ಗೋರಿಯ ಸುತ್ತ ಸಪ್ತಪದಿ ತುಳಿದಾಗ…: ಶಿವಲೀಲಾ ಹುಣಸಗಿ ಯಲ್ಲಾಪುರ

ಅವಳೊಮ್ಮೆ ನೋಡಿದಾಗ ಕರುಳು ಕಿವುಚಿದ ಅನುಭವ. ದೈವಕ್ಕೊಂದು ಹಿಡಿಶಾಪ ಹಾಕಬೇಕೆನ್ನಿಸಿತು. ಅವನಾದರೋ ಹೇಳ ಹೆಸರಿಲ್ಲದೇ ತರಗಲೆಯಂತೆ ಮಣ್ಣೋಳು ಮಣ್ಣಾಗಿ ಹೋದ. ಗೋರಿ ಮೇಲೊಂದಿಷ್ಟು ಗರಿಕೆ ಹುಲ್ಲು ಬೆಳೆದು ಅವನು ಪುನಃ ಚಿಗುರಿದನೆಂಬ ನಂಬಿಕೆ ಅವಳಲ್ಲಿ. ಪ್ರತಿನಿತ್ಯ ಗೋರಿಗೊಂದು ಹೂ ಇಟ್ಟು ಊದಿನಕಡ್ಡಿ ಹಚ್ಚಿ ಗರಿಕೆ ಹುಲ್ಲು ಕೊಯ್ದಕೊಂಡು ಎರಡು ಮೂರು ಸಲ ಕಣ್ಣಿಗೆ ಒತ್ತಿಕೊಂಡು ಹೀಗೆ ಹುಟ್ಟುವ ಮನಸ್ಸಿದ್ದರೆ ನನ್ಯಾಕೆ ಮದುವೆಯಾದೆ? ದಿಕ್ಕುದಿಸೆಯಿಲ್ಲದೆ ಮರೆಯಾಗಿ ಹೋದಿ ಏಕೆ? ಎಂಬ ಸಂಕಟವನ್ನು ಹೊರ ಚೆಲ್ಲುವ ಅವಳಿಗೆ ಸಂತೈಸುವ ಪರಿವೆಯ ಅರಿಯದೆ ಮರದ ಹಿಂದೆ ಅಡಗಿ ಅವಳ ಆರ್ತನಾದ ಕೇಳುವ ದೌರ್ಭಾಗ್ಯ ಇವನಿಗೆ ಒದಗಿರುವುದು ವಿಪರ್ಯಾಸ.

ನನಗಾವ ಹಂಗಿಲ್ಲವೆಂದು ಮೆರೆದು ಮಣ್ಣಾದವನ ಮೂಳೆ ಯ ಹಂದರ ಉಳಿಸಿ ಹೋಗುವುದು ದಿಟವೆಂಬುದು ಅವ ಳಿಗೂ ಗೊತ್ತಿತ್ತು. ಇಡೀ ಆಗಸವೇ ಕಳಚಿ ತಲೆಯ ಮೇಲೆ ಬಿದ್ದ ಅನುಭವ. ನನಗಾರಿಲ್ಲ ದಿಕ್ಕು ಇನ್ನು ಹೇಗೆ ನಿರ್ವಹಣೆ ಎಂಬ ಆತಂಕದಲ್ಲಿ ದಿನೆ ದಿನೆ ಮರಗಟ್ಟುವ ಅವಳ ನೋ ಡಿ ಆತಂಕ ಅವನ ಕಂಗಾಲಾಗಿಸಿತ್ತು. ಹೇಗೆ ಸಂತೈಸಲಿ? ನಿನಗಾರಿಲ್ಲವೆಂಬ ದುಃಖ ಬಿಡು. ನಿನ್ನ ಜೊತೆ ನಾನಿರುವೆ ನೆಂದು ಹೇಳಲಾಗದೇ ಒಳಗೊಳಗೆ ಒದ್ದಾಡುತ್ತಿದ್ದ. ನಾನು ಸ್ವಾರ್ಥಿಯಾದೆನೆಂಬ ಮನಸ್ಥಿತಿ. ಅವಳಿಲ್ಲಿ ಬೇರು ಬಿಟ್ಟರೆ? ನಾನು ಅದಕಾಗಿಯೇ ಕಾಯುತ್ತಿದ್ದೆನೆಂದು ತಿಳಿದು ದೂರವಾದರೆ? ಛೇ. . ಅದೆಂಥಾ ಮನೋಭಿಲಾಷೆ ಇಂಥ ಸಮಯದಲ್ಲಿ ನಾನು ಅವಳನ್ನು ಮಾತಾಡಿಸದಿರುವುದೇ ಒಳಿತೆಂಬ ಭಾವದಲ್ಲಿ ಮೌನ ತಾಳಿದ. ಎಲೆಗಳ ಮೇಲೆ ಹೆಜ್ಜೆ ಇಡುವಾಗ ಭಯಪಟ್ಟೆ ರೋಧಿಸುವ ಅವಳ ಕಿವಿಗಳಿಗೆ ನನ್ನಿಂದಾಗಿ ತೊಂದರೆ ಬೇಡವೆಂದು ಮೆಲ್ಲಗೆ ಅಲ್ಲಿಂದ ಮರೆಯಾದ.

ಅವನಿಗವಳೆಂದರೆ ಎಲ್ಲಿಲ್ಲದ ಹಬ್ಬದ ತೇರು ಎಳೆದಂತೆ ಸಂತಸ. ಅವಳಿಗೂ ಅವನೆಂದರೆ ಹೇಳಲಾಗದ ಅನುಬಂಧ. ಅವರಿಬ್ಬರ ನಡುವಿನ ನಂಟು ಬೆಸೆಯುವ ಮುನ್ನವೇ ದುರಂತಕ್ಕೆ ದಾರಿ ಎಳೆದಂತೆ ಅವಳು ಅವನಿಂದ ದೂರಾಗಿ ಹೋಗಿದ್ದಳು. ಹೇಳಬೇಕಾದ ಮಾತು-ಕಥೆಯೆಲ್ಲವೂ ತನ್ನೊಳಗೆ ಇಂಗಾಗಿತ್ತು. ಅವಳಿಗದು ಗೊತ್ತಾಗಲೇ ಇಲ್ಲ. ಅವನಿಗೂ ಬೇರೆ ಯಾರು ಬೇಡವೆನಿಸಿತ್ತು. ಬದುಕಲ್ಲಿ ಸಂಕಟ ಪಟ್ಟು ಇನ್ನೊಬ್ಬರ ಒತ್ತಾಯಕ್ಕೆ ಬಲಿಯಾಗುವುದು ಬೇಡವೆನಿಸಿತ್ತು. ಆದರೆ ಅವಳನ್ನು ಕಟ್ಟು ಪಾಡುಗಳು ಹುರಿದು ಮುಕ್ಕುತ್ತಿದ್ದವು. ಮದುವೆಯಾದವನಿಂದ ಪ್ರತಿ ಹೆಣ್ಣು ಅಪೇಕ್ಷಿಸುವುದು ಪ್ರೀತಿ, ನಂಬಿಕೆ, ವಿಶ್ವಾಸ‌. ಇವನ್ನು ಬಿಟ್ಟು ಅವಳಿಗೆ ಮತ್ತೇನು ಬೇಡ. ಆದರೆ ಈ ಮೂರು ಬಿಟ್ಟು ಬದುಕುವ ಮನೋಧರ್ಮದವನಾಗಿದ್ದಕ್ಕೆ ಅವಳಿಗೊಂದು ನುಂಗಲಾರದ ತುತ್ತು.

ನಾನು ಅವಳು ಹರಟುವಾಗೆಲ್ಲ ನೋಡೋ ನನ್ನ ಮದುವೆ ಯಾಗುವವ ಕುಡಿಬಾರದು, ದುಶ್ಚಟಗಳ ದಾಸನಾಗಿರಬಾರದು‌. ಬೇರೆ ಹೆಣ್ಣಿನ ಸಹವಾಸ ಮಾಡಬಾರದು. ಹೀಗೆ ಹತ್ತು ಹಲವಾರು ಆಶೆಗಳನ್ನು ಕನಸುಗಳನ್ನು ಹೇಳುತ್ತಿದ್ದ ಳು. ಅಲ್ಲ ಕಣೇ ಅಂಥವ ಸಿಗುವುದು ಕಷ್ಟ ಬಿಡು. ಆದರೂ ನೀ ಬಯಸಿದ್ದು ಸಿಗಲಿ ಎಂದೆ. ನಿಜ ಕಣೋ ನನಗೂ ಹಾಗೆ ಅನ್ನಿಸಿದೆ‌. ಆದರೆ ನಾವು ಪ್ರೆಂಡ್ಸ ಅಲ್ಲವಾ? ಮದುವೆ ಆಗೋಕೆ ಆಗಲ್ಲ ಎಂದು ಅವಳು ಪಟಪಟ ನುಡಿಯುತ್ತ ಹೋಗುವಾಗ ಅವಳ ಹಿಂದೆ ನನ್ನ ಹೃದಯವು ಹಾರಿ ಹೋಗಿತ್ತು.

ಪ್ರೆಂಡ್ಸ ಮದ್ವೆಯಾಗಬಾರದು ಎಂಬ ತತ್ವ ಬಿತ್ತಿದವನ ಎದೆ ಸೀಳಬೇಕೆನ್ನಿಸಿತು. ಆದರೂ ಒಂದು ಭರವಸೆ. ಅವನೆಂದು ಅವಳಿಗೆ ಪ್ರಪೋಸ್ ಮಾಡಿರಲಿಲ್ಲ. ನನ್ನ ಅವಳ ಸ್ವಭಾವ ಒಂದೆಯಾಗಿದ್ದರಿಂದ ನನ್ನ ತುಂಬಾ ನಂಬಿದ್ದಳು. ಅಂತಹ ನಂಬಿಕೆಯನ್ನು ಕಳೆದುಕೊಳ್ಳಬಾರದೆಂದು ತನ್ನೆಲ್ಲ ಕನಸು ಗಳನ್ನು ಗಾಳಿಗೆ ತೂರಿಬಿಟ್ಟಿದ್ದ. ಅವು ಎಲ್ಲಿ ಬೇಕಾದರೂ ಬಿಕರಿಯಾಗಿ ಬೀಳಲಿ ಯಾರು ಬೇಕಾದರೂ ಆಯ್ದುಕೊಳ್ಳಲಿ. ತನಗಾವ ಕನಸು ಬೇಡವೆಂದು ನಿರ್ಧರಿಸಿ ಅವಳು ಸುಖವಾಗಿರಲೆಂದು ಊರು ಬಿಟ್ಟಿದ್ದ.
ಬಂದ ಸುದ್ದಿಗೆ ನಾನು ಸಾಯುವುದೊಂದು ಬಾಕಿಯಿತ್ತು. ಅವಳು ವಿಧವೆಯಾದಳೆಂದು ಬರಸಿಡಿಲಿಗೆ ತತ್ತರಿಸಿ ಒಂದು ಕ್ಷಣ ಕುಸಿದು. . . ಹೇ. . . ದೇವಾ. . ಇವಳಿಗೆಂಥ ಶಿಕ್ಷೆ? ಸಂತ ಸದಿಂದ ಹಸೆಮಣೆ ಎರಿದವಳಿಗೆ ಮಸಣದ ದಾರಿಯನ್ನು ಬಹುಬೇಗ ಕರುಣಿಸಿ ಬಿಟ್ಟೆಂದು ಮನ ದುಃಖದಿಂದ ರೋ ಧಿಸುತ್ತಿತ್ತು. ಹೇಗೆ ಊರಿಗೆ ಹೋಗಲಿ? ಹೇಗೆ ಅವಳನ್ನು ಎದುರುಗೊಳ್ಳಲಿ? ಕಣ್ಣಲ್ಲಿ ಕಣ್ಣಿಟ್ಟು ನೋಡುವ ಧೈರ್ಯ ನನಗಿಲ್ಲ. ಆದರೂ ಅವಳ ಬೇಟಿಯಾಗಿ ಧೈರ್ಯ ತುಂಬ ಬೇಕು. ಎಂದೆಲ್ಲ ಗಟ್ಟಿ ಮನಸ್ಸು ಮಾಡಿ ಬರಲು ಸಮಯ ಜಾರಿದ್ದು ಗೊತ್ತಾಗಲಿಲ್ಲ. ಊರಿನ ಜನರಿಗೆಲ್ಲ ನನ್ನ ಕಂಡಾ ಕ್ಷಣ ಅವಳ ಬಾಳು ಹೀಗಾಯಿತೆಂದು! ಇನ್ನಾರು ದಿಕ್ಕೆಂದು ಬಿಕ್ಕಿಬಿಕ್ಕಿ ಅಳುತ್ತಾ ಹೇಳುವಾಗ ಅವನಿಗೂ ದುಃಖ ಉಮ್ಮಳಿಸಿ ಬರುತ್ತಿತ್ತು.

ಅವಳು ಮನೆಯಲ್ಲಿಲ್ಲ. ದಿನಾಲು ಗಂಡನ ಗೋರಿಯ ಮುಂದೆ ಕುಳಿತು ಒಬ್ಬಳೇ ಮಾತಾಡುತ್ತ ಕುಂತಿರತಾಳೆ. ಅವನಿಗೂ ತಡೆಲಾಗಲಿಲ್ಲ ಸಿದಾ ಮಸಣಕೆ ಬಂದು ನಿಂತ. ಅವಳು ಹುಣ್ಣಿಮೆಯ ಚಂದಿರನಂತೆ ಲವಲವಿಕೆಯಿಂದ ಇರುವವಳು ಸೋತು ಶರಣಾದ ಸಣಕಲಿನ ಕೃಶ ಶರೀರ ದವಳನ್ನು ದೂರದಿಂದಲೇ ಕಂಡು ಸ್ತಬ್ಧನಾಗಿ ನಿಂತು ಬಿಟ್ಟ. ಮೂಕ ವೇದನೆ ಅವನೊಳಗೆ. ಮಾತಾಡಿಸಿ ದುಃಖ ಮಾಡ ಬೇಕೆನ್ನುವ ಧೈರ್ಯ ಸಾಲಲಿಲ್ಲ. ಮಾತನಾಡಿಸದೇ ಹೊರ ಡುವ ನಿರ್ಧಾರ ಮಾಡಿ ಹೊರಳುವಾಗ ತರಗಲೆಗಳು ಪರ್. . ಪರ್ ಎಂದು ಶಬ್ಧ ಮಾಡಿದವು. ಮೊದಲೇ ಅವಳು ಸೂಕ್ಷ್ಮಯಾರೋ ಬಂದಿರಬಹುದೆಂದು ಯಾರು? ಎಂದು ಕೂಗಿದಳು. ಇನ್ನು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲವೆಂದು ನಿಂತ. ಅವನ ನೋಡಿದ್ದೆ ತಡ ಓಡಿ ಬಂದು ಬಿಗಿದಪ್ಪಿ ಗಳಗಳನೇ ಅತ್ತು ಬಿಟ್ಟಳು. . . ನೋಡಿ ನನ್ನ ಹಣೆಬರಹಾ? ಖುಷಿಯಾಗಿ ಇರಬಾರದೆಂದು, ಆ ಭಗವಂತ ನಿರ್ಧರಿಸಿದ ಹಾಗಿದೆ?ನನ್ನ ಈ ಸ್ಥಿತಿ ಬಿಕ್ಕಿಬಿಕ್ಕಿ ಅತ್ತಳು. ಬಿಳಿ ವಸ್ತ್ರ ಧರಿಸಿದ ಚಂದಿರ ಬಾಡಿದಂತಿತ್ತು. ಕಣ್ಣೆಲ್ಲ ಅತ್ತು ಅತ್ತು ಉದಿಕೊಂಡಿದ್ದವು. ಇದೇನೆ ಹೀಗಾದ್ದಿಯಾ? ಎಂದು ಕಣ್ಣೀರು ಒರೆಸುತ್ತ, ನೀರ ಕುಡಿಸುತ್ತ ಅಲ್ಲೆ ಮರದಡಿ ಕುಳಿತುಕೊಂಡೆವು.

ಹೆಣ್ಣು ಅಂದರೆ ಹೀಗೇನೆ ಅಲ್ಲವಾ? ಬಾಳೆಗಿಡದಂತೆ ಬೇಗ ಬೆಳೆದು ಬೇಗನೇ ಅಡ್ಡ ಬೀಳುವುದು. ಹಣೆಬರಹ ಸರಿಯಿದ್ದರೆ ಎಲ್ಲವು ಸರಿ. ಕೆಟ್ಟಿದ್ದರೆ ಮುಗಿತು. ಕುಡುಕನೆಂಬ ಸತ್ಯ ಮರೆಮಾಚಿ ಕೈ ಹಿಡಿದವನ ನಗ್ನ ಸತ್ಯ ಗೊತ್ತಾಗಿದ್ದೆ ಮೊದಲ ರಾತ್ರಿ. ಹಾಲು ಕುಡಿಯೆಂದವಳ ಬಾಯಿಗೆ ಆಲ್ಕೊಹಾಲ್ ಸುರಿದು ತಾನು ಕುಡಿದು ರಾಕ್ಷಸನಾದವನಿಗೆ ಅನಾಯಾಸ ವಾಗಿ ಹೆದರಿದ ಹರಿಣಿಯನ್ನು ಕೊಂಚವು ವಿಚಾರಿಸದೆ ಬಡದು ಬಾಯಿಗೆ ಹಾಕಿಕೊಂಡವನಿಗೆ ಆಹಾರವಾದವಳ ಬದುಕಿದು. ನೂರೆಂಟು ಕನಸ ಹೆಣೆದವಳು ನಾನು. ಅದು ಭಯಾನಕ ಕನಸಾಗಿ ಉಳಿಯಿತು. ಪ್ರತಿದಿನ ರಂಪಾಟ, ನೂಕುನುಗ್ಗುಲು, ಕುಡಿದಾಗಲೇ ಅವನಿಗೆ ಶಾಂತಿ. ಅವನ ತೋಳಲಿ ಸತ್ತು ಬದುಕುವ ಗಳಿಗೆ ನೆನೆದಾಗೊಮ್ಮೆ ರಾತ್ರಿ ಯಾಕಾದರೂ ಬರುವುದೋ ಎಂಬ ಸಂಕಟ. ಎಲ್ಲರ ಕಣ್ಣುಗಳು ತೇವವಾದರೂ ಪ್ರಯೋಜನವಿಲ್ಲ. ಬಿಡಿಸಲು ಬಂದವರ ಕಿಮ್ಮತ್ತು ಬೀದಿಗೆ ಹೀಗಾಗಿ ಎಲ್ಲರು ಮೂಕ ಪ್ರೇಕ್ಷಕರು.

ಒಮ್ಮೆ ಕುಡಿದೆಲ್ಲೊ‌ ಮೋರಿಯಲ್ಲಿ ಬಿದ್ದವನ ತಂದು ಮಲಗಿಸಿದ್ದರು. ಡಾಕ್ಟರ್‌ ಕುಡಿಯೋದು ಬಿಟ್ಟರೆ ಉಳಿಬಹುದು ಲಿವರ್ ಕೆಲಸ ಮಾಡತಿಲ್ಲ. ಕಿಡ್ನಿ ಸಮಸ್ಯೆ ಇದೆ. ಬಹಳದಿನ ಬದುಕೊಲ್ಲ. ಆದ್ರೆ ಆರೈಕೆ ಮಾಡಿದರೆ ಮುಂದೆ ದೇವರ ಚಿತ್ತ. ಕುಡಿಯೋದ ಬಿಡ್ಸಿ ಎಂದಾಗ ಮನಸ್ಸು ಒಡದು ಹೋ ಗಿತ್ತು. ದೇವರೆ ನನಗೆ ಮುತ್ತೈದೆ ಸಾವು ಕೊಡು ಎಂದು ಬೇಡಿಕೊಂಡಿದ್ದೆ. ಗಂಡನಾಗಿ ನನ್ನ ನಂಬಿಬಂದ ನನ್ನ ಒಂದು ದಿನಾನೂ ಪ್ರೀತಿಸಲಿಲ್ಲ. ಹೀಗಿರುವಾಗ ನಾ ಬದುಕಿದ್ದು ವ್ಯರ್ಥ ಪಾಪಿ ನಾನು ಸಾಯಲಿಲ್ಲ. ಒಮ್ಮೆ ರಕ್ತ ವಾಂತಿಯಾಯಿತು. ತಕ್ಷಣ ದವಾಖಾನೆಗೆ ಸೇರಿಸಿದರೂ ಪ್ರಯೋಜನವಾಗಲಿಲ್ಲ. ನನಗೆ ಎನೂ ಹೇಳದೇ ಹೋಗಿಬಿಟ್ಟನೆಂದು ಗೋಳಿಡಿವ ಅವಳ ಕಂಡು ಅವನ ಉದರಕ್ಕೆ ಯಾರೋ ಬೆಂಕಿ ಇಟ್ಟಹಾಗೆ ಆಯಿತು.

ಎಂಥ ಕೋಮಲೆ, ಸರಳೆ, ನಿಷ್ಕಲ್ಮಶ ಪ್ರೀತಿಹೊಂದಿರುವ ಇವಳ ಸಹವಾಸದಿಂದಾದರೂ ಬದಲಾಗಬಹುದಿತ್ತು. ನೋಡಿ‌‌ ನನಗೆ ಮಕ್ಕಳಾಗಲಿಲ್ಲ, ಗಂಡನ ಜೀವ ನುಂಗಿದಳೆಂ‌ಬ ಅಪವಾದ ನನ್ನ ಮೇಲಿದೆ. ಅದು ಅಲ್ಲದೆ ಆ ಮನೆಯಲ್ಲಿ ನನಗೆ ಜಾಗವಿಲ್ಲ. ಗಂಡನ ನುಂಗಿದವಳು ಅಪಶಕುನವೆಂ ದು ಯಾರು ನನ್ನ ಮಾತಾಡಿಸುದಿಲ್ಲ‌. ಹೀಗಾಗಿ ಮಸಣದಲ್ಲೆ ನನ್ನ ವಾಸ. ನನಗೆ ಇನ್ನು ತಡಮಾಡಿದರೆ ಇವಳನ್ನು ಹೀಗೆ ಸಾಯಿಸುವರೆಂದು. ಒಂದು ಮಾತು ನೀನು ನರಕಯಾ‌ತ ನೆಯಲ್ಲಿಯೇ ಈ ಕನಿಷ್ಟ ಬದುಕು ಆಯ್ದ ಕೊಳ್ಳುವಿಯೋ ಅಥವಾ ನಿನಗಾಗಿ ಜೀವ ಹಿಡಿದಟ್ಟುಕೊಂಡಿರುವ ನನ್ನ ಮನದ ದೀಪವಾಗುವಿಯೋ ನಿನಗೆ ಬಿಟ್ಟಿದ್ದು. ನೀ ಒಪ್ಪಿದರೆ ಇಡೀ ಊರಿಗೆ ಊರು ತಿರುಗಿ ಬಿದ್ದರು ನಿನ್ನ ಕೈ ಬಿಡ ಲಾರೆ ನನ್ನ ಉಸಿರಿರುವ ತನಕ. ನನ್ನಾಣೆ‌ ಎಂದು ಪ್ರಮಾಣ ಮಾಡಿದ.

ಅವಳು ಬಿಡುಗಣ್ಣಿನಿಂದ ಅವನ್ನೆ ದಿಟ್ಟಿಸುತ್ತಿದ್ದಳು. ರೋಸಿ ಹೋದ ಬದುಕು ಅವಳಿಗೂ ಸಾಕಾಗಿತ್ತು. ಆದರೆ ಮನಸ್ಸು ನೋಡಿ ನನ್ನ ಜೀವನ ಹಾಳಾಗಿದೆ ಹೀಗೆ ಹೋಗಲಿ? ನಿಮ್ಮ ಭವಿಷ್ಯ ಹಾಳಾಗಬಾರದು ದಯವಿಟ್ಟು ನನ್ನ ಮರೆತು ಬಿಡಿ ಎಂದು ಕಣ್ಣೀರು ಒರೆಸುತ್ತ ನಡೆದಳು. ಅವಳು ಧೈರ್ಯ ಮಾಡದಿದ್ದರೆ ನಾನು ಹೇಗೆ ಮುಂದುವರಿಯಲಿ? ಮೌನ ಕಾಡುತ್ತಿತ್ತು. ಒಂಟಿಯೆನಿಸಿತು. ಊರತ್ತ ಹೋಗಲು ಮನಸ್ಸು ಬಾರದೇ. . . ಅಲ್ಲೆ ಕುಳಿತೆ. ಅದ್ಯಾರೋ ನನ್ನ ಪಕ್ಕದಲ್ಲಿ ಬಂದು ಕೂತಂತೆ ಬಾಸವಾಯಿತು‌. ಹೊರಳಿದರೆ ಅವಳು. ಸತ್ತಂತ ಜೀವನಕ್ಕಿಂತ ಚೈತ ನ್ಯದ ಜೀವನ ಬೇಕು. ಪುನಃ ಮಸಣ ದರ್ಶನವಾಗದಿದ್ದರೆ ಸಾಕು. . . ಇರುವಷ್ಟು ಗಳಿಗೆ ಭೂಮಿಗೆ ಭಾರವಾಗದಂತೆ ಬದುಕುವ ಭಾಗ್ಯ ಕೊಡುವುದಾದರೆ ನಿನ್ನೊಂದಿಗೆ ಹೆಜ್ಜೆಯಿಡುವೆ ಎಂದಾಗ ಎಲ್ಲ ಜಾಡ್ಯಗಳ ಕಿತ್ತೊಗೆದು ಬಂದವಳ‌ ಕೈಗೆ ಮುತ್ತನಿಟ್ಟು ಬಲವಾಗಿ ಭರವಸೆಯ ಬಿಗಿತದೊಳು ಗೋರಿಯ ಸುತ್ತ ಸಪ್ತಪದಿ ತುಳಿದು ಅರಷಿಣ ಕೊಂಬು ಅವಳ ಕೊರಳ ಅಲಂಕರಿಸಿದಾಗ ಕಾಡು ಮಲ್ಲಿಗೆಯ ವೃಷ್ಟಿಯಾಗಿ ಗೋರಿಗೂ ನಮಗೂ ಶುಭಾಶಯ ಹೇಳಿದಂತಾಗಿತ್ತು.

ಶಿವಲೀಲಾ ಹುಣಸಗಿ ಯಲ್ಲಾಪುರ


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

11 Comments
Oldest
Newest Most Voted
Inline Feedbacks
View all comments
Ravi
2 years ago

ಕತೆಯನ್ನು ಚೆನ್ನಾಗಿ ನಿರೂಪಿಸಿದ್ದೀರಿ ಮೇಡಮ್ ಅಭಿನಂದನೆಗಳು

Asha+shetti
Asha+shetti
2 years ago

ಕಂಬನಿ ಧಾರೆ ತರಸುವ ಲೇಖನ
ಸಮಾಜದ ಕಟ್ಟುಪಾಡುಗಳ ಹೆಣ್ಣಿನ ಮನಸ್ಸನ್ನು ಛಿದ್ರ ಗೊಳಿಸುವ ಸನ್ನಿವೇಶ ರಚನೆ ಮನಕರಗಿಸುತ್ತದೆ. ಶಿವಲೀಲಾ ಮೇಡಂ ಅವರ ಬರವಣಿಗೆ ಅದ್ಭುತ…. 🙏🏻🙏🏻🙏🏻💐💐

Sunanda patankar
Sunanda patankar
2 years ago

ಲೇಖನದ ಸಾರಾಂಶ ತುಂಬಾ ಚೆನ್ನಾಗಿದೆ.
ಹೀಗೆ ಮೂಡಿ ಬರಲಿ ನಿನ್ನ ಅಂಕಣದ ಬರವಣಿಗೆಯ ಸಾಲುಗಳು.

ಭಾರತಿ ಕೇದಾರಿ ನಲವಡೆ
ಭಾರತಿ ಕೇದಾರಿ ನಲವಡೆ
2 years ago

ತುಂಬಾ ತುಂಬಾ ಅರ್ಥಪೂರ್ಣವಾಗಿದೆ.ನೊಂದವರಿಗೆ ಆಶಾಕಿರಣ ಅಭಿನಂದನೆಗಳು ಗೆಳತಿ

Sneha Nayak
Sneha Nayak
2 years ago

Goriya sutta Saptapadi….kutuhal mudiside odididdu nijvaglu asupasu nadediddu Annisitu super 👌 story

Shaialaja
Shaialaja
2 years ago

ಹೆಣ್ಣಿನ ಅಂತರಂಗದ ತುಮುಲಗಳನ್ನು ಚೆನ್ನಾಗಿ ಬರೆದಿದ್ದೀರಿ.ಹೃದಯಸ್ಪರ್ಶಿಯಾಗಿದೆ.ಹೆಣ್ಣಿನ ಆರ್ತನಾದ ,,ಮೂಕ ವೇದನೆ ಎಲ್ಲವೂ ಮನ ಮಿಡಿಯುವ ಭಾವನೆಗಳೇ ತುಂಬಿದೆ.ತುಂಬಾ ಚೆನ್ನಾಗಿ ಮೂಡಿಬಂದಿದೆ 🙏🏻🙏🏻

Shaialaja
Shaialaja
2 years ago

ಲೇಖನ ತುಂಬಾ ಹೃದಯಸ್ಪರ್ಶಿಯಾಗಿದೆ.ಹೆಣ್ಣಿನ ತಲ್ಲಣಗಳು ತುಂಬಾ ಮನಮಿಡಿಯುವಂತೆ ಮೂಡಿ ಬಂದಿದೆ. ಮನ ಸೆಳೆಯುವ ಸಾಲುಗಳು ಕಣ್ರೀ.ಇನ್ನೂ ಇರಲೀ ಎನ್ನೋ ಹಾಗೆ ಓದಿಸಿಕೊಂಡು ಹೋಗುತ್ತದೆ ತಮ್ಮ ಬರವಣಿಗೆಯ ಶೈಲಿ.🌷🌷🙏🏻🙏🏻

ಭಾಗ್ಯಲಕ್ಷ್ಮೀ ನಾಯಕ ಕವಿಮನೆ
ಭಾಗ್ಯಲಕ್ಷ್ಮೀ ನಾಯಕ ಕವಿಮನೆ
2 years ago

ಅದ್ಭುತ ಕತೆ ಮೇಡಂ…

ಡಾ.ಗೀತಾ ಪಾಟೀಲ

ಕತೆ ಮನಸ್ಸನ್ನು ಮುಟ್ಟಿತು, ಬರವಣಿಗೆ ಶೈಲಿ ತುಂಬಾ ಚೆನ್ನಾಗಿದೆ, ಅಭಿನಂದನೆಗಳು ನಿಮಗೆ, ನಿಮ್ಮಿದ ಇನ್ನಷ್ಟು ಬರಹಗಳ ನಿರೀಕ್ಷೆಯಲ್ಲಿ….

shivaleela hunasagi
shivaleela hunasagi
2 years ago

ಥ್ಯಾಂಕ್ಯೂ ಮೇಡಂ

ಜುಬೇದಾ ಬೇಗಂ,ಅತ್ತಾರ
ಜುಬೇದಾ ಬೇಗಂ,ಅತ್ತಾರ
2 years ago

,ಕಣ್ಣ ಮುಂದೆ ನಡೆಯುತ್ತಿರುವ ಘಟನೆ ಏನೋ ಎಂಬಂತೆ ಕಥೆಯು ಬಲು ಸುಂದರವಾಗಿ ಮೂಡಿ ಬಂದಿದೆ.🥰✌✍

11
0
Would love your thoughts, please comment.x
()
x