
ಟೋಕಿಯೋದಲ್ಲಿ ನಡೆಯುತ್ತಿರುವ ಒಲಂಪಿಕ್ಸ್ ಕ್ರೀಡೆಯ ಬಾಕ್ಸಿಂಗ್ ನ ಕ್ವಾರ್ಟರ್ ಫೈನಲ್ ನಲ್ಲಿ (64-69 ಕೆ.ಜಿ. ವಿಭಾಗ) ಭಾರತದ ಲವ್ಲೀನ ಬೊರ್ಗೊಹೈನ್ ತನ್ನ ಎದುರಾಳಿ ಚೀನಾದ ಚೆನ್ ನೀನ್-ಚಿನ್ ರವರನ್ನು ಮಣಿಸಿ ಸೆಮಿ ಫೈನಲ್ ಪ್ರವೇಶಿಸಿದ್ದಾರೆ. ಇದರೊಂದಿಗೆ ಈ ಬಾರಿಯ ಒಲಂಪಿಕ್ಸ್ ನಲ್ಲಿ ಭಾರತಕ್ಕೆ ಮತ್ತೊಂದು ಪದಕ ಖಾತ್ರಿಯಾಗಿದೆ. ಸೆಮಿ ಫೈನಲ್ ನಲ್ಲಿ ಗೆದ್ದರೆ ಚಿನ್ನದ ಪದಕಕ್ಕಾಗಿ ಸೆಣೆಸುವ ಅವಕಾಶ ಪಡೆಯುವ ಲವ್ಲೀನರವರು ಒಂದು ವೇಳೆ ಸೆಮಿ ಫೈನಲ್ ನಲ್ಲಿ ಸೋತರೆ ಕಂಚಿನ ಪದಕ ಪಡೆಯಲಿದ್ದಾರೆ. ಸೆಮಿಫೈನಲ್ ನಲ್ಲಿ ಸೋತ ಇಬ್ಬರೂ ಸ್ಪರ್ಧಾಳುಗಳಿಗೂ ಬಾಕ್ಸಿಂಗ್, ಜ್ಯೂಡೋ, ಟ್ವಕಾಡೋ, ರೆಜ್ಲಿಂಗ್ ನಂತಹ ಒಲಂಪಿಕ್ಸ್ ಕ್ರೀಡೆಯಲ್ಲಿ ಕಂಚಿನ ಪದಕ ನೀಡಲಾಗುತ್ತದೆ. ಭಾರತಕ್ಕೆ ಲವ್ಲೀನರವರು ಚಿನ್ನದ ಪದಕ ಗೆದ್ದು ತರಲಿ ಎಂದು ನಾವೆಲ್ಲರೂ ತುಂಬು ಹೃದಯದಿಂದ ಹಾರೈಸೋಣ.