ಎರಡು ಕವಿತೆಗಳು: ನಾ”ನಲ್ಲ”, ವಿನಾಯಕ ಅರಳಸುರಳಿ

ಬಾಳ ದಾರಿಯಲಿ ಬಂದು ಹೋಗುವವರಾರು, ಕೈ ಹಿಡಿದು ಜೊತೆಗೂಡಿ ಮುಂದೆ ಸಾಗುವವರಾರು, ಬರುವೆನೆಂದವರೀಗ ಬಿಟ್ಟು ಹೋಗುತಿರಲು, ಮನದಿ ಮುಡಿತು ಪ್ರಶ್ನೆ "ಇಲ್ಲಿ ನನ್ನವರಾರು?" ಪ್ರಾಣ ಪಣವಿಟ್ಟು ನಾ ಹೋರಾಡುತಿರುವಾಗ, ಜನರ ನಿಯಮಕ್ಕೆಂದೂ ಎದೆಗುಂದದಿರುವಾಗ, ನನ್ನನು ತೊರೆದು ಹೋಗುವವರನು ನೋಡಿ, ಮತ್ತೆ ಮುಡಿತು ಪ್ರಶ್ನೆ "ಇಲ್ಲಿ ನನ್ನವರಾರು?" ಮನಸೊಂದು ಬಯಸುವುದು ಅಪರಾಧವೇನಲ್ಲ, ಬಯಸಿದ್ದು ಪಡೆಯುವುದು ಹುಡುಗಾಟವೂ ಅಲ್ಲ, ಬಯಸಿ ಪಡೆದವರಿಂದು ಕೇಳುತಿಹರು ನನ್ನನ್ನು, "ಜೊತೆಯಾಗಿ ಉಳಿಯೋಕೆ ನೀನು ನನಗ್ಯಾರು?" ಕಣ್ಣಂಚಿನ ಹನಿ ಕೇಳು, ತುಟಿಯಂಚಿನ ನಗು ಕೇಳು, ಮರೆಯಲ್ಲಿ … Read more

ಮೂವರ ಕವಿತೆಗಳು ಕು.ಸ.ಮಧುಸೂದನರಂಗೇನಹಳ್ಳಿ, ಅನಿತಾ ಕೆ.ಗೌಡ, ರಾಜೇಶ್ವರಿ ಎಂ.ಸಿ.

ಅದೊಂದು ರಾಜ್ಯದಲ್ಲಿ! ಅಷ್ಟೆತ್ತರದ ಅರಮನೆ ಅಂಬರ ಮುಟ್ಟುವ ಕಳಸಗೋಪುರಗಳು ಸುತ್ತೇಳು ಕೋಟೆ ಗೋಡೆಗಳ ಮೇಲೆ ಫಿರಂಗಿಗಳ  ಹಿಂಡು ಸುತ್ತ ಶಸ್ತ್ರಸಜ್ಜಿತ ಸೈನಿಕರ ದಂಡು ಅಲ್ಲಲ್ಲಿ ವಿಶಾಲ ದೇವಳಗಳು ಸಾಹಿತ್ಯ ಸಂಗೀತ ಸಭಾಭವನಗಳು ಮೀಟಿದರೆ ನಾದ ಹೊಮ್ಮಿಸುವ ತಂತಿವಾದ್ಯಗಳು! ಕಲ್ಯಾಣಮಹೋತ್ಸವಕ್ಕಾಗಿ ಕಟ್ಟಿಸಿದಷ್ಟಗಲದ ಛತ್ರಗಳು ಕಸದ ತೊಟ್ಟಯ ಸುತ್ತ ಕಂತ್ರಿನಾಯಿಗಳು ತಲೆ ಹಿಡಿಯಲು ಗಿರಾಕಿಯನುಡುಕಿ ಹೊರಟ ಛತ್ರಿಗಳು ಬರೆದಿಟ್ಟ ಬೊಗಳೆ ಗ್ರಂಥಗಳು ಆಳುವ ಅರಸರು ಅವರ ಹೆಂಡಂದಿರು ಹೆಂಡಂದಿರ ಮಿಂಡರು ಮನೆಹಾಳು ವಂದಿಮಾಗದಿಗರಿಗಾಗಿ ಕಟ್ಟಿಸಿದ ಮಹಲುಗಳು ಅದರೊಳಗಿನವರ ತೆವಲುಗಳು ಐದು … Read more

ಪಂಜು ಕಾವ್ಯಧಾರೆ

ಮೊದಲ ಸಾಲಿನ ಹುಡುಗಿ ಸರಿಗಮಪದ ಹಿಡಿದು ತಂತಿಯ ಮೇಲೆ   ಹರಿಸಿ ಉಕ್ಕಿಸುವ ಆಲಾಪದಮಲು  ಎದೆಗೆ ಅಪ್ಪದ ಸಿತಾರಿನ ಮೇಲೆ ಸರಿವ ಅವನ ಸಪೂರ ಬೆರಳುಗಳು ಅವಸರದಲ್ಲಿ ತುಡಿವ ಸರಸದಂತೆ ಏನೊ ಮುಚ್ಚಿಟ್ಟ ಗುಟ್ಟುಬಿಚ್ಚಿ ಕಿವಿಗೆ  ಪಿಸುಗುಟ್ಟುತ್ತಿರುವಂತೆ ಅವನ ತೆಳು ತೆರೆದು ಮುಚ್ಚುವ ಎಸಳ ತುಟಿಗಳು ಉದ್ದ ಕೂದಲ ಸರಿಸಿ ಹಿಂದಕ್ಕೊಗೆವ ಠೀವಿಯ ಹೊಳಪಿನ ಭಾವ ಮುಖ ಮುಚ್ಚಿಬಿಡುವ ದಟ್ಟ ಕಪ್ಪು ಕಣ್ಣುಗಳು  ಕಣ್ಣುಮುಚ್ಚಾಲೆಯಲ್ಲಿ ರಾಗದೆಳೆಗಳು ಆಲಾಪಕ್ಕೆ ತಲೆದೂಗುವ ಒಳ ಆಸೆಗಳು ತಾಳ ಲೆಕ್ಕಕ್ಕೆ ಪಕ್ಕಾಗದ ಹಸ್ತ … Read more

ಕಾವ್ಯಧಾರೆ: ಯಲ್ಲಪ್ಪ ಎಮ್ ಮರ್ಚೇಡ್, ಚಾರುಶ್ರೀ ಕೆ.ಎಸ್., ಬಿದಲೋಟಿ ರಂಗನಾಥ್, ರಘು ಕ.ಲ., ರಾಘವೆಂದ್ರ ಹೆಗಡೆಕರ, ಅಮಿತ್ ಭಟ್

ಕಾವ್ಯ ನಮನ  "ಅಮರ ವೀರ:ಹನುಮಂತಪ್ಪ ಕೊಪ್ಪಗೆ ನಮನ" ಕನ್ನಡದ ನೆಲ ವೀರ ಪುತ್ರನೆ ಕನ್ನಡ ಮಣ್ಣಿನ ಧೀರ ಮಿತ್ರನೆ ಭಾರತ ಮಾತೆಯ ಹೆಮ್ಮೆಯ ಪುತ್ರನೆ ಉಕ್ಕಿನ ದೇಹದ ವೀರ ಕನ್ನಡಿಗನೆ ಕನ್ನಡದ ಕೆಚ್ಚೇದೆಯ ಗಂಡಗಲಿಯೆ ಗಂಡೆದೆಯ ಗುಂಡಿಗೆಯ ಮಗಧೀರನೆ ನಿನ್ನ ನಾಮವ ಪುಸ್ತಕದ ಪುಟ ಪುಟದಲಿ ಶತ ಕಾಲ ಅಮರವಾಗಿರಲಿ||1|| ನಿನ್ನ ಸತ್ತಿಲ್ಲದ ವಿಷಯ ಅರಿತ ಇಡೀ ದೇಶವೇ ಸಂತಸದಲಿ ಸಂಭ್ರಮಿಸಿ… ಪ್ರಾರ್ಥನೆ ಮಾಡಿತು, ನಿನ್ನ ಹೆತ್ತ ಮಡಿಲು ಮರೆಯಲ್ಲಿ ನಿಂತು ಬಿಗಿಹಿಡಿದ ನಿಟ್ಟುಸಿರು  ನಿಧಾನಕೆ ಬಿಟ್ಟಳು … Read more

ಕಾವ್ಯ ಧಾರೆ

ಮನೆ ಮಾತು ಮೌನ ಜಂಟಿ ಸದನ ಅನಿವಾರ್ಯತೆ ಖಡಕ್ ಅಧಿಕಾರಿಯೂ  ಸೇವಕನ  ಗುಲಾಮ ಸಮಾಧಾನ ಹಗಲಿನ ನಿರೀಕ್ಷೆಗಳಿಗೆ ರಾತ್ರಿ ಸ್ವಪ್ನ ಸ್ಖಲನ! ತಳ್ಳಾಟ ಹೆಣ್ಣಿನ  ತಾರತಮ್ಯಕ್ಕೆ ತವರು ಮನೆಯೆ ತೊಟ್ಟಿಲು! ಅಲ್ಲಿಂದಲೇ ತಳ್ಳಾಟ ಒಂದೊಂದೆ  ಮೆಟ್ಟಿಲು! ಕರಕುಂಡ ಪುಟಾಣಿ ಕಂದನ ನಗೆಮೊಗ್ಗು ಹೂವಾಯ್ತು ಅಮ್ಮನ ಕರ ಕುಂಡದಲ್ಲಿ ಮರದ ಹನಿ ಮಳೆ ಸುರಿದರೆ ಮರಗಿಡಗಳಿಗೆ ಅದೆಂಥ ಪುಳಕ ಮಳೆ ನಿಂತ ಮೇಲೂ ಹನಿ ಹನಿ ಜಳಕ! ಮೊದಲರಾತ್ರಿ ಮಾತು ಬೆಳ್ಳಿ ಮೌನ ಬಂಗಾರ ಮೊದಲ ರಾತ್ರಿ ಶೃಂಗಾರ … Read more

ಕಾವ್ಯ ಧಾರೆ: ಪ್ರವೀಣಕುಮಾರ್. ಗೋಣಿ, ಸಿಪಿಲೆನಂದಿನಿ, ಕ.ಲ.ರಘು.

-: ಅಂತರ್ಯದಾ ಯಾತ್ರೆ :- ಆಳದಿ ಸ್ತಬ್ದತೆಯದು  ಮನೆ ಮಾಡಿ ಕುಳಿತಿರಲು ಮನವಿದು ಅದ ಮರೆಯುತ್ತ  ಹೊರಟಿಹುದು ಹೊರಗಿನಾ ಜಾತ್ರೆಗೆ. ತನ್ನ ತಾ ಮರೆತು ಅಲೆಯುತಿಹುದು  ಏನೆನ್ನೋ ಅರಸುತ್ತ ಭಿನ್ನವಾಗಿರದ  ಸಾಕ್ಷಾತ್ಕಾರದ ಬೆಳಕ ಬದಿ ಸರಿಸುತ  ಸೋತು ಹೋಗುತಿದೆ ಮನ ಸತತ. ಏಳುವ ಸಾವಿರ ತಲ್ಲಣಗಳ  ಅಲೆಗಳ ಬೆನ್ನತ್ತುತ ಆಳದಿ  ಅಡಗಿಹ ಅರಿವೆನುವ ಮುತ್ತು ರತ್ನಗಳ  ತೊರೆದು ಸರಿಯುತಿದೆ ಮನ ವಿಷನ್ನಗೊಳ್ಳುತ್ತ. -ಪ್ರವೀಣಕುಮಾರ್. ಗೋಣಿ          ಮಹಾ ವಿಸ್ಮಯದ ಕತ್ತಲೆಯೇ  ಓ ಕತ್ತಲೆಯೇ … Read more

ಕಾವ್ಯಧಾರೆ: ಕು.ಸ.ಮಧುಸೂದನ ರಂಗೇನಹಳ್ಳಿ, ಮಂಗಳ.ಎನ್, ಬಿದಲೋಟಿ ರಂಗನಾಥ್, ಅರುಣ್ ಅಲೆಮಾರಿ

ಹೂ-ನದಿ ಮುಂಜಾನೆಯರಳಿ ಸಂಜೆಗೆ  ಬಾಡುವ ಹೂವು ಶಾಶ್ವತವಲ್ಲದಿದ್ದರೂ ಬಾಡುವ ಮುಂಚೆ ಸೇರುವುದು ತಾಯಂದಿರ ಮುಡಿಯ ದೇವರ ಗುಡಿಯ ಮಳೆಗಾಲದಿ ಉಕ್ಕಿ ಬೇಸಿಗೆಯಲಿ ಬತ್ತಿ ಹರಿಯುವ ನದಿ ನಿರಂತರವಲ್ಲದಿದ್ದರೂ ಬತ್ತುವ ಮುಂಚೆ ತೊಳೆಯುವುದು ನಮ್ಮ ಕೊಳೆಗಳ ಬೆಳೆಯುವುದು ಜೀವಿಗಳಿಗೆ ಬೆಳೆಗಳ! ಧ್ಯಾನದ ಕೊನೆಗೆ! ಮೌನದಲ್ಲಿ ಧ್ಯಾನಸ್ಥನಾಗಿದ್ದ ಬುದ್ದ ಮೆಲ್ಲಗೆದ್ದ ಕಣ್ಣರಳಿಸಿ ಮುಗುಳ್ನಗೆ ಬೀರಿದ ಮಂಜಿನ ಬೆಟ್ಟ ಕರಗಿ ನದಿಯಾಗಿ ಹರಿಯತೊಡಗಿತು ಕಗ್ಗಲ್ಲ ಬೆಟ್ಟಕೆ ರೆಕ್ಕೆ ಬಂದು ಹಕ್ಕಿಯಾಗಿ ಹಾರತೊಡಗಿತು ಕಗ್ಗತ್ತಲಕೂಪದಲಿ ಮುಳುಗೆದ್ದ ಭೂಮಿ ದಿವಿನಾಗಿ ಬೆಳಗತೊಡಗಿತು ಸುತ್ತ ನೆರೆದಿದ್ದ … Read more

ನಾಲ್ವರ ಕವಿತೆಗಳು: ಸಿರಿ ಹೆಗ್ಡೆ, ಚಿದು, ಬಿದಲೋಟಿ ರಂಗನಾಥ್, ಕಿರಣ್ ಬಾಗಡೆ

ಕ್ಷಮಿಸಿ ನನ್ನನ್ನು … ಇಷ್ಟು ವರ್ಷಗಳ ಕಾಲ ಕುಣಿಸಿದೆ, ಗೆಜ್ಜೆಯ ಗೀಳು ಹತ್ತಿಸಿದೆ, ನಿಮ್ಮಿಂದ ನಾ ಹೆಸರು ಗಳಿಸಿದೆ, ಆದರಿಂದು …? ಕ್ಷಮಿಸಿ ನನ್ನನ್ನು… ನೋವೆಂದು ನೀವಳುತ್ತಿದ್ದ ದಿನಗಳವು, ಬೇಡ ಸಾಕೆಂದು ಗೋಗರೆಯುತ್ತಿದ್ದ ಕಾಲ, ಕೇಳಲಿಲ್ಲ ನಾನು, ಅಹಂಕಾರಿ ! ಮತ್ತೆ ಕಟ್ಟಿಸಿದೆ ಗೆಜ್ಜೆ, ಕುಣಿಸಿದೆ, ಆದರಿಂದು …? ಕ್ಷಮಿಸಿ ನನ್ನನ್ನು… ನಿಮ್ಮ ಸಾಮರ್ಥ್ಯಕ್ಕಿಂತ ಜಾಸ್ತಿ ದುಡಿಸಿದೆ, ಇಂದು ನನ್ನ ಹೊಗಳುತ್ತಾರೆ, ನಿಮ್ಮಿಂದ, ನಾ ಸದಾ ಕೃತಜ್ನೆ, ಆದರಿಂದು …? ಕ್ಷಮಿಸಿ ನನ್ನನ್ನು… ಬಂದನವನು ನನ್ನ ಬಾಳಲ್ಲಿ, … Read more

ಕಾವ್ಯಧಾರೆ: ಪ್ರವೀಣ್ ಕುಮಾರ್ ಜಿ., ಚಾರುಶ್ರೀ ಕೆ ಎಸ್, ಸಿಪಿಲೆನಂದಿನಿ, ಸಂದೇಶ್.ಎಚ್.ನಾಯ್ಕ್

-: ನಿಂತ ನಾವೆ :-  ಮುಗುಚಿಬಿದ್ದ ನಾವೆ  ಅತ್ತ ದಡಕ್ಕಿರದೆ  ಇತ್ತ ಕಡಲ ಒಡಲಲಿ  ತೇಲದೆ ನಿಂತಿದೆ  ಕಾಲದ ಕೊಂಡಿಯಾ ಕಳಚಿಕೊಂಡು.  ಬೀಸುವ ಗಾಳಿಗೂ  ಮಿಸುಕಾಡದೆ ಅಬ್ಬರಿಸಿ  ಬರುವ ಅಲೆಗಳಿಗು  ಅತ್ತಿತ್ತಾಗದೆ ನಿಂತಿಹುದು ನಾವೆ  ಕಾಲದ ಕೊಂಡಿಯಾ ಕಳಚಿಕೊಂಡು.  ವಿಶಾಲ ಸಾಗರದ  ಎದೆಯ ಮೇಲೆ  ಮಿಸುಕದೆ ಕುಂತ ನಾವೆಯ  ಹೊತ್ತೊಯ್ಯುವವರಿರದೆ ಅನಾಥವಾಗಿ  ಕುಳಿತಿಹುದು ಕಾಲದ ಕೊಂಡಿಯಾ ಕಳಚಿಕೊಂಡು.  -ಪ್ರವೀಣ್ ಕುಮಾರ್ ಜಿ.         ನೈಜ ಪ್ರೀತಿ ನಿನ್ನ ನನ್ನ ಮರೆತು ಪ್ರೀತಿಸಿದೆ. ನನ್ನ … Read more

ಕಾವ್ಯ ಧಾರೆ: ಜಯಶ್ರೀ ದೇಶಪಾಂಡೆ, ಬಿದಲೋಟಿ ರಂಗನಾಥ್, ಕು.ಸ.ಮಧುಸೂದನ

ದಾರಿಯಾವುದು ನಕ್ಷತ್ರಲೋಕಕೆ? ಅವಳು ಹೋದಳು ಇವತ್ತೇ. ಹೇಳಲೇ ಇಲ್ಲ ನನಗೆ, ಅಲ್ಲಿ ಕಿಟಕಿ ಅಂಚಿನಿಂದ ಸೂರ್ಯ ಚಂದ್ರರ ಜಾರಿಸಿ ತಂದು ಕಮಾನು ಕಟ್ಟಿದ್ದೆ… ತೋರಣವಿಟ್ಟು ಮೆತ್ತೆ  ಹಾಸಿದ್ದೆ, ಅವಳು ಬಂದೊರಗಿದ ಮೇಲೆ ಆ ಮಡಿಲಿನಲ್ಲಿ ಸುಖಕ್ಕೆ ಹೊಂಚು ಹಾಕಿದ್ದೆ. ಅನವರತ ಕಾದಿದ್ದೆ…. ಹಿತ್ತಲಿನ ಗಿಳಿ ಹೊಸ ಹಾಡು ಹೇಳಿತ್ತು, ಮಾಮರದಲಿ ಚಿಗುರು ಮೂಡಿತ್ತು. ಮಾಮರ ಅವಳದು, ಗಿಳಿಯೂ… ಹಗಲಿರುಳು ಅವಳ ಹಾದಿ ನೋಡುವ  ಹುಚ್ಚಿ ನಾನೊಂದೇ ಅಲ್ಲ! ಅದಕ್ಕೆಂದೇ ಅವಳು ಬರಬೇಕಿತ್ತು! ಹೊರಡುವ ಹೊಸ್ತಿಲಲ್ಲಿ ಹೇಳಿದ್ದಳಲ್ಲ ಇಲ್ಲೆಲ್ಲ … Read more

ಪಂಜು ಕಾವ್ಯ: ಸಿದ್ರಾಮ ತಳವಾರ, ಉಕುಮನಾಳ ಶಿವಾನಂದ ರುದ್ರಪ್ಪ

ಮೌಢ್ಯತೆ,,, ಯಾವುದೋ ದಶಕಗಳಾಚೆ ಜುಟ್ಟು  ಜನಿವಾರಗಳ ಧರಿಸಿ ಅರೆಬೆತ್ತಲೆಯಲಿ ಕಾಯಕವಿರದೇ ಮಂತ್ರ ಜಪಿಸುತಿದ್ದವರೆಲ್ಲ ಇಂದು ಮೆತ್ತಗಾಗಿರಬಹುದು,,             ಆದರೆ, ಅವರು ಕಲಿಸಿದ ಹೀನ ಪಾಠ ಮಾತ್ರ             ಹೊತ್ತಿ ಉರಿಯುತಿದೆ ಇಂದಿಗೂ;             ಉಳ್ಳವರು ಬಿಟ್ಟರೂ ಮಾನಸಿಕ ಕಾಯಿಲೆಯಂತೆ             ಜಾತೀಯತೆಯ ವಿಷ ಇವರಿಂದ ಹೊರಹೋಗುತ್ತಲೇ ಇಲ್ಲ,, ದೊಡ್ಡವರೆಂದೆನಿಸಿಕೊಂಡವರೆಲ್ಲ ಹೀಗೆ ಒಂದಿನ ಗೊತ್ತಿಲ್ಲದೇಯೇ ನನ್ನ ಒಳ ಕರೆದರು ಆತ್ಮೀಯತೆಯಲೇ ಮುಗುಳ್ನಕ್ಕು ಪ್ರಶ್ನಿಸಿಯೇ ಬಿಟ್ಟರು ನೀವು ಯಾವ … Read more

ಮೂವರ ಕವನಗಳು: ಕು.ಸ.ಮಧುಸೂದನ್‍ ರಂಗೇನಹಳ್ಳಿ, ಅನುರಾಧಾ ಪಿ ಎಸ್., ನಾಗೇಶ ಮೈಸೂರು

    ವ್ಯತ್ಯಾಸ! ನಾನು ಗೇಯುತ್ತ ಬಂದೆ ನೀನು ತಿಂದು ತೇಗುತ್ತ ಬಂದೆ ನಾನು ಗೋಡೆಗಳ ಕೆಡವುತ್ತ ಬಂದೆ ನೀನು ಮತ್ತೆ ಅವುಗಳ ಕಟ್ಟುತ್ತ ಬಂದೆ ನಾನು ಭೇದಗಳ ಇಲ್ಲವಾಗಿಸುತ್ತ ಬಂದೆ ನೀನು ಹೊಸ ಭೇದಗಳ ಸೃಷ್ಠಿಸುತ್ತ ಬಂದೆ ನಾನು ಸಹನೆಯ ಕಲಿಸುತ್ತ ಬಂದೆ ನೀನು ಸಹಿಷ್ಣುತೆಯ ಭೋದಿಸುತ್ತ ಬಂದೆ! *** ವಾಸ್ತವ ಮಂದಿರಕ್ಕೆ ಹೋದೆ ಮಸೀದಿಗೆ ಹೋದೆ ಇಗರ್ಜಿಗೆ ಹೋದೆ ದೇವರು ಸಿಗಲೇ ಇಲ್ಲ! ಬೆಟ್ಟಗಳ ಹತ್ತಿದೆ ಕಣಿವೆಗಳ ದಾಟಿದೆ ನದಿಗಳ ಈಜಿದೆ ನಿಸರ್ಗದಲೊಂದಾದೆ ಆತ್ಮದೊಳಗೊಂದು … Read more

ಮೂವರ ಕವನಗಳು: ಬಿದಲೋಟಿ ರಂಗನಾಥ್, ನಂದಾ ದೀಪ, ರೇಣುಕಾ ಹೆಳವರ್

ಜೋಲಿ ಕಟ್ಟಿ ತೂಗುವ ನೆಲದವ್ವ ನೆಲದ ಕರುಣೆಯ ತೊರೆಯಲು ಮನಸ್ಸಿಗೆ ಮಾರುದ್ದ ದುಃಖ ಕನಸಿನ ಗುಹೆಗೆ ಭಯದ ಭೈರಿಗೆ ನೆಲದ ಕರುಳ ಮಾತೃಕೆಗೆ ಸೋತು ಭಾವ ಉಕ್ಕಿದ ಮನಸ್ಸೆಂಬ ಸಮುದ್ರ ಮಂಥನಕೆ ಸಾಕ್ಷಿಯೇ ಇಲ್ಲದ ದಾವೆ ಸಿಟ್ಟೆಂಬ ಬೀಜ ಸಿಡಿದರು ಮೊಳಕೆಯಾಗದ ಅನುಬಂಧ ಆದರೂ ನನ್ನವ್ವ ಭೂತಾಯಿಗೆ ನಾನು ಸದಾ ಆಳುಮಗನೆ. ಗುಡಿಸಿದರೂ ಸವೆಯದೆ ಅಗೆದು ಬಗೆದರೂ ಹರಿಯದ ನನ್ನವ್ವಳ ಜೀವದ ಗಟ್ಟಿತನಕ್ಕೆ ಸರ್ವರು ಸವಕಲೇ. ಆದಿಯನ್ನು ಗುಡಿಸದೆ ಇತಿಹಾಸ ನಿರ್ಮಾತೃ ಹೃದಯಕೆ ಜೋಲಿಕಟ್ಟಿ ತೂಗುವ ನೆಲದವ್ವಳ … Read more

ಮೂವರ ಕವನಗಳು: ನಂದನ್ ಜಿ, ರನ್ನ ಕಂದ, ಸಿಪಿಲೆನಂದಿನಿ

ತಾರೆ ಬದುಕು  ನೆನಪಿನಾ ಜೋಳಿಗೆಯ ಸರಕು ಆ ನೆನಪಿಗೂ ಬೇಕಿದೆ ಆಸರೆ  ಮಿನುಗುವುದೇ  ಮಿಂಚಿ ಮರೆಯಾದ ಆ ತಾರೆ..  ಹೊಳೆಯುವುದೇ  ಮಿಂಚಿ ಮರೆಯಾದ ಆ ತಾರೆ.. ನೆನಪಿನಾ ಬಾಣಲೆಗೆ ಹಾಕಿದಳು ಒಲವೆಂಬ ಒಗ್ಗರಣೆ  ಹಾಳಾಗಿದೆ ಹೃದಯ..  ಸರಿಪಡಿಸಲಾರದು  ಯಾವುದೇ ಗುಜರಿ ಸಲಕರಣೆ ಅಂದು ಮನತಣಿಸಿದ್ದ  ಹಾವ-ಭಾವ ಮಾತುಗಳ ಸಮ್ಮಿಲನ  ಇಂದೇಕೊ ಕಾಡುತಿದೆ  ಖಾಲಿ ನೀರವತೆಯ ಮೌನ ಶುರುವಾಗಿದೆ ಅವಳೊಂದಿಗಿನ  ಆ ನೆನಪುಗಳ ಪ್ರಹಾರ..  ಮನದ ಪಡಸಾಲೆಯಲ್ಲೆಲ್ಲೋ  ನಿರಂತರ ಮರುಪ್ರಸಾರ. ಕತ್ತಲಲ್ಲಿ ಮುದುಡಿದ್ದ ಮನಸಿಗೆ  ನಗುವೆಂಬ ಲಾಟೀನು ಹಿಡಿದು … Read more

ಮೂವರ ಕವನಗಳು: ವಸಂತ ಬಿ ಈಶ್ವರಗೆರೆ, ದಿವ್ಯ ಆಂಜನಪ್ಪ, ಆಶಿತ್

ನನ್ನವಳಿಗೆ ಮೊಬೈಲ್ ಸಂದೇಶದ ಕವನಗಳು. ನನ್ನ ಭಾವನೆಯ ಮುಟ್ಟಿಸಿ ಪ್ರೇಮದ ಸಾಲುಗಳು…! 1. ಬೆಳದಿಂಗಳ ರಾತ್ರಿಯಲಿ, ಹೊಳೆವ ಬಾನಂಗಳದ ಎರೆಡು ನಕ್ಷೇತ್ರಗಳು ಆಗೋಣವೇ..? ಧರೆ ನಮ್ಮ ಸುತ್ತ, ಗ್ರಹ ಮಂಡಲ ನಮ್ಮ ಸುತ್ತ, ನೋಡುತ ಪ್ರೀತಿಯ ಮಾಡೋಣ, ಪಥ ಬದಲಿಸದಂತೆ ಜೊತೆ ಸಾಗೋಣ..! . 2. ಎದೆಯೊಳಗಿನ ನೋವು, ಹೃದಯದೊಳಗಿನ ಮಾತು, ನನ್ನ ಎದೆಗೆ ತಲೆ ಇಟ್ಟಾಗಲೇ ಮರೆತೆ. ನಗು ಈಗ ಮೊಗದೊಳಗೆ, ಪ್ರೀತಿಯ ಹೊಳೆ, ನಿನ್ನ ಈ ದಿನಗಳ ಒಳಗೆ, ಇಷ್ಟು ಸಾಕಲ್ಲವೇ ನಾ ಬಂದ … Read more

ಕಾವ್ಯಧಾರೆ: ಬಿದಲೋಟಿ ರಂಗನಾಥ್, ಶ್ರೀಶೈಲ ಮಗದುಮ್, ಶ್ರೀಮಂತ ಯನಗುಂಟಿ, ಎಸ್ ಕಲಾಲ್

ಸುಡುವ ಕನ್ನಡಮ್ಮನ ಪಾದಗಳು ಸುಡುಬಿಸಿಲ ನಡುಮಧ್ಯಾಹ್ನ ನನ್ನವ್ವಳ ಅಂಗಾಲುಗಳು ಚುರ್ರುಗುಟ್ಟಿ ಬೊಬ್ಬೆ ಎದ್ದಿವೆ ಮೈಲಿದೂರಗಳ ಕ್ರಮಿಸಿ ಛತ್ರಿಯಿಲ್ಲ ಚಪ್ಪಲಿಯಿಲ್ಲ ಹೆಗಲ ಮೇಲೆ ಕೂರಿಸಿಕೊಳ್ಳುವವರು ಮೊದಲೇ ಬಚ್ಚಿಕ್ಕಿಕೊಳ್ಳುತ್ತಿದ್ದಾರೆ ಕಣ್ತಪ್ಪಿ ಕೂರಿಸಿಕೊಂಡವವನನ್ನು ಹುಚ್ಚ ದಡ್ಡನೆಂದು ಜರಿಯುತ್ತಿದ್ದಾರೆ 'ಅಮ್ಮ' ಎನ್ನುವ ನಾಲಗೆಗಳು  'ಮಮ್ಮಿ' ಅನ್ನುತ್ತಿದ್ದಾವೆ ಬರಿಗಾಲಲಿ ನಡೆದೋಗುತಿರುವ ತಾಯಿಗೆ ನೀರಡಿಕೆಯಾದರು ಗುಟುಕು ನೀರು ಕೊಡುವವರಿಲ್ಲ ಮರದಡಿಯ ಮರಳ ಚಿಲುಮೆ ಉಕ್ಕುತ್ತಿಲ್ಲ ! ಬೆವರ ಹನಿಗಳು ತಂಬಿಗೆ ಲೆಕ್ಕದಲ್ಲಿ ಸೋರುತ್ತಿವೆ ಒರೆಸುವ ಕೈಗಳು ಗಾಯವಿಲ್ಲದೆಯೂ ಬ್ಯಾಂಡೀಜ್ ಕಟ್ಟಿಕೊಂಡಿದ್ದಾರೆ ! ಉಸಿರೆತ್ತಿದರೆ ಕನ್ನಡಮ್ಮನ ಮಡಿಲ … Read more

ಕಾವ್ಯಧಾರೆ: ಸಿಪಿಲೆನಂದಿನಿ, ಎಸ್ ಕಲಾಲ್, ಕು.ಸ.ಮಧುಸೂದನ್ ರಂಗೇನಹಳ್ಳಿ

ಅವನು ಕಾಡುಗಳ್ಳರಲ್ಲಿ ಬಬ್ಬನು  ಮಳೆತಂಪಿಗೆ ನಳ-ನಳಸುತ್ತ ಚಿಗುರೊಡೆಯುತ್ತಿದೆ ವನರಾಶಿ ತುಂಬಿದೆ ಶಿಖೆಯಾದ್ರಿಗಳು ಅವನ ಮೈತುಂಬಿದ  ಹಸಿರು ಎಲೆಗಳ ಉಡುಪುಲಿ  ಎಂತಹ ಸುವಾಸನೆ  ಮಣ್ಣಿನ ಬೇರಿನೊಳಗೂ  ಸೂಸುವ ತಾಜಾತನ ಅವನ ಎದೆಯೊಳಗೆ ಜೀವನಿರೋದಕ  ಮೌನಕವಿದ ರುದ್ರ ತೊರೆಯಂತಹ ಮುಖ ಸಿಡಿಲಿನಂತಹ ಬಾಹುಗಳಲ್ಲಿ ಬಂದಿಯಾಗುವ ಸಾರಂಗ, ಚಿತ್ತಾಕರ್ಷಕ ಗುಂಡಿಗೆ  ದಮನಿಯ ಮೇಲೆ ಚಿನ್ನದಕಾಂತಿ ಹುಲಿಪಟ್ಟೆ  ನಡುವಲ್ಲಿ ನೀಲಿ ವರ್ಣದ ಗುಂಡುಗಳ ಬತ್ತಳಿಕೆ ಕಂಗಳ ಹಂಚಿನಲಿ  ಬೆಳ್ಳಿಮುಗಿಲ ಹೊಳಯುವ ಚಿತ್ತಾರ ಹಾಲ್ದಿಂಗಳ ಬೆಳಕ ನೆರಳಿನಲಿ ನೆಡೆವಾಗ  ಕಣಿವೆಗಳಲಿ ಕಂಪನ  ಕಾನನದೆದೆಯ ಆಳದೊಳಗೆ … Read more

ಕಾವ್ಯಧಾರೆ: ವಸಂತ ಬಿ ಈಶ್ವರಗೆರೆ, ನೂರುಲ್ಲಾ ತ್ಯಾಮಗೊಂಡ್ಲು, ಸತೀಶ್ ಪಾಳೇಗಾರ್

ಮಳೆರಾಯ ಬರಡು ಭೂಮಿಗೆ, ಮುತ್ತಿನ ಹನಿಗಳ ಸುರಿಸಿ,  ಹಸಿರ ಚಿಗುರಿಸು ಮಳೆರಾಯ.  ಕಾದು ಬಾಯ್ದೆರೆದಿದೆ,  ನಿನ್ನ ಆಗಮನದ ನಿರೀಕ್ಷೆಯಲಿದೆ, ಸುರಿಯಲು ಬಾರೆಯ ಮಹರಾಯ..? ರೈತ ಮುಗಿಲತ್ತ ನೋಡುತ,  ಪಶು ಪಕ್ಷಿಗಳೆಲ್ಲ ನಿನಗಾಗಿ ಹುಯ್ಯಲಿಡುತ,  ಕರುಣೆ ತೋರಲಾರೆಯ ಮುನಿದ ಮಾಯ…?  ಬೆಟ್ಟದಲಿ ಹಸಿರಿಲ್ಲ,  ಭುವಿಯಲಿ ತಂಪಿನ ಕಂಪಿಲ್ಲ, ತೋರಲಾರೆಯ ಹೊಸ ಚೇತನ ರಾಯ…?  ನೀರಿಗಾಗಿ ಆಹಕಾರ ಏಳುವ ಮುನ್ನ,  ಜಾನುವಾರುಗಳು ಹಸಿವಿನಿಂದ ಸಾಯುವ ಮುನ್ನ,  ಈ ಧರೆ ಬಾಯಿ ಬಿಟ್ಟು ಎಲ್ಲರನು ಮಣ್ಣಾಗಿಸುವ ಮುನ್ನ,  ನಿನ್ನ ಸಿಂಚನ ಸುರಿಸು,  … Read more

ಕಾವ್ಯಧಾರೆ: ಸುಷ್ಮಾ ರಾಘವೇಂದ್ರ, ಶೋಭಾ ಕೆ., ಕು.ಸ.ಮಧುಸೂದನ್ ರಂಗೇನಹಳ್ಳಿ, ಎಸ್.ಕಲಾಲ್

ಹಚ್ಚೆಯ ಹಸಿರು ಅವಳು, ಒಡಕು ಕನ್ನಡಕದೊಳಗಿನಿಂದ ಇಣುಕಿ ನನ್ನ ಕರೆದಾಗ ನನಗಿನ್ನು ಎಳಸು ಬೆರೆಯಲಿಲ್ಲ ಬೆಳೆಯಲಿಲ್ಲ ಅವಳೊಳಗೆ ಅವಳ ಕೈ ತುಂಬಿದ ಹಚ್ಚೆಯ ಹಸಿರೊಳಗೆ, ಎಲ್ಲರಂತೆ ತೊಡೆಯೇರಿ ಕಥೆಯಾಗಿ ಹಂಬಲಿಸಲಿಲ್ಲ ಅದಕ್ಕೇ ಕಾಡುತ್ತಾಳವಳು ಕಣ್ಣಂಚಿನಲ್ಲಿ ಹನಿಗಳಾಗಿ, ಬೀಳಲೊಲ್ಲೆ ನೆಲಕ್ಕೆ  ಬಾಗುತ್ತೇನೆ ಅವಳೆದುರಿಗೆ, ಯಾವ ಕಥೆಯ ನಾಯಕಿಯಂತಲ್ಲ ಉತ್ತಿದಳು ಬಿತ್ತಿದಳು ನನ್ನವರ ಹಸುರ, ಕೂತು ತಿನ್ನುವ ಮಂದಿಗೆ ಕುಡಿಕೆ ಹೊನ್ನು ತುಂಬಿಸಿ ಹರಿದ ನೆತ್ತರ,  ಕರಗಿದ ಖಂಡವನ್ನು ಸವೆದ ಬೆನ್ನ ಮೂಳೆಯ ತಿರುಗಿ ನೋಡದೇ ಬೆತ್ತಳಾದಳು ಶೂನ್ಯದೊಳಗೆ ನೆನಪಾಗದ … Read more