ಅಸ್ತಿತ್ವ : ಪ್ರಸಾದ್.ಡಿ.ವಿ.

ಅದೊಂದು ದೊಡ್ಡ ಬಂಗಲೆ, ಸುಮಾರು ಹತ್ತಿಪ್ಪತ್ತು ವರ್ಷಗಳಿಂದ ಯಾರೂ ವಾಸವಿದ್ದಂತೆ ಕಾಣುವುದಿಲ್ಲ! ಅಲ್ಲಲ್ಲಿ ಗಿಡ ಗಂಟಿಗಳು ಬೆಳೆದು, ಆ ಬಂಗಲೆಗೆ ಭೂತ ಬಂಗಲೆಯಂತಹ ಮೆರುಗು ಕೊಟ್ಟಿದ್ದವು! ಆಗೊಮ್ಮೆ, ಈಗೊಮ್ಮೆ ನರಿಯಂತೆ ಕೂಗುವ ಕಿವಿ ಗಡಚಿಕ್ಕುವ ಸದ್ದುಗಳು, ಭಯವನ್ನು ಉತ್ಪಾದಿಸಿ, ತನುವೊಳಗಿನ ಜೀವ ಹಿಡಿಯಷ್ಟಾಗುವಂತೆ ಮಾಡುತ್ತಿದ್ದವು. ಆ ಬಂಗಲೆ ಊರಿನಿಂದ ಸಾಕಷ್ಟು ದೂರದಲ್ಲಿದ್ದುದ್ದರಿಂದ ಹಾಗೆ ಪಾಳು ಬಿದ್ದಿತ್ತೋ, ಇಲ್ಲ ಆ ಮನೆಯ ವಾರಸುದಾರರೆಲ್ಲಾ ಒಟ್ಟಾಗಿ ಯಮನ ಅತಿಥಿಗಳಾಗಿದ್ದರೋ, ಅಥವಾ ಆ ಬಂಗಲೆಯ ವಾಸ್ತು ಸರಿಯಿಲ್ಲದೆ ಅವಘಡಗಳು ಸಂಭವಿಸಿ ಭೂತ … Read more

ನಂಜು ನುಂಗಿ ನಕ್ಕಾತ : ರಮೇಶ್ ಕುಲಕರ್ಣಿ

ಬೆಳಗಿನ ಜಾವ ಮೂರು ಗಂಟೆಗೆ ಇರಬಹುದು, ನನ್ನ ಸೆಲ್ ಫೋನ್ ವೈಬ್ರೇಶನ್ ಮೋಡಲ್ಲಿ ಪತರಗುಟ್ಟುತ್ತಿತ್ತು. ಕರೆಯನ್ನು ಕಟ್ ಮಾಡಿದರೂ ಆ ಕಡೆಯ ಕರೆ ಬರುತ್ತಲೇ ಇತ್ತು. ಏನೋ ಸಮಸ್ಯೆ ಇರಬಹುದು ಎಂದುಕೊಂಡ ನಾನು ಫೋನನ್ನು ರಿಸೀವ್ ಮಾಡಿ “ಹರಿ ಓಂ..” ಅಂದೆ. ಆ ಕಡೆಯಿಂದ ನನ್ನ ಮಿತ್ರ ಶಶಿಕುಮಾರ್ ಕಂಪಿಸುವ ಧ್ವನಿಯಲ್ಲಿ “ಸರ್ ಸ್ವಲ್ಪ ನಮ್ಮ ಮನೆಹತ್ರ ಬರ್ತೀರಾ? ನಿಮ್ಮ ಹತ್ರ ಮಾತಾಡಬೇಕು, ಬೇಗ ಬನ್ನಿ ಸಾರ್ ಎನ್ನುತ್ತಲೇ ಫೋನ್ ಕರೆಯನ್ನು ಕಟ್ ಮಾಡಿದರು. ನನ್ನ ಆತ್ಮೀಯ … Read more

ನೈತಿ(ಕತೆ)

  'ಸಾರ್ ನಿಮ್ಮನ್ನ ಎಲ್ಲೋ ನೋಡಿದ್ದೀನಿ ಸಾರ್….ನೀವು…..ನೀವ್ ದಾರವಾಯಿಲಿ ಬತ್ತೀರ ಅಲ್ವಾ?' ಅಂತ ಶುರು ಮಾಡಿದ ಅವನು. ನಾನು ಸುಮ್ಮನೆ 'ಹ್ಞೂಂ' ಅಂದೆ. 'ಅದೇ ಅನ್ಕೊಂಡೆ… ನೀವು ಬಸ್ ಅತ್ದಾಗಿಂದ ತಲೆ ಕೆಡುಸ್ಕೊತಿದ್ದೆ, 'ಇವ್ರುನ್ನ ಎಲ್ಲೋ ನೋಡ್ದಂಗದಲ್ಲ ಅಂತ…ಈಗ ವಳಿತು ಸಾರ್… 'ನಮಸ್ಕಾರ ಸಾರ್…ನನ್ನೆಸ್ರು ಕೃಷ್ಣ ಅಂತ…' 'ಈ ಬಸ್ ಕಂಡಕ್ಟರ ನೀವು?'    ' ಊಂ ಸಾರ್ ಒಂತರ ಅಂಗೆ ಅನ್ಕೊಳ್ಳಿ… ಈ ಬಸ್ಗೆ ನಾನೇ ಕಂಡಕ್ಟ್ರು, ಕ್ಲೀನರ್ರು, ಕ್ಯಾಶಿಯರ್ರು ಎಲ್ಲಾ'  ಅವನ ಮಾತಿನ ಧಾಟಿಗೆ ನಕ್ಕು ಮೆಚ್ಚುಗೆ ಸೂಚಿಸಿದೆ.  … Read more

ಅಂತರ್ಜಾಲದ ಹುಡುಗ

ಭಾವನ ಊಟಮುಗಿಸಿ ವಿಶ್ರಾಂತಿಗಾಗಿ ಸ್ವಲ್ಪ ಹೊತ್ತು ಮಲಗೋಣ ಎಂದು ಸೋಫಾದಲ್ಲಿ ಇನ್ನೇನು ಮಲಗಬೇಕು ಅಷ್ಟರಲ್ಲಿ ಅವಳ ಮೊಬೈಲ್ ಗೆ ಟಿನ್ ಟಿನ್ ಎಂದು ಸಂದೇಶ ಬಂತು, ಎದ್ದು ನೋಡಿದಾಗ  ಹಾಯ್ ಅಕ್ಕಾ ಹೇಗಿದ್ದೀಯ,ಈ ಬದನಸೀಬ್ ತಮ್ಮನ ಮರೆತುಬಿಟ್ಟೆಯ ಎನ್ನುವ ಸಂದೇಶ ನೋಡಿ ಅವಳಲ್ಲಿ ಬೇಸರ, ಸಂತೋಷ, ಆತಂಕದ ಭಾವನೆಗಳು ಒಮ್ಮೆಲೆ ನುಗ್ಗಿ ಕರುಳಲ್ಲಿ ಚುಚ್ಚಿದ ಅನುಭವ. ನಿಧಾನವಾಗಿ ಕಣ್ಣಲ್ಲಿ ನೀರಿನ ಹನಿಗಳು ತೊಟ್ಟಿಕ್ಕಿದವು. ಒಮ್ಮೆ ನಿಟ್ಟುಸಿರಿಟ್ಟಳು. ಮನಸ್ಸು ನಿದ್ದೆ ಮರೆತು ನೆನಪಿನ ಕುದುರೆಯ ಬೆನ್ನೇರಿತ್ತು. ಆಗಿನ್ನು ಹೊಸತಾಗಿ … Read more

ಅಂತರಂಗದ ಗಂಗೆ

ಆಫೀಸ್‍ಗೆ ಮುಂಚೆ ಬರುವ ಅಭ್ಯಾಸವಿದ್ದರೆ ಇದೊಂದು ಮುಜುಗರ. ಒಳಗೆಲ್ಲ ಕಸ ಗುಡಿಸುತ್ತಿದ್ದರು. ಹಾಗಾಗಿ ಸೆಕ್ಷನ್ನಿನ ಹೊರಗೆ ನಿಂತಿದ್ದೆ. ನಾನು  ನಿಂತಿರುವುದನ್ನು  ಗಮನಿಸಿದ ಆಕೆ ಬೇಗ-ಬೇಗ ಎಂಬಂತೆ ಗುಡಿಸಿ, ಹಾಗೆ ಒಳಗಿದ್ದ ಡಸ್ಟ್ ಬಿನ್ ಗಳ ಎಲ್ಲ ಕಾಗದಗಳನ್ನು ಒಂದೆ ಬ್ಯಾಸ್ಕೆಟ್ ಗೆ ಹಾಕಿಹೊರಬಂದಳು. ಒಳಗೆ ಗುಡಿಸಿದಾಗ ಎದ್ದ  ಧೂಳು ಸ್ವಲ್ಪ  ಸರಿಯಾಗಲಿ ಎಂದು ಒಂದೆರಡು ನಿಮಿಷ ನಿಂತಿದ್ದೆ. ಆಕೆ ಒಳಗಿನಿಂದ ತಂದ ಕಸವನ್ನೆಲ್ಲಹೊರಗಿನ ದೊಡ್ಡ ಕಸದಡಬ್ಬಿಗೆ ಹಾಕುವ ಮುನ್ನ ಅದೇನೋ  ಗಮನಿಸಿದಳು.  ಈ ಅಕ್ಷರಜ್ಞಾನವಿಲ್ಲದಿರುವ ಕೆಲಸದವರಲ್ಲಿ ಒಂದು … Read more

ಊರು-ಕೇರಿ ನಡುವ ನಾಗರಾವು ಮಿಸುಕಾಡಿ…

ಶ್ರಾವಣ ತಿಂಗಳ ಕೊನಿ ಸೋಮವಾರ. ಊರ ಬಸನದೇವ್ರ ಗುಡಿಯೊಳಗ ತಿಂಗಳಾನುಗಟ್ಲೆ ನಡೆದ ಬಸವ ಪುರಾಣಕ್ಕೆ ಅಂದು ಮಂಗಳ ಹೇಳೋ ದಿವ್ಸ. ಹೇಳಿಕೇಳಿ ಅದು ಲಿಂಗಾಯತರು ಬಾಳ ಮಂದಿ ಇರೋ ಬಸವನೂರು. ಲಿಂಗಾಯತರಿಗೆ ಬಸವಪುರಾಣದ ಮಂಗಲೋತ್ಸವೆಂದರೆ ಕೇಳಬೇಕೆ. ಪ್ರತಿಯೊಂದು ಮನೆಗೆ ಸಾವಿರಾರು ರೂ.ಪಟ್ಟಿ ವಸೂಲು ಮಾಡಿದ್ರು. ಊರು ಜನರು ಬುಟ್ಟಿಗಟ್ಟಲೆ ರೊಟ್ಟಿ, ಚೀಲಗಟ್ಟಲೆ ಜ್ವಾಳ-ಗೋದಿ ಕೊಟ್ಟು ‘ಬಸಣ್ಣ ನಿನ್ನ ಜಾತ್ರಿ ಚಂದಂಗ ನಡಿಯುವಂಗ ನೋಡಕೋಳ್ಳಪೋ. ಎಲ್ಲಾ ನಿನ್ನ ಕೂಡೇತಿ’ ಎಂದು ಬೇಡಿಕೊಂಡಿದ್ದರು. ಬಸಣ್ಣದೇವ್ರ ಗುಡಿಮುಂದಿನ ದೊಡ್ಡ ಪೆಂಡಾಲದೊಳಗ ಊರ … Read more

ವಿಶ್ರಾಂತ

  ಕೂಗು ಹಾಕುತ್ತಿದ್ದ ಮಸೀದಿಯ ಅಲ್ಲಾಹು…ಆವಾಜಿಗೆ ಎದುರಾಗಿ ಊರಿನ ಇದ್ದಬಿದ್ದ ನಾಯಿಗಳೆಲ್ಲ ಹಾಡತೊಡಗಿದಾಗ ಒಳ ಕೋಣೆಯ ಕತ್ತಲಲ್ಲಿ ಮಲಗಿದ್ದ ಅಂಜನಪ್ಪನಿಗೆ ಆಗಷ್ಟೆ ಗ್ರಾಸ ಬಡಧಂಗ ಬಡಕೊಂಡಿದ್ದ ನಿದ್ದೆಯ ಅಮಲು ತಟ್ಟನೆ ಹಾರಿ ಹೋಯಿತು. ಎಚ್ಚರಿಕೆಗೆ ಹೆದರಿಕೊಂಡು ಮತ್ತಷ್ಟು ಕೌದಿಯ ಮುಸುಕಿನೊಳಗೆ ಹುದುಗಲು ಚಡಪಡಿಸುತ್ತಿದ್ದಾಗ- ಹೊತ್ತುಕೊಂಡಿದ್ದ ಹಾಸಿಗೆ ಎಡ-ಬಲ ಸರಿದಾಡಿ ಕಾಲಕೆಳಗೆ ಬಂದು ಬಿಡುತ್ತಿರುವುದು ತಿಳ್ಳಿ ಆಟದಂತಾಗಿ ಬಿಟ್ಟಿತ್ತು. ನಿವೃತ್ತಿ ಸಿಕ್ಕಮ್ಯಾಲ. ದೇಶದಾಗಿನ ಎಲ್ಲ ದೇವಸ್ಥಾನ ತೋರಿಸತೀನಿ ಅಂತ ಹೆಂಡತಿಗೆ ಮಾತು ಕೊಟ್ಟಿದ್ದರೂ, ಮನಸ್ಸಿಗೆ ವಿಶ್ರಾಂತಿ ಸಿಕ್ಕದಾಗಿತ್ತು. ಮಗನೊಬ್ಬ … Read more

ಕತೆಯಾದವಳು

  ರೇಣುಕ ಎಂದಿನಂತೆ ಇಂದೂ ಕೂಡ ತನ್ನ ನಿತ್ಯಕಾಯಕವೆಂಬಂತೆ ಅರೆ ಆವಳಿಕೆಯ ಜೊತೆಗೇ ಬಂದಳು. ಬಂದವಳೇ ಮನೆಯ ಎದುರಿನ ಕಾರ್ಪೆಟ್ಟನ್ನು ಮುಟ್ಟಿ ನಮಸ್ಕರಿಸುವ ರೀತಿ ಎರಡೂ ಕೈಗಳಿಂದ ಎತ್ತಿ ಹೊರಗೆ ಎಸೆದು, ಕಾಲಿಂಗ್ ಬೆಲ್ಲಿಗೊಮ್ಮೆ ಕುಟುಕಿದಳು. ಬಾಗಿಲನ್ನು ತೆರೆದವಳು ರೂಪ. ಎಂದಿನಂತೆ ತಾನು ಈಗ ಹೊರಡುತ್ತೇನೆ, ನೀನು ಬರೋದು ಇಷ್ಟು ತಡವಾದರೆ ಹೇಗೆ ರೇಣುಕಾ? ಇವತ್ತೂ ಮೀಟಿಂಗ್ ಇದೆ. ಇನ್ನು ಅರ್ಧ ಘಂಟೆಯಲ್ಲಿ ನಾನು ಹೊರಡಬೇಕು.. ಎಂದೆಲ್ಲಾ ಗುಣುಗುಣಿಸಿ ತಾನು ಅದ್ಯಾವುದೋ ರೂಮ್ ಸೇರಿಕೊಂಡಳು. ರೇಣುಕನ ಎಂದಿನ … Read more