ಸ್ಪಾಟಾಗಿದ್ದರೆ : ಡಾ. ಗವಿಸ್ವಾಮಿ
ಸಂಜೆ ಐದಾಗಿತ್ತು. ಬೈಕಿನಲ್ಲಿ ಊರಿಗೆ ಹೋಗುತ್ತಿದ್ದೆ. ಐವತ್ತರವತ್ತು ಮೀಟರಿನಷ್ಟು ಮುಂದೆ ಗೌರ್ಮೆಂಟ್ ಬಸ್ ಹೋಗುತ್ತಿತ್ತು. ಬಿರುಗಾಳಿ ವೇಗದಲ್ಲಿ ನನ್ನ ಸನಿಹಕ್ಕೇ ಬಂದು ಸೈಡು ಹೊಡೆದು ಹೋಯ್ತು ಒಂದು ಬೈಕು. ಒಂದು ಕ್ಷಣ ಎದೆ ಝಲ್ಲೆಂದಿತು. ಬಸ್ಸನ್ನೂ ಸೈಡು ಹೊಡೆಯಲು ಯತ್ನಿಸಿದ ಬೈಕ್ ಸವಾರ. ಎದುರಿಗೆ ಲಾರಿ ಬಂದು ಬಿಡ್ತು. ಸಿಕ್ಕಿಕೊಂಡು ಬಿಟ್ಟಿದ್ದರೆ ಅಲ್ಲೇ ಕತೆಯಾಗಿರುತ್ತಿದ್ದ . ಸಣ್ಣ ಗ್ಯಾಪಿನಲ್ಲಿ ನುಸುಳಿಬಿಟ್ಟ. ಆದರೆ ಅದೇ ಸ್ಪೀಡಿನಲ್ಲಿ ಹೋಗಿ ಎದುರಿಗಿದ್ದ ಮೈಲಿಗಲ್ಲಿಗೆ ಗುದ್ದಿಸಿಬಿಟ್ಟ! ಕೇವಲ ಐದಾರು ಸೆಕೆಂಡುಗಳಲ್ಲಿ ಇಷ್ಟೆಲ್ಲಾ ನಡೆದುಹೋಯ್ತು. … Read more