ನಾಲ್ಕು ಕಿರುಗತೆಗಳು- ಎಂ ನಾಗರಾಜ ಶೆಟ್ಟಿ
ಗೌರವ ಮುನೀರ್ಮಂಗಳೂರಲ್ಲಿ ಕಾರ್ಯಕ್ರಮವೊಂದಕ್ಕೆ ಬರಲೇ ಬೇಕೆಂದು ಒತ್ತಾಯ ಮಾಡಿದ್ದರಿಂದ ನಾವು ಮೂವರು ಗೆಳೆಯರು ಕಾರಲ್ಲಿ ಹೊರಟಿದ್ದೆವು. ಕಾರು ನನ್ನದೇ. ದೀರ್ಘ ಪ್ರಯಾಣದಿಂದ ಸುಸ್ತಾಗುತ್ತದೆ, ಡ್ರೈವಿಂಗ್ ಮಾಡುತ್ತಾ ಗೆಳೆಯರೊಂದಿಗೆ ಹರಟುವುದು ಕಷ್ಟವೆಂದು ಡ್ರೈವರ್ಗೆ ಹೇಳಿದ್ದೆ. ಆತ ಪರಿಚಿರೊಬ್ಬರ ಖಾಯಂ ಡ್ರೈವರ್. ಕೊಹ್ಲಿ ಸ್ಟೈಲಲ್ಲಿ ದಾಡಿ ಬಿಟ್ಟಿದ್ದ ಹಸನ್ಮುಖಿ ಯುವಕ.ಅವನನ್ನು ಗಮನಿಸಿದ ಗೆಳೆಯರೊಬ್ಬರು, “ಕ್ರಿಕೆಟ್ನೋಡುತ್ತೀಯಾ?” ವಿಚಾರಿಸಿದರು.“ಬಿಡುವಿದ್ದಾಗ ನೋಡುತ್ತೇನೆ ಸಾರ್, ಕಾಲೇಜಲ್ಲಿ ಕ್ರಿಕೆಟ್ಆಡುತ್ತಿದ್ದೆ”“ಕಾಲೇಜಿಗೆ ಹೋಗಿದ್ದಿಯಾ?” ಆಶ್ಚರ್ಯ ವ್ಯಕ್ತಪಡಿಸಿದ ಮತ್ತೊಬ್ಬ ಗೆಳೆಯ “ಏನು ಓದಿದ್ದೆ?” ಕೇಳಿದರು.“ಬಿಎಸ್ಸಿ ಆಗಿದೆ ಸಾರ್”ಕೂಲಾಗಿ ಹೇಳಿದ.“ನಿಮ್ಮ ಭಾಷಣಕ್ಕೆ ಇಲ್ಲೇ … Read more