Facebook

ಪಂಜು ಕಾವ್ಯಧಾರೆ

೧. *ಒಲವಿನ ಕನಸು * ಕಂಡಿರದ ಮೊಗದ ಮೂರ್ತಿಯನು ಕೆತ್ತಿ… ತನ್ನಿಷ್ಟದ ಭಾವಗಳ ಅದರೆದೆಗೆ ಮೆತ್ತಿ… ಕಣ್ಣಕಾಂತಿಯಲಿ ಸವಿದು ಒಲವ ಸೊಬಗನು… ನೆನಪು-ಕನಸುಗಳ ಜಂಟಿ ಓಲಗದಿ… ಸಾಕ್ಷ್ಯ ಬರೆದಿತ್ತು ಚಂದ್ರಮನ ಕಾಂತಿ… ೨. *ತೆರೆದ ಪುಸ್ತಕದಂತ ಬದುಕು* ತೆರೆದ ಪುಸ್ತಕದಂತ ಬದುಕು ಓದುಗರು ಹಲವರು ಹಲವು ತೆರನವರು ತೆಗಳುವವರು, ಹೊಗಳುವವರು ಓದಿಯು ಓದದಂತಿರುವವರು ಓದದೆಯು ಜರೆಯುವವರು ಓದದೆಯು ಹೊಗಳುವವರು ಎಲ್ಲರ ಬಾಯಿಗೆ ಆಹಾರವಾಗೋ ಬಾಳು ತೆರೆದ ಪುಸ್ತಕದಂತ ಬಾಳು ಎನ್ನ ನೋವುಗಳ ಜ್ವಾಲೆಯಲ್ಲಿ ಚಳಿ ಕಾಯಿಸಿಕೊಂಡವರೆಷ್ಟೋ ಎನ್ನ […]

ಯೂಟ್ಯೂಬ್‌ ನಲ್ಲಿ ಮೊಟ್ಟಮೊದಲ ಬಾರಿಗೆ ಕನ್ನಡ ಮಾಧ್ಯಮದಲ್ಲಿ ಬ್ಯಾಂಕ್ ಪರೀಕ್ಷೆಯ ತರಬೇತಿ

ಆತ್ಮೀಯರೆ, ನನಗೆ ಬಹಳ ಖುಷಿ ಎನಿಸುತ್ತಿದೆ. ಯಾಕೆಂದರೆ ಕನ್ನಡ ಮಾಧ್ಯಮದಲ್ಲಿ ಉಚಿತವಾಗಿ ಬ್ಯಾಂಕ್ ಪರೀಕ್ಷೆ ತರಬೇತಿಯನ್ನು ಯೂಟ್ಯೂಬ್ ಮುಖಾಂತರ ಪ್ರಾರಂಭಿಸಿದ್ದೇನೆ. ನೀವೆಲ್ಲ ಕೈಜೋಡಿಸುವಿರಿ ಎಂದು ನಿರೀಕ್ಷಿಸುತ್ತೇನೆ. ನಾನು ಭಾರತೀಯ ಸ್ಟೇಟ್ ಬ್ಯಾಂಕಿನ ಸೇವೆಗೆ ರಾಜೀನಾಮೆ ನೀಡಿ ಸ್ಪರ್ಧಾಕಾಂಕ್ಷಿಗಳಿಗೆ ಬ್ಯಾಂಕ್ ಪರೀಕ್ಷೆಯ ತರಬೇತಿಯನ್ನು ಪ್ರಾರಂಭಿಸಿದೆ. ಬೆಳಗಾವಿ ಜಿಲ್ಲೆಯ ನೂರಾರು ವಿದ್ಯಾರ್ಥಿಗಳು ನಮ್ಮ ಸಂಸ್ಥೆಗೆ ಬಂದು ತರಬೇತಿ ಪಡೆದು ಕೆಲವರು ಯಶಸ್ಸನ್ನೂ ಗಳಿಸಿದರು. ಆದರೆ ನಾನು ಕ್ಲಾಸರೂಮಿನಲ್ಲಿ ಕಲಿಸಲು ಸಾಧ್ಯವಾಗುತ್ತಿರುವುದು ಕೇವಲ ನಲವತ್ತು ಐವತ್ತು ಜನರಿಗೆ ಮಾತ್ರ. ಅವಶ್ಯವಿದ್ದವರಿಗೆಲ್ಲ ನನ್ನಲ್ಲಿರುವ […]

ಕಡಿದೊಗೆದ ಬಳ್ಳಿಯು ಕುಡಿಯೊಡೆಯುವಂತೆ: ಎಸ್. ಜಿ. ಸೀತಾರಾಮ್, ಮೈಸೂರು

“ತ್ಯಾಜ್ಯ ವಸ್ತು” ವಿಲೇವಾರಿಯ ಬಗ್ಗೆಯೇನೋ ಇಂದು ಎಲ್ಲೆಡೆ ಬಿಸಿಬಿಸಿ ಚರ್ಚೆಗಳಾಗುತ್ತಿವೆ; ಆದರೆ, ತಮ್ಮ ಕುಟುಂಬ, ಬಂಧು-ಬಳಗ, ಸಮುದಾಯ, ಯಾವುದಕ್ಕೂ ಬೇಡವಾದ “ತ್ಯಾಜ್ಯ ವ್ಯಕ್ತಿ”ಗಳ ಸ್ಥಿತಿಗತಿಯ ಬಗ್ಗೆ ‘ಕ್ಯಾರೇ?’ ಎನ್ನುವ ಮಂದಿ ಎಷ್ಟಿದ್ದಾರು? ಹಾಗೆನ್ನುವವರಲ್ಲೂ, ಈ ಪರಿಸ್ಥಿತಿಗೆ ಏನಾದರೊಂದು ಪರಿಹಾರ ಹೊಂದಿಸಬೇಕೆಂದು ನಿಜವಾಗಿ ‘ಕೇರ್’ ಮಾಡುವವರು ಅದೆಷ್ಟು ಇದ್ದಾರು? ಇಂಥ ದಾರುಣ ಅವಸ್ಥೆಯ ನಡುವೆ, ಸಮಾಜದ ಕುಪ್ಪೆಯಲ್ಲಿ ಕಾಲ ತೇಯುತ್ತ, ಬದುಕಾಟದ ಕೊಟ್ಟಕೊನೆಗೆ ಹೇಗೋ ‘ಜೋತುಬಿದ್ದಿರುವ’ ಸ್ತ್ರೀಯರಿಗೆ ಅನ್ನ, ಆರೈಕೆ, ನೆರಳು, ನೆಮ್ಮದಿ ನೀಡುವ ಸಲುವಾಗಿ, ವಿದ್ಯಾವಂತ, ದಯಾಶೀಲ, […]

ಗುಲಾಮಿ: ಗಿರೀಶ ಜಕಾಪುರೆ

ಮೂಲ : ಖಲೀಲ ಜಿಬ್ರಾನ್ ಕನ್ನಡಕ್ಕೆ : ಗಿರೀಶ ಜಕಾಪುರೆ ಮಾನವರು ಬದುಕಿನ ಗುಲಾಮರು. ಜೀವನದ ಜೀತದಾಳುಗಳು. ಈ ಬದುಕು ಅವರ ಹಗಲುಗಳಲ್ಲಿ ದುಃಖ ಮತ್ತು ಕ್ಲೇಶದ ಬಿರುಗಾಳಿಯಾಗಿ ಬೀಸುತ್ತದೆ, ರಾತ್ರಿಗಳಲ್ಲಿ ಕಣ್ಣೀರು ಮತ್ತು ಸಂತಾಪದ ಮಹಾಪೂರವಾಗಿ ನುಗ್ಗುತ್ತದೆ. ಏಳು ಸಾವಿರ ವರ್ಷಗಳಾದವು ನಾನು ಜನಿಸಿ. ಅಂದಿನಿಂದಲೂ ನಾನು ತಮ್ಮ ಕೈಕಾಲುಗಳಿಗೆ ಸುತ್ತಿದ ಭಾರದ ಬೇಡಿಗಳನ್ನು ಎಳೆಯುತ್ತ ಹೆಜ್ಜೆ ಹಾಕುತ್ತಿರುವ ಬದುಕಿನ ಗುಲಾಮರನ್ನು ಕಾಣುತ್ತಿದ್ದೇನೆ. ನಾನು ಭೂಮಿಯ ಪೂರ್ವಪಶ್ಚಿಮಗಳಲ್ಲಿ ಸುತ್ತಾಡಿದ್ದೇನೆ, ಜೀವನದ ನೆರಳು ಬೆಳಕುಗಳಲ್ಲಿ ದಿಕ್ಕೇಡಿಯಾಗಿ ಅಲೆದಿದ್ದೇನೆ. […]

ಬದಲಾಗುವ ಬಣ್ಣಗಳು (ಭಾಗ 2): ಅಶ್ಫಾಕ್ ಪೀರಜಾದೆ

ಇಲ್ಲಿಯವರೆಗೆ  – 3 – ತಿಂಗಳ ಬಳಿಕ ಪ್ರೇಮಾ ಮರಳಿ ಬಂದ ಸುದ್ದಿ ಕತ್ತಲೆ ಕವಿದ ಚೇತನನ ಮನಸ್ಸಿಗೆ ಸುರ್ಯೋದಯವಾಗಿತ್ತು. ತಿಂಗಳಿಂದ ಶೇವ್ ಕಾಣದ ಮುಖದ ತುಂಬ ಗಡ್ಡ ಮೀಸೆ… ಬಾಚನಿಗೆ ಕಾಣದ ತಲೆ… ಕೆದರಿದ ಕೂದಲು… ಮೈಮೇಲೆ ಕೊಳೆಯಾದ ಬಟ್ಟೆಗಳು… ಹಳ್ಳಿ ಹುಂಬನಂತೆ ಹುಚ್ಚನಂತೆ ತೋರುತ್ತಿದ್ದ. ಹಾಗೇ ಸೀದಾ ಪ್ರೇಮಾಳ ಮನೆಯತ್ತ ಹೆಜ್ಜೆ ಹಾಕಿದ್ದ. ಡೋರ ಮುಂದೆ ನಿಂತು ಬೆಲ್ ಮಾಡಿದ ಕೆಲವೇ ಕ್ಷಣಗಳಲ್ಲಿ ಪ್ರೇಮಾಳ ತಂದೆ ಬಾಗಿಲು ತೆರೆದು ಚೇತನನ ಸ್ಥಿತಿ ನೋಡಿ ಸ್ವಲ್ಪ ಗಾಬರಿಯಾದರು. ಏಕೆಂದರೆ ಮೊದಲಿನಿಂದಲೂ ಚೇತನ ಪ್ರೇಮಾಳ […]

ನಾನು ಮತ್ತೆ ನಾನಾದದ್ದು….!: ಶೀಲಾ. ಗೌಡರ

ಆಹಾ….! ನಾನೂ ಸಾಮಾನ್ಯ ಗೃಹಿಣಿಯರಂತೆ ಸುಮ್ನೆ ಮನೆ ನಿಭಾಯಿಸಿಕೊಂಡು, ಮನೇಲಿ ಹಾಯಾಗಿ ಇರಬಹುದಿತ್ತು, ಅಂತ ಎಷ್ಟೋಸಲ ಅನಿಸಿದ್ದುಂಟು. ಕೆಲಸ ಬೇಡ ಅಂತ ಬಿಡುವಂತಿಲ್ಲ…! ಸರಕಾರಿ ಕೆಲಸ…! ಮೇಲಾಗಿ ಶಿಕ್ಷಕ ವೃತ್ತಿ…. ಎಷ್ಟೊಂದು ಸುರಕ್ಷಿತ, ನೆಮ್ಮದಿ. ಆದರೆ ಕೆಲವೊಮ್ಮೆ ಮನೆ, ಶಾಲೆ ಎರಡನ್ನೂ ನಿಭಾಯಿಸುವಾಗ ಉಶ್ಯಪ್ಪ ಅಂತ ಬಸವಳಿದು, ಕಾಲಿಗೆ ಗಾಲಿ ಕಟ್ಟಿ ಇಪ್ಪತ್ತು ವರ್ಷಗಳಿಂದಲೂ ಬಸ್ಸಿನ ಹಿಂದೆ ಓಡುವಾಗ, ಏನೋ ಟೆನ್ ಶನ್ ನಲ್ಲಿ ಮನೆಯವರ ಹತ್ರ ಬಯ್ಸಿಕೊಡಾಗ, ಮಕ್ಕಳ ಓದಿನ ಬಗ್ಗೆ-ಊಟದ ಬಗ್ಗೆ-ಆರೋಗ್ಯದ ಬಗ್ಗೆ ಸಮಸ್ಯೆ […]

ಈ ಕ್ಷಣದಿಂದಲೇ ನೆಪಗಳಿಗೆಲ್ಲ ಗುಡ್ ಬೈ. . . . : ಆಶಾ ಹೆಗಡೆ

ಇನ್ನೂ ನೆನಪಿದೆ ನನ್ನ ಬಗ್ಗೆ ಗೆಳೆಯ ಗೆಳತಿಯರು ಆಡುತ್ತಿದ್ದ ಮಾತುಗಳು. . . ”ಹೇ, ಎಷ್ಟು ಚೆನ್ನಾಗಿ ಕತೆ, ಕವನ ಬರೀತಿಯಾ” “ಓ drawing ಕೂಡ ಮಾಡ್ತಿಯಾ?” “ಅರೆ ಎಷ್ಟು ಚೆನ್ನಾಗಿ ಹಾಡು ಹೇಳತೀಯಾ”, ”ಇವತ್ತಿನ speech ಎಷ್ಟು ಚೆನ್ನಾಗಿತ್ತು”, ”ನೀನ್ ಬಿಡು all rounder “,,, ಇವತ್ತಿಗೆ ಈ ಹೊಗಳಿಕೆ ಬರೀ ಹಿತವಾಗಿ ನೋಯಿಸುವ ನೆನಪುಗಳು ಮಾತ್ರ. ಹವ್ಯಾಸಕ್ಕೆ ಒರೆ ಹಚ್ಚಿ, ಅದ ಪ್ರತಿಭೆಯಾಗಿ ಪರಿವರ್ತಿಸಿ ಎಡಬಿಡದೆ ಅದೇ ದಾರಿಯಲಿ ಮುನ್ನಡೆದು ಏನಾದರೊಂದು ಸಾದಿಸಿದ್ದು ಮಾತ್ರ […]

ಒಂದು ಹಳ್ಳಿ ಜನರ ಉಳಿವಿನ ಹೋರಾಟ ಜಗದ್ವಿಖ್ಯಾತ ಪರಿಸರದ ಹೋರಾಟವಾಯಿತೆ ..!: ಕೆ ಟಿ ಸೋಮಶೇಖರ ಹೊಳಲ್ಕೆರೆ.

ಗಿಡ ಮರ ಪ್ರಾಣಿ ಪಕ್ಷಿ ಕ್ರಿಮಿ ಕೀಟಗಳು ತನ್ನಂತೆ ಪ್ರಕೃತಿಯ ಮಮತೆಯ ಮಕ್ಕಳು ಅವುಗಳಿಗೂ ಮಾನವನಂತೆ ಬದುಕುವ ಹಕ್ಕೂ, ಸ್ವಾತಂತ್ರ್ಯವೂ ಇದೆ ಎಂದು ಮಾನವ ಭಾವಿಸದೆ ಅವುಗಳನ್ನು ಮನಬಂದಂತೆ ತನಗೆ ಅನುಕೂಲವಾಗುವಂತೆ ದುಡಿಸಿಕೊಳ್ಳುತ್ತಲು ಹಿಂಸಿಸುತ್ತಲು ಕೊಲ್ಲುತ್ತಲೂ ಇದ್ದಾನೆ. ಇದು ಸರಿಯಲ್ಲ! ಇತ್ತೀಚೆಗೆ ಪ್ರಕೃತಿಯ ಉಳಿವಿನಲ್ಲಿ, ಬದುಕಿನಲ್ಲಿ, ನಲಿವಿನಲ್ಲಿ ಮಾನವನ ನಗು ಅಡಗಿದೆ! ಪ್ರಕೃತಿಯ ಗಿಡ ಮರ ಪ್ರಾಣಿ ಪಕ್ಷಿ ಜಲಚರಗಳನ್ನೂ ಮಾನವನ ಬದುಕು ಅವಲಂಬಿಸಿದೆ! ಅದರ ನಾಶ ಮಾನವನ ಸರ್ವನಾಶ! ಎಂದು ತಿಳಿದಾಗಿನಿಂದ ಪ್ರಕೃತಿಯನ್ನು ಅದನ್ನು ಆಶ್ರಯಿಸಿರುವ […]

ಪರಿವರ್ತನೆ ನನ್ನಿಂದಲೇ . . . . .: ಜಯಲಕ್ಷ್ಮಿ ಕೆ. , ಮಡಿಕೇರಿ

” ನಿನ್ನ ಮಗನಿಗೆ ಎಷ್ಟು ಪರ್ಸೆಂಟು ಬಂತೂ . . ? 89% ?? ಅಯ್ಯೋ . . . ಇನ್ನು ಸ್ವಲ್ಪ ಓದಿದ್ದಿದ್ದರೆ 9ಂ% ಬರುತ್ತಿತ್ತು , ಹೋಗ್ಲಿ ಬಿಡು . . . ಇನ್ನೇನ್ ಮಾಡೋಕಾಗುತ್ತೆ . ನನ್ ಮಗಳಿಗೆ ಓದಿಸಿ ಓದಿಸಿ 98% ತೆಗೆಸೋ ಹೊತ್ತಿಗೆ ನಂಗೆ ಸಾಕಾಗಿ ಹೋಗಿತ್ತು. ಅಂದ ಹಾಗೆ ನಿನ್ನ ತಂಗಿ ಮಗಳೂ ಪಿ ಯು ಸಿ . . ಅಲ್ವಾ ? ಅವಳೆಷ್ಟು ಮಾರ್ಕ್ಸ್ ತಕೊಂಡಳು ??” […]

ಹಂಪೆಯ ಪಳುಯುಳಿಕೆಗಳು, ಪ್ರೇಯಸಿ ಮತ್ತು ನನ್ನ ಹೆಂಡತಿ: ಧೀರೇಂದ್ರ ನಾಗರಹಳ್ಳಿ

ಹಲೋ ಹನಿ , ಬೆಳಿಗ್ಗೇನೆ ವಿಡಿಯೋ ಕಾಲ್ ಮಾಡಿ ಆಗಿದೆ ಮತ್ತೇನು ಈ ‘ಅಕ್ಷರಗಳು ‘ ಅಂತ ಆಶ್ಚರ್ಯ ಆಗಬಹುದು. ಈ ಮೇಲಿಗೆ ಒಂದು ಕಾರಣವಿದೆ. ಈ ವಾರಾಂತ್ಯದಲ್ಲಿ ಬಿ. ಬಿ. ಸಿಯ ಹಂಪೆಯ ಬಗ್ಗೆ ಒಂದು ಡಾಕುಮೆಂಟರಿಯನ್ನು ನೋಡಿದೆ. ವಿಜಯನಗರ ಸಾಮ್ರಜ್ಯದ ವಿವರಗಳನ್ನು ಕಟ್ಟಿ ಕೊಟ್ಟರು. ಹಾಗೆಯೇ ಬಹಮನಿ ಸುಲ್ತಾನರಿಂದ ನಾಶವಾದ ಹಂಪೆಯ ವಿವರವನ್ನು ಕೊಡಲಾಯಿತು. ಹಂಪೆಯ ನಾಶದ ವಿಷಯವನ್ನು ತೋರಿಸುವಾಗಲಂತೂ – ನಾನು ನಿಜವಾಗಿಯೂ ಸತ್ತೆ ಹೋದೆ. ಆ ಸಾಲು ಸಾಲು ಮುರಿದು ಹೋದ […]

ಪರೀಕ್ಷೆಯಲ್ಲಿ ಪಾಸಾದವರೊಂದಿಗೆ ಫೇಲಾದವರೂ ಉತ್ತಮ ಸಾಧಕರು…: ವೀರಣ್ಣ ಮಂಠಾಳಕರ್, ಬಸವಕಲ್ಯಾಣ

ಪರೀಕ್ಷೆಯ ಫಲಿತಾಂಶ ಬಂದ ತಕ್ಷಣ ಅದೇಷ್ಟೋ ವಿದ್ಯಾರ್ಥಿಗಳು ಮಾರ್ಕ್ಸ್ ಕಡಿಮೆ ಬಂತು/ ಫೇಲಾದೆ ಎಂಬ ಕಾರಣಕ್ಕೆ ಮಾನಸಿಕ ಸ್ಥೈರ್ಯವನ್ನು ಕಳೆದುಕೊಳ್ಳದೇ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಬೇಕು. ಪಾಸಾದವರು, ರ್ಯಾಂಕ್ ಪಡೆದವರಷ್ಟೇ ಪ್ರತಿಭಾವಂತರಲ್ಲ. ನೆನಪಿರಲಿ ಫೇಲಾದವರೂ ಜೀವನದ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ನೆನಪಿಸಿಕೊಂಡು, ಮುಂದಿನ ಗುರಿ-ಛಲದೊಂದಿಗೆ ಮುನ್ನುಗ್ಗಬೇಕು. ಜೀವನ ಮತ್ತು ಸಾಧನೆಗೆ ಶಿಕ್ಷಣವೊಂದೇ ಮುಖ್ಯವಲ್ಲ. ಕನಿಷ್ಠ ಓದು ಬರಹ ಕಲಿತವರೆಷ್ಟೋ ಶೈಕ್ಷಣಿಕ ವಿದ್ಯಾಭ್ಯಾಸದಲ್ಲಿ ಉತ್ತಮ ಬರಹಗಾರರಾಗಿ ರಾಜ್ಯ/ರಾಷ್ಟ್ರ ಮಟ್ಟದಲ್ಲಿ ಹೆಸರಾಗಿದ್ದಾರೆ. ಸಾಮಾಜಿಕ ಚಿಂತಕರಾಗಿ, ಪತ್ರಕರ್ತರಾಗಿ, ಪತ್ರಿಕಾ ಸಂಪಾದಕರಾಗಿ, ಹೋರಾಟಗಾರರಾಗಿ ಒಳ್ಳೆಯ […]

ಶಿಶು ಗೀತೆ: ದೇವರಾಜ್ ನಿಸರ್ಗತನಯ, ನಾಗರಾಜನಾಯಕ ಡಿ.ಡೊಳ್ಳಿನ

ರಜೆಯ ಮಜ… ಬೇಸಿಗೆ ರಜೆಯಲು ಪಾಠವಂತೆ ಯಾರಿಗೆ ಬೇಕಮ್ಮಾ ? ಅಜ್ಜಿಯ ಮನೆಯಲಿ ಆಡಿ ನಲಿವೆ ಊರಿಗೆ ಕಳಿಸಮ್ಮಾ..!! ಹತ್ತು ತಿಂಗಳು ಶಾಲೆಯ ಕಾಟ ಸಾಲದು ಏನಮ್ಮಾ ? ಎರಡು ತಿಂಗಳು ನಮ್ಮಯ ಆಟ ಆಡಲು ಬಿಡಿರಮ್ಮಾ..!! ಗೆಳೆಯರ ಜೊತೆಗೆ ಜೋಕಾಲಿಯಾಟ ಆಡುವೆ ಕಾಣಮ್ಮಾ ! ಹೊಂಗೆಯ ನೆರಳಲಿ ದುಂಬಿಯ ನಾನು ನೋಡಿ ನಲಿವೆನಮ್ಮಾ..!! ದನಕರುಗಳಾ ಜೊತೆ ಕಾಡು ಮೇಡನು ಅಲೆದು ಬರುವೆನಮ್ಮಾ ! ಹಳ್ಳಿಯ ಸೊಭಗ ಪ್ರಕೃತಿ ಸವಿಯ ಸವಿದು ಬರುವೆನಮ್ಮಾ..!! ಅಜ್ಜಿಯ ಜೊತೆಗೆ ಪ್ಯಾಟೆಯ […]

ಸಾಂಸ್ಕೃತಿಕ ವೀರ ಮೈಲಾರಲಿಂಗ ಪುಸ್ತಕ ವಿಮರ್ಶೆ: ಪ.ನಾ.ಹಳ್ಳಿ.ಹರೀಶ್ ಕುಮಾರ್

ಪುಸ್ತಕ ವಿಮರ್ಶೆ ಪುಸ್ತಕದ ಶೀರ್ಷಿಕೆ;- ಸಾಂಸ್ಕೃತಿಕ ವೀರ ಮೈಲಾರಲಿಂಗ ಲೇಖಕರು:- ಡಾ.ಚಿಕ್ಕಣ್ಣ ಯಣ್ಣೆಕಟ್ಟೆ. ಪ್ರಕಾಶನ:- ಗಡಿನಾಡ ಜಾನಪದ ಸಂಪರ್ಕಾಧ್ಯಯನ ಕೇಂದ್ರ ಪ್ರತಿಷ್ಠಾನ. ಕಾಳಿದಾಸ ನಗರ. ಸಿರಾ. ತುಮಕೂರು ಜಿಲ್ಲೆ. ಬೆಲೆ:- 150ರೂ ಪ್ರಥಮ ಮುದ್ರಣ: 2019 ಪುಟಗಳು: 214 ಡಾ.ಚಿಕ್ಕಣ್ಣ ಯಣ್ಣೆಕಟ್ಟೆ ವಿರಚಿತ ಸಾಂಸ್ಕೃತಿಕ ವೀರ ಮೈಲಾರಲಿಂಗ ಕೃತಿಯು ಕ್ಷೇತ್ರ ಕಾರ್ಯಾಧಾರಿತ ಅಧ್ಯಯನದಿಂದ ಸಂಗ್ರಹಿಸಿದ ಪ್ರತ್ಯಕ್ಷ ಸಾಕ್ಷಿಯಾಧಾರಿತ ಮಾಹಿತಿಗಳನ್ನೊಳಗೊಂಡ ರಚನೆಯಾಗಿದ್ದು ನಾಡಿನ ಸಾಂಸ್ಕೃತಿಕ ಹಾಗೂ ಜನಪದ ದೈವ ಮೈಲಾರಲಿಂಗಪ್ಪನ ಐತಿಹ್ಯ ಕುರಿತಾದ ಸಂಪೂರ್ಣ ಚಿತ್ರಣವನ್ನು ಓದುಗರಿಗೆ ಕಟ್ಟಿಕೊಡುವಲ್ಲಿ […]

ರಘು ಬಿ ಎಂ ಫೋಟೊಗ್ರಾಫಿ