ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರ ಶ್ರೀರಾಮಪಟ್ಟಾಭಿಷೇಕಂ – ಒಂದು ತೌಲನಿಕ ವಿವೇಚನೆ: ಸಂತೋಷ್ ಟಿ.

“ರಾಮಾಯಣ ಜಗತ್ತಿನ ಮಹಾಕಾವ್ಯಗಳಲ್ಲಿ ಒಂದು. ಭಾರತಕ್ಕಂತೂ ಅದು ಆದಿ ಕಾವ್ಯ. ಅದನ್ನು ಕಾವ್ಯವೆಂದು ಆಸ್ವಾದಿಸುವ, ಪುರಾಣವೆಂದು ಆರಾಧಿಸುವ ಜನ ಕೋಟಿ ಕೋಟಿ. ಸಾಮಾನ್ಯ ಭಾರತೀಯನಿಗೆ ರಾಮಾಯಣವೊಂದು ಐತಿಹಾಸಿಕ ಘಟನೆ. ಅದರ ಬಗೆಗೆ ಅವನಲ್ಲಿ ಯಾವ ಪ್ರಶ್ನೆಗೂ, ಶಂಕೆಗೂ ಆಸ್ಪದವಿಲ್ಲ. ಸಂಸ್ಕೃತದಲ್ಲಿಯೂ ನಮ್ಮ ದೇಶಭಾಷೆಗಳಲ್ಲಿಯೂ ರಾಮಾಯಣ ಸಾವಿರಾರು ಕೃತಿಗಳಿಗೆ ಆಕರವಾಗಿದೆ. ಸಾವಿರಾರು ಕವಿಗಳಿಗೆ ಸ್ಫೂರ್ತಿಯನ್ನೊದಗಿಸಿದೆ. ಅದರ ಪಾತ್ರಗಳು ಪ್ರಸಂಗಗಳು ಆದರ್ಶಗಳು ನಾನಾ ವಿಧದ ಕಲಾಕೃತಿಗಳಾಗಿ ರೂಪ ತಾಳಿವೆ. ರಾಮಾಯಣ ಎಷ್ಟರ ಮಟ್ಟಿಗೆ ಜನಪ್ರಿಯವಾಯಿತೆಂದರೆ, ಎಷ್ಟು ಕೃತಿಗಳು ಅದನ್ನು ಆಧರಿಸಿ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮಹಿಳೆಯ ಘನತೆಯನ್ನು ಎತ್ತಿ ಹಿಡಿಯುವ ದಿಟ್ಟ ಸಿನಿಮಾ – ಕಾತಲ್‌ ದ ಕೋರ್: ಚಂದ್ರಪ್ರಭ ಕಠಾರಿ

ಪ್ರತಿಭಾವಂತ ಮಲಯಾಳಮ್ ನಿರ್ದೇಶಕ  ಜೊ ಬೇಬಿ –  2021ರಲ್ಲಿ ತೆರೆಗೆ ತಂದ ʼದ ಗ್ರೇಟ್‌ ಇಂಡಿಯನ್‌ ಕಿಚನ್‌ʼ ಸಿನಿಮಾಕ್ಕೂ ಮುಂಚೆ ರೆಂಡು ಪೆಣ್‌ ಕುಟ್ಟಿಕಲ್‌, ಕುಂಜು ದೇವಮ್‌, ಕಿಲೊಮೀಟರ್‌ ಕಿಲೋಮೀಟರ್ ಮತ್ತು ನಂತರ ಕೂಡ ಹಲವು ಸಿನಿಮಾಗಳನ್ನು ಫ್ರೀಡಮ್‌ ಫೈಟ್‌, ಶ್ರೀಧನ್ಯ ಕ್ಯಾಟೇರಿಂಗ್‌ ಸರ್ವೀಸ್ ನಿರ್ದೇಶಿಸಿದ್ದರೂ ʼದ ಗ್ರೆಟ್‌ ಇಂಡಿಯನ್‌ ಕಿಚನ್‌ʼ ಅವರಿಗೆ ಬಹು ಖ್ಯಾತಿಯನ್ನು ತಂದು ಕೊಟ್ಟ ಸ್ತ್ರೀಸಂವೇದನೆಯ ಸಿನಿಮಾ.  ಗೃಹಿಣಿಯನ್ನು ಅಡುಗೆಮನೆಗೆ ಸೀಮಿತಗೊಳಿಸಿ, ಅವಳ ಸ್ವಾತಂತ್ರ್ಯ, ಅಸ್ತಿತ್ವವನ್ನು ಕಸಿದುಕೊಂಡ ಪುರುಷ ಯಜಮಾನಿಕೆಯನ್ನು ಪ್ರಶ್ನಿಸುವ ವಿಶಿಷ್ಟ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮೂರು ಕವನಗಳು: ಸುಮತಿ‌ ಕೃಷ್ಣಮೂರ್ತಿ

ಸಮರ ಮಿಣುಕು ನಕ್ಷತ್ರಗಳ ಒಡ್ಡೋಲಗರಾಕೇಂದು ಆಸ್ಥಾನದಲಿ ಮಹಾ ಕಾಳಗ ಹೆಚ್ಚು ಹೊಳೆಯುವ ಚುಕ್ಕಿ ಯಾವುದೆಂದುಬಾನ್ ಕಡಲ ಹೊಳೆ ಮುತ್ತು ತಾನೇ ಎಂದು ಕೋಟಿ ಕೋಟಿ ತೇಜ ಪುಂಜಗಳಿಗೆಹರಿಯುತಿದೆ ಅಪರಿಮಿತ ಬೆಳಕ ಬುಗ್ಗೆ ಸುಧಾಂಶುವಿನ ಸ್ನಿಗ್ಧ ಸೊದೆಯ ಕುಡಿದುಉನ್ಮತ್ತ ತಾರೆಗಳು ಮನದುಂಬಿ ಕುಣಿದು ಇರಳೂರ ಪ್ರಜೆಗಳಿಗೆ ಹೊನಲು ಹಬ್ಬಸಜ್ಜುಗೊಂಡಿದೆ ಇಂದು ಹುಣ್ಣಿಮೆಯ ದಿಬ್ಬ ಕಾತರದಿ ಕೈ ಕಟ್ಟಿ ಕಾಯುತಿರುವಶಾಮನ ಮನದಲ್ಲಿ ಪ್ರೇಮ ಕಲರವ ಬೆದರುತ್ತ ಬೆವರುತ್ತಾ ಬಂದ ನಲ್ಲೆವಿರಹ ಬೇಗೆಯಲಿ ನರಳಿತ್ತು ಮುಡಿದ ಮಲ್ಲೆ ಯಮುನೆಗೂ ವಿಸ್ತಾರ ಬೆಳದಿಂಗಳುನಾಚುತಲಿ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

“ಕತ್ತಲ ಹೂವು” ನೀಳ್ಗತೆ (ಭಾಗ ೮): ಎಂ.ಜವರಾಜ್

ಭಾಗ – ೮ ಶಿವಯ್ಯನ ಅವ್ವ ಅಡಿನಿಂಗಿ ಸತ್ತು ಎರಡು ಎರಡೂವರೆ ವರ್ಷವೇ ಕಳೆದಿತ್ತು. ಅಡಿನಿಂಗಿ ಮಲಗುತ್ತಿದ್ದ ರೂಮೀಗ ಶಿವಯ್ಯನ ಹಿರೀಮಗನ ಓದಕೆ ಮಲಗಾಕೆ ಆಗಿತ್ತು. ಚಂದ್ರ ತನ್ನ ಅಣ್ಣನ ರೂಮಿಗೆ ಹೋಗಿ ಅವನ ಪುಸ್ತಕಗಳನ್ನು ಎತ್ತಿ ಎತ್ತಿ ನೋಡುತ್ತಿದ್ದ. ಒಂದು ಉದ್ದದ ಬೈಂಡಿತ್ತು. ಅದರ ಮೇಲೆ ಉದ್ದವಾದ ಮರದ ಸ್ಕೇಲಿತ್ತು. ಜಾಮಿಟ್ರಿ ಬಾಕ್ಸಿತ್ತು. ಮೂಲೇಲೆ ಒಂದು ದಿಂಡುಗಲ್ಲಿನ ಮೇಲೆ ಗ್ಲೋಬ್ ಇತ್ತು. ಅದನ್ನು ತಿರುಗಿಸಿದ. ಗೋಡೆಯಲ್ಲಿ ಇಂಡಿಯಾ ಮ್ಯಾಪು ಗಾಂಧೀಜಿ ಫೋಟೋ ತಗಲಾಗಿತ್ತು. ಹೊರಗೆ ಅಣ್ಣನ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಚಾಕು ಹಿಡಿದು ನಿಲ್ಲುತ್ತಾನೆ !: ಕೆ ಟಿ ಸೋಮಶೇಖರ ಹೊಳಲ್ಕೆರೆ

ಅವಳು ಯಾರ್ಯಾರೋ ಸುರಸುಂದರಾಂಗರು ಉನ್ನತ ಉದ್ಯೋಗದವರು ಬಂದರೂ ಬೇಡ ನನಿಗೆ ಇಂಜಿನಿಯರೇಬೇಕು ಎಂದು ಬಂದವರೆಲ್ಲರನ್ನು ನಿರಾಕರಿಸಿದಳು. ಕೊನೆಗೆ ಒಬ್ಬ ಇಂಜಿನಿಯರ್ ಒಪ್ಪಿಗೆಯಾದ. ಅವನಿಗೂ ಒಪ್ಪಿಗೆಯಾದಳು. ಮದುವೆಯೂ ಆಯಿತು. ಕಂಪನಿ ಕೊಟ್ಟ ಕಡಿಮೆ ರಜೆಯನ್ನು ಅತ್ತೆ ಮಾವರ, ನೆಂಟರಿಷ್ಟರ ಮನೆಯಂತೆ ಹನಿಮೂನಂತೆ ಅಂತ ಎಲ್ಲಾ ಸುತ್ತಿ ಮುಗಿಸಿದರು. ಎಲ್ಲಾ ಸುತ್ತಾಡಿದಮೇಲೆ ಉದ್ಯೋಗದ ಕೇಂದ್ರ ಸ್ಥಾನವನ್ನು ಬಂದು ಸೇರಲೇಬೇಕಲ್ಲ? ಇಬ್ಬರೂ ಪ್ರತಿದಿನ ಕಂಪನಿಗೆ ಕೆಲಸಕ್ಕೆ ಹೋಗುತ್ತಿದ್ದರು. ಪ್ರತಿದಿನ ಬೆಳಿಗ್ಗೆ 9 ಗಂಟೆಗೆ ಮನೆಬಿಟ್ಟು ಸಂಜೆ 6 ಗಂಟೆಗೆ ಮನೆಗೆ ಬರುತ್ತಿದ್ದರು. … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮುತ್ತಾಗದ ‘ಸ್ವಾತಿ ಮುತ್ತಿನ ಮಳೆ ಹನಿ…’: ಎಂ ನಾಗರಾಜ ಶೆಟ್ಟಿ

                  ʼ ಒಂದು ಮೊಟ್ಟೆಯ ಕತೆ ʼ ಯಿಂದ ʼಸ್ವಾತಿ ಮುತ್ತಿನ ಮಳೆ ಹನಿಯೆʼ ತನಕ ರಾಜ್‌ ಬಿ ಶೆಟ್ಟಿ ಹಲವು ಅವತಾರಗಳನ್ನು ಎತ್ತಿದ್ದಾರೆ. ಅವರ ಸೃಜನಶೀಲತೆ ಹಲವು ಪ್ರಯೋಗಳನ್ನು ಆಗು ಮಾಡಿದೆ; ಯಶಸ್ಸೂ ದಕ್ಕಿದೆ. ಅವರ ಹಿಂದಿನ ಚಿತ್ರಗಳಿಗಿಂತ ಭಿನ್ನವಾಗಿರುವ ʼಸ್ವಾತಿ ಮುತ್ತಿನ ಮಳೆ ಹನಿಯೆʼ ಸಿನಿಮಾ ಅವರ ಸಿನಿ ಪಯಣದ ಇನ್ನೊಂದು ʼತಿರುವೆʼನ್ನಬಹುದು. ಇದರಲ್ಲಿ ರಾಜ್‌ ಬಿ ಶೆಟ್ಟಿ ಪ್ರೇಕ್ಷಕರ ಅಭಿರುಚಿಗೆ ಹೊಂದುವ ಸಿನಿಮಾದ ಮಾಡುವ ಬದಲಾಗಿ ತಮಗೆ ಪ್ರಿಯವಾದುದನ್ನು ತೆರೆಯ ಮೇಲೆ ತರುವ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪ್ರತಿ ಸಾವಿನ ಹಿಂದೆ: ಅಶ್ಫಾಕ್ ಪೀರಜಾದೆ

ಸಮೃದ್ಧವಾದ ಜಾನುವಾರು ಸಂಪತ್ತು ಹೊಂದಿದ್ದ ಜನಪದ ಜಗತ್ತು ಅಕ್ಷರಶಃ ತತ್ತರಿಸಿ ಹೋಗಿತ್ತು. ದನಕರುಗಳು ರಾಶಿ ರಾಶಿಯಾಗಿ ಉಸಿರು ಚೆಲ್ಲುತ್ತಿದ್ದವು. ಮೃತ ದೇಹಗಳನ್ನು ಜೇಸಿಬಿ ಬಳಸಿ ಭೂಮಿಯೊಡಲಿಗೆ ನೂಕಲಾಗುತ್ತಿತ್ತು. ಪ್ರಾಣಿಗಳ ಮೂಕ ರೋಧನ ಆ ಭಗವಂತನಿಗೂ ಕೇಳಿಸದಾಗಿ ಆ ದೇವರು ಎನ್ನುವ ಸೃಷ್ಟಿಯೇ ಸುಳ್ಳು ಎನ್ನುವ ಕಲ್ಪನೆ ರೈತಾಪಿ ಜನರಲ್ಲಿ ಮೂಡುವಂತಾಗಿತ್ತು. ಇಂಥ ಒಂದು ಭಯಾನಕ ದುಸ್ಥಿತಿ ಹಿಂದೆಂದೂ ಕಂಡು ಬಂದಿರಲಿಲ್ಲ. ಇಡೀ ರೈತ ಸಮುದಾಯ ಆತಂಕದ ಸ್ಥಿತಿಯಲ್ಲಿ ಕಣ್ಣೀರು ಸುರಿಸುತ್ತ ಕಂಗಾಲಾಗಿ ಕುಳಿತಿದ್ದರೆ ಪಶು ವೈದ್ಯ ಲೋಕ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಕಪ್ಪೆರಾಯನ ಟ್ರೈನಿಂಗ್….: ರೂಪ ಮಂಜುನಾಥ

ಮನುಷ್ಯ ಭಾಳ ಸ್ವಾರ್ಥಿ ಕಣ್ರೀ. ಏನಾದ್ರೂ ಒಳ್ಳೆಯದಾಗ್ಲಿ, ಕರ್ಮ, ವಿಧಿ, ಹಣೆಬರಹ, ಪ್ರಾರಬ್ಧಗಳನ್ನೆಲ್ಲಾ ಮರ್ತೇಬಿಡ್ತಾನೆ. ತನ್ನ ಸಫಲತೆಯ ಕಾರಣಕ್ಕೆ ತನ್ನ ಸಾಧನೆಯ ಹಾದಿಯ ಪಟ್ಟಿಯನ್ನೇ ಕೊಡ್ತಾನೆ. ಅದೇ ಏನಾದ್ರೂ ವಿಷ್ಯ ಉಲ್ಟಾ ಆಯ್ತಾ, ಆ ಸೋಲಿಗೆಲ್ಲಾ ಕರ್ಮ, ವಿಧಿ…..ಮುಂತಾದವುಗಳ ಮೇಲೆ ಆರೋಪ ಹೊರಿಸಿ ತಾನು ಬಲು ಸಾಚಾ ಅಂತ ತನ್ನ ಹುಳುಕನ್ನ ತೇಪೆ ಹಾಕಿ ಮುಚ್ಚಿಕೊಳ್ತಾನೆ. ನಾನೂ ಮನುಷ್ಯಳೇ ಆಗಿರುವುದರಿಂದ ಇದಕ್ಕೆ ನಾನೂ ಹೊರತಲ್ಲ ಬಿಡಿ.ಇದೇ ರೀತಿ ನಾವು ನುಣುಚಿಕೊಳ್ಳೋದೂಂದ್ರೆ,”ಅಯ್ಯೋ ಯಾಕೋ ಸಮಯ ಕೂಡಿ ಬರ್ಲೇ ಇಲ್ಲ”,ಅಂತ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

“ಕತ್ತಲ ಹೂವು” ನೀಳ್ಗತೆ (ಭಾಗ ೭): ಎಂ.ಜವರಾಜ್

ಭಾಗ 7 ದಂಡಿನ ಮಾರಿಗುಡಿಲಿ ಕುಣೀತಿದ್ದ ನೀಲಳಿಗೆ ಅವಳ ಅವ್ವ ಸ್ಯಬ್ಬದಲ್ಲಿ ಹೊಡೆದು ಕೆಂಗಣ್ಣು ಬಿಟ್ಟು ಕೆಂಡಕಾರಿದ್ದು ಕಂಡು ದಿಗಿಲುಗೊಂಡ ಚಂದ್ರ ನಿಧಾನಕೆ ಮುಂಡಗಳ್ಳಿ ಬೇಲಿ ಮರೆಯಲ್ಲೇ ಸಾವರಿಸಿಕೊಂಡು ದೊಡ್ಡವ್ವನ ಹಿಂದೆಯೇ ಬಂದು ನಿಂತಿದ್ದ. ಅವನ ಕಿರಿ ತಮ್ಮ ಗೊಣ್ಣೆ ಸುರಿಸಿಕೊಂಡು ಚಂದ್ರನ ತಲೆಯನ್ನು ಸಸ್ದು ಸಸ್ದು ದಂಡಿನ ಮಾರಿಗುಡಿಗೇ ಕರೆದುಕೊಂಡು ಹೋಗುವಂತೆ ಆಕಾಶ ಭೂಮಿ ಒಂದಾಗ ತರ ಕಿಟಾರನೆ ಕಿರುಚುತ್ತ ಕಣ್ಣೀರು ಹರಿಸುತ್ತ ಗೋಳೋ ಅಂತ ಅಳುತ್ತಿತ್ತು. ಚಂದ್ರ ಸಿಟ್ಟುಗೊಂಡು ಅಳುತ್ತಿದ್ದ ತಮ್ಮನನ್ನು ಸೊಂಟದಿಂದ ಕೆಳಗಿಳಿಸಿ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

೩೬೦ ಡಿಗ್ರೀ ಪುಸ್ತಕದ ತಾಕಿದ ಸಾಲುಗಳು: ಅನುರಾಧಾ ಪಿ. ಸಾಮಗ  

ಕವಿ ಕೊಲರಿಜ್ ನ ಪ್ರಕಾರ, ʼಗದ್ಯದ ಗುರಿ ಓದುಗನಿಗೆ ವಾಸ್ತವವನ್ನು ತಲುಪಿಸುವುದು ಮತ್ತು ಪದ್ಯದ ಗುರಿ ಓದುಗನನ್ನು ತಾನೇ ತಲುಪಿ ಸಂತೋಷಗೊಳಿಸುವುದುʼ. ಹಾಗಾಗಿ ಗದ್ಯವೊಂದು ತಾನೆಷ್ಟೇ ಪ್ರಭಾವಶಾಲಿಯೆನಿಸಿಕೊಂಡಿದ್ದರೂ  ಹೆಚ್ಚಿನಸಲ ಬುದ್ದಿಯ ಪರಿಧಿಯೊಳಗೇ ನೆಲೆ ನಿಲ್ಲುತ್ತದೆ. ಅದೇ ಚಂದದ ಪದ್ಯವೊಂದು ಬುದ್ದಿಯನ್ನು ದಾಟಿ ಸೀದಾ ಭಾವದ ಕದ ತಟ್ಟಿಯೊಳಗೆ ಪದವಿಟ್ಟು ಮನಸ ಮನೆ ಮಾಡಿ ನಿಲ್ಲುತ್ತದೆ.  ವಾಸ್ತವವನ್ನೇ ಎದುರಿನವನ ಬುದ್ಧಿ-ಭಾವಗಳೆರಡೂ ತಣಿಯುವಂತೆ ಹೇಳಬೇಕಾದರೆ ಬಹುಶಃ ಪದ್ಯದ ಜಾಡಿನಲ್ಲಿ ಗದ್ಯವನ್ನು ಮುನ್ನಡೆಸಲಿಕ್ಕೆ ಬೇಕಾದಂತೆ ಒಂದು ಸೂಕ್ಷ್ಮ ಎಚ್ಚರದಲ್ಲಿ ಭಾಷೆಯನ್ನು ಬಳಸಿಕೊಳ್ಳುವ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಒಂದು ಐ ಲವ್ ಯು ಗೆ ಒಂದು ಮುತ್ತು ಅಂದ್ರು…: ಮಾಲಾ ಕೆ.

ಬಾಗಿಲು ತೆಗೆದು ಒಳಗೆ ಬಂದೆ, ಸ್ಕೂಲ್ ನಿಂದ ಬಂದಿರೋ ನನಗೆ ಈಗ ವಿಶ್ರಾಂತಿ ಬೇಕು ಅಂತ ಅನಿಸ್ತು, ಕೆಲ ಗಳಿಗೆ ಕಾಲು ಚಾಚಿ ಕೂತೇ…. ನೀನು ಬೇಕು ಅನಿಸ್ತು, ಮನಸು ಖಾಲಿ ಅನ್ಸುದ್ರು ಆವರಿಸಿಕೊಂಡೇ ಇರೋ ಶಕ್ತಿ ಇರೋದು ನಿನ್ ಒಬ್ಬನಿಗೆ. ದಣಿದ ದೇಹಕ್ಕೆ ನಿನ್ನ ನೆನಪು ಹಿತ ಅನಿಸ್ತಾ ಇದೆ. ವಿಶಾಲ ಎದೆಯಲ್ಲೊಮ್ಮೆ ತಲೆ ಇರಿಸಿ, ನಿನ್ನ ಹೂ ಮುತ್ತೊಂದ ಬಯಸ್ತಾ ಇದ್ದೀನಿ ಒಂಥರಾ ಎನರ್ಜಿ ಟಾನಿಕ್. ನೀನು ನನ್ ಜೊತೆ ಇರೋ ಪ್ರತಿಗಳಿಗೇನೂ ಸಂಭ್ರಮ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪ್ರೀತಿಯ ಪರಾಕಾಷ್ಠೆ- ಕಾತಲ್‌, ದಿ ಕೋರ್ : ಎಂ ನಾಗರಾಜ ಶೆಟ್ಟಿ

ಪ್ರತಿಯೊಬ್ಬ ಮನುಷ್ಯನಿಗೂ ಅವನಿಚ್ಛೆಯಂತೆ ಬದುಕುವ ಹಕ್ಕಿದೆ. ಆದರೆ ಆ ಹಕ್ಕನ್ನು ನಿರಾಕರಿಸಲಾಗುತ್ತದೆ. ಲಿಂಗ ತಾರತಮ್ಯ, ಶ್ರೇಣೀಕರಣಗಳ ಜೊತೆಯಲ್ಲಿ ದೈಹಿಕ ಬೇಡಿಕೆಗಳನ್ನೂ ಸಮಾಜ ಕಟ್ಟುಪಾಡಿಗೊಳಪಡಿಸಿದೆ. ಅನಾದಿ ಕಾಲದಿಂದಲೂ ಸಿದ್ಧ ಮಾದರಿಗಿಂತ ಭಿನ್ನವಾದ ಗಂಡು- ಹೆಣ್ಣಿನ ಲೈಂಗಿಕ ತುಡಿತಗಳಿವೆ. ಇವು ಪ್ರಕೃತಿ ದತ್ತವಾಗಿಯೇ ಇದ್ದರೂ ಸಾಮಾಜಿಕ ನಿಷೇಧದಿಂದಾಗಿ ಅವಹೇಳನೆ, ಬರ್ತ್ಸನೆ ಹಾಗೂ ದುರಂತಗಳಿಗೆ ಕಾರಣವಾಗಿವೆ. ಇತ್ತೀಚೆಗೆ- ಕೋರ್ಟ್‌ ತೀರ್ಪೂ ಕಾರಣವಾಗಿ- ಜನರಲ್ಲಿ ಕೆಲ ಮಟ್ಟಿಗೆ ಅರಿವು ಉಂಟಾಗಿ ಲೈಂಗಿಕ ಅಲ್ಪಸಂಖ್ಯಾತರ ಕುರಿತ ಸಿನಿಮಾ, ನಾಟಕ, ಮುಕ್ತ ಸಂವಾದಗಳಿಗೆ ಅವಕಾಶ ದೊರೆತಿದೆ. … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪುಸ್ತಕದ ಪೇಟೆಯಲ್ಲಿ ಈಗ ಹೊಚ್ಚ ಹೊಸ ಪುಸ್ತಕ “ಡಂಕಲ್ ಪೇಟೆ”

ಪುಸ್ತಕ: ಡಂಕಲ್ ಪೇಟೆ (ಕಥಾ ಸಂಕಲನ)ಲೇಖಕರು: ವೀರೇಂದ್ರ ರಾವಿಹಾಳ್ಪ್ರಕಾಶಕರು: ವಿಜಯ ಬುಕ್ಸ್, ಬಳ್ಳಾರಿಪುಟಗಳು: 148ಬೆಲೆ: Rs. 180/- (ಅಂಚೆ ವೆಚ್ಚ ಸೇರಿ)ಪ್ರತಿಗಳಿಗಾಗಿ ಸಂಪರ್ಕಿಸಿ: 9449622737Phone pay: 8660557637Google pay : 9449622737 ಕನ್ನಡದ ಬರಹಗಳನ್ನು ಹಂಚಿ ಹರಡಿ

ಕನ್ನಡದ ಬರಹಗಳನ್ನು ಹಂಚಿ ಹರಡಿ

ಹಲ್ಮಿಡಿ ಶಾಸನ ಕ್ರಿ.ಶ.ಸುಮಾರು ೪೫೦ -ಒಂದು ಟಿಪ್ಪಣಿ: ಸಂತೋಷ್ ಟಿ

ಜಯತಿ ಶ್ರೀ ಪರಿಷ್ವಙ್ಗ ಶಾರ್ಙ್ಗ (ಮಾನ್ಯತಿ) ರಚ್ಯುತಃದಾನವಾಕ್ಷೋರ್ಯುಗಾನ್ತಾಗ್ನಿಃ (ಶಿಷ್ಟಾನಾನ್ತು) ಸುದರ್ಶನಃನಮಃ ಶ್ರೀಮತ್ಕದಂಬನ್ತ್ಯಾಗಸಂಪನ್ನನ್ಕಲಭೋರ(ನಾ)ಅರಿಕಕುಸ್ಥಭಟ್ಟೋರನಾಳೆ ನರಿದಾವಿ(ಳೆ) ನಾಡುಳ್ ಮೃಗೇಶನಾಗೇನ್ದ್ರಾಭೀಳರ್ಭ್ಭಟಹರಪ್ಪೋರ್ ಶ್ರೀಮೃಗೇಶನಾಗಾಹ್ವಯರಿರ್ವ್ವರಾ ಬಟರಿಕುಲಾಮಲವ್ಯೋಮತಾರಾಧಿನಾಥನ್ನಳಪಗಣಪಶುಪತಿಯಾ ದಕ್ಷಿಣಾದಿ ಬಹು ಶತವಹನಾಹವದು(ಳ್ ) ಪಶುಪ್ರದಾನ ಶೌರ್ಯ್ಯೋದ್ಯಮಭರಿತೊ(ನ್ದಾನ ) ಪಶುಪತಿಯೆನ್ದು ಪೊಗಳೆಪ್ಪೊಟಣ ಪಶುಪತಿನಾಮಧೇಯನಾ ಸರಕ್ಕೆಲ್ಲ ಭಟರಿಯಾ ಪ್ರೇಮಾಲಯಸುತನ್ಗೆ ಸೇನ್ದ್ರಕಬಣೋಭಯ ದೇಶದಾವೀರಾಪುರುಷ ಸಮಕ್ಷದೆ ಕೇಕೆಯಪಲ್ಲವರಂ ಕಾದೆರೆದು ಪೆತ್ತಜಯನಾ ವಿಜಅರಸನ್ಗೆ ಬಾಳ್ಗಚ್ಚು ಪಲ್ಮಿಡಿಉಂ ಮೂಳವಳ್ಳಉಂ ಕೊಟ್ಟಾರ್ ಬಟಾರಿಕುಲದೊನಳಕದಮ್ಬನ್ಕಳ್ದೋನ್ ಮಹಾಪಾತಕನ್ಇರ್ವ್ವರುಂ ಸಳ್ಬಙ್ಗದರ್ ವಿಜಾರಸರುಂ ಪಲ್ಮಿಡಿಗೆ ಕುರುಮ್ಬಿಡಿವಿಟ್ಟಾರ್ ಅದಾನಳೆವೊನ್ಗೆ ಮಹಾಪಾತಕಮ್ ಸ್ವಸ್ತಿಭಟ್ಟರ್ಗ್ಗಿಗಳ್ದು ಒಡ್ತಲಿ ಆಪತ್ತೊನ್ದಿವಿಟ್ಟಾರಕರ. ಕನ್ನಡನಾಡಿನ ಮೊತ್ತಮೊದಲ ಭಾಷಿಕ ಸಾಂಸ್ಕೃತಿಕ ದಾಖಲೆಯಾಗಿರುವ ಈ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪದ್ದಕ್ಕಜ್ಜಿ ಮದುವಿ: ಡಾ.ವೃಂದಾ ಸಂಗಮ್

ಅಂದರ ಇದು ನಮ್ಮ ಪದ್ದಕ್ಕಜ್ಜಿ ಮದುವಿ ಅಲ್ಲ, ಅಕೀ ಮದುವ್ಯಾಗಿ ಐವತ್ತ ಅರವತ್ತ ವರ್ಷಾಗೇದ. ಅಕೀ ಮೊನ್ನೆ ಮೊನ್ನೆ ಮಾಡಿದ ಮೊಮ್ಮಗನ ಮದುವೀ ಕತಿಯಿದು. ಅಷ್ಟ. ಮೊನ್ನೆ ನಮ್ಮ ಪದ್ದಕ್ಕಜ್ಜಿ ಬಂದಿದ್ದಳು. ಪದ್ದಕ್ಕಜ್ಜಿ ಅಂದರ ಅಕೀ ಏನೂ ಸಾಮಾನ್ಯದಾಕಿ ಅಲ್ಲ. ಒಂದು ಕಾಲದಾಗ, ನಮ್ಮ ಇಡೀ ಬಾಳಂಬೀಡವನ್ನು ಆಳಿದಾಕಿ. ಅಂದರ, ನಿಮ್ಮ ಬಾಳಂಬೀಡ ಅಂದರ ಒಂದು ದೊಡ್ಡ ಸಾಮ್ರಾಜ್ಯವೇನು ಅಂತಲೋ ಅಥವಾ ಪದ್ದಕ್ಕಜ್ಜಿ ತಾಲೂಕು ಮತ್ತ ಜಿಲ್ಲಾ ಪಂಚಾಯಿತಿ ಅಧ್ಯಕ್ಷರೋ ಅಂತ ಪ್ರಶ್ನೆ ಕೇಳ ಬ್ಯಾಡರೀ. ಉತ್ತರಾ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಚಿನ್ನು ಪ್ರಕಾಶ್ ಶ್ರೀರಾಮನಹಳ್ಳಿ ಪದ್ಯಗಳು

(೧)ಮುಚ್ಚಿ ನಿಮ್ಮ ಒಡಕು ಬಾಯಿಬೆದರಿಬಿಟ್ಟಾನು ಮುಗ್ಧ ಹೃದಯಿಕೆಕ್ಕರಿಸುವ ನೋಟ ಬೂದಿಯಾಗುವ ಕೆಂಡಹೊಂಗನಸಿನ ಮನೆಯ ಕಟ್ಟಲುತೊಗಲೊಂದೇ ತೊಟ್ಟಿಲು ಕತೂಹಲದ ರೆಪ್ಪೆಯಗಲಿಸಿಕಲಿವ ತುಡಿತದೆ ನಗೆಯರಳಿಸಿಕುಳಿತ ಭಂಗಿಯ ನೋಡಿಮೋಡಿ ಮಾಡುವ ತೊದಲು ನುಡಿಭವ್ಯಲೋಕಕೆ ಮುನ್ನುಡಿ ಎತ್ತೆತ್ತಲೋ ಸಾಗುತಿಹವು ಕನಸುಗಳುಥಟ್ಟನೆ ಮೈದಳೆದು ಮುಂದೆ ಕುಳಿತಿವೆಮಂಡಿಯೂರಿ; ಎದೆಯ ಕದವ ತೆರೆತೆರೆದುತುಂಬಿ ತುಳುಕಲಿ ಸಿಹಿನುಡಿಯ ಹೊಂದೆರೆಸಾಕಿನ್ನು ಅರೆಬರೆ ಮಾತುಗಳು ಬಿತ್ತಿಬಾರದೇ ನಲ್ನುಡಿ ಇವನು ಅವನಲ್ಲ ಅವನಂತೆ ಇವನಿಲ್ಲಇವನಂತೆ ಅವನಿಲ್ಲ ಅವರಿವರಂತೆ ಇರಬೇಕಿಲ್ಲಅವನೊಲ್ಲೆನೆಂದದ್ದು ಇವನೇನು ಅರಿಯಬೇಕಿಲ್ಲಚಿಗುರುವ ಬಳ್ಳಿಯಿದು ಪಸರಿಸಲಿ ನವಕಂಪು ತನ್ನೊಡಲಲ್ಲಿ. ಒಂದು ಲೋಟದೊಳಗೆ ಹೃದಯಮತ್ತೊಂದರಲ್ಲಿ ಎದೆಯ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

“ಸಿದ್ಧಾಂತಗಳ ಹೇಗೆ ಕೊಲ್ಲುವೆ..?” ಅವಲೋಕನ: ವಿಮಲಾರುಣ ಪಡ್ಡಂಬೈಲ್

ಆನ್ಲೈನ್ ಸಂಗಾತಿ ಪತ್ರಿಕೆಯ ಸಂಪಾದಕರಾದ ಕವಿ ಶ್ರೀ ಕು. ಸ. ಮಧುಸೂದನ ರಂಗೇನಹಳ್ಳಿಯವರ “ಸಿದ್ಧಾಂತಗಳ ಹೇಗೆ ಕೊಲ್ಲುವೆ..?” 50 ಕವಿತೆಗಳ ಗುಚ್ಛದಲ್ಲಿ ಸಮಾಜದ ಸೂಕ್ಷ್ಮತೆಯ ಪಿಸುಮಾತುಗಳು ಮಾರ್ದನಿಸುತ್ತವೆ. ಆಗಾಗ ಪತ್ರಿಕೆಯಲ್ಲಿ ಪ್ರಕಟವಾಗುವ ಇವರ ಕವನಗಳು ಇತರ ಕವಿಗಳ ಕವನಗಳಿಗಿಂತ ಭಿನ್ನವಾಗಿವೆ. ವಾಚ್ಯತೆ ಇದ್ದರೂ ಹರಿತ ಪದಗಳು ಕವನಗಳಲ್ಲಿ ತಿವಿದಂತೆ ಭಾಸವಾಗುತ್ತವೆ. ಬಿಡಿ ಬಿಡಿ ಕವನಗಳನ್ನು ಓದುತ್ತಿದ್ದ ನನಗೆ ಇಡಿಯಾಗಿ ಓದುವ ಅವಕಾಶಕ್ಕಾಗಿ ಸಂತೋಷ ಪಡುತ್ತೇನೆ. ನನ್ನ ಮನದ ಬಾಗಿಲನ್ನು ತಟ್ಟಿದ ಈ ಕವನ ಸಂಕಲನ ಕಾವ್ಯದ ಅರಿವನ್ನು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪಂಜು ಕಾವ್ಯಧಾರೆ

ಬಾಳ ಹಣತೆ ಸುಳ್ಳು ಸತ್ಯದಾಟದಲ್ಲಿಶೂನ್ಯವಾಯಿತೇ ಬದುಕಿಲ್ಲಿ…..ಅನ್ಯಾಯವ ಅವಮಾನವ ಸಹಿಸಿಮುಖವಾಡದ ನಾಟಕವ ದಿಟ್ಟಿಸಿ….ಹಣತೆಯೊಂದನ್ನು ಹಚ್ಚಬೇಕಿದೆಇರಿಸು ಮುರಿಸಿನ ವ್ಯಥೆಯಲ್ಲಿ….ದಾರಿಯ ದೂರ ಸಹಿಸನೆಂದರೆನೆರಳ ಹಂಗು ಬಿಡುವುದೇ….ಯಾರದ್ದೋ ಬದುಕ ಬೆಳಕ ನಂದಿಸಿಕಗ್ಗತ್ತಲು ಎಂಬುವುರೇ……ಗುಡುಗು ಸಿಡಿಲಿನ ಆರ್ಭಟಕ್ಕೆಅಂಜದಿರೆಂದು….ಮತ್ತೆ ಮತ್ತದೇ ಹಣತೆಯಲ್ಲಿಪ್ರಕಾಶಮಾನವಾದ ಬೆಳಕು ಹೊಮ್ಮಲಿ…..ನೋವು ನಲಿವಿಗೆ ಕಾಲದಲೆಕ್ಕವಿಲ್ಲಿ…..ಅಂಧಕಾರವೇ ತುಂಬಿದ ಮನಗಳಲ್ಲಿಹೃದಯ ಜ್ಯೋತಿ ಬೆಳಗಲಿ -ರೋಹಿಣಿ ಪೂಜಾರಿ ಕೋಣಾಲು. ದೂರು… ಈ ಪದಗಳೇ ಮೊದಲಿನಂತಿಲ್ಲ..ಯಾವ ಭಾವಕ್ಕೂಹೊಂದಿಕೊಳ್ಳುವುದಿಲ್ಲಕವಿತೆಗಾಗಿ ಹಂಬಲಿಸುವ ನನ್ನಂಥವನನ್ನು ಬೆಂಬಲಿಸುವುದಿಲ್ಲ..ಅರ್ಥಕ್ಕೆ ಅಪಾರ್ಥ ಕೊಡುವ ಇವು ಪದಗಳೇ ಅಲ್ಲ ಎದೆಯೊಳಗೆ ಹದವಾಗಿ ಹುಟ್ಟುವ ಇವುಯಾರ ಕಿವಿಗೂ ಮುಟ್ಟುವುದಿಲ್ಲ..ಗಂಟಲಲ್ಲಿ ತೂರಿ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ