಿ ನೋಡಾಕ್ ನಿಂತರು. ಇನ್ನು ಆ ಗಂಡನಾದ ಗೌಡಣ್ಣನೆಂಬೋನು, ದಿನಗಳು ಸವದಂಗೆಲ್ಲ, ಆ ಹುಡುಗಿ ಕಡೆ ನಿಗಾ ಕಡಿಮೆ ಮಾಡಾಕ್ ನಿಂತಕಂಡ. ಯಾಕೆಂದರೆ ಅವನ ಮನಸ್ಸಿನೊಳಗೊಂದು, ದುಡ್ಡೆಂಬೊ ದೊಡ್ಡ ದೆವ್ವವೊಂದು ಹೊಕ್ಕಿಕೊಂಡಿತ್ತು, ಲೇ ಲೋಕ ಇವತ್ತು ಬರೆ ದುಡ್ಡಿರೋರುನ್ನೆ ನೋಡುತೈತ್ಕಣಲ. ಮದ್ಲು ದುಡ್ಡು ಕಣ್ಲ, ಆಮ್ಯಾಲ್ ಕೆಲಸ ಕಣಲ, ದುಡ್ಡಿನ್ ಮುಂದೆ ಎಲ್ಲ, ಅದಿಲ್ಲದಿದ್ರೆ ಏನೂ ಇಲ್ಲ? ಅನುತ ಅವನು ಮಾತಾಡಲು ಬಾಯಿ ತಗದಾಗಲೆಲ್ಲ, ಅವನಾಗವನೆ ಪ್ರಾಕ್ಟೀಸ್ ಮಾಡಿಕೊಂಡಿದ್ದ ಗೌಡಣ್ಣನ ಮುಂದೆ. ನರಸಮ್ಮನೆಂಬ ಹೆಣುತಿ. ಏನೊಂದು ದೂಸುರ ಮಾತಾಡದಂಗಾದ್ಲು, ಬರಿ ರಾತ್ರಿ ಹೊತ್ತಿನಲ್ಲಿ ಮಾತ್ರವೆ, ಇವನ ಮೊಗ್ಗುಲಿಗೆ ಅವಳು ಬೇಕಾದಂತ ಹೆಣ್ಣಾಗಿ ಕಾಣುತ್ತಿದ್ದಳು. ಮತ್ತೆ ಬೆಳಕರಿದರೆ ಬದುಕು ಮಾಡು ಹಿಟ್ಟುಣ್ಣು, ಹೆಚ್ಚಿಗೆ ಬಾಯೋದಂಗೆ ಮಾತಾಡುಬ್ಯಾಡ. ಎಂದು ಕಡ್ಡಿ ತುಂಡಾಗಂಗೆ ಹೇಳ್ತ್ತಿದ್ದ ಗೌಡಣ್ಣನಿಗೆ, ಕೈಯ್ಯಿ ನೋಯುಬಾರದು, ಮೈಯ್ಯಿ ನೋಯುಬಾರದು, ದುಡ್ಡು ಮಾತ್ರ ಜೇಬು ತುಂಬತಿರ್ಬೇಕು. ಎನ್ನುವ ಈ ಕಿಲಾಡಿ ಆಸಾಮಿಗೆ, ಆ ದುಡ್ಡೇನ್ನುವುದು ಯಾವ್ ಯಾವ್ ಮೂಲದಿಂದ ಬರಬಹುದು, ಎಂತೆತೊರುನ್ನ ಯಾಮರಸ್ ಬಹುದು. ಎಂಬ ಲೆಕ್ಕಾಚಾರದೊಳಗೆ ಮೂವತ್ತು ಮೂರುಗಳಿಗೇಲು ಒದ್ದಾಡ್ತಿದ್ದ. ಆದರೆ ಗೌಡಣ್ಣನೆಣುತಿ ಮಾತ್ರ, ಅವರ ಕುಟುಂಬಕ್ಕೆ ಅವರ ಭಾವನೆಗಳಿಗೆ ವಿರುದ್ದವಾದವಳು. ಅನುವು ತನುವು, ದಯೆ ದಾಕ್ಷಿಣ್ಯ, ನಮ್ಮವರು ತಮ್ಮವರು ಅಂತ ನೆಚ್ಚಿಕೊಂಡು ಬಂದವಳು,
ಅವಳಿಗಾಗುತ್ತಿರುವ ಇತಿಗತಿಗಳನ್ನೆಲ್ಲ, ತವರು ಮನೇಲಿ ಹೇಳಿಕೊಂಡರೆ. ಅಮ್ಮಯ್ಯ ಕೊಟ್ಟೆಣ್ಣು ಕುಲಕ್ಕೊರುಗು. ನಿನ್ ಪಾಲಿಗೆ ಬಂದಿದ್ದೆಲ್ಲ ನೀನೆ ನೀಚ್ ಬೇಕಮ್ಮಯ್ಯ. ಏನೊ ಎರಡುದಿನ ಬಾದೆ ಬಿದ್ದು ತೀರಿರೆ, ನಿನಗು ಒಳ್ಳೆ ದಿನಗಳು ಬಂದೆ ಬರ್ ತ್ತಾವೆಂದು. ಕಣ್ಣೋರೆಸಿ ಕಳಿಸುತ್ತಿದ್ದ ತವರಿನÀಲ್ಲಿ, ಏನೇಳಿಕೊಂಡರು ಪ್ರಯೊಜನವಿರಲಿಲ್ಲ, ಅವಳಿಗೆ ಮನೆಯವರ ಹಿಂಸೆಗಿಂತ, ಬೆಳಕರಿದರೆ ಸಾಕು ಶರೀರದ ಬಾದೆಯೊಳಗೆಲ್ಲ ಅತಿ ಮುಖ್ಯವಾದ ಬಾದೆ. ಅದು ಲೆಟ್ರಿನ್ನಿಗೋಗುವ ಬಾದೆಯೆನ್ನುವುದು. ಬಹುದೊಡ್ಡ ಸಮಸ್ಯೆಯಾಗಿ ಅವಳನ್ನ ಕಾಡಾಕ್ ನಿಂತಕಂತು.
ಅದು ಯಾಕೆಂದರೆ ಅವಳು ಹುಡುಗಿಯಿಂದಲುಕೂಡ, ಈ ಲೆಟ್ರಿನ್ನಿಗೆ ಹೋಗುವ ವಿಚಾರದಲ್ಲಿ ಬೇಕಾದಷ್ಟು ಪಾಡು ಪಟ್ಟುಕೊಂಡು ಬಂದವಳು. ಅವಳ ತವರು ಮನೆಯಲ್ಲೆ ಅದಕ್ಕಾಗಿ ಪರಿಹಾರವನ್ನು ಕೂಡ ಕಂಡುಕೊಂಡು ಬಂದಿದ್ದ ನರಸಮ್ಮ. ಇಲ್ಲಿ ಗಂಡನ ಮನೆಯೊಳಗೆ ಶೌಚಕ್ಕೆಂದು ಹೋಗಲು, ಬಾತ್ ರೂಮು ಇದ್ದರು ಇಲ್ಲದಂತಾಗಿ. ಚೊಂಬಲ್ಲಿ ನೀರಿಡುಕೊಂಡು. ಒಂದು ಮೈಲಿಗಟ್ಟಲೆ ದೂರ ಹೋಗಬೇಕಾದ ಪರಿಸ್ಥಿತಿಯನ್ನ ಎದುರಿಸಬೇಕಾಯಿತು ಅವಳು ಚೊಂಬಿಡುಕೊಂಡು ಶೌಚಕ್ಕೆಂದು ನಡೆಯುತ್ತ ಹೊರಟಾಗ. ಈಶೌಚಕ್ಕಾಗಿಯೆ ಅವಳ ಬಾಲ್ಯದಲ್ಲಿ, ಪಾಡು ಪಟ್ಟಿದ್ದ ಪಡಿಪಾಟಲೆಲ್ಲವು ನೆನಪಾಗುತ್ತಿದ್ದವು.
ನರಸಮ್ಮ ಒಂದನೆ ತರಗತಿಗೆ ಇಸ್ಕೂಲಿಗೆ ಸೇರಿಕೊಂಡ ಲಾಗಾಯಿತಿನಿಂದ, ಅವಳ ವಾರಿಗೆ ಹುಡುಗಿಯರ ಜೊತೆಯಲ್ಲಿ, ಇಸ್ಕೂಲಿನಿಂದ ಮೂತ್ರಮಾಡಲು ಆಚೆ ಹೋಗುವಾಗಲೆಲ್ಲ. ಮೇಷ್ಟ್ರುಗಳತ್ತಿರ ಹೇಳಿಕೊಳ್ಳÀಲು ನಾಚಿಕೆ ಪಡುತ್ತಿದ್ದ ಹುಡುಗಿಯರು. ಹಲವಾರು ಸಮಸ್ಯೆಗಳನ್ನ ಎದುರಿಸಿದ್ದರು. ಹನ್ನೆರೆಡು ಘಂಟೆಗೊಂದು ಸಾರಿ, ಮದ್ಯಾನ ಮೂರು ಗಂಟೆಗೊಂದು ಸಾರಿ, ಅವರವರ ತರಗತಿ ಮೇಷ್ಟ್ರುಗಳು ಮೂತ್ರ ಮಾಡಲು. ಹುಡುಗರನ್ನೆಲ್ಲ ಆಚೆ ಬಿಡುತ್ತಿದ್ದರು. ಶೌಚಾಲಯವಿಲ್ಲದ ಆಶಾಲೆಯಲ್ಲಿ. ಅವಳ ಇಸ್ಕೂಲಿನಿಂದೆಯೆ ಇದ್ದ. ಬಸವರಾಜಪ್ಪನ ಮನೆಹಿಂದಿನ ಬಣವೆ ಮರೆಯಲ್ಲಿ, ಬಚ್ಚಿಟ್ಟುಕೊಂಡು ಮೂತ್ರ ಮಾಡಿ ಬರ್ತಿದ್ದರು. ಬೆಳಗಿನಿಂದ ಸಂಜೆವರುಗು ದನಾ ಹೊಡಕಂಡು ಹೋಗುತ್ತಿದ್ದ ಬಸವರಾಜಪ್ಪನಿಗೆ, ಅವನ ಮನೆಯ ಪಕ್ಕದಲ್ಲಿ, ತಡೆಯಲಾರದಂತ, ಮೂತ್ರದ ವಾಸನೆ ಬರಲಾಗಿ. ಬಸವರಾಜಪ್ಪನಿಗೆ ಇದು ಇಸ್ಕೂಲಿನುಡುಗರ ಪಜೀತಿಯೆಂದು ಗೊತ್ತಾಗ್ಬಿಡುತು. ಅವನೊಂದು ದಿನ ದನಾ ಮೇಯಿಸಲು ಹೋಗ್ದಂಗೆ, ಮನೇಲೆ ಕಾವಲು ಕುಂತಿದ್ದವನು. ಒಳ್ಳೆ ಮಟ ಮಟ ಮದ್ಯಾನ ಹನ್ನೆರೆಡು ಘಂಟೇಲಿ, ಬಣವೆ ಮೊಗ್ಗುಲಿಗೆ ಮೂತ್ರ ಮಾಡಾಕ್ ಬಂದಿದ್ದ, ಎರಡು ಮೂರು ಹೆಣ್ಣುಮಕ್ಕಳ ಜಡೆ ಇಡುಕೊಂಡು, ದರದರನೆ ಇಸ್ಕೂಲಿನ ಆಪೀಸು ರೂಮಿಗೆ ಎಳುಕೊಂಡು ಬಂದಿದ್ದ. ಆ ಬಸವರಾಜಪ್ಪನ ಕೈಯೊಳಗೆ ಈ ನರಸಮ್ಮನು ಇದ್ದಳು. ಸಾ ಈ ಲೌಡಿ ಮುಂಡೇರು, ನಮ್ ಬಣವೆ ಮೊಗ್ಗುಲಿಗೆ ಬಂದು ದಿನಾ ಉಚ್ಚೆ ಉಯ್ಯಿತಾರಲ್ಲ ಸಾ. ಇದೇನಾ ದಿನಾ ನೀವು ಪಾಠ ಮಾಡಿರೋದು? ಎಂದವನ ವ್ಯಂಗ್ಯದ ಮಾತಿಗೆ, ಅಲ್ರಿ ಬಸವರಾಜಣ್ಣ ಏನೋ ಹೆಣ್ಣು ಮಕ್ಕಳು ಗೊತ್ತಿಲ್ಲದೆ ಬಂದವರೆ. ಇನ್ನೊಂದಿನ ಕಳಸಲ್ಲ ಬುಡ್ರಿ. ಇವು ನಿಮ್ ಮಕ್ಕಳೆ ಅಂತ ಬುಟ್ಟುಬುಡ್ರಿ ಅಂದ ಮೇಷ್ಟ್ರು ಮಾತನ್ನ ಕೇಳಿಸಿಕೊಂಡ ಬಸವರಾಜಪ್ಪ. ರೀ ಮೇಷ್ಟ್ರೇ ಯಾವ್ ಮಕ್ಕಳಾದ್ರೇನ್ರೀ? ನಮ್ ಬಣವೆ ಜಾಗಾನೆಲ್ಲ ಕುಲುಗೆಡಿಸಿ ಗಬ್ಬು ನಾತಾ ಮಾಡವರಲ್ರಿ. ಎಂದ ಬಸವರಾಜಪ್ಪನ ಎದುಸಿರು, ಬಸ ಬಸನೆ ಈಚೆ ಬಂತು, ಸಿಟ್ಟಕಾ ಬ್ಯಾಡ ಬಸವರಾಜಣ್ಣ, ಏನೊ ಹೆಣ್ಣು ಮಕ್ಕಳು ಮುಚ್ಚು ಮರೆ ಬೇಕಂತ. ಅಲ್ಲಿಗೆ ಬಂದು ಉಯಿದಿರಬೇಕು. ನಾವ್ಯಾರು ಕಳಿಸಿಲ್ಲ ಸ್ವಾಮಿ, ಇವತ್ತಿನಿಂದ ಬುದ್ದಿ ಹೇಳ್ತೀವಿ ಬುಡ್ರಿ, ಎಂದು ಹೆಡ್ ಮೇಷ್ಟ್ರು ಇನ್ನೊಂದು ಸಲ ನಯವಾಗಿ ಹೇಳಿದ ಮಾತಿಗೆ. ಬಸವರಾಜಪ್ಪನ ಮೈ ಬಗ ಬಗನೆ ಉರಿ ಹತ್ತಿ. ರೀ ಮೇಷ್ಟ್ರೇ ಚೆನ್ನಾಗೇಳ್ತೀರ ಕಣ್ರಿ. ಮುಚ್ಚು ಮರೆ ಬೇಕಂದ್ರೆ, ನಿಮ್ಮನೆ ಬಾಗ್ಲಿಂದಕ್ಕೆ ಕರ್ಕಂಡೋಗಿ ಉಯಿಸಕಳ್ರಿ. ನಮ್ ಕೊಂಪೆ ಬಾಗ್ಲು ಯಾಕ್ರಿ ಹಾಳ್ಮಾಡಸ್ತೀರ? ಅಂತ ಮೈಮ್ಯಾಲೆ ಬಂದವನಂತೆ ಬೈದಾಡಿದ್ದ, ಆ ಘಳಿಗೇಲಿ ಹೆಡ್ ಮೇಷ್ಟ್ರುಗು ತಾರಾ ಮಾರಿ ಸಿಟ್ಟು ಬಂದು, ಅಲ್ಲಿಗೋಗಿದ್ದ ಹೆಣ್ಣು ಮಕ್ಕಳನ್ನೆಲ್ಲ ಹಿಗ್ಗಾ ಮುಗ್ಗಾ ಬೈದುಬಿಟ್ಟಿದ್ರು. ನಾಳೆಯಿಂದ ಟಾಯ್ಲೆಟ್ಟಿಗೆ ಬಿಟ್ಟಾಗ, ಆ ಗುಂಡಯ್ಯನ ಹಳ್ಳದೊಳಕ್ಕೋಗಿ ಉಯಿದುಬರ್ರಿ. ಅಂತ ಮೇಷ್ಟ್ರು ಹೆಣ್ಣು ಮಕ್ಕಳಿಗೆ ಆಜ್ಞೆ ಮಾಡೀರು. ಹುಡುಗಿಯರು ಆವತ್ತಿನಿಂದ, ಗಂಡಯ್ಯನ ಹಳ್ಳಕ್ಕೋಗಿ, ಉಯಿದು ಬರುತ್ತಿದ್ದ ಒಂದೆರೆಡು ವಾರಕ್ಕೆ, ಸಾ ನಾವು ಟಾಯ್ಲೆಟ್ಟಿಗಂತ, ಆ ಹಳ್ಳದೊಳಿಕ್ಕೆ ಇಳುದ್ರೆ ಸಾಕು ಸಾ. ನಮ್ಮೂರಲ್ಲಿರೊ ತಿಕ್ಕಲ ಸೀನ ಅಂಬೋನು, ಬಂದು ಬಗ್ಗಿ ಬಗ್ಗಿ ನೋಡ್ತ್ತಾನೆ ಸಾ. ಎಂದು ಹೇಳುತ್ತಿದ್ದ ಹೆಣ್ಣುಮಕ್ಕಳ ಮ್ಯಾಲೆ, ಆ ತಿಕ್ಕಲ ಸೀನ ಒಂದು ದಿನ ಕಲ್ಲುಗಳನ್ನ ಬೀರಾಕು ಶುರುವಚ್ಚಿಕೊಂಡ. ಅಂತದ್ದೊಂದು ಕಲ್ಲು ಎಸೆದ ಸಮೇವಿನೊಳಗೆ, ಅದು ಏಳನೆ ತರಗತಿ ಮೀನಾಕ್ಷಿ ಎನ್ನುವವಳ ಕಣ್ಣುಬ್ಬಿಗೆ ತಗುಲಿತ್ತು. ಆ ಹುಡುಗಿ ಕೀರಾಡ್ತ ಬಂದವಳ ಹಣೆಯ ಮೇಲೆ, ಹರಿಯುತ್ತಿದ್ದ ರಕುತವನ್ನ ಕಂಡು. ಊರ್ನವರು ಮತ್ತು ಮೀನಾಕ್ಷಿಯ ಅಪ್ಪ. ಅವಳ ಅಮ್ಮ. ಎಲ್ಲಾರು ಓಡು ಬಂದ್ರು. ಅವಳ ಅಪ್ಪ ಈಸಲ ಬಂದೋನೆ ಬಂದು, ಎಡ್ ಮೇಷ್ಟ್ರುನ್ನ ಕೊಳ್ಳು ಪಟ್ಟಿ ಹಿಡುಕೊಂಡು, ಲೇ ನೀನು ಯಾವ್ ಸೀಮೆ ಹೆಡ್ಮೇಷ್ಟ್ರಲ?ಇವತ್ತು ಆ ಹುಡುಗಿಗೆ ಕಲ್ಲು ಬಿದೈತೆ. ಬಚ್ಚಾವಾಗಿದ್ದೀಯ, ಬದ್ಲಾಗಿ ಆ ಹುಡುಗಿ ತಲೆನೆ ಹೊಡದೋಗಿದ್ರೆ. ನೀನ್ ಕಟ್ಟಿಕೊಡತೀಯೇನಲೆ? ಎಂದ ಬಸವರಾಜಪ್ಪನ ಮಾತಿಗೆ, ಏನ್ರಿ ನೀವು ಹೊಟ್ಟಿಗೆ ಮಣ್ಣು ತಿಂತೀರೊ? ಅನ್ನ ತಿಂತೀರೊ? ಆ ಮೊಗಾನ ಕಲ್ಲಲ್ಲಿ ಹೊಡೀರಿ ಅಂತ, ನಿಮ್ಮೂರ್ನವರಿಗೆ ನಾನ್ಹೇಳ್ಕÉೂಟ್ಟಿದ್ದೀನೇನ್ರಿ? ಮಾತಾಡೋವಾಗ ಪ್ರಜ್ಞೆ ನೆಟ್ಟಗಿರಲಿ ಕಂಣ್ರಿ ಅಂತ ಮೇಷ್ಟ್ರು ಸ್ವಲ್ಪ ವೀರಾವೇಷವಾಗೆ ಮಾತಾಡೀರು. ಅಲ್ರಿ ಮೇಷ್ಟ್ರೆ ಇವತ್ತೊ ನಾಳಿಕ್ಕೊ ಹೆಣ್ಣಾಗೊ ಹೆಣ್ಣು ಮಕ್ಕಳು, ಇಲ್ಲೇ ಇಸ್ಕೂಲಿನ ಅಕ್ಕ ಪಕ್ಕದಲ್ಲೆಲ್ಲಾದ್ರು ಬೇಲಿ ಮರೆಯಾಗೆ ಉಯ್ಯಾಕೇಳ್ರಿ. ಅಷ್ಟು ದೂರದ ಹಳ್ಳದೊಳಿಕ್ಕೆ ಯಾಕ್ ಕಳಸ್ತ್ತೀರ? ಎಂದು ಒಬ್ಬರಿಗೊಬ್ಬರು ತಾರಾ ಮಾರಿಯಾಗಿ ಜಗಳವಾಡುವಾಗ. ಲೇ ತಗಿಯಲ ಅವನ್ಯಾವೋನೊ, ಹುಚ್ಚುನನಮಗ ಹೊಡದಿರಾದಿಕೆ, ಮೇಷ್ಟ್ರೇನ್ಮಾಡ್ತಾರಲ?ಆ ತಿಕ್ಕಲನನ ಮಗುನ್ನ ಕರಸಿ, ನಿಮ್ಮುಡುಗಿನ ಕಲ್ಲಲ್ಲಿ ಹೊಡಿ ಅಂತ ಹೇಳವರೇನಲ? ಎಂದು ಅಲ್ಲಿಗೆ ಬಂದಿದ್ದ ಊರವರ ಮಾತಿಗಾಗಲೆ, ಕಾಂಪೋಂಡಿನ ತುಂಬ ಜಮಾಯಿಸಿದ್ದ, ಜನವನ್ನೆಲ್ಲ ದಾಟಿಕೊಂಡ ಹೆಡ್ ಮೇಷ್ಟ್ರು. ಆ ಮೀನಾಕ್ಷಿ ಎಂಬ ವಿದ್ಯಾರ್ಥಿಯನ್ನ. ತನ್ನ ಬೈಕಿನಮ್ಯಾಲೆ ಕೂರಿಸಿಕೊಂಡೋಗಿ, ಮಧುಗಿರಿಯ ಆಸ್ಪತ್ರೆಯೊಳಗೆ ತೋರಿಸಿಕೊಂಡು ಬಂದ್ರು.
ಮತ್ತೆ ಮಾರನೆ ದಿನದಿಂದ ಹೆಣ್ಣು ಮಕ್ಕಳೆಲ್ಲ, ಆರನೆ ತರಗತಿ ರೂಮಿನ ಹಿಂದಗಡಿಕ್ಕೆ ಟಾಯ್ಲೆಟ್ಟಿಗೋಗಬೇಕೆಂದು. ಅನೌನ್ಸ್ ಆಯಿತು. ಅಂಗಾದ ಮೂರೆ ದಿನಕ್ಕೆ, ಸಾ ನಾನು ಆ ರೂಮಲ್ಲಿ ಕುಂತು ಪಾಠ ಮಾಡಾಕಾಗಲ್ಲ ಸಾ. ತುಂಬ ಸ್ಮೆಲ್ಲು ಸಾ ಅಂತ, ಅವೆಲ್ಲ ಹೆಡ್ಮೇಷ್ಟ್ರು ಜವಬ್ದಾರಿ ಕಣ್ರಿ, ನಾವ್ಯಾಕ್ ಮಾಡಾನ? ಅವೆಲ್ಲ ಅವರೆ ಕಣ್ರಿ ಬರೆಯೋದು, ನಾವ್ಯಾಕ್ ಬರಿಯಾನ? ಎಂದು ದಿನಂಪ್ರತಿ ತಾನಾಯಿತು ತನ್ನ ರೂಮಾಯಿತು, ಎನ್ನುವ ಲೆಕ್ಕಾಚಾರದೊಳಗೆ, ಇಸ್ಕೂಲಿಗೆ ಬರುತ್ತಿದ್ದ ಗೋಪಾಲ್ ಮೇಷ್ಟ್ರು, ಆರನೆ ತರಗತಿಗೆ ಹೆಜ್ಜೆ ಇಕ್ಕದಂಗಾದ್ರು, ಇಂತ ಸಮಸ್ಯೆಗಳಲ್ಲೆಲ್ಲ ಮೂತ್ರ ಮಾಡಲು, ಶಾಲೆಯ ಮೊಗ್ಗುಲಲ್ಲಿ ಜಾಗವಿಲ್ಲದೆ, ಸಮಸ್ಯೆಯೆಂಬೋದು ದೊಡ್ಡದಾಗಿ ಕಾಡಲಾರಂಬಿಸಿತು. ಅದು ಹೆಡ್ ಮೇಷ್ಟ್ರು ತಲೆಯೊಳಗೆ, ಉಳುವಾಗಿ ಹೊಕ್ಕಿದ್ದ ದಿನಗಳು ಉರುಳುತ್ತಿರುವಾಗ. ಸೆಂಟ್ರಲ್ ಗೌರ್ಮೆಂಟಿನಿಂದ ಎಸ್, ಎಸ್, ಎ ಯೋಜನೆಯೆನ್ನುವುದೊಂದು ಹುಟ್ಟಿಕೊಂಡು. ಶಾಲೆಗಳ ಮೂಲಭೂತ ಸೌಕರ್ಯಗಳಲ್ಲಿ, ಶೌಚಾಲಯಗಳು ಕಡ್ಡಾಯವಾಗಿರಬೇಕೆನ್ನುವ ನಿಯಮದಡಿ. ಇವರ ಶಾಲೆಗು ಒಳ್ಳೆಯ ಶೌಚಾಲಯಗಳು ನಿರ್ಮಾಣವಾದವು. ಅಲ್ಲಿಂದೀಚಿಗೆ ಇಸ್ಕೂಲಿನ ಹೆಡ್ಮೇಷ್ಟ್ರು ಸ್ವಲ್ಪ ನಿರಾಳವಾದಂಗಾದ್ರು. ಊರಲ್ಲಿ ಶೌಚಾಲಯದ ಸ್ವಚ್ಚತೆ ಮತ್ತು ಗೌಪ್ಯತೆಯನ್ನ ಅರಿತುಕೊಂಡ ಮೂರು ನಾಕು ಪೋಷಕರು. ಅವರ ಸ್ವಂತ ದುಡ್ಡಿನೊಳಗೆ, ಶೌಚಾಲಯಗಳನ್ನ ಕಟ್ಟಿಕೊಂಡ ಸಮೇವಿನಲ್ಲೆ, ನರಸಮ್ಮನ ಮನೆಯಲ್ಲು ವಯಸ್ಸಿಗೆ ಬರೊ ಹೆಣ್ಣು ಮಕ್ಕಳವರೆ, ನಮ್ಮನೇಲು ಒಂದು ಲೆಟ್ರಿನ್ ರೂಮಿರಲಿ ಎಂದುಕೊಳ್ಳುತ್ತಿದ್ದ, ಅವರ ಅಮ್ಮನ ಮಾತಿಗೆ ಕಟ್ಟು ಬಿದ್ದು. ನರಸಮ್ಮನ ಅಪ್ಪ ಮನೆಯ ಹಿಂಬಾಗ ಶೌಚಾಲಯವನ್ನ ಕಟ್ಟಿಸಿಕೊಟ್ಟಿದ್ದ.
ಅಂಗಾಗೆ ನರಸಮ್ಮ ನಾಕನೆ ತರಗತಿ ಹುಡುಗಿಯಾಗಿಂದ್ಲು. ಈ ತನಕ ಅವಳೆಲ್ಲು ಬಯಲು ಶೌಚಕ್ಕೆ ಹೋದವಳೆ ಅಲ್ಲ. ಆದರೀಗ ಅವಳ ಗಂಡನ ಮನೇಲಿ. ಅಂತ ಶೌಚಾಲಯವನ್ನ ಗ್ರಾಮಪಂಚಾಯಿತಿಯ ಅನುದಾನದಲ್ಲಿ ನಿರ್ಮಿಸಿ, ಎರಡು ಮೂರು ವರ್ಷವಾಗಿತ್ತಂತೆ. ಆದರು ಅದನ್ನಯಾರು ಬಳಸ್ ಬಾರದೆನ್ನುವ. ಗೌಡಣ್ಣನ ಆಜ್ಞೆಯೊಳಗೆ ಮುಚ್ಚಿದ, ಆ ಬಾಗಿಲು ಮುಚ್ಚಿದಂಗೆ ಇತ್ತು, ಅದು ಯಾಕೆಂದು ನರಸಮ್ಮನಿಗೆ, ಮನೆಯಲ್ಲಿ ಯಾರು ನೆಟ್ಟಗೆ ಹೇಳದಾದರು. ಆದರೆ ಅವಳ ಎದುರು ಮನೆಯ ಮೆಳ್ಳೆಗಣ್ಣು ಮಂಜಿ ಎಂಬ ಹೆಣ್ಣು ಮಗಳೊಬ್ಬಳೊಬ್ಬಳು, ಈಗ ನಾಕೈದು ತಿಂಗಳ ಕೆಳಗೆ. ಹಟ್ಟಿ ಮಾರಮ್ಮನ ಹಬ್ಬಕ್ಕೆ ಬಂದಿದ್ದಾಗ, ಆ ಮಂಜಮ್ಮನೆಂಬುವ ಹುಡುಗಿಯ ಜೊತೆ. ಈ ನರಸಮ್ಮ ಪ್ಲಾಸ್ಟೀಕ್ ಚೆಂಬಲ್ಲಿ ನೀರಿಡುಕೊಂಡು ಬಯಲಿಗೆ ಹೋಗಿದ್ದಾಗ. ಇದೇ ಶೌಚದ ಅದ್ವಾನದ ಕತೆಯನ್ನ ಮಾತಾಡಿಕೊಂಡು, ಊರಾಚೆಯ ಬೇಲಿ ಸಾಲುಗಳ ಕಡೆ ಹೋಗುವಾಗ. ಯಕ ನಿನ್ ಗೌಡ ಮುನ್ನೂರು ಮೂವತ್ತು ಗಳಿಗೇಲು ದುಡ್ಡು ದುಡ್ಡು ಅಂತ ಒದ್ದಾಡ್ತಿರತಾನ್ ಕಣಕ, ಖರ್ಚು ಮಾಡೀರೆ ಇನ್ನೆಲ್ಲಿ ಅವನಪ್ಪನ ಗಂಟು, ಓಡೋಗ್ತದೊ ಅಂತ ಬಾಳುತಿರೋನು. ಇನ್ನು ನಿನಗೆ ಲೆಟ್ರಿನ್ ರೂಮಿನ ಬಾಗಲನ್ನ. ಎಲ್ ತಗುಸ್ತ್ತಾನೆ ಎಂದು ಒಗಟಾಗಿ ಮಾತಾನಾಡಿದ್ದಳು. ಅವಳ ಮಾತಿನ ಜಾಡನ್ನ ಗಮನಿಸಿದ ನರಸಮ್ಮ. ಸರಿಯಾದ ಕಾರಣ ಕೇಳಿದಾಗ. ಯಕ ಆ ರೂಮು ಕಟ್ಟಿಸುವಾಗ. ಅದರ ಕೆಳಗೆ ಲೆಟ್ರಿನ್ ಪಿಟ್ಟೆ ತಗಸದಂಗೆ ಕಟ್ಟಿಸಿಬಿಟ್ಟವನೆ, ಎಂದ ಮಂಜಮ್ಮಳ ಮಾತಿನೊಳಗೆ ಅರ್ಥ ಸಿಕ್ಕಿದ ನರಸಮ್ಮ. ಅದಿಕ್ಕೆ ಇರ್ಬೇಕ್ ಕಣೆ ಮಂಜಿ ಅದುನ್ನ ಬಳಸ್ ಬ್ಯಾಡಿ? ಅದುನ್ ಬಳಸ್ ಬ್ಯಾಡಿ? ಅಂತ ನಾನು ಬಂದು ಈಸೊರ್ಸವಾದ್ರು ಬಡಕಂತಲೆ ಇರ್ತ್ತಾನೆ, ತಿರುಗಿ ಮನ್ನೆ ದಿನ ಅವರಮ್ಮ ಮೇಯಿಸಿಕಂಡು ಬರ್ತಾಳೆನುತ, ಎರಡು ಕುರಿಮರಿ ತಂದು. ಆ ರೂಮಿನೊಳಗೆ ಕಟ್ಟಾಕ್ತಾ ಅವರೆ. ಅಂದ ನರಸಮ್ಮನ ಮಾತಿಗೆ, ಊನಕ್ಕ ನಿನ್ ಗೌಡನಂತ ಗೌಡ್ರು ಇನ್ನೊಂದಿಬ್ರಿದ್ರೆ. ಊರು ಉದ್ದಾರ ಆದಂಗೆ ಕಣಕ. ಎಂದ ಮಂಜಿಯಿಂದ ಆ ಸತ್ಯವನ್ನ ತಿಳುಕೊಂಡ ನರಸಮ್ಮ. ಯಾರು ಕೂಟೆ ಏನೂ ದೂಸುರ ಮಾತಾಡದಂಗೆ ಇದ್ದುಬಿಟ್ಟಳು. ಯಾಕೊ ಬೆಳಿಗ್ಗೆಯೆದ್ದು ಬಯಲುಕಡೆ ಹೋಗಬೇಕೆಂದರೆ. ನರಸಮ್ಮನಿಗೆ ಇನ್ನಿಲ್ಲದ ಇರುಸು ಮುರುಸು ಆಗುತ್ತಿತ್ತು. ಅಂತದ್ದರಲ್ಲಿ ಅವಳೀಗ ಏಳುತುಂಬಿ ಎಂಟುತಿಂಗಳ ಬಸುರಿ ಬ್ಯಾರೆ,
ಬಯಲು ಶೌಚ ತಪ್ಪಿಸುವ ಉದ್ದೇಶದಿಂದ, ಕೇಂದ್ರ ಹಾಗು ರಾಜ್ಯ ಸರ್ಕಾರಗಳು. ಕೋಟ್ಯಂತರ ರೂಪಾಯಿಗಳ ಅನುದಾನವನ್ನ, ಗ್ರಾಮ ಪಂಚಾಯಿತಿಗಳಿಗೆ ಬಿಡುಗಡೆ ಮಾಡಿದ್ದು. ಗ್ರಾಮಗಳ ಅನೈರ್ಮಲ್ಯವನ್ನು ಹೋಗಲಾಡಿಸಬೇಕಿದ್ದ. ಗ್ರಾಮ ಪಂಚಾಯಿತಿಗಳಲ್ಲಿ ನಿರ್ಲಕ್ಷವೆಂಬೋದು ಉಂಟಾಗಿ, ಊರಿನ ಸೌಕರ್ಯಗಳನ್ನ ತಿಳಿದು ಕೊಳ್ಳುತ್ತಿದ್ದ. ಪುಡಿ ರಾಜಕೀಯದ ಗೌಡನೆಂಬೋನು. ಈಗ್ಗೆ ಐದಾರು ವರ್ಷಗಳ ಕೆಳಗೆ, ಅವನ ಮನೆಯ ಶೌಚಾಲಯಕ್ಕೆಂದು, ಗ್ರಾಮ ಪಂಚಾಯಿತಿಯಿಂದ ಬಂದಿದ್ದ ದುಡ್ಡು ತಗಂಡು. ಪಾಯ ತಗಿಸಿ ರೂಮು ಕಟ್ಟಿಸಿದ, ಆ ಲೆಟ್ರಿನ್ ರೂಮು ಕಟ್ಟುವಾಗ, ಪಿಟ್ ಗುಂಡಿಯೆ ತಗಸದಂತೆ. ಮೇಲೆ ಲೆಟ್ರಿನ್ ಬೇಸನ್ ಕೂರಿಸಿ ಬಿಲ್ ಮಾಡಿಸಿಕೊಂಡಿದ್ದ. ಅಷ್ಟಕ್ಕೆಸುಮ್ಮನಿರಲಾರದ ಭೂಪ, ಅದೇ ಲೆಟ್ರಿನ್ ರೂಮಿಗೆ, ಒಂದೆರೆಡು ವಷರ್À ಸುಣ್ಣ ಬಣ್ಣ ಬಳಿಸಿ. ನಕಲಿ ದಾಖಲೆಗಳನ್ನ ರೆಡಿ ಮಾಡಿಕೊಂಡು. ಎರಡು ಮೂರುಸಲ ಬಿಲ್ ಮಾಡಿಸಿಕೊಂಡ. ಅಂಗೆ ಅವನ ಮಾತಿನಂತೆ ನಡೆಯುವ. ಮತ್ತೆ ಅವನ ಮಾತು ಕೇಳುವ. ಮೂರು ನಾಕು ಜನರಿಗು ಇಂತದ್ದೆ ಐಡಿಯಾಕೊಟ್ಟು. ಅವರ ಲೆಟ್ರಿನ್ರೂಮುಗಳನ್ನು ಕುಲಾ ಕರ್ಮ ಕೆಡಿಸಿದ್ದವನು, ಅವನ ಮನೇಲು ಯಾರು ಲೆಟ್ರಿನ್ ರೂಮು ಬಳಸದಂಗೆ. ತುಂಬಾ ನಿರ್ಭಂದವಾಗಿ ಎಚ್ಚರಿಸಿಬಿಟ್ಟಿದ್ದ, ಅಂತವನ ಮನಿಗೆ ಬಲಗಾಲು ಮುಂದಿಕ್ಕಿ. ಬಾಗ್ಲು ದಾಟಿ ಬಂದ ನರಸಮ್ಮನಿಗೆ, ಲೆಟ್ರಿನ್ ರೂಮಿನದೆ, ಬಹುದೊಡ್ಡಚಿಂತೆಯಾಗಿ ಕಾಡಾಕ್ ಶುರುವಾಗಿತ್ತು.
ಮನೆಗೆ ಬಂದ ಹೊಸೊಸದರಲ್ಲಿ. ಆ ಶೌಚಕ್ಕಾಗಿ ಬಯಲ ಕಡೆ ಚೊಂಬಿಡುಕೊಂಡು ಹೋಗುವಾಗ. ನರಸಮ್ಮನ ಮನಸ್ಸು ಮೈಯ್ಯಿಗೆ ಮರ್ಯಾದೆಯಿಲ್ಲವೇನೊ? ಅಂದುಕೊಂಡು ಒದ್ದಾಡುತಿದ್ದಳು, ಸ್ವಾಮಿ ಒಂದಿಸ ನಿನ್ ಮನೇಲಿ, ಹಿಟ್ಟೇ ಉಣ್ಣು ಬ್ಯಾಡ ಅನ್ನು ಉಪಾವಾಸ ಇರ್ತ್ತೀನಿ. ಆದ್ರೆ ಚೊಂಬಿಡುಕೊಂಡು, ಬಯಲ್ಕಡೆ ಹೋಗು. ಅಂಬೋದುನ್ನ ಮಾತ್ರ ಹೇಳು ಬ್ಯಾಡಕಣಪ್ಪ?ನಾನೇನು ವಾಲೆ ಕೇಳುತಿಲ್ಲ? ಜುಮುಕಿ ಕೇಳುತಿಲ್ಲ? ಇರೊ ಲೆಟ್ರಿನ್ನು ರೂಮನ್ನ ನಾನೊಬ್ಬಳಾದ್ರು ಬಳಸಂಗೆ ಮಾಡುಕೊಡು ಮಾರಾಯ. ಅಂತ ಅಂಗಲಾಚಿ ಬೇಡಿದವಳ ಮಾತಿಗೆ. ಅಮ್ಮಣ್ಣಿ ಮನೆಯವರೆಲ್ಲ ಎಂಗೊ, ಅಂಗೆ ನೀನು ಹೊಂದಿಕೊಂಡು ಬಿದ್ದಿರ್ಬೇಕು. ನೀನು ಮಾರಾಜನ ಮೊಮ್ಮಗಳು, ಬಂದಿದ್ದೀಯ ಅಂತ, ನೀನ್ ಕೇಳಿದ್ದಕ್ಕೆಲ್ಲ, ನಾವು ಕೈಲಾಸದ್ ಮ್ಯಾಲಿಂದ ಉಪ್ಪುರಿಗೆ ಇಳಸಾಕಾಗಲ್ಲ? ಇಲ್ಲ ನೀನು ಕೇಳೋ ಸೌಕರ್ಯಕ್ಕೆಲ್ಲ, ನಾನು ಖಜಾನೆ ಇಕ್ಕಿಲ್ಲ. ಇಷ್ಟುವಿದ್ರೆ ಇರು, ಕಷ್ಟವಾದ್ರೆ ರೈಟೇಳು, ಎಂದು ಅವಳ ಎದೆಯಾಗಿನ ಯಾವ ಆಸೆಯ ಮಾತು, ಎಂತ ಗಳಿಗೇಲು ಈಚೆ ಬಂದ್ರು. ಊರಿಗೆ ಮುಂಚೆಯೆ ಗಂಡನೆಂಬೊ ಗನಂದಾರಿ ನನಮಗನೆ, ದಯೆ ದಾಕ್ಷಿಣ್ಯವಿಲ್ದಂಗೆ ಬೈಯ್ಯುತ್ತಿದ್ದ. ಅದರೊಳಗಾಗಿ ನರಸಮ್ಮನ ವಾರಗಿತ್ತಿ, ಮತ್ತು ಅತ್ತೆಯ ಪಾರು ಪತ್ಯೆಯೊಳಗೆ, ಎಲ್ಲರ ಬದುಕು ಬಾವನೆಗಳು, ಆಸೆ ನಿರಾಸೆಗಳು ಶಬುದ ಮಾಡ್ದಂಗಾಗಿ. ಅವರೇಳೊ ಕೆಲಸ ಕಾರ್ಯಗಳಿಗೆ. ಬೆನ್ನು ಬಗ್ಗಿಸಿಕೊಂಡವಳ ಸ್ವಾತಂತ್ರಕ್ಕೆ. ಐನಾತಿ ಗಂಡನೆ ಮುಳುವಾಗಿದ್ದು ನೋಡಿ. ತೆಪ್ಪಗೆ ತಲೆ ಕೆಡಿಸಿಕೊಂಬದೆ, ಊರಾಚೆಯೊಳಗಿದ್ದ ಬೇಲಿಪೊದೆಯೊಳಕ್ಕೆ. ಚೊಂಬಿಡುಕೊಂಡು ಹೋಗಿ ಬರಾದನ್ನ ಕಲಿತುಕೊಂಡಳು. ಅಂತವಳ ಮುಂದಿದ್ದ ಗೌಡನೆಂಬ ಗಂಡನಿಗೆ, ದುಡ್ಡು ದುಡ್ಡು, ಮೂರೊತ್ತು ದುಡ್ಡಿನ ಚಿಂತೇಲೆ. ತೇಲಿಕೊಂಡಿದ್ದವನ ಹೆಣುತಿ ನರಸಮ್ಮನ ಬಸುರೆಂಬೋದು. ಎಂಟು ತುಂಬಿ ಒಂಬತ್ತು ತಿಂಗಳಿಗೆ ಬಲಿಯಾಕಿಡಿಯಿತು,
ಆಮನೆಯ ದೊಡ್ಡ ಸೊಸೆಯೆಂಬೋಳಿಗೆ, ಎರಡು ಹೆಣ್ಣು ಮಕ್ಕಳೆ ಹುಟ್ಟಿ. ಅವರ ಮನೆಯ ವಂಶದ ಹೆಸರೇಳಾಕಂತ. ಗಂಡು ಮುಗುವಿಲ್ಲದ ಕಾರಣ, ಇದು ಮದ್ಲೇನೇದೆ ಗಂಡಾಗ್ಲಿ, ಅಂತ ಅತ್ತೆ ಮತ್ತು ಗಂಡನ ಆಸೆಯೆನ್ನುವುದು. ಹಗಲು ಇರುಳು ಗಗ್ಗರಿಯುತ್ತಿರುವಾಗ. ನೀನಿಸಲ ಗಂಡುಮೊಗ ಹಡದ್ರೆ ಮಾತ್ರ. ನನ್ ಮನೆಗ್ ಬಾ. ಇಲ್ಲಾ ಹೆಣ್ಣೇನಾದ್ರು ಹುಟ್ಟುತು ಅಂದ್ರೆ. ನಿನ್ ತವರಲ್ಲೆ ಬಿದ್ದಿರ್ಬೇಕಾಗ್ತದೆ. ಎಂದು ಏಸೊ ರಾತ್ರಿಗಳು ಕಣಜದ ರೂಮಿನೊಳಗೆ, ನರಸಮ್ಮನ ಮೊಗ್ಗುಲಲ್ಲಿ ಮಲಗುತ್ತಿದ್ದ. ಗಂಡನ ದಬ್ಬಾಳಿಕೆಯ ಉಸಿರಲ್ಲಿ. ನಲುಗುತ್ತಿದ್ದ ನರಸಮ್ಮ, ದಿಕ್ಕು ದಿಕ್ಕಿನ ದೇವರಲ್ಲಿ, ಭಗವಂತ ನನಗೆ ಗಂಡುಮೊಗುವೆ ಕೊಡಬೇಕು ತಂದೆ. ಎಂದು ಇನ್ನಿಲ್ಲದಂಗೆ ಬೇಡಿಕೊಂಡಿದ್ದಳು. ಹೆಣ್ಣೊ? ಗಂಡೊ? ಅವೇನು ನಾವು ಕೈಯಲ್ಲಿ ಮಾಡಿಕ್ಕೆಣುವ ಗೊಂಬೆಗಳ? ದೇವರು ಕೊಟ್ಟಿದ್ದು ನಾವು ಪಡೀಬೇಕುತಾನೆ ಅಂತ ಎಷ್ಟೋ ಸಲ ಅದೆ ಮೆಳ್ಳೆಗಣ್ಣು ಮಂಜಮ್ಮನೆಂಬ ಹೆಣ್ಣು ಮಗಳು ಸಮಾದಾನ ಮಾಡಿದ್ದಳು. ಗಂಡಾದರೇನು? ಹೆಣ್ಣಾದರೇನು? ಎಲ್ಲಾರನ್ನು ಒಂದುದಿನ ಗುಂಡಿಗಿಕ್ಕಾದೆ ತಾನೆ. ಅನ್ನುವ ಅರಿವಿಲ್ಲದವರ ಮದ್ಯೆ ಎಣಗಾಡುತ್ತಿದ್ದ ನರಸಮ್ಮನಿಗೆ. ಇನ್ನು ಹದಿನೈದು ದಿನಕ್ಕೆ ಎರಿಗೆಯಾಗುತ್ತದೆಯೆಂದು. ಮುದ್ದೇನಳ್ಳಿ ಡಾಕ್ಟ್ರು ಟೈಮ್ ಕೊಟ್ಟಿದ್ರು.
ಹೆರಿಗೆಯ ದಿನಗಳಿನ್ನು ದೂರವಿರುವುದೆಂದು. ದಿನಗಳನ್ನ ಎಣಿಸುತ್ತಿದ್ದ ನರಸಮ್ಮನಿಗೆ, ಆವತ್ತು ರಾತ್ರಿಯೆ ಬಿಟ್ಟು ಬಿಟ್ಟು. ಹೊಟ್ಟೆ ನೋವು ಕಾಣಿಸಿ ಕೊಂಡಿತ್ತು. ಬೆಳಕರಿದರೆ ಶೌಚಕ್ಕೆ ಹೋಗ್ಬೇಕನಸುತು. ತುಂಬಿದ ಬಿಮ್ಮನಿಸಿ, ಒಬ್ಬಳೆ ಹೊರಗಡೆ ಹೋಗಾದು ಬ್ಯಾಡವೆಂದು, ದಿನವು ಅವಳ ಬಾವನ ಮಗಳನ್ನ ಜೊತೇಲಿ ಕರೆದುಕೊಂಡು ಹೋಗುತಿದ್ದಳು. ಆವತ್ತು ಅವಳಿಗೇನು ಮುಚ್ಚಿಕೊಂಡಿತ್ತೊ? ಏನೊ? ಶೌಚಕ್ಕೆ ಹೋಗಲೆ ಬೇಕೆನ್ನುವ ಅರ್ಜೆಂಟಿನೊಳಗೆ. ಜೊತೆಯ ಹುಡುಗಿಯನ್ನ ಬಿಟ್ಟು. ಅಂಗೆ ಒಬ್ಬಳೆ ಹೋದ ನರಸಮ್ಮನಿಗೆ, ಊರಾಚೆಯ ಬೇಲಿಪೊದೆಯಲ್ಲಿ. ಲೆಟ್ರಿನ್ನಿಗೆ ಕುಂತಿರುವಾಗಲೆ ಹೆರಿಗೆಯಾಗಿಬಿಡುತು. ಮೊಗು ಹುಟ್ಟಿದ ಕೂಡಲೆ, ಅವಳು ಅಲ್ಲೆ ಸುಸ್ತಾಗಿ ಬಿದ್ದುಬಿಟ್ಟಳು ಅದೆಷ್ಟೋತ್ತಾಗಿತ್ತೋ ಏನೊ? ಯಾರಿಗು ಗೊತ್ತಾಗಿಲ್ಲ, ಮುದ್ದಾದ ಗಂಡು ಮೊಗವೊಂದನ್ನ ಐದಾರು ನಾಯಿಗಳು, ರೋಡಿಗೆ ಎಳುಕೊಂಡು ಬಂದು ತಿನ್ನವಾಗ. ಯಾರೊ ಊರಿನಲ್ಲಿ ಓಡಾಡುವ, ಅದೇ ದಾರಿಯಲ್ಲಿ ಹೋಗುತ್ತಿದ್ದ ಒಂದಿಬ್ಬರು ಗಂಡಸರು ನೋಡಿಕೊಂಡು. ನಾಯಿಗಳನ್ನ ಅಟ್ಟಾಡಿಸುತ್ತ, ಊರೊಳಕ್ಕೆ ಓಡೋಗಿ ಗೌಡನ ಮನೇರಿಗೆ ಸುದ್ದಿ ಮುಟ್ಟಿಸಿದರು ದಡಾ ಬಡಾಯಿಸಿಕೊಂಡು ಮನೆಯವರೆಲ್ಲ ಓಡ್ಬಂದು ನೋಡೊ ಹೊತ್ತಿಗೆ. ನರಸಮ್ಮ ಆಗಿನ್ನ ಅರ್ದಂಬರ್ದ ಕಣ್ಣು ತಗಿಯುತ್ತಿದ್ದಳು. ಅವಳ ಗರ್ಭದ ರಕ್ತವೆನ್ನುದು, ವಿಪರೀತವಾಗಿ ಮಣ್ಣು ಸೇರಿತ್ತು. ಅಲ್ಲಿಗೆ ಬಂದವರೆಲ್ಲ ಎಲ್ಲಿ ಮೊಗಾ, ಮೊಗ ಎಲ್ಲಿ, ಎಂದು ತಡಬಡಾಯಿಸುವ ಹೊತ್ತಿಗಾಗಲೆ. ದೂರದಲ್ಲಿ ನಾಯಿಗಳನ್ನ ಓಡಿಸುತ್ತಿದ್ದ ಗಂಡಸರ ಅಬ್ಬರಕ್ಕೆ. ಇವರ ಮುಂದೆಯೆ ತಪ್ಪಿಸಿಕೊಂಡೋಗುತ್ತಿದ್ದ, ನಾಯಿಯ ಬಾಯಲ್ಲಿ, ಕೆಂಪು ಕೆಂಪಾದ ಎಳೆಯ ಕೈಯ್ಯೊಂದು ಜೋತಾಡುತ್ತಿತ್ತು.
-ವಿಜಯಾಮೋಹನ್