1) ಕವಿತೆ ಎಂದರೆ
ಕವಿತೆ ಎಂದರೆ
ಮನದಾಳದ ಭಾವನೆಗಳ
ಕವಿಯಾಗಿ ಹಾಡುವುದು.
ಕವಿತೆ ಎಂದರೆ
ಹೃದಯಾಳದ ನೆನಪುಗಳು
ಭಾವನೆಯಾಗಿ ಅರಳುವುದು.
ಕವಿತೆ ಎಂದರೆ
ಮನದ ಧರೆಯೊಳಗೆ
ಅವಿತಿರುವ ಸುಪ್ತ
ಭಾವಗಳ ಹೊರಸೂಸುವುದು.
ಕವಿತೆ ಎಂದರೆ
ರವಿ ಕಾಣದನ್ನು
ಕವಿಯಾಗಿ ಕಂಡು
ಕೋಗಿಲೆಯಂತೆ ಹಾಡುವುದು.
ಕವಿತೆ ಎಂದರೆ
ಕವಿ ತನ್ನತನವ ತಾ
ಕವಿಯಾಗಿ ಕಾಣುವುದು.
2) ಕನ್ನಡ
ಕನ್ನಡ ನಾಡಿನ ಕೋಗಿಲೆಗಳಿರಾ
ಕನ್ನಡ ನಾಡಿನ ಕಂದಗಳಿರಾ
ಕನ್ನಡಕ್ಕಾಗಿ ಕೈ ಎತ್ತಿ
ಕನ್ನಡಕ್ಕಾಗಿ ಹೋರಾಡಿ
ಕನ್ನಡ ನಾಡಿನ ಕಣ್ಮಣಿಗಳಾಗಿ.
ತನು ಕನ್ನಡ, ಮನ ಕನ್ನಡ
ನುಡಿ ಕನ್ನಡ ಭವ ಕನ್ನಡ
ಹಳೆಗನ್ನಡ ನಡುಗನ್ನಡ
ಎಲ್ಲವೂ ಕನ್ನಡ, ಕನ್ನಡ ಕನ್ನಡ
ಹರ ಕನ್ನಡ, ಹರಿ ಕನ್ನಡ
ಸಿರಿಕನ್ನಡ, ತಾಯಿಕನ್ನಡ
ಅವ ಕನ್ನಡ ಇವ ಕನ್ನಡ
ಎಲ್ಲವೂ ಕನ್ನಡ ಕನ್ನಡ ಕನ್ನಡ.
ಬೆಂಗ್ಳೂರ್ ಕನ್ನಡ, ಮಂಗಳೂರ್ ಕನ್ನಡ
ಮೈಸೂರ್ ಕನ್ನಡ, ಹುಬ್ಬಳ್ಳಿ ಕನ್ನಡ
ಚಾಮರಾಜನಗರ ಕನ್ನಡ, ಆ ಕನ್ನಡ ಈ ಕನ್ನಡ
ಎಲ್ಲವೂ ಕನ್ನಡ ಕನ್ನಡ ಕನ್ನಡ.
ಕನ್ನಡ ಕಂದಗಳಿರಾ, ಕನ್ನಡ ಕೋಗಿಲೆಗಳಿರಾ
ಕನ್ನಡ ಮಾತಾಡಿ, ಕನ್ನಡ ಕಣ್ಮಣಿಗಳಾಗಿ
ಕನ್ನಡ ತಾಯಿ ಕಾಪಾಡುವ
ಕನ್ನಡ ಹೃದಯ ಶಿವಗಳಾಗಿ.
3) ಅಮೂರ್ತದ ಅಂಜಿಕೆ
ಮನದಾಳದ ಕಲರವಗಳ
ಕವಿಯಾಗಿ ಹಾಡಲು
ಸವಿಯಾದ ನೆನಪುಗಳ
ಮುಖಪುಟದಲಿ ತೆರೆದಿಡಲು
ಸ್ವಚ್ಛ ಮುಗಿಲಿನ
ಹಕ್ಕಿ ರಾಶಿಗಳ ನಡುವೆ
ಸ್ವಚ್ಚಂದವಾಗಿ ಹಾರಲು
ಸಾಗರ ಜಗದೊಳಗೆ
ನನ್ನತನದಿ ವಿಹರಿಸಲು
ಬಿಡದೆ ಕಾಡುಹುದು
ಹೆಣ್ಣೆಂಬ ಅಮೂರ್ತ ಅಂಜಿಕೆ
-ಡಾ. ತೇಜಸ್ವಿನಿ