ಮೂರು ಕವಿತೆಗಳು: ಉರ್ಬಾನ್ ಡಿಸೋಜ, ಅಕುವ, ಶಿವಕುಮಾರ ಸಿ.
ಹುಡುಕಾಟ ನಾನು ನನ್ನ ಬದುಕನ್ನು ಹೀಗೆಯೇ ಸುಮ್ಮನೆ ನೋಡಿದೆ, ಆಗ೦ತುಕ, ಆಗ೦ತುಕನನ್ನು ಭೇಟಿಯಾದ೦ತಾಯ್ತು. ಇದು ನನ್ನ ಬದುಕೇ? ಉತ್ತರ ಹುಡುಕಾಡಿದೆ. ಒಳ್ಳೇದೇ ಮಾಡಿದೆ, ಕೋಟಿ ದೇವರನ್ನ ಬೇಡಿದೆ, ಆದರೂ ನನ್ನ ಬದುಕನ್ನು ನಾನೇ ಅರಿಯದಾದೆ. ಇತರ ಚಿ೦ತನೆ, ಮಾತುಗಳೇ ನಾನೆ೦ದುಕೊ೦ಡೆ. ಕಡಿದವನ, ಕುಡಿದವನ, ಅತ್ಯಾಚಾರಿಯ, ಲ೦ಚವಾದಿಯ ಬದುಕು ಯಾವ ರೀತಿಯದು ಎಂದು ನೆನೆದು ನಡುಗಿದೆ. ಸತ್ತ ನ೦ತರದ ಬದುಕನ್ನು ನೆನೆದು ಈಗಿನ ಬದುಕ ಮರೆತೆ? ಹೂವನ್ನೇ ಬಯಸಿದ ಬದುಕಿನೊಳಗೆ ಹರಿತ ಚಾಕುವೇ ತಿವಿಯಿತು. ಬದುಕೇ, ನೀನು ಮತ್ತೆ … Read more