ಪ್ರಕಟಣೆ

ಸಮಾಜಮುಖಿ ಕಥಾಪುರಸ್ಕಾರ-2023 ಫಲಿತಾಂಶ ಪ್ರಕಟ

ಬೆಂಗಳೂರಿನ ಸಮಾಜಮುಖಿ ಪ್ರಕಾಶನ ಏರ್ಪಡಿಸಿದ್ದ 2023ನೇ ಸಾಲಿನ ವಾರ್ಷಿಕ ಕಥಾಸ್ಪರ್ಧೆಯಲ್ಲಿ ಒಟ್ಟು 398 ಕಥೆಗಾರರು ಭಾಗವಹಿಸಿದ್ದರು. ಆರಂಭಿಕ ಸುತ್ತಿನ ಆಯ್ಕೆಯ ನಂತರ ಎರಡನೇ ಹಂತದ 50 ಕಥೆಗಳನ್ನು ಹೊಸ ಪೀಳಿಗೆಯ ಲೇಖಕ ಡಾ.ಕೆ.ಎಚ್.ಮುಸ್ತಾಫ ಹಾಗೂ ಅಂತಿಮ ಹಂತದ ಆಯ್ಕೆಯನ್ನು ಯುವ ಲೇಖಕಿ ಚೈತ್ರಿಕಾ ನಾಯ್ಕ ಹರ್ಗಿ ಮಾಡಿದ್ದಾರೆ.

ತಲಾ ರೂ.5000 ನಗದು ಮತ್ತು ಪ್ರಶಸ್ತಿಪತ್ರ ಒಳಗೊಂಡ ‘ಸಮಾಜಮುಖಿ ಕಥಾ ಪುರಸ್ಕಾರ-2023’ಕ್ಕೆ ಆಯ್ಕೆಯಾಗಿರುವ ಐದು ಕಥೆ ಮತ್ತು ಕಥೆಗಾರರು:

ಬಯಕೆ (ದೀಪಾ ಹಿರೇಗುತ್ತಿ),

ಮುಝಫರ್ (ಎಂ.ನಾಗರಾಜ ಶೆಟ್ಟಿ),

ಹಲ್ಲೀರ ಮತ್ತು ರಂಗನಾಯಕಿ (ಶ್ರೀಹರ್ಷ ಸಾಲಿಮಠ),

ನಮ್ಮವರು (ದೀಪ್ತಿ ಭದ್ರಾವತಿ),

ಗೊಡ್ಡು (ಡಾ.ಪ್ರೇಮಲತ ಬಿ.‌).

ಸಮಾಜಮುಖಿ ವಾರ್ಷಿಕ ಕಥಾ ಸಂಕಲನಕ್ಕೆ ಆಯ್ಕೆಯಾದವರು: ನಂದಿನಿ ಹೆದ್ದುರ್ಗ, ಅನಿಲ್‌ ಟಿ. ಗುನ್ನಾಪುರ, ಸಂಜೋತಾ ಪುರೋಹಿತ, ಗೀತಾ ಕುಂದಾಪುರ, ಚಂದ್ರಪ್ರಭ ಕಠಾರಿ, ನಳಿನಿ ಭೀಮಪ್ಪ, ಆರ್‌.ಪವನ್‌ಕುಮಾರ್‌, ಪ್ರಕಾಶ್‌ ಪೊನ್ನಾಚಿ, ಸುಧಾ ಆಡುಕಳ, ಅಬ್ದುಲ್ ರಹಿಮಾನ್ ಬೀದರ್ ಕೋಟೆ (ಅರಬಿ), ಶ್ರೀದೇವಿ ಕೆರೆಮನೆ, ಆನಂದ ಕುಂಚನೂರ, ಡಾ.ಮಿರ್ಜಾ ಬಷೀರ್‌, ಸುಮಾ ರಮೇಶ್, ಭಾಗ್ಯಜ್ಯೋತಿ ಹಿರೇಮಠ.


ಕನ್ನಡದ ಬರಹಗಳನ್ನು ಹಂಚಿ ಹರಡಿ

Leave a Reply

Your email address will not be published. Required fields are marked *