ಪ್ರೇಮ ಪತ್ರಗಳು

“ಹೃದಯದ ಪ್ರಾರ್ಥನೆಗೆ ವರವೊಂದು ಸಿಗಲಾರದೆನೋ”..?: ಪೂಜಾ ಗುಜರನ್

ಏನೂ ಬರೆಯಲಿ. ಮನಸ್ಸು ನಿನ್ನ ಸಾಂಗತ್ಯದ ಹಾದಿಯಲ್ಲಿ ಕಾಯುತ್ತಿದೆ ಎಂದೋ..? ಅಥವಾ ಮನದ ನೋವನ್ನು ಒಮ್ಮೆ ನಿವಾರಿಸಿ ಜೊತೆಯಾಗು ಎಂದೋ..? ಇದೆಲ್ಲ ಮನದ ಕೋರಿಕೆ. ಆ ದೇವರಿಗೆ ಇಟ್ಟ ಹರಕೆ. ದೈವಾಂಶ ತುಂಬಿರುವ ಮಣ್ಣಲ್ಲಿ ಬದುಕುವ ನನಗೆ ನಂಬಿರುವ ನಂಬಿಕೆಗಳೆ ದಾರಿದೀಪ. ಇದೆಲ್ಲ ನಿನ್ನ ಅರಿವಿಗೆ ಬರದ ಸತ್ಯವೇನೋ.?ನನ್ನ ಪತ್ರದ ನಿರೀಕ್ಷೆ ನೀನು ಮಾಡುತ್ತಿಯೋ ಇಲ್ಲವೋ ನಾ ಅರಿಯೆನು.ಪತ್ರಗಳನ್ನೇ ಜೀವಾಳ ಅಂತ ತಿಳಿದು ಬದುಕಿದನನಗೆ ನಿನ್ನಿಂದ ಯಾವ ಉತ್ತರಗಳು ಬರಲೇ ಇಲ್ಲ. ಮುಂದೆ ಬರುವುದು ಇಲ್ಲ.‌ನಿನ್ನ ಆಗಾಧವಾದ […]

ಪ್ರೇಮ ಪತ್ರಗಳು

ನನ್ನೆದೆಯ ಗುಬ್ಬಚ್ಚಿ: ಸುರೇಖಾ ಕುಚನೂರ

ನನ್ನೊಲವಿನ ಜೀವವೇ……ನಿನ್ನೆದೆಯ ಗುಬ್ಬಚ್ಚಿಯ ಕಥೆ ಕೇಳು. ಹಗಲೆನ್ನದೇ, ಇರುಳೆನ್ನದೇ ನಿನ್ನೇ ನೆನಪಿಸಿಕೊಳ್ಳುವ ಹೃದಯದ ವ್ಯಥೆ ಕೇಳು. ಹಸಿವಿನ ಹಂಗಿಲ್ಲದೇ ನಿದಿರೆಯ ಗುಂಗಿಲ್ಲದೇ ನಿನ್ನ ಹೆಸರನ್ನೇ ಜಪಿಸುವ ಮನಸ್ಸಿನ ಗತಿ ಕೇಳು. ಆ ಒಂದು ದಿನ ನಿನ್ನ ನೋಡಿದಾಕ್ಷಣ ನನ್ನನ್ನೆ ನಾ ಮರೆತ ದಿನ. ನಿನಗರಿವಿಲ್ಲದೆ ನನ್ನನ್ನು ನೀ ಸೇರಿದ ದಿನ. ನನ್ನ ಉಸಿರೊಳಗುಸಿರಾದ ದಿನ. ಜಗವೇ ನನ್ನ ಮರೆತರೂ ನಾ ಹೇಗೆ ಮರೆಯಲಿ ಆ ದಿನವನ್ನು. ಅಂದಿನಿಂದ ಇಂದಿನವರೆಗೂ ಮರಳಿ ನೀ ನನಗೆ ಸಿಗುತ್ತಿಲ್ಲ. ಆದರೆ ನಾ […]

ಪ್ರೇಮ ಪತ್ರಗಳು

ನೇಸರನಿಲ್ಲದ ಬಾನ ಎದೆಯಲ್ಲಿನ ಮೌನ: ಚೇತನ್ ಪೂಜಾರಿ, ವಿಟ್ಲ.

ನೀನೊಂತರ ಹವಳದ ಮುತ್ತು. ಬಳಿ ಇಲ್ಲದೆಯೂ ಏರಿಸುತ್ತಿರುವೆ ನಿನ್ನದೇ ಮತ್ತು. ನಗು ನಗುತ ನನ್ನೆದೆ ಹೊಕ್ಕು ಬಾಳ ಕಣ್ಣಾದವಳು ಇಂದು ಕಣ್ಣಂಚಲಿ ನೆನಪಾಗಿ ಕುಳಿತಿರುವೆ. ಕರೆವೆನೆಂದರೂ ಕೇಳಿಸದ ಊರಲಿ ನೀ ಕುಳಿತಿರುವೆ. ನಕ್ಕು ನಲಿವ ನಕ್ಷತ್ರವಾಗಿ ಮಿನುಗುತ ಎಲ್ಲರಿಗೂ ಮೆರುಗು ತರುತ್ತಿರುವೆ ಎಂದು ಭಾವಿಸುವೆ. ಏಕೆಂದರೆ ನೀ ಎನಗೆ ಕಲಿಸಿದ ಮೊದಲ ಪ್ರೇಮವೇ ನಗು. ನೋವಿನಲ್ಲೂ ನಗು. ನೋವ ಮರೆಸಲು ನಗು. ಮಗುವಾಗಿಸೋ ನಗು. ಪೆದ್ದು ಪೆದ್ದು ಮಾತಿನಲೂ ಪ್ರಬುದ್ಧೆ ನೀ.ತಿದ್ದಿ ಬುದ್ಧಿ ಹೇಳೋ ತಿಳುವಳಿಕೆಯಲಿ ಬುದ್ಧೆ […]

ಪ್ರೇಮ ಪತ್ರಗಳು

ಮಳೆ ಊರಿನ ಹುಡುಗಿಗೆ: ವೃಶ್ಚಿಕ ಮುನಿ (ಪ್ರವೀಣಕುಮಾರ ಸುಲಾಖೆ)

ನೆನಪಾಗುತ್ತೀಯ ಎಂದು ಪತ್ರ ಬರೆಯುತ್ತಿಲ್ಲ, ಪತ್ರ ಬರೆಯುತ್ತಿರುವುದು ನೆಪವಷ್ಟೆ ನೆನಪಿಗೆ ಉತ್ತರಿಸಲು.ಗೆ. .ಮಳೆ ಊರಿನ ಹುಡುಗಿಗೆರಥ ಬೀದಿಯ ಕೊನೆಯ ತಿರುವುಕೆಂಪು ಹೆಂಚಿನ ಮನೆಫೋಸ್ಟ :ಮಳೆಊರು ಇಂದ. .ಅಲೆಮಾರಿಯ ನೆಲೆಯಿಂದಖಾಸಾಕೋಣೆಯ ಬಿಸಿಯುಸಿರುಶಾಯಿಯಲ್ಲಿ. ಕ್ಷೇಮ ವಿಚಾರವಾಗಿ ಬರೆದ ಸಾಲುಗಳಲ್ಲಿ ಸಾಕಾಗುವಷ್ಟು ನೆನಪುಗಳಿವೆ. ಜಗದ ಯಾವ ಖಜಾನೆಯಲ್ಲಿ ತುಂಬಿ ಇಡಲು ಆಗದಷ್ಟು ಖಜಾನೆ ಲೂಟಿ ಗೆ ಕಳ್ಳರ ಭಯವಿಲ್ಲ. ನಾನು ನೀನು ಮಾತ್ರ ಜೀವಿತದ ಚಿತ್ರ ಶಾಲೆಯಲ್ಲಿ. ನೋಡು. . . ನಾನು ಎಷ್ಟು ಪೆದ್ದು ಅಂತಾ. . . ! […]

ಪ್ರೇಮ ಪತ್ರಗಳು

ಕಣ್ಣೆರಡೂ ಲವಂಗದಂತೆ…….: ಪಿ.ಎಸ್. ಅಮರದೀಪ್.

ಪ್ರೀತಿಯ ಬಿ…… ಅದೆಷ್ಟು ಹೇಳಿದರೂ ‍ನೀನು ನನ್ನನ್ನು ನಂಬುವುದಿಲ್ಲವೆಂದು ಗೊತ್ತು…. ಗೊತ್ತು ಮಾಡಿಸಲೇಬೇಕೆಂಬ ಹಠವೂ ನನಗಿಲ್ಲ. ಅದ್ಯಾವಾಗ ಧಾರವಾಡದ ಮಳೆಯಂತೆ ಇರ್ತೀಯೋ. ಒಣ ಬಿಸಿಲ ಬಳ್ಳಾರಿಯಂತಾಗುತ್ತಿಯೋ…. ತಿಳಿಯುವುದಿಲ್ಲ. ಒಮ್ಮೊಮ್ಮೆಯಂತೂ ಚಾರ್ಮಡಿ ಘಾಟಿನಲ್ಲಿ ಸದಾ ತೊಟ್ಟಿಕ್ಕುವ ಮಳೆಯ ನಡುವೆ ಮುಸುಕಿನ ಮಂಜೋ ಮಂಜು. ಹೆಂಗೇ ನಿನ್ನ ಅರ್ಥ ಮಾಡಿಕೊಳ್ಳೋದು? ಬರೀ ಸಂಜೆ, ಮುಂಜಾನೆ ಸೂರ್ಯಾನ ಫೋಟೋ ತೆಗೆದು ಹಂಚಿಕೊಳ್ಳುತ್ತಿದ್ದೆ ನಾನು. ನೀನು ಬಂದೆ ನೋಡು. ಒಳ್ಳೆಯ ಸೌಂದರ್ಯ ಪ್ರಜ್ಞೆ ಕಾಡಲು ಶುರು ಮಾಡಿದೆ. ಅಷ್ಟು ಫೋಟೋ ಹಾಕಿದರೂ ಒಂದೇ […]

ಪ್ರೇಮ ಪತ್ರಗಳು

“ಗೆಳೆಯ ನಿನ್ನ ಅದಮ್ಯ ಪ್ರೀತಿಯ ಸಾಂಗತ್ಯ ಸುಖವ ಮತ್ತೆ ಗುನುಗುತ್ತ”. .: ಡಾ. ಶ್ವೇತಾ ಬಿ.ಸಿ.

ನಲ್ಮೆಯ ದೀಪ್ˌನಮ್ಮಿಬ್ಬರ ಪ್ರೀತಿಯ ಅನುಸಂಧಾನಕ್ಕೆ ಮತ್ತೆ ಮತ್ತೆ ನೆಪವೊಡ್ಡುತ್ತ ನಿನ್ನ ಪ್ರೀತಿಯ ಬೀಜ ನನ್ನ ಮನಸ್ಸಿನ ಕನ್ನೆಲದ್ದಲ್ಲಿ ಬಿದ್ದು ಗಿಡವಾದ ಕ್ಷಣವನ್ನು ಸರಳವಾಗಿ ವಿವರಿಸಲಾಗುತ್ತಿಲ್ಲ, ಮದುವೆಯಾಗಿ ಪ್ರೀತಿಸಿದವರು ನಾವು. ನಮ್ಮ ಒಂದು ದಶಕದ ಹಾದಿಯ ದಿನಗಳು ಬರಿ ದಿನಗಳಲ್ಲˌ ಮಳೆಯ ಹನಿಗಳು. ಅದನ್ನು ನಾನ್ನಲ್ಲದೆ ಇನ್ಯಾರು ಸಂಭ್ರಮಿಸುತ್ತಾರೆ. ನನ್ನ ಬದುಕಿನ ಪ್ರತಿ ನಿಮಿಷದ ಉಲ್ಲಾಸ ನೀನುˌ ಪ್ರತಿ ದಿನ ಎದ್ದ ಕೂಡಲೆ ನನ್ನ ಮನದಲ್ಲಿ ಮೂಡುವ ಪ್ರೀತಿಯ ಗೀತೆ ನೀನುˌ ನೀನು ಜೊತೆಯಲ್ಲಿದ್ದರೆ ಪೂರ್ಣ ಎಂಬ ಭಾವ […]

ಪ್ರೇಮ ಪತ್ರಗಳು

ಖಾಲಿ ಜೇಬು ಫಕೀರನ ಪ್ರೇಮದೋಲೆ..: ಆನಂದ ವೀ ಮಾಲಗಿತ್ತಿಮಠ

ಬಹಳ ದಿನಗಳ ನಂತರ ಓಲೆ ಬರೆಯುತಿಹೆನೆಂದು ಬೇಜಾರು, ಗಾಬರಿಯಾಗಬೇಡ ಗೆಳತಿ. ನನ್ನ ಚರ್ಮ ಸುಕ್ಕುಗಟ್ಟಿದರೂ ನಿನ್ನ ಮ್ಯಾಲಿನ ಪ್ರೀತಿಗೆ ತುಕ್ಕು ಹಿಡಿಯದು. ಕಡಲು ಬತ್ತಿದ ಉದಾಹರಣೆಯುಂಟೇನು? ಹುಚ್ಚಿ..ಸಣ್ಣ ಸಣ್ಣ ಹಳ್ಳ ತೊರೆ ನದಿಗಳು ಬತ್ತಿ ಹೋಗಬಹುದು. ನನ್ನ ಪ್ರೀತಿ ಆ ಸುಂದರ ಸುವಿಶಾಲ ನೀಲ್ಗಡಲಿನಂತೆ ಕಣೆ, ಸದಾ ನಿನಗಾಗಿ ಪುಟಿಯುತ್ತಲೇ ಇರುವುದು. ಚುಮುಚುಮು ಚಳಿಯಲ್ಲಿ ನಿನ್ನ ನೆನಪಾದರೆ ಸಾಕು, ಈಗಲೂ ಬೆಚ್ಚನೆಯ ಭಾವ ಚಿಗುರೊಡೆಯುವುದು. ನನಗೆ ವಯಸ್ಸಾಗಿದೆಯೆಂದು ಮೂಗು ಮುರಿಯಬೇಡ. ನೀ ಮೂಗು ಮುರಿದಾಗಲೆಲ್ಲ ಮತ್ತಷ್ಟು ಮುದ್ದಾಗಿ […]

ಪ್ರೇಮ ಪತ್ರಗಳು

ನೀನೇ ನನ್ನವಳಾದ ಮೇಲೆ ನಿನ್ನ ಸಿಹಿ ಕಹಿಗಳು ಇನ್ನೂ ನನ್ನದೇ: ಆರ್‌ ಸುನಿಲ್‌, ತರೀಕೆರೆ

ಗೆಳತಿ ಈ ಪ್ರೀತಿಯೆಂದರೇನು. . !?ಅಕ್ಷರಶಃ ಮೂಕ ನಾ. . ! ನಿನ್ನ ನೋಡಿ ಬಂದಾಗಿನಿಂದ ನಿಜಕ್ಕೂ ಮಾತುಗಳೆಲ್ಲಾ ಕಳೆದುಹೋಗಿದ್ದವು. ಅಕ್ಷರಗಳು ಮುನಿಸಿಕೊಂಡಿದ್ದವು. ನಿನ್ನೊಲವ ದಾಳಿಯಲ್ಲಿ ನನಗಾಗ ರಕ್ಷಣೆಯೇ ಇರಲಿಲ್ಲವಲ್ಲೇ. ಮದುವೆಯೆಂದರೆ ಮಾರುದೂರ ಓಡುತ್ತಿದ್ದವನಿಗೆ ಅಯಸ್ಕಾಂತದಂತೆ ಸೆಳೆದವಳು ನೀನು. ಆದರೆ ಒಂದಂತೂ ನಿಜ ನಾನು ನಿನಗೆ ಸಂಪೂರ್ಣ ಶರಣಾಗಿಹೋಗಿದ್ದೆ. ಎಲ್ಲೋ ಏನೋ ಕಳೆದುಕೊಂಡತಿದ್ದ ನನಗೆ ಸದಾ ನಿನ್ನ ನೆನಪುಗಳೇ ನನಗೆ ಹುರುಪು ತುಂಬುತ್ತಿದ್ದವು. ಹೊಸ ಕನಸುಗಳಿಗೆ ನಾಂದಿ ಹಾಡುತಿದ್ದ್ತವು. ಅದೇನೋ ಹೊಸ ಹುರುಪು ಹೊಸ ಮುದ. . […]

ಪ್ರೇಮ ಪತ್ರಗಳು

ನನ್ನ ಅಂತರಾಳಕ್ಕೆ ನೀನಿಳಿದು, ನಾನು ನಿನ್ನಂತರಾಳವಾ ಹೊಕ್ಕು: ಶ್ರೀ ಕೊ ಯ

ನನ್ನ ಪ್ರಿಯೆ,ಮುಂಬರುವ ‘ಪ್ರೇಮಿಗಳ ದಿನ’ ಕ್ಕೆ ನನ್ನ ಪ್ರೀತಿಯ ಶುಭಾಶಯಗಳು. ನೀನು ಸಾಗರದಾಚೆಯ ಆ ದೇಶದಲ್ಲಿ ಇದ್ದರೆ ನಾನು ಇಲ್ಲೇ, ನಮ್ಮ ತಾಯ್ನಾಡಿನಲ್ಲಿ ಇರುವ ಪರಿಸ್ಥಿತಿ ನಮಗಿಂದು. ಅದರ ಕಾರಣಗಳು ಇಲ್ಲಿ ಅಪ್ರಸ್ತುತ. ಪ್ರಿಯೆ, ನಿನಗೆ ನೆನಪಿದೆಯೇ ನಾವು ಕಳೆದ ವರುಷ ಕೊಂಡಾಡಿದ ಆ ‘ಪ್ರೇಮಿಗಳ ದಿನ’. ಇಗೋ ಆ ನೆನಪಿನೊಡನೆ ಮತ್ತಷ್ಟು ನೆನಪುಗಳ ಸರಮಾಲೆ ನಿನ್ನ ಕೊರಳಿಗೆ. ನಿನ್ನನ್ನು ಬಣ್ಣಿಸಲು ಹೊರಟರೆ ಬಹುಶಃ ನಿಘಂಟಿನ ಗುಣವಾಚಕಗಳೆಲ್ಲವೂ ಖಾಲಿಯಾಗಬಹುದೇನೋ ಎಂಬ ಗುಮಾನಿ ನನ್ನನ್ನು ಕಾಡುತ್ತಿದೆ ಪ್ರಿಯೆ. ಹೀಗೆ, […]

ಪ್ರೇಮ ಪತ್ರಗಳು

ಒಲವಿನ ಹೋಂ-ಕ್ವಾರಂಟೈನು!: ಸಂತೆಬೆನ್ನೂರು ಫೈಜ್ನಟ್ರಾಜ್

ಗಂಧ ಲೇಪಿತ ಸುರಭಿ ಘಮವಾಗಿ ಮನ ಮನ ವ್ಯಾಪಿಸಿದವಳೇ…ಒಲವೆಂದರೆ ಮುಳ್ಳುಎದೆಗೆ ಚುಚ್ಚಿದರೂ ಹಿತ ಹಿತಸುರಿದ ರಕುತ ಲೆಕ್ಕವಿಲ್ಲ ಸಾಕಿಮದಿರೆಯ ಬಟ್ಟಲ ತುಂ-ತುಂಬಿ ಕೊಡುಇಷ್ಟು ಗಾಯಕ್ಕೆ, ಮತ್ತಿಷ್ಟು ಒಲವ ಉತ್ಪಾದಿಸುವ ಹೃದಯಗೂಡಿಗೆ ಸುರಿದು ನಗುವೆ! ಅದ್ಯಾರೋ ಬರೆದ ಪದ್ಯವಿದು ಅದೆಷ್ಟು ಬಾರಿ ಓದಿಕೊಂಡೆನೋ ಸಖಿ.. ..ಮುಳ್ಳ ಒಲವೇ ನಮ್ಮದು, ಚುಚ್ಚಿದರೇನಂತೆ ಹಿತ ಇದೆಯೆಂದ ಮೇಲೆ ಆಹಾ ಆನಂದವೇ ಸರಿ! ವಿರಹಕ್ಕೂ ಪ್ರೇಮ ಶಾಸ್ತ್ರದಲ್ಲಿ ಒಂದು ಒಲವ ಚೌಕಟ್ಟಿದೆ. ಇದ್ಯಾವುದೋ ವಿಚಿತ್ರ ಹೆಸರಿನ ಕಾಯಿಲೆ ಬಂದು ನೋಡು, ಬರೋಬ್ಬರಿ ಹತ್ತು […]

ಪ್ರೇಮ ಪತ್ರಗಳು

ನಾನು ಭಾವನೆಗಳನ್ನು ಬಚ್ಚಿಟ್ಟ ಮಹಾ ಮೌನಿ..!: ಆಶಾ ಆರ್ ಸುರಿಗೇನಹಳ್ಳಿ

ಓ.‌. ನನ್ನ ಹೃದಯ ನಿವಾಸಿಯೇ..! ಹೇ, ಹೃದಯವೇ..! ನೀ ನನ್ನ ಹೃದಯದಲಿ ನೆಲೆಸಿ ಹಲವು ವರ್ಷಗಳೇ ಸರಿದಿವೆ.. ಇನ್ನಷ್ಟು ವಸಂತಗಳು ಕಳೆದರೂ ಅದೇ ಪ್ರೀತಿ, ಮತ್ತಷ್ಟು ಪಜೀತಿ…! ಪ್ರೀತಿ ಓಕೆ ಪಜೀತಿ ಯಾಕೆ ಅಂತ ಯೋಚ್ನೆ ಮಾಡ್ತಿದ್ದೀಯಾ? ಒಂದು ತಗೊಂಡ್ರೆ ಮತ್ತೊಂದು ಫ್ರೀ ಅನ್ನೋ ಹಾಗೆ ಈ ಪ್ರೇಮಯಾನದಲಿ ಬರೀ ಸುಖವೇ ತುಂಬಿರೊಲ್ಲ ; ರೊಮ್ಯಾನ್ಸ್, ಆತ್ಮೀಯತೆ, ಒಂದಷ್ಟು ಕಾಳಜಿ, ಲೆಕ್ಕಕ್ಕೆ ಸಿಗದಷ್ಟು ಕೋಳಿ ಜಗಳಗಳು, ಕುಸಿದು ಬೀಳುವಂತಹ ಕ್ಲಿಷ್ಟ ಪರಿಸ್ಥಿತಿಗಳು ಎಲ್ಲದರ ಸಮ್ಮಿಶ್ರಣವೀ ಒಲುಮೆಯ ದಾರಿ. […]

ಪ್ರೇಮ ಪತ್ರಗಳು

ನಾನಂತೂ ಆ ಕ್ಷಣ ಯಾವಾಗ ಬರುತ್ತೋ ಅಂತಾ ಕಾಯ್ತಾ ಇದ್ದೀನಿ: ಪರಮೇಶ್ವರಪ್ಪ ಕುದರಿ

ಪ್ರೀತಿಯ ವಿಜಯಾ, ನಾನಿಲ್ಲಿ ಕ್ಷೇಮ, ನಿನ್ನ ಕ್ಷೇಮದ ಬಗ್ಗೆ ತಿಳಿಯುವ ಹಂಬಲ. ಹೇಗಿದ್ದಿಯಾ ವಿಜು? ಅಂದು ನೀ ನನ್ನಿಂದ ಅಗಲಿದ ಮೇಲೆ ತುಂಬಾ ಹೊತ್ತು ನಿನ್ನದೇ ಧ್ಯಾನ – ನಿನದೇ ನೆನಪು ! ನನ್ನ ಜೀವನದ ಕೊನೆಯವರೆಗೂ ನಿನ್ನನ್ನು ನನ್ನ ಬಾಳ ಸಂಗಾತಿಯಾಗಿ ಪಡೆಯುವ ಪರಮ ಇಚ್ಚೆ ನನಗೆ. ನಮ್ಮಿಬ್ಬರ ಪ್ರೇಮದ ಹಾದಿಗೆ ಅದ್ಯಾರೇ ಅಡ್ಡ ಬಂದರೂ, ನಾನು ಜಯಿಸಿ ನಿನ್ನನ್ನು ಪಡೆದೇ ಪಡೆಯುತ್ತೆನೆ ಎಂಬ ಬಲವಾದ ನಂಬಿಕೆ ನನಗಿದೆ ಚಿನ್ನಾ. ನೀನು ಬಡವಿ ನಾನು ಶ್ರೀಮಂತ […]

ಪ್ರೇಮ ಪತ್ರಗಳು

ಮಳೆ ಊರಿನ ಹುಡುಗಿ…: ವೃಶ್ಚಿಕ ಮುನಿ

ನೆನಪಾಗುತ್ತೀಯ ಎಂದು ಪತ್ರ ಬರೆಯುತ್ತಿಲ್ಲ, ಪತ್ರ ಬರೆಯುತ್ತಿರುವುದು ನೆಪವಷ್ಟೆ ನೆನಪಿಗೆ ಉತ್ತರಿಸಲು.ಗೆ..ಮಳೆ ಊರಿನ ಹುಡುಗಿಗೆರಥ ಬೀದಿಯ ಕೊನೆಯ ತಿರುವುಕೆಂಪು ಹೆಂಚಿನ ಮನೆಫೋಸ್ಟ :ಮಳೆಊರು ಇಂದ..ಅಲೆಮಾರಿಯ ನೆಲೆಯಿಂದಖಾಸಾಕೋಣೆಯ ಬಿಸಿಯುಸಿರುಶಾಯಿಯಲ್ಲಿ. ಕ್ಷೇಮ ವಿಚಾರವಾಗಿ ಬರೆದ ಸಾಲುಗಳಲ್ಲಿ ಸಾಕಾಗುವಷ್ಟು ನೆನಪುಗಳಿವೆ. ಜಗದ ಯಾವ ಖಜಾನೆಯಲ್ಲಿ ತುಂಬಿ ಇಡಲು ಆಗದಷ್ಟು ಖಜಾನೆ ಲೂಟಿ ಗೆ ಕಳ್ಳರ ಭಯವಿಲ್ಲ. ನಾನು ನೀನು ಮಾತ್ರ ಜೀವಿತದ ಚಿತ್ರ ಶಾಲೆಯಲ್ಲಿ . ನೋಡು… ನಾನು ಎಷ್ಟು ಪೆದ್ದು ಅಂತಾ …! ಸರಿಯಾದ ಒಕ್ಕಣಿಕ್ಕೆಯನ್ನು ಕೊಟ್ಟು ಬರೆಯಲು ಆಗುವುದಿಲ್ಲ […]

ಪ್ರೇಮ ಪತ್ರಗಳು

ನಿನ್ನ ಕೆಳತುಟಿಯ ಪಕ್ಕ ಇರುವ ಮಚ್ಚೆಯ ಮೇಲಾಣೆ..: ಡಾ. ಪ್ರೀತಿ. ಕೆ. ಎ

ಬೆಳದಿಂಗಳ ನಗುವಿನ ಹುಡುಗಿಯೇ, ಮೊನ್ನೆ ನಿನ್ನನ್ನು ಭೇಟಿಯಾದ ನಂತರ ನಾನು ನಾನಾಗಿ ಉಳಿದಿಲ್ಲ. ನಿನ್ನ ನೆನಪುಗಳನ್ನು ಎಷ್ಟೇ ಕೊಡವಿಕೊಂಡು ಎದ್ದರೂ ಮತ್ತೆ ಮತ್ತೆ ನಿನ್ನೆಡೆಗೇ ವಾಲುತ್ತಿದ್ದೇನೆ. ಮೊದಲಿಗೆ ಇದು ನಿನ್ನೆಡೆಗಿನ ಆಕರ್ಷಣೆಯಷ್ಟೇ ಅಂದುಕೊಂಡಿದ್ದೆ. ಹೆಚ್ಚೆಂದರೆ ಯಾವುದೋ ಗಳಿಗೆಯಲ್ಲಿ ಹುಟ್ಟಿ ಕೆಲವು ದಿನಗಳವರೆಗೆ ಕಾಡಬಹುದಾದ ಮೋಹವೆಂದುಕೊಂಡೆ. ಉಹುಂ.. ನನ್ನೆಣಿಕೆ ತಪ್ಪಾಯಿತು. ನೀನು ನನ್ನನ್ನು ಆವರಿಸಿಕೊಂಡ ಪರಿಗೆ ಬೆರಗಾಗುತ್ತಿರುವಾಗಲೇ ನಿನ್ನ ನೆನಪುಗಳ ಬಂಧದಿಂದ ಬಿಡಿಸಿಕೊಳ್ಳಲು ಹೆಣಗಾಡುತ್ತಿದ್ದೇನೆ. ಯಾರೋ ಗೀಚಿದ ಕವಿತೆಯ ಸಾಲುಗಳಲ್ಲಿ, ಓದಲು ಕೈಗೆತ್ತಿಕೊಂಡ ಕಥೆಯಲ್ಲಿ, ರಫಿಯ ಸಂಗೀತದ ಅಮಲಿನಲ್ಲಿ… […]

ಪ್ರೇಮ ಪತ್ರಗಳು

ನನ್ನ ಪ್ರೀತಿಯೆಂಬ ನಿಷ್ಕಲ್ಮಶ ತೇರಿಗೆ…: ಕಾವ್ಯ ಎಸ್.‌

ನನ್ನ ಆತ್ಮದಂಥವನೇ……. ನಾ ನಿನ್ನೊಳಗಿನ ಅಂತರಾತ್ಮದಲ್ಲಿ ಹುದುಗಲು ಈ ಜನಮದಲ್ಲಿ ಸಾಧ್ಯವಾಗಲಿಲ್ಲ, ಕ್ಷಮಿಸೆಂದು ಕೇಳಲು ಒಳಮನಸ್ಸಿನ ಮುಖವಿಲ್ಲ. ಅರಿವಿರದ ಅವಧಿಯಲ್ಲಿ ನೀ ನನ್ನೊಳಗಿದ್ದಾಗ ನಾ ಅದನ್ನು ಅರಿಯದೇ ಅನಾಥಳಾದೆ. ನೀ ನನ್ನೊಳಗೆ ಅಂತರಂಗ ಬೆಳಗುವ ಆತ್ಮ ಶಕ್ತಿ. ನೀ ಪ್ರತಿಕ್ಷಣದಲ್ಲೂ ಆವಿರ್ಭವಿಸುವ ಬೆಳಕು. ನಿನ್ನ ಬೆಳಕಲ್ಲಿ ಹುಟ್ಟಿದ ಒಂದು ಪುಟ್ಟ ಕಿಡಿ ನಾನು. ನಿನ್ನನ್ನು ನಾ ಅಪ್ಪಿಯಾಗಿ ನನ್ನ ಮನಸ್ಸಿನಲ್ಲಿ ನಿನ್ನಂತೆ ಹಸಿರಿನ ಜಾಗ ಕೊಟ್ಟಿದ್ದೇನೆ. ಇಂದಿನ ಆಗು -ಹೋಗುಗಳ ವಾಸ್ತವಿಕತೆಯ ನೆಲೆಗಟ್ಟನ್ನು ಅರೆಕ್ಷಣ ಮರೆವಿನ ಗುಳಿಗೆಯಂತೆ […]

ಪ್ರೇಮ ಪತ್ರಗಳು

ಬದುಕು ಬರೀ ಇವೇ ಅಲ್ಲ ಎಂದು ನಾ ಬಲ್ಲೆ: ಸಹನಾ ಪ್ರಸಾದ್

ನನ್ನ ನಲ್ಲ, ಪ್ರಿಯತಮ, ಇನಿಯ, ಪ್ರಾಣಸ್ನೇಹಿತ, ಗೆಳೆಯ, ನನ್ನೊಲವೇ, ಜೀವವೇ, ಸ್ಪೂರ್ತಿಯೇ, ಮನದಲ್ಲಿ ಭದ್ರವಾಗಿ ತಳವೂರಿರುವ ಮೂರ್ತಿಯೇ…ಲವ್ ಯೂ…ತುಂಬಾ ತುಂಬಾ… ಉಮ್ಮ್…ನಿನ್ನ ಪ್ರೀತಿಯಲ್ಲಿ ಕೊಚ್ಚಿ ಹೋಗುತ್ತಿರುವ ನಿಮ್ಮ ಮನದನ್ನೆಯ ಪತ್ರ ಬರೀ ಪದಗಳ ಜೋಡನೆಯಲ್ಲ. ಹೃದಯದ ತಂತಿಗಳ ಮಿಡಿತ, ಧಮನಿಗಳಲ್ಲಿ ಸೇರಿ ಹೋಗಿರುವ ನಿಮ್ಮ ಪ್ರೀತಿಯ ತುಡಿತ,ಮನಸ್ಸಿನಲ್ಲಿ ಉಕ್ಕುತ್ತಿರುವ ಭಾವೆನೆಗಳನ್ನು ಪದಪುಂಜದಲ್ಲಿ ಹಿಡಿಯಲು ಮಾಡುತ್ತಿರುವ ಪ್ರಯತ್ನ! ಜೀವನದ ಸೆಲೆ ನೀವು, ಆಮ್ಲಜನಕದ ತರಹ ಅತ್ಯಾವಶ್ಯಕ ನನಗೆ. ನಿಮ್ಮ ಇರುವಿಕೆ ಬಹಳ ಮುಖ್ಯ. ಎದೆಬಡಿತ ನಿಮ್ಮದೇ ರಾಗ, ನಿಮ್ಮದೇ […]

ಪ್ರೇಮ ಪತ್ರಗಳು

ನಿನ್ನ ಕಣ್ಣುಗಳಲ್ಲಿನ ಉತ್ಸಾಹದ ಜಲಪಾತವ ಕಾಣುವಾಸೆಯೆನಗೆ: ಕೆ. ಎನ್‌ ಶ್ರೀವಲ್ಲಿ

ನನ್ನೊಲವಿನ ಇನಿಯಾ, ಸವಿನೆನಪೆಂಬ ರೇಷಿಮೆ ದಾರದಿಂದ ಕನಸೆಂಬ ಹೊನ್ನಿನ ಬಟ್ಟೆಯ ನೇಯ್ದಂತೆ ನನ್ನ ಮನದಲಿ ನಿನ್ನದೇ ರೂಪ ಅಚ್ಚೊತ್ತಿದೆ. ಪಿಸುಮಾತಿನ ಸಮಾಗಮದ ಕಲೆಯನ್ನು ನನ್ನಲ್ಲಿ ಅರಳಿಸಿದ್ದು ನೀನಲ್ಲವೆ. ನನ್ನ ಕಡೆಗಣ್ಣಿನ ಮಿಂಚಿನ ನೋಟ, ಚೆಂದುಟಿಯ ಮುಗುಳುನಗೆ, ಕಿರುಬೆರಳ ಸ್ಪರ್ಶ, ನನ್ನ ಮನದ ಭಾವನೆಯನ್ನು ನಿನಗೆ ತಿಳಿಸಿಲ್ಲವೆ. ನನ್ನ ಅನಿಸಿಕೆಗಳು ನಿನಗೇಕೆ ಅರಿವಾಗಲೇ ಇಲ್ಲ. ಮೋಡದ ಮುಸುಕಿನಲಿ ಪೂರ್ಣಚಂದ್ರ ಮರೆಯಾದ ಆ ಬೆಳದಿಂಗಳ ರಾತ್ರಿಯಲಿ, ನಿನ್ನ ಕಣ್ಣೋಟದ ಬೆಳ್ಳಿ ಬೆಳಕಿಗೆ ನಾ ಸೋತು ಕಣ್ಮುಚ್ಚಿದ್ದು ನಿನಗೇಕೆ ಅರಿವಾಗಲೇ ಇಲ್ಲ […]

ಪ್ರೇಮ ಪತ್ರಗಳು

ಏನಂತ ಸಂಭೋದಿಸಲಿ ನಾ ನಿನ್ನ?: ಮಧು ಅಕ್ಷರಿ

ಏನಂತ ಸಂಭೋದಿಸಲಿ ನಾ ನಿನ್ನ? ಇದೇ ಪ್ರಶ್ನೆಯೊಂದಿಗೆ ಅದೆಷ್ಟು ಪತ್ರಗಳು ನಿನ್ನ ಮನೆಯಂಗಳವನ್ನಿರಲಿ, ಅಂಚೆಪೆಟ್ಟಿಗೆಯ ಮುಖವನ್ನೂ ಕಾಣದೆ, ಹರಿದು ಬರಿದಾಗಿ ಕಸದ ಬುಟ್ಟಿಯಲ್ಲಿ ಮೋಕ್ಷ ಪಡೆದಿವೆಯೋ? ಸಿಕ್ಕಿಬೀಳುವ ಭಯಕ್ಕೆ ಹೆದರಿ, ಅವಶೇಷವನ್ನೂ ಬಿಡದಂತೆ ಸುಟ್ಟು ಸಂಸ್ಕಾರ ಮಾಡಿದ್ದೂ ಆಯ್ತು. ಅಲ್ಲಿಗೆ ಎದೆಯಲ್ಲೋ, ತಲೆಯಲ್ಲೋ, ಅಸಲು ಸರಿಯಾದ ವಿಳಾಸವಿಲ್ಲದೇ, ನನ್ನಲ್ಲಿ ಉದಯಿಸಿದ ನವಿರಾದ ಭಾವನೆಗಳಿಗೆ ಕಾರಣನಾದ ನಿನ್ನ ಪರಿಚಯಿಸುವ ಮೊದಲೇ ಸಂಸ್ಕಾರವಾದದ್ದಾಯಿತು. ಮತ್ತೆ ಕುಳಿತಿರುವೆ ಉಕ್ಕಿಬರುವ ಭಾವಗಳ‌ ಅದುಮಿಡಲಾಗದೇ. ನಿನ್ನೆದೆಗೆ ತಲುಪಿಸಿ ನಿರುಮ್ಮಳವಾಗಿ ಬಿಡುವ ಹಂಬಲದಿಂದ. ವಾಟ್ಸಪ್, ಟಿಂಡರ್, […]

ಪ್ರೇಮ ಪತ್ರಗಳು

ಮಾತಾಡು ಓ ಗೆಳೆಯಾ… ಮಾತಾಡು: ಸಹನಾ ಕಾಂತಬೈಲು

ಮಾತಾಡು ಓ ಗೆಳೆಯಾ… ಮಾತಾಡು ಇದು ನನ್ನ ಮೊದಲ ಪ್ರೇಮ ಪತ್ರ. ನೀನು ನನ್ನ ಜೀವದ ಜೀವವಾದರೂ ನಾನು ನಿನಗೆ ಇದುವರೆಗೆ ಒಂದೂ ಪತ್ರ ಬರೆಯಲಿಲ್ಲ. ಬರೆಯುವ ಅಗತ್ಯವೇ ಬಿದ್ದಿರಲಿಲ್ಲ. ಏಕೆ ಗೊತ್ತ? ನೀನೇ ಆಗಾಗ ನನಗೆ ಫೋನ್ ಮಾಡುತ್ತಿದ್ದೆ. ಮೆಸ್ಸೇಜ್ ಮಾಡುತ್ತಿದ್ದೆ ಮತ್ತು ನನ್ನನ್ನು ತುಂ…….ಬ…… ಪ್ರೀತಿ ಮಾಡುತ್ತಿದ್ದೆ. ನಿನ್ನ ಪ್ರೇಮದಲ್ಲಿ ಮೀಯುತ್ತಿದ್ದ ನನಗೆ ಪತ್ರ ಬರೆಯುವ ಅವಶ್ಯಕತೆಯೇ ಬರಲಿಲ್ಲ. ಈ ವರ್ಷದ ಮುನ್ನಾ ದಿನ ನನಗಿಂತ ಮೊದಲೇ ನೀನು ನನಗೆ ಹೊಸ ವರ್ಷದ ಶುಭಾಶಯ […]

ಪ್ರೇಮ ಪತ್ರಗಳು

ನಾನು ನಿನ್ನ ಹುಚ್ಚು ಪ್ರೇಮಿಯೇ ಆದರೆ…: ಜಗದೀಶ ಸಂ.ಗೊರೋಬಾಳ

ಪ್ರೀತಿಯ ಚಂದ್ರಕಲಾ, ಹುಡುಕುತ್ತಾ ಹೋದ ನನ್ನಂತವನಿಗೆ ನಿನ್ನಂತ ಚೆಲುವೆ ಸಿಕ್ಕಿರಲಿಲ್ಲ.ಎಷ್ಟು ಹುಡುಕಿದರೂ ನನಗೆ ನಿನ್ನಂತ ರೂಪವತಿ ದರ್ಶನವಾಗಿರಲಿಲ್ಲ.ಹೃದಯದ ಬಡಿತ ನಾಟ್ಯವಾಡಿದೆ ಪ್ರೇಮದ ಮೊಗ್ಗು ಚಿಗುರಿದೆಕನಸೊಂದ ಕಟ್ಟಿರುವೆ ಕೊಲ್ಲದಿರು ಗೆಳತಿ ಒಲವ ಸುಧೆಯನು ಹರಿಸು ಬಾ. ನಿನ್ನ ಕಣ್ಣೋಟದ ಬಾಣ ನನಗೆ ತಾಕಿದಾಗಿನಿಂದ ನಾನು ನಿನ್ನ ಸೌಂದರ್ಯವೆಂಬ ಸವಿಯನ್ನು ಸವಿಯುತ್ತಾ ಹುಚ್ಚನಂತಾಗಿದ್ದೇನೆ. ನಿನ್ನ ಬೊಗಸೆ ಕಂಗಳ ಸೌಂದರ್ಯಕ್ಕೆ ಬೇರಿಲ್ಲ ಕಣೆ ಸಾಟಿ. ನನ್ನ ಹೃದಯ ಗೆದ್ದ ಚೆಂದದ ಚೆಲುವೆ ನೀನು. ಸಾವಿರ ಹೂಗಳ ಚೆಲುವು ನಿನ್ನ ಸೌದರ್ಯದ ಮುಂದೆ […]

ಪ್ರೇಮ ಪತ್ರಗಳು

ಪುಟ್ಟ ಕಾಫಿ ಕಪ್ ನಲ್ಲೂ ಕಡಲಷ್ಟು ಸ್ವಾದವಿದೆ: ಕಿರಣ ದೇಸಾಯಿ

ನನ್ನೊಲವಿಗೆ….ಏನೆಂದು ಸಂಬೋಧಿಸಲಿ….? ಜಾನು, ಡಿಯರ್, ಹೃದಯದ ಒಡತಿ.. ಮುದ್ದು ಗೆಳತಿ.. ಪ್ರೇಮಪತ್ರಕೆ ಒಕ್ಕಣೆ ಬೇಕೆ ? ಒಲವಿದ್ದರಷ್ಟೆ ಸಾಕಲ್ಲವೇ.. ? ಹೌದು ಶಾಲೆಯಲ್ಲಿ ಪತ್ರಲೇಖನಗಳ ಕಲಿಸುತ್ತಾರೆ ಅದಕೊಂದಿಷ್ಟು ನಿಯಮಗಳು ಅದಕ್ಕೆ ಮಾರ್ಕ್ಸು ಪ್ರೇಮಪತ್ರಕ್ಕೆನು ನಿಯಮವಿಲ್ಲ ಒಲವು ತುಂಬಿ ಬರೆದ ಪದಗಳೆ ಇಲ್ಲಿ ಅಂಕವನ್ನು ನಿರ್ಧರಿಸುತ್ತವೆ…ಆ ಅಂಕ ಕೊಡುವ “ಸ್ಟ್ರಿಕ್ಟ ಟೀಚರ್” ನನಗಿಗ.. ನನ್ನೊಲವಿನ ಹೋಮವರ್ಕು ನಿನ್ನ ಮುಂದೆ ಹಿಡಿದು ನಿಂತಿರುವೆ ನಿನ್ನ ವಿಧೇಯ ವಿದ್ಯಾರ್ಥಿಯಂತೆ.. ಓದು ಅಂಕನೀಡು… ಹಾಹಾ..ವಿಷಯಕ್ಕೆ ಬರ್ತಿನಿ… ಬೇಸಿಗೆಯ ಬಿಸಿಲಿಗೆ ಮಾಡಿಟ್ಟ ಅಟ್ಟದ ಮೇಲೆ […]

ಪ್ರೇಮ ಪತ್ರಗಳು

ವಂದನೆಗಳು ನಿನಗೆ ವಂದನೆಗಳು: ಲಕ್ಷ್ಮೀಬಾಯಿ ಅಪ್ಪನಗೌಡ ಪಾಟೀಲ

ನಿನ್ನ ಹೃದಯದರಸಿಯ ವಂದನೆಗಳು ನಾನು ನಿನ್ನ ಕುರಿತಾಗಿ ಬರೆದದ್ದು, ಏಳನೇ ತರಗತಿಯಲ್ಲಿ ಓದುತ್ತಿದ್ದಾಗ. ವಯಸ್ಸು ಅಂತಹದ್ದಲ್ಲ ಮನಸ್ಸು ಬಯಸಿರಲಿಲ್ಲ, ಬರೆದ ಸಾಲುಗಳು ನನಗೆ ವಿಚಿತ್ರವೂ, ಬರೆದವಳು ನಾನೇನ? ಎನ್ನುವಂತಿದ್ದವು. ಯಾರ ಕಣ್ಣಿಗೂ ಬೀಳ ಬಾರದು ಎಂದು ಮುಚ್ಚಿ ಮುಚ್ಚಿ ಇಟ್ಟರೂ, ಬರೆದ ಸಾಲುಗಳು ತಾವೇ ತೆರೆದು ಕೊಳ್ಳು ತ್ತಿವೆ ಎನ್ನುವಂತೆ ಭಾಸವಾಗುತ್ತಿತ್ತು. ಗೆಳತಿಯರು ಸುಮ್ಮನೆ ಇದ್ದಾರೆ, ಮುಚ್ಚಿ ಇಟ್ಟದ್ದನ್ನು ಕೆಣಕಿ ತೆಗೆಯುವ ಗಟ್ಟಿಗಿತ್ತಿಯರು. ತೆಗೆದು ಓದಿ ನನ್ನನ್ನು ನಿನ್ನನ್ನು ಹೋಲಿಕೆ ಮಾಡಿ ಜೋಡಿ ಮಾಡಿಬಿಟ್ಟರು. ಅಷ್ಟಕ್ಕೂ ನಿನ್ನನ್ನು […]

ಪ್ರೇಮ ಪತ್ರಗಳು

ಒಲವ ಮುಗಿಲೊಳಗೆ ಪ್ರೀತಿ ನುಡಿದ ಕಾವ್ಯ: ಅನಿತಾ ಪಿ ತಾಕೊಡೆ

ಪ್ರೀತಿಯ ಪುಟ್ಟ… ಬದುಕಿನ ಭಾವಗತಿಯಲಿ ಬಿಡದೆ ಕಾಡುವವನ ಎಂದು ಕಾಣುವೆನೆಂದು ಕಾದುಕೊಂಡಿರುವಾಗ ಅಂದು ಮೊದಲ ಬಾರಿ ನೀನು ಬಳಿಸಾರಿ ಬಂದೆ. ಹಿಂದೆಂದೂ ಮೂಡದ ಒಲವೊಂದು ಅನುವಾದಾಗ, ನಿನ್ನ ಹಿರಿತನವನು ಮರೆತು ನನ್ನ ಮಗುತನವನೇ ಪೆÇರೆದು ಇತಿಮಿತಿಯ ರೇಖೆಗಳಿಂದ ಮುಕ್ತವಾಗಿ ಹಕ್ಕಿ ಹಾಡನು ಮನಬಿಚ್ಚಿ ಹಾಡಿದಾಗಲೆಲ್ಲಾ ನೀನು ಕೇಳುತ್ತಿದ್ದುದೊಂದೇ ‘ಎಲೈ ಮುದ್ದು ಬಂಗಾರಿ ನಾನೆಂದರೆ ನಿನಗ್ಯಾಕೆ ಇಷ್ಟೊಂದು ಪ್ರೀತಿ…’ ಆಗ…ನನ್ನಾಲಯದಲ್ಲಿ ನೀನು ಇನ್ನಷ್ಟು ಪ್ರಕಾಶವಾಗುತ್ತಿದ್ದೆ. ಬೆಳ್ಳನೆ ಹೊಳಪು ಕೇಸರಿ ಕದಪಿನಲಿ ರಂಗು ಮೂಡಿ ನಿನ್ನಿರುವಿನಲಿ ಇನಿತಿನಿತಾಗಿ ಕರಗುತ್ತಲೇ ‘ನಾನೆಂದಿಗೂ […]

ಪ್ರೇಮ ಪತ್ರಗಳು

ಒಂದಷ್ಟು ವೈನ್ ಕುಡಿದು ಪಕ್ಕಾ ಕುಡುಕರ ಹಾಗೆ ಅಳಬೇಕು: ಪುನರ್ವಸು

ಮುಗಿಲೂರ ದೊರೆ ಮಗನಿಗೆ. ಓಯ್ ಚಲ್ವಾ, ಹೇಗಿದೀಯಾ, ನಿನ್ನೆ ಬರ್ದಿದ್ದ ಪತ್ರ ಇಡೋಕೆ ಅಂತ ನಿನ್ ಮನೆಗೆ ಹೋದಾಗ, ನೀನು ನಮ್ಮೂರ ಸರಹದ್ದಿನಲ್ಲೆಲ್ಲೋ ಅದ್ಯಾವುದೋ ಕಿವುಡ ದೇವರ ಜಾತ್ರೆಯೊಳಗೆ, ಮೂಕ ಮೈಕಿಗೆ ದನಿಯಾಗಿ, “ದೇವತೆ ನಿನ್ನ ನೋಡಲು ಪ್ರತಿ ಕ್ಷಣವೂ ಕಾಯುವೆನು,ಅರೆ ಕ್ಷಣ ನೀ ಸಿಕ್ಕರೂ ನಾ ನಗುತಲೇ ಸಾಯುವೆನು.” ಅಂತ ಹಾಡ್ತಿದ್ದೆ ನೋಡು, ಜೀವ ನಿನ್ನ ದನಿಯ ದಾರಿಯಗುಂಟ ಸುಳಿಯಾಗಿ ಹರಿದು ಹೋದಂಗಾಯ್ತು, ಆ ನಡುರಾತ್ರಿ ಹನ್ನೆರಡರಲ್ಲೂ ಅಷ್ಟೆಲ್ಲ ಜೀವದ ತುಣುಕಿನೊಳಗೆ ಸೇರಿದ ಗುಂಗೀ ಹುಳದ […]

ಪ್ರೇಮ ಪತ್ರಗಳು

ತಿಳಿದೋ ತಿಳಿಯದೆಯೋ ಶರಣಾಗಿರುವೆ ಇಂದು ನಾನು ನಿನಗೆ: ಗಾಯತ್ರಿ ಭಟ್‌, ಶಿವಮೊಗ್ಗ

ನನ್ನೊಲವ ಪತ್ರ, ಹೌದು ನನಗೆ ಗೊತ್ತು. ಪ್ರೇಮ ಪತ್ರ ಬರೆಯಬೇಕಿಲ್ಲವೆಂದು ನಮ್ಮ ಪ್ರೀತಿಗೆ.ನಿನಗೂ ತಿಳಿದಿದೆ ನನ್ನ ಬಾಳ ಪಯಣದಲ್ಲಿ ನಿನ್ನ ನಾನು ಪ್ರೇಮಿಯಾಗಿ ಕಂಡೇ ಇಲ್ಲ. ತಿಳಿದಿಲ್ಲ ಅದು ಹೇಗೆ ಪ್ರೇಮಾಂಕುರವಾಗಿದೆ ಹಾಗೂ ಅಂದೆಂದಾಯಿತೆಂದು ? ಪ್ರೀತಿಯಿರುವುದಂತೂ ಸತ್ಯವೇ, ಅದಕ್ಕಾಗಿಯೇ ಮನದ ಲಹರಿಯನ್ನೆಲ್ಲಾ ಅಕ್ಷರಗಳಲ್ಲಿ ಬಿತ್ತಿಡುವ ಮನಸ್ಸಾಗಿದೆ ಯಾಕೋ ಇಂದು. ನನ್ನ ಮನದಂಗಳದ ಮಾತುಗಳನ್ನೆಲ್ಲಾ ನಿನ್ನ ಮನಸ್ಸೊಳಗೆ ಬಿತ್ತಿ ಅದಕ್ಕೊಂದು ಪ್ರೀತಿರೂಪಕ ಕೊಡುತ್ತಿರುವೆ. ಏನೆಂದು ಕರೆಯಲಿ ನಿನ್ನ ಗೆಳೆಯ, ಇನಿಯ ಇವೆಲ್ಲಾ ಯಾವುವೂ ಸರಿಹೊಂದುತ್ತಿಲ್ಲ. ಯಾರೂ ಇರದ […]

ಪ್ರೇಮ ಪತ್ರಗಳು

“ನನ್ನೊಲವಿಗೊಂದು ಒಲವಿನ ಓಲೆ.”: ವರದೇಂದ್ರ ಕೆ.

ನನ್ನ ನೆಚ್ಚಿನ, ನಲ್ಮೆಯ, ಪ್ರೀತಿಯ ಮುದ್ದು ಮಖದ ಗೆಳತಿ. ಸದಾ ನಗುತ್ತಲೇ ಇರುವ ಸುಮದೇವತೆ. ಹೇಗಿದ್ದೀಯಾ? . ನಿನ್ನನ್ನು ನಿತ್ಯವೂ ನನ್ನ ಮನದ ದೇಗುಲದಲ್ಲಿ ಪ್ರೇಮದಭಿಷೇಕ ಮಾಡಿ ಪೂಜಿಸುತ್ತ, ನಾನು ಪ್ರೇಮಭಕ್ತನೇ ಆಗಿಬಿಟ್ಟಿದ್ದೇನೆ. ಸದ್ದಿಲ್ಲದೇ ಶುರುವಾದ ಈ ಪ್ರೇಮಕ್ಕೆ ನೀನೇ ಸ್ಪೂರ್ತಿ. ಅದಕ್ಕೆ ಅನುರಾಗದ ಜೇನು ಹರಿಸಿ ಪೋಷಿಸಿ ಗಗನದಷ್ಟು ಪ್ರೇಮವನ್ನು ಬೆಳೆಸೆದವಳು ನೀನು. ಅದ್ಹೇಗೆ ನಿನ್ನನ್ನು ಮೋಹಿಸಿದೆನೋ ನಂಗೇ ಗೊತ್ತಿಲ್ಲ‌. ಮುದ್ದು, ನಿನ್ನ ಅಂದಕ್ಕೆ ಮರುಳಾಗಿ ನಿನ್ನ ಹಿಂದೆ ಬಿದ್ದು; ಪ್ರೇಮಿಸಿರುವುದು ಎಷ್ಟು ಸತ್ಯವೋ, ನಿನ್ನ […]

ಪ್ರೇಮ ಪತ್ರಗಳು

ಮುಸ್ಸಂಜೆಯ ಪ್ರೇಮ ಪ್ರಸಂಗ…: ಅಭಿಷೇಕ್ ಎಂ. ವಿ.

ಪ್ರೀತಿಯ ಮುಸ್ಸಂಜೆಯ ಒಡಲಾಳದ ಗೆಳತಿ ಮಧುರ, ನಿನ್ನ ಶ್ರಾವಣ ತಂಗಾಳಿಯ ನಗು, ನನ್ನ ವಸಂತ ಋತುವಿನ ಹೃದಯದ ಚಿಗುರಿನಲ್ಲಿ ಮುದುಡದೆ ಇಂದಿಗೂ ಹಸಿರಾಗಿದೆ. ಗೆಳತಿ ಎಂದಿದ್ದಕ್ಕೆ ಕ್ಷಮೆ ಇರಲಿ. ಅಂದು ನಾನು ಮೌನಿಯಾಗಿದ್ದೆ. ವರ್ಷಗಳು ಉರುಳಿದ ಮೇಲೆ ಮೌನದ ಬಯಲಿಂದ ಹೊರಬಂದು ಈ ಪತ್ರ ಬರೆಯುತ್ತಿದ್ದೇನೆ. ನೀ ಇರುವ ವಿಳಾಸವನ್ನು ನಿನ್ನ ಸ್ನೇಹಿತೆಯಾದ ಪ್ರಿಯಾಳ ಬಳಿ ಪಡೆದೆ. ಅವಳೂ ನಿನ್ನ ಜೊತೆಯಲ್ಲೇ ಕೆಲಸ ಮಾಡುತ್ತಿರುವ ವಿಷಯ ತಿಳಿಯಿತು. ಮೊನ್ನೆ ಊರಿಗೆ ಬಂದ್ದಿದ್ದಳು. ಹೇಗಿದ್ದೀಯ? ಮನಸಿನ ಅಂತರಾಳದ ಇತಿಹಾಸ […]

ಪ್ರೇಮ ಪತ್ರಗಳು

ನಾನು ನಿನ್ನವಳಾಗಿ ನಿನ್ನ ನೆರಳಿನ ನೆರಳಾಗಿ..: ನಂದಾದೀಪ, ಮಂಡ್ಯ

ಗೆಳೆಯಾ.. ನಿನ್ನ ನೆನೆದಾಗ ನನಗರಿವಿಲ್ಲದೆ ಮನಸಿನ ಯಾವುದೋ ಮೂಲೆಯಲ್ಲಿ ಸಂವೇದನ ಭಾವವೊಂದು ಆಗ ತಾನೇ ಬಿದ್ದ ಮಳೆಗೆ ಎಳೆ ಗರಿಕೆ ಚಿಗುರೊಡೆದಂತೆ ಚಿಗುರಿ ಬಿಡುತ್ತದೆ.. ಆ ಭಾವದ ಪರಿಯ ಹುಡುಕಲೊರಟರೆ ಪ್ರೇಮ ಲಹರಿಯೊಂದು ಮನದ ಕಣಿವೆಯೊಳಗೆ ಹರಿದು ಹಸಿರಾಗಿಸಿ ಬಿಡುತ್ತದೆ.. ನಿನ್ನೆಡೆಗಿನ ಮಧುರ ಭಾವವೊಂದು ನನ್ನೊಳಗೆ ಹರವಿಕೊಂಡು ಪ್ರೀತಿ ಹೇಳುವ ಆ ಕ್ಷಣಕೆ ಪ್ರತಿ ಘಳಿಗೆಯೂ ಹಾತೊರೆಯುವಂತೆ ಮಾಡಿಬಿಡುತ್ತದೆ.. ಮೊದಲ ನೋಟದ ಬೆಸುಗೆ ಹೃದಯದ ಅಂತರಂಗದಲ್ಲಿ ಒಲವಿನ ತರಂಗ ಎಬ್ಬಿಸಿ ಭಾವಗಳ ಬಂಧನದಲ್ಲಿ ಬಂಧಿಸಿ ಪ್ರೇಮಾಂಕುರವಾಗಿಸಿತು.. ನಿನ್ನ […]

ಪ್ರೇಮ ಪತ್ರಗಳು

ಮೌನ ಮುರಿದು ಬಾರೇ……: ಮೆಹಬೂಬ ಮುಲ್ತಾನಿ

ನನ್ನ ಪ್ರೀತಿಯ ಭುವಿ ಒಂದು ಕ್ಷಣ ನೀನು ಸಿಕ್ಕರೆ ಏನೆಲ್ಲಾ ಹೇಳಬೇಕಾಗಿದೆಯೋ ಅದ್ನೆಲ್ಲಾ ಹೇಳಲಾಗುವುದಿಲ್ಲವೆಂದು ಹೃದಯದಲ್ಲಿನ ಮಾತುಗಳನ್ನು ಬರವಣಿಗೆ ರೂಪದಲ್ಲಿ ಭಟ್ಟಿ ಇಳಸಿದ್ದೇನೆ. ನನಗೆ ಪತ್ರ ಬರೆಯುವ ಅಭ್ಯಾಸವೇ ಮರೆತುಹೊಗಿದೆ. ದಿನಾಲೂ ನೂರೈವತ್ತು ಮೆಸೇಜು ಮಾಡಿ ರೂಢಿಯಾಗಿರುವ ನನಗೆ ಇದೇ ಮೊದಲ ಪ್ರೇಮಪತ್ರವೆನಿಸಿ, ಬರೆಯಲು ಕೂತು ಕೊನೆಗೆ ಇದೇ ಕೊನೆಯ ಪತ್ರವೂ ಎನಿಸಿದೆ. ಸುಮಾರು ಬಾರಿ ಮನಸು ಬಿಚ್ಚಿ ಮಾತಾಡಿದ್ರೂ ನಮ್ಮ ಪ್ರೀತಿಗೆ ಹೊಸ ಭಾಷ್ಯ ಬರೆಯುವ ಬಗ್ಗೆ ನಿನ್ನ ಮನಸ್ಸೇಕೋ ಹೇಡಿಯಂತೆ ಹೆದರಿ ಓಡುತ್ತಿದೆ. ಇದಕ್ಕೆ […]

ಪ್ರೇಮ ಪತ್ರಗಳು

ನನ್ನೆದೆಯ ಒಲವಿನ ಒಡತಿಗೆ: ಡಾ.ಉಮೇಶ್

ನನ್ನೆದೆಯ ಒಲವಿನ ಒಡತಿಗೆ, ಮೂಗಿನತ್ತದ ಸಿಂಗಾರವಿಲ್ಲದಿದ್ದರೂ ಮೂಗಿನ ಮೇಲೆಯೇ ಕೋಪವೆಂಬ ಆಭರಣದ ಅಲಂಕಾರದಿಂದ ಮುದ್ದಾಗಿ ಮಿನುಗುವ ಪ್ರೀತಿಯ ಕೋಪದ ಸುಂದರಿಯೆ, ಕೋಪದ ಹೆಸರನ್ನಿಟ್ಟು ಯಾಕೆ ಕರೆಯುತ್ತಿದ್ದಾನೆ ಅಂತ ಆಶ್ಚರ್ಯವಾಗಿರಬೇಕಲ್ಲ? ನಿನ್ನ ಪೆದ್ದು ಕೋಪದಲ್ಲಿ ಅವಿತಿರುವ ನಿನ್ನ ಪ್ರೀತಿಗೆ ಸೆಳೆತಗೊಂಡವನು ನಾನು, ನನ್ನ ಪ್ರೇಮದ ಭಾವನೆಗಳನ್ನ ನೀನು ಅರಿತರು ಏನೂ ತಿಳಿಯದವಳಂತೆ ಪ್ರೀತಿಯ ಕೋಪದಲ್ಲಿ ನನ್ನ ತುಂಟ ಪ್ರಶ್ನೆಗಳಿಗೆ ಉತ್ತರ ಕೊಟ್ಟಾಗ ನೀನೆಷ್ಟು ಚೆಂದ… ನಿನ್ನ ತುಟಿಯ ಹಿಂದಿನ “ಆ” ಮಾತನ್ನು ನೀನು ಹೇಳದೆಯೇ ಬಲ್ಲವನು ನಾನು. ಆದರು […]