ಸೇವಾ ಮನೋಭಾವ: ಎಲ್. ಚಿನ್ನಪ್ಪ, ಬೆಂಗಳೂರು
ದಯಾನಿಧಿಯವರು ಆಸ್ಪತ್ರೆಗೆ ದಾಖಲಾಗಿ ಹದಿನೈದು ದಿನಗಳಾಗಿವೆ, ಆಸ್ಪತ್ರೆಯಲ್ಲಿ ಅವರಿಗೆ ಸತತ ಚಿಕಿತ್ಸೆಗಳು ಜರುಗುತ್ತಿವೆ. ಅವರಿಗೆ ಅಂತಹ ಗಂಭೀರ ಸ್ವರೂಪದ ಖಾಯಿಲೆಯೇನೂ ಇಲ್ಲ. ವಯೋಸಹಜ ಕಾರಣಕ್ಕೆ ಕಾಣಿಸಿಕೊಂಡ ಒಂದು ಸಾಧಾರಣ ತೊಂದರೆಗೆ ಅವರು ಅತ್ಯಂತ ಮಹತ್ವಕೊಟ್ಟು ತಮ್ಮ ಹಣ ಖರ್ಚುಮಾಡಿಕೊಂಡು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ. ಹಾಸಿಗೆಯಲ್ಲಿ ಮಲಗಿದ್ದಂತೆಯೇ ದಯಾನಿಧಿಯವರು ತಾವೇ ಮಗ್ಗುಲು ಬದಲಾಯಿಸಿಕೊಂಡರು. ದೇಹ ಮೂತ್ರ ವಿಸರ್ಜನೆಗೆ ಕರೆ ಕೊಟ್ಟಿತು. ಅವರು ಎದ್ದು ಹತ್ತಿರವೇ ಇದ್ದ ಶೌಚಾಲಯಕ್ಕೆ ಹೋಗಿ ಬರಬಹುದಿತ್ತು, ಆದರೆ ಅವರು ಹಾಸಿಗೆ ಬಿಟ್ಟು ಮೇಲೇಳಲಿಲ್ಲ. … Read more
“ಅರ್ಥ ಹೀನ”: ಅರವಿಂದ. ಜಿ. ಜೋಷಿ.
“ಅಮ್ಮಾ…. ನೀನೂ ನಮ್ಮ ಜೊತೆಗೆ ಬೆಂಗಳೂರಿಗೆ ಬಾ,.. ಇಷ್ಟು ದಿನ ಅಪ್ಪಾ ಇದ್ರು ಆಗ ಮಾತು ಬೇರೆ ಇತ್ತು, ಈಗ ಈ ಊರಲ್ಲಿ ನೀನೊಬ್ಬಳೇ ಇರೋದು ಬೇಡಾ”ಎಂದು ಪ್ರಕಾಶ್ ತನ್ನ ತಾಯಿಗೆ ಹೇಳಿದಾಗ ಆತನ ತಾಯಿ ರಾಧಾಬಾಯಿ ಕೊಂಚ ಯೋಚನೆಗೊಳಗಾದರು. ಕಳೆದ ಹದಿನೈದು ದಿನ ಗಳ ಹಿಂದಷ್ಟೇ, ಅವರ ಪತಿ ರಾಜಪ್ಪನವರು ಹೃದಯಾಘಾತದಿಂದ ಮರಣಹೊಂದಿದ್ದರು. ಅಂದಿನಿಂದ ತಮ್ಮನ್ನು ತಾವು ಸಮಾಧಾನಿಸಿಕೊಳ್ಳಲು ಸಾಕಷ್ಟು ಪ್ರಯತ್ನಿಸಿದ್ದರು. ರಾಧಾಬಾಯಿಯ ಮಗ ಪ್ರಕಾಶ್ ಹಾಗೂ ಸೊಸೆ ಪ್ರಿಯಾ ಇಬ್ಬರೂ ಇಂಜಿನೀಯರ್ ಆಗಿದ್ದು ಇಬ್ಬರೂ … Read more
ದಿಕ್ಕುಗಳು (ಭಾಗ 9): ಹಟ್ಟಿ ಸಾವಿತ್ರಿ ಪ್ರಭಾಕರಗೌಡ
ಹೀಗೆ ಪ್ರಾರಂಭವಾದ ಜ್ಯೋತಿ, ಲಲಿತ. ಚೈತನ್, ಶಂಕರರ ಸ್ನೇಹ ಏಳೆಂಟು ವರ್ಷಗಳಲ್ಲಿ ಹೆಮ್ಮರವಾಗಿತ್ತು. ಈಗ ಚೈತನ್ನ ಸ್ನೇಹ ವೃಂದದ ಸದಸ್ಯರೆಲ್ಲ ಒಳ್ಲೊಳ್ಳೆ ಕೆಲಸಕ್ಕೆ ಸೇರಿ ಒಳ್ಳೆ ಸಂಪಾದನೆಯಲ್ಲಿ ತೊಡಗಿಸಿಕೊಂಡಿದ್ದರು. ಜ್ಯೋತಿಯಂತೆಯೇ ತನ್ನೊಂದಿಗೂ ಆತ್ಮೀಯತೆಯಿಂದ ಚೈತನ್ ವರ್ತಿಸುತ್ತಿದ್ದನು. ಮೊದ ಮೊದಲು ಚೈತನ್ ಮತ್ತು ಜ್ಯೋತಿಯ ಸ್ನೇಹವನ್ನು ಸಂಶಯದಿಂದ ನೋಡುತ್ತಿದ್ದ ಲಲಿತೆಗೆ ಕ್ರಮೇಣ ಸ್ನೇಹದ ಅಗಾಧತೆ, ಅದರ ಮಹತ್ವದ ಬಗ್ಗೆ ಅರ್ಥವಾಗಿತ್ತು. ಜ್ಯೋತಿ ಮತ್ತು ಚೈತನ್ ನಡುವಿನ ಸ್ನೇಹ, ಪ್ರೀತಿ, ಬಾಂಧವ್ಯ ಒಡಹುಟ್ಟಿದವರ ನಡುವಿನ ಬಾಂಧವ್ಯದಂಥದ್ದು ಎಂದು ತಿಳಿದಾಗ ಲಲಿತ … Read more
ಪ್ರೇಮಿಗಳಿಗೆ ಸಾವೆಂಬುದು ಹೀಗೆ ಬರಬೇಕು: ಜ್ಞಾನೇಶ, ಸೀಗೆಕೋಟೆ.
ಅವಳ ಮೇಲಿನ ಪ್ರೀತಿಗಿಂತ ಭಯವೇ ಹೆಚ್ಚುಮನಸ್ಸೇಕೋ ಭಾರವಾಗಿತ್ತು. ನನ್ನಲ್ಲಿ ಹುಟ್ಟಿಕೊಳ್ಳುತ್ತಿದ್ದ ನೂರಾರು ಪ್ರಶ್ನೆಗಳಿಗೆ ನಾನೆ ಉತ್ತರವನ್ನು ಹುಡುಕಿಕೊಳ್ಳುತ್ತಾ, ನನ್ನ ಗೊಂದಲಗಳಿಗೆ ನಾನೆ ಪರಿಹಾಗಳನ್ನು ಯೋಚಿಸುತ್ತಾ ಕಾಡಿನ ದಾರಿಯತ್ತ ಸಾಗಿ ಬಹಳ ದೂರ ಕ್ರಮಿಸಿದೆ. ನಾನು ಎಂದೂ ತಿರುಗಾಡದ ಒಂದು ದಾರಿ ನನ್ನನ್ನು ಕರೆಯುತಿತ್ತು.ನನ್ನ ಮನಸ್ಸು ಹೃದಯ ಮಂಕಾಗಿದ್ದವು ಬದುಕು ನೀರಸವೆನಿಸಿತ್ತು. ಎತ್ತೆತ್ತೆಲೋ ಸಾಗುತಿದ್ದವನು ಹಾಗೆ ಬಂಡೆಯ ಮೇಲೆ ಕುಳಿತು ಮರಗಳನ್ನೂ ಹಕ್ಕಿಗಳನ್ನೂ ನೋಡುತ್ತ ನೀರವ ಮೌನಕ್ಕೆ ಒರಗಿದ್ದೆ. ನನ್ನ ಮುಂದೆ ಎರಡು ನೀಲಕಂಠ ಅಥವ ಬಣ್ಣದ ಹಕ್ಕಿ … Read more
ಅಂಗವಿಕಲ ಮಕ್ಕಳ ಶಿಕ್ಷಣ: ಹಕ್ಕು, ಹಾದಿ ಮತ್ತು ಹೊಣೆಗಾರಿಕೆ: ರಶ್ಮಿ ಎಂ.ಟಿ.
ಭಾರತದ ಸಂವಿಧಾನವು ಪ್ರತಿ ಮಕ್ಕಳಿಗೂ – ಜಾತಿ, ಧರ್ಮ, ಲಿಂಗ ಅಥವಾ ವರ್ಗದ ವ್ಯತ್ಯಾಸವಿಲ್ಲದೆ – ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ಮೂಲ ಹಕ್ಕು ಎಂದು ಘೋಷಿಸುತ್ತದೆ. ಈ ಹಕ್ಕು ಶಾರೀರಿಕ, ಬೌದ್ಧಿಕ, ಮತ್ತು ಭಾವನಾತ್ಮಕ ಅಡಚಣೆಗಳನ್ನು ಅನುಭವಿಸುತ್ತಿರುವ ಅಂಗವಿಕಲ ಮಕ್ಕಳಿಗೂ ಹೋಲಿಕೆಯ ರೀತಿಯಲ್ಲಿ ಅನ್ವಯಿಸಬೇಕಾಗಿದೆ. ಆದರೆ ನೆಲೆನಿಂತಿರುವ ನೈಜತೆ ಬೇರೆಯೇ ಹೇಳುತ್ತದೆ.ಸಮಾನತೆ ನೀಡುವ ಸಂವಿಧಾನ – ವ್ಯತ್ಯಾಸ ತೋರುವ ನೈಜತೆಉಚಿತ ಮತ್ತು ಕಡ್ಡಾಯ ಶಿಕ್ಷಣ ಕಾಯಿದೆ – 2009 (RTE Act), ಅಂಗವಿಕಲರ ಹಕ್ಕುಗಳು ಕಾಯಿದೆ … Read more
VIVIDLIPI ಯಿಂದ ವೈಶಿಷ್ಟ್ಯಪೂರ್ಣ ಸ್ಪರ್ಧೆಗಳೊಂದಿಗೆ 10 ವರ್ಷಗಳ ದಶಮಾನೋತ್ಸವ ಸಂಭ್ರಮ
ಕನ್ನಡ ಸಾಹಿತ್ಯ ಮತ್ತು ಮಾಧ್ಯಮ ಕ್ಷೇತ್ರದಲ್ಲಿ ಕಳೆದ ಹತ್ತು ವರ್ಷಗಳಿಂದ ವಿಶಿಷ್ಟ ಸೇವೆ ಸಲ್ಲಿಸುತ್ತಿರುವ VIVIDLIPI ಸಂಸ್ಥೆಯು ತನ್ನ 10ನೇ ವಾರ್ಷಿಕೋತ್ಸವದ ಅಂಗವಾಗಿ ಕರ್ನಾಟಕದಾದ್ಯಂತದ ಲೇಖಕರು, ಕಥೆಗಾರರು ಮತ್ತು ಕಲಾವಿದರಿಗಾಗಿ ಮೂರು ವಿಶಿಷ್ಟ ಸೃಜನಶೀಲ ಸ್ಪರ್ಧೆಗಳನ್ನು ಆಯೋಜಿಸಿದೆ. ಕಳೆದ ಒಂದು ದಶಕದಲ್ಲಿ, VIVIDLIPI ಯು ಕನ್ನಡ ಪುಸ್ತಕಗಳು, ಇ-ಪುಸ್ತಕಗಳು, ಆಡಿಯೊ ಬುಕ್ಗಳು, ಪಾಡ್ಕಾಸ್ಟ್ಗಳು, ಬ್ಲಾಗ್ಗಳು ಮತ್ತು ಯೂಟ್ಯೂಬ್ ಮೂಲಕ ಪ್ರಪಂಚದಾದ್ಯಂತ ಲಕ್ಷಾಂತರ ಸಾಹಿತ್ಯಾಸಕ್ತರನ್ನು ತಲುಪಿದೆ. ಈ ದಶಮಾನೋತ್ಸವ ಸಂಭ್ರಮಾಚರಣೆಯಲ್ಲಿ ಹೊಸ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈ ಸ್ಪರ್ಧೆಗಳನ್ನು … Read more
ಪಿ. ಎಸ್. ಅಮರದೀಪ್ ಅವರ “ಮರಳಿ ಮನ ಸಾಗಿದೆ…” ಪುಸ್ತಕ ಬಿಡುಗಡೆ ಸಮಾರಂಭ
ಶ್ರೀ ಅನ್ನದಾನೇಶ್ವರ ಶಿಕ್ಷಣ ಸೇವಾ ಟ್ರಸ್ಟ್ (ರಿ), ಬೆಣಕಲ್, ಕುಕನೂರು ತಾಲೂಕ, ಕೊಪ್ಪಳ ಜಿಲ್ಲಾ ಪ್ರಕಾಶನದ ಪಿ. ಎಸ್. ಅಮರದೀಪ್ ಅವರ ಪ್ರಥಮ ಕೃತಿ ಮರಳಿ ಮನ ಸಾಗಿದೆ… ಪುಸ್ತಕ ಬಿಡುಗಡೆ ಸಮಾರಂಭ ದಿನಾಂಕ: 28ನೇ ಸೆಪ್ಟೆಂಬರ್ 2025 ಭಾನುವಾರ,ಬೆಳಗ್ಗೆ 10.30ಕ್ಕೆಸ್ಥಳ : ರಾಜ್ಯ ಸರ್ಕಾರಿ ನೌಕರರ ಸಾಂಸ್ಕೃತಿಕ ಭವನ, ಕೊಪ್ಪಳ ಉದ್ಘಾಟಕರು : ಶ್ರೀ ಡಾ. ನಟರಾಜು ಎಸ್. ಎಂ.ಸಂಪಾದಕರು, ಪಂಜು ಅಂತರ್ಜಾಲ ಪತ್ರಿಕೆ ಪುಸ್ತಕ ಬಿಡುಗಡೆ : ಶ್ರೀ ಡಾ. ಕೊಟ್ರಸ್ವಾಮಿ ಎಮ್. IRS … Read more
ಪೂರ್ವಜರ ನೆನೆಯಲು ಮೀಸಲಾದ ಪಿತೃಪಕ್ಷ, ಮಹಾಲಯ ಅಮಾವಾಸ್ಯೆ: ಚಂದ್ರು ಪಿ ಹಾಸನ್
ಆಧುನಿಕ ಮಾನವನಿಗೆ ಎಲ್ಲಾ ಇದ್ದರೂ ಸಂತೋಷಕ್ಕಾಗಿ ಕಾರಣ ಹುಡುಕುತ್ತಿರುತ್ತಾನೆ. ಐಷಾರಾಮಿ ಜೀವನ, ಮೋಜು-ಮಸ್ತಿ, ತಿರುಗಾಟ ಇವುಗಳೇ ಸಂತೋಷದ ಮೂಲವೆಂಬ ಭ್ರಮೆಯಲ್ಲಿರುತ್ತಾನೆ. ಆದರೆ ನಾವು ನಮ್ಮ ಬಾಲ್ಯದಲ್ಲಿ ಜಾತ್ರೆ ಬಂದರೆ ಸಾಕು ಐದು ರೂಪಾಯಿ ಕೈಯಲ್ಲಿ ಹಿಡಿದು ಇಡೀ ಜಾತ್ರೆಯನ್ನು ಸುತ್ತಿ ಸುತ್ತಿ ತಿಂಡಿ ತಿನಿಸುಗಳ ತಿನ್ನುತ್ತಾ ಖುಷಿ ಪಡುತ್ತಿದ್ದೆವು. ಹಬ್ಬಗಳು ಬಂದರೆ ಸಾಕು ಹೊಸ ಹೊಸ ರುಚಿ ತಿಂಡಿಗಳ ನೆನೆಯುತ್ತಾ, ಜೊಲ್ಲು ಸುರಿಸುತ್ತಾ ಸವಿಯುತ್ತಿದ್ದ ಕಾಲವದು. ಒಂದೊಂದು ಹಬ್ಬದಲ್ಲಿ ಒಂದೊಂದು ವಿಶೇಷ ತಿನಿಸುಗಳು. ಯುಗಾದಿ ಬಂದರೆ ಹೋಳಿಗೆ … Read more
”ಕನಸಿನವರು”: ನಾಗಸಿಂಹ ಜಿ ರಾವ್
ಸಿಂಹಾವಲೋಕನ – 5 ವೇಣುಜೀಯವರ ”ಹೆಣಗಳು ” ಬೀದಿನಾಟಕದ ಅಭ್ಯಾಸ ನಡೆದಿತ್ತು, ನೀರಿನ ಸಮಸ್ಯೆಯಿಂದ ಹಿಡಿದು ಮಾನವನ ಸಂಕುಚಿತ ಮನೋಸ್ಥಿತಿಯ ಬಗ್ಗೆ ಕನ್ನಡಿ ಹಿಡಿದ ನಾಟಕ ಅದು. ಗಣಪತಿ ಹಬ್ಬದ ನಂತರ ಆ ನಾಟಕದ ಪ್ರದರ್ಶನ ಇತ್ತು. ಮೈಸೂರಿನಲ್ಲಿ ಗಣಪತಿ ಪೆಂಡಾಲುಗಳಲ್ಲಿ ‘ಸುಂದರ ಸಾಮಾಜಿಕ’ ನಾಟಕಗಳು ಪ್ರದರ್ಶನ ವಾಗುತ್ತಿದ್ದವು. ಹಾಸ್ಯ,, ಜನರನ್ನು ಹೇಗಾದರೂ ನಗಿಸುವ ಉದ್ದೇಶದ ನಾಟಕಗಳು, ನಾಟಕಗಳಿಗಿಂತ ವಾದ್ಯಗೋಷ್ಠಿಗಳು ಹೆಚ್ಚು ಪ್ರಸಿದ್ದಿ ಪಡೆದಿದ್ದವು. ಒಂದು ದಿನ ನಾವು ನಾಟಕ ಅಭ್ಯಾಸ ಮಾಡುವಾಗ ಪಾಪು ”ನಾಳೆ ಸಂಜೆ … Read more
ದಿಕ್ಕುಗಳು (ಭಾಗ 8): ಹಟ್ಟಿ ಸಾವಿತ್ರಿ ಪ್ರಭಾಕರಗೌಡ
ಮಾರನೆ ದಿನ ಶಾಮಣ್ಣ ದಿನ ಪತ್ರಿಕೆಯಲ್ಲಿರುವ ಜಾಹೀರಾತು ನೋಡಿ ಯೋಚನಾಮಗ್ನಾಗಿದ್ದ. ತಾನು ಹತ್ತನೇ ತರಗತಿಯಲ್ಲಿ ಸಾಧಾರಣ ಅಂಕದೊಂದಿಗೆ ಪಾಸಾಗಿ ಮನೆಯ ಹಿರಿಯ ಮೊಮ್ಮಗನಾಗಿದ್ದುದರಿಂದ ತಂದೆಯೊಂದಿಗೆ ಕೆಲಸಕ್ಕೆ ನಿಂತಿದ್ದ. ಆತ ಜಾಸ್ತಿ ಓದಿರದಿದ್ದರೂ, ಓದುವ ಹುಡುಗರಿಗೆ ಸಹಾಯ ಮಾಡುವ ಸ್ವಭಾವದವನು. ಆತನ ಅಂತಹ ಸಹಾಯ ಮಾಡುವ ಗುಣಕ್ಕೆ ಮನೆಯಲ್ಲಿ ಎಲ್ಲರಿಗೂ ಹೆಮ್ಮೆ ಎನ್ನಿಸಿತ್ತು. ಶಾಮಣ್ಣ ಆ ಪತ್ರಿಕೆಯನ್ನು ಹಿಡಿದುಕೊಂಡು ನಡುವಮನೆಯಲ್ಲಿ ಟಿ.ವಿ ನೋಡುತ್ತಾ ಕುಳಿತ್ತಿದ್ದ ಲಲಿತೆಯನ್ನು ಕರೆದನು, “ಲಲ್ಲೀ, ಲೇ ಲಲ್ಲೀ ಬಾ ಇಲ್ಲೆ ಸ್ವಲ್ಪ” ಎಂದು ಶಾಮಣ್ಣ … Read more
ಸಮಾಜಮುಖಿ ಚಿಂತನೆಯ ಹುಡುಕಾಟದಲ್ಲಿ ಮೊದಲ ಜೋಡು ಕಥಾ ಸಂಕಲನ: ಶಿವಕುಮಾರ ಸರಗೂರು
ಇತ್ತೀಚಿಗೆ ಸಣ್ಣ ಕತೆಗಳು ಕನ್ನಡ ಸಾಹಿತ್ಯದಲ್ಲಿ ವೈಶಾಲ್ಯತೆಯಿಂದ ಬೆಳೆಯುತ್ತಿರುವ ಪ್ರಕಾರವಾಗಿದೆ. ಸುತ್ತಲಿನ ಅನುಭವಗಳಿಗೆ ಸ್ಪಂದಿಸುವ ಮೂಲಕ ಸರಳವಾಗಿ ಲೇಖಕನಿಗೆ ದಕ್ಕುವ ವಸ್ತು ಸಣ್ಣ ಕತೆಯ ವೈಶಿಷ್ಟವಾಗಿದೆ. ಸೂಕ್ಷ್ಮ ಸಂವೇದನೆಯುಳ್ಳ ಕಥೆಗಾರ ಆಯ್ದುಕೊಳ್ಳುವ ಏಕೈಕ ಪ್ರಕಾರವೂ ಇದೆ ಆಗಿದೆ. ಕತೆಗಾರ ಮುಧುಕರ ಮಳವಳ್ಳಿ ಅವರ ಮೊದಲ ಜೋಡು ಕಥಾಸಂಕಲನವು ದಲಿತರ ಬದುಕಿನ ಅನಂತ ಸಾಧ್ಯತೆಗಳನ್ನು ಚಿಂತನೆಗೆ ಹಚ್ಚುವಂತೆ ಮಾಡುತ್ತವೆ. ಸಾಮಾಜಿಕ ಕಟ್ಟುಪಾಡುಗಳು ಎಂದು ತಿಳಿದ ಅದೆಷ್ಟೋ ಅಂಶಗಳನ್ನು ಬಹುತ್ವದ ನೆಲೆಯಲ್ಲಿ ಮರುಶೋಧಿಸಬೇಕು ಎಂಬ ಸಂದೇಶವನ್ನು ಕತೆಗಾರರು ನೀಡ ಬಯಸುತ್ತಾರೆ. … Read more
ವೃದ್ಧೋಪನಿಷತ್ (16-20): ಡಾ ರಾಜೇಶ್ವರಿ ದಿವಾಕರ್ಲ
16,ಅವಳೂ ಸಹವಯಸು ಮೇಲೆ ಬಿದ್ದರೂಎಲ್ಲ ಕೆಲಸಕ್ಕೂ ಈಗಲೂ ಆಕೆಯೇಸೂರ್ಯನು ಉದಯಿಸುವುದು ತಡವಾಗಿದ್ದರೆಮೋಡಗಳ ಹೊದಿಕೆ ತೆಗೆದು ಹಾಕುತ್ತಾಳೆ ನಡಿಗೆ ಸ್ವಲ್ಪ ಮಂದವಾಗಿದೆ.ಆದರೂ ಮನೆಕೆಲಸಕೊನೆಗಾಣಿಸುತ್ತಾಳೆ,ನನ್ನ ಮೇಲೆ ಆಕೆಗಿರುವ ಪ್ರೀತಿಯನ್ನುರೆಕ್ಕೆಗಳ ಕಷ್ಟಕ್ಕೆ ಒಪ್ಪಿಸುವಕತ್ತೆ ಕೆಲಸ ಗಾರ್ತಿ ಆಕೆ, ನಾನು ಇತ್ತೀಚಿಗೆಸ್ವಲ್ಪ ನಾಚುವುದನ್ನು ಕಲೆತೆಆಕೆಗೆ ಸಹಾಯ ಮಾಡಬೇಕೆಂದುನಿರ್ಧಾರಿಸಿದ್ದೇನೆಸಹಾಯವೆಂದರೆ ಬೇರೇನೂ ಅಲ್ಲನನ್ನ ಕೆಲಸಗಳನ್ನು ನಾನೇ ಮಾಡುಕೊಳ್ಳುತ್ತಿದ್ದೇನೆ ನನಗೆ ಸಮಸ್ಯೆಗಳಾಗಿ ಕಾಣುವೆವುಅವಳಿಗೆಪೊರಕೆ ಕಡ್ಡಿ ಸಮಾನ ಬೇಗನೆಎರಡನೆಯ ಪೀಳಿಗೆ ಬಂದೇಬಿಟ್ಟೆದೆ.ಮಮತೆ ಯ ಮಹಾ ಸಮುದ್ರದಲ್ಲಿಅವಲೀಲೆಯಾಗಿ ದೂಕಿಬಿಟ್ಟಳು ಆಕೆ.ಇಂತಹ ಈಜುಗೆ ನಾನು ಕಲಿಸಿದ್ದಲ್ಲ.ಈಜು ಬರುವುದೆಂದು ನನಗೆ ಗೊತ್ತಿಲ್ಲ. ಆಗಾಗ … Read more
ಮಗು, ನೀ ನಗು (ಕೊನೆಯ ಭಾಗ): ಸೂರಿ ಹಾರ್ದಳ್ಳಿ
ಇನ್ನೂ ಒಂಬತ್ತು ತಿಂಗಳ ನಂತರ ನಡೆಯಬೇಕಾದದ್ದರ ಬಗ್ಗೆ ಈಗಲೇ ಈಗಲೇ ಯಾಕೆ ಯೋಚಿಸುತ್ತೇನೆ ನಾನು? ಆಗ ಮಗು ನಮ್ಮ ಮನೆಯಲ್ಲಿಯೇ ಇರುತ್ತದೆಯೋ? ಅದಕ್ಕಿಂತ ಮುಖ್ಯವಾಗಿ ನಾವು ಇರುತ್ತೇವೆಯೋ? ಥೂ, ಥೂ, ಕೆಟ್ಟದ್ದನ್ನು ಯೋಚಿಸಬಾರದು. ಅಸ್ತು ದೇವತೆಗಳು ಅಲ್ಲೆಲ್ಲಾ ಸುತ್ತುತ್ತಾ ‘ಅಸ್ತು, ಅಸ್ತು’ ಅನ್ನುತ್ತಿರುತ್ತಾರಂತೆ. ಹಾಗೆ ಆಗಿಯೂಬಿಡುತ್ತದಂತೆ. ಬಿಡ್ತು, ಬಿಡ್ತು, ನಾನು ಗಲ್ಲಕ್ಕೆ ಹೊಡೆದುಕೊಂಡಿದ್ದೆ. ಮಗುವಿನ ಉತ್ತರೋತ್ತರ ಅಭಿವೃದ್ಧಿಗೆ ಈಗಲೇ ಯಾಕೆ ಬುನಾದಿ ಹಾಕುತ್ತೇವೆಯೋ ಗೊತ್ತಿಲ್ಲ. ಆಗ ಗಂಡ ಮತ್ತು ಹೆಂಡತಿಯರ ಸಂಬ ಂಧಗಳು ಹೇಗೆ ಉಳಿಯುತ್ತವೆ? ನಮ್ಮ … Read more
ಬುಕ್ಸ್ ಲೋಕ ಮತ್ತು ಸಾಗರ ಸಂಗಮ ಇಂಜಿನಿಯರ್ಸ್ ಅಸೋಸಿಯೇಷನ್ ಅರ್ಪಿಸುವ 3 ಪುಸ್ತಕಗಳ ಬಿಡುಗಡೆ
ಬುಕ್ಸ್ ಲೋಕ ಮತ್ತು ಸಾಗರ ಸಂಗಮ ಇಂಜಿನಿಯರ್ಸ್ ಅಸೋಸಿಯೇಷನ್ ಅರ್ಪಿಸುವ 3 ಪುಸ್ತಕಗಳ ಬಿಡುಗಡೆ ಕೊಳ್ಳೇಗಾಲ ಶರ್ಮ ಅವರ ಪ್ಲಾಸ್ಟಿಕಾಯಣ ಐ.ಜಿ.ಶ್ರೀನಿಧಿ ಅವರ ಮೈಸೂರಿನ ಚುರುಮುರಿಗೆ ಅಂತರಿಕದ ಟೊಮೇಟೊ ಸುನೀಲ್ ಬಾರ್ಕೂರ್ ಅವರ ಒಂಟಿತೋಳಗಳ ಬೆನ್ನು ಹತ್ತಿದವರು ಮತ್ತು ಇತರೆ ಸ್ವಾರಸ್ಯಗಳು ಅತಿಥಿಗಳು:ಕೊಳ್ಳೇಗಾಲ ಶರ್ಮರವಿರಾಮ್ ಸಾಗರ,ಟಿ.ಜಿ.ಶ್ರೀನಿಧಿಪ್ರಶಾಂತ್ ಎನ್ಸುನೀಲ್ ಬಾರ್ಕೂರ್ ಸ್ಥಳ : ಇಂಜಿನಿಯರ್ ಭವನ, ಪಿ.ಡಬ್ಲ್ಯೂಡಿ, ಕ್ಯಾಂಪಸ್, ನೃಪತುಂಗ ರಸ್ತೆ, ಕೆ.ಆರ್. ಸರ್ಕಲ್, ಬೆಂಗಳೂರು ದಿನಾಂಕ: 21 ಸೆಪ್ಟೆಂಬರ್ 2025ಮಧ್ಯಾಹ್ನ: 1: 30ಕ್ಕೆ ಕನ್ನಡದ ಬರಹಗಳನ್ನು ಹಂಚಿ … Read more
ಮೂರು ಕವಿತೆಗಳು: ಎಂ ಜವರಾಜ್
ಅಪ್ಪ ಅಪ್ಪನ ವರ್ಷದ ಕಾರ್ಯ. ಇದು ಮೊದಲಲ್ಲವರ್ಷಾ ವರ್ಷ ತಪ್ಪದೆ. ಇಷ್ಟದ ಊಟ ತಿಂಡಿ ಮದ್ಯಬೀಡಿ ಬೆಂಕಿ ಪೊಟ್ಟಣ ಜೊತೆ ಹೊಸ ಬಟ್ಟೆ ಎಡೆಗೆಇಡಬೇಕು ಅವ್ವನೆದುರು ಆಕಾಶದಂಥ ಅಪ್ಪನಿಗೆ! ನೋವಿನ ಮೂಟೆ ಹೊತ್ತು ಮಲಗಿರುವ ಅವ್ವ,ಹಗಲು ರಾತ್ರಿ ಎನ್ನದೆ ಗಂಟೆ ಗಳಿಗೆ ಎನ್ನದೆಯಾರು ಕೇಳುತ್ತಾರೊ ಬಿಡುತ್ತಾರೊ ಎಂಬರಿವಿಲ್ಲದೆತನಗೆ ತಾನೇ ತುಟಿ ಕುಣಿಸುತ್ತ ಅಪ್ಪನ ಗುಣಗಾನ!! ಅಪ್ಪ ಕಾಲವಾಗಿ ಹತ್ತಕ್ಕು ಹೆಚ್ಚು ವರ್ಷವಾಯ್ತುಒಂದು ಜೊತೆ ಹಸು ಒಂದು ಬಳ್ಳದ ಗಾಡಿ ಜೊತೆಗೆಅವ್ವ ಮತ್ತು ಆರು ಹೆಣ್ಣು ಆರು ಗಂಡಲ್ಲಿ … Read more
ವೃದ್ಧೋಪನಿಷತ್ (11-15): ಡಾ ರಾಜೇಶ್ವರಿ ದಿವಾಕರ್ಲ
ಅಂದುನಿಮ್ಮ ಹಾಗೆ ಓಡು ತ್ತಿದ್ದೆ.ಬೆಟ್ಟ,ಗಿಡ,ಆಕಾಶಆತ್ಮ ವಿಶ್ವಾಸಕದಲಿದರೆ ಬೆನ್ನಟ್ಟುವ ಕವನ.ನನ್ನ ಜೊತೆ ಇದ್ದವು.ಅಂದಿನ ದಿನಗಳಲ್ಲಿನನ್ನ ಉಸಿರೇ ಒಂದು ತೂಫಾನ್.ನನ್ನ ಹುಮ್ಮಸು ಒಂದು “ಪಟ್ಟಣದ ಉದ್ಯಾನ” ಒಮ್ಮೆ ನನ್ನದೂ ಸಹ ನಿಮ್ಮ ಹಾಗೆಯೆನನ್ನದು ಸಹ ಹದ ವಿಲ್ಲದ ಹಾಡು,ಒಂದು ಗಾಳಿಯ ಕಾರಂಜಿ.ಪ್ರೀತಿ ಇಲ್ಲವೆಂದಲ್ಲಮುಖ್ಯವಾಗಿ ಸ್ನೇಹ,ಎಂದಿಗೂ ತಣಿಯದ ದಾಹಸ್ವೇಚ್ಛ ವಾಗಿ ಗಿರಿಕೀ ಹೊಡಯುವ ವಿಹಂಗನನ್ನ ಅಂತರಂಗ,ಹಿಂದೆಗೆ ಹೋಗುವಹಾದಿಯ ಹಾಗೆ,ಯೌವನ ಜೀವದಿಂದ ಜಾರಿಹೋಗಿದೆಬೆಳಗಿನಜಾವ ತಂತಿಯಮೇಲೆನೀರಿನ ಬಿಂದುಗಳುಮುತ್ತುಗಳಹಾಗೆ ಹೊಳೆಯುತ್ತಿತ್ತುಈಗ ಅವುಗಳನ್ನುಕಣ್ಣೇರೆಂದು ಹೋಲಿಸಬೇಕೇನೋಆದರೆ ಜ್ಞಾಪಕಗಳೀಗತೋಟದ ಹೂಗಳಾದವುಮೂಳೆಗಳು ಸೋತಿದ್ದರೂಬೆರಳಿನ ತುಂಬಾತೃಪ್ತಿಯ ನಾದಗಳುಕೇಳಲಿಸುತ್ತವೆಇಷ್ಷ್ಟು ದಿನ ಹುಮ್ಮಸು ನಿಂದಹರೆದ ನದಿ … Read more
ಮಗು, ನೀ ನಗು (ಭಾಗ 6): ಸೂರಿ ಹಾರ್ದಳ್ಳಿ
ಸರಕಾರ ಏನಾದರೊಂದು ನಿಯಮ ಮಾಡಿ ಖಾಸಗಿ ಅಡುಗೆ ಕೆಲಸಗಳನ್ನು ನಿಯಂತ್ರಿಸಬೇಕು. ಸಮೂಹ ಸಾರಿಗೆ ಇರುವಂತೆಯೇ ಸಾಮೂಹಿಕ ಅಡುಗೆ ಮನೆ ಇರಬೇಕು. ಇದರಿಂದ ಸಮಯ, ವೆಚ್ಚ, ಶ್ರಮ, ಇವನ್ನು ಉಳಿಸಬಹುದು, ಎಂಬುದು ಅವರ ಅಭಿಪ್ರಾಯ. ಕಂದನಿಗೆ ಹಾಲು ಕೊಟ್ಟು ಮೂರು ಗಂಟೆ ಕಳೆಯುತ್ತಾ ಬಂತು, ಇನ್ನೇನು ಮಗು ಏಳಬಹುದು, ಎದ್ದು ಪ್ರಾಂ ಎಂದು ರಾಗ ಎಳೆಯಬಹುದು. ಸರಿಯಾಗಿ ಮೂರು ಗಂಟೆಯ ಅವಧಿಗೇ ಏಳುತ್ತೆ. ಗಡಿಯಾರವೇ ಅವಳನ್ನು ನೋಡಿ ತನ್ನ ಸಮಯ ಸೆಟ್ ಮಾಡಿಕೊಳ್ಳಬಹುದು, ಹಾಗೆ. ಹಗಲಾದರೆ ಪರವಾಗಿಲ್ಲ, ರಾತ್ರಿ … Read more
ದಿಕ್ಕುಗಳು (ಭಾಗ 7): ಹಟ್ಟಿ ಸಾವಿತ್ರಿ ಪ್ರಭಾಕರಗೌಡ
ಆದರೆ ಇಂದು ಲಲಿತಳ ಹುಡುಗುತನವೆಲ್ಲಾ ಒಂದೇ ಏಟಿಗೆ ಸತ್ತು ಹೋಗಿದೆ. ಅವಳು ಚೈತನ್ನನ್ನು ಮರೆಯಲು ಸಾಧ್ಯವೇ ಇಲ್ಲವೆಂದುಕೊಂಡಳು. ಹಾಗಂತ ಆತನನ್ನು ಬೇರೊಬ್ಬಳೊಂದಿಗೆ ನೋಡುಡುವುದೂ ತನ್ನಿಂದಾಗದು ಎಂದು ಬಿಕ್ಕಿದಳು. ಆಕೆ ತನ್ನ ರೂಮಿಗೆ ಬಂದಾಗ ಎಂಟು ಗಂಟೆಯಾಗಿತ್ತು. ಎಂದಿನಂತೆ ಮುಖ ತೊಳೆಯಲಿಲ್ಲ. ಬಟ್ಟೆ ಬದಲಾಯಿಸಲಿಲ್ಲ. ತನ್ನ ಕಂಪ್ಯೂಟರ್ ಮುಂದೆ ಕುಳಿತು, ಇ-ಮೈಲ್ ಬಾಕ್ಸ್ ತೆರೆದಳು. ಅಲ್ಲಿ ಹಲವಾರು ಪತ್ರಗಳು ತನಗಾಗಿ ಕಾಯುತ್ತಿದ್ದವು. ಚೈತನ್ನಿಂದ ಕೂಡ ಒಂದು ಪತ್ರ ಬಂದು ಕುಳಿತಿತ್ತು. ಏನು ಬರೆದಿರಬಹುದು ಎಂದು ಆತನ ಪತ್ರವನ್ನು ತೆರೆದಳು. … Read more
ಎರಡು ಕೊಂಕಣಿ ಅನುವಾದಿತ ಕವಿತೆಗಳು: ಜಾನ್ ಸುಂಟಿಕೊಪ್ಪ
ನೆನಪಿದೆ ನನಗೆ ಕೊಂಕಣಿ ಮೂಲ: ವಲ್ಲಿ ಕ್ವಾಡ್ರಸ್ಕನ್ನಡಕ್ಕೆ ಅನುವಾದ: ಜಾನ್ ಸುಂಟಿಕೊಪ್ಪ ನಾನು ಬದುಕಿದ್ದೆಈ ಭೂಮಿಯಲ್ಲಿ ಮನುಷ್ಯನಾಗಿ!ಸಮಯವು ಅಂದೂ ಇದ್ದಿರಲಿಲ್ಲಎಂದಿಗೂ ಅರ್ಥವಾಗದ ಅವಸರದಲ್ಲಿ;ಒಂದೆರಡು ಬಾರಿಹೇಗೋ ನಾನು ಬದುಕಿದ್ದೆನೆನಪಿದೆ ನನಗೆಸತ್ಯವಾಗಿಯೂಇಂದೂ ನೆನಪಿದೆ…. ಹೆಣಗಳ ರಾಶಿ ಬಿದ್ದಿತ್ತು!ರಣಭೂಮಿ ದಾಟಿ ಬಂದಿದ್ದೆಕೊಂದವರು ಯಾರು!?ಸತ್ತವರು ಯಾರು!?ನನಗೇನಾಗಬೇಕಿದೆ…ಯಾರು ಕೊಲ್ಲವವರು,ಯಾರು ಸಾಯುವವರು,ದಟ್ಟಗಿನ ಕೆಂಪು ನೆತ್ತರವಾರೆ ಕಣ್ಣಲ್ಲಾದರೂನೋಡುತ್ತಾ ಬಂದಿದ್ದೇನೆನಿಜವಾಗಿಯೂ ನನಗೆಇಂದಿಗೂ ನೆನಪಿದೆ… ದೇವಾಲಯಕ್ಕೆ ಹೊಕ್ಕುವಾಗನನ್ನ ದಿರಿಸು ನೋಡಿಬರೆ ಹೊಟ್ಟೆಯವರು ಬೇಡುವುದನ್ನುಸತ್ಯವಾಗಿಯೂ ನಾನು ಕೇಳಿಸಿಕೊಂಡಿದ್ದೆ –’ಅಯ್ಯಾ ಏನಾದ್ರೂ ಕೊಡಪ್ಪಾ..!’ಹುಂ….ನನ್ನ ಭಕ್ತಿಯೇ ನನ್ನ ಶಕ್ತಿಕಣ್ಣ ಮುಚ್ಚಿ ಕೈ ಎತ್ತಿಭಕ್ತಿಯಿಂದ ಮಾಡಿದ … Read more
