ಕಾವ್ಯಧಾರೆ

ಮೂರು ಕವನಗಳು: ಮಮತಾ ಚಿತ್ರದುರ್ಗ

ಅವನುಜೇನೊಳಗಿನ ಸಿಹಿ ಅವನುಹೂವಳಗಿನ ಮೃದು ಅವನುಗಾಳಿಯೊಳಗಿನ ಗಂಧ ಅವನುಮೋಡದೊಳಗಿನ ಬೆಳಕು ಅವನುತಾರೆಯೊಳಗಿನ ಹೊಳಪು ಅವನುನೀರಿನೊಳಗಿನ ಅಲೆಯ ಪುಳಕ ಅವನುಚಿತ್ರದೊಳಗಿನ ಬಣ್ಣ ಅವನುಪತ್ರದೊಳಗಿನ ಭಾವ ಅವನುಇಬ್ಬನಿಯೊಳಗಿನ ತೇವ ಅವನುಕಣ್ಣೊಳಗಿನ ನೋಟ ಅವನುಹಬ್ಬದೊಳಗಿನ ಸಡಗರ ಅವನುಬೆಟ್ಟದೊಳಗಿನ ತನ್ಮಯ ಅವನುಎಲೆಯೊಳಗಿನ ಹಸಿರು ಅವನುಚೈತ್ರದೊಳಗಿನ ಚಿಗುರು ಅವನುಭಾವನೆಗಳ ಯಾನಕ್ಕೆ ಗಮ್ಯ ಅವನುಸಂಗೀತದ ನಾದದೊಳಗಿನ ಸೌಮ್ಯ ಅವನುನನ್ನ ಧ್ವನಿಯ ಶಬ್ದ ಅವನುನನ್ನ ಕಣ್ಣಲಿ ಬೆರಗು ಅವನುನನ್ನವನು…! ಸುಗಂಧ ದ್ರವ್ಯವದು ಹೂಗಳ ಗೋರಿಒಣಗಿದ ಹೂಗಳ ಎದೆಯ ಭಾರದ ಮಾತಿನ ಸಾರ.ದೇವರ ಮುಡಿಯಲ್ಲಿದ್ದುಹೆಣದ ಅಡಿಯಲ್ಲಿದ್ದುಸೈನಿಕನ ಸಮಾಧಿ ಮೇಲಿದ್ದುಬಾವುಟದ […]

ಕಾವ್ಯಧಾರೆ

ಮೂರು ಕವಿತೆಗಳು: ಶಕುಂತಲಾ ಬರಗಿ

ಹೆಣ್ಣು ನೂರು ಸಂಕೋಲೆಯಲ್ಲಿ ಸಿಲುಕಿವಿಲಿ ವಿಲಿ ಒದ್ದಾಡುವ ಜೀವಸಂಕೋಲೆಯ ಬಿಡುಗಡೆಗೆ ಹಪಹಪಿಸಿಗೀಳಿಡುತ್ತಿರುವ ಪಾಪಿ ಕಾಡಿನ ಪ್ರಾಣಿ. ನಾವೆಷ್ಟು ಬೈದರು ಅಂದರುಉಗುಳು ನುಂಗುವಂತೆಒಳ ಹಾಕಿಕೊಳ್ಳುವಅಂತಶಕ್ತಿಯ ಅಗಾಧ ಮರ ! ಎಳೆ ಕೈ ಬಿಗಿದಳೆದು ಕಟ್ಟಿಕುಟ್ಟಿ ಒಡೆದಾಕಿದರುಒದ್ದಾಡದೆ ಸುಮ್ಮನೆ ಇದ್ದಾಳೆಅವಳೇ ಒಂದು ಸಾತ್ವಿಕ ಶಕ್ತಿ ಅವಳು ಇವಳು ಯಾವಳುಮತ್ತೊಬ್ಬಳು ಮಗದೊಬ್ಬಳುಹೀಗೆ ಅನ್ಯಾಯಕ್ಕೇಒಳಗಾದವರ ಸಂಖ್ಯೆ ಏರುತ್ತಲೇ ಇರುತ್ತದೆ ಅವರ ಕೋಪ ತಾಪ ಶಾಪಗಳಅವಶೇಷಗಳ ಮೆತ್ತಿಕೊಂಡಿವೆಈ ಪುರುಷಧೀನ ಪುರದಲ್ಲಿಇನ್ನೂ ಮೆತ್ತಿಕೊಂಡಿವೆ ಶಾಪದ ಗುರುತುಗಳಾಗಿ ! ಕೂಗು ಅಳು ನೋವಿನ ಧ್ವನಿಪ್ರತಿಧ್ವನಿಗಳು ಅನುರಣಿಸುತ್ತಿವೆಈ ಪುರುಷಾಂದಕಾರದ […]

ಕಾವ್ಯಧಾರೆ

ಮೂವರ ಕವಿತೆಗಳು: ಜ್ಯೋತಿ ಕುಮಾರ್‌ ಎಂ. (ಜೆ.ಕೆ.), ಕುಸುಮ ರಾವ್, ಉಮಾ ಸೂಗೂರೇಶ ಹಿರೇಮಠ

ಉಗಾದಿ ಏಸೊಂದು ದಿವ್ಸಾತುನೀನು ಬಿಟ್ಟು ವ್ಹಾದಬ್ಯಾಸರದ ನೆನೆಕೆಗಳಿಗೆ ಎದೆ ಮ್ಯಾಲೆ ಬಂಡೆಏರಿಕೊಂಡು, ಬಡಕೊಂಡು.ಉಗಾದಿನೇ ಬಂತು ತಿರುಗಿ ಮನದ ಬಾಗ್ಲಮ್ಯಾಲಿನ ಮಾಂತೊಪ್ಲಒಣ್ಗಿ ಶ್ಯಾನೆ ಮಾಸಾತು ಬೇನ್ಗಿಡದ ತುಂಬಸಿ ನೆನಪಾ ಹೂಕಾದು ಬಿಟ್ಟಾವ ಭಾಳ ಕೋಗ್ಲಿಯ ಗಂಟ್ಲುವಿರಹ ಕಟ್ಟೈತಿಮೌನವಾಗಿ ಕುಂತೈತಿ ಶಾಬಾದಿ ಮಠ್ಕ್ಯಾಲೆಂಡರ್ ಕಾಯೋದಖಾಯಂ ಅಂದೈತಿ ಹಾಕ್ಕೊಂಡ ಅರಿವಿನಿನ್ನ ನೆನಪ ಜಳಕದಾಗತೋಯ್ದು ತಪ್ಡಿಯಾಗೈತಿ ಪಚ್ಚಿಮದ ಸಂಜಿ ಬಾನಾಗಚಂದ್ರನಂತ ನಿನ್ನ ಮಾರಿಕಂಡು ಜೀವ ಜಲ್ ಅಂದೈತಿ ಅಂದ್ರ ಬಾಹ್ರ ಆಟದಾಗನಗುವ ನಿನ್ನ ರಾಣಿ ಕಾರ್ಡ್ಸಿಕ್ಕಿ ಕೈ ಕೋಸಿರಾಡೈತಿ ಉಗಾದಿಯಾದ್ರೂಯಾಕ್ ಬಂತೋನಿನ್ನ ನೆನಪ […]

ಕಾವ್ಯಧಾರೆ

ಮೂರು ಕವಿತೆಗಳು: ಜೊನ್ನವ (ಪರಶುರಾಮ್ ಎಸ್ ನಾಗುರ್)

ಸ್ವಾತಂತ್ರ್ಯ ಭಾರತದಲ್ಲಿ ನೀರಿಗಾಗಿ ಸೂರಿಗಾಗಿಭಾವಕ್ಕಾಗಿ ಬಾಷೆಗಾಗಿದೇಶದೊಳಗೆ ಕದನಹೇಳು ಯಾರು ಕಾರಣ ಗುಡಿ ಗೋಪುರ ಮಣ್ಣಾದವುಮಸಿದಿ ಚರ್ಚ್ ಮುಕ್ಕಾದವುಪ್ರೇಮ ತುಂಬಿದೆದೆ, ಏಕೆ ಕಲ್ಲಾದವುಹಸಿ ನೆತ್ತರದ ಕಂಪು, ಸುತ್ತ ಸುಳಿದಾಡಿದವು 75ನೇ ಸ್ವಾತಂತ್ರ್ಯ ಸಂಭ್ರಮಿಸಿದೇವುಚುಟಿ ತೊಟ್ಟಿಲ ತೂಗುವರ ನಡುವೆಮೂಲಭೂತ ಹಕ್ಕಿಗಾಗಿ,ಇದ್ದೇ ಇರುವುದುದೇಶದಲ್ಲೊಂದು ಗೊಡವೆ ಅಂಗಲಾಚ ಬೇಕಾಗಿದೆಅರ್ಜಿಗಳ ಮೇಲೆ ಅರ್ಜಿ ಕೊಟ್ಟುಇದೇ ಸ್ವಾತಂತ್ರ್ಯದಒಳಗಿನ ಗುಟ್ಟು ಕೋಪವೆ ನಲ್ಲೆ? ಕೋಪವೆ ನಿನಗೆನನ್ನ ಮೇಲೆ ನಲ್ಲೆಅದಕ್ಕೆ ನಾ ತಂದೆಕಂಪು ಸೂಸುವ ದುಂಡು ಮಲ್ಲೆ ನಿನ್ನ ಚೂಟಿ ರೇಗಿಸಿ, ಮತ್ತೆ ರಮಿಸಿಎದೆಗಾನಿಸಿ ಮತ್ತೆ ಪ್ರೇಮಿಸಿಉಸಿರಲೆ ಪಿಸು […]

ಕಾವ್ಯಧಾರೆ

ಪಂಜು ಕಾವ್ಯಧಾರೆ

ಇವಳೊಂದು ರಾಕ್ಷಸಿ ೧ ಕಟ್ಟಿ ಕಾಯುವವರಿಲ್ಲವೇ ಇವಳಮುರಿದ ಮೂರ್ತಿಗಳುಹರಿದ ಕನಸುಗಳ ತಿಂದು, ಒಡೆದ ಮನಸುಗಳನಿಂದೆ ಅಪಮಾನಭಯ ಶೋಕಗಳಕುಡಿಕುಡಿದೂ ಎಂದೆಂದೂ ಮುಗಿದಂತಿಲ್ಲಇವಳ ಹಸಿವು ದಾಹಬಡವರ ಅಂಗೈ ಬೆಂಕಿಯವಳುಇಂದ್ರ ಸಭೆಯ ನರ್ತಕಿ ಆಹಾ!ಕೋಮಲೆಯಂದೆವಳ ಮುಟ್ಟೀರಿ ಜೋಕೆತಲ್ಗೇರಿದಂತೆ ಸುರೆಮಿಂಚು ಹೊಡೆದಂತೆ ಅರೆಘಳಿಗೆಮುಂದೊಂದು ವರುಷ ಕವಿ ದೇವದಾಸಕ್ಷಣ ಚಿತ್ತ – ಕ್ಷಣ ಅಸ್ವಸ್ಥ! ೨ತುಂಬಿದ ಕಣ್‌ ರೆಪ್ಪೆಗಳು, ಒಣಗಿ ಬಣಗುಡುವ ಭಾವದೆದೆಅನ್ಯಾಯವಾಗಿ ಅಗಲಿದ ಕ್ರೌಂಚ ಪಕ್ಷಿಗಳುಈಗ ಹುಟ್ಟಿ ಸತ್ತ ಶಿಶುವುಟೀಪಾಯ್‌ ಮೇಲಿನ ಸಿಂಗಲ್‌ ಟೀ ಕಪ್ಪುಹೈವೇ ಮೇಲೆ ಸುಟ್ಟು ತಿಂದ ಬಣ್ಣದ ನವಿಲಿನ […]

ಕಾವ್ಯಧಾರೆ

ಮೂರು ಕವಿತೆಗಳು: ಡಾ. ಸದಾಶಿವ ದೊಡಮನಿ, ಇಲಕಲ್ಲ

ʼಮಾಂಸದಂಗಡಿಯ ನವಿಲು’ ನೆನಪಿನಲ್ಲಿ ನೀವು ಹೊರಟು ನಿಂತಿದ್ದು; ನಡು ಮಧ್ಯಾಹ್ನ, ಕಡು ಬಿಸಿಲಲ್ಲಿಹೊಲಗೇರಿಯ ಕಪ್ಪುಕಾವ್ಯ ಕಣಗಿಲೆಯರಳಿಶತಮಾನದ ನೋವಿಗೆ ಮುದ್ದು ಅರಿಯುವ ಗಳಿಗೆಯಲ್ಲಿ ಮುದಿ ಬೆಕ್ಕುಗಳು ಹುಲಿಯ ಗತ್ತಿನಲಿಹಗಲು ಗಸ್ತು ತಿರುಗುವಾಗ ನೀವು ಹುಲಿಯ ಗುಟುರು ಹಾಕಿದಿರಿ ಗುಟುರಷ್ಟೇ ಕೇಳಿಸಿತು;ಕೇಳುತ್ತಿದೆಹಿಮದ ಹೆಜ್ಜೆಯೂ ತೋರುತ್ತಿಲ್ಲಚಿತ್ರದ ಬೆನ್ನು ಕಾಣುತ್ತಿಲ್ಲಮಾಂಸದಂಗಡಿಯ ನವಿಲು ಹುಡುಕುತ್ತಿದ್ದೇನೆನೀವು ಎಲ್ಲಿ? ಮಂಗಮಾಯ! ಕೆಂಪು ದೀಪದ ಕೆಳಗೆನನ್ನಕ್ಕ,ತಂಗಿಯರು ಎದೆ ಸುಟ್ಟುಕೊಂಡುನಲುಗುವಾಗ ನೀವು ತಾಯಿಯಾಗಿ ಹೆಗಲ ಕೊಟ್ಟು, ನೋವು ಆಲಿಸಿದಿರಿಹಗಲು ದೀವಟಿಗೆಯಾಗಿ ಉರಿದು,ಉಳ್ಳವರ ಎದೆಗೊದ್ದು ಅಸಲು ಸಹಿತ ಲೆಕ್ಕ ಚುಕ್ತಾ ಕೇಳಿದಿರಿನೀವು […]

ಕಾವ್ಯಧಾರೆ

ಶಿವಧ್ಯಾನ: ಡಾ. ರಶ್ಮಿ ಕಬ್ಬಗಾರ

ಅಲ್ಲಿಗೆ ಹೋದ ಮೇಲೆ ಗೊತ್ತಾದದ್ದುನಮ್ಮೂರ ಶಿವ ಎಷ್ಟು ಸಿಂಪಲ್ಲು ಅಂತ !ಶಿವರಾತ್ರಿಯೋ- ಮಡಿಹುಡಿ ನೈವೇದ್ಯದತಲೆಬಿಸಿ ಎಳ್ಳಷ್ಟೂ ಇರದಶುದ್ಧ ಪ್ರೀತಿಯ ಸಮಾವೇಶವೇ ಸರಿಯೆನ್ನಿ ಆ ದಿನ ಯಾವ ಹೊಳೆಯೂ ಆದೀತು ಪಕ್ಕದಲ್ಲೊಂದು ಶಿಲೆಯಿದ್ದರಲ್ಲಿ ಶಿವರಾತ್ರಿ ನೀರೆಲ್ಲವೂ ಗಂಗೆ’ ಕಲ್ಲ ತಲೆಮೇಲೊಂದಿಷ್ಟು ಅಭಿಷೇಕಗೈದುನಿರುಮ್ಮಳವಾಗಿ ಬನ್ನಿ ಮನೆಗೆ’- ಹಿರಿಯರ ನುಡಿ ನಮ್ಮಜನ ಊರು-ಕೇರಿಯ ಗೆಳೆಯರನ್ನಸಹಜೀವಗಳನ್ನ ಕೂಡಿಸಿ,ಗೂಡ್ಸು, ಲಾರಿ ತುಂಬಿಕೊಂಡುಗಲ್ಲದ ಗೌಜುಗಳೊಂದಿಗೆಶಿವರಾತ್ರಿ ಪಿಕ್ ನಿಕ್ ಹೋಗಿದ್ದುಂಟು. ಪ್ರತಿವರ್ಷವೂ- ಮುಂದಿನ್ವರ್ಷ ನಿನ್ನ ಮುದ್ದಾಂ ಕರಕೊಂಡ್ಹೋಗ್ತೆವೇ ಅಂತ್ಹೇಳಿ ಕೈಕೊಟ್ಟು ಓಡಿದ ಅಕ್ಕ, ಅಣ್ಣ, ಚಿಕ್ಕಮ್ಮನ ನೆನೆದು,ಚಳ್ಳೇಪಿಳ್ಳೆಗಳಾದ […]

ಕಾವ್ಯಧಾರೆ

ಪಂಜು ಕಾವ್ಯಧಾರೆ

ಮಾನದಂಡ ! ಮಿಥಿಲಾಪುರದೊಳಗೆ ಪಂದ್ಯ;ಸೀತೆಗೆ ಸ್ವಯಂವರ….ಹರಧನುವ ಮುರಿಯುವುದೇಮಾನದಂಡ !ರಾಮ ಮುರಿದ; ಸೀತೆ ಒಲಿದಳುನಂತರದ ವಿಚಾರವೀಗ ಬೇಡ ! ಪಾಂಚಾಲನಂದನೆ ದ್ರೌಪದಿ;ಸ್ವಯಂವರದಿ ಗೆದ್ದವನ ಮಡದಿ !ಮತ್ಸ್ಯಯಂತ್ರವ ಭೇದಿಸುವುದೇಮಾನದಂಡ !ಪಾರ್ಥ ಬಾಣ ಹೂಡಿದ; ದ್ರೌಪದಿ ಒಲಿದಳುನಂತರದ ವಿಚಾರವೀಗ ಬೇಡ ! ಅಷ್ಟೋ ಇಷ್ಟೋ ಓದಿದ ಹೆಣ್ಣು,ಸ್ವಯಂವರ ಅನ್ನಬಹುದೆ ಇದನು ?‘ಸರ್ಕಾರಿ ನೌಕರಿ’ಯೇಮಾನದಂಡ !ಸಂ(ಗಿಂ)ಬಳ ತಂದವನ ಹುಸಿನಗೆಗೆ ಒಲಿದಾಳುನಂತರದ ಬದುಕು ? ಈಗ ಬೇಡ ! ಜನಕರಾಜನ ಮಗಳಿಗೆವನವಾಸ ವರವಾಯ್ತು;ದ್ರುಪದ ರಾಜನ ಮಗಳು ಬದುಕುಐವರ ಪಾಲಾಯ್ತು ! ಅತಿ ಆಸೆ ಪಟ್ಟಷ್ಟೂ […]

ಕಾವ್ಯಧಾರೆ

ನಾಲ್ವರ ಗಝಲ್‌ಗಳು: ಶಿವರಾಜ್. ಡಿ., ಜಯಶ್ರೀ ಭ ಭಂಡಾರಿ., ಜೊನ್ನವ, ರೇಣುಕಾ ಕೋಡಗುಂಟಿ

ಗಝಲ್. ನಾನು-ನೀನು ಅವನು-ಇವನು ಬೇರೆ-ಬೇರೆಯಿಲ್ಲ ನಾವು ಒಂದೇರಾಮ-ರಹೀಮ ಕೃಷ್ಣ-ಕರೀಮ ಭೇದ-ಭಾವವಿಲ್ಲ ನಾವು ಒಂದೇ ಸ್ವರ್ಗ ನರಕ ಪಾಪ ಪುಣ್ಯವೆಲ್ಲ ಮನುಜನ ಕರ್ಮದ ಫಲಗಳುಜಗತ್ತಿನ ಧರ್ಮ ಗ್ರಂಥಗಳ ಸಾರಗಳಲಿ ಭೇದವಿಲ್ಲ ನಾವು ಒಂದೇ ಆಲಯ ಬಯಲಾಗಿ ಬಯಲಲಿ ಬೆಳಕಾಗಿ ಬಾಳಬೇಕು ಮನುಜಮನುಷ್ಯ ಮನುಷ್ಯತ್ವದಲಿ ಮೇಲು-ಕೀಳುಗಳಿಲ್ಲ ನಾವು ಒಂದೇ ಅಜ್ಞಾನದ ತಮವಳಿದು ವಿಜ್ಞಾನದಿ ಮೌಡ್ಯವಳಿಯಲಿಜ್ಞಾನಜ್ಯೋತಿ ಬೆಳಗಲು ತರ-ತಮಗಳಿಲ್ಲ ನಾವು ಒಂದೇ ಜಾತಿ,ಧರ್ಮಗಳ ಗೋಡೆ ಕಟ್ಟಿ ವಿಶ್ವಗುರು ಆಗಲು ಹೊರಟಿದ್ದಾರೆ ಶಿವುಪರಿಶುದ್ಧ ಪ್ರೀತಿಗೆ ಕಾರುಣ್ಯದ ಮನಸಿಗೆ ಜಾತಿ-ಧರ್ಮಗಳಿಲ್ಲ ನಾವು ಒಂದೇ -ಶಿವರಾಜ್. […]

ಕಾವ್ಯಧಾರೆ

ಬರೆ: ಲಿಂಗರಾಜ ಸೊಟ್ಟಪ್ಪನವರ

ಆಡಿದ ಮಾತುಗಳೆಲ್ಲ ಮರೆತು ಹೋದವುಉಳಿದ ಮಾತುಗಳನುನೀನೆ ಆಡಬೇಕು ಈ ಬರೆ ಮೇಲೆ ಕೈ ಆಡಿಸುನಿನಗೆ ಏನಾದರೂ ದಕ್ಕಬಹುದುಪದ ನಾದ ನೋವುರಕ್ತ ಕೀವುಬಿರಿತ ಚರ್ಮ ಒಡೆದ ಮಾಂಸ ಖಂಡತೆರೆದ ಎದೆ ಗೂಡುಈ ಎಲ್ಲವನು ಪದ ಮಾಡಿ ಹಾಡಿಕೋ ಹಂಚುಬೇಕಿದ್ದರೆ ಮಾರಿಕೋ ತಾಕಬಹುದು ಎಲುಬಿನ ಹಂದರನೆತ್ತರ ವಾಸನೆಸಿಗದೇ ಹೋಗಬಹುದು ಹೆಣಗಳ ಲೆಕ್ಕಗುಳಿಬಿದ್ದ ಕಣ್ಣುಗಳಲಿ ಒಮ್ಮೆ ಇಳಿದು ಹೋಗುನೀನು ಗತಕೆ ಸರಿದು ಹೋಗುಚರಿತೆಯ ಚರ್ಮ ಸುಲಿದ ಕಥನಗಳಲ್ಲಿ ನಾನುಸಿಕ್ಕೆ ಸಿಗುತ್ತೇನೆಒಂದು ವಿನಂತಿ ಇಷ್ಟೇಇಷ್ಟು ಕಾಲವಾದ ನಂತರವಾದರೂ ಸರಿನೀನು ಯಾರು? ಎಂದು ಮಾತ್ರ […]

ಕಾವ್ಯಧಾರೆ

ಪ್ರೀತಿ ಹುಟ್ಟೀತು ಹೇಗೆ?: ಎಂ ನಾಗರಾಜ ಶೆಟ್ಟಿ

ಹುಟ್ಟು, ಬಣ್ಣ, ಬಟ್ಟೆಗಳ ಗುರುತಿನಲ್ಲಿತಿನ್ನುವ ಅನ್ನ, ಇರುವ ಜಾಗ, ಮಾಡುವ ಕೆಲಸಅವರಿವರಲ್ಲಿ ಹಂಚಿ,ಮುಟ್ಟದೆಯೇ ದೂರ ನಿಲ್ಲುವಲ್ಲಿಪ್ರೀತಿ ಹುಟ್ಟೀತು ಹೇಗೆ? ಮನೆಗೊಬ್ಬ ದೇವನ ಮಾಡಿಇಲ್ಲಿಗಿಂತ ಅಲ್ಲಿಯೇ ಸರಿಯೆಂದು ಹಾಡಿಇಂದಿನದಕ್ಕೆ ಅಂದಿನ ಕಾರಣ ಗಂಟು ಹಾಕಿತೊತ್ತುಗಳಾಗಿಸಿದವರ ನಡುವೆಪ್ರೀತಿ ಹುಟ್ಟೀತು ಹೇಗೆ? ಮನಸ್ಸುಗಳ‌‌ ಸುಟ್ಟು ಬೂದಿ ಮಾಡಿಶಾಖದ ಸುತ್ತ ಕುಣಿವವರಕರಕಲು ಎದೆಗಳಲ್ಲಿಪ್ರೀತಿ ಹುಟ್ಟೀತು ಹೇಗೆ? ಅವನು ನಾನೆಂದು, ನಾನು ಅವನೆಂದುಅವನೂ ಅವಳೂ ಒಂದೇ ಎಂದುನಮ್ಮನ್ನು ನಾವೇ ಅರಿಯದೆಪ್ರೀತಿ ಹುಟ್ಟೀತು ಹೇಗೆ? -ಎಂ ನಾಗರಾಜ ಶೆಟ್ಟಿ

ಕಾವ್ಯಧಾರೆ

ಪೋಲಿ ಹುಡುಗ: ವಿದ್ಯಾ ಗಾಯತ್ರಿ ಜೋಶಿ

ಭಾರತಿ ಮತ್ತು ಆರತಿಇಬ್ಬರದೂ ಬಾರಿ ಪ್ರೀತಿ ದೇಹ ಎರಡು ಅತ್ಮ ಒಂದೇಅಂತ ಎಲ್ಲರೂ ಅನ್ನುವುದೇ ದಿನವೂ ಒಬ್ಬ ಹುಡುಗಮುಗುಳ್ನಗುತ್ತಿದ್ದ ಕಾಲೇಜಲಿ ಪಾಠ ಕೇಳುವಾಗ ಆರತಿಗೆ ಹಿಡಿಸಿದ ಪೋರಕಾರಣ ಆತ ಭಾರೀ ಸುಂದರ ಭಾರತಿಗೆ ಹೇಳಿದಳು ಗುಟ್ಟುಭಾರತಿ ನೋಡಿದಳು ದುರುಗುಟ್ಟಿ ಅಂದಳು “ಆತ ನೋಡೋದು ನಿನ್ನನ್ನುಪ್ರೀತಿ ಮಾಡೋದು ನನ್ನನ್ನು!” ಹುಡುಗ ಬಂದನು ಇವರ ಹತ್ತಿರಹೆಚ್ಚಾಯ್ತು ಹುಡುಗಿಯರ ಕಾತರ ಕೇಳಿದರು “ಪ್ರೀತಿಸುವೆ ಯಾರನ್ನ?ನನ್ನನ್ನ ಇಲ್ಲಾ ಇವಳನ್ನ?” ಸುಂದರ ಅಂದ”ನಕ್ಕಿದ್ದು ನೋಡಿ ನಿಮ್ಮಿಬ್ಬರನ್ನನಾ ಪ್ರೀತಿಸುವದು ನಿಮ್ಮಿಬ್ಬರಲ್ಲಿ ಒಬ್ಬಳ ಅಕ್ಕನ್ನ!” -ವಿದ್ಯಾ ಗಾಯತ್ರಿ […]

ಕಾವ್ಯಧಾರೆ

ದೇವದೂತ ನನ್ನಪ್ಪ: ಶಕುಂತಲಾ ಪ್ರ. ಬರಗಿ

ಈ ಜಗವ ತೋರಲೆಂದೇ ಬಂದ ದೇವದೂತಈ ಜಗವ ತೋರಿ ತಾನೊಬ್ಬನೆ ದೂರ ನಿಂತನನ್ನಪ್ಪ ಈ ಜಗವ ತೋರಿಸಲು ಕರೆತಂದವಎನ್ನ ಕರೆದು ಜಗವ ತೋರಿ ಸುಮ್ಮನೆ ನಿಂತುಬಿಟ್ಟವ. ಈ ಜಗದ ಪೈಪೋಟಿ, ಅಂಕು ಡೊಂಕುನಾವು -ಅವರು -ಇವರು ಎಂಬುದನ್ನೇ ತಿಳಿಸದೆ ಸುಮ್ಮನೆ ನಿಂತುಬಿಟ್ಟವಅವನು ಈ ಭೂಮಿಗೆ ಕರೆತಂದ ಅಷ್ಟೇ,ಈ ಜಗವ ಏನೆಂದು ತಿಳಿಸಲಿಲ್ಲ ಎನಗೆ ಈ ಭೂಮಿಯ ಆಕಾಶದಲ್ಲಿ ಹಾರಾಡುವ ರೆಕ್ಕೆಯಾಗಿರೆಕ್ಕೆ ಕೊಟ್ಟು ಹಾರಲು ಹಚ್ಚಿ ದೂರ ನಿಂತವಅಪ್ಪನ ರೆಕ್ಕೆಗಿರುವ ಶಕ್ತಿಯೇ ನನ್ನೊಳಗೆ ಇದೆಅಪ್ಪನ ರೆಕ್ಕೆಗಿರುವ ಬಲವೇ ನನ್ನೊಳಗೆ […]

ಕಾವ್ಯಧಾರೆ

ಪಿಸು ಮಾತು: ಶ್ರೀವಲ್ಲಭ ಕುಲಕರ್ಣಿ

ಎಲ್ಲೆಲ್ಲೂ ನೀರವ ಮೌನತಾಳಲಾರೆ ನಾ ವೇದನೆಬಳಿ ಒಮ್ಮೆ ನೀ ಬಂದುತೀರಿಸುವೆಯ ಮನದ ಕಾಮನೆ ಕಣ್ಣು ರೆಪ್ಪೆ ಆಲಂಗಿಸಿಕಳೆದಿವೆ ದಿನ ಸಾವಿರನೆಮ್ಮದಿಯ ತಾಣ ಹುಡುಕುತದಾಟಿರುವೆ ಸಪ್ತ ಸಾಗರ ಮನವೆಂದೋ ಕೊಟ್ಟಾಗಿದೆಈ ತನುವೂ ಎಂದಿಗೂ ನಿನಗೇನೀರವ ಈ ಮೌನದಲಿಸಖಿ ಗೀತದ ಜೊತೆಗೆ ಕದ್ದು ನೋಡದಿರು ಹೀಗೆಕಣ್ಣಂಚಿನಲಿ ಕೊಲ್ಲದಿರು ಹಾಗೆಬಂದು ಬಿಡು ಸುಮ್ಮನೇಪ್ರೇಮ ಲೋಕವೇ ನಮ್ಮನೆ ರಂಗೇರಲಿ ಮಾತಿನಾ ರಂಗೋಲಿಮುದ್ದಾದ ನಮ್ಮೀ ಸಾಂಗತ್ಯದಲಿಮೌನಕೂ ಪದವುಂಟುಅದಕಿದೆ ಪಿಸು ಮಾತಿನಾ ನಂಟು! -ಶ್ರೀವಲ್ಲಭ ಕುಲಕರ್ಣಿ

ಕಾವ್ಯಧಾರೆ

ಪಂಜು ಕಾವ್ಯಧಾರೆ

ನಿನ್ನ ಸಂಧಿಸಿದ ಕುರಿತು ಒಂದಿನಿತೂ ಕಾಣಿಸದಕತ್ತಲೆಯ ಪ್ರಖರತೆಯಲ್ಲಿನಿನ್ನ ಸಂಧಿಸಿದ ಕುರಿತು… ಈರ್ವರ ಭೋರ್ಗರೆವ ಮೌನಗಳುಡಿಕ್ಕಿ ಹೊಡೆದು..ಗುಡುಗೂ.. ಸಿಡಿಲೂ..!ಅಂತಿಪ್ಪ ಕಾಲದ ನೆತ್ತಿಯನ್ನುತುಸುವೇ ನೇವರಿಸುತ್ತಾತೇವದ ಅರಿವಾಗಿ ನಿಂತೆ..ತೇಲು ಮೋಡವ ಹೊತ್ತನಿನ್ನ ಕಣ್ಣು ಹನಿಸಿದ್ದು ಇರಬಹುದೇಅನಿಸಿ ಒಂದಷ್ಟು ನಿಟ್ಟುರಿಸು.. ನಿನ್ನ ಮುಂಗುರುಳ ಗಾಳಿಗೆ ತಾಕಿಸದ್ದಿಲ್ಲದ ಮಾತುಗಳ ಪಟ ಪಟ ಸದ್ದು..ಬಯಲು ಆಗಸದ ತಾರೆಗಳು ನಮ್ಮ ಕಂಡಾವುಎಂಬ ನಾಚಿಕೆ ತುಸು ಹೆಚ್ಚು ನನಗೇ.. ಗಳಿಗೆಗಳು ಉರುಳಿದವು..ಸೂರ್ಯನ ಟಾರ್ಚು ಮೊಗದ ಮೇಲೆ ನೇರಾ..ಎಲ್ಲಿದ್ದೇನೆ ನಾನು ಅಂದುಕೊಳ್ಳುವಷ್ಟರಲ್ಲೇನೀನೆಲ್ಲಿ ಮಂಗ ಮಾಯ …? ಹಾ.. ಅಲ್ನೋಡು ಸುಟ್ಟು […]

ಕಾವ್ಯಧಾರೆ

ಪಂಜು ಕಾವ್ಯಧಾರೆ

ಒಮ್ಮೆ ಬಾರೋ.. ಒಮ್ಮೆ ಬಾರೋ ದೇವರೇನಮ್ಮ ನೋವಿನ ಹಾಡಿಗೆನೀರು ತುಂಬಿದ ಕಣ್ಣ ಹಣತೆಯಬೆಳಗಲಾಗದ ಪಾಡಿಗೆ. ದೇವ ನಿನ್ನನು ಪೂಜಿಸಿನೋವ ಪಡೆದೆವು ಪ್ರೀತಿಸಿಮಳೆಯ ಭ್ರಮೆಯನು ಮನದಿ ತಂದೆಯಸಿಡಿಲ ಎದೆಯಲಿ ಹೊತ್ತಿಸಿ? ನೆನ್ನೆಯೆಲ್ಲೋ ಕಳೆದಿದೆನಾಳೆ ಕಾಣದೆ ಅಡಗಿದೆನೆನ್ನೆ-ನಾಳೆಯ ಕಣ್ಣಾಮುಚ್ಚೆಯ–ಲಿಂದು ಸುಮ್ಮನೆ ಜಾರಿದೆ. ಏಕೆ ಹೀಗಿದೆ ಜೀವನ?ಯಾವ ವಿಷದ ಪ್ರಾಶನ?ಬೆಳಕ ಹುಡುಕುತ ಎದೆಯ ಕಡೆಯಲುಬೆಂಕಿ ದೊರೆಯುವ ಮಂಥನ. ಮೃದುಲ ಹೃದಯವೇ ಶಾಪವೇ?ಒಳಿತು ಬಗೆದುದೇ ಪಾಪವೇ?ಬಾಳ ಹೂವಿದು ಅರಳೊ ಜಾಗವುಸಾವು ಕುದಿಯುವ ಕೂಪವೇ? -ವಿನಾಯಕ ಅರಳಸುರಳಿ, ಪಾದಕ್ಕೊಂದು ಕಣ್ಣು ದೇವ ದೇವಳ ತೇರು […]

ಕಾವ್ಯಧಾರೆ

ಪಂಜು ಕಾವ್ಯಧಾರೆ

“ಹೊಲಿಗೆಯ ದರ್ಜಿಯವಳು ಬೇಕು” ಅಲ್ಲಲ್ಲಿ ಹರಿದ ಹೆಗಲುಗಳಿಗೆ ತೇಪೆ ಹಾಕಿಜೋಳಿಗೆಯ ಕಟ್ಟಿ ತಂಬೂರಿ ಕೊಟ್ಟುಕನಸು ಮನಸಿನ ಆಳ ಅರಿತುಮನಸುಗಳ ಬೆಸೆಯುವವಳುಬೇಕು ಯುವ ಕನಸುಗಳ ವ್ಯಾಖ್ಯಾನಿಸುವವಳು ವಿಶ್ವದ ಪೊರೆಬಿದ್ದ ಕಣ್ಣಿಗೆಪೊರೆಯ ತೆಗೆದು ಸತ್ಯಪ್ರೇಮವ ಸೃಷ್ಟಿಸುವವಳುಉಸಿರಿಗೆ ಹಸಿರಾಗಿ ಹೃದಯಗಳಿಗೆಪ್ರೇಮದ ರಕ್ತವ ಬಸಿಯುವವಳುಕೋಮು ಪಾಶಾಂಡದ ಬೇರಚಿವುಟಿ ಬೆಂಕಿಗಾಹುತಿ ಕೊಡುವವಳುಬೇಕು ವಿಶ್ವದ ಓಜೋನ್ ತೇಪೆಯ ಹೊಲಿಯುವವಳು ತಲ್ಲಣಗೊಂಡ ಯುವ ಮನಸುಗಳವಿದಾಯ ಕೇಳಿಸಿಕೊಂಡ ಕನಸುಗಳವಿಚಾರ ಕ್ರಾಂತಿಯ ನಡೆಸಿ ಮನವ ಬಲಪಡಿಸುವವಳುಸೂರೆಗೊಂಡ ಕನಸುಗಳ ಬಿಡಿಸಿಆ ಮನಗಳಿಗೆ ಪ್ರೇಮದ ಕೌದಿಯ ಹೊಲಿಯುವವಳುಬೇಕು ಸ್ನೇಹದೊಲಿಗೆಯ ಹಾಕುವವಳು ಸರ್ವಾಧಿಕಾರಿಯ ಆದೇಶದಂತೆಸುಟ್ಟ […]

ಕಾವ್ಯಧಾರೆ

ಗಜಲ್:‌ ಜಯಶ್ರೀ.ಭ.ಭಂಡಾರಿ., ರೇಣುಕಾ ಕೋಡಗುಂಟಿ, ಸರೋಜ ಪ್ರಶಾಂತಸ್ವಾಮಿ, ದೇವರಾಜ್ ಹುಣಸಿಕಟ್ಟಿ.

ಗಝಲ್ 1 ಸರೋವರದ ತುಂಬಾ ತೇಲಾಡುವ ಹಂಸೆಗಳುಸರೋವರದ ಸೊಬಗನು ಹೆಚ್ಚಿಸಿದ ಕಮಲಗಳು ಅದೇಕೋ ಸುಂದರ ಹಂಸೆ ತಪಗೈಯುತಿದೆಸಿಗದೆ‌ ಆಹಾರ ಮನನೊಂದಂತಿದೆ ಕಂಗಳಗಳು. ಹೆಜ್ಜೆ ಕಿತ್ತಿಡಲಾರದೆ ಸುಮ್ಮನೆ ಆಕಾಶ ನೋಡುತಿದೆ.ಲಜ್ಜೆಯ ತೆರದಿ ನಾಚಿದಂತೆ ಬೆಳ್ಳನೆ ರೆಶ್ಮೆಯ ಪಂಕಗಳು ಪಾದಗಳ ಒತ್ತಿ ಹಿಡಿದು ಜಪವ ಮಾಡುತಿದೆ ಎನಿಸುವುದುಪದಗಳ ಜೋಡಿಸಿ ವೈರಾಗ್ಯ ರಾಗದಿ ಹಾಡುವ ಕಂಗಳು ನೀಲ ಅಂಬರದಿ ಗುಟ್ಟಾಗಿ ಏನೋ ಹುಡುಕುತಿದೆಅಲೆಗಳು ಹೇಳುತಿವೆ ರಾತ್ರಿ ಬರುವುದು ಬೆಳದಿಂಗಳು ಕೆಂಪು ಎತ್ತರದ ಮೂಗು ತಂಪಾಗಿ ಉಬ್ಬಿ ಸೊಕ್ಕಿದಂತಿದೆ.ಮಂಪರು ಬಂದಂತೆ ಮಂಕಾಗಿ ಹಾರುದ […]

ಕಾವ್ಯಧಾರೆ

ಪಂಜು ಕಾವ್ಯಧಾರೆ

ಕನ್ನಡಿಯೊಳಗಿನ ಬಿಂಬ ಇಷ್ಟು ದಿನ ಸುಂದರವಾಗಿಯೇಕಾಣುತ್ತಿದ್ದ ಚಹರೆಇದ್ದಕ್ಕಿದ್ದಂತೆ ಇಂದೇಕೋವಿಕಾರವಾಗಿ ಕಾಣುತಿದೆ,ಒರೆಸೊರೆಸಿ ಕನ್ನಡಿಯ ದಿಟ್ಟಿಸಿದರೆಅದೇನೋ ಹೇಳಿ ಅಣಕಿಸುತಿರುವಂತೆಭಾಸವಾಗುತಿದೆ.. ಒಮ್ಮಿಂದೊಮ್ಮೆಲೇಭುಗಿಲೆದ್ದಿದ್ದೇಕೆ ಆತ್ಮಸಾಕ್ಷಿಯ ಬಿಂಬ?ಸರಿದುಹೋಗುತಿರುವ ಕಾಲದ ನಡುವೆನಿಂತ ನೆಲವ ಕುಗ್ಗಿಸಿಅಸ್ತಿತ್ವವ ಅಲುಗಾಡಿಸುತಿರುವ ಪ್ರಶ್ನೆಗಳೇಮನಸು ಮಸ್ತಿಷ್ಕದ ತುಂಬ.. ಅಸುನೀಗಿಹೋಗಿರುವ ಕನಸುಗಳಮತ್ತೆ ಬಡಿದೆಬ್ಬಿಸುತ ಅಂತರಂಗವೇ ನಾಚುವಂತೆಪ್ರಶ್ನಿಸುತಿಹುದು ನೀನ್ಯಾರು?ನೀನ್ಯಾರೆಂದು,ಇಟ್ಟ ಹೆಸರು ಹೇಳಿದರೂ ಬಿಡಲೊಲ್ಲದಲ್ಲಗುರುತು ಹೇಳಿ ಬಿಡಿಸಿಕೊಳ್ಳಲುಗುರಿಯೇ ಇಲ್ಲವಲ್ಲತಲೆ ಬೆಳೆಸದ ದೇಹಸವೆದಿದ್ದಷ್ಟೇ ಸಾಧನೆಯೇ ಇಲ್ಲ.. ಹುಡುಕಾಟದ ತೊಳಲಾಟಗಳ ನಡುವೆಯೇಕಂಡ ವಿಕಾರ ಮುಖವೇಉತ್ತರದಂತಿದೆ,ವಿರಮಿಸಿದ್ದು ಸಾಕಿನ್ನುನೆಟ್ಟಾನೇರ ಹೊರಟುಬಿಡು ಪಟ್ಟುಬಿಡದೇಸಾರ್ಥಕ ಬದುಕಿನೆಡೆಗಿನ್ನು ಎಂದುಪ್ರೇರೇಪಿಸುತಿರುವ ಹಾಗಿದೆ.. ಲಘುಬಗೆಯಲಿ ನಡೆಯಬೇಕಿದೆ ಗಮ್ಯದತ್ತಹದುಳಗೊಂಡ ಬದುಕಿನಾಚೆಯಿಂದುಅಸ್ಮಿತೆಗೊಂದು ತಳಹದಿ […]

ಕಾವ್ಯಧಾರೆ

ಪಂಜು ಕಾವ್ಯಧಾರೆ: ಆದಿತ್ಯಾ ಮೈಸೂರು, ವಿನಯಚಂದ್ರ, ಪ್ರಶಾಂತ್ ಬೆಳತೂರು

ನಮ್ಮ ಮಹಾ ನಗರದ ಬದುಕು ಇಂದುಒತ್ತಡದ ಜೀವನಯಾಂತ್ರಿಕತೆಯ ಬದುಕುಅಪ್ಪ ಅಮ್ಮನ ಇನಿದನಿಸಂಬಂಧ ಪ್ರೀತಿಯ ಛಾಯೆಒಂದ್ಹೊತ್ತಿನ ನೆಮ್ಮದಿಎಲ್ಲವು ಕಾಣದಾಗಿವೆ ಜನಜಂಗುಳಿಯ ಮುಂದೆಬಿಡುವಿಲ್ಲದ ಕೆಲಸಸಮಯ ಅರಿವಿದ್ದರುಬಿಡದ ಧಣಿ , ತಲೆ ಬಿಸಿಅವ ಇನ್ನೆಲ್ಲಿ ಕಾಣಲು ಸಾಧ್ಯ ಯಾರಾದೋ ಕೀಲಿಕೈಗೆಗಿರಗಿರಗುಟ್ಟುತ್ತಯಂತ್ರವಾಗಿ, ಚಕ್ರದಂತೆತಿರುಗಬೇಕಿದೆ ಎದ್ದಕೂಡಲೆ ಅವಸರದಲೆಇಸ್ತ್ರೀ ಕಾಣದ ಬಟ್ಟೆಪಾಲಿಶ್ ಇಲ್ಲದ ಬೂಟು ತೊಟ್ಟುಸ್ಕೂಟರೋ, ಬಸ್ಸೋ, ಟ್ಯಾಕ್ಸಿಯೋ ಹಿಡಿದು ನಡೆಅಲ್ಲಿ ಬಟ್ಟೆಗುಂಡಿ ಹಾಕಿದಿಯೊ ತಿಳಿಯದುಆದರೆ ಬಯೋಮೆಟ್ರಿಕ್ ಗುಂಡಿ ಹಾಕಬೇಕಿದೆಇಲ್ಲವಾದರೆ ಮೇಲವರ ಕಾಟಹೊಟ್ಟೆಗೆ ಅನ್ನ, ನೀರುಹೊತ್ತಿಗೆ ನಿದ್ರೆ, ಸೇರದು, ಬಾರದುಓಡು ಓಡು ಹಗಲು ಇರುಳೆನ್ನದೆನಿನ್ನಲ್ಲಿ ಶಕ್ತಿಯಿರೋತನಕ […]

ಕಾವ್ಯಧಾರೆ

ಬಂಡಾಯ ಕಾವ್ಯ: ಗೋಲ್ಡನ್ ಅಶು, ಜಬೀವುಲ್ಲಾ ಎಂ. ಅಸದ್, ಪ್ರಶಾಂತ್ ಬೆಳತೂರು

ಗಾಂಧಿ ಮತ್ತು ಅವನ ಖಾಯಿಲೆ ಬಿದ್ದ ಸ್ವಾತಂತ್ರ್ಯ ಭವಿಷ್ಯವಿರದ ಸಾಲಿಯ ಗೋಡೆಗಳುಬದುಕು ಕಟ್ಟುವ ಕನಸು ಕಾಣುತ್ತವೆಹೆಗಲಿಗೆ ಐಡಿ ಕಾರ್ಡಿಲ್ಲದ – ಕೆಂಪು ಶಾಲಿನ ಪೋರಶಾಲೆಗೊರಟ ಒಂಟಿ ಸಾಬರ ಮನೆಯ ಹುಡುಗಿಗೆರಾಮ ನಾಮ ಹೇಳುತ್ತಿದ್ದಆ ಗಟ್ಟಿಗಿತ್ತಿಯೂ ಸುಮ್ಮನಿರಲಿಲ್ಲಬೀದಿ ಮಧ್ಯೆಯೇ ಆಜಾನ್ ಕೂಗಿದಳು ಆಗ –ಕಪ್ಪು ಕೋಮುವಿನ ಹಲಗೆಯ ಮೇಲೆಕಲಿಸುವವ ಸಂವಿಧಾನದ ಕೊಲೆಮಾಡುತ್ತಿದ್ದ ! ಸತ್ಯಕ್ಕೆ ಗಲ್ಲಾದ ಈ ಹೊತ್ತುಹಸಿಮೈಯ್ಯ ಅತ್ಯಾಚಾರಿ ಬಾಲೆಯೊಬ್ಬಳ ಮನೆಯಮುಂದೆ –ಸ್ವತಂತ್ರ್ಯದ ಸಂಭ್ರಮ ಮನೆ ಮಾಡಿತ್ತು ! ಹೌದುನವ ಭಾರತಕ್ಕೆ ಎಪ್ಪತ್ತೈದರಸಂಭ್ರಮ , ಅತ್ಯಾಚಾರಿಗೆ – […]

ಕಾವ್ಯಧಾರೆ

ಪಂಜು ಕಾವ್ಯಧಾರೆ

ಹಸಿ ರಕ್ತ ಮುಸಿ ಮುಸಿ ನಗುತ್ತಲಿತ್ತುಎಡ ಬಲದ ಭುಜಹತ್ತಿ ಕ್ರೌರ್ಯ ಮೆರೆಯುತ್ತಲಿತ್ತುತಾನು ನಗುತ್ತಲೇ ಪ್ರಶ್ನೆ ಕೇಳುತ್ತಿತ್ತು? ಯಾರೊಳಗೆ ನಾನಿಲ್ಲ ?ನನ್ನ ಬಲ್ಲವರಿಲ್ಲನಿನ್ನೊಳಗಿನ ಅವನಅವನೊಳಗಿನ ನಿನ್ನನಡುವಿನಅಂತರ ಇಷ್ಟೇಅದು ನಾನು! ನಿನ್ನೊಳಗಿನ ನನಗೆನಾನಾ ಮುಖಗಳುನಾನಿದ್ದೆ ನನ್ನಂತೆನೀನೇ ತೊಡಿಸಿದೆಸಿದ್ದಾಂತದ ಸೋಗಿನಲ್ಲಿಧರ್ಮಾಂಧತೆಯ ಮಸಿಯನಾನೇನು ಮಾಡಲಿಕರ್ತವ್ಯ ಮುಗಿಸಿದೆಕಾರಣ ಇಷ್ಟೇಅದು ನಾನು! ಸಿಡಿವುದಷ್ಟೇ ಗೊತ್ತುಗುಂಡಿಗೆಕಡಿಯುವುದಷ್ಟೇ ಗೊತ್ತುಮಚ್ಚಿಗೆಪಾಪ ಅವುಗಳ ತಪ್ಪಿಲ್ಲತಪ್ಪಿಗೆ ತೀರ್ಪಿಷ್ಟೇಅದು ನಾನು ! ಹೆತ್ತವರೋ ಹೊತ್ತವರೋತುತ್ತಿಟ್ಟು ಸಾಕಿದವರೋಯಾರ ಕಣ್ಣೊರೆಸುವೆ ?!ನೀ ಸತ್ತನಂತರಬೇಕೇ ನಿಜ ಕಾರಣ ?ಹ್ಞೂಂ..!ಅದು ನಾನೆಂಬನೀನು ಅಷ್ಟೇ !! ಹಸಿ ರಕ್ತ ಮುಸಿ ಮುಸಿ […]

ಕಾವ್ಯಧಾರೆ

ಪಂಜು ಕಾವ್ಯಧಾರೆ

ಯಾರ ಮಾನಸ್ಯಾಗ ಏನೈತೋ! ಬೊಗಸೆಯಾಗೆ ಏನಿಲ್ಲಕಣ್ಣ ತುಂಬಿ ಕಂಬನಿ ತುಳುಕ್ಯಾವಲ್ಲಯಾರ ಮನಸ್ಯಾಗ ಏನೈತೋಕಾಣದ ಆ ದ್ಯಾವನೆ ಬಲ್ಲ ಹೊರಳ್ಯಾದ ಹಕ್ಕಿ ಮರಳಿ ಗೂಡಿಗೆಹೋಗುವುದಾದರೂ ಹಾರಿ ಎಲ್ಲಿಗೆ?ಹಾರಲಿಕ್ಕ ಇರುವುದು ಆಕಾಸ ದಿಟಬದುಕೆನೆದ್ದರೂ ಭೂಮಿ ಮ್ಯಾಗೆ ಎಲ್ಲಿಂದ ಬಂದಿಯೋಅಲ್ಲಿಗೆ ಹೋಗಾಂವ ನೀಖರೇ ಅಂದ್ರ ನಿನ ಬದ್ಕು ಮೂರು ದಿನದ ಸಂತಿ ಐತಿಖದರಿರಲಿ ತಿಳಕೊಂಡು ಬಾಳು ನೀ ಎಷ್ಟಾಂತ ಹೊರ್ತಿಬವಣೆಗಳ ಮೂಟೆಗಳಇಷ್ಟಲಿಂಗ ಇಟ್ಟಂಗ್ ಆಗತೈತೆಯಾಕೆ ನೀ ಸುಮ್ನೆ ಚಿಂತಿ ಮಾಡ್ತಿ ಎಲ್ಲರೂ ಸಾಯೋವ್ರೆ ಒಂದ್ ದಿವ್ಸಅಮರ ಯಾರಿಲ್ಲ ಈ ಲೋಕದಾಗನೀ ನಡದಂತೆ […]

ಕಾವ್ಯಧಾರೆ

“ಅಂತರಂಗದೊಳಗಣ ಉರಿ ತಾಕಿದಾಗ”: ಪ್ರಶಾಂತ್ ಬೆಳತೂರು

-೧-ಎಳೆತನದಲ್ಲಿ ಆಡಿ ನಲಿವಾಗಎತ್ತರದ ನಿಲುವಿನ ಅಜ್ಞಾತ ಮನುಷ್ಯನೊಬ್ಬನನ್ನ ಕಂಡು ದೂರ ನಿಲ್ಲು ಪೀಡೆ ಎಂದ..ಯಾಕೆಂದು ತಿಳಿಯದೆ ಕಸಿವಿಸಿಯಾಗಿದೂರ ಸರಿದು ನಿಂತೆ..! ಅಂಗನವಾಡಿಯ ಅಂಗಳಕೆ ಕಾಲಿಟ್ಟಾಗಅಲ್ಲಿಯ ನನ್ನೂರಿನ ಹೆಂಗಸೊಬ್ಬಳುನನ್ನನ್ನು ನನ್ನ ಕೇರಿಯ ಓರಿಗೆಯವರನ್ನುಒಂದೇ ಸಾಲಿನಲ್ಲಿ ಯಾಕೆ ಕೂರಿಸುತ್ತಿದ್ದಾಳೆಂದುಮೊದಮೊದಲಿಗೆ ಅರ್ಥವಾಗುತ್ತಿರಲಿಲ್ಲ..! ಬರುಬರುತ್ತಾ..ನಮ್ ಮೇಷ್ಟ್ರು ಅರ್ಥ ಮಾಡಿಸಿದರುತರಗತಿಯಲ್ಲಿ ಕಲಿಯುವಾಗ ಪದೇ ಪದೇಅಣಕಿಸುವ ಮೇಷ್ಟ್ರುದನ ತಿಂದು ತಿಂದು ದನದ ಹಾಗೆ ಬೆಳಿದಿದ್ದೀರಿಮೆದುಳಿನಲ್ಲಿ ಬರೀ ಗೊಬ್ಬರ ತುಂಬಿದೆಯೆಂದುಜರಿದು ಮಾತಾಡುವಾಗಲೆಲ್ಲಾಎದೆಗೆ ನಾಟುತ್ತಿತ್ತು..! ಆಮೇಲಾಮೇಲೆ ಮೇಡಂಒಬ್ಬರು..ಮನೆಯ ಪಡಸಾಲೆಯಲ್ಲಿ ಸಂಜೆ ಸ್ಪೆಷಲ್ ಕ್ಲಾಸ್ಮಾಡುತ್ತೇನೆಂದು ಕರೆದಾಗನಾನು ಹಾಜರಾಗುತ್ತಿದ್ದೆಒಮ್ಮೆ ಅವರ ಗಂಡ […]

ಕಾವ್ಯಧಾರೆ

ಮೂರು ಕವಿತೆಗಳು: ಶಿವಮನ್ಯೂ ಪಾಟೀಲ

೧ ಆ ಬೆಳಕೊಂದು ಕತ್ತಲ ಆ ಬೆಳಕೊಂದು ಕತ್ತಲಗರ್ಭ ಸೀಳಿ ಬರುತಲಿದೆ ಈ ಜಗಕೆ.ಧರಣಿ ಒಡಲ ಬಿಗಿದಪ್ಪಿಕೊಳ್ಳಲುಹಸಿರ ಹುಲ್ಲು ಹಾಸಿನ ಇಬ್ಬನಿಯ ಚುಂಬಿಸಲು. ಜಗವೆಲ್ಲಾ ಗಾಢ ನಿದ್ರೆಯಲ್ಲಿಮೈಮರೆತಿರಲುಹೊಂಬೆಳಕು ತಾ ಹೊಸತನದಿಕೋಳಿ ಕೂಗುವ ದನಿಗೆ ದನಿಗೂಡಿಸುತಿದೆ.ಸ್ಫೂರ್ತಿಯ ದಾರಿ ತೆರೆದು, ಹೊಸಹೆಜ್ಜೆಗೆ ಹೆಜ್ಜೆ ಹಾಕುತ್ತಾ ಜೊತೆ ಸಾಗಿದೆ. ಹಸಿರ ಬನದ ಸೊಬಗಿಗೆಹಾರೋ ಹಕ್ಕಿಯ ಹುರುಪಿಗೆ.ಬಾಗಿಲು ತಾ ತೆರೆದು ನಲಿಸುತಿದೆ.ಹರಿವ ಜಲಧಾರೆಯ ನಾದದೊಳಗೆಮೀಯುತ.ಮೂಡುವ ಕಾಮನಬಿಲ್ಲಲಿ ಹೊಳೆಯುತ್ತಾ.ಇರುಳ ತೆರೆಯ ಪರದೆಯ ಸರಿಸುತ್ತಾಬೆಳಕೊಂದೂ ಓಡೋಡಿ ಬರುತಿದೆಕತ್ತಲ ಗರ್ಭ ಸೀಳಿ, ಜಗಕೆ. ೨ ಜನನಿಗೊಂದು ಪ್ರಣಾಮ […]

ಕಾವ್ಯಧಾರೆ

ಅನುವಾದಿತ ಕವಿತೆಗಳು: ಡಾ. ಮಲರ್ ವಿಳಿ . ಕೆ

ನಿನ್ನ ಮತ್ತು ನನ್ನ ನಡುವಿನ ಪದ‌ ಪ್ರಾಣಿಯೊಂದನುಬೇಟೆಯಾಡುವಂತೆಆ ಪದವನು ಹಿಡಿಯಲುನನ್ನ ಬಲೆ/ಕುಣಿಕೆಗಳನ್ನು ಹಾಕಿಕಾದಿದ್ದೇನೆ. ಗಾಳಿಯಂತೆ ಸಂವೇದನಾಶೀಲವಾದದೇವರಂತೆ ಯಾಮಾರಿಸುವ ಆ ಪದನನಗೆ ಸಿಗದೆ ತೊಂದರೆ ಕೊಡುತ್ತಿದೆ. ಎಲ್ಲರ ಸಮ್ಮುಖದಲ್ಲೂನಿಮ್ಮನ್ನು ನನ್ನ ಮಡಿಲಲ್ಲಿಟ್ಟುನಿಮ್ಮ ಹೊಟ್ಟೆಯಿಂದಕರುಳನ್ನು ಕೀಳುವಂತೆಆ ಪದವನುಕೀಳಬೇಕು ಎಂಬುದು ನನ್ನ ಬಯಕೆ ನನ್ನ ಮೂಳೆಗಳನು ಚುರುಗುಟ್ಟಿಸುವಆ ಪದವಂತೂನಿಮ್ಮ ರಕ್ತದ ನಂಜಾಗಿ ಹರಿಯುತ್ತಿದೆ ಒಂದು ಪದ ಅಷ್ಟೇ!ನಿಮಗೆ ವರವಾಗಿಯೂನಮಗೆ ಶಾಪವಾಗಿಯೂಜನಿವಾರವ ಎದೆಯ ಮೇಲೆ ಧರಿಸುವಮಂತ್ರವಾಗಿಯೂ ನನ್ನ ಅಗಲಿಸಿ ನಿಲ್ಲಿಸುವಬೈಗುಳವಾಗಿಯೂ ನಾನು ಸೋಲಬಹುದುಇಂದಲ್ಲ ನಾಳೆನಮ್ಮ ಮಕ್ಕಳುಆ ಪದದ ಕೊಂಬನ್ನು ಹಿಡಿದು ನೂಕಿಅದರ ಧ್ವನಿಪೆಟ್ಟಿಗೆಯನ್ನೇಕತ್ತರಿಸುವರು […]

ಕಾವ್ಯಧಾರೆ

ಪಂಜು ಕಾವ್ಯಧಾರೆ

ಮುಕ್ತಿ ಎಂದು? ಮಾನವೀಯತೆ ಸತ್ತುಹೋಯಿತೆಜಾತಿ ಧರ್ಮ ಕುಲ ನಶಿಸಿ ಹೋಯಿತೆಶವಗಳು ಬಿಸಾಡುವ ಸ್ಥಿತಿ ಬಂದಿತೆ ಲಕ್ಷಾಂತರ ಜೀವ ನೋವು ನರಳಾಟ ಸಾವಿನೆಡೆಭೀಕರ ಮಾರಕ ರೋಗಗಳು ವಿಶ್ವದೆಲ್ಲೆಡೆ ಚಿಕಿತ್ಸೆ ಇಲ್ಲದೆ ನರಳಿ ನರಳಿ ಸಾಯುತಿಹರುರೋಗದ ಸೋಂಕು ಎಲ್ಲೆಡೆ ಹರಡುತ್ತ ನೆತ್ತರು ಮಮತೆ ವಾತ್ಸಲ್ಯ ಪ್ರೀತಿ ಸಮಾಧಿ ಆಯಿತುಬದುಕಿ ಉಳಿದವರು ಶವದಂತೆ ಬದುಕುವಂತಾಯಿತುಸಾವು-ನೋವು ಹಿಂಬಾಲಿಸುವ ಭಯಾನಕ ನೆರಳಾಯಿತು ವಿಶ್ವವೇ ಭಯಭೀತ ವಾಗಿರಲೂ ನೆಮ್ಮದಿ ಇಲ್ಲಕಾಲದ ಗರ್ಭಪಾತವಾಗಿ ರಕ್ತಸಿಕ್ತ ಭಾವಗಳೆಲ್ಲ ಮೇಲು ಕೀಳು ಎನ್ನದೆ ಸಹಸ್ರಾರು ಬಲಿಯಾದರುಸಂಸ್ಕೃತಿ ಇಲ್ಲ ಸಂಸ್ಕಾರವಿಲ್ಲ ಸ್ಮಶಾನವು […]

ಕಾವ್ಯಧಾರೆ

ಪಂಜು ಕಾವ್ಯಧಾರೆ

ಅವು ಮತ್ತು ನಾನು ಯಾವ ನೋವುಗಳುಹೆಚ್ಚಾಗಿ ಕಾಡುವವೋ,ಆ ನೋವುಗಳನ್ನಇಚ್ಚೆಯಿಂದ ಅನುಭವಿಸುವ ಭರವಸೆಯಅವುಗಳಿಂದಲೇ ಕಲಿತುಕೊಳ್ಳುವೆ…. ಅವು ಹಟಮಾರಿಯಾದರೆನಾನೂ ಹಟಮಾರಿಯಾಗುವೆಅವು ಬಿಡಲೆನ್ನುವವಾದರೆನಾನೂ ಬರಲೆನ್ನುವವನಾಗುವೆ ಅವು ಹಿಂಡುತ್ತಿರುವಾಗನಾನು ಕಂಡವನುಅದ ಉಂಡವನೂ…ಅವು ಕುಣಿಯುತ್ತಿರುವಾಗನಾನು ಅವಕ್ಕೆ ಅಟ್ಟ ಆದವನು ಅವು ನಾನಿರುವವರೆಗೂ ಮಾತ್ರ-ನನ್ನ ತಿನ್ನುವವುನಾ ಇಲ್ಲವಾದೊಡನೆ ಅವುಗಳ ಸಾವುಅವುಗಳಿಗಾಗಿಯೇ ನಾ ಜೀವಾ ಹಿಡಿದಿರುವಾಗನನಗೆ ಗೊತ್ತು;ಸಾವೆಂಬುದು ಕ್ರೂರಿಯಲ್ಲವೆ?!… ಇರುವಷ್ಟು ದಿನ;ಅವುಗಳಿಗೆ ಉಪಕಾರಿಯಾಗಲಿ ಈ ದೇಹ;ಅವುಗಳಿಗೂ ಬದುಕಿದೆ ತಿಂದು;ತಿಂದರೂ, ಹಿಂಡಿದರೂ ಅವುಗಳದೇಎಲ್ಲಿಂದ ಮೀಟಿದರೂಅನುಮತಿ ಕೊಟ್ಟಿರುವೆ ಇಚ್ಚೆ ಇರಲಿ;ಹಟವಿರಲಿನನಗೂ;ಅವುಗಳಿಗೂ… -ಕಾಸಿಂ ನದಾಫ್ ಭೈರಾಪುರ ನಮ್ಮಮ್ಮನ ಸೊಸೆ ನಾನು ಪ್ರಾಯಕ್ಕೆ […]

ಕಾವ್ಯಧಾರೆ

ಪಂಜು ಕಾವ್ಯಧಾರೆ

ಕವಿತೆಯೊಳಗೊಬ್ಬ ಅಪ್ಪ ಮೊನ್ನೆ ಮೊನ್ನೆಯ ತನಕಚೆನ್ನಾಗಿ ನಗು ನಗುತಲೇಮಾತನಾಡುತ್ತಿದ್ದ ಅಪ್ಪಯಾಕೋ ಸಾಯಂಕಾಲಮಾತೇ ನಿಲ್ಲಿಸಿದ…..ನಿಂತುಹೋಗಿರುವದು ಅಪ್ಪನಮಾತುಗಳು ಅಥವಾ ಉಸಿರು ಅನ್ನುವುದುಮಲಗಿದ ಅಪ್ಪನ ಹಾಸಿಗೆಯ ಮುಂದೆಕೂತ ಅಕ್ಕನಿಗೂ ತಂಗಿಗೂ ತಿಳಿಯಲಿಲ್ಲ….ಎರಡೇ ದಿನ ಹೋಗಿ ಬರುವುದಾಗಿಅಪ್ಪನಿಗೆ ಹೇಳಿ ಹೋಗಿ ಮರಳಿ ಬರುವಾಗಅರ್ಧ ದಾರಿಯಲ್ಲೇ ಮುಟ್ಟಿದ ಹೆತ್ತಮಗನಿಗೂ ಗೊತ್ತಾಗಲಿಲ್ಲ…….ಕಾಯಿಲೆ ಗುಣವಾಗಿ ಅಪ್ಪ ಬೇಗನೆಮನೆ ಸೇರುತ್ತಾನೆಂಬ ಆಸೆಯಲ್ಲಿ ಅಮ್ಮ,ಅಮ್ಮನಿಗೆ ಹೇಗೆ ಹೇಳಬೇಕೋಅನ್ನುವುದು ಅಪ್ಪನ ಪ್ರೀತಿಯ ಸೊಸೆಗೂಅರ್ಥವಾಗಲಿಲ್ಲ…….ಅಜ್ಜನ ಬಾಲ ಹಿಡಿದು ಓಡಾಡುವಮೊಮ್ಮಗ ಮತ್ತೆ ಮತ್ತೆ ಕೇಳುತ್ತಾನೆಅಜ್ಜ ಮರಳಿ ಯಾವಾಗ ಬರುತ್ತಾನೆ…?ಮೊನ್ನೆ ಮೊನ್ನೆಯ ತನಕ ನೂರಾರು ಸಲಆ […]

ಕಾವ್ಯಧಾರೆ

ಪಂಜು ಕಾವ್ಯಧಾರೆ

ನಾ ಹೇಳಿರುವೆ ನಾ ಬೆಂಕಿಯಾದೆದೀಪವ ಬೆಳಗುವ ಹೊತ್ತಿನಲ್ಲಿನಾ ನಿನ್ನ ಸುಟ್ಟು ಹಾಕಲೆಂದಲ್ಲ ನಾ ದೀಪವಾದೆನೀ ಹೋಗುವ ದಾರಿ ಕಾಣಲೆಂದುನಿನ್ನ ದಾರಿ ಮಸುಕು ಅಗಲೆಂದಲ್ಲ ನಾ ಬುವಿಯಾದೆನೀ ಇಡುವ ಹೆಜ್ಜೆ ಸಾಗಲೆಂದುನಿನ್ನ ಹೆಜ್ಜೆಗೆ ಮುಳುವಾಗಲೆಂದಲ್ಲ ಇಂದು ನಾ ಹೇಳಿರುವೆ ನಿನ್ನ ದಾರಿಯ ಅರಿವು ನಿನಗಾಗಲೆಂದುನಿನ್ನ ಬಾಳು ಸದಾ ಬೆಳಗಲೆಂದುನಿನ್ನ ಜೀವನ ಹಾಳಾಗಲಿ ಎಂದಲ್ಲ. – ದೀಪಾ ಜಿ ಎಸ್ ಏನಿದ್ದರೂ ಶೂನ್ಯ ಏನಿದ್ದರೂ ಶೂನ್ಯಬಾಳಲ್ಲಿ ಪ್ರೀತಿ ಇರದಿದ್ದರೆಪ್ರೇಮಾಂಕುರವಾಗದಿದ್ದರೆ ಏನಿದ್ದರೂ ಶೂನ್ಯನಡತೆಯಲಿ ಸಂಸ್ಕಾರವಿಲ್ಲದಿದ್ದರೆಸಂಸಾರದಲ್ಲಿ ಸ್ವಾರಸ್ಯವಿಲ್ಲದಿದ್ದರೆ ಏನಿದ್ದರೂ ಶೂನ್ಯಹಣದೊಟ್ಟಿಗೆ ಹೃದಯವಂತಿಕೆಯಿಲ್ಲದಿದ್ದರೆಮುಖ್ಯವಾಗಿ ನೆಮ್ಮದಿಯಿಲ್ಲದಿದ್ದರೆ […]