“ಉತ್ತಮ ಕನ್ನಡ ಸಿನಿಮಾವನ್ನು ಬೆಂಬಲಿಸಿ – ‘ಫೋಟೋ’ ವಿಶೇಷ ಪ್ರದರ್ಶನದಲ್ಲಿ ನಮ್ಮೊಂದಿಗೆ ಕೈ ಜೋಡಿಸಿ!”

ನೀವು ಸಿನಿಮಾ ಪ್ರಿಯರೇ? ಒಳ್ಳೆಯ ಚಲನಚಿತ್ರಗಳನ್ನು ಆನಂದಿಸಲು, ಬೆಂಬಲಿಸಲು ಬಯಸುತ್ತೀರಾ? 

ಹಾಗಿದ್ದರೆ,  ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅಪಾರ ಪ್ರಶಂಸೆ ಗಳಿಸಿದ ಮತ್ತು ಮೂರನೇ ಪ್ರಶಸ್ತಿ ವಿಜೇತ ಚಲನಚಿತ್ರ “ಫೋಟೋ”ದ ವಿಶೇಷ ಪ್ರದರ್ಶನದಲ್ಲಿ ನಮ್ಮೊಂದಿಗೆ ಕೈ ಜೋಡಿಸಿ!

ಈ ಪ್ರದರ್ಶನದ ವಿಶೇಷತೆಯೆಂದರೆ, ಚಿತ್ರ ಪ್ರದರ್ಶನದ ನಂತರ ನಿರ್ದೇಶಕರು ಮತ್ತು ಚಿತ್ರತಂಡದೊಂದಿಗೆ ಸಂವಾದ ನಡೆಸಲು ನಿಮಗೆ ಅವಕಾಶ ಸಿಗಲಿದೆ. ನೀವು ಬರಹಗಾರರಾಗಿದ್ದರೆ, ಚಲನಚಿತ್ರ ನಿರ್ಮಾಣದ ಬಗ್ಗೆ ಆಸಕ್ತಿ ಉಳ್ಳವರಾಗಿದ್ದರೆ, ಚಲನಚಿತ್ರ ನಿರ್ಮಾಣ ಪ್ರಕ್ರಿಯೆಯನ್ನು ಅರ್ಥಮಾಡಿಕೊಳ್ಳಲು ಮತ್ತು “ಫೋಟೋ” ಚಿತ್ರತಂಡದಿಂದ ಹೊಸ ಒಳನೋಟಗಳನ್ನು ಪಡೆಯಲು ಇದೊಂದು  ಉತ್ತಮ ಅವಕಾಶ.

ಹಾಗೇ, ನೀವು ಪ್ರದರ್ಶನಕ್ಕೆ ಹಾಜರಾಗುವ ಮೂಲಕ ಚಿತ್ರದ ಇನ್ನಷ್ಟು ಪ್ರಚಾರಕ್ಕಾಗಿ ಅಗತ್ಯವಿರುವ ಹಣವನ್ನು ಸಂಗ್ರಹಿಸುವಲ್ಲಿ ನೀವು ನಿರ್ಮಾಪಕರಿಗೆ ಸಹಾಯ ಮಾಡಿದಂತಾಗುತ್ತದೆ. ನಿಮ್ಮಂತಹ ಪ್ರೇಕ್ಷಕರ ಪ್ರೋತ್ಸಾಹವು, ಹೆಚ್ಚು ಪ್ರಸ್ತುತವಾದ ಮತ್ತು ಇನ್ನೂ ಉತ್ತಮ ಸಿನಿಮಾಗಳನ್ನು ನಿರ್ಮಿಸುವಲ್ಲಿ ನಿರ್ಮಾಪಕರಿಗೆ ದೊಡ್ಡ ಬೆಂಬಲವಾಗಬಲ್ಲದು!

ಫೋಟೋ”  ಒಂದು ವಿಶೇಷ ಚಿತ್ರ ಹೇಗೆ?

“ಫೋಟೋ,” ಕೋವಿಡ್-19 ಲಾಕ್‌ಡೌನ್ ಸಮಯದಲ್ಲಿ ಬೆಂಗಳೂರಿನಿಂದ ತಮ್ಮ ಹಳ್ಳಿಗೆ ಹಿಂದಿರುಗಲು ಕಾಲ್ನಡಿಗೆಯಲ್ಲಿ ಪ್ರಯಾಣ ಬೆಳೆಸಿದ ಪುಟ್ಟ ಬಾಲಕ ಮತ್ತು ಆತನ ತಂದೆಯ ಕಥೆಯನ್ನು ಹೇಳುತ್ತದೆ. ಆ ಕತ್ತಲ ಕಾಲದಲ್ಲಿ ಸೌಲಭ್ಯವಂಚಿತ ವರ್ಗ ಎದುರಿಸಿದ ಹೋರಾಟಗಳ ಮೇಲೆ ಬೆಳಕು ಚೆಲ್ಲುತ್ತದೆ. ಕಲ್ಯಾಣ ಕರ್ನಾಟಕದ ರಾಯಚೂರಿನಲ್ಲಿ ನಡೆಯುವ ಈ ಚಿತ್ರವು ದುರ್ಗ್ಯಾ ಎಂಬ ಬಾಲಕನ ಛಿದ್ರಗೊಂಡ ಕನಸಿನ ಕತೆಯನ್ನು ಹೇಳುತ್ತದೆ. ಚಿತ್ರ ಪ್ರೇಕ್ಷಕರ ಮುಂದಿಡುವ ಕಟು ವಾಸ್ತವತೆ ಮತ್ತು ಅದನ್ನು ತೆರೆಯ ಮೇಲೆ ಪರಿಣಾಮಕಾರಿಯಾಗಿ ಬಿಚ್ಚಿಟ್ಟಿರುವ ಕಲಾವಂತಿಕೆಯಿಂದಾಗಿ ಸಿನಿಪ್ರೇಮಿಗಳ ಮನ ಗೆದ್ದಿದೆ.

ಉತ್ತಮ ಕನ್ನಡ ಸಿನಿಮಾವನ್ನು ಬೆಂಬಲಿಸುವ ಮತ್ತು “ಫೋಟೋ”ದ ವಿಶೇಷ ಪ್ರದರ್ಶನವನ್ನು ಆನಂದಿಸುವ ಈ ಅವಕಾಶವನ್ನು ಕಳೆದುಕೊಳ್ಳಬೇಡಿ!

ಸಮಯ: ಭಾನುವಾರ, 23 ಏಪ್ರಿಲ್,  ಬೆಳಿಗ್ಗೆ ೧೦:೩೦ಕ್ಕೆ

ಸ್ಥಳ: ಕರ್ನಾಟಕ ಚಲನಚಿತ್ರ ಕಲಾವಿದರ ಸಂಘ

ಪಂಪ ಮಹಾಕವಿ ರಸ್ತೆ, ಚಾಮರಾಜಪೇಟೆ, ಬೆಂಗಳೂರು

ಫೋಟೋಸಿನಿಮಾದ ಬಗ್ಗೆ ಇನ್ನಷ್ಟು ಮಾಹಿತಿ:

ಚಿತ್ರದ ಟ್ರೈಲರ್ ಯೂಟ್ಯೂಬಿನಲ್ಲಿ ನೋಡಲು ಏಕೆ ಸಿಗುವುದಿಲ್ಲ?

  • ಚಲನಚಿತ್ರ ನಿರ್ಮಾಪಕರು “ಫೋಟೋ”ವನ್ನು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶಿಸಲು ಉದ್ದೇಶಿಸಿದ್ದಾರೆ. ಆ ಪ್ರದರ್ಶನಗಳ ನಂತರ ಟ್ರೇಲರ್ ಬಿಡುಗಡೆ ಮಾಡಲಾಗುತ್ತದೆ

ನಾನು ಇದನ್ನು ಆನ್ಲೈನ್ ಅಥವಾ ಓಟಿಟಿ ಪ್ಲಾಟ್ಫಾರ್ಮ್ನಲ್ಲಿ ವೀಕ್ಷಿಸಬಹುದೇ?

  • ಚಿತ್ರವು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಮೊದಲಿಗೆ ಭಾಗವಹಿಸಲಿದೆ. ಓಟಿಟಿ ಕುರಿತ ನಿರ್ಧಾರ ನಂತರದಲ್ಲಿ ತೆಗೆದುಕೊಳ್ಳಲಾಗುತ್ತದೆ

ಸಿನಿಮೋತ್ಸವದಲ್ಲಿ ಗೆದ್ದಿರುವುದರಿಂದ, ಬೋರಿಂಗ್ ಚಿತ್ರ ಎಂಬ ಅನುಮಾನವಿದೆ. ನಿಜವೇ?

  • “ಫೋಟೋ” ಅದರ ಪ್ರಾಮಾಣಿಕ ಮತ್ತು  ಆಸಕ್ತಿ ಕೆರಳಿಸುವ ನಿರೂಪಣೆಯಿಂದಾಗಿ ಪ್ರಶಸ್ತಿಗಳನ್ನು ಗಳಿಸಿದೆ. ಚಲನಚಿತ್ರ ವಿಮರ್ಶಕರು ಅದರ ಕಥೆ ಎಷ್ಟು ಸಂವೇದನಾನಶೀಲವೋ ಅಷ್ಟೇ ಕೂತೂಹಲಕಾರಿ ಎಂದು ಹೇಳಿದ್ದಾರೆ.

ಇದು ಮಕ್ಕಳು ನೋಡಲು ಸೂಕ್ತವಾಗಿದೆಯೇ?

  • “ಫೋಟೋ” ಯಾವುದೇ ಹಿಂಸೆ ಅಥವಾ ಅಸಭ್ಯತೆಯನ್ನು ಹೊಂದಿಲ್ಲ. ಮಕ್ಕಳು ಖಂಡಿತಾ ನೋಡಬಹುದು

ಕನ್ನಡ ಬಾರದ ನನ್ನ ಗೆಳೆಯರು ಇದನ್ನು ವೀಕ್ಷಿಸಬಹುದೇ?

  • ಚಿತ್ರವು ಇಂಗ್ಲಿಷ್ ಅಡಿಬರಹಗಳನ್ನು ಹೊಂದಿರುವುದರಿಂದ ಕನ್ನಡೇತರರೂ ಇದನ್ನು ನಿಶ್ಚಿಂತೆಯಿಂದ ನೋಡಬಹುದು

ಥಿಯೇಟರ್ ಬಗ್ಗೆ ಮಾಹಿತಿ

  • ಥಿಯೇಟರ್ ಆಧುನಿಕ ಧ್ವನಿ ಮತ್ತು ಫಿಲ್ಮ್ ಪ್ರೊಜೆಕ್ಷನ್ ಉಪಕರಣಗಳನ್ನು ಹೊಂದಿದೆ.
  • ಸಂಪೂರ್ಣ ಹವಾನಿಯಂತ್ರಿತವಾಗಿದೆ
  • ಪ್ಲಾಸ್ಟಿಕ್ ಮಾಲಿನ್ಯವನ್ನು ಕಡಿಮೆ ಮಾಡಲು ನಿಮ್ಮ ನೀರಿನ ಬಾಟಲಿಯನ್ನು ನೀವೆ ತರುವುದು ಉತ್ತಮ
  • ಥಿಯೇಟರ್ ಸುತ್ತಲೂ ವಿಶಾಲವಾದ ಪಾರ್ಕಿಂಗ್ ಲಭ್ಯವಿದೆ. ಸಾರ್ವಜನಿಕ ಸಾರಿಗೆಯನ್ನು ಬಳಸುವವರಿಗಾಗಿ ಮೆಟ್ರೋ ಸ್ಟೇಷನ್ ಹತ್ತಿರದಲ್ಲೇ ಇದೆ.

ಸಾರಾಂಶ 

ರಾಯಚೂರು ಜಿಲ್ಲೆಯ ಸಣ್ಣ ಹಳ್ಳಿಯ ದುರ್ಗ್ಯಾನಿಗೆ ವಿಧಾನಸೌಧದ ಮುಂದೆ ಫೋಟೋ ತೆಗೆಸಿಕೊಳ್ಳಬೇಕೆಂಬ ಹಂಬಲ. ಅದಕ್ಕಾಗಿ ಹಠ ಮಾಡಿ ಬೆಂಗಳೂರಿನಲ್ಲಿ ಕೂಲಿ ಕೆಲಸ ಮಾಡುವ ಅಪ್ಪನ ಬಳಿಗೆ ಹೋಗುತ್ತಾನೆ. ಅದೇ ವೇಳೆ ಕೋವಿಡ್ ಲಾಕ್ಡೌನ್ ಘೋಷಣೆಯಾಗುತ್ತದೆ. ನಂತರದಲ್ಲಿ ತಮ್ಮೂರಿಗೆ ಹಿಂದಿರುಗಲು ಅಪ್ಪ ಮಗ ನಡೆಸುವ ಪ್ರಯಾಣ “ಫೋಟೋ”ದ ಮೂಲ ಎಳೆ.

ಯುವ ನಿರ್ದೇಶಕ ಉತ್ಸವ್ ಗೊನಾವರ ಅವರ ಚೊಚ್ಚಲ ಚಿತ್ರ “ಫೋಟೋ” ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಮೊದಲ ಬಾರಿಗೆ ಪ್ರದರ್ಶನಗೊಂಡು ಸಿನಿಪ್ರಿಯರನ್ನು ಬೆರಗುಗೊಳಿಸಿದೆ. ಈ ಚಲನಚಿತ್ರವು ಕೋವಿಡ್ ಸಮಯದಲ್ಲಿ ಭಾರತದ ದುಡಿಯುವ ಬಡ ವರ್ಗ ಎದುರಿಸಿದ ಕಠಿಣ ಸ್ಥಿತಿಗಳನ್ನು ಮತ್ತು ಬೆಚ್ಚನೆಯ ಮನೆಯೊಳಗೆ ಕುಳಿತ ಮೇಲ್ವರ್ಗ ನೋಡದ / ನೋಡಲು ಅಸಮರ್ಥವಾದ ಕಟು ವಾಸ್ತವಗಳನ್ನು ಚಿತ್ರಿಸಿದೆ. 

ಫೋಟೋ ನೋಡುವುದು ಹೇಗೆ?: ಫೋಟೋ ಚಲನಚಿತ್ರದ ವಿಶೇಷ ಪ್ರದರ್ಶನದ ಟಿಕೆಟ್ ಬುಕ್ ಮಾಡಲು ಇಲ್ಲಿ ಒತ್ತಿ‌.

ಧನ್ಯವಾದಗಳೊಂದಿಗೆ

“ಫೋಟೋ” ಚಿತ್ರ ತಂಡ


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x