ಮೂರು ಕವಿತೆಗಳು: ಪ್ರಭಾಮಣಿ ನಾಗರಾಜ, ಸಹನಾ ಕಾಂತಬೈಲು, ಶ್ರೀದೇವಿ ಕೆರೆಮನೆ
ಹಬ್ಬದ ಕುರಿ ಕಟ್ಟಲಾಗಿದೆ ಕುರಿಯ ಪಡಸಾಲೆಯಲ್ಲಿ ಇದ್ದಲ್ಲೇ ದೊರೆವ ಸೊಪ್ಪುಸೆದೆ ಬಗೆಬಗೆಯ ಆಹಾರ ಏಕಿಷ್ಟು ಉಪಚಾರ? ಕ್ಷಣಗಣನೆಯಾಗುತಿದೆ ಎಂದರಿಯದ ಬಕರ ಕಣ್ಣಲ್ಲೇ ಅಳೆವವರ ಅಭಿಮಾನದ ನೋಟ ಏನಿದು ಮನುಜರ ವಿಕೃತ ಆಟ? ಅಪರಿಚಿತರ ಕಂಡು ಬೆದರುತಿದೆ ಮುಗ್ದ ‘ಹಬ್ಬಕ್ಕೆ ತಂದ ಹರಕೆಯ ಕುರಿ ತೋರಣಕ್ಕೆ ತಂದ ತಳಿರ ಮೇಯಿತ್ತಾ…’ ಎಂದೂ ಆರದ ಕಿಚ್ಚಿನ ನಮ್ಮೀ ಒಡಲೊಳಗಿನ ಬಡಬಾಗ್ನಿಯ ತಣಿಸಲು ಇನ್ನೆಷ್ಟು ಜೀವಿಗಳ ಬಲಿಯೋ? ಅತೃಪ್ತ-ತೃಪ್ತತೆಯ ಅವಿರತ ಓಟದಲಿ ಜಿಹ್ವೆಯದೇ ದರ್ಬಾರು ಬಾಹ್ಯ ಪ್ರೇರಿತ ಕ್ರಿಯೆಗಳಲ್ಲಿಯೇ ತೊಡಗಿದ … Read more