ಜೀರಂಗಿ ಜಗತ್ತು: ವೀರಯ್ಯ ಕೋಗಳಿಮಠ್
“ಕಾಲುತೊಳಿ ಮುಖತೊಳಿ, ಜೀಯೆನ್ನಲೇ”, ಅಂತ ಪದೇಪದೇ ರಾಗವಾಗಿ ಹಾಡುತ್ತಾ ಅದರ ಕಾಲು ಚಿವುಟಿ ನೆಲದಿಂದ ಮೇಲಕ್ಕೆ ಹಾರುವವರೆಗೆ ಬಿಡದೆ ಚಿತ್ರಹಿಂಸೆ ನೀಡಿ ಆಟ ಆಡಿಸುತ್ತಿದ್ದುದು ನಮ್ಮ ಬಾಲ್ಯದಲ್ಲಿ ನೆಚ್ಚಿನ ಜೀರಂಗಿ (Jewel Beetle/ Sternocera ruficornis) ಮತ್ತು ಹೆದ್ದುಮ್ಮಿಗಳಿಗೆ. ಹಲವು ಕಡೆ ಅವುಗಳಿಗೆ ಜಿಲಗಂಬಿ, ಜೀರ್ಜಿಂಬೆ, ಕಂಚುಗಾರ ಅಂತಾನೂ ಕರೀತಾರೆ. ಕೈಗೆ ಸಿಕ್ಕ ಜೀರಂಗಿಗಳನ್ನ ನಡೆಸಿಕೊಳ್ಳುವ ಪರಿಯನ್ನ ಹೇಳುವಂತಿಲ್ಲ. ಮನೇಲಿರೋ ಬೆಂಕಿಪೊಟ್ಣದ ಕಡ್ಡಿಗಳನ್ನೆಲ್ಲ ಚೆಲ್ಲಿ ಅದನ್ನೇ ಜೀರಂಗಿ ಗೂಡನ್ನಾಗಿ ಮಾಡಿ ಜೀಕುಜಾಲಿ ಅಥವಾ ತುಗಲಿ ಮರದ ತೊಪ್ಪಲು … Read more