ಎದ್ದೇಳು ಮಂಜುನಾಥ – ಒಂದು ಅಪರೂಪದ ಚಿತ್ರ
“ಕನ್ನಡದ ಮಟ್ಟಿಗೆ ಒಂದು ಉತ್ತಮ ಪ್ರಯತ್ನ/ಚಿತ್ರ” – ಈ ವಾಕ್ಯವನ್ನು ನೀವು ತುಂಬಾ ಸಲ ಕೇಳಿರುತ್ತೀರ. ನೀವು ಬಳಸಿರುವ ಸಾಧ್ಯತೆಗಳೂ ಇವೆ. ಒಂದು ಕ್ಷಣ ಯೋಚಿಸಿ, ಹಿಂಗಂದ್ರೆ ನಿಜವಾದ ಅರ್ಥ ಏನು ಅಂತ. ‘ಫ್ರೆಂಚ್ ಮಟ್ಟಿಗೆ ಒಳ್ಳೆ ಚಿತ್ರ’ ಅಥವಾ ‘ಇಟಾಲಿಯನ್ ಮಟ್ಟಿಗೆ ಉತ್ತಮ ಪ್ರಯೋಗ’ ಅಂತೆಲ್ಲಾದ್ರೂ ಕೇಳಿದ್ದೀರಾ? ಅಥವಾ ‘ಕನ್ನಡದ ಮಟ್ಟಿಗೆ ಉತ್ತಮ ಪೇಂಟಿಂಗ್ ಇದು’ ಅಥವಾ ‘ಕನ್ನಡದ ಮಟ್ಟಿಗೆ ಉತ್ತಮ ಸಂಗೀತ ಇದು’ ಅಂತೇನಾದ್ರೂ? ಇಲ್ಲ ಅಲ್ವಾ? ಮತ್ತೆ ಕನ್ನಡ ಚಲನಚಿತ್ರಗಳಿಗೇಕೆ ಈ ವಾಕ್ಯಪ್ರಯೋಗ? … Read more