“ಸ್ವಾತಂತ್ರ್ಯವೆಂದರೆ ಕೇವಲ ಧ್ವಜ ಹಾರಿಸುವ ಹಬ್ಬವಲ್ಲ”: ಚಲುವೇಗೌಡ ಡಿ ಎಸ್,
ಭಾರತ ದೇಶದ ಇತಿಹಾಸದ ಪುಟಗಳಲ್ಲಿ ಸುವರ್ಣ ಅಕ್ಷರಗಳಿಂದ ಬರೆಯಲ್ಪಟ್ಟ ಪವಿತ್ರ ದಿನ ಆಗಸ್ಟ್ 15. ಕೋಟ್ಯಾಂತರ ಭಾರತೀಯರ ಹೃದಯದಲ್ಲಿ ಹೆಮ್ಮೆಯ ಭಾವವನ್ನು ಮೂಡಿಸುವ ಸುಂದರ ದಿನ. ಕೇಸರಿ, ಬಿಳಿ , ಹಸಿರು ಮೂರು ಬಣ್ಣಗಳು ಮುಗುಲಿನ ಎತ್ತರದಲ್ಲಿ ಹಾರಾಡುತ್ತಾ, ನಮ್ಮ ಪೂರ್ವಜರ ತ್ಯಾಗ ಹಾಗೂ ಬಲಿದಾನಗಳ ಕಥೆಯನ್ನು ಗಾಳಿಯೊಂದಿಗೆ ದೇಶದ ಮೂಲೆಮೂಲೆಗಳಿಗೂ ಕೊಂಡೊಯ್ಯುವ ಸುದಿನ. ಶಾಲೆ-ಕಾಲೇಜುಗಳು, ಸರ್ಕಾರಿ ಕಚೇರಿಗಳ ಆವರಣಗಳಲ್ಲಿ ರಾಷ್ಟ್ರ ಧ್ವಜ ಹಾರುತ್ತದೆ, ರಾಷ್ಟ್ರಗೀತೆ ಮೊಳಗುತ್ತದೆ, ಸ್ವಾತಂತ್ರ್ಯದ ಇತಿಹಾಸದ ಭಾಷಣಗಳ ಹೂಮಳೆ ಹರಿಯುತ್ತದೆ, ದೇಶಭಕ್ತಿಯ ಹಾಡುಗಳು … Read more