ಸ್ವಾತಂತ್ರ್ಯವೋ ಸ್ವಾತಂತ್ರ್ಯ! : ಎಸ್.ಜಿ.ಸೀತಾರಾಮ್, ಮೈಸೂರು.
ಒಂದಾನೊಂದು ಕಾಲದಲ್ಲಿ ಭಾರತದಲ್ಲಿ ಹಚ್ಚಿದ ಸ್ವಾತಂತ್ರ್ಯದ ಕಿಚ್ಚು ಈಗ ಯಾವ ಆಳ-ಅಗಲಕ್ಕೆ ಹಬ್ಬಿದೆ ಎಂಬುದನ್ನು, ಸ್ವತಂತ್ರ ಭಾರತ ಜನನದ ಮಹಾಮಹೋತ್ಸವಕ್ಕೆಂದು ಇಂದು ನಾವು ಹಚ್ಚುವ ೬೭ ಹಣತೆಗಳ ಬೆಳಕಿನಲ್ಲಿ ಒಮ್ಮೆ ನಿಟ್ಟಿಸಿ ನೋಡುವುದು ಒಳಿತು. ಅಂದು ರಾಷ್ಟ್ರಸ್ವಾತಂತ್ರ್ಯಕ್ಕೆಂದು ಎಬ್ಬಿಸಿದ್ದ ಆ ಕಿಚ್ಚು ತಡವಿಲ್ಲದೇ ರಾಜ್ಯಸ್ವಾತಂತ್ರ್ಯಗಳೆಡೆಗೆ ತಿರುಗಿ, ಎಲ್ಲ ರಾಜ್ಯಗಳೂ ತಂತಮ್ಮ ಸ್ವಾತಂತ್ರ್ಯಕ್ಕಾಗಿ ಹೋರಾಡತೊಡಗಿದವು. ೧೯೫೬ರಲ್ಲಿ ಪುನರ್ವಿಂಗಡನೆಯ ಕಾರಣ ಕೇವಲ ಹದಿನಾಲ್ಕು ಆಗಿದ್ದ ರಾಜ್ಯಗಳ ಸಂಖ್ಯೆ ಇಂದು ಇಪ್ಪತ್ತೊಂಬತ್ತಾಗಿದೆ. ಬೋಡೋಲ್ಯಾಂಡ್, ಗೋರ್ಖಾಲ್ಯಾಂಡ್, ಪೂರ್ವಾಂಚಲ, ಬುಂದೇಲ್ಖಂಡ್, ವಿಂಧ್ಯದೇಶ, ವಿದರ್ಭ ಮತ್ತು … Read more