ಅವನು ಅವಳು ಮತ್ತು ಆತ: ಡಾ. ವಿಶ್ವನಾಥ ಎನ್ ನೇರಳಕಟ್ಟೆ
“ಯಾಕೆ ಮದುವೆ ಆಗಿದ್ದೇನೋ ಎನಿಸುತ್ತಿದೆ. ಇದಕ್ಕಿಂತ ಒಂಟಿಯಾಗಿರುವುದೇ ಒಳ್ಳೆಯದಿತ್ತು” ಶೂ ಕಳಚಿಡುತ್ತಾ ಅವನು ಹೇಳಿದ ಈ ಮಾತು ಮೊದಲೇ ಕೋಪದಿಂದಿದ್ದ ಅವಳನ್ನು ಕೆರಳಿಸಿತು.“ನನಗೂ ಈ ಸಂಬಂಧ ಬೇಕಿರಲಿಲ್ಲ. ನೀವು ಇಂಥವರು ಅಂತ ಮೊದಲೇ ಗೊತ್ತಿದ್ದರೆ ನಾನು ಮದುವೆಗೆ ಒಪ್ಪುತ್ತಿರಲಿಲ್ಲ” ಎಂದು ಅವಳು ಹೇಳಿದ ತಕ್ಷಣವೇ ಅವನು ಕಳಚಿದ್ದ ಶೂವನ್ನು ಬಲವಾಗಿ ನೆಲದ ಮೇಲೆ ಬಿಸಾಡಿದ. ಅವನ ವರ್ತನೆಯನ್ನು ಲೆಕ್ಕಕ್ಕೇ ತೆಗೆದುಕೊಳ್ಳದವಳಂತೆ ಅವಳು “ಬೇಕಿರುವುದನ್ನೆಲ್ಲಾ ತೆಗೆದುಕೊಳ್ಳುವಷ್ಟು ಪುರುಸೊತ್ತು ಇಲ್ಲವೆಂದ ಮೇಲೆ ಶಾಪಿಂಗ್ಗೆ ಬಂದದ್ದಾದರೂ ಯಾಕೆ? ನಾನೊಬ್ಬಳೇ ಹೋಗುತ್ತಿದ್ದೆ. ಆಫೀಸಿನ … Read more