ಅಮಾವಾಸ್ಯೆಯ ಕತ್ತಲಲ್ಲಿ ಬೆಳದಿಂಗಳು ಸುರಿದಂತೆ

ಮೊನ್ನೆ ಸಂಕ್ರಾತಿ ಹಬ್ಬದ ದಿನ ಗವಿ ಗಂಗಾಧರೇಶ್ವರ ದೇವಸ್ಥಾನದ ಅಂಗಳದಲ್ಲಿ ನಿಂತು ಗಾಳಿಗೆ ಹಾರಿ ಹಾರಿ ನಿನ್ನ ಕೆನ್ನೆಗೆ ಮುತ್ತಿಕ್ಕುತ್ತಿದ್ದ ಕೂದಲನ್ನು ಪದೇ ಪದೇ  ಹಿಂದಕ್ಕೆ ಸರಿಸುತ್ತಿದ್ದಾಗಲೇ ನಿನ್ನನ್ನು ನಾನು ನೋಡಿದ್ದು. ಮರುಕ್ಷಣವೇ ನನ್ನ ಮನಸಿನ ಮನೆಯ ತುಂಬೆಲ್ಲ ಒಲವ ಶ್ರಾವಣದ ಸಂಭ್ರಮ ಶುರುವಾಗಿ ಹೋಗಿತ್ತು.  ಹನುಮಂತನ ಬಾಲದಂತಿದ್ದ ಕ್ಯೂ ಬಿಸಿಲಲ್ಲಿ ಬೆವರಿಳಿಸುತ್ತಿದ್ದರೆ ದೇವರ ದರ್ಶನ ಬೇಡ ಎನಿಸುತ್ತಿತ್ತು. ಇನ್ನೊಂದಿಷ್ಟು ಹೊತ್ತು ನೋಡಿ ಮನೆಗೆ ಹೊರಟು ಬಿಡೋಣ..  ಅಂದುಕೊಳ್ಳುತ್ತಿದ್ದವನ ಮುಂದೆ ಜಗತ್ತಿನ ಸೌಂದರ್ಯವೆಲ್ಲ ಹೆಣ್ಣಾಗಿ ರೂಪ ಪಡೆದಿದೆಯೇನೋ … Read more

ನಿನ್ನ ಪ್ರೇಮದ ಪರಿಯ….

ಓಯ್, ಮೊದಲಿಗೆ ಹೇಳಿ ಬಿಡ್ತೀನಿ ಕೇಳು, ನಾ ಸುಮಾರಾಗಿ ಒಂದಷ್ಟು ಪ್ರೇಮ ಪತ್ರಗಳನ್ನ ಹಿಂದೆಯೂ ಬರೆದಿದ್ದೇನೆ, ಆದರೆ ಆ ಎಲ್ಲಾ ಪತ್ರ ಬರಿಯೋದಕ್ಕೂ ಮೊದಲು ಯೋಚಿಸುತಿದ್ದುದು ಇದನ್ನ ಯಾರಿಗೆ ಬರೀಲಿ ಎಂದು, ಕಾರಣ ಇಲ್ಲದಿಲ್ಲ ಕೊಡೋದಕ್ಕೆ ಕಲ್ಪಿತ ಸುಂದರಿಯರೆ ನನ್ನ ಮುಂದಿದ್ದದ್ದು….ಆದರೆ ಈ ಭಾರಿ ಈ ವಿಷಯದಲ್ಲಿ ನಾ ಅದೃಷ್ಟವಂತನೆ ಸರಿ, ಬರೆದಿಟ್ಟಿದ್ದನ್ನು ಕೊಡಲು ನೀನಿದ್ದಿ, ಜತನದಿಂದ ಪತ್ರವನ್ನು ಎತ್ತಿಟ್ಟು ನಿನ್ನ ತೆಕ್ಕೆಯಲ್ಲಿ ನನ್ನ ಬಂಧಿಸಿ “ಐ ಲವ್ ಯೂ” ಎನ್ನುತ್ತಿ ಎಂಬುದು ಗೊತ್ತಿರುವ ಕಾರಣ ನಿನ್ನದೊಂದು … Read more

ಯು.ಆರ್. ಅನಂತಮೂರ್ತಿಯವರ ಭಾರತೀಪುರ

  ಇತ್ತೀಚಿಗೆ ನಾನು ಓದಿದ ಕಾದಂಬರಿ ಶ್ರೀ ಯು.ಆರ್. ಅನಂತಮೂರ್ತಿರವರ ‘ಭಾರತೀಪುರ’, ಈ ಕಾದಂಬರಿ ಈ ವರ್ಷದ ಕೆ.ಎ.ಎಸ್ ಮುಖ್ಯ ಪರೀಕ್ಷೆಯಲ್ಲಿ ಪಠ್ಯವಸ್ತುವೂ ಆಗಿದೆ ಗೆಳೆಯರೊಬ್ಬರ ಸಲಹೆಯಂತೆ ಈ ಕಾದಂಬರಿಯನ್ನು ಓದಿದೆ. ಕಾದಂಬರಿಯ ನಾಯಕ ‘ಜಗನ್ನಾಥ ಭಾರತೀಪುರದ ಸಂಪ್ರದಾಯಸ್ಥ ಬ್ರಾಹ್ಮಣ ಕುಟುಂಬದಲ್ಲಿ ಹುಟ್ಟಿದವನಾಗಿದ್ದು, ಉನ್ನತ ಶಿಕ್ಷಣವನ್ನು ‘ಇಂಗ್ಲೆಂಡಿನಲ್ಲಿ ಪಡೆದಿರುತ್ತಾನೆ. ಈತ ಇಂಗ್ಲೆಂಡಿನಲ್ಲಿ ‘ಬಂಡಾಯ’ ದ ಬಗ್ಗೆ ಮಾತನಾಡುತ್ತ ಎಲ್ಲರನ್ನೂ ಆಕರ್ಷಿಸಿರುತ್ತಾನೆ. ಆ ವೇಳೆಗೆ ಅವನಿಗೆ ‘ಮಾರ್ಗರೇಟ್’ ಗೆಳತಿಯಾಗಿ ಸಿಗುತ್ತಾಳೆ. ಅತೀ ಶೀಘ್ರದಲ್ಲೆ ಪ್ರೇಯಸಿಯಾಗಿರುತ್ತಾಳೆ. ಜಗನ್ನಾಥನ ಗೆಳೆಯ, ಸದಾಕಾಲ … Read more

ಎದ್ದೇಳು ಮಂಜುನಾಥ – ಒಂದು ಅಪರೂಪದ ಚಿತ್ರ

“ಕನ್ನಡದ ಮಟ್ಟಿಗೆ ಒಂದು ಉತ್ತಮ ಪ್ರಯತ್ನ/ಚಿತ್ರ” – ಈ ವಾಕ್ಯವನ್ನು ನೀವು ತುಂಬಾ ಸಲ ಕೇಳಿರುತ್ತೀರ. ನೀವು ಬಳಸಿರುವ ಸಾಧ್ಯತೆಗಳೂ ಇವೆ. ಒಂದು ಕ್ಷಣ ಯೋಚಿಸಿ, ಹಿಂಗಂದ್ರೆ ನಿಜವಾದ ಅರ್ಥ ಏನು ಅಂತ. ‘ಫ್ರೆಂಚ್ ಮಟ್ಟಿಗೆ ಒಳ್ಳೆ ಚಿತ್ರ’ ಅಥವಾ ‘ಇಟಾಲಿಯನ್ ಮಟ್ಟಿಗೆ ಉತ್ತಮ ಪ್ರಯೋಗ’ ಅಂತೆಲ್ಲಾದ್ರೂ ಕೇಳಿದ್ದೀರಾ? ಅಥವಾ ‘ಕನ್ನಡದ ಮಟ್ಟಿಗೆ ಉತ್ತಮ ಪೇಂಟಿಂಗ್ ಇದು’ ಅಥವಾ ‘ಕನ್ನಡದ ಮಟ್ಟಿಗೆ ಉತ್ತಮ ಸಂಗೀತ ಇದು’ ಅಂತೇನಾದ್ರೂ? ಇಲ್ಲ ಅಲ್ವಾ? ಮತ್ತೆ ಕನ್ನಡ ಚಲನಚಿತ್ರಗಳಿಗೇಕೆ ಈ ವಾಕ್ಯಪ್ರಯೋಗ? … Read more

ನೈತಿ(ಕತೆ)

  'ಸಾರ್ ನಿಮ್ಮನ್ನ ಎಲ್ಲೋ ನೋಡಿದ್ದೀನಿ ಸಾರ್….ನೀವು…..ನೀವ್ ದಾರವಾಯಿಲಿ ಬತ್ತೀರ ಅಲ್ವಾ?' ಅಂತ ಶುರು ಮಾಡಿದ ಅವನು. ನಾನು ಸುಮ್ಮನೆ 'ಹ್ಞೂಂ' ಅಂದೆ. 'ಅದೇ ಅನ್ಕೊಂಡೆ… ನೀವು ಬಸ್ ಅತ್ದಾಗಿಂದ ತಲೆ ಕೆಡುಸ್ಕೊತಿದ್ದೆ, 'ಇವ್ರುನ್ನ ಎಲ್ಲೋ ನೋಡ್ದಂಗದಲ್ಲ ಅಂತ…ಈಗ ವಳಿತು ಸಾರ್… 'ನಮಸ್ಕಾರ ಸಾರ್…ನನ್ನೆಸ್ರು ಕೃಷ್ಣ ಅಂತ…' 'ಈ ಬಸ್ ಕಂಡಕ್ಟರ ನೀವು?'    ' ಊಂ ಸಾರ್ ಒಂತರ ಅಂಗೆ ಅನ್ಕೊಳ್ಳಿ… ಈ ಬಸ್ಗೆ ನಾನೇ ಕಂಡಕ್ಟ್ರು, ಕ್ಲೀನರ್ರು, ಕ್ಯಾಶಿಯರ್ರು ಎಲ್ಲಾ'  ಅವನ ಮಾತಿನ ಧಾಟಿಗೆ ನಕ್ಕು ಮೆಚ್ಚುಗೆ ಸೂಚಿಸಿದೆ.  … Read more

ನನ್ನ ಹಳ್ಳಿಯಲ್ಲಿನ ಪ್ರಾಥಮಿಕ ಜೀವನ ಹಾಗೂ ಶಿಕ್ಷಣ

ಹಸಿರು ತಾಯಿಯ ಮಡಿಲಿನಲ್ಲಿ ಮಲಗಿರುವ ಪುಟ್ಟ ಕ೦ದಮ್ಮ ನನ್ನ ಹಳ್ಳಿ..ಕಣ್ಣು ಹಾಯಿಸಿದಷ್ಟು ದೂರ ದ್ರಷ್ಠಿ ಸವರುವುದು ಹಸಿರು ಹೊತ್ತು ನಿ೦ತಿರುವ ಗಿಡಮರ ಬಳ್ಳಿಗಳೆ..ಆಗು೦ಬೆ ಬೆಟ್ಟದ ಬುಡದಲ್ಲಿ ಹರಡಿಕೊ೦ಡಿರುವ ಕಾಡುಗಳ ನಡುವಣದ ನನ್ನ ಹಳ್ಳಿಯಲ್ಲಿ ಈ ಜೀವ ಜನನ ತಾಳಿದ್ದು ನನ್ನ ಪುಣ್ಯವೇ ಸರಿ. ದೂರ ಎ೦ಬಷ್ಟು ಅ೦ತರವನ್ನು ಇಟ್ಟುಕೊ೦ಡು ಅಲ್ಲಲ್ಲಿ ಮ೦ಗಳೂರು ಹೆ೦ಚಿನ ಹೊದಿಕೆ ಹೊದ್ದಿರುವ ಮನೆಗಳು, ನಮ್ಮ ಹಿ೦ದಿನವರ್ಯಾರೋ ಜೀವನೋಪಾಯಕ್ಕೊ೦ದು ದಾರಿ ಕ೦ಡುಕೊಳ್ಳುವ ಪ್ರಯತ್ನದ ಫಲವಾಗಿ ಅಲ್ಲಲ್ಲಿ ಕಾಡು ಕಡಿದು ಸಮತಟ್ಟು ಮಾಡಿ ನಿರ್ಮಾಣಗೊ೦ಡಿರುವ ಭತ್ತದ … Read more

ಅಗಾಧ ಬದುಕು – ನಿಗೂಢ ಸಾವು, ಅಳುವ ಮನಸು…..

ಕಣ್ಣಲ್ಲಿ ಸಾವಿರ ಕನಸುಗಳ ಮತಾಪು… ಬೆನ್ನಲ್ಲಿ ಈಡೇರಿಸಿಕೊಳ್ಳಲಾಗದ ಅಸಹಾಯಕತೆಯ ನಡುಕ…   ಬಣ್ಣ ಬಣ್ಣದ ಕತ್ತಲು… ಭವಿಷ್ಯವನ್ನು ತೋರಲಾರದ ಬೆಳಕು… ನಮ್ಮೆಲ್ಲ ಪ್ರಯತ್ನವನ್ನೂ ಮೀರಿ ಒಮ್ಮೆಲೇ ಧುತ್ತನೆ ಎದುರಾಗಿ ಕಾಡುವ ಹತಾಶೆ… ಮನುಷ್ಯನ್ನು ಸಾವು ಮತ್ತು ಸೋಲುಗಳು ಕಂಗೆಡಿಸಿದಷ್ಟು ಮತ್ಯಾವ ವಿಷಯಗಳೂ ಕಂಗೆಡಿಸಲಾರವೇನೋ.  ಸಾವನ್ನಾದರೂ ಒಪ್ಪಿಕೊಂಡು ಬಿಡಬಹುದು.  ಏಕೆಂದರೆ ಅದು ಸಾರ್ವಕಾಲಿಕ ಮತ್ತು ಸರ್ವವಿಧಿತ ಸತ್ಯ.  ಆದರೆ ಸೋಲುಗಳು –  ಮನುಷ್ಯನನ್ನು ಮಾನಸಿಕವಾಗಿ ಹಾಗೂ ದೈಹಿಕವಾಗಿ ಎರಡೂ ವಿಧಗಳಲ್ಲೂ ಹಣ್ಣಾಗಿಸುವ ವಿಚಾರವೆಂದರೆ ಸೋಲುಗಳು.  ಅವು ಸತತ ಹಾಗೂ … Read more

ಅಂತರ್ಜಾಲದ ಹುಡುಗ

ಭಾವನ ಊಟಮುಗಿಸಿ ವಿಶ್ರಾಂತಿಗಾಗಿ ಸ್ವಲ್ಪ ಹೊತ್ತು ಮಲಗೋಣ ಎಂದು ಸೋಫಾದಲ್ಲಿ ಇನ್ನೇನು ಮಲಗಬೇಕು ಅಷ್ಟರಲ್ಲಿ ಅವಳ ಮೊಬೈಲ್ ಗೆ ಟಿನ್ ಟಿನ್ ಎಂದು ಸಂದೇಶ ಬಂತು, ಎದ್ದು ನೋಡಿದಾಗ  ಹಾಯ್ ಅಕ್ಕಾ ಹೇಗಿದ್ದೀಯ,ಈ ಬದನಸೀಬ್ ತಮ್ಮನ ಮರೆತುಬಿಟ್ಟೆಯ ಎನ್ನುವ ಸಂದೇಶ ನೋಡಿ ಅವಳಲ್ಲಿ ಬೇಸರ, ಸಂತೋಷ, ಆತಂಕದ ಭಾವನೆಗಳು ಒಮ್ಮೆಲೆ ನುಗ್ಗಿ ಕರುಳಲ್ಲಿ ಚುಚ್ಚಿದ ಅನುಭವ. ನಿಧಾನವಾಗಿ ಕಣ್ಣಲ್ಲಿ ನೀರಿನ ಹನಿಗಳು ತೊಟ್ಟಿಕ್ಕಿದವು. ಒಮ್ಮೆ ನಿಟ್ಟುಸಿರಿಟ್ಟಳು. ಮನಸ್ಸು ನಿದ್ದೆ ಮರೆತು ನೆನಪಿನ ಕುದುರೆಯ ಬೆನ್ನೇರಿತ್ತು. ಆಗಿನ್ನು ಹೊಸತಾಗಿ … Read more

ಮೂರು ಕವನಗಳು

ಬತ್ತಿಹುದು ಕಾಲುವೆ- (ಕಂಬನಿ)   ಕಾಲುವೆಯ ಮೇಲೆ ಕುಳಿತು ಕಲ್ಚಾಚಿ ಒಂದೊಂದೇ ಕಲ್ಲು ಎಸೆದು ತಿಳಿ ನೀರಲ್ಲಿ ಸಣ್ಣ ಸಣ್ಣ ಅಲೆ ಎಬ್ಬಿಸಿ ಕಂಡ ಕನಸುಗಳು ಸವಿ ಅಂದು   ಯಾವುದೊ ದೂರದೂರ ಜನ ಸಾಗರವಿದು ಕಲ್ಮಶವಿಲ್ಲದ ಪುಟ್ಟ ಪುಟ್ಟ ಕಂಗಳು ತಿಳಿ ಮನದ ಸರೋವರ ಶಾಂತ ಚಿತ್ತ, ಬರಿ ಕನಸುಗಳ ನನಸಾಗಿಸೋ ಗುರಿ ಮಾತ್ರ   ಕಣ್ಣ ಅಳತೆಗೂ ಮೀರಿದ ಬೇಲಿ ಇತ್ತು  ಸುತ್ತ ಕಣ್ಣ ತಪ್ಪಿಸಿ ಅದಾರು ಬಂದವರು ತಿಳಿಗೊಳವ ಕಲಕಿ ಮೌನದ ಮುಸುಕೊದ್ದು … Read more

ಕಿಕ್ಕೇರಿ ಪಂಚಲಿಂಗೇಶ್ವರ ಹಾಗೂ ಹೊಸಹೊಳಲು ಶ್ರೀ ಲಕ್ಷ್ಮಿ ನರಸಿಂಹ ದೇವಸ್ಥಾನ

"ಅಪಾರ ಕೀರ್ತಿ ಗಳಿಸಿ ಮೆರೆವ ಭವ್ಯ ನಾಡಿದು ಕರ್ನಾಟವಿದುವೆ ನೃತ್ಯ ಶಿಲ್ಪ ಕಲೆಯ ಬೀಡಿದು…ಅಪಾರ ಕೀರ್ತಿಯೇ" ಕನ್ನಡ ಚಿತ್ರರಂಗದ ಭೀಷ್ಮ ಎಂದೇ ಹೆಸರಾಗಿದ್ದ ಶ್ರೀ ಆರ್. ಎನ್. ನಾಗೇಂದ್ರ ರಾಯರು ದಿಗ್ದರ್ಶಿಸಿದ್ದ ಮಹತ್ವಾಕಾಂಕ್ಷೆಯ ಚಿತ್ರ ವಿಜಯನಗರದ ವೀರಪುತ್ರ ಚಿತ್ರದ ಕುದುರೆ ನಡಿಗೆಯ ತಾಳದ ಜನಪ್ರಿಯ ಗೀತೆ ಕೇಳಿದಾಗೆಲ್ಲ ಕರ್ನಾಟಕದಲ್ಲಿ ಶಿಲ್ಪಕಲೆಯು ಉನ್ನತ ಸ್ಥಾಯಿ ಮುಟ್ಟಿದ್ದ ಹೊಯ್ಸಳ ಅರಸರ ಕಲೆಯು ನೆನಪಿಗೆ ಬರುತ್ತದೆ.   ಡಿಸೆಂಬರ್ ೨೯ನೆ ತಾರೀಕು ಹಾಸನದಿಂದ ಮೈಸೂರಿಗೆ ಹೋಗಬೇಕಿತ್ತು..ಕರುನಾಡಿನ ಎಲ್ಲ ಸ್ಥಳಗಳು ಕೈ ರೇಖೆಯಂತೆ … Read more

ನನ್ನೊಳಗಿನ ಗುಜರಾತ…!!! ಭಾಗ-4

ಯಾಕೋ ಮನಸ್ಸು ಒಮ್ಮೊಮ್ಮೆ ಅಗಣಿತ ಮುಖವಾಡಗಳನ್ನು ಹಾಕುತ್ತದೆ. ಹಾಕಿ, ಜಗದ ಜನರ ಮುಂದೆ ಏನೆಲ್ಲ ತಾನೇ ಆಗಿ ಗಿರ್ರೆಂದು ತಿರುಗುವ ಬುಗುರಿಯ ಹಾಗೆ ತಿರುಗುತ್ತದೆ. ತುತ್ತೂರಿಯಾಗಿ ಏರು ದನಿಯಲ್ಲಿ ಕೂಗಿ, ಮಾರ್ದನಿಸಿ ಸದ್ದು ಗದ್ದಲೆಬ್ಬಿಸಿ ಒಳಮಾನಸದೊಳು ಭೀಮ ಅಲೆಗಳನ್ನು ಎಬ್ಬಿಸುತ್ತದೆ. ನೃತ್ಯ ಕಲಾ ಪ್ರವೀಣೆ ಚೆಂದುಳ್ಳಿ ಚೆಲುವೆ ನರ್ತಕಿಯಾಗಿ ಕುಣಿಯುತ್ತದೆ. ಬುಗುರಿಯಾಗಿ ಸುತ್ತಿ, ತುತ್ತೂರಿಯಾಗಿ ಕೂಗಿ, ನರ್ತಕಿಯಾಗಿ ಕುಣಿದು, ತಾನಷ್ಟೆ ಒಳ ಸುಖಿಸಿ, ಸ್ಖಲಿಸಿ ಎಲ್ಲವುಗಳನ್ನು ಅನುಭವಿಸುವ ಹಕ್ಕನ್ನು ತಾನೇ ಪಡೆದಿದ್ದರೆ, ಅದರ ಹಿಂದಿಂದೆಯೇ ಬಿಡಿಸಿಕೊಳ್ಳಲಾಗದ ಸೂತ್ರದಂತೆ … Read more

ಅಂತರ್ಜಾಲ ಕನ್ನಡ ಬ್ಲಾಗ್ ಹಾಗೂ ಪತ್ರಿಕೆಗಳು ಮತ್ತು ಕನ್ನಡದ ಕಾಯಕ

ಬದಲಾಗುತ್ತಿರುವ ಪ್ರಸ್ತುತ ವಿದ್ಯಮಾನಗಳನ್ನು ಗಮನಿಸಿದರೆ ಪರಭಾಷಾ ಹಾವಳಿ ಹಾಗೂ ಆಂಗ್ಲ ಭಾಷೆಯ ವ್ಯಾಮೋಹ ನಮ್ಮನ್ನು ತೀರಾ ಕಾಡುತ್ತಿರುವ ವಿಷಯಗಳು ಏಕೆಂದರೆ ಈ ಎರಡೂ ವಿಷಯಗಳು ಕನ್ನಡದ ಉಳಿವಿಗೆ ಸಂಚಕಾರ ತಂದೊಡ್ಡಬಹುದು ಎನ್ನುವ ಮಾತನ್ನು ತಿರಸ್ಕರಿಸುವಂತಿಲ್ಲ. ಆದರೆ ಕನ್ನಡ ಸಾವಿಲ್ಲದ ಸಾವಿರ ಕಾಲ ಬದುಕುವ ಕನ್ನಡಿಗರ ಉಸಿರಾಗಿರುವ ಭಾಷೆ. ಆದರೆ ಪ್ರಸ್ತುತ ಸನ್ನಿವೇಷದಲ್ಲಿ ಕನ್ನಡ ಕಟ್ಟುವ ಕೆಲಸ ಅತ್ಯವಶ್ಯಕ. ಇಂತಹ ಕನ್ನಡ ಕಟ್ಟುವ ಕೆಲಸವನ್ನು ಹಲವಾರು ಸಂಸ್ಥೆಗಳು, ಸಂಘಟನೆಗಳು ನಿರ್ವಹಿಸುತ್ತಿವೆಯಾದರು ಕೆಲವೊಂದು ಕಾರ್ಯಗಳು  ಮಾತ್ರ ಕೇವಲ ಪತ್ರಿಕೆಗಳ ಸುದ್ದಿಗಷ್ಟೇ … Read more

ವಾರ ಮೂರು….. :)))

  ಕಳೆದ ವಾರ ಫೇಸ್ ಬುಕ್ ನಲ್ಲಿ ಚಿಕ್ಕಲ್ಲೂರು ಅನ್ನೋ ಹೆಸರು ನೋಡಿ ಆಶ್ಚರ್ಯವಾಗಿತ್ತು.  ಹಿರಿಯ ಪತ್ರಕರ್ತರಾದ ಕುಮಾರ ರೈತ ಅವರು ಚಿಕ್ಕಲ್ಲೂರು ಜಾತ್ರೆಯ ಚಿತ್ರಗಳನ್ನು ಫೇಸ್ ಬುಕ್ ನಲ್ಲಿ ಹಂಚಿಕೊಳ್ಳುವುದರ ಜೊತೆಗೆ "ಜನಪದ ನಾಯಕ ಸಿದ್ದಪ್ಪಾಜಿ ಸ್ಮರಣೆಗೆ ಚಾಮರಾಜನಗರ ಜಿಲ್ಲೆ, ಕೊಳ್ಳೇಗಾಲ ತಾಲೂಕಿನ ಚಿಕ್ಕಲ್ಲೂರಿನಲ್ಲಿ ಜಾತ್ರೆ ನಡೆಯುತ್ತದೆ. ಜ. 27ರಂದು ನಾನು ಹೋಗಿದ್ದೆ. ಅಲ್ಲಿನ ಚಂದ್ರಮಂಡಲದ ಬೆಂಕಿ ಎತ್ತ ಹೆಚ್ಚು ಉರಿಯುವುದೋ ಅತ್ತ ಮುಂದಿನ ಹಂಗಾಮಿನಲ್ಲಿ ಸಮೃದ್ಧತೆ ಇರುತ್ತದೆ ಎಂಬುದು ನಂಬಿಕೆ" ಎಂಬ ಸಾಲನ್ನು  ಫೋಟೋಗಳ … Read more

ಕಾರ್ನಾಡರ “ಹಯವದನ”

ಮನುಷ್ಯನ ಅಪೂರ್ಣತೆಯ ಬಗೆಗೆ ಆಲೋಚಿಸಲು, ಕಾರ್ನಾಡರ “ಹಯವದನ” ಓದಬೇಕು. ನಾಟಕ ಆರಂಭ ಆಗುವುದು ಗಣೇಶನ ಅಪೂರ್ಣತೆಯ ಉಲ್ಲೇಖನದಿಂದ. ಇಲ್ಲಿ ಕಂಡುಬರುವುದು ಬರೇ ಮೂರು ಮುಖ್ಯ ಪಾತ್ರಗಳು – ಪದ್ಮಿನಿ, ದೇವದತ್ತ ಹಾಗೂ ಕಪಿಲ. ಇಲ್ಲಿ ಅಪೂರ್ಣತೆಯ ಪ್ರತೀಕ ಅನ್ನುವಂತೆ ಹಯವದನನಿದ್ದಾನೆ.  ಇಲ್ಲಿನ ಕಥೆ ಸಾಮಾನ್ಯವಾಗಿ ಗೊತ್ತಿರುವಂತಹದೆ. ಯಾವುದೇ ಕಾರಣಕ್ಕೆ ಇಬ್ಬರು ಮನುಷ್ಯರ ತಲೆ ಅದಲು ಬದಲಾದರೆ, ತಲೆ ಇರುವವನನ್ನು ಅವನ ಹೆಸರಿನಿಂದ ಗುರುತಿಸುತ್ತೇವೆ, ಯಾಕೆಂದರೆ ತಲೆ ಮುಖ್ಯ. ಈ ಸಣ್ಣ ತುಣುಕನ್ನು ಹಿಡಿದುಕೊಂಡು ಕಾರ್ನಾಡರು ತುಂಬಾ ವಿಚಾರ … Read more

ಓ ನಾಗರಾಜ ಅಪ್ಪಣೆಯೇ…

  ನಮ್ಮ ಆಫೀಸಿನ ಎದುರು ಬೈಕುಗಳು ಸಾಲಾಗಿ ನಿಲ್ಲುವ ಜಾಗದಲ್ಲಿ ಮೊನ್ನೆ ನಾಗರಹಾವೊಂದು ಬಂದು ಮಲಗಿತ್ತು. ಅದೇನು ಬೈಕಿನಂತೆ ಸರದಿ ಸಾಲಿನಲ್ಲಿ ಇರಲಿಲ್ಲ. ಯಾರದೋ ಬೈಕಿನ ಟ್ಯಾಂಕ್ ಕವರ್‌ನಲ್ಲಿ ಬೆಚ್ಚಗೆ ಪವಡಿಸಿತ್ತು. ಸದ್ಯ ಬೈಕಿನ ಸವಾರನಿಗೆ ಅದೇನು ಮಾಡಲಿಲ್ಲ. ಗಾಬರಿಯಿಂದ ಇಳಿದು ಯಾವುದೋ ಚರಂಡಿ ಹುಡುಕಿಕೊಂಡು ಹೋಯಿತು. ಆವತ್ತೆಲ್ಲ ಆ ಹಾವಿನ ಬಗ್ಗೆ ಗುಲ್ಲೋ ಗುಲ್ಲು. ಅಲ್ಲಿದ್ದವರೆಲ್ಲ ಹಾವು ಅಲ್ಲಿಗೆ ಏಕೆ ಬಂತು ಎಂಬುದರ ಬಗ್ಗೆ ಒಂದು ವಿಚಾರಸಂಕಿರಣಕ್ಕೆ ಆಗುವಷ್ಟು ಮಾತಾಡಿದರು ಎನ್ನಿ. ಹಾವುಗಳು ಯಾರಿಗೆ ತಾನೆ … Read more

ಅಂತರಂಗದ ಗಂಗೆ

ಆಫೀಸ್‍ಗೆ ಮುಂಚೆ ಬರುವ ಅಭ್ಯಾಸವಿದ್ದರೆ ಇದೊಂದು ಮುಜುಗರ. ಒಳಗೆಲ್ಲ ಕಸ ಗುಡಿಸುತ್ತಿದ್ದರು. ಹಾಗಾಗಿ ಸೆಕ್ಷನ್ನಿನ ಹೊರಗೆ ನಿಂತಿದ್ದೆ. ನಾನು  ನಿಂತಿರುವುದನ್ನು  ಗಮನಿಸಿದ ಆಕೆ ಬೇಗ-ಬೇಗ ಎಂಬಂತೆ ಗುಡಿಸಿ, ಹಾಗೆ ಒಳಗಿದ್ದ ಡಸ್ಟ್ ಬಿನ್ ಗಳ ಎಲ್ಲ ಕಾಗದಗಳನ್ನು ಒಂದೆ ಬ್ಯಾಸ್ಕೆಟ್ ಗೆ ಹಾಕಿಹೊರಬಂದಳು. ಒಳಗೆ ಗುಡಿಸಿದಾಗ ಎದ್ದ  ಧೂಳು ಸ್ವಲ್ಪ  ಸರಿಯಾಗಲಿ ಎಂದು ಒಂದೆರಡು ನಿಮಿಷ ನಿಂತಿದ್ದೆ. ಆಕೆ ಒಳಗಿನಿಂದ ತಂದ ಕಸವನ್ನೆಲ್ಲಹೊರಗಿನ ದೊಡ್ಡ ಕಸದಡಬ್ಬಿಗೆ ಹಾಕುವ ಮುನ್ನ ಅದೇನೋ  ಗಮನಿಸಿದಳು.  ಈ ಅಕ್ಷರಜ್ಞಾನವಿಲ್ಲದಿರುವ ಕೆಲಸದವರಲ್ಲಿ ಒಂದು … Read more

ಮೂರು ಕಾವ್ಯಗಳು

ಮನಸ್ಸೆಂಬ ಚಿಟ್ಟೆ ************* ಚಿಟ್ಟೆ ಚಿಟ್ಟೆ ಬಣ್ಣದ ಚಿಟ್ಟೆ  ನೋಡಲು ಕಣ್ಣುಗಳು ಸಾಲದು ಮೈಯ ಮೇಲೆಲ್ಲಾ ಕಪ್ಪು ಕಂಗಳು ನೋಡುಗರ ಕಣ್ಮನ ಸೆಳೆಯುವುದು    ಅಲ್ಲಿಂದಿಲ್ಲಿಗೆ ಹಾರುವೆ  ಹಿಡಿಯಲು ಹೋದರೆ ಓಡುವೆ  ಜಗದ ಸೃಷ್ಟಿಯ ಮೆಚ್ಚಲೇ ಬೇಕು  ನಿನಗೆ ನೀನೆ ಸಾಟಿಯಿರಬೇಕು    ಒಮ್ಮೆ ಇಲ್ಲಿ ಒಮ್ಮೆ ಇನ್ನೆಲ್ಲೋ  ಹಾರುವ ನಿನ್ನನು ನೋಡಿದರೆ  ಮನಸು ಕೂಡ ನಿನ್ನೊಡನೆಯೇ  ಕುಣಿಯುತ ಹೊರಡುವುದು ಬೇರೆಡೆಗೆ !! -ಅರ್ಪಿತಾ ರಾವ್  ನವಮಾಸ  ********* ನವಮಾಸ ಬಂದಿದೆ ಆಹ್ಲಾದವ ತಂದಿದೆ ಎನ್ನ ಬಾಳಿನಲ್ಲಿ … Read more

ಕಾಂಟೆಕ್ಸ್ಟ್

ಮನುಷ್ಯನ ಭಾವನೆಗಳು ಸಾರ್ವತ್ರಿಕ. ಆದರೆ ಅವುಗಳ ಅಭಿವ್ಯಕ್ತಿ ಬದಲಾಗುತ್ತದೆ – ಬೇರೆ ಬೇರೆ ದೇಶಗಳಲ್ಲಿ, ಭಾಷೆಗಳಲ್ಲಿ, ಕಾಲಘಟ್ಟಗಳಲ್ಲಿ ಕಾಣಬರುವ ರೀತಿಯಲ್ಲಿ ಭಿನ್ನತೆಯಿರುತ್ತದೆ. ಇದನ್ನು ‘ಕಾಂಟೆಕ್ಸ್ಟ್’ ಅಂತೀನಿ ನಾನು. ಈ ಕಾಂಟೆಕ್ಸ್ಟ್ ಗೊತ್ತಿದ್ದಾಗ ಮಾತ್ರ ಕೆಲವು ಪಾತ್ರಗಳು, ಸನ್ನಿವೇಶಗಳು, ಚಿತ್ರಗಳನ್ನು ಅಪ್ಪ್ರಿಶಿಯೇಟ್ ಮಾಡಲಿಕ್ಕೆ ಸಾಧ್ಯ! ಇದಕ್ಕೆ ಉದಾಹರಣೆಯಾಗಿ ಒಂದಕ್ಕಿಂತ ಒಂದು ವಿಭಿನ್ನವಾಗಿರುವ ಎರಡು  ಮಹಾನ್ ಚಿತ್ರಗಳ ಬಗ್ಗೆ ಹೇಳಲು ಇಷ್ಟಪಡುತ್ತೇನೆ – “೧೨ ಆಂಗ್ರಿ ಮೆನ್” ಹಾಗು “ದಿ ಗುಡ್, ದಿ ಬ್ಯಾಡ್ ಅಂಡ್ ದಿ ಅಗ್ಲಿ”. ಪ್ರತಿಯೊಬ್ಬ … Read more

ಮಾತೃ ಭಾಷೆಗೆ ಸಿಕ್ಕ ಮನ್ನಣೆ

  ಹಚ್ಚೇವು ಕನ್ನಡದ ದೀಪ  ಕರು ನಾಡ  ದೀಪ  ಸಿರಿನುಡಿಯ ದೀಪ ಒಲವೆತ್ತಿ ತೋರುವಾ ದೀಪ l            ನಾಲ್ಕು ವರ್ಷಗಳ ಹಿಂದೆ ಮೊದಲ ಬಾರಿಗೆ ಭಾರತದ ನನ್ನ ಹಳ್ಳಿ ಬಿಟ್ಟು ಈ ಮರುಭೂಮಿಗೆ ಬಂದು ಇಳಿದಾಗ ಅಸಾಧ್ಯ ಭಯ ಇತ್ತು. ದೇವರೇ! ಹೇಗೆ ನಾನು ಬದುಕಿ ಉಳಿದೇನಾ ಅಂತ. ಆದರೆ ನಾನು ಇದ್ದ ಜಾಗ ತುಂಬಾ ಸುರಕ್ಷಿತವಾಗಿತ್ತು. ನನ್ನ ಬಹು ಮಹಡಿ ಕಟ್ಟಡದಲ್ಲಿ ಹಾಗೂ ಸುತ್ತಲೂ ಎಲ್ಲವೂ ಇತ್ತು. ಕ್ಲಿನಿಕ್, … Read more

ನನ್ನೊಳಗಿನ ಗುಜರಾತ…! ಭಾಗ 3

ಯಾರಿಗುಂಟು ಯಾರಿಗಿಲ್ಲ…!! ಇದನ್ನು ಅದೃಷ್ಟ ಅನ್ನುತ್ತಿರೊ ಅಥವಾ ದುರಾದೃಷ್ಟ ಅನ್ನುತ್ತಿರೊ ನಾನರಿಯೆ. ಆದರೆ, ನಾನು ಮಾತ್ರ ಬಾಲ್ಯದಲ್ಲಿಯೇ ಈ ಬದುಕಿನ ಆದಿ ಅಂತ್ಯಗಳೆಂಬ ಜನನ ಮರಣಗಳನ್ನು ಬಲು ಸನಿಹದಿಂದ ಕಣ್ಣು ತುಂಬ ಕಂಡವನು. ಅವುಗಳ ಅರ್ಥವನ್ನು ತಿಳಿಯುವ ಮೊದಲೇ ಬೆಳ್ಳಿ ಪರದೆಯ ಮೇಲೆ ಮೂಡಿ ಬರುವ ಅದ್ದೂರಿ ವೈಭವಿಕ ಚಲನಚಿತ್ರದ ದೃಶ್ಯದಂತೆ ಎರಡರ ಜೀವಂತ ದೃಶ್ಯವಿದ್ಯಮಾನಗಳನ್ನು ಕಂಡು, ಬುದ್ಧಿ ಬೆಳೆಯುತ್ತಿದ್ದಂತಯೇ ಅವುಗಳ ಆಳ ಮತ್ತು ವಿಸ್ತಾರಗಳನ್ನು ತಿಳಿಯುವ ಪ್ರಯತ್ನಕ್ಕೆ ಇಳಿದವನು. ಪುಟ್ಟು ಊರಲ್ಲಿ ಹುಟ್ಟಿ, ಗ್ರಾಮೀಣ ಬದುಕನ್ನು … Read more

ಬೆಟ್ಟದ ಅ೦ಗಳದಲ್ಲೊ೦ದು ದಿನ

ಈ ಬಾರಿಯ ರಜಾ ಮಜಾವನ್ನು ಅನುಭವಿಸಲು ಮಿತ್ರರೆಲ್ಲ ಸೇರಿ ಭೂ ಲೋಕದ ‘ಸ್ವರ್ಗ’ ಕೊಡಗಿಗೆ ಹೋಗುವುದೆ೦ದು ತೀರ್ಮಾನಿಸಿದೆವು. ನಮ್ಮ ಪ್ರವಾಸದ ಮುಖ್ಯ ವೀಕ್ಷಣಾ ತಾಣವಾಗಿ ಆರಿಸಿಕೊ೦ಡದ್ದು ಮುಗಿಲುಪೇಟೆಯೆ೦ದೇ ಖ್ಯಾತಿ ಗಳಿಸಿರುವ ಮಾ೦ದಲಪಟ್ಟಿ ಪರ್ವತ ಸಾಲುಗಳನ್ನು. ಅ೦ತೆಯೇ ನಿಗದಿತ ದಿನಾ೦ಕದ೦ದು ಮು೦ಜಾನೆ ಉಡುಪಿಯಿ೦ದ ಮ೦ಗಳೂರಿಗಾಗಿ ಕೊಡಗಿಗೆ ಹೊರಟೆವು,ಹೊರಟಾಗ ಮು೦ಜಾನೆ ೫ಃ೩೦. ಮು೦ಜಾನೆಯ ಚುಮು ಚುಮು ಚಳಿಯಲ್ಲಿ ಗಾಡಿ ಓಡಿಸುವುದು ತು೦ಬಾ ಮಜವಾಗಿತ್ತು. ನಾನು ಜೀವನದಲ್ಲಿ ಮೊತ್ತ ಮೊದಲ ಬಾರಿಗೆ ಸೂರ್ಯೋದಯ ನೊಡಿದ್ದೇ ಅ೦ದು ! ಹಾಗೂ ಸೂರ್ಯ ನನ್ನ … Read more

ಇಬ್ಬರ ಚುಟುಕಗಳು

  ನಿಸ್ವಾರ್ಥ.. ಒಕ್ಕಲಿಗ ನೆಟ್ಟ ಗಿಡ ಇಂದು ದೊಡ್ಡ ಮರವಾಗಿ ನೆರಳಾಗಿ ನಿಂತಿದೆ ದಣಿದ ದೇಹಕೆ ಯಾವ ಭೇದವನ್ನು ತೋರದೆ ಫಲ! ಭೂ ತಾಯಿ ಕೊಟ್ಟ ನೀರಿಂದ ರೈತ ಸುರಿಸಿದ ಬೆವರಿಂದ ಫಲಸಿಕ್ಕಿತು! ಹೊಟ್ಟೆಗೆ ಅನ್ನ ಜೊತೆಗೆ ಮುಚ್ಚಿಕೊಳ್ಳಲು ಮಾನ!! -ಮಂಜು ವರಗಾ   ಕಣ್ಣೀರು ಅತ್ತುಬಿಡು ಎಂದಾಗ,  ಬರದ ಹನಿ, ಅಳಬೇಡ ತಡೆಯೆಂದಾಗ, ಉಕ್ಕಿ ಹರಿವ ಧಾರೆ!! ಹೃದಯ ಇದ್ದಾಗ,  ಕೊಂಚವೂ ಗೋಚರಿಸದ , ತನ್ನನ್ನೇ ಕೊಟ್ಟು ಬರಿದಾದ ಮೇಲೆ,  ಭಾರ ತೋರುವ,  ಏಕೈಕ  ವೈಚಿತ್ರ್ಯ!! … Read more

ಹೂವು, ಮರ, ಬಾನು

               ಮುರಳಿ ಮೋಹನ್ ಕಾಟಿ                                    ಪ್ರಸಾದ್ ಶೆಟ್ಟಿ ವಿ.ಸೂ.: ಹೂವಿನ ಚಿತ್ರಗಳನ್ನು ಪ್ರಸಾದ್ ಶೆಟ್ಟಿಯವರು ಲಾಲ್ ಬಾಗ್ ನ ಪುಷ್ಪಮೇಳದಲ್ಲಿ ತೆಗೆದಿದ್ದಾರೆ.             ಕೊನೆಯ ಮೂರು ಚಿತ್ರಗಳನ್ನು ಮುರಳಿ ಮೋಹನ್ ರವರು ತೆಗೆದಿದ್ದಾರೆ.

ನಮ್ಮ ಮುಂದಿನ ಸಂಚಿಕೆಯಲ್ಲಿ ನಿರೀಕ್ಷಿಸಿ…..

1. ಮೊದಲು ಓದುಗನಾಗು:       ಕಾರ್ನಾಡರ “ಹಯವದನ”- ರಾಜೇಂದ್ರ ಬಿ. ಶೆಟ್ಟಿ 2. ಪಂಜು ವಿಶೇಷ:       ಓ ನಾಗರಾಜ ಅಪ್ಪಣೆಯೇ…-ಹರಿ ಪ್ರಸಾದ್ 3. ಕಥಾಲೋಕ:      ಅಂತರಂಗದ ಗಂಗೆ – ಪಾರ್ಥಸಾರಥಿ ನರಸಿಂಗರಾವ್ 4. ಕಾವ್ಯಧಾರೆ:      ಮೂರು ಕಾವ್ಯಗಳು -ಅರ್ಪಿತಾ ರಾವ್, ಕಾಂತರಾಜು ಕೆ ಮತ್ತು ರಾಜಹಂಸ 5. ಸಿನಿ-ಲೋಕ:       ಕಾಂಟೆಕ್ಸ್ಟ್- ವಾಸುಕಿ ರಾಘವನ್ 6. ಪಂಜು-ವಿಶೇಷ:     ಮಾತೃ ಭಾಷೆಗೆ ಸಿಕ್ಕ ಮನ್ನಣೆ … Read more

ದ್ವಿತೀಯ ಸಂಚಿಕೆ ನಿಮ್ಮ ಮಡಿಲಿಗೆ….

  ಸಹೃದಯಿಗಳೇ, ಪಂಜುವಿನ ದ್ವಿತೀಯ ಸಂಚಿಕೆಯನ್ನು ನಿಮ್ಮ ಮಡಿಲಿಗೆ ಹಾಕುವ ಮೊದಲು ಪಂಜುವಿನ ಮೊದಲ ಸಂಚಿಕೆಗೆ ನೀವು ತೋರಿದ ಪ್ರೀತಿ ಪ್ರೋತ್ಸಾಹ ಸಹಕಾರಕ್ಕೆ ನಾನು ತುಂಬು ಹೃದಯದ ವಂದನೆಗಳನ್ನು ಸಲ್ಲಿಸಬೇಕು. ನಿಮ್ಮ ಪ್ರೀತಿ ಪಂಜುವಿನ ಮೇಲೆ ಹೀಗೆಯೇ ಇರಲಿ. ಒಮ್ಮೆ ಅಂತರ್ಜಾಲ ತಾಣವೊಂದರಲ್ಲಿ ಲೇಖನವೊಂದನ್ನು ಬರೆದಿದ್ದಾಗ ಆತ್ಮೀಯರೊಬ್ಬರು ಕರೆ ಮಾಡಿ "ನೀವು ಬರೆದಿರೋದನ್ನು ಓದುಗರು ಓದ್ತಾ ಇರ್ತಾರೆ. ಸುಮ್ಮಸುಮ್ಮನೆ ಏನೇನೋ ಬರೆಯಲು ಹೋಗಬೇಡಿ." ಎಂದು ಎಚ್ಚರಿಸಿದ್ದರು. ಅಂತರ್ಜಾಲ ತಾಣದಲ್ಲಿ ಬರೆಯುವ ಪ್ರಕಟಿಸುವ ಸ್ವಾತಂತ್ರ್ಯವಿದೆಯೆಂದು ನಮ್ಮಿಚ್ಚೆಯಂತೆ ಬರೆಯುತ್ತಾ ಪ್ರಕಟಿಸುತ್ತಾ … Read more

ಇದೇ ಮೇಲಲ್ಲವೇ?

  "ದೇವರಮನೆ ಬಾಗಿಲು ಮುಚ್ಚಿಬಿಡೇ" ಅಪರೂಪಕ್ಕೆ ಬಂದ ಗೆಳತಿ ಅಸ್ಪೃಶ್ಯಳಂತೆ ಬಾಗಿಲಲ್ಲೇ ನಿಂತು ಹೇಳುತ್ತಿದ್ದಳು. ಯಾಕೆಂದು ಕೇಳುವ ಅಗತ್ಯವಿರಲಿಲ್ಲ. ನಾನು ಹೋಗಿ ಮುಚ್ಚಿದೆ. "ಅಯ್ಯೋ ಬಿಡೇ ನೀನೊಬ್ಬಳು ಅಡಗೂಲಜ್ಜಿ ತರಹ ಆಡ್ತೀಯಮ್ಮಾ"-ಜೊತೆಯಲ್ಲಿದ್ದ ಇನ್ನೊಬ್ಬ ಗೆಳತಿಯ ಪ್ರತಿಕ್ರಿಯೆ. ಅವಳಲ್ಲಿ ಉತ್ತರವಿರಲಿಲ್ಲ, ಮುಖ ಪೆಚ್ಚಾಯಿತು. ಅದೊಂದು ನಂಬಿಕೆಯಷ್ಟೆ. ನಂಬಿಕೆಯೊಳಗೆ ಪ್ರಶ್ನೆಗಳೂ ಹುಟ್ಟುವುದಿಲ್ಲ, ಹಾಗೂ ಉತ್ತರಗಳೂ ಇರುವುದಿಲ್ಲ. ಪ್ರಶ್ನೆ ಇದ್ದರದು ನಂಬಿಕೆಯಾಗಿರುವುದಿಲ್ಲ, ಒಂದು ಸಂಶಯವಾಗಿರುತ್ತದೆ. ಸಂಪ್ರದಾಯಸ್ಥ ಮನೆಗಳಿಂದ ಬಂದ ಇಂದಿನ ಹೆಣ್ಣುಮಕ್ಕಳೆಲ್ಲರೂ ಇದೊಂದು ಅರ್ಥವಿಲ್ಲದ ಆಚರಣೆ ಎಂದು ತಿಳಿದಿದ್ದರೂ, ಅದನ್ನೊಂದು ಸಹಜಪ್ರಕ್ರಿಯೆ … Read more

ಮತ್ತೆ ಮತ್ತೆ ತೇಜಸ್ವಿ

ಗೆಳೆಯ ಪರಮೇಶ್ವರ್ ಮತ್ತು ನನಗೂ ತುಂಬಾ ದಿನಗಳ ನಂಟು. ಈ ನಂಟನ್ನು ನನಗೆ ಕರುಣಿಸಿದ್ದು ಫೇಸ್ ಬುಕ್. ಫೇಸ್ ಬುಕ್ ನಲ್ಲಿ ಪರಿಚಯವಾದ ಈ ಗೆಳೆಯ ತನ್ನ ಕನಸುಗಳನ್ನು ಫೋನಿನಲ್ಲಿ ಎಷ್ಟೋ ಬಾರಿ ಹಂಚಿಕೊಂಡಿದ್ದಾರೆ. ಇವತ್ತು ಅವರ ಬಹುದಿನದ ಕನಸು ಎನ್ನಬಹುದಾದ ತೇಜಸ್ವಿಯವರ ಕುರಿತ ಸಾಕ್ಷ್ಯಚಿತ್ರವನ್ನು ಸಂಪೂರ್ಣವಾಗಿ ಪೂರ್ಣಗೊಳಿಸಿ ನಮ್ಮೆದುರು ಅದರ ತುಣುಕುಗಳನ್ನು ಯೂ ಟೂಬ್ ನಲ್ಲಿ ಹಾಕುವುದರ ಮೂಲಕ ಹಂಚಿಕೊಂಡಿದ್ದಾರೆ. 'ಮತ್ತೆ ಮತ್ತೆ ತೇಜಸ್ವಿ' ಎಂಬ ಶೀರ್ಷಿಕೆ ಹೊತ್ತ ಸಾಕ್ಷ್ಯಚಿತ್ರದ ಐದು ನಿಮಿಷದ ಪ್ರೊಮೋ ನೋಡಿದ … Read more