Facebook

Archive for the ‘ಪಂಜು-ವಿಶೇಷ’ Category

ಹುಲಿ ಬಂತು ಹುಲಿ: ನಂದಾದೀಪ, ಮಂಡ್ಯ

ಹುಲಿ ಬಂತು ಹುಲಿ ಎಂದು ಅಜ್ಜಿ ಕತೆ ಶುರು ಮಾಡಿ ಹುಲಿ ಜಿಂಕೆನಾ ತಿಂದು ಬಿಡ್ತು ಎಂದು ಕತೆ ಮುಗಿಸುವಾಗ ನಮ್ಮೆಲ್ಲರ ಮನಸಲ್ಲಿ ಹುಲಿ ಎಂದರೆ ಏನೋ ಒಂದು ಅವ್ಯಕ್ತ ಭಯ ಆವರಿಸುತ್ತದೆ..! ಭಯದ ಜೊತೆಗೆ ಹುಲಿಯನ್ನು ನೋಡಬೇಕೆಂಬ ಕುತೂಹಲವು ಹೆಚ್ಚಾಗುತ್ತದೆ..! ಮೃಗಾಲಯದಲ್ಲಿ ದೂರದಿಂದಲೇ ಹುಲಿಯನ್ನು ಬೆರಗುಗಣ್ಣಿಂದಲೇ ತುಂಬಿಕೊಂಡಿದ್ದು ಉಂಟು..! ಹುಲಿಯ ಮೇಲಿನ ಕುತೂಹಲ ಹೆಚ್ಚಿದಂತೆ ಅದರ ಬಗ್ಗೆ ತಿಳಿಯಲು ಒಂದಷ್ಟು ವಿಷಯಗಳನ್ನು ತಿಳಿಯಲು ಹೊರಟಾಗ ಅದು ಭಯ ಹುಟ್ಟಿಸುವ ಜೀವಿ ಅನ್ನೋದಕ್ಕಿಂತ ಸ್ವಾಭಿಮಾನಿ ಜೀವಿ ಎನ್ನುವುದು […]

ನಾವು… ನಮ್ಮದು: ಗುರುಪ್ರಸಾದ ಕುರ್ತಕೋಟಿ

(ಇಲ್ಲಿಯವರೆಗೆ) ನಮ್ಮ ಜೀವನದ ಗತಿಯನ್ನು, ನಮ್ಮ ಯೋಚನಾ ಲಹರಿಯನ್ನು ಬದಲಿಸಬಲ್ಲ ತಾಕತ್ತು ಇರುವುದು ಪುಸ್ತಕಗಳಲ್ಲಿ ಮಾತ್ರ ಎಂದು ಬಲವಾಗಿ ನಂಬಿರುವವನು ನಾನು. ನಮ್ಮ ಮನೆಯಲ್ಲಿದ್ದ ಪುಸ್ತಕಗಳು, ವಾರಕ್ಕೊಮ್ಮೆ ಬರುತ್ತಿದ್ದ ತರಂಗ, ಸುಧಾ ಗಳಂತಹ ಪತ್ರಿಕೆಗಳು ನಮ್ಮ ಓದಿನ ಹುಚ್ಚು ಹೆಚ್ಚಿಸಿದ್ದಲ್ಲದೆ ನಮ್ಮ ಯೋಚನಾ ಕ್ರಮವನ್ನೇ ಬದಲಿಸಿದ್ದವು. ಅವುಗಳು ಈಗಿನ ಗೂಗಲ್ ಗಿಂತ ಹೆಚ್ಚಿನ ಮಾಹಿತಿಗಳನ್ನು ಕೊಡುತ್ತಿದ್ದವು. ಈಗಿನ ಅಂತರ್ಜಾಲ ಒಂದು ಸಾಗರ. ಅದರಲ್ಲಿ ನಮಗೆ ಬೇಕಾದ ನಿಖರ ಮಾಹಿತಿ ತೊಗೊಳ್ಳೋದು ಅಂದರೆ ಒಳ್ಳೆಯ ಬಲೆಯಲ್ಲಿ ಮೀನು ಹಿಡಿದಂತೆ. […]

Online Hydroponics ತರಬೇತಿ (ಕನ್ನಡದಲ್ಲಿ)

ಮಣ್ಣನ್ನು ಬಳಸದೆ, ಅವಶ್ಯಕ ಲವಣಾಂಶ ಭರಿತ ನೀರಿನಲ್ಲಿ ನಿಮ್ಮ ಮನೆಯಲ್ಲಿಯೇ ಹಣ್ಣು ತರಕಾರಿ ಬೆಳೆಯುವ ವಿಧಾನದ ಬಗ್ಗೆ ಕೇಳಿದ್ದೀರಾ? ಅದಕ್ಕೆ hydroponics ಅನ್ನುತ್ತಾರೆ. ಅದನ್ನು ನೀವೂ ಕಲಿಯಬೇಕೆ? ಇಲ್ಲಿದೆ ಅವಕಾಶ! ಬೆಳೆಸಿರಿ ಸಂಸ್ಥೆ ಕನ್ನಡಿಗರಿಗಾಗಿ, ಕನ್ನಡದಲ್ಲಿಯೇ ವಿಶೇಷವಾಗಿ ತಯಾರಿಸಿದ ತರಬೇತಿ ಶಿಬಿರ, online ನಲ್ಲಿ… ಅದೂ ವಿಶೇಷ ರಿಯಾಯಿತಿಯೊಂದಿಗೆ !! ಒಬ್ಬರಿಗೆ ಕೇವಲ 999 ಮಾತ್ರ (ಮೂಲ ಬೆಲೆ 1999)! *ಕೆಲವೇ ಸೀಟುಗಳು ಲಭ್ಯ. ಮೊದಲು ಬಂದವರಿಗೆ ಆದ್ಯತೆ. ದಿನಾಂಕ: ಜೂನ್ 21, 2020 – ಭಾನುವಾರ […]

ಬದಲಾವಣೆಯ ಆರಂಭ ನಮ್ಮಿಂದಲೇ ಸಾಧ್ಯ: ಪ್ರೀತಿ ಕಾಮತ್

ಮೊನ್ನೆ ನಾನು ಮತ್ತು ನನ್ನ ಫ್ರೆಂಡ್ಸ ಸೇರಿ ನಡುರಾತ್ರಿ ವಿಡಿಯೋಕಾಲ್‍ನಲ್ಲೇ ಒಂದು ಸಣ್ಣ ಚರ್ಚಾಕೂಟ ಏರ್ಪಡಿಸಿದ್ದೆವು. ಹೆಣ್ಮಕ್ಳು ಅಂದ್ರೆ ಮತ್ತೆ ಕೇಳಬೇಕಾ? ಮಾತನಾಡಲು ಅವಕಾಶ ಸಿಕ್ಕರೆ ಸಾಕು. ಆದರೆ ಸದಾ ವಟಗುಡುವ ಗೆಳತಿ ಮಾತ್ರ ಬಾಯಿಗೆ ಬೀಗ ಹಾಕಿ ಕೂತಿದ್ದು ನನಗೆ ಸಹಿಸಲಾಗಲಿಲ್ಲ. ಕಾರಣ ಕೇಳಿದಾಗ ಹುಡುಗಿಯರು ಇಲ್ಲಿ ಮಾತನಾಡುವುದಷ್ಟೇ ಬಂತು ಸಮಯ ಬಂದಾಗ ನಾವು ಬಾಯಿ ಬಿಡಲಾರೆವು ಅಲ್ವಾ? ಅಂದಳು. ಲೇ ಎಲ್ಲಾದರೂ ಭೋಧೀ ವೃಕ್ಷದ ಕೆಳಗೆ ಕೂತಿದ್ದಿಯಾ? ಯಾಕೋ ತತ್ವಜ್ಞಾನಿಯಂತೆ ಮಾತಾಡುತ್ತಿದ್ದಿ, ಏನ್ ಮ್ಯಾಟರ್ […]

ಕುರಿಯ ಹಾಲಿನ ಐಸ್ ಕ್ರೀಮು (ಭಾಗ ೨): ಗುರುಪ್ರಸಾದ‌ ಕುರ್ತಕೋಟಿ

ಇಲ್ಲಿಯವರೆಗೆ ನಾವು ಅಮೆರಿಕೆಯ, ನೆಬ್ರಾಸ್ಕಾ ರಾಜ್ಯದ ಒಮಾಹಾದಲ್ಲಿ ಧರೆಗೆ ಬಂದು ಇಳಿದಿದ್ದು ಸೆಪ್ಟೆಂಬರದಲ್ಲಿ. ಆಗ ಅಲ್ಲಿ ಜಿಟಿ ಜಿಟಿ ಮಳೆ ಶುರು ಆಗಿತ್ತು. ಆದರೆ ಕಿಚಿ ಪಿಚಿ ಕೆಸರು ಇರಲಿಲ್ಲ! ಮಹಾ ನಿರ್ದಯಿ ಚಳಿಗಾಲಕ್ಕಿಂತ ಸ್ವಲ್ಪ ಮೊದಲು. ಹೀಗಾಗಿ ಮಳೆಯ ಜೊತೆಗೆ ಸ್ವಲ್ಪ ಚುಮು ಚುಮು ಚಳಿಯೂ ಇತ್ತು. ನಾವು ಹೋದ ಆ ಸಮಯ ಮುಂಬರುವ ಚಳಿಯ ಪರಿಚಯ ಮಾಡಿಕೊಳ್ಳಲು ತುಂಬಾ ಸಹಾಯ ಮಾಡಿತು. ಒಂದು ವೇಳೆ ಚಳಿಗಾಲದ ಹೊತ್ತಿನಲ್ಲಿ ಅಲ್ಲಿಗೆ ಹೋಗಿದ್ದರೆ ಹೊಂದಿಕೊಳ್ಳಲು ತುಂಬಾ ಕಷ್ಟ ಪಡುತ್ತಿದ್ದೆವೇನೋ ಅನಿಸಿತು. ಆದರೆ […]

ಅಹಮಿಲ್ಲದ ಮಹಮದರ ಬದುಕೇ ಕವಿತಾಸಾರ: ಡಾ. ಹೆಚ್ಚೆನ್ ಮಂಜುರಾಜ್

ಎಲ್ಲ ಮರೆತಿರುವಾಗ ಇಲ್ಲ ಸಲ್ಲದ ನೆವವ ಹೂಡಿ ಬರದಿರು ಮತ್ತೆ ಹಳೆಯ ನೆನಪೇ ಕಲ್ಲಿನಂದದಿ ಬಿದ್ದು ತಿಳಿಯಾದ ಎದೆಗೊಳವ ರಾಡಿಗೊಳಿಸುವೆ ಏಕೆ, ಮಧುರ ನೆನಪೇ? ಬಹಳ ಒಳ್ಳೆಯ ಕವಿ ಹಾಗೂ ಅದಕಿಂತಲೂ ಒಳ್ಳೆಯ ಮನುಷ್ಯರಾದ ನಿಸಾರ್ ಅಹಮದ್ ಅವರನ್ನು ನಾವು ಕಳೆದುಕೊಂಡಿದ್ದೇವೆ. ‘ಕನ್ನಡವೆಂದರೆ ಬರಿ ನುಡಿಯಲ್ಲ. ………’ ಎಂದು ತಿಳಿಸಿ ಕೊಟ್ಟವರಿವರು. ಮನಸು ಗಾಂಧಿಬಜಾರು ಎಂದವರು. ಕನ್ನಡ ನಾಡು ನುಡಿಗಳ ನಿತ್ಯೋತ್ಸವವನ್ನು ಸತ್ಯವಾಗಿಸಿದವರು. ಕುರಿಗಳು ಸಾರ್ ಕುರಿಗಳು ಎಂದು ವಿಡಂಬಿಸಿದವರು. ಮೂಲತಃ ಭೂಗರ್ಭ ವಿಜ್ಞಾನಿಯಾದರೂ ನವೋಲ್ಲಾಸದ ಕವಿಗಳಾಗಿಯೇ […]

ಬೆನ್ ಜಾನಸನ್‍ನ ನಾಟಕ- Every Man In His Humour- ಅವಿವೇಕತನಕ್ಕೆ ಕನ್ನಡಿ: ನಾಗರೇಖಾ ಗಾಂವಕರ

ಇಂಗ್ಲೆಂಡಿನ ಹಳೆಯ ಉಪನಗರ ಹಾಗ್ಸ್‍ಡೆನ್‍ನ ನೋವೆಲ್ಲ್ ವಯೋವೃದ್ದ, ಆದರೆ ಧೀಮಂತ, ವ್ಯವಹಾರಿಕ ಕಲೆಯಲ್ಲಿ ನಿಪುಣ. ಆತನ ಮಗ ತರುಣ ಎಡ್ವರ್ಡ. ಮಗನ ಆಸಕ್ತಿಗಳು ಆತನ ಶ್ರೇಯಸ್ಸು ಇವುಗಳ ಬಗ್ಗೆಯೇ ತಂದೆಯ ಮೊದಲ ಆದ್ಯತೆ. ಮಗನಿಗೆ ಆಪ್ತವಾಗಿರುವ ಕಾವ್ಯ ಸಾಹಿತ್ಯಗಳೆಲ್ಲವೂ ಆತನಿಗೆ ಉಪಯೋಗಕ್ಕೆ ಬಾರದ ಸಂಗತಿಗಳು. ಲಾಭವಿಲ್ಲದ ವಿದ್ಯೆ. ಅದರೊಂದಿಗೆ ಆತನ ಇನ್ನೊಂದು ಚಿಂತೆ ಸದಾ ಗಿಡುಗಗಳ ಪಳಗಿಸುತ್ತ ಕಾಲಹರಣ ಮಾಡುವ ಆತನ ಅಣ್ಣನ ಮಗ ಹಳ್ಳಿ ಗಮಾರ ಸ್ಟೀಫನ್ ಬಗ್ಗೆ. ಒಬ್ಬ ವ್ಯಾವಹಾರಿಕ ಚಾತುರ್ಯವುಳ್ಳ ನೊವೆಲ್ಲ್ ತಂದೆಯಾಗಿ […]

ನೀವು ಬಡಿಸಿದ್ದು ಪಾಯಸವೋ ಅಥವಾ ಪ್ರೀತಿಯೋ???: ನಾಗೇಶ್‌ ಪ್ರಸನ್ನ

ನಲ್ಮೆಯ ಗೆಳತಿಯೇ, ನೆನಪಿರಲಿ, ಇದು ನಾನು ಬರೆಯುತ್ತಿರವ ಮೊಟ್ಟಮೊದಲ ಪ್ರೇಮಪತ್ರ. ಈ ಹಿಂದೆ ಯಾರಿಗೂ ಬರೆದಿಲ್ಲ, ಮಂದೆಯೂ ಬರೆಯುವುದಿಲ್ಲ – ನಿಮಗೆ ಹೊರತಾಗಿ. ನಂಬುವುದು, ಬಿಡುವುದು ನಿಮ್ಮ ಕ್ಷಮೆಗೆ ಬಿಟ್ಟಿದ್ದು. ನೀವು ಬಡಿಸಿದ್ದು ಪಾಯಸವೋ ಅಥವಾ ಪ್ರೀತಿಯೋ??? ಸುಮಾರು 5-6 ವರ್ಷಗಳಾಯಿತು ನಾನು ನಿಮ್ಮನ್ನು ಮೊದಲ ಬಾರಿ ನೋಡಿ. ಆ ದಿನದ ನೆನಪು ನನ್ನೆದೆಯಲ್ಲಿ ಇನ್ನೂ ಉಸಿರಾಡುತ್ತಲೇ ಇದೆ. ಅಂದು, ನಿಮ್ಮ ಮನೆಯಲ್ಲಿ ಯಾವುದೋ ಪೂಜಾ ಕಾರ್ಯಕ್ರಮವಿತ್ತು, ಎಷ್ಟೋ ಜನ ನೆರೆದಿದ್ದರು. ಆದರೆ, ಅಷ್ಟೂ ಜನಗಳಲ್ಲಿ ನನ್ನ […]

ಪಂಜು ಕಾವ್ಯಧಾರೆ

ಅಪ್ಪನು ಯಾಕೋ ಹಿಂದಿದ್ದಾರೆ! ಅಮ್ಮ ಒಂಬತ್ತು ತಿಂಗಳು ಹೊತ್ತರೆ, ಅಪ್ಪ ಇಪ್ಪತ್ತೈದು ವರ್ಷ ಹೊತ್ತರೂ, ಯಾಕೋ ಅಪ್ಪ ಅಮ್ಮನಿಗಿಂತ ಹಿಂದಿದ್ದಾರೆ. ಮನೆಯಲ್ಲಿ ವೇತನ ಪಡೆಯದೆ ಅಮ್ಮ, ತನ್ನ ಸಂಪಾದನೆಯೆಲ್ಲ ಮನೆಗೆ ಖರ್ಚು ಮಾಡುವ ಅಪ್ಪ. ಇಬ್ಬರ ಶ್ರಮವೂ ಸಮಾನವಾದರು ಅಪ್ಪ ಯಾಕೋ ಹಿಂದಿದ್ದಾರೆ. ಏನು ಬೇಕೋ ಅದು ಪಾಕ ಮಾಡುವ ಅಮ್ಮ , ಏನು ಬೇಕೋ ಅದು ಕೊಡಿಸುವ ಅಪ್ಪ, ಇಬ್ಬರ ಪ್ರೀತಿಯೂ ಸಮಾನವೆಯಾದರೂ ಅಮ್ಮನಿಗೆ ಬಂದ ಹೆಸರಿಗಿಂತ ಅಪ್ಪ ಯಾಕೋ ಹಿಂದಿದ್ದಾರೆ. ಎದೆ ಮೇಲಿನ ಅಚ್ಚೆಯಲ್ಲಿ […]