ಪ್ರಕಟಣೆ

ಕಾವ್ಯ ದೀವಿಗೆ ಕೃತಿ ಲೋಕಾರ್ಪಣೆ

.

ವಿಚಾರ ಮಂಟಪ ಬಳಗದ ವತಿಯಿಂದ ವರುಣ್‌ರಾಜ್‌ ಜಿ ಮತ್ತು ಧನುಷ್‌ ಎಚ್‌ ಶೇಖರ್‌ ಇವರು ಸಂಪಾದಿಸಿರುವ ʼಕಾವ್ಯದೀವಿಗೆʼ ಕವನ ಸಂಕಲನವು ಲೋಕಾರ್ಪಣೆಗೆ ಸಿದ್ಧವಾಗಿದೆ. ಕೃತಿಯನ್ನು ಹಾಸನದ ʼಸ್ಪಂದನ ಸಿರಿʼ ಪ್ರಕಾಶನವು ಪ್ರಕಟಿಸುತ್ತಿದ್ದು, ಇದೇ ಭಾನುವಾರ ದಿನಾಂಕ: ೨೫.೦೬.೨೦೨೩ ರಂದು ಹಾಸನದಲ್ಲಿ ನಡೆಯಲಿರುವ ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ೧೨ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಪುಸ್ತಕ ಲೋಕಾರ್ಪಣೆಗೊಳ್ಳಲಿದೆ.

ʼಕಾವ್ಯದೀವಿಗೆʼ ಕವನ ಸಂಕಲನವು ನಾಡಿನ ವಿವಿಧ ಪ್ರದೇಶಗಳ ಒಟ್ಟು ೬೨ ಯುವ ಬರಹಗಾರರ ಬರಹಗಳನ್ನೊಳಗೊಂಡ ಕೃತಿಯಾಗಿದ್ದು, ಯುವ ಬರಹಗಾರರ ಅಭಿವ್ಯಕ್ತಿಗೆ ವೇದಿಕೆಯನ್ನೊದಗಿಸುವ ಹಾಗೂ ಅವರನ್ನು ಪ್ರೋತ್ಸಾಹಿಸುವ ಉದ್ದೇಶವನ್ನು ಹೊಂದಿದೆ. ವಿಚಾರ ಮಂಟಪ ಬಳಗವು ೫ ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದ್ದು ಇದರ ನೆನಪಿಗಾಗಿ ʼಕಾವ್ಯದೀವಿಗೆʼಯನ್ನು ಹೊರತರುತ್ತಿದೆ. ಈ ಕೃತಿಗೆ ಅಮರ್ ಬಿ ಇವರ ಮುನ್ನುಡಿಯನ್ನು ಬರೆದಿದ್ದು, ದಾದಪೀರ್‌ ಜೈಮನ್‌, ದೇವರಾಜ್‌ ಹುಣಸೀಕಟ್ಟೆ ಹಾಗೂ ಗೌತಮ್‌ ಗೌಡ ಇವರು ಆಶಯ ನುಡಿಯನ್ನೂ ಹಾಗೂ ಚಂದನ್‌ ಡಿ.ಎನ್.‌ ಇವರು ಬೆನ್ನುಡಿಯನ್ನೂ ಬರೆದಿದ್ದಾರೆ.

ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಹಾಸನದ ಸಾಹಿತಿ ಶ್ರೀ ಗೊರೂರು ಅನಂತರಾಜು ಅವರು ಪುಸ್ತಕ ಬಿಡುಗಡೆಗೊಳಿಸಿ ಕೃತಿಯನ್ನು ಕುರಿತು ಮಾತನಾಡಲಿದ್ದು, ʼಸ್ಪಂದನ ಸಿರಿʼ ಸಾಹಿತ್ಯ ವೇದಿಕೆಯ ಶ್ರೀಮತಿ ಕಲಾವತಿ ಮಧುಸೂದನ, ಕಾದಂಬರಿಕಾರ್ತಿ ಶ್ರೀಮತಿ ಜಯಂತಿ ಚಂದ್ರಶೇಖರ್, ಕನ್ನಡ ಸಾಹಿತ್ಯ ಪರಿಷತ್ತು ಹಾಸನದ ಜಿಲ್ಲಾಧ್ಯಕ್ಷರಾದ ಡಾ. ಹೆಚ್. ಎಲ್.‌ ಮಲ್ಲೇಶ್‌ ಗೌಡ ಸೇರಿದಂತೆ ಹಲವರು ಗಣ್ಯರು ಹಾಜರಿರಲಿದ್ದಾರೆ.

ಕವಿ-ಸಹೃದಯರು ಕಾರ್ಯಕ್ರಮಕ್ಕೆ ಆಗಮಿಸಿ ಹೊಸ ಬರಹಗಾರರನ್ನು ಪ್ರೋತ್ಸಾಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಕೋರಲಾಗಿದೆ.

-ವಿಚಾರ ಮಂಟಪ ಬಳಗ


ಕನ್ನಡದ ಬರಹಗಳನ್ನು ಹಂಚಿ ಹರಡಿ

Leave a Reply

Your email address will not be published. Required fields are marked *