ನವೀನ ಕಹಾನಿ: ನವೀನ್ ಮಧುಗಿರಿ


ದೇವರ ದರ್ಶನ 

ದೇವರಲ್ಲಿ ನನಗೆನಂಬಿಕೆಯಿಲ್ಲವಾದ್ದರಿಂದ, ಬೆಳಗೆದ್ದ ಕೂಡಲೇ ದೇವರ ಮುಖ ನೋಡಬೇಕು. ಬಲಕ್ಕೆ ಏಳಬೇಕು ಎಂಬೆಲ್ಲಾ ಯಾವ ನಿಯಮ ಮತ್ತು ಕಟ್ಟುಪಾಡುಗಳು ನನಗಿಲ್ಲ.

ಇವತ್ತು ನಾನು ಮೇಲೆದ್ದಿದ್ದೇ  ಎಡಮಗ್ಗುಲಿನಲ್ಲಿ! ಎದ್ದು ಕೂತು ಕಣ್ ಬಿಡುವ ವೇಳೆಗೆ ಕಣ್ಣೆದುರಿಗಿದ್ದ ಅಮ್ಮಾ ಹೇಳಿದಳು-
"ದೇವರ ಮುಖ ನೋಡು"
ನಾನೆಂದೆ- "ಅಮ್ಮಾ, ನೀನೇ ನನ್ನ ದೇವರು!"
ಭಾವುಕಳಾದ ಅಮ್ಮಾ ತನ್ನೆರಡೂ ಕೈಗಳಲ್ಲಿ ನನ್ನ ಕೆನ್ನೆ ಸವರಿ ನೆಟಿಗೆ ತೆಗೆದಳು!!


ದೃಷ್ಟಿ-ಸೃಷ್ಟಿ 

"ಮಾಂಸಾಹಾರಗಳನ್ನ ಯಾರು ಕೊಟ್ಟರೂ ತಿನ್ನಬೇಡ. ಎಲ್ಲಿಯೂ ತಿನ್ನಬೇಡ. ಅದು ನಮ್ಮ ಮನೆ ದೇವರಿಗೆ ಆಗಿಬರೋಲ್ಲ, ಅಕಸ್ಮಾತ್ ತಿಂದರೆ ನಮಗೆ ದೃಷ್ಟಿ ಹೋಗುತ್ತೆ. ಕಣ್ಣು ಕಾಣದಾಗುತ್ತೆ." 
ನಾನು ಸಣ್ಣ ಹುಡುಗನಿಂದಲೂ ಅಮ್ಮಾ  ಹೀಗೆ ಹೇಳುತ್ತಲೇ ಬೆಳೆಸಿದಳು. 
ಮೊನ್ನೆ ಸಿಕ್ಕಿದ ನಮ್ಮ ಪರಿಚಿತ ವೈದ್ಯರೊಬ್ಬರು ಹೇಳಿದರು- 
" ಮೀನು ತಿನ್ನೋ ಮಾರಾಯ, ಕಣ್ಣಿಗೆ ಬಲು ಒಳ್ಳೆಯದು."

ಕೊನೆ ಹನಿ:- ತಾಯಿಯು ತನ್ನ ಮಗುವಿಗೆ ಸುಳ್ಳುಗಳನ್ನ ಹೇಳುತ್ತಲೇ ಬೆಳೆಸುತ್ತಾಳೆ! ಬಹುಶಃ ಅದಕ್ಕೆ ಇರಬೇಕು.. ಸುಭಾಷ್ ಚಂದ್ರ ಬೋಸ್, ಭಗತ್ ಸಿಂಗ್, ಸಂಗೊಳ್ಳಿ ರಾಯಣ್ಣ, ವಿವೆಕಾನಂದ.. ಇವರುಗಳ ನಂತರ ಮತ್ತೊಬ್ಬ ಅಂತಹ ನಾಯಕರು ಈ ಮಣ್ಣಿನಲ್ಲಿ ಜನಿಸಲಿಲ್ಲ!!!  
***
-ನವೀನ್ ಮಧುಗಿರಿ

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

8 Comments
Oldest
Newest Most Voted
Inline Feedbacks
View all comments
parthasarathyn
10 years ago

ಕೊನೆ ಹನಿ:- ತಾಯಿಯು ತನ್ನ ಮಗುವಿಗೆ ಸುಳ್ಳುಗಳನ್ನ ಹೇಳುತ್ತಲೇ ಬೆಳೆಸುತ್ತಾಳೆ! ಬಹುಶಃ ಅದಕ್ಕೆ ಇರಬೇಕು.. ಸುಭಾಷ್ ಚಂದ್ರ ಬೋಸ್, ಭಗತ್ ಸಿಂಗ್, ಸಂಗೊಳ್ಳಿ ರಾಯಣ್ಣ, ವಿವೆಕಾನಂದ.. ಇವರುಗಳ ನಂತರ ಮತ್ತೊಬ್ಬ ಅಂತಹ ನಾಯಕರು ಈ ಮಣ್ಣಿನಲ್ಲಿ ಜನಿಸಲಿಲ್ಲ!!!  
ಕ್ಷಮಿಸಿ ನಿಮ್ಮ ಅಭಿಪ್ರಾಯ ಒಪ್ಪಲಾರೆ,  ತಾಯಿ ಎಂದಿಗು ತಾಯಿಯೆ, ನೀವು ಹೇಳಿದ ನಾಯಕರೆಲ್ಲ ಹುಟ್ಟಿರುವುದು ಆಗಿನ ಸಾಮಾಜಿಕ ಸಂದರ್ಭದ ಅಗತ್ಯಕ್ಕೆ ಸರಿಯಾಗಿ. ಈಗಲು ಅಂತಹ ಸಂದರ್ಭ ಬಂದರೆ ಅಂತಹ ನಾಯಕರನ್ನು ನೂರು ನೂರಾಗಿ ತಾಯಿ ತಯಾರು ಮಾಡಬಲ್ಲಳು. ಆದರೆ ಈಗನ ಅಗತ್ಯವೆ ಬೇರೆ ಅಲ್ಲವೆ.   ರಾವಣ ಇದ್ದಾಗ ಮಾತ್ರ ರಾಮ ಹುಟ್ಟಬಲ್ಲ ! ಇಲ್ಲದಿದ್ದರೆ ಅವನ ಅಗತ್ಯವಿಲ್ಲ !
 
ಮತ್ತೆ ತಾಯಿ ಮಗುವಿಗೆ ಸುಳ್ಳು ಹೇಳುವಾಗ ಅವಳಿಗೆ ಗೊತ್ತಿರುತ್ತದೆ, ಮಗುವಿಗೆ ಇನ್ನು ದೊಡ್ಡ ದೊಡ್ಡ ಸತ್ಯಗಳನ್ನು ಅರ್ಥಮಾಡಿಕೊಳ್ಳುವ ವಯಸಲ್ಲ, ದೊಡ್ಡವನಾದ ನಂತರ ನಾನು ಹೇಳುವ ಸುಳ್ಳನ್ನು ಅದರ ಸಂದರ್ಬವನ್ನು ಅರ್ಥಮಾಡಿಕೊಳ್ಳುವ ಸತ್ಯವನ್ನು ತಿಳಿದುಕೊಳ್ಳುವ ಎಂದು.
ಉದಾಹರಣೇ: ಮಗು ಅತ್ತರೆ ಹೆದರಿಸುತ್ತಾಳೆ, ಅಳಬೇಡ ಗುಬ್ಬಿ ಬಂದು ಕಚ್ಚಿ  ಎತ್ತಿಕೊಂಡು ಒಯ್ಯುತ್ತದೆ ಎಂದು. ಅವಳಿಗೆ ಗೊತ್ತು ಗುಬ್ಬಿ ಮಗುವನ್ನು ಎತ್ತಿಕೊಂಡು ಹೋಗಲ್ಲ, ಹಾಗು ಮಗು ದೊಡ್ಡವನಾದ ನಂತರ ಅದನ್ನು ಅರ್ಥಮಾಡಿಕೊಳ್ಳುವ ಎಂದು. ಅದನ್ನು ಸುಳ್ಳು ಎಂದು ಹೇಳಲಾಗದು.
  ಮನೆಯಲ್ಲಿ ತಿನ್ನಲು ಇಲ್ಲ ಎಂದಾಗ ಆಕೆ ಅದನ್ನು ಮಗುವಿಗೆ ಹೇಳಲಾರಳು, ಈ ದಿನ ಉಪವಾಸ ಎಂದಷ್ಟೆ ಹೇಳುತ್ತಾಳೆ. 

ಕೊನೆಹನಿ: ತಾಯಿ ಹೇಳುವ ಸುಳ್ಳುಗಳನ್ನು ಅರ್ಥಮಾಡಿಕೊಳ್ಲಲು ನಾವು ದೊಡ್ಡವರಾಗಬೇಕು    ಆಗಷ್ಟೆ ಅರ್ಥವಾಗುತ್ತದೆ 🙂

ನವೀನ್ ಮಧುಗಿರಿ
ನವೀನ್ ಮಧುಗಿರಿ
10 years ago
Reply to  parthasarathyn

ನಿಮ್ಮ ಅಭಿಪ್ರಾಯಕ್ಕೆ ತಲೆಬಾಗುವೆ.. 

gaviswamy
10 years ago

‘ಕೊನೆಯ ಹನಿ’ಯ ಬಗ್ಗೆ ನನಗೂ ಗೊಂದಲವಾಯಿತು.
ಪಾರ್ಥಸಾರಥಿ ಸರ್ ಸಮಗ್ರವಾಗಿ ಪ್ರತಿಯಿಸಿದ್ದಾರೆ.
my opinion is also the same.

ಇದನ್ನು ಬರೆವಾಗ ನಿಮ್ಮ ಮೈಂಡಿನಲ್ಲಿ ಏನಿತ್ತು? ನಿಜಕ್ಕೂ ನೀವು ಸ್ಪಷ್ಟವಾಗಿ ಹೇಳಬಯಸುತ್ತಿರುವುದೇನು?
ನಿಮ್ಮ ವಿವರವಾದ ಅಭಿಪ್ರಾಯ ತಿಳಿಯುವ ಕುತೂಹಲ ನಮಗೆ.

ನವೀನ್ ಮಧುಗಿರಿ
ನವೀನ್ ಮಧುಗಿರಿ
10 years ago
Reply to  gaviswamy

ನಾನು ಹೇಳುವುದೇನೆಂದರೆ, ಇಂದಿನ ತಾಯಂದಿರು ಮಕ್ಕಳ ಬಳಿ ಅಗತ್ಯಕ್ಕೆ ತಕ್ಕಷ್ಟೇ ಸುಳ್ಳುಗಳನ್ನ ಹೇಳಬೇಕು. (ಮಕ್ಕಳ ಬೆಳವಣಿಗೆಯ ಹಿತ ದೃಷ್ಟಿಯಿಂದ) ಅದು ಬಿಟ್ಟು ಕತ್ತಲು, ಕರಡಿ, ಗುಮ್ಮ , ಗೊಗ್ಗಯ್ಯ ಅಂತೆಲ್ಲ ಹೆದರಿಸಿ ಬೆದರಿಸಿ ಬಲವಂತದಿಂದ ತುತ್ತು ತಿನ್ನಿಸುವ (ಮಗುವಿಗೆ ಹಸಿವಿಲ್ಲದಿದ್ದರೂ , ಅಥವಾ ಬೇಡವಾಗಿದ್ದರು) ತಾಯಿ ಒಮ್ಮೆ ಯೋಚಿಸಬೇಕು. ಈಗಲೇ ನಾವು ಮಗುವಿನಲ್ಲಿ ಭಯದ ಕಲ್ಪನೆಯನ್ನು ನೆಟ್ಟರೆ ಮುಂದೆ ಇವನು ಧೈರ್ಯಶಾಲಿಯಾಗಿರಲು ಹೇಗೆ ಸಾಧ್ಯ ಎಂಬುದನ್ನೆಲ್ಲ.. (ನಾನು ದೆವ್ವ & ದೇವರನ್ನು ನಂಬದಿದ್ದರೂ ಈಗಲೂ ನನಗೆ ಕತ್ತಲೆಂದರೆ ತುಂಬಾ ಭಯ..! ಕಾರಣವನ್ನು ನಾನಿಲ್ಲಿ ಮತ್ತೆ ವಿವರಿಸಿ ಹೇಳುವ ಅಗತ್ಯವಿಲ್ಲವೆನಿಸುತ್ತೆ)

sharada moleyar
sharada moleyar
10 years ago

ಕೊನೆಹನಿ: ತಾಯಿ ಹೇಳುವ ಸುಳ್ಳುಗಳನ್ನು ಅರ್ಥಮಾಡಿಕೊಳ್ಲಲು ನಾವು ದೊಡ್ಡವರಾಗಬೇಕು    ಆಗಷ್ಟೆ ಅರ್ಥವಾಗುತ್ತದೆ 
that means sometimes we elders  r made to tell lies 4 a good purpose.which is not an offense but good to our children.

ನವೀನ್ ಮಧುಗಿರಿ
ನವೀನ್ ಮಧುಗಿರಿ
10 years ago

ಖಂಡಿತಾ, ಆದರೆ ಅತಿಯಾದ ಸುಳ್ಳು ಒಳ್ಳೆಯದಲ್ಲ.. 

sudhir
sudhir
10 years ago

kannadada amma helida yentu sullugalu odi matte hige matadi

ನವೀನ್ ಮಧುಗಿರಿ
ನವೀನ್ ಮಧುಗಿರಿ
10 years ago
Reply to  sudhir

ಎ ಆರ್ ಮಣಿಕಾಂತ್ ಸರ್ ಅವರ ಪುಸ್ತಕವನ್ನ ಓದಿದ್ದೇನೆ.. ಎಲ್ಲಾ ಸಮಸ್ಯೆಗಳಿಗೂ ಒಂದೇ ಪರಿಹಾರವಲ್ಲ.. ಒಂದೊಂದು ಸಮಸ್ಯೆಗೆ ಒಂದೊಂದು ಪರಿಹಾರವಿರುತ್ತೆ. ಹಾಗೇ ಎಲ್ಲಾ ಅಭಿಪ್ರಾಯ , ವಿಚಾರಗಳು ಒಂದೇ ಆಗಿರುವುದಿಲ್ಲ. 

8
0
Would love your thoughts, please comment.x
()
x