ಹೇಳಿ-ಕೇಳಿ…: ಗೋಪಾಲ ವಾಜಪೇಯಿ

  ನಾಲ್ಕು ಮಾತ ನೀನು ಹೇಳು, ನಾಲ್ಕು ನನ್ನ ಮಾತ ಕೇಳು…  ನಾಲ್ಕು ದಿನದ ಬಾಳು ಅಲ್ಲಾ, ನಾಲ್ಕು ಹೆಜ್ಜಿ ನಡೆಯಿದಲ್ಲಾ… ಹೇಳಿ-ಕೇಳಿ, ಕೇಳಿ-ಹೇಳಿ ಬಾಳಿ ಬದುಕುವಾ…  ಗೆಳತಿ, ಬಾಳಿ ಬದುಕುವಾ… ಬಾರೆ, ಬಾಳಿ ಬದುಕುವಾ…                                          ನಾಲ್ಕು ಜನರ ಓಣಿಯೊಳಗ, ನಾಲ್ಕು ಜನರು ಬಂಧು ಬಳಗ…  ನಾಲ್ಕು ಹೆಜ್ಜಿ ತಪ್ಪದಾಂಗ, ನಾಲ್ಕು … Read more

ನನ್ನೊಳಗಿನ ಗುಜರಾತ (ಭಾಗ 10): ಚಿನ್ಮಯ್ ಮಠಪತಿ

  ಅವು ತುಂಬು ಸಿಹಿಯಾದ ಅನುಭವಗಳು. ಅವುಗಳ ಕಡೆಗೆಯೇ ಸಾಗಿ ಮತ್ತೆ ಮತ್ತೆ ಅಲ್ಲಿಗೆ ನುಸುಳುತ್ತಿತ್ತು ಮನಸ್ಸು, ತುಂಬು ಚಿತ್ತವನ್ನು ತನ್ನ ಬೆನ್ನೇರಿಸಿಕೊಂಡು. ಎಷ್ಟೇ ಪ್ರಯತ್ನ ಪಟ್ಟರು ಆ ವಲಯದಿಂದ ಹೊರ ಬರಲಾಗಲೇ ಇಲ್ಲ. ಯಾಕೆ ನಾವು  ಒಮ್ಮೊಮ್ಮೆ ಇನ್ನೊಬ್ಬರು ಧಾರೆ ಎರೆವ ಪ್ರೀತಿ ವಿಶ್ವಾಸಗಳ ಅಭಿಮಾನಿಗಳಾಗಿ ಬಿಡುತ್ತೇವೆ? ಅವರನ್ನು ಅಷ್ಟಾಗಿ ಹಚ್ಚಿಕೊಂಡು ಬಿಡುತ್ತೇವೆ ? ಅವರ ಜೊತೆಗಾರಿಕೆ, ಸಾಂಗತ್ಯಕ್ಕೆ ಹಾತೋರೆಯುತ್ತೇವೆ? ಅವರಿಲ್ಲದ ಕ್ಷಣಗಳಲ್ಲಿ ಅವರಿಗಾಗಿ ಕನವರಿಸುತ್ತೇವೆ? ಎಲ್ಲವುಗಳಿಗೆ ಉತ್ತರವಂತೂ ಇದ್ದೆ ಇದೇ. ಅದೇ ಪ್ರೀತಿ ವಿಶ್ವಾಸವಲ್ಲವೇ? … Read more

ಕನ್ನಡ ನಾಡಿನ ಸಾಹಿತ್ಯ ಲೋಕದ ಅದ್ವಿತೀಯ ಧ್ರುವತಾರೆ- ಡಿವಿಜಿ: ಹನಿಯೂರು ಚಂದ್ರೇಗೌಡ

  ಕನ್ನಡ ನಾಡಿನ ಸಾಹಿತ್ಯ ಲೋಕದ ಅದ್ವಿತೀಯ ಧ್ರುವತಾರೆ ಡಿವಿಜಿ.ಇವರ ಅನೇಕ ಅನನ್ಯ  ಸಾಧನೆಗಳ  ನಡುವೆ ನಮಗೆ ಶ್ರೇಷ್ಠವೆನಿಸಿರುವುದು  ತತ್ವಾಧಾರಿತವಾದ ಅವರ ಕಾವ್ಯಗಳಾದ "ಮಂಕುತಿಮ್ಮನ ಕಗ್ಗ" ಮತ್ತು "ಮರುಳ ಮುನಿಯನ ಕಗ್ಗ" ಗಳೇ  ಎನ್ನುವುದು ಸರ್ವವಿದಿತ. ಪತ್ರಿಕೋದ್ಯಮವೇ ಸರ್ವಸ್ವವೆಂದು ತಿಳಿದಿದ್ದ ಡಿವಿಜಿ ಸಾಹಿತ್ಯ ಲೋಕಕ್ಕೆ ಪಾದವಿರಿಸಿದ್ದು ಮಾತ್ರ ಅನಿರೀಕ್ಷಿತವೇ.ಆದರೂ ಅವರೊಬ್ಬ ದಾರ್ಶನಿಕ ಬರಹಗಾರ. 1887 ರ ಮಾರ್ಚ್ 17 ಜನಿಸಿದ  ಇವರಿಗೆ ಇಂದಿಗೆ  (ಮಾರ್ಚ್ 17, 2013ಕ್ಕೆ ) 126 ವಸಂತದ ಸಂಭ್ರಮ. ಈ ನೆಪದಲ್ಲೊಂದು ಅವರ … Read more

ಅಪರಿಚಿತ: ರುಕ್ಮಿಣಿ ಎನ್.

ಆಗ ಸಮಯ ಅಪರಾಹ್ನದ ೩ ಘಂಟೆ ೨೦ ನಿಮಿಷಗಳು. ದಾದರ್ ನಿಂದ ಧಾರವಾಡಕ್ಕೆ ಹೋಗುವ ಮುಂಬೈ-ಧಾರವಾಡ ಎಕ್ಸ್‌ಪ್ರೆಸ್ ಟ್ರೈನ್ ಹೊರಡುವುದು ಕೇವಲ ೫ ನಿಮಿಷಗಳು ಮಾತ್ರ ಬಾಕಿ ಇತ್ತು. ಅತ್ತಲಿಂದ ಒಬ್ಬ ತರುಣೆ ಟ್ರೈನ್ ತಪ್ಪಿ ಹೋಗಬಹುದೆಂಬ ಭೀತಿಯಲ್ಲಿ, ಅಕ್ಕ-ಪಕ್ಕದವರನ್ನು ಲೆಕ್ಕಿಸದೇ ಎದುರಿಗೆ ಬಂದವರನ್ನು ನೂಕುತ್ತ, ಮತ್ತೆಲ್ಲೋ ಕಣ್ಣಾಡಿಸುತ್ತ ಓಡುತ್ತಲೇ ಇದ್ದಳು. ಟ್ರೈನ್ ಹಸಿರು ನಿಶಾನೆ ತೋರಿಸಿ ಕೊನೆಗೊಮ್ಮೆ ಹಾರ್ನ್ ಹಾಕಿ ಇನ್ನೇನು ಹೊರಟೆ ಬಿಟ್ಟಿತು ಅನ್ನೋವಷ್ಟರಲ್ಲಿ ಅವಳು ಟ್ರೈನ್ ಹತ್ತಿಬಿಟ್ಟು, ಸ್ವಲ್ಪ ತಡವಾಗಿದ್ದರೂ ಟ್ರೈನ್ ತಪ್ಪಿ … Read more

ಮೂವರ ಕವನಗಳು: ರಾಜಹಂಸ, ಸೋಮೇಶ್ ಎನ್ ಗೌಡ, ಕೆ.ಮುರಳಿ ಮೋಹನ್ ಕಾಟಿ

ಭೂಲೋಕದ ಸ್ವರ್ಗ ಭೂಲೋಕದ ಸ್ವರ್ಗ ಈ ಕರ್ನಾಟಕ ಯಾತ್ರಿಕರ ಹೃದಯಕ್ಕೊಂದು ಪುಳಕ ಕೈಮುಗಿದು ಬಿನ್ನಹಿಸಿ ಈ ನಾಡಿಗೆ ನಮ್ಮಮ್ಮ ಭುವನೇಶ್ವರಿ  ಮಾತೆಗೆ   ಹಗಲಿರುಳು ದುಡಿಯಿರಿ ವಾಙ್ಮಯದಭಿವೃದ್ಧಿಗೆ ಎಡಬಿಡದೆ ಶ್ರಮಿಸಿರಿ ಸಿರಿಗನ್ನಡದೇಳಿಗೆಗೆ ಎಂದೆಂದಿಗೂ ಕಡೆಗಣಿಸದಿರಿ ಸವಿಗನ್ನಡನುಡಿಗೆ ಸಿರಿಗನ್ನಡನಾಡಿಗೆ ಚಿನ್ನದ ಮಣ್ಣಿಗೆ ಪುಣ್ಯದ ಭೂಮಿಗೆ ಬೆಳದಿಂಗಳಬೀಡಿಗೆ   ಉಸಿರಿರುವರೆಗೂ ನುಡಿಯಲಿ ನಮ್ಮ ನಾಲಿಗೆ ಅಮೃತ ಸವಿಯ ಜೇನು ರುಚಿಯ ಕನ್ನಡ ನುಡಿಗೆ ಒಗ್ಗಟ್ಟಾಗಿ ಹೋರಾಡ ಬನ್ನಿರಿ ತಾಯಿನಾಡಿನರಕ್ಷಣೆಗೆ ಕನ್ನಡದ ಛಲವೊಂದೆ ಕನ್ನಡದ ನೆಲವೊಂದೆ ಕನ್ನಡದ ನುಡಿವೊಂದೆ ಕನ್ನಡದ ಮನವೊಂದೆ!  … Read more

ಕಲಾಮಾರ್ಗೀಯ ಸಿನೆಮಾ ಎಂಬ ಕೌಶಲದ ಸಂವೇದನೆ…: ಮಹದೇವ ಹಡಪದ್

ನಮ್ಮ ಹಳ್ಳಿಗಳಲ್ಲಿ ಇನ್ನೂ ಕತೆ ಕೇಳುವ ಮತ್ತು ಹೇಳುವ ಹಂಬಲ ಕಮ್ಮಿಯಾಗಿಲ್ಲ. ಎಷ್ಟೋ ಕಥನಗಳು ಕಟ್ಟೆಯ ಮುಶೈರಾಗಳಲ್ಲಿ ಹಾಗೆ ಉಳಿದಿದ್ದಾವೆ ಎಂದರೆ ಉತ್ತರಕ್ಕಾಗಿ ಮಾಯಾಪೆಟ್ಟಿಗೆಯ ಕಡೆ ನೋಡಬೇಕಾಗುತ್ತದೆ. ಅಲ್ಲಿನ ಆರಂಭದ ಅಪಲಾಪದಿಂದ ಹಿಡಿದು ಜಾಹಿರಾತಿನ ತುಣುಕು ಸುರುವಾಗುವತನಕ ನೆಟ್ಟನೋಟದಿಂದ ಆಚೀಚೆ ಸರಿದಾಡದೇ ಕುಳಿತುಬಿಡುವವರ ವಯಸ್ಸಿಗೆ ನಿರ್ಬಂಧವೇ ಇಲ್ಲ. ಹಾಗೆ ನೋಡುವವರ ಮತ್ತು ನೋಡಿಸಿಕೊಳ್ಳಲ್ಪಡುವವರ ಕುರಿತು ವ್ಯವಹಾರಿಕ ಅಧ್ಯಯನ ಏನೇ ಹೇಳಿರಲಿ ಅಲ್ಲಿ ಸಹಜ ಅನುಕಂಪಗಳೇ ಬಂಡವಾಳವಾಗುತ್ತ ಹೋಗುವ ರೀತಿ ಮಾತ್ರ ಸಮಾಜದ ಆಂತರಿಕ ಸ್ಥಿರತೆಗೆ ಪೆಟ್ಟುಕೊಡುವುದಂತೂ ಖಚಿತ. … Read more

ಯುದ್ಧವೆಂದರೆ ಬರೀ ಸೋಲು ಗೆಲುವಲ್ಲ: ವಾಸುಕಿ ರಾಘವನ್

ನಮ್ಮಲ್ಲಿ ಯುದ್ಧದ ಸಿನಿಮಾಗಳೇ ಬಹಳ ಅಪರೂಪ. ಐತಿಹಾಸಿಕ ಚಿತ್ರವಾದರೆ ಯುದ್ಧ ಅಂದರೆ ರಾಜರ ಕಾಲದ ಕಾಸ್ಟ್ಯೂಮ್ ಧರಿಸಿ ಮಾಡುವ ಫೈಟಿಂಗ್ ಅಷ್ಟೇ. ಈಗಿನ ಕಾಲದ ಕಥೆ ಆಗಿದ್ದರೆ ಅದು ಯಾವುದಾದರೊಂದು ಯುದ್ಧದ ಡಾಕ್ಯುಮೆಂಟರಿ ಥರ ಇರುತ್ತೆ. ಜೊತೆಗೆ ಅದೇ ಕ್ಲೀಷೆಗಳು – ಮಗನ ಬರುವಿಕೆಗಾಗಿ ಕಾಯುತ್ತಿರುವ ವಿಧವೆ ಅಮ್ಮ, ಪರ್ಸಿನಲ್ಲಿ ಇರೋ ಹೆಂಡತಿ ಫೋಟೋ ನೋಡ್ತಾ ಸಾಯೊ ಸೈನಿಕ, ಯೋಧರು ಅಂದರೆ ಬರೀ ಒಳ್ಳೆಯವರು ಅನ್ನೋ ಭಾಷಣ. ನಮ್ಮಲ್ಲಿ anti-war ಸಿನಿಮಾಗಳು ಇಲ್ಲವೇ ಇಲ್ಲ. ಸ್ವಲ್ಪ ಮಟ್ಟಿಗೆ … Read more

ಕುವೆಂಪುರವರ ಸೂರ್ಯಗೀತೆ; ಆನಂದಮಯ ಈ ಜಗಹೃದಯ: ದಿವ್ಯ ಆಂಜನಪ್ಪ

ಆನಂದಮಯ ಈ ಜಗಹೃದಯ……… ಕುವೆಂಪುರವರ ಸೂರ್ಯಗೀತೆಗಳಲ್ಲಿ ಪ್ರಸಿದ್ಧವಾದ ಈ ಗೀತೆಯೂ ಒಂದು. ಕವಿಗಳು ಈ ಜಗತ್ತಿನ ಎಲ್ಲಾ ಆಗೂ-ಹೋಗುಗಳ ಮೂಲವು 'ಶಿವ'ನೆಂದು ಭಾವಿಸುತ್ತಾರೆ. ಹಸುರಿನಿಂದ ನಳನಳಿಸುವ ಸಹ್ಯಾದ್ರಿಯಂತಹ ಬೆಟ್ಟಗಳು-ಅರಣ್ಯಗಳು. ಭೋರ್ಗರೆವ ಸಾಗರ, ನೀಲಿ ಆಕಾಶ, ಧುಮ್ಮಿಕ್ಕುವ ಜಲಧಾರೆ, ಸೋನೆ ಮಳೆ, ಹಕ್ಕಿಗಳ ಚಿಲಿಪಿಲಿ, ಮೋಡಗಳ ಘರ್ಜನೆ, ಹಾಡುವ ಕೋಗಿಲೆಗಳ ಕಂಠ ಸಿರಿ- ಹೀಗೆ ಪ್ರಕೃತಿಯ ಪ್ರತೀ ಸೌಂದರ್ಯದಲ್ಲೂ ಶಿವನ ಹೃದಯವು ವಿಸ್ತರಿಸಿದೆ ಎಂದು ಕವಿ ಉನ್ಮತ್ತರಾಗಿ ಹಾಡಿದ್ದಾರೆ. ಪ್ರಕೃತಿಯಲ್ಲಿ ಸಾಧಾರಣವಾಗಿ ಸಂಭವಿಸುವ ಸೂರ್ಯೋದಯ ಚಂದ್ರೋದಯವೂ ದೇವನ ದಯೆ … Read more

ನನ್ನೊಳಗಿನ ಗುಜರಾತ (ಭಾಗ 9): ಚಿನ್ಮಯ್ ಮಠಪತಿ

  ಬದಲಾಗುತ್ತಿರುವ ಜೀವನ ಕ್ರಮವನ್ನೊಮ್ಮೆ ಸಿಂಹಾವಲೋಕನ ಮಾಡಬೇಕು. ಇಂತಹ ಒಂದು ಅವಲೋಕನ ಮಾಡಿದರೆ, ಎಷ್ಟೋ ವಿಸ್ಮಯಗಳು ನಮ್ಮನ್ನು ಯಾವದೋ ಒಂದು ಮಾಯಾಲೋಕಕ್ಕೆ ಕರೆದೊಯ್ದು ಒಂದು ಸುತ್ತು ಸುತ್ತಾಡಿಸಿಕೊಂಡು ಬರುತ್ತವೆ.  ಈ ನಡುವೆ ನಮ್ಮಲ್ಲಿ ಹಲವಾರು ಪ್ರಶ್ನೆಗಳು ಹುಟ್ಟುತ್ತವೆ ಮತ್ತು ಉತ್ತರವನ್ನು ಕೆಲವೊಂದಿಷ್ಟು ಪ್ರಶ್ನೆಗಳು ಕಂಡುಕೊಳ್ಳುತ್ತವೆ. ಕೆಲವು ಪ್ರಶ್ನೆಗಳು ಪ್ರಶ್ನೆಗಳಾಗಿಯೇ ಉಳಿಯುತ್ತವೆ. ಮೊನ್ನೆ, ನೆನ್ನೆ ಮತ್ತು ಇವತ್ತೆಂಬ ಈ ಪುಟ್ಟ ಕಾಲಾಂತರದಲ್ಲಿ ಕಾಣ ಸಿಗುವ ಅಮೋಘ ಬದಲಾವಣೆಗಳ ಜೊತೆ,  ಚೂರು ಹಿಂದೆ ಸರಿದು ಹಿಂದಿನ ವಿದ್ಯಮಾನಗಳನ್ನು ಅವಲೋಕಿಸಿದರೆ ಅದರ … Read more

ಕಾಮಾತುರಾಣಾಂ: ಉಪೇಂದ್ರ ಪ್ರಭು

'ಏ ಚೆನ್ನಾಗಿ ಥಳಿಸು. ಜೀವಮಾನವಿಡೀ ಮರೀಬಾರ್ದು. ಮಾನಗೇಡಿ, ಏನಂದ್ಕೊಂಡಿದ್ದಾನೆ?' 'ಹಾಡುಹಗಲಲ್ಲೇ ಈ ಥರ ವರ್ತಿಸೋರು ಇನ್ನು ರಾತ್ರೆ ಏನೆಲ್ಲಾ ಮಾಡಿಯಾರೋ?' 'ಎಷ್ಟು ಕೊಬ್ಬು. ಅವಳ ಅಪ್ಪನ ವಯಸ್ಸಾಗಿರಬಹುದು!' 'ಕಾಮಾತುರನಿಗೆ ಎಲ್ಲಿಯ ಭಯ , ಎಲ್ಲಿಯ ಲಜ್ಜೆ !' 'ಎಲ್ಲಾ ಈ ಕುಡಿತದಿಂದ.  ದಿನಾ ನೋಡ್ತಿದ್ದೀವಿ. ಮಧ್ಯಾಹ್ನ, ಸಂಜೆ, ರಾತ್ರೆ, ಹೊತ್ತಿಲ್ಲ ಗೊತ್ತಿಲ್ಲ, ತೂರಾಡುತ್ತಲೇ ಇರುತ್ತಾನೆ.  ಈ ಗೌರ್‍ಮೆಂಟ್ನವ್ರೂ ಅಷ್ಟೆ. ತಮ್ಮ ಲಾಭಕ್ಕೆ ಎಲ್ಲಾರ್ಗೂ ಲೈಸನ್ಸ್ ಕೊಟ್ಟ್‍ಬಿಟ್ಟಿದ್ದಾರೆ. ಹೆಜ್ಜೆಗೊಂದೊಂದು ಬಾರ್, ಸಾರಾಯಿ ಅಂಗಡಿ!'  'ಚಪ್ಲಿಯಿಂದ ಬಾರಿಸ್ರೋ, ಸತ್ರೂ ಸಾಯ್ಲಿ. … Read more

ಹೀಗೂ ಒಂದು ಪ್ರೇಮ ಪತ್ರ: ಶೀತಲ್ ವನ್ಸರಾಜ್

ಪ್ರೀತಿಯೊಂದಿಗೆ ಪೂರ್ಣತೆ ತಂದವಳೇ ,               ಅಪ್ಪ,ಅಮ್ಮ,ಕಸಿನ್ಸ್ ,ಫ್ರೆಂಡ್ಸ್ ಎಲ್ಲರೂ ಇದ್ದರೂ ಎನೋ ಒಂದು ಕೊರತೆ ಇತ್ತು ಜೀವನದಲ್ಲಿ.. ಕೇಕ್ ಮೇಲೆ ಚೆರ್ರಿ ಮಿಸ್ ಆದಂತೆ,ಕಾಫಿಯಲ್ಲಿ ಕೊಂಚ ಸಕ್ಕರೆ ಕಡಿಮೆ ಇದ್ದಂತೆ,ಸಿಂಗರಿಸಿಕೊಂಡ ಹೆಣ್ಣು ಕುಂಕುಮವಿಡುವುದ ಮರೆತರೆ ಹೀಗೆ ಏನೇನೊ ಅಪೂರ್ಣ…ನೀ ಬಂದಾಗ ಅದಕ್ಕೆಲ್ಲಾ ಪೂರ್ಣತೆ ಸಿಕ್ಕಂತೆ,ಜೀವನಕ್ಕೊಂದು ಅರ್ಥ ಸಿಕ್ಕಿತು ನೀ ನನಗೆ ಸ್ವಂತವಾದ ದಿನವೇ…ನಾವಿಬ್ಬರು ಸೇರಿ ನಡೆಸಿದ ಜೀವನ ಸರಸ -ವಿರಸಗಳೊಡನೆ  ನೀ ಕರೆಯುತ್ತಿದ್ದಾಗ ಒಮ್ಮೊಮ್ಮೆ ನನ್ನ 'ಜೀ' ಎಂದು, 'ವನ್' ಎಂಬುದು ಇರದಿದ್ದರೂ ಜೀವನವೊಂತು ಸಂಪೂರ್ಣವಾಗಿತ್ತು…ಈಗ … Read more

ಹೀಗೊಂದು ಕಥೆ: ಸುನಿಲ್ ಗೌಡ

  "ಎಲ್ಲಾ ಕೆಲ್ಸ ಮುಗ್ಸಿ ತಿಂಡಿ ಮಾಡಿದ್ರು ಇನ್ನೂ ಬಿದ್ದಿದ್ದೀಯಲ್ಲಾ, ಚಿಂತೆ ಇಲ್ದೋನ್ಗೆ ಚಿತೆ ಮೇಲೆ ಮಲ್ಗಿಸಿದ್ರು ನಿದ್ದೆ ಬರ್ತವಂತೆ. ಎದ್ದು ತೋಟ ನೋಡೋಗೊ ಸೋಮಾರಿ, ಈಗೀನ್ ಕಾಲದ್ ಹುಡುಗ್ರು ಮಲ್ಗದು ಏಳದು ಯಾವ್ದು ಸರಿ ಮಾಡಲ್ಲ". ಅಡುಗೆಯ ಮನೆಯಿಂದ ವಗ್ಗರಣೆಯ ತುಪ್ಪದ ವಾಸನೆ ಜೊತೆ ಸರ್ರನೆ ಬಂದ ಅಮ್ಮನ ಧ್ವನಿಗೆ ಕಿವಿ ಮುಚ್ಚಿ ವಗ್ಗರಣೆಯ ವಾಸನೆಯನ್ನು ಆಸ್ವಾದಿಸಲು ಮುಂದಾದೆ, "ಏಳ್ತೇನೆ ತಡಿಯಮ್ಮ, ಯಾಕೆ ಈ ತರಹಾ ಕಿರುಚ್ತೀಯ, ಆ ವಾಯ್ಸ್ ನನ್ ಕಿವೀಲಿ ಕೇಳೋಕೆ ಆಗಲ್ಲಾ.." … Read more

ಮೂವರ ಚುಟುಕಗಳು: ಶಂಕರ್ ಕೆಂಚನೂರು, ಪ್ರತಾಪ್ ಬ್ರಹ್ಮವಾರ್, ರಾಜಶೇಖರ (ಬಂಡೆ)

ಪರಿತ್ಯಕ್ತರು ಆ ಅರಳಿ ಕಟ್ಟೆಮೇಲೆ ಒಂದಷ್ಟು ಜನ ಹಿರಿಯರು, ಇನ್ನೊಂದು ಕಡೆ ಗಾಜು ಒಡೆದಿದ್ದಕ್ಕೆ ಚಿತ್ರ ಮಾಸಿದ್ದಕ್ಕೆ ಪೂಜೆಯ ಅರ್ಹತೆ ಕಳೆದುಕೊಂಡ ದೇವರ ಫೋಟೋಗಳು -ಶಂಕರ್ ಕೆಂಚನೂರು ಅನಾಥ ನಿರೀಕ್ಷೆ ತುಕ್ಕು ಹಿಡಿದ ತಕ್ಕಡಿಯಂತ ಹೃದಯವನ್ನಾ  ಅದ್ಯಾರದೋ ಮನಸ್ಸಿಗೆ ತೂಕಕಿಟ್ಟೆ   ಅದೂ ಪಕ್ಕಾ ವ್ಯಪಾರಿ  ತೂಕಿಸಿಕೊಂಡು  ಮತ್ತೆ ಕೆಲಸಕೆ ಬರದ ತಕ್ಕಡಿಯೆಂದು ನನ್ನತ್ತ ತಳ್ಳಿತು  ಅನಾಥ ಹೃದಯ ಮತ್ತೆ ಎತ್ತಿಕೊಳುವ  ಮನಸಿಗೆ ಕಾಯುತಿಹುದು ಶಬರಿ ಕಾದಂತೆ   -ಪ್ರತಾಪ್ ಬ್ರಹ್ಮವಾರ್   ಬಂಡೆಯ ಚುಟುಕಗಳು ಮುಳುಗಡೆಗೆ … Read more

ಆತ್ಮ ಮತ್ತು ಮನಸ್ಸುಗಳಿಗೆ ಆನಂದ ತರುವದೆ, ಆಧ್ಯಾತ್ಮ: ಕೆ.ಎಂ. ವಿಶ್ವನಾಥ

ಈ ಭೂಮಿಯಲ್ಲಿ ಯಾವುದೂ ಶಾಶ್ವತವಲ್ಲ, ಎಲ್ಲವೂ ಒಂದು ದಿನ ನಶಿಸಿ ಹೋಗುತ್ತದೆ. ಅದರಲ್ಲಿ ಉಳಿವುದೊಂದೇ ಜೀವಾತ್ಮ. ಅದನ್ನು ಸದಾ ಸಂತೋಷವಾಗಿಡುವ ಏಕೈಕ ಅಸ್ತ್ರವೆಂದರೆ ಅದೇ ಆಧ್ಯಾತ್ಮ . ಸಂಸಾರದ ಈ ಸಾಗರದಲ್ಲಿ ತಾಪತ್ರಯಗಳು, ವೇದನೆ  ನೋವು, ಜಿಗುಪ್ಸೆ, ಹತಾಶೆ, ಸಂತೋಷ, ಇವೆಲ್ಲ ತಪ್ಪಿದಲ್ಲ, ಎಲ್ಲವೂ ನಮ್ಮನ್ನು ತಿಂದು ಹಾಕುವುದು, ಸದಾ ನಮ್ಮ ಮನಸ್ಸು ಮತ್ತು ಆತ್ಮಗಳಿಗೆ ಚಿಂತನೆಗೆ ಹಚ್ಚುವುದು. ನಿಂತಲ್ಲಿ ನಿಲ್ಲದೆ, ಕೂತಲ್ಲಿ ಕೂಡದೆ ಹೋಗುವುದು, ಅತ್ತಿಂದ ಇತ್ತ ಮಂಗದಂತೆ ಜಿಗಿದಾಡುವದು, ನಾವು ವಿನಾಕಾರಣ ಕೋಪಗೊಳ್ಳುವುದು, ಮತ್ತೊಬ್ಬರ … Read more

ಪಂಜು ಚುಟುಕ ಸ್ಪರ್ಧೆ

ಪಂಜು ಅಂತರ್ಜಾಲ ವಾರಪತ್ರಿಕೆ ಮತ್ತು ಪಂಜು ಪ್ರಕಾಶನದ ವತಿಯಿಂದ ಚುಟುಕ ಸ್ಪರ್ಧೆಗೆ ನಿಮ್ಮ ಚುಟುಕಗಳನ್ನು ಆಹ್ವಾನಿಸಲಾಗಿದೆ. ಒಬ್ಬರು ಕನಿಷ್ಠ 25 ಚುಟುಕಗಳನ್ನು ಕಳುಹಿಸಬೇಕು (ಗರಿಷ್ಠ ಮಿತಿ 30). ಚುಟುಕಗಳು ಸ್ವಂತ ರಚನೆಗಳಾಗಿರಬೇಕು. ಚುಟುಕಗಳನ್ನು ಕಳುಹಿಸಿಕೊಡಬೇಕಾದ ಮಿಂಚಂಚೆ: editor.panju@gmail.com, smnattu@gmail.com   ಮಿಂಚಂಚೆಯ ಸಬ್ಜೆಕ್ಟ್ ನಲ್ಲಿ “ಪಂಜು ಚುಟುಕ ಸ್ಪರ್ಧೆ” ಎಂದು ತಿಳಿಸಲು ಮರೆಯದಿರಿ. ಮಿಂಚಂಚೆಯಲ್ಲಿ ನಿಮ್ಮ ಹೆಸರು, ವಿಳಾಸ, ಮಿಂಚಂಚೆ, ಮೊಬೈಲ್ ಸಂಖ್ಯೆ, ನಿಮ್ಮ ಕಿರು ಪರಿಚಯ ಹಾಗು ಫೇಸ್ ಬುಕ್ ಲಿಂಕ್ ಕಳುಹಿಸಿ.. ಚುಟುಕಗಳು ತಲುಪಬೇಕಾದ ಕೊನೆಯ … Read more

ಕಣ್ಮುಚ್ಚಿ ತವಕಿಸುವ ಜೀವೋನ್ಮಾದ: ರಘುನಂದನ ಹೆಗಡೆ

    ಕ್ಲಬ್ಬಿನಲಿ ಕವಿದ ಮಬ್ಬು ಬೆಳಕಿನ ಮುಸುಕಿನಲ್ಲಿ ಉನ್ಮಾದದ ಝಲಕು ಮೂಲೆಯಲಿ ಒತ್ತಿ ನಿಂತವರ ಸುತ್ತ ಸೆಂಟಿನ ಘಾಟು ಬಣ್ಣ ಬಣ್ಣದ ಶೀಷೆಗಳಲ್ಲಿ ಕಣ್ಮುಚ್ಚಿ ತವಕಿಸಿದೆ ಜೀವೋನ್ಮಾದ ಇಲ್ಲಿ ಪರಿಮಳವೂ ಉಸಿರುಗಟ್ಟಿಸುತ್ತದೆ ಬೆಳಕೂ ಕಪ್ಪಿಟ್ಟಿದೆ…   ರಾತ್ರಿ ಪಾಳಿಯ ಬಡ ದೇಹಕ್ಕೂ ದುಬಾರಿ ಸಿಗರೇಟೇ ಬೇಕು ಸುಡಲು ನಗರ ವ್ಯಾಮೋಹದ ಕಿಡಿಯಲ್ಲಿ ಹಳ್ಳಿಗಳೆಲ್ಲ ವೃದ್ಧರ ಗೂಡು-ಸುಡುಗಾಡು ಇಲ್ಲ ಶಹರದಲಿ ತಾರೆಗಳ ಹೊಳಪು ಇರುಳೆಲ್ಲ ಕೃತಕ ದೀಪಗಳ ಬಿಳುಪು ನುಗ್ಗಿ ಬರುವ ಪತಂಗಗಳ ಜೀವ ಭಾವ – … Read more

ತಂತ್ರ: ರಾಘವೇಂದ್ರ ತೆಕ್ಕಾರ್

  ಅವನು ಎಲ್ಲರಂತಿರಲಿಲ್ಲ, ಕುರುಚಲು ಗಡ್ಡಧಾರಿಯಾಗಿ ಹರಕಲು ಉಡುಪುಗಳ ಜೊತೆ ನನ್ನ ಮುಂದು ನಿಂತಿದ್ದ. ಏನು? ಎಂದಿದ್ದೆ. ಭಿಕ್ಷುಕ ವೇಷಧಾರಿಯಂತೆ ಕಾಣುವ ಆತ ಭಿಕ್ಷುಕನೆಂದು ಒಪ್ಪಿಕೊಳ್ಳದಂತೆ ಮಾಡಿದ್ದು ಆತನ ದೃಷ್ಟಿಯಲ್ಲಿದ್ದ ಹರಿತ. ಚಿಂಗಾಣಿ ಬೆಟ್ಟದ ಕಡೆ ಹೋಗ್ಬೇಕು ದಾರಿಯೆಂತು ? ಎಂದು ತನ್ನ ಗೊಗ್ಗರು ದನಿಯಲ್ಲಿ ಕೇಳಿದ. ನನ್ನ ಎಡಕ್ಕೆ ಕಾಣುವ ದೊಡ್ಡ ಬೆಟ್ಟದ ಕಡೆ ಕೈ ತೋರಿ ನೀ ಕೇಳುತ್ತಿರುವ ಬೆಟ್ಟ ಅದೆ ಎಂದು ಕೈ ತೋರಿದ್ದೆ. ಆತ ನನ್ನೆಡೆಗೆ ಒಂದು ಕ್ಷಣ ನೋಡಿ ನಸು … Read more

ಕನ್ನಡದಲ್ಲಿನ ‘ತುಂಟ’ ಚಿತ್ರಗೀತೆಗಳು: ವಾಸುಕಿ ರಾಘವನ್

  ಒಂದು ಹಾಡನ್ನ ಹೀಗೇ ಅಂತ ವಿಂಗಡಿಸೋದು ತುಂಬಾ ಕಷ್ಟ. ಒಬ್ಬರಿಗೆ ಮಜಾ ಕೊಡುವ ಹಾಡು ಇನ್ನೊಬ್ಬರಿಗೆ ಅತಿರೇಕ ಅನ್ನಿಸಬಹುದು. ಒಬ್ಬರ ‘ತುಂಟ’ ಹಾಡು ಇನ್ನೊಬ್ಬರಿಗೆ ಅಶ್ಲೀಲ ಅಥವಾ ‘ಪೋಲಿ ಹಾಡು’ ಅನ್ನಿಸಬಹುದು. ನನಗೆ ಈ ‘ತುಂಟ’ ಹಾಡುಗಳು ಬೇರೆ ಬೇರೆ ಕಾರಣಗಳಿಗೆ ಇಷ್ಟವಾಗಿವೆ – ಆಯ್ದುಕೊಂಡಿರುವ ವಿಷಯಗಳು, ವಿಷಯವನ್ನು ಹೇಳಿರುವ ರೀತಿ, ಪದಗಳಲ್ಲಿ ಪನ್ ಮಾಡಿರುವುದು, ಒಂದಕ್ಕಿಂತ ಹೆಚ್ಚು ಅರ್ಥ ಕೊಡುವ ಸಾಲುಗಳು ಅಥವಾ “ಹೀಗೂ ಉಂಟೇ” ಅನ್ನುವಂಥ ಅಸಂಬದ್ಧತೆ! ಇಲ್ಲಿದೆ ನೋಡಿ ನನ್ನ ಅಚ್ಚುಮೆಚ್ಚಿನ … Read more

ಏಕಾಂಗಿ ಮನಸು ಮತ್ತು ಅವಳ ಕನಸು: ರವಿಕಿರಣ್

  "ಗಾಳಿ ಯಾಕೆ ಶಬ್ದ ಮಾಡುತ್ತೆ ಗೊತ್ತಾ ನಿಂಗೆ?"  ಕುತೂಹಲಕ್ಕೆ ಕೇಳಿದ್ಲಾ? ಚೇಷ್ಟೆಗೆ ಕೇಳಿದ್ಲಾ? ಅರ್ಥವಾಗಲಿಲ್ಲ. ಹೌದು ಗಾಳಿ ಯಾಕೆ ಸದ್ದು ಮಾಡತ್ತೆ? ನಾನೂ ಚಿಂತೆ ಎನ್ನುವ ಚಿತೆಗೆ ಜಾರಿದಂತಾಯ್ತು. ಎಲ್ಲೋ ಪೇಟೆಯ ಮಧ್ಯವೋ, ಬಸ್ಸಿನಲ್ಲಿ, ಬೈಕಿನಲ್ಲಿ ಹೋಗುವಾಗಲೋ, ಇಲ್ಲ ಯಾವುದೋ  ಪಾರ್ಕು,ಹೋಟೆಲ್,ಮನೆ,ದೇವಸ್ಥಾನ,ಚರ್ಚ್ ಎಲ್ಲೇ ಈ ಪ್ರಶ್ನೆ ಕೇಳಿದ್ದರೂ, ಉತ್ತರ ಕೊಡುವ ಪ್ರಯತ್ನ ಮಾಡಬಹುದಿತ್ತು. ನ್ಯೂಟ್ರಾನ್,ಪ್ರೋಟಾನ್,ಎಲೆಕ್ಟ್ರಾನುಗಳ ಜೊತೆ ಗಾಡ್ ಪಾರ್ಟಿಕಲನ್ನೂ ಬಳಸಿ, ನ್ಯೂಟನ್ ನಿಯಮಗಳನ್ನು ದ್ವೈತಾದ್ವೈತಗಳ ಜೊತೆ ಮಿಶ್ರಮಾಡಿ ಹೇಳಲು ಪ್ರಯತ್ನಿಸಿ ಹಾದಿ ತಪ್ಪಿಸುವ ಪ್ರಯತ್ನವನ್ನಾದರೂ ಮಾಡಬಹುದಿತ್ತು. … Read more

ನಾಲ್ವರ ಹನಿಗಳು: ಹುಸೇನ್ ಎನ್, ಶೀತಲ್, ಉಪೇಂದ್ರ ಪ್ರಭು, ಹರಿಪ್ರಸಾದ್ ಎ.

  ದನಿಯಾಗದ ಹನಿಗಳು  ೧. ನೆನಪಿನ ಪುಟಗಳಲ್ಲಿ ಅಡರಿ ಬಿದ್ದ  ನಿನ್ನೆಗಳಲ್ಲಿ ನನ್ನ ಪ್ರಣಯಕ್ಕೆ  ನಿನ್ನ ರೂಪವಿತ್ತು.. ಇಂದು ನನ್ನ ವಿರಹಕ್ಕೂ…!     ೨. ದುಃಖ ಸತ್ಯಗಳು  ನನ್ನ ನೋಡಿ  ನಗುತಿದೆ; ದುಃಖ ಮರೆಯಲು  ನಾನೂ..!     ೩. 'ಯಾಕಾಗಿ ನೀನನ್ನ ಉಪೇಕ್ಷಿಸಿದ್ದು?'  ಕೇಳಿತು ಕಣ್ಣೀರ ಹನಿ … ಕಣ್ಣಲ್ಲಿ. 'ನಾನನುಭವಿಸುವ ನೋವು ನಿನಗೆ ತಿಳಿಯದಿರಲು..!'   ಉತ್ತರಿಸಿತು ಕಣ್ಣು.     ೪. ಎಲೆಗಳು ಪರಸ್ಪರ ತಾಕದಿರಲು ದೂರ ದೂರದಲಿ ನೆಟ್ಟ  ಮರದ … Read more

ಕೊಂಕು….ಕೊಂಚ ಕಚಗುಳಿಗೆ !: ಸಂತೋಷ್ ಕುಮಾರ್ ಎಲ್ ಎಮ್

  ಕೆಲ ಸುದ್ದಿಗಳು ಟಿವಿಯಲ್ಲಿ ಬಂದಾಗ ಒಮ್ಮೊಮ್ಮೆ ನಾವು ಹೀಗೆ ಮಾತಾಡಿಕೊಳ್ಳುವುದುಂಟು. ಇದು ಆ ಕ್ಷಣದಲ್ಲಿ ಬರುವ ತಕ್ಷಣದ ಪ್ರತಿಕ್ರಿಯೆ. ಕೇವಲ ಹಾಸ್ಯದ ದೃಷ್ಟಿಯಿಂದಷ್ಟೇ ಈ "ಕೊಂಕು" ಬರಹ. ಯಾವುದೇ ಕೊಂಕನ್ನು ವೈಯುಕ್ತಿಕವಾಗಿ ತೆಗೆದುಕೊಳ್ಳಬಾರದಾಗಿ ವಿನಂತಿಸಿಕೊಳ್ಳುತ್ತಾ… ಸುದ್ದಿ: ಕೇವಲ ಜನಸೇವೆ ಸಾಕು, ನನಗೆ ಅಧಿಕಾರ ಬೇಡ- ಯೆಡ್ಡಿ ಕೊಂಕು: ಸುಮ್ನಿರಿ ಸಾರ್, ಜನರಿಗೆ ಆಸೆ ತೋರಿಸಬೇಡಿ!! ಸುದ್ದಿ: ಲಾರಿ ಮಗುಚಿ, ತುಂಬಿದ್ದ ನ್ಯೂಸ್ ಪೇಪರ್ ಗಳೆಲ್ಲ ಚೆಲ್ಲಾಪಿಲ್ಲಿ ಕೊಂಕು: ನಾಳೆ ಈ ಸುದ್ದಿ ಜನಗಳಿಗೆ ಹೇಗೆ ತಲುಪುತ್ತೆ … Read more

ನನ್ನೊಳಗಿನ ಗುಜರಾತ್ (ಭಾಗ 8): ಚಿನ್ಮಯ್ ಮಠಪತಿ

ಪ್ರಾರ್ಥಿಸುವ ತುಟಿಗಳಿಗಿಂತ ಸಹಾಯದ ಹಸ್ತಗಳು ದೊಡ್ಡವು ಅಂತೆ. ನಿಜ ! ಆವತ್ತು ಹಿಂದೆ ಮುಂದೆ ನೋಡದೆಯೇ ಸಮಯಕ್ಕೆ ಗಮನ ಕೊಡದೇ, ಮೆಹಸಾನಾದಿಂದ ಗಾಂಧಿ ನಗರಕ್ಕೆ ಪ್ರಯಾಣ ಬೆಳೆಸಿದ್ದೆ. ಯಾವದೋ ಕೆಲಸದ ಮೇಲೆ  ಮೆಹಸಾನಾ ನಗರಕ್ಕೆ ಹೋಗಿದ್ದ ನಾನು, ಅಲ್ಲಿಂದ ಬಿಡುವಾಗ ಸಮಯ ಸರಿಯಾಗಿ ಏಳು ಗಂಟೆಯಾಗಿತ್ತು. ಸೀದಾ ಗಾಂಧಿ ನಗರಕ್ಕೆ ಬಸ್ಸು ಇರದ ಕಾರಣ ಹಿಮ್ಮತ್ತ ನಗರದವರೆಗೆ ಹೋಗುವ ಬಸ್ಸು ಹಿಡಿದು ಪ್ರಯಾಣ ಬೆಳೆಸಿದೆ. ದಿನವಿಡೀ ಉರಿ ಬಿಸಿಲಲ್ಲಿ ಸುತ್ತಾಡಿ ತುಂಬ ಸುಸ್ತಾಗಿದ್ದೆ. ಅಲ್ಲಿಂದ ಬಸ್ಸು ಹೊರಟ … Read more

ಗೌತಮನ ಘಾಟುವಾಸನೆ: ಪ್ರವರ ಕೊಟ್ಟೂರು

  ನಾಲ್ಕು ಗೋಡೆಗಳು ನಾಲ್ಕು ಮೂಲೆಗಳು ಜೇಡರಬಲೆಯೊಳಗಿಂದ ನುಗ್ಗಿದ್ದ ಧೂಳು, ನನ್ನ ಮುಖದ ಮೇಲೊಷ್ಟು ನೋವ ಮುಚ್ಚುವ ಕತ್ತಲು, ಹಿಡಿ ಸುಣ್ಣದ ಪುಡಿ ತೂರಿದಂತೆ ಬೆಳಕು, ಸುತ್ತಲೂ   ನನ್ನನ್ನೇ ದುರುಗುಟ್ಟುತಿದ್ದ ನೆರಳುಗಳೇ ಮೆಲ್ಲಗೆ ಮೂರ್ನಾಲ್ಕು ಬಾರಿ ಪಿಸುನುಡಿದಂತೆ ಧೂಳ ಕಣಗಳ ನಡುವೆ "ಸತ್ತರೆ ಮಣ್ಣ ಸೇರುತ್ತಾನೆ ಕೊಳೆಯದಿದ್ದರೆ ಕೊಳ್ಳಿ ಇಡುವ ಬೂದಿಯಾಗಲಿ ಮೂಳೆ"   ಬಾಗಿಲ ಕಿಂಡಿಯಲ್ಲಿ ತೂರಿ ಬಂದ ತಂಡಿ ಗಾಳಿ ಎದೆಯ ಬೆವರ ಬೆನ್ನ ನೇವರಿಸಿದ ಸಾಂತ್ವಾನ, ಜೊಲ್ಲು ಇಳಿಸುತ್ತಾ ಅಡಗಿದ್ದ ಜೇಡರ … Read more

ವಾರಕೊಮ್ಮೆ ಯಶವಂತಪುರ ಸಂತೆ: ಶಿವು ಕೆ.

                   ಇತ್ತೀಚೆಗೆ ತೇಜಸ್ವಿಯವರ "ಸಂತೆ" ಕಥೆ ಓದಿದಾಗ ನನಗೂ ಸಂತೆಗೆ ಹೋಗಬೇಕೆನಿಸಿತ್ತು.  ನನ್ನ ಮಡದಿ ಪ್ರತಿ ಭಾನುವಾರ  ಸಂಜೆ  ಯಶವಂತಪುರ ಸಂತೆಗೆ ತರಕಾರಿ ಹಣ್ಣು ಹೂಗಳನ್ನು ತರಲು ಹೋಗುತ್ತಿದ್ದಳು.  ಹೋಗುವ ಮೊದಲು ನಾನು ಜೊತೆಯಲ್ಲಿ ಬರಬೇಕೆಂದು ತಾಕೀತು ಮಾಡುತ್ತಿದ್ದಳು.  ಮೊದಮೊದಲು ಅವಳು ಕರೆದಾಗ ನಾನು ಉತ್ಸಾಹದಿಂದ ಹೋಗುತ್ತಿದ್ದೆನಾದರೂ ಅಲ್ಲಿ ಆಗಾಗ ಆಗುವ ಕೆಲವು ಬೇಸರದ ಅನುಭವಗಳು ನೆನಪಾಗಿ,  ನನಗೆ ಬ್ಲಾಗು, ಫೋಟೊಗ್ರಫಿ ಇತ್ಯಾದಿ ಕೆಲಸಗಳಿದೆಯೆಂದು ತಪ್ಪಿಸಿಕೊಳ್ಳುತ್ತಿದೆ. … Read more

ವಿಪರ್ಯಾಸ: ಬದರಿನಾಥ ಪಲವಳ್ಳಿ

  ಬೆಳಿಗ್ಗೆ ಎದ್ದಾಗಲಿಂದಲೂ ಏಕೋ ಸಣ್ಣಗೆ ತಲೆಯ ನೋವು. ಸ್ವಲ್ಪ ಕಾಫಿ ಕಾಯಿಸಿಕೊಳ್ಳೋಣ ಎಂದು ಮೂರು ಗಂಟೆಯಿಂದ ಯೋಚಿಸಿದ್ದೇ ಬಂತು. ಯಾಕೋ ಅದಕ್ಕೂ ಬೇಸರ. ಯಜಮಾನರು ತೀರಿಕೊಂಡ ಮೇಲೆ ನಾನು ನಾನು ತೀರಾ ಅಂತರ್ಮುಖಿಯಾಗುತ್ತಿದ್ದೇನೆ ಅನಿಸುತ್ತದೆ. ಮೂರು ಕೋಣೆಗಳ ಈ ವಿಶಾಲವಾದ ಫ್ಲಾಟಿನಲ್ಲಿ ಈಗ ನಾನು ಒಬ್ಬಂಟಿ. ತುಂಬಾ ಮನೆಗಳಿರುವ ವಿಶಾಲವಾದ ಸೊಸೈಟಿ ಇದು. ಪಕ್ಕದ ಮನೆಯವರು ಯಾರೆಂದು ನನಗೂ ಇಲ್ಲಿಯವರೆಗೂ ಗೊತ್ತಿಲ್ಲ. ಕೆಲಸದವಳು ಬೆಳಿಗ್ಗೆ ಬಂದು ಮನೆ ಕೆಲಸಗಳನ್ನು ಮುಗಿಸಿ ಹೊರಟಳೆಂದರೆ ಇಡೀ ದಿನ ನಾನು … Read more

ಡಾ. ಅನಸೂಯಾದೇವಿಯವರ ಕೃತಿ “ಪ್ರಕೃತಿ ಮತ್ತು ಪ್ರೀತಿ”: ಹನಿಯೂರು ಚಂದ್ರೇಗೌಡ

  ಕೃತಿ ವಿವರ: ಪುಸ್ತಕದ ಹೆಸರು        : ಪ್ರಕೃತಿ ಮತ್ತು ಪ್ರೀತಿ- ವೈಚಾರಿಕ ಲೇಖನಗಳ ಸಂಗ್ರಹ ಲೇಖಕಿ                    : ಡಾ.ಅನಸೂಯಾ ದೇವಿ ಬೆಲೆ                        :  ೩೫೦ ರೂ. ಪ್ರಕಾಶನ ಸಂಸ್ಥೆ         : ದೇಸಿ ಪುಸ್ತಕ, ವಿಜಯನಗರ, ಬೆಂ.-೪೦ ಪ್ರಕಟಣೆ … Read more