ಪ್ರೇಮ ಪತ್ರಗಳು

ನನ್ನೀ ಆತ್ಮದಲ್ಲಿ ಬೆರೆತವರು ತಾವು: ಅಂಬಿಕಾ ಪ್ರಸಾದ್

ಶೃಂಗಬೀಡು ಸಂಸ್ಥಾನದ ಘನತೆವೆತ್ತ ದೊರೆಯಾದ ಶ್ರೀ ಶ್ರೀ ಶ್ರೀ ಹಯವದನ ನಾಯಕರಲ್ಲಿ ಒಂದು ಗೌಪ್ಯವಾದ ವಿಷಯವನ್ನು ಹಲವು ಬಾರಿ ಯೋಚಿಸಿ ತಿಳಿಸಲು ಇಚ್ಛಿಸುತ್ತಿದ್ದೇನೆ. ಮೊನ್ನೆ ಸೂರ್ಯಾಸ್ತದ ಸಮಯದಲ್ಲಿ ತಂದೆಯವರ ಬಳಿ ನನ್ನ ಹೃದಯದಲ್ಲಿ ನೀವು ಹಿತವಾಗಿ ಬಂದು, ಬಲವಾಗಿ ಅಪ್ಪಿ ಕುಳಿತಿರುವುದರ ಬಗ್ಗೆ ತಿಳಿಸಬೇಕೆಂದು ಬಹಳ ಆತಂಕದಿಂದ, ಸಂಕೋಚದಿಂದ ಒಂದೊಂದೇ ಮೆಟ್ಟಿಲುಗಳನ್ನು ಇಳಿದುಕೊಂಡು ಬರುತ್ತಿರಬೇಕಾದರೆ, ನನ್ನ ನೂಪುರದ ಘಲ್ ಘಲ್ ಎಂಬ ನಿನಾದವೇ ಭಯ ಬೀಳಿಸುವಂತೆ ನಿಶ್ಶಬ್ದವಾದ ರಂಗೇರಿದ ಅರಮನೆಯಲ್ಲೆಲ್ಲಾ ಮಾರ್ದನಿಸುತ್ತಿತ್ತು. ಅಂದು ತಾವು ನನಗೆ ಪ್ರೀತಿಯಿಂದ […]

ಪ್ರೇಮ ಪತ್ರಗಳು

ನೀ ಮೀಟಿದ ನೆನಪೆಲ್ಲವೂ ಎದೆ ತುಂಬಿ ಹಾಡಾಗಿದೆ: ಶ್ರೀಲಕ್ಷ್ಮೀ ಅದ್ಯಪಾಡಿ

ಒಲವೇ,ಎಷ್ಷೊಂದು ಇಷ್ಟ ಪಡುವೆ ಹೀಗೆ ಕರೆದರೇ. ಬಹಳ ದಿನಗಳಾದವಲ್ಲವೇ ನಿನಗೊಂದು ಪತ್ರ ಬರೆಯದೇ. ಒಲವಿನ ಅನುಭೂತಿಗಳನ್ನು ಅಕ್ಷರಗಳಲ್ಲಿ ಮೂಡಿಸುವುದೇ ಸೊಗಸು. ಇಂದೇಕೋ ಹೊತ್ತಲ್ಲದ ಹೊತ್ತಿನಲ್ಲಿ ನಿನ್ನ ನೆನಪು ಸತಾಯಿಸುತ್ತಿದೆ. ಹೊತ್ತಲ್ಲದ ಹೊತ್ತಿನಲ್ಲಿ ಕಾಡುವ ನೆನಪುಗಳಿಗೇನು ಗೊತ್ತು ನಿನ್ನ ನನ್ನ ನಡುವೆ ಹಗಲು ರಾತ್ರಿಯ ಅಂತರವಿದೆ ಎಂದು. ಕನಸುಗಳಿಗೇಕೋ ವಾಸ್ತವದ ಜೊತೆ ಕ್ರೂರ ಶತ್ರುತ್ವ. ಅರೆಬರೆ ನಿದ್ದೆಯ ಮಗ್ಗುಲಲ್ಲಿ ನಿನ್ನದೇ ನೆನಪುಗಳ ಸದ್ದಿಲ್ಲದ ರಾಜ್ಯಭಾರ. ಪ್ರೀತಿಯೆಂದರೆ. ಇದೇ ಏನೋ. ನಿತ್ಯ ಬೇಸರವಿಲ್ಲದ ಕಾಯುವಿಕೆ. ಪ್ರತಿದಿನ ಕಣ್ಣು ತೆರೆಯುತ್ತಲೇ ಯಾರು […]

ಪ್ರೇಮ ಪತ್ರಗಳು

ಆ ಗುಲಾಬಿ ಹೂವಿನಮ್ಯಾಲಿನ ಹನಿಯಂಥಾಕಿ: ಸುರೇಶ ಎಲ್.ರಾಜಮಾನೆ, ರನ್ನಬೆಳಗಲಿ

ಪ್ರೀತಿಯ ಸಖಿ ಚಿಮಣಾ… ಅಂದು ಸಂಜೆ ತಂಗಾಳಿಯೊಂದಿಗೆ ಮಾತಿಗಿಳಿದು ಮೆಲ್ಲನೆ ಹೆಜ್ಜೆ ಹಾಕುತ್ತ ಸಾಗುತ್ತಿದ್ದಾಗ ದಾರಿಯಲಿ ಉದುರಿಬಿದ್ದ ಎರಡು ಹಳದಿ ಹೂಗಳನ್ನು ಎತ್ತಿ ನನ್ನ ಕೈಗಿಟ್ಟು ಬಿಡಿಸಿಕೊಂಡು ಬಿದ್ದಿವೆ ಬೀದಿಗೆ ಸಾಧ್ಯವಾದರೆ ಬದುಕಿಸಿಕೊ ಎಂದು ಹೇಳಿದೆಯಲ್ಲ ನಾನಾಗಾ ಸಖತ್ ಸೀರಿಯಸ್ಸಾಗಿ ನಿನ್ನನ್ನು ಪ್ರೀತಿಸಲು ಶುರುಮಾಡಿದ್ದು ನಿಜ. ಮುಂಜಾನೆ ಸೂರ್ಯನ ಕಿರಣಗಳು ಮುಗುಳುನಗುತ್ತ ಮನೆಯಂಗಳಕೆ ಬೆಳಕಿನ ರಂಗೋಲಿ ಇಡುತ್ತಿದ್ದಾಗ ನೀ ಹಾದು ಹೋಗುವ ದಾರಿ ತಿರುತಿರುಗಿ ನನ್ನೆ ದುರುಗುಟ್ಟುತ್ತಿತ್ತು. “ಹೇ ಹಿಂಗೆಲ್ಲ ಕಾದಂಬರಿಯೊಳಗ ಕವನ ಬರದಾಂಗ ಬರದ್ರ ಹೆಂಗ […]

ಪ್ರೇಮ ಪತ್ರಗಳು

ನೀ.. ಈ ಬಿಕ್ಕುಗಳ ಹಕ್ಕುದಾರ: ನಳಿನಿ. ಟಿ. ಭೀಮಪ್ಪ

ಪ್ರೀತಿಸುವ ದಿನ ಹತ್ತಿರ ಬರುತ್ತಿದೆ ಅಂತಾದರೂ ಗೊತ್ತಾ ನಿನಗೆ?…ನನ್ನ ಕರ್ಮ, ಅದನ್ನೂ ನಾನೇ ನೆನಪು ಮಾಡಬೇಕು. ಅನುಕ್ಷಣ, ಅನುದಿನ ನನ್ನನ್ನೇ ಆರಾಧಿಸುತ್ತ, ಪ್ರೀತಿಸುವ ನಿನಗೆ ವರ್ಷಕ್ಕೊಮ್ಮೆ ಆಚರಿಸುವ ಈ ಪ್ರೀತಿಯ ದಿನದ ಬಗ್ಗೆ ನಂಬಿಕೆ ಇಲ್ಲವೆಂದು ಗೊತ್ತು. ಆದರೆ ನನಗೆ ಆ ದಿನ ತುಂಬಾ ಅಮೂಲ್ಯವಾದುದು ಗೊತ್ತಾ? ಪ್ರೀತಿ ಎನ್ನುವ ಪದವೊಂದು ಜೀವನದಲ್ಲಿ ನಿನ್ನ ಮೂಲಕ ಅಂಕುರಿಸಿದ ಘಳಿಗೆಯೊಂದು ಚಿರಸ್ಮರಣೀಯವಾಗಿ, ಚಿರಸ್ಥಾಯಿಯಾಗಿ ಉಳಿಯಬೇಕೆಂಬ ಅಭಿಲಾಷೆ ನನ್ನದು. ಅಂದು ನೀ ಕೊಡುವ ಕೆಂಪು ಗುಲಾಬಿಯ ಕಾಣಿಕೆಯನ್ನು, ಕೆಂಪೇರಿದ ಮೊಗದೊಡನೆ […]

ಪ್ರೇಮ ಪತ್ರಗಳು

ಒಲವಿಗೊಂದು ಓಲೆ: ಪೂಜಾ.ಎಲ್.ಕೆ

ಹೇ ಗೆಳೆಯ ಅದೇನ್ ನಿನ್ನ ಕಣ್ಣ ಹೊಳಪು, ಅದೇನ್ ನಿನ್ನ ಕಾಳಜಿ, ಅದೇನ್ ನಿನ್ನ ಭರವಸೆ, ಅದೇನ್ ನಿನ್ ನಂಬ್ಕೆ ಇದೆಲ್ಲದ್ರ ಅರ್ಥ ಖಂಡಿತವಾಗಿಯೂ ಒಲವಲ್ಲವೇ? ಇನಿಯ. ಇಣುಕಿ ಇಣುಕಿ ಹೃದಯದ ಕಿಟಕಿ ತೆಗೆದೆಬಿಟ್ಟೆ ಕೊನೆಗೂ ನೀನು ಸುಳಿವಿಲ್ಲದ ತಂಗಾಳಿಯ ಹಾಗೆ , ಕತ್ಲೇನೆ ಕಂಡಿರದ ದೀಪದ ಹಾಗೆ,ಹೇ ಜಾದುಗಾರ ಅದೇನ್ ಮೋಡಿ ಮಾಡ್ಬಿಟ್ಟೆ ಈ ಬಡಪಾಯಿ ಹೃದಯಕ್ಕೆ, ಪ್ರತಿ ಬಡಿತಕ್ಕೂ ನಿನ್ ಹೆಸರನ್ನೇ ಮಿಡಿಯುತ್ತೆ. ಅಷ್ಟೇ ಅಲ್ಲ ಈ ಹಾಳಾದ್ ಮನಸ್ ಕೂಡ ನಿನ್ನನ್ನೇ ಸದಾ […]

ಪ್ರೇಮ ಪತ್ರಗಳು

ನಿನ್ನವನಲ್ಲದ ಪಾಪಿ ಪ್ರೇಮಿ: ಸಾವಿತ್ರಿ ಹಟ್ಟಿ

ಪ್ರೀತಿಯ ಇವ್ಳೇ, ಕಾಲ ಅನ್ನೂದೇನಾರ ನಮ್ ಕೈಯ್ಯಾಗಿದ್ದಿದ್ರ ಎಳ್ಕೊಂಬಂದು ನಮ್ಮನಿ ಪಡಸಾಲಿ ನಡುಗಂಬಕ್ಕ ಕಟ್ಟಿ ಹಾಕ್ತಿದ್ದೆ ನೋಡು ಹುಡುಗಿ. ಆಗ ಬಹುಶಃ ನಾನು ನೀನು ಸಣ್ಣ ಹುಡುಗ ಹುಡುಗಿ ಆಗೇ ಇರತಿದ್ವಿ. ಶ್ರಾವಣ ಮಾಸ, ಪಂಚಮಿ ದಿನಗೊಳಂದ್ರ ನಿನಗ ಪ್ರಾಣ ಅಲಾ! ನಿನ್ನ ಉದ್ದನ ಜಡಿಗಿ ಬಾಬಿ ರಿಬ್ಬನ್ ಗೊಂಡೆ ಹೆಣಕೊಂಡು, ಚಿತ್ತಾರದ ನಿರಿಗಿ ಲಂಗ ಉಟ್ಕೊಂಡು, ಗಗ್ರಿ ತೋಳಿನ ಪೋಲ್ಕಾ ಹಾಕೊಂಡು, ಆಬಾಲಿ, ಮಲ್ಲಿಗಿ ಕ್ಯಾದಗಿ ಹೂವು ಮುಡ್ಕೊಂಡು ಜೋಕಾಲಿ ಆಡುವಾಗ ನನಗ ಯಾಡ್ ಕಣ್ಣು […]

ಪ್ರೇಮ ಪತ್ರಗಳು

ನೀ ಎದುರಿಗೆ ಬಂದ್ರೆ ಏನೋ ಓಂಥರಾ ಖುಷಿ ಆಕ್ಕೇತಿ!: ಕಾವ್ಯ. ಎನ್

ಲೋ ಹುಡ್ಗ,ಪ್ರೀತಿ ಪ್ರೇಮ ಎಲ್ಲ ನನ್ನಂತ ಹಳ್ಳಿ ಹುಡ್ಗಿಗೆ ಸರಿ ಬರೋದಲ್ಲ, ನನ್ನ ಕೆಲಸ್ ಏನಂದ್ರ ಓದೋದು ಅಷ್ಟೇ ಅಂತಾ ನಿರ್ಧಾರ ಮಾಡಿದ್ ನನ್ಗೆ, ಆ ವಿಸ್ಯಾನೇ ಮರೆಯಂಗೇ ಮಾಡಿದವ ನೀನು? ಅದ್ಯಾಗೆ ನಾನು ನಿನ್ನ ಪ್ರೀತಿಲಿ ಬಿದ್ನೊ ಒಂದು ತಿಳಿತಿಲ್ಲ. ವತ್ತು ಹುಟ್ಟಾದಗ್ನಿಂದ, ವತ್ತು ಬೀಳಾವರೆಗೂ ನಿಂದೆ ಜಪ. ನೀ ಎದುರಿಗೆ ಬಂದ್ರ ಏನೋ ಓಂಥರಾ ಕುಸಿ. ಒಂದು ನಿಮಿಷಕ್ಕೆ 72 ಸಾರಿ ಬಡ್ಕೊಳೋ ಹೃದಯ ನಿನ್ನ ಮೊಗ ಕಂಡಿದ್ ತಕ್ಷಣ ನೂರ್ಸಾರಿ ಬಡಿತೈತೆ. ಆಗ […]

ಪ್ರೇಮ ಪತ್ರಗಳು

ನೀ ಬರುವ ದಾರಿಯಲಿ ಕಂಗಳ ಹಾಸಿ: ಜಯಶ್ರೀ ಭಂಡಾರಿ.

ನಮ್ಮ ಭೇಟ್ಟಿ ಎಷ್ಟು ಅನಿರೀಕ್ಷಿತವಾಗಿ ಆಯಿತು. ಆದರೆ ಪ್ರೀತಿ ತುಂಬಾ ವಿಚಿತ್ರ. ನಿನಗೆ ನೆನಪಿದೆಯಾ ನನ್ನ ಸುಂದರ ಫೋಟೋ ಅದೆಲ್ಲಿ ನೋಡಿದೆಯೋ… ನೀ. ನಿನ್ನಿಂದ ನನ್ನ ಮೇಲಗೆ ಮೆಸ್ಸೇಜ ಬಂತು. ಪ್ಲೀಜ ಮೊಬೈಲ ನಂಬರ ಕಳಿಸಿ ನಿಮಗೆ ಅರ್ಜೆಂಟ ಮಾತಾಡೋದು ಇದೆ ಅಂತ. ನೀನ್ಯಾರೋ ತಿಳಿಯದ ನಾನು ನಿರ್ಲಕ್ಷ್ಯ ಮಾಡಿದೆ. ಮತ್ತೆ ಮತ್ತೆ ನೀ ರಿಪೀಟ ಮಾಡಿದೆ. ಕೂತೂಹಲದಿಂದ ಅಂದು ನನ್ನ ನಂಬರ ಕಳಿಸಿದೆ. ನೀ ಸಣ್ಣಗೆ ನನ್ನೊಳಗೆ ನುಗ್ಗಿದೆ. ಮನಸಲಿ ನೆಲೆ ನಿಂತೆ. ಜೊತೆಯಿಲ್ಲದ ಒಂಟಿ […]

ಪ್ರೇಮ ಪತ್ರಗಳು

“ಬೆಳಕಿನ ಬೆರಗು ನೀನು”: ಮಹಾಂತೇಶ್ ಯರಗಟ್ಟಿ

ಹಾಯ್ ಹೇಗಿದ್ದೀಯಾ…? ಇವತ್ತು ನಿನ್ನದೇ ಇಷ್ಟದ ಹಬ್ಬ ದೀಪಾವಳಿ. ಪ್ರತಿ ದೀಪಾವಳಿಗೊಮ್ಮೆ ಮನದ ಮನೆಯ ದೀಪ ಬೆಳಗಿ ಇಷ್ಟದ ಮಾತುಗಳ ಜೊತೆಗೆ ಕಷ್ಟದ ಕರ್ಮಗಳನ್ನು ತೊರೆದು ನನ್ನ ಮನಸ್ಸನ್ನ ಗಟ್ಟಿ ಮಾಡುತ್ತಿದ್ದೀಯ ನೀನು. ನೀನಿಲ್ಲದ ಮೇಲು ಈಗಲೂ ಹಾಗೆ ಇದ್ದೇನೆ. ದೇವರ ನೆನೆಯೋದನ್ನ ಬಿಟ್ಟು ಸುಮಾರು ವರ್ಷಗಳಾಯಿತು, ಬದಲಿಗೆ ನೀನು ನೆನಪಾಗುತಿ. ಆಸರೆಯ ಅಡಿಪಾಯ ಮುರಿದು ಬಿದ್ದಮೇಲೆ ಶವದ ರೂಪ ತಾಳಿದೆ ಈಗ ಈ ಹೃದಯ. ವರ್ಷದ ಹಬ್ಬಕ್ಕೆ ದೀಪ ಹಿಡಿದು ಶುಭಾಶಯ ಕೋರುವ ನಿನ್ನದೊಂದು ಪುಟ್ಟ […]

ಪ್ರೇಮ ಪತ್ರಗಳು

ಹಂಪೆಯ ಪಳುಯುಳಿಕೆಗಳು, ಪ್ರೇಯಸಿ ಮತ್ತು ನನ್ನ ಹೆಂಡತಿ: ಧೀರೇಂದ್ರ ನಾಗರಹಳ್ಳಿ

ಹಲೋ ಹನಿ , ಬೆಳಿಗ್ಗೇನೆ ವಿಡಿಯೋ ಕಾಲ್ ಮಾಡಿ ಆಗಿದೆ ಮತ್ತೇನು ಈ ‘ಅಕ್ಷರಗಳು ‘ ಅಂತ ಆಶ್ಚರ್ಯ ಆಗಬಹುದು. ಈ ಮೇಲಿಗೆ ಒಂದು ಕಾರಣವಿದೆ. ಈ ವಾರಾಂತ್ಯದಲ್ಲಿ ಬಿ. ಬಿ. ಸಿಯ ಹಂಪೆಯ ಬಗ್ಗೆ ಒಂದು ಡಾಕುಮೆಂಟರಿಯನ್ನು ನೋಡಿದೆ. ವಿಜಯನಗರ ಸಾಮ್ರಜ್ಯದ ವಿವರಗಳನ್ನು ಕಟ್ಟಿ ಕೊಟ್ಟರು. ಹಾಗೆಯೇ ಬಹಮನಿ ಸುಲ್ತಾನರಿಂದ ನಾಶವಾದ ಹಂಪೆಯ ವಿವರವನ್ನು ಕೊಡಲಾಯಿತು. ಹಂಪೆಯ ನಾಶದ ವಿಷಯವನ್ನು ತೋರಿಸುವಾಗಲಂತೂ – ನಾನು ನಿಜವಾಗಿಯೂ ಸತ್ತೆ ಹೋದೆ. ಆ ಸಾಲು ಸಾಲು ಮುರಿದು ಹೋದ […]

ಪ್ರೇಮ ಪತ್ರಗಳು

ಮಾತುಗಳೆಲ್ಲಾ ಮೌನವಾದಾಗ, ಎದೆಯಾಳದ ಪದಗಳೆಲ್ಲಾ ಎಚ್ಚೆತ್ತಾಗ: ಡಿ ಜಿ ನಾಗರಾಜ ಹರ್ತಿಕೋಟೆ

ನನ್ನೆಲ್ಲಾ ಕೊರತೆಗಳ ನೀಗಿಸಿಬಿಡು. ನಿನ್ನ ಕಣ್ಣಲ್ಲೊಂದು ಪುಟ್ಟ ಹಣತೆಯಿದೆ ನನ್ನೆಲ್ಲಾ ಕನಸುಗಳ ಬೆಳಗಿಬಿಡು. ಮಾತುಗಳೆಲ್ಲಾ ಮೌನವಾದಾಗ, ಎದೆಯಾಳದ ಪದಗಳೆಲ್ಲಾ ಎಚ್ಚೆತ್ತಾಗ ನನ್ನೊಳಗೊಳಗೆ ಪ್ರೀತಿಯ ಪದಗಳ ಪಯಣ. ಅದೆಂತಾ ಅಮೃತಘಳಿಗೆಯೊ ನಾ ತಿಳಿಯೆ ! ಸಂಬಂಧಿಯ ಮದುವೆಮನೆಯಲ್ಲಿ ಲಂಗ ದವಣಿ ತೊಟ್ಟು, ಮಲ್ಲಿಗೆ ಮುಡಿದು ಉತ್ಸಾಹದಿಂದ ನಲಿದಾಡುತ್ತಿದ್ದ ನಿನ್ನ ನೋಡಿದಾಕ್ಷಣವಂತೂ ಮನಸ್ಸು ಪ್ಯಾರಾಚ್ಯೂಟನಂತಾಗಿಬಿಟ್ಟಿತ್ತು. ಹಸಿಹಸಿ ಹೃದಯದಲಿ ನೀನಿಟ್ಟ ಮೊದಲ ಹೆಜ್ಜೆಗುರುತದು. ನಿನ್ನ ಕಣ್ಣಂಚಿನ ಕುಡಿನೋಟಕ್ಕಾಗಿ,ಮಂದಹಾಸಕ್ಕಾಗಿ ಅದೆಷ್ಟು ಕಾತರಿಸಿದೆನೊ. ನೀ ಸೂಸಿದ ಮಲ್ಲಿಗೆಯ ಮನಸ್ಸಿನ ಘಮದ ಪರಿಮಳ ಮನದಂಗಳದಲ್ಲೆಲ್ಲಾ ಸೂಸಿ […]

ಪ್ರೇಮ ಪತ್ರಗಳು

ಕಾದಿರುವೆ ನಿನಗಾಗಿ: ಜಯಶ್ರೀ. ಜೆ. ಅಬ್ಬಿಗೇರಿ

ಪ್ರಿಯ ಹೃದಯದರಸಿಗೆ, ಕುರುಚಲು ಗಿಡದಂತೆ ಬೆಳೆದ ನನ್ನ ಗಡ್ಡ, ಕೆದರಿದ ಕೂದಲು, ನಿಸ್ತೇಜ ಕಣ್ಣುಗಳು ಭಗ್ನಪ್ರ್ರೇಮಿಯಂತಾಗಿರುವ ನನ್ನ ಗುರುತು ನಿನಗೆ ಸಿಗಲಿಲ್ಲ ಅಂತ ಅನಿಸಿತು. ನಿನ್ನ ಸವಿನೆನಪುಗಳೇ ನನ್ನ ಜೀವನಕ್ಕೆ ಆಧಾರ ಎಂದು ಭಾವಿಸಿ, ಬಾಲಂಗೋಚಿಯಿಲ್ಲದ ಗಾಳಿಪಟದಂತೆ ಗೊತ್ತು ಗುರಿಯಿಲ್ಲದ ಬದುಕು ದೂಡುತ್ತಿದ್ದ ನನ್ನ ಪಾಡು ಕಂಡ ಅಪ್ಪ,ಅವ್ವ, ಗೆಳೆಯರು, ಸಂಬಂಧಿಕರು `ಒಳ್ಳೆಯ ಕೆಲಸವಿದೆ ಕೈ ತುಂಬಾ ಸಂಬಳವಿದೆ ಯಾಕ ಸೊರಗಿ ಶುಂಠಿಯಾಗಿ? ಮದುವೆಯಾಗಿ ಆರಾಮ ಇರು`. ಎಂದು ಎಷ್ಟು ಪೀಡಿಸಿದರೂ ಜಗ್ಗಿರಿರಲಿಲ್ಲ. ಈ ಜೀವಮಾನದಲ್ಲಿ ನಿನ್ನ […]

ಪ್ರೇಮ ಪತ್ರಗಳು

ನನ್ನ ಈ ಒಲವಿನ ಪಯಣಕೆ ನಿನ್ನ ನಯನಗಳೇ ದೀವಟಿಗೆ: ಬಿ.ಎಲ್.ಶಿವರಾಜ್ ದೇವದುರ್ಗ

ಅಂದು ನಾನು ಗ್ರಂಥಾಲಯದಲ್ಲಿ ನನ್ನ ಪಾಡಿಗೆ ನನ್ನ ಇಷ್ಟದ ಪುಸ್ತಕವಾದ ಶಿವರಾಮ್ ಕಾರಂತರ “ಮೈಮನಗಳ ಸುಳಿಯಲ್ಲಿ” ಪುಸ್ತಕದ ತಲಾಶ್ ನಲ್ಲಿ ತಲ್ಲೀನನಾಗಿದ್ದೆ. ರ್ಯಾಕ್ ನಲ್ಲಿ ನನಗೆ ಬೇಕಾದ ಪುಸ್ತಕ ಕಂಡಿತು, ಅದನ್ನು ರ್ಯಾಕ್ ನಿಂದ ತೆಗೆದ ಕೂಡಲೇ ರ್ಯಾಕ್ ನ ಕಿಂಡಿಯಲ್ಲಿ ಹೊಂಬೆಳಕನ್ನು ಹೊತ್ತಿದ್ದ ತಿಳಿ ನೀಲಿ ಬಣ್ಣದ ನಿನ್ನ ನಯನಗಳು ಹೊಳೆದವು. ನೀನು ಕೂಡ ನನ್ನಂತೆ ಪುಸ್ತಕದ ಹುಡುಕಾಟದಲ್ಲಿದ್ದೆ. ಪುಸ್ತಕ ಹಿಡಿದು ಅಲ್ಲೇ ಇದ್ದ ಮೇಜಿನ ಮೇಲೆ ಓದುತ್ತಾ ಕುಳಿತೆ. ಪುಸ್ತಕದ ಮೊದಲ ಪುಟದ ಮೂರು […]

ಪ್ರೇಮ ಪತ್ರಗಳು

ಪ್ರೇಮಪತ್ರಗಳು: ನಳಿನ.ಡಿ., ಆರೀಫ ವಾಲೀಕಾರ

ನೋವು ನಿರಂತರ ಧ್ಯಾನದಂತೆ! ಆ ಹೊತ್ತು ನೀನು ಸಿಗಬಾರದಿತ್ತೇನೋ, ನೀನು ಸಿಕ್ಕು ಖಾಲಿ ಬಿದ್ದಿದ್ದ ನನ್ನ ಮೊಬೈಕ್ ನೊಳಗೆ ಪೆಟ್ರೋಲ್ ತುಂಬಿಸಲು ಬೆನ್ನ ಹಿಂದೆ ಹತ್ತಿಸಿಕೊಂಡು ಹೋದಿ. ಅಗ ಬರೀ ನನ್ನ ಗಾಡಿಯ ಎದೆಯೊಳಗೆ ಪೆಟ್ರೋಲ್ ಮಾತ್ರ ತುಂಬಿಸಲಿಲ್ಲ, ನನ್ನ ಎದೆಯ ತುಂಬಾ ನೀನೇ ತುಂಬಿಕೊಂಡೆ. ಭಾಷೆ ಗೊತ್ತಿಲ್ಲದ ಅನಾಮಿಕ ಭಾಷೆಯಲ್ಲಿ ನಾನು ನಿನ್ನನ್ನು ಕಷ್ಟಪಟ್ಟು ಇಷ್ಟವಾದದ್ದನ್ನು ಹೇಳಿದಾಗ ನೀನು ’ಥೂ, ಹೋಗಾಚೆ’ ಅಂದಿದ್ದರೆ ಸಾಕಿತ್ತು, ನೀನು ಹಾಗೆ ಮಾಡುತ್ತೀಯೇನೋ ಅಂತ ನಾನು ಎಷ್ಟು ಸಲ ನನ್ನ […]

ಪ್ರೇಮ ಪತ್ರಗಳು

“ದೀಪಗಳಿರದ ದಾರಿಯಲ್ಲಿ ಅದೆಷ್ಟೂ ದೂರ ನಡೆಯಲಾದೀತು”: ಸಿದ್ದುಯಾದವ್ ಚಿರಿಬಿ

  ಪ್ರೀತಿಯ ಒಲವಿನ ಪ್ರಿಯಲತೆಯೇ..,   “ದೀಪವಿರದ ದಾರಿಯಲ್ಲಿ ತಡವರಿಸುವ ನುಡಿಗಳೆ” ಹಾಡು ಅದರಿಷ್ಟದಂತೆ ಮೊಬೈಲ್ ನಲ್ಲಿ ಹಾಡುತ್ತಿತ್ತು. ಕತ್ತಲು ದಾರಿಯಲಿ ನಮ್ಮಿಬ್ಬರ ಮೊದಲ ಪಯಣ. ಸಿ. ಅಶ್ವತ್ ರವರ ಕಂಚಿನ ಕಂಠ ಸಿರಿಯಲ್ಲಿ ಹೊಮ್ಮಿದ ಆ ಹಾಡು ಅದೇಷ್ಟು ಬಾರಿ ಕೇಳಿದರು ಸಾಕೆನ್ನಿಸದು. ಕನ್ನಡ ಸಾಹಿತ್ಯಕ್ಕಿರುವ ತಾಕತ್ತು ಅಂತದ್ದಿರಬೇಕು. ಸುಮ್ಮನೆ ಮೌನದಲಿ ಸಾಗುವ ಪಯಣದಲ್ಲಿ ಏನೂ ಕೌತುಕದ ಕದನ. ಅರಿಯದೆ ಅರಳಿದ ನಮ್ಮಿಬ್ಬರ ಒಲವಿನ ಪ್ರೀತಿಯ ಗುಲಾಬಿಗೆ ಭಾವನೆಗಳ ಪನ್ನೀರಿನಲ್ಲಿ ಅಭಿಷೇಕ ಗೈಯ್ಯಲೆಂದು ಹೊರಟಂತಿತ್ತು ನಮ್ಮಿಬ್ಬರ […]

ಪ್ರೇಮ ಪತ್ರಗಳು

ಮನದಭಾವುಕತೆಗೊಂದು ದಿಕ್ಕು ತೋರಿಸಿದವಳಿಗೆ: ದೊರೇಶ

           ಆಸೆ ಹುಡುಗನ ಪತ್ರವಿದು. ಅತಿರೇಕ ಅಂದುಕೊಳ್ಳಬೇಡ . ತಿರುಗಿ ಬೀಳುವ ಮನಸ್ಸಿಗೆ ತುಂಬಾ ದಿನ ಸಮಾಧಾನ ಹೇಳಲಾರೆ. ಮನಸ್ಸಿನದು ಒಂದೇ ಹಠ, ತನಗೆಎಲ್ಲವೂ ಬೇಕು. ಎಷ್ಟುಸಲ ತಿಳಿ ಹೇಳಿದರೂ ಕೇಳಲೊಲ್ಲದು. ನಾನು ವಿಹ್ವಲನಾಗಿ ಹೋಗಿದ್ದೇನೆ. ಕಣ್ಣಂಚಿನಲ್ಲಿ ನೆನಪಿನ ನೀರು. ಎಲ್ಲವನ್ನೂ ಹೇಳಬೇಕು ಅಂದುಕೊಂಡಿದ್ದೆ. ನನ್ನ ಮಾತು ನಿರುಪಯಕ್ತವೆನಿಸುವುದು ನಿನ್ನ ಕಣ್ಣುಗಳ ನವಿಲ ನರ್ತನ ಕಂಡಾಗ. ನಿನಗೆ ಗೊತ್ತು! ಸುಮ್ಮನೆ ಕಾಲಕಳೆಯಲೆಂದು ಸಮುದ್ರದ ದಡದಲ್ಲಿ ನಿಂತವ ನಾನು. ಅಂದು ಅಂಬೆಗಾಲಿಟ್ಟುಕೊಂಡು ಮಗುವಿನಂತೆ […]

ಪ್ರೇಮ ಪತ್ರಗಳು

“ಒಲವಿಗೊಂದು ನೆನಪಿನೋಲೆ”: ಶಿವಾನಂದ ಆರ್ ಉಕುಮನಾಳ

ಒಂದು ಸುಂದರ ಮುಂಜಾವು ಮೈಸೂರಿನ ಮೈ ಕೊರೆವ ಚಳಿಯಲ್ಲಿ ಮಾನಸ ಗಂಗೋತ್ರಿಗೆ ಹೊರಟಿದ್ದೆ ಅದು ಬಿ.ಕಾಂ. ಅಂತಿಮ ವರ್ಷದ ಮೊದಲ ದಿನ. ಎಲ್ಲಿಂದಲೋ ಹಾರಿಬಂದ ಪಾರಿವಾಳವೊಂದು ಭುಜದ ಮೇಲೆ ಕುಳಿತಿತು ಅದು ಯಾರದೆಂದು ಸುತ್ತಲೂ ನೋಡಿದೆ ಯಾರೂ ಕಾಣಲಿಲ್ಲ. ಅದನ್ನೆತ್ತಿ ಮಣಿಕಟ್ಟಿನ ಮೇಲೆ ಕುಳ್ಳಿರಿಸಿ ನೋಡಲು ಅದರ ಎದೆಯ ಮೇಲೆ ನಯನಾ ಎಂಬ ಹೆಸರು ಮತ್ತೆ ಅತ್ತಿತ್ತ ನೋಡಲಾಗಿ ದೂರದಲ್ಲಿ ಕಂಡವಳೇ ನೀನು (ನಯನಾ). ಹತ್ತಿರಕ್ಕೆ ಬಂದು ಅದೇನನ್ನೋ ಹೇಳಿ ಆ ಪಾರಿವಾಳವನ್ನೆತ್ತಿಕೊಂಡು ಹೊರಟೇ ಹೋದೆ ಆದರೆ […]

ಪ್ರೇಮ ಪತ್ರಗಳು

ಸಲ್ಲದ ಪ್ರೇಮ ಪತ್ರ: ಅಜ್ಜೀಮನೆ ಗಣೇಶ್

ನೀನು ಆಗಾಗ ಹೇಳುತ್ತಿದ್ದೆ ಗೊತ್ತಾ…ಒಂದೂರಿನ ರಾಜನ ಕಥೆ, ಅದೇ ಕಣೆ, ತಾಜ್‍ಮಹಲ್ ಕಟ್ಟಿದವನು..ಒಲವಿಗೆ ಅವನೇ ರಾಯಭಾರಿಯಂತೆ. ಆತ ಕಟ್ಟಿದ ಪ್ರೀತಿ ಸಂಕೇತವೇ ಇವತ್ತಿಗೂ ಜಗತ್ತಿನ ಲವ್ ಸಿಂಬಲ್ ಅಂತೆ. ಏನೇ ಆಗಲಿ, ಆ ರಾಜನ ಪ್ರೇಮಕ್ಕಿಂತ ನಮ್ಮಿಬ್ಬರ ಪ್ರೀತಿ ಒಂದು ಮೆಟ್ಟಿಲಾದರೂ ಎತ್ತರದಲ್ಲಿರಬೇಕು ಅಂತಿದ್ದೆ ನೋಡು. ಅದಕ್ಕಾಗಿ ವಾರಕೊಮ್ಮೆ ಒಪ್ಪತ್ತು ಮಾಡಿ, ನನ್ನನ್ನೂ ಉಪವಾಸ ಕೆಡವುತ್ತಿದ್ದೆ ನೋಡು..ವಿಷಯ ಗೊತ್ತಾ..ನಿನ್ನ ಉಪವಾಸ ಫಲನೀಡಿದೆ. ನಾನೀಗ ನಿನ್ನ ಆಸೆ ಈಡೇರಿಸುತ್ತಿದ್ದೇನೆ. ನಾಚಿಕೆ ಮುಳ್ಳಿನಂತ ನಮ್ಮಿಬ್ಬರ ಪ್ರೇಮವೀಗ ಇತಿಹಾಸದ ಸಾಕ್ಷಿ ಹೇಳುವ […]

ಪ್ರೇಮ ಪತ್ರಗಳು

ಹೃದಯದ ಬೀದಿಯಲ್ಲಿ: ಸಚಿನ್ ನಾಯ್ಕ ಅಂಕೋಲ

ಹೃದಯದ ಬೀದಿಯಲ್ಲಿ ಮಿಂಚತೆ ಹಾದು ಹೋದ ನಿನಗಾಗಿ….                                                       ನಿನ್ನವನಿಂದ…. ಸೂರ್ಯನನ್ನೇ ನುಂಗಿ ಬಿಟ್ಟ ಇಳಿಸಂಜೆಯ ನೀರವತೆ, ಹಸಿರೆಲೆಯ  ಮೈಸೋಕಿ ಮೆಲ್ಲನೆ ಹರಿಯುವ ತಂಗಾಳಿ ಹೆಪ್ಪುಗಟ್ಟಿ ಎದೆಯಲ್ಲಿ ಸಣ್ಣನೆ ನೋವು, ದೂರದಲ್ಲೆಲ್ಲೋ ಗುನುಗುವ ಹಾಡು ಯಾವ ಮೋಹನ ಮುರಳಿ ಕರೆಯಿತೋ, […]

ಪ್ರೇಮ ಪತ್ರಗಳು

ಸಚಿನ್ ನಾಯ್ಕ ಅಂಕೋಲ: ಸಚಿನ್ ನಾಯ್ಕ ಅಂಕೋಲ

ನನ್ನ ಕನಸುಗಳೆಲ್ಲವ ತನ್ನದೇ ಎಂಬಂತೆ ಸಲಹುತ್ತಿರುವ ನಿನಗಾಗಿ….                                                                     ನಿನ್ನವನಿಂದ…. ಕಿಟಕಿಯಿಂದ ತೂರಿ ಬರುವ ತಂಗಾಳಿ ಕಿವಿಯಲ್ಲಿ ನೀನು ಪಿಸುಗುಟ್ಟಿದಂತಿದೆ….!! ಆಗಾಗ ಸಿಗುವ  ಹಗಲಲ್ಲೂ ಕತ್ತಲ ನೆನಪ ತರುವ ಅಷ್ಟೇ […]