ತಮವ ಕಳೆದಾಗ: ಶೇಖರಗೌಡ ವೀ ಸರನಾಡಗೌಡರ್
ಸಿಲಿಕಾನ್ ಸಿಟಿ ಬೃಹತ್ ಬೆಂಗಳೂರು ಮಹಾನಗರಿಯ ಎಲೆಕ್ಟ್ರಾನಿಕ್ ಸಿಟಿಗೆ ಹೊಂದಿಕೊಂಡಿರುವ “ಮಧುವನ” ಕಾಲೋನಿಯ “ಅನಿರೀಕ್ಷಿತಾ” ಅಪಾರ್ಟಮೆಂಟಿನಲ್ಲಿ ವಾಸಿಸುತ್ತಿರುವ ಸಾಫ್ಟ್ವೇರ್ ಇಂಜಿನಿಯರ್ ರಾಹುಲ್ ಪಕ್ಕದ ಕಾಲೋನಿಯಲ್ಲಿ “ಸರಳ ಯೋಗ ಸಂಸ್ಥೆ”ಯವರು ಆಯೋಜಿಸಿದ್ದ ಹತ್ತು ದಿನಗಳ ಯೋಗ ಶಿಬಿರದಲ್ಲಿ ಭಾಗವಹಿಸಲು ತನ್ನ ಹೆಸರನ್ನು ನೊಂದಾಯಿಸಿದ್ದ. “ಧ್ಯಾನ, ಪ್ರಾಣಾಯಾಮ, ಭಕ್ತಿಯೋಗ, ಆಹಾರ ಪದ್ಧತಿ, ವ್ಯಕ್ತಿತ್ವ ವಿಕಸನ ಮತ್ತು ಸಾರ್ಥಕ ಜೀವನಕ್ಕಾಗಿ ಯೋಗ. ಅಲರ್ಜಿ, ಅಸ್ಥಮಾ, ಅಧಿಕ ರಕ್ತದೊತ್ತಡ, ಮಧುಮೇಹ ಮತ್ತು ಸಂಧಿವಾತಗಳಂಥಹ ರೋಗಗಳನ್ನು ದೂರವಿಡುವುದಕ್ಕೆ ಯೋಗ. ಪೂಜ್ಯ ವಿವೇಕಾನಂದ ಗುರೂಜಿಯವರ ಅಮೃತವಾಣಿಯ … Read more