ಮಕ್ಕಳ ಹಕ್ಕುಗಳು ಮತ್ತು ಧರ್ಮ: ನಾಗಸಿಂಹ ಜಿ ರಾವ್

ಈ ದಿನಗಳಲ್ಲಿ ನನ್ನನ್ನು ಹಲವಾರು ಜನರು ಕೇಳುತ್ತಿರುವುದು ಒಂದೇ ಪ್ರಶ್ನೆ , ಈಗ ರಾಜ್ಯದಲ್ಲಿ ಆಗುತ್ತಿರುವ ಗಲಭೆಯ ಹಿನ್ನಲೆಯಲ್ಲಿ ಮಕ್ಕಳ ಹಕ್ಕುಗಳು ಏನು ಹೇಳುತ್ತದೆ ? ಧರ್ಮದ ಬಗ್ಗೆ ಮಕ್ಕಳ ಹಕ್ಕುಗಳು ಇವೆಯೇ ? ವಿಶ್ವದ ಪ್ರತಿಯೊಂದು ಧರ್ಮಾದಲ್ಲೂ ಮಕ್ಕಳನ್ನು ಹಿರಿಯರ ಅಸ್ಥಿ ಎಂದೇ ಪರಿಗಣಿಸಲ್ಪಟ್ಟಿರುವುದು ಕಂಡು ಬರುತ್ತದೆ , ಪುರಾಣ ಪುಣ್ಯ ಕಥೆಗಳನ್ನು ವಿಮರ್ಶಿಸಿದರೆ ಕಂಡು ಬರುವುದು ಮಕ್ಕಳ ಹಕ್ಕುಗಳ ಉಲ್ಲಂಘನೆಯೇ ! ವಿಶ್ವ ಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆಯ ಪ್ರಕಾರ ಮಕ್ಕಳಿಗೆ ಜೀವಿಸುವ ಹಕ್ಕುಗಳು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಕತೆ ಮತ್ತು ಆತ್ಮಕತೆಗಳ ನಡುವಿನ ನಯವಾದ ನೇಯ್ಗೆ: ಡಾ. ಹೆಚ್ ಎನ್ ಮಂಜುರಾಜ್

ಕೃತಿ: ಕಿಟಕಿಗಳಾಚೆ (ಪ್ರಬಂಧ ಸಂಕಲನ)ಲೇಖಕರು: ರವೀಂದ್ರನಾಯಕ್ ಸಣ್ಣಕ್ಕಿಬೆಟ್ಟುಪ್ರಕಾಶಕರು: ಸಮನ್ವಿತ, ಬನ್ನೇರುಘಟ್ಟ, ಬೆಂಗಳೂರುಮೊದಲ ಮುದ್ರಣ: ೨೦೨೩, ಕೃತಿ ಬಿಡುಗಡೆ: ೧೩-೦೭-೨೦೨೪ಪುಟಗಳು: ೧೩೨+೪, ಬೆಲೆ: ₹ ೧೫೦ ಕಳೆದ ಒಂದು ತಿಂಗಳ ಹಿಂದೆಯಷ್ಟೇ ಲೋಕಾರ್ಪಣೆಗೊಂಡ ‘ಕಿಟಕಿಗಳಾಚೆ’ ಕೃತಿಯಲ್ಲಿ ಒಟ್ಟು ಇಪ್ಪತ್ತೆಂಟು ಪ್ರಬಂಧಗಳಿವೆ. ಈಗಾಗಲೇ ಮೂರು ಕವನ ಸಂಕಲನಗಳನ್ನು ಪ್ರಕಟಿಸಿರುವ ಕವೀಂದ್ರ ರವೀಂದ್ರರು ತಮ್ಮ ಕವನಗೀತಗಳಿಂದಾಗಿ ತಮ್ಮದೇ ಯುಟ್ಯೂಬ್ ಚಾನೆಲ್ ಮೂಲಕ ನಾಡಿನ ಅಸಂಖ್ಯಾತ ಸಹೃದಯರನ್ನು ಮುಟ್ಟಿದ್ದಾರೆ. ಹೆಸರಾಂತ ಗಾಯಕರಾದ ಶ್ರೀ ರಾಘವೇಂದ್ರ ಬೀಜಾಡಿ, ಶ್ರೀ ಗಣೇಶ ದೇಸಾಯಿಯವರ ಸಂಗೀತ ತಂಡವು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮಾತನಾಡುವ ಮಂಚ: ಡಾ. ಮಲರ್ ವಿಳಿ ಕೆ

ತಮಿಳು ಮೂಲ : ಪುದುಮೈಪಿತ್ತನ್ರಚಿಸಿದ ಕಾಲ: ೧೯೩೪ಅನುವಾದ : ಡಾ. ಮಲರ್ ವಿಳಿ ಕೆ, ಕನ್ನಡ ಪ್ರಾಧ್ಯಾಪಕರು,, ಪ್ರೆಸಿಡೆನ್ಸಿ ವಿಶ್ವವಿದ್ಯಾಲಯ. ಸರ್ಕಾರಿ ಆಸ್ಪತ್ರೆಯಲ್ಲಿ ಪೂರ್ವದ ಕಡೆಯ ವಾರ್ಡ್ ನ ಹಾಸಿಗೆಯಲ್ಲಿ, ನನ್ನ ರೋಗಕ್ಕೆ ಏನೋ ಒಂದು ಉದ್ದನೆಯ ಲ್ಯಾಟಿನ್ ಹೆಸರನ್ನು ಹೇಳಿ, ನನ್ನನ್ನು ಕರೆದುಕೊಂಡು ಹೋಗಿ ಮಲಗಿಸಿದರು. ನನ್ನ ಇಕ್ಕೆಲಗಳಲ್ಲಿಯೂ ನನ್ನಂತೆ ಹಲವು ರೋಗಿಗಳು ಗೋಳಿಡುತ್ತಾ, ಹೂಂಗುಡುತ್ತಾ ನರಕದ ಉದಾಹರಣೆಯಂತೆ.ಒಂದೊಂದು ಮಂಚದ ಪಕ್ಕದಲ್ಲಿಯೂ ಔಷಧಿಯನ್ನು ಗಂಜಿಯನ್ನು ಇಡಲು ಒಂದು ಚಿಕ್ಕ ಆಲಮಾರು, ಮಂಚದ ಕಂಬಿಯಲ್ಲಿ ಡಾಕ್ಟರ ಗೆಲುವು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಸಮಾಜಮುಖಿ ಯುವ ಲೇಖನ ಸ್ಪರ್ಧೆ-2024

ಕನ್ನಡದ ಹೊಸ ಪೀಳಿಗೆಯ ಆಲೋಚನೆ ಮತ್ತು ಬರವಣಿಗೆಯನ್ನು ಉದ್ದೀಪಿಸುವ ಉದ್ದೇಶದಿಂದ ಬೆಂಗಳೂರಿನ ಸಮಾಜಮುಖಿ ಪ್ರಕಾಶನ 16 ರಿಂದ 32 ವಯಸ್ಸಿನ ಯುವಕ-ಯುವತಿಯರಿಗಾಗಿ ‘ಯುವ ಲೇಖನ ಸ್ಪರ್ಧೆ’ ಏರ್ಪಡಿಸಿದೆ. ಆಯ್ಕೆಯಾದ ಐದು ಲೇಖನಗಳಿಗೆ ತಲಾ ರೂ.5,000 ಬಹುಮಾನ ಮತ್ತು ಪ್ರಶಸ್ತಿ ಪತ್ರ ನೀಡಲಾಗುವುದು.ಲೇಖನದ ವಿಷಯ: ಪ್ರಾಥಮಿಕ ಶಿಕ್ಷಣ ಮಾತೃಭಾಷೆಯಲ್ಲಿಯೇ ಆಗಬೇಕು ಎಂದು ಹೇಳುವಲ್ಲಿನ ವೈಚಾರಿಕ ಮತ್ತು ಜಾಗತಿಕ ತಳಹದಿಯೇನು..? ಲೇಖನ 1,600 ರಿಂದ 2,000 ಪದಗಳ ಮಿತಿಯಲ್ಲಿರಬೇಕು. ಲೇಖನದ ಜೊತೆಗೆ ಹುಟ್ಟಿದ ದಿನಾಂಕದ ಯಾವುದಾದರೂ ದಾಖಲೆಯ ಪ್ರತಿ, ಪೂರ್ಣ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಓ ನನ್ನ ಚೇತನ ಆಗು ಅನಿಕೇತನ…:ಅಶ್ಫಾಕ್ ಪೀರಜಾದೆ

ಕೆಲ ವರ್ಷಗಳ ಹಿಂದಿನ ಮಾತು, ಹೆಸರಾಂತ ಲೇಖಕ ಅಬ್ಬಾಸ್ ಮೇಲಿನಮನಿಯವರು “ಲೋಕ-ದರ್ಶನ” ಸಾಪ್ತಾಹಿಕದಲ್ಲಿ ಬೆಳಕು ಕಂಡ ನನ್ನ ಕಥೆ “ಜನ್ನತ್” ಬಗ್ಗೆ ಪ್ರತಿಕ್ರಿಯಿಸಿ ಬೆನ್ನ ತಟ್ಟಿದ್ದರು. ಹಾಗೇ ನಾನು ಸಹ “ಪ್ರಜಾ-ವಾಣಿ”ಯಲ್ಲಿ ಪ್ರಕಟವಾದ ಅವರ ಕಥೆ “ಅಮಿನಾಳ ಹಝ್ ಯಾತ್ರೆ”ಯ ಬಗ್ಗೆ ಮಾತಾಡಿದ್ದೆ. ತನ್ನ ಗಂಡನ ಹಝ್ ಯಾತ್ರೆಯ ಕನಸು ಪರೋಪಕಾರದಲ್ಲಿ ಸಾಕಾರಗೊಳಿಸುವ ಒಂದು ಶೋಷಿತ ಹೆಣ್ಣಿನ ಕರಳು ಮಿಡಿಯುವ ಕಥೆ ತುಂಬಾ ಹೈದಯ ಸ್ರ‍್ಶಿಯಾಗಿ ಮೂಡಿ ಬಂದಿತ್ತು. ಆ ಕಥೆಯ ಬಗ್ಗೆ ಬರೆಯುವುದು ಈ ಲೇಖನದ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

“ಪೋಸ್ಟ್ ಮ್ಯಾನ್ ಗಂಗಣ್ಣ (ಭಾಗ 9)”: ಎಂ.ಜವರಾಜ್

-೯-ದಿನಗಳೂ ಉರುಳುತ್ತ ವಾರಗಳೂ ಉರುಳುತ್ತ ತಿಂಗಳುಗಳೂ ಉರುಳುತ್ತ ಹಂಗೆ ವರ್ಷಗಳೂ ಉರುಳಿದವು. ಈಗ ಊರು ಬದಲಾಗಿತ್ತು. ಹಿಂಗೆ ಬದಲಾಗ್ತ ಇದ್ದದ್ದ ನಾನೂ ನೋಡ್ತಾ ಬೆಳಿತಾ ಎಸೆಸೆಲ್ಸಿಯಲ್ಲೇ ಐದಾರು ವರ್ಷ ಏಗಿ ಕೊನೆಗೂ ಅದಾಗಿ ಪಿಯುಸಿಗೂ ಸೇರಿದ್ದಾಯ್ತು. ನಾನೋ ಕಾಲೇಜು ಹ್ಯಾಂಗೋವರಲ್ಲಿ ಎಲ್ಲರು ನೋಡಲೆಂದು ಇರೊ ಹಳೇ ಬಟ್ಟೆನೆ ಒಗೆದು ಐರನ್ ಉಜ್ಜಿ ಮನೆಯೊಳಗಿನ ತಂತಿ ಮೇಲೆ ಬಟ್ಟೆ ಅಂಗಡಿಯಲ್ಲಿ ಜೋಡಿಸಿಟ್ಟಂಗೆ ಮಡಚಿ ಇಟ್ಟುಕೊಂಡು ದಿನಾ ಒಂದೊಂದು ಸೆಲೆಕ್ಟ್ ಮಾಡಿಟ್ಟು ಇನ್ಸರ್ಟ್ ಮಾಡಿಕೊಂಡು ಪೌಡರ್ ಸ್ನೊ ಹಾಕೊಂಡು ಸ್ಟೈಲಾಗಿ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ʼ ರೂಪಾಂತರ ʼ- ಹೊಸತರ ಹಂಬಲ: ಎಂ ನಾಗರಾಜ ಶೆಟ್ಟಿ

ಸಿನಿಮಾ ಮುಗಿದು ತೆರೆಯ ಮೇಲೆ ಕ್ರೆಡಿಟ್ಸ್‌ ಬರತೊಡಗುತ್ತದೆ. ಆದರೆ ಪ್ರೇಕ್ಷಕರು ಸೀಟು ಬಿಟ್ಟು ಕದಲುವುದಿಲ್ಲ. ಮಾತಿಲ್ಲದೆ, ಯಾವುದೋ ಗುಂಗಿಗೊಳಗಾದವರಂತೆ ಕೂತಿದ್ದು, ನಿಧಾನವಾಗಿ ಏಳುತ್ತಾರೆ. ಇದು ʼ ರೂಪಾಂತರ ʼ ಸಿನಿಮಾದ ಕುರಿತು ಬಹಳಷ್ಟನ್ನು ಹೇಳುತ್ತದೆ. ಒಂದು ರೀತಿಯಲ್ಲಿ ಪ್ರೇಕ್ಷಕನ್ನು ಆವರಿಸಿಕೊಂಡರೆ, ಇನ್ನೊಂದು ತರದಲ್ಲಿ ಗೊಂದಲʼ. ರೂಪಾಂತರ ʼ ಚಿತ್ರದ ವಿಶೇಷವಿರುವುದೇ ಇಲ್ಲಿ! ಮೊದಲ- ವಿಚಿತ್ರ, ಕರಾಳ, ವಿಕೃತ- ದೃಶ್ಯದಲ್ಲಿ ವಯಸ್ಸಾದ ವ್ಯಕ್ತಿಯೊಬ್ಬ ತನ್ನನ್ನು ತಾನು ಬಚಾವು ಮಾಡಿಕೊಳ್ಳಲು ಕತೆ ಹೇಳಲು ಶುರುವಿಟ್ಟುಕೊಳ್ಳುತ್ತಾನೆ. ಕತೆ ಚೆನ್ನಾಗಿಲ್ಲದ್ದರೆ ಸಾಯಿಸುತ್ತೇವೆ ಎನ್ನುವ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ವೃತ್ತ ಮೀರುವ ತವಕ – ‘ಬಾಬ್‌ ಮಾರ್ಲಿ ಫ್ರಂ ಕೋಡಿಹಳ್ಳಿ’: ಎಂ. ನಾಗರಾಜ ಶೆಟ್ಟಿ

ವೃತ್ತ ಮೀರುವ ತವಕ – ʼ ಬಾಬ್‌ ಮಾರ್ಲಿ ಫ್ರಂ ಕೋಡಿಹಳ್ಳಿ ಅಗ್ನಿ ಮಾಂಸದ ಕುಲುಮೆಯಲಿನನ್ನ ಕಾಯಿಸಿ ಬಣ್ಣವ ಮಾಡಿಮರಳಿ ನನ್ನ ರೂಪನೇ ಕಡೆವಏ ನನ್ನಾಳದ ಅಳುವೇನನ್ನ ಚಿತ್ರಕ್ಕೇಕೆ ಬೆನ್ನು ಬರೆವೆ? ಎನ್ಕೆ ಹನುಮಂತಯ್ಯನವರ ಕವಿತೆ ಕೇಳುವ ʼ ನನ್ನ ಚಿತ್ರಕ್ಕೇಕೆ ಬೆನ್ನು ಬರೆವೆ? ʼ ಪ್ರಶ್ನೆಯೇ ” ಬಾಬ್‌ ಮಾರ್ಲಿ ಫ್ರಂ ಕೋಡಿಹಳ್ಳಿ ʼ ನಾಟಕದ ಮೂರು ಪಾತ್ರಗಳ ಒಳಗುದಿ. ಚಂದ್ರಶೇಖರ್‌ ಮಾಡಿದ ಬಾರ್‌ ಸಿಂಗರ್‌ ಪಾತ್ರ ತನ್ನ ಹೆಸರನ್ನು ʼಬಾಬ್ ಮಾರ್ಲಿʼ ಎಂದು ಬದಲಾಯಿಸಿಕೊಂಡು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪ್ರಾರ್ಥನೆಯು ಧ್ಯಾನಸ್ಥಗೊಂಡ ಪರಿಮಳದ ಪರಿ: ಡಾ. ಹೆಚ್ ಎನ್ ಮಂಜುರಾಜ್

ವಿವಶತೆ ಮತ್ತು ಆರ್ತತೆಗಳ ನಡುವೆ ತೂಗುಯ್ಯಾಲೆಯಾಡುವ ಘನಮೌನ ಪ್ರಭುವೇ,ಇನ್ನಾದರೂ ಹೊರಗೆ ಕತ್ತಲಾಗಿಸುಈ ಬೆಳಕು ದಾರಿ ತೋರಿಸಿದ್ದು ಸಾಕುನಡೆದೂ ನಡೆದೂ ಸುಸ್ತಾಗಿದ್ದೇನೆ,ದಾರಿ ಗುರಿಗಳ ನಡುವೆ ಸಾಗುವಲ್ಲಿಸಾಧನೆಗಳ ಮಿಂಚುಳದ ಬೆಳಕಿನಲ್ಲಿದಾಹ ತೀರದ ಚಪ್ಪಾಳೆಯಲ್ಲಿನಾನಿಲ್ಲದಂತೆ ಬಂಧಿಯಾಗಿದ್ದೇನೆ ನಿದ್ದೆ ಮತ್ತು ಎಚ್ಚರದ ನಡುವಿನಸ್ಥಿತಿಯೊಂದು ಮೂರ್ತವಾದ ಹಾಗೆಬದುಕು ಎರಡು ಕೊನೆಗಳ ನಡುವೆಸಿಲುಕಿ ಇಲ್ಲವಾದ ಹಾಗೆ,ಇರುವ ಸ್ಥಿತಿಯಲ್ಲಿ ಕಣ್ಣು ಮುಚ್ಚಲಾಗದಷ್ಟುಬದುಕು ಬಟ್ಟ ಬಯಲಾಗಿದೆ ನಗುವ ಧರಿಸಿ ಸುಮ್ಮನೆ ಒಟ್ಟಿಗಿದ್ದದ್ದು ಸಾಕುಕೆಳಗಿಳಿಸಿ ಬಿಡು ಈ ಹೆಗಲ ಭಾರದೂರ ಮಾಡಿಸು; ಕಳಚಿಕೊಳ್ಳುತ್ತೇನೆಸಾಕಿನ್ನು ಒಣಮಾತಿನ ಉಪಚಾರ;ನನಗೆ ನಾನೊಂದಿಷ್ಟು ಹತ್ತಿರವಾಗುತ್ತೇನೆ ದೂರುತ್ತಿರಲಿ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

“ಸಿಎಮ್ಮೆನ್ ಎಂಬ ರಂಗ ರೂವಾರಿ”: ಎಂ.ಜವರಾಜ್

ಕೃಷ್ಣಮೂರ್ತಿ ಹನೂರರು “ಚಾಮರಾಜನಗರ ಸೆರಗಿನ ಇಲ್ಲವೇ, ತಿರುಮಕೂಡಲು ನರಸೀಪುರ ಸುತ್ತಮುತ್ತಲಿನ ಬದುಕು ಬವಣೆ ಹೇಳುವ..” ಎಂದು ನನ್ನ ಮೊದಲ ಕಥಾ ಸಂಕಲನದ ಮುನ್ನುಡಿಯಲ್ಲಿ ಬರೆಯುತ್ತಾರೆ. ಇದು ಮೈಸೂರು ಚಾಮರಾಜನಗರ ಜಿಲ್ಲೆಗಳ ಅವಿನಾಭಾವ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸುವ ಮನೋಸ್ಥಿತಿಯ ದ್ಯೂತಕದ ಬೆಸುಗೆಯಾಗಿದೆ. ಮೈಸೂರು ಜೆಲ್ಲೆಯ ಭಾಗವಾಗಿದ್ದ ಚಾಮರಾಜನಗರ, ರಾಜ್ಯದ ದಕ್ಷಿಣ ಗಡಿ ನೆಲವಾಗಿ ಆಳುವವರಿಂದ ನಿರ್ಲಕ್ಚ್ಯಕ್ಕೆ ಗುರಿಯಾಗಿ ಅಭಿವೃದ್ಧಿಹೀನವಾಗಿ ಅನಾಥವಾದಂತೆ ಕಾಣುತ್ತಿತ್ತು. ಇದನ್ನರಿತ ಸ್ಥಳೀಯ ಜನ ಸಮೂಹದಲ್ಲಿ ಪ್ರಭುತ್ವದ ವಿರುದ್ಧ ಅಸಹನೆಯ ಕಾರಣವಾಗಿ ಅದೊಂದು ಸಮಯ ಓಟ್ ಬ್ಯಾಂಕ್ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಕಂಬಳ, ಕೃಷ್ಣಪ್ಪ ಮತ್ತು ಅಮರತ್ವ: ಡಾ. ವಿಶ್ವನಾಥ ಎನ್ ನೇರಳಕಟ್ಟೆ

ಅಲೇ ಬುಡಿಯೆರಿಯೇ* ಎಂಬ ಕೂಗು ಕೇಳಿದ ತಕ್ಷಣವೇ ಎಂಟು ಕಾಲುಗಳನ್ನು ಅಟ್ಟಿಸಿಕೊಂಡು ಹೋಗಲಾರಂಭಿಸಿದ ಎರಡು ಕಾಲುಗಳು, ಎತ್ತರೆತ್ತರಕ್ಕೆ ಚಿಮ್ಮುತ್ತಿದ್ದ ನೀರು, ಕಬ್ಬಿಣಕ್ಕೂ ಕಠಿಣತೆಯೊಡ್ಡುವಂತಿದ್ದ ಮೈ ಎಲ್ಲವನ್ನೂ ನೋಡುತ್ತಲೇ ಇದ್ದ ಕೃಷ್ಣಪ್ಪನ ಕಣ್ಣುಗಳು ಕೊನೆಯ ಒಂದು ಬಿಂದುವಿನಲ್ಲಿ ಹೋಗಿ ನೆಲೆಸಿದವು. ತಮ್ಮ ತಮ್ಮ ಕಡೆಯ ಕೋಣಗಳನ್ನು ಕೈಬೀಸಿ ಕರೆಯುತ್ತಿದ್ದವರು ಹಲವರು. ಮತ್ತೀಗ ಕಂಬಳದ ಕರೆಯಾಚೆಗೆ ದೃಷ್ಟಿ ಬದಲಿಸಿದ ಕೃಷ್ಣಪ್ಪನಿಗೆ ಮುಂದೆ ಓಡುತ್ತಿದ್ದ ಎರಡು ಕೋಣಗಳು ಮತ್ತು ಹಿಂದೆ ಅಟ್ಟಿಸುತ್ತಿರುವ ಓಟಗಾರ ಈ ಇಡೀ ದೃಶ್ಯ ಹೊಸದು ಭಾವವೊಂದನ್ನು ಮೂಡಿಸಿತು. … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ವಿಶ್ವಪ್ರಗತಿ?????: ನಾಗಸಿಂಹ ಜಿ ರಾವ್

ಹಾಸನದ ಮುನಿಸಿಪಲ್ ಹೈಸ್ಕೂಲ್, ಒಂಬತ್ತನೇ ತರಗತಿ ಮಕ್ಕಳು ಗಲಾಟೆ ಮಾಡ್ತಾ ಕೂತಿದ್ರು, ಸಮಾಜ ವಿಜ್ಞಾನದ ಶಿಕ್ಷಕ ಮರಿಯಪ್ಪ ತರಗತಿ ಪ್ರವೇಶ ಮಾಡಿದ ತಕ್ಷಣ ತರಗತಿಯಲ್ಲಿ ನಿಶ್ಯಬ್ದ. ಎಲ್ಲಾ ವಿದ್ಯಾರ್ಥಿಗಳನ್ನು ದಿಟ್ಟಿಸಿ ನೋಡಿ ಹೇಳಿದ್ರು “ಶಿಕ್ಷಣ ಇಲಾಖೆ ಹಾಗೂ ಯುನಿಸಿಫ್ ಒಟ್ಟಿಗೆ ಬೆಂಗಳೂರಲ್ಲಿ ಒಂದು ಸಮಾಲೋಚನೆ ಮಾಡ್ತಿದಾರೆ, ವಿಶ್ವಪ್ರಗತಿ ಮತ್ತು ವಿಶ್ವಶಾಂತಿಯ ಬಗ್ಗೆ ವಸ್ತುಪ್ರದರ್ಶನ, ರಾಜ್ಯದ ಯಾವುದೇ ಶಾಲೆಯಿಂದ ಮಕ್ಕಳು ಭಾಗವಹಿಸಬಹುದು, ವಿಶ್ವಪ್ರಗತಿ ಅಥವಾ ವಿಶ್ವಶಾಂತಿಯ ಬಗ್ಗೆ ಒಂದು ಮಾಡಲ್ ಸಿದ್ಧ ಮಾಡಿ ಪ್ರದರ್ಶನ ಮಾಡಬೇಕು. ಉತ್ತಮವಾದ ಮಾಡಲ್ಗೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಅರ್ಥಾ ಅಯಿತ್ರೀಯಪ್ಪಾ: ಬಿ.ಟಿ.ನಾಯಕ್

ಅದೊಂದು ದಿನ ಮಾನ್ಯ ಜಿಲ್ಲಾಧಿಕಾರಿಗಳು ಒಂದು ಹಳ್ಳಿಯನ್ನು ಸರಕಾರಿ ಕರ್ಯಕ್ರಮಕ್ಕೆ ಆಯ್ಕೆ ಮಾಡಿಕೊಂಡು ಅಲ್ಲಿಗೆ ಬಂದಿದ್ದರು. ಹೀಗಾಗಿ, ಅವರು ಹೆಮ್ಮೆಯಿಂದ ಮತ್ತು ಬಹಳೇ ಅನಂದದಿಂದ ಕರ್ಯಕ್ರಮ ಮಾಡಲು ತಮ್ಮ ಸಹೋದ್ಯೋಗಿಗಳಿಗೂ ಕೂಡ ತಿಳಿಸಿದ್ದರು. ಒಟ್ಟಿನಲ್ಲಿ ಆ ಹಳ್ಳಿಯ ಜನರ ಮನಸ್ಸು ಗೆದ್ದು ಹೋಗಲು ತವಕ ಪಡುತ್ತಿದ್ದರು. ಅಲ್ಲಿ ಕಾರ್ಯಕ್ರಮ ನಿಗದಿ ಪಡಿಸಿದಂತೆ ಮತ್ತು ವೇದಿಕೆಗೆ ಆಗಮಿಸಲು, ಅಲ್ಲಿ ಕಾರ್ಯಕ್ರಮ ಆಯೋಜಿಸಿದ್ದವರು ಮನವಿ ಮಾಡಿದಾಗ, ಅವರು ವೇದಿಕೆಗೆ ಅಲ್ಲಿಗೆ ಬಂದು ಕುಳಿತರು. ಅವರ ಪಕ್ಕದಲ್ಲಿ ಹಳ್ಳಿಯ ಮುಖ್ಯಸ್ಥರಾದ ನಾಗನಗೌಡರುಉಪಸ್ಥಿತರಿದ್ದರು. … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪೋಸ್ಟ್ ಮ್ಯಾನ್ ಗಂಗಣ್ಣ (ಭಾಗ 8)”: ಎಂ.ಜವರಾಜ್

-೮-ಒಂಟೆತ್ತಿನ ಗಾಡಿಲಿ ಗೋದಿ ಉಪ್ಪಿಟ್ಟು ಬಂದಾಗ ಹತ್ತತ್ತಿರ ಒಂದು ಗಂಟೆಯಾಗಿತ್ತು. ಗೋದಿ ಉಪ್ಪಿಟ್ಟನ್ನು ದೊಡ್ಡ ದೊಡ್ಡ ಕ್ಯಾನ್ಗಳಿಂದ ಸ್ಕೂಲಲ್ಲಿದ್ದ ಎರಡು ದೊಡ್ಡ ಬಾಂಡಲಿಗೆ ಸುರಿವಾಗ ಗೋದಿ ಉಪ್ಪಿಟ್ಟು ಗಮಗಮ ಅಂತಿತ್ತು. ಬಿಸಿ ಗೋದಿ ಉಪ್ಪಿಟ್ಟು ತುಂಬಿದ್ದ ಬಾಂಡಲಿಯಿಂದ ಹೊಗೆ ಏಳುತ್ತಿತ್ತು. ಆ ಗಮಲು ಹೀರುತ್ತಿದ್ದರೆ ಮಜವಾಗುತ್ತಿತ್ತು.. ನಟರಾಜ ಮೇಷ್ಟ್ರು ಏಳನೇ ಕ್ಲಾಸಿನ ಗೌಡರ ಹುಡುಗರಿಂದ ಆ ಗೋದಿ ಉಪ್ಪಿಟ್ಟನ್ನು ಇಳಿಸಿಕೊಳುವುದು ಮತ್ತು ಮದ್ಯಾಹ್ನ ಬೆಲ್ಲು ಹೊಡೆದಾಗ ಕ್ಯೂ ನಿಲ್ಲಿಸಿ ಎಲ್ಲರಿಗೂ ಕೊಡುವ ಜವಾಬ್ದಾರಿ ವಹಿಸಿದ್ದರು. ಪೋಸ್ಟ್ ಮ್ಯಾನ್ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

“ಪೋಸ್ಟ್ ಮ್ಯಾನ್ ಗಂಗಣ್ಣ (ಭಾಗ 7)”: ಎಂ.ಜವರಾಜ್

-೭–ಅವತ್ತೇನೊ ಟಪಾಲುಗಳು ಜಾಸ್ತಿ ಇದ್ದವು ಅನ್ಸುತ್ತೆ. ಪೋಸ್ಟ್ ಮೇಷ್ಟ್ರು ಷಣ್ಮುಖಸ್ವಾಮಿ ಹೋಟೆಲಿಗೆ ಹೋಗಿ ಟೀ ಕುಡಿದು ಬರೊ ತನಕ ಗಂಗಣ್ಣನ ಲೆಕ್ಕ ಮುಗಿದಿರದೆ ಕನ್ಫ್ಯೂಸ್ ಮಾಡಿಕೊಂಡು ಎಲ್ಲ ಲೆಟರುಗಳನ್ನು ಅತ್ತಿಂದಿತ್ತ ಇತ್ತಿಂದತ್ತ ಎತ್ತಿ ಎತ್ತಿ ಇಡುತ್ತ ಜೋಡಿಸುತ್ತಲೇ ಇದ್ದ. ನಾವು ಪೋಸ್ಟ್ ಮೇಷ್ಟ್ರು ಅತ್ತ ಹೋಗಿದ್ದನ್ನೇ ನೋಡಿಕೊಂಡು ಮೆಲ್ಲಗೆ ಬಂದು ಗಂಗಣ್ಣನ ಸುತ್ತ ನಿಂತು ನೋಡ್ತ ಮಾತಾಡ್ತ “ಅದು ತಿರುಮಕೂಡಲ್ದು. ಇದು ಬೈರಾಪುರುದ್ದು. ಇದಿದೆಯಲ್ಲ ಅದು ಗೋಪಾಲ್ಪುರುದ್ದು.. ಅದು ಅವ್ರದು ಇದು ಇವ್ರದು” ಅಂತ ಪೋಸ್ಟ್ ಮೇಷ್ಟ್ರು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಭ್ರಮಾ – ಸತ್ಯ – ಭಾಮಾ !: ಡಾ. ಹೆಚ್ ಎನ್ ಮಂಜುರಾಜ್

ನಾನು ಸಾಮಾನ್ಯವಾಗಿ ಪ್ರಶ್ನೆಗಳನ್ನು ಕೇಳುತ್ತಾ ಕೂರುವುದಿಲ್ಲ; ಆದರೆ ನನ್ನನ್ನೇ ಕೇಳಿಕೊಳ್ಳುತ್ತಿರುತ್ತೇನೆ. ಸಾಧ್ಯವಾದಷ್ಟೂ ಪ್ರಶ್ನೆಗಳೇ ಹುಟ್ಟದಂತೆ ನೋಡಿಕೊಳ್ಳುತ್ತಿರುತ್ತೇನೆ! ಇದೊಂದು ಸುಖವಾದ ಮತ್ತು ನಿರಾಯಾಸ ಸ್ಥಿತಿ. ಇದಕ್ಕೆ ವಿಶೇಷವಾದ ಜ್ಞಾನವೇನೂ ಬೇಡ; ಎಂಥದೋ ಅಲೌಕಿಕವೋ; ಅಧ್ಯಾತ್ಮಸಿದ್ಧಿಯೋ ಎಂಬಂಥ ಹೆಸರಿಡುವುದೂ ಬೇಡ. ಲೌಕಿಕದಲ್ಲೇ ಇದ್ದು, ಮುಳುಗಿ, ಎದ್ದು ಬದುಕು ನಡೆಸಿದರೂ ಸುಖ ಮತ್ತು ನೆಮ್ಮದಿಯನ್ನು ಹೊಂದಬಹುದು. ಅದಕ್ಕಾಗಿ ಪೂಜೆ, ಪುರಸ್ಕಾರ, ದೇವರು, ಧರ್ಮ, ಅಧ್ಯಾತ್ಮ ಅಂತ ಲೋಕೋತ್ತರಕೆ ಕೈ ಚಾಚುವ ಅಗತ್ಯವಿಲ್ಲ. ಕೈ ಚಾಚಿದರೆ ತಪ್ಪೇನೂ ಇಲ್ಲ. ಅವರವರ ಸ್ವಾತಂತ್ರ್ಯ. ನಿರ್ಬಂಧಗಳಿಗೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ನನ್ನ ಗೊಂದಲ ಏನೆಂದರೆ: ಶೈಲಜ ಮಂಚೇನಹಳ್ಳಿ

AC ಅಂದರೆ Assistant Commissioner ಎನ್ನುವ ಪದಕ್ಕೆ ಸರಿಯಾದ ಕನ್ನಡ ಪದದ ಬಗ್ಗೆ . ಈ ಬಗ್ಗೆ ನನಗೆ ಗೊಂದಲ ಶುರುವಾಗಿದ್ದು ನಮ್ಮ ಜಮೀನುಗಳಲ್ಲಿ ಒಂದು ರಸ್ತೆ ಅನಧಿಕೃತವಾಗಿ ಹಾದು ಹೋಗಿ ಪಿ.ಎಂ.ಜಿ.ಎಸ್.ವೈ. ವತಿಯಿಂದ ಅಗಲೀಕರಣ ಕೂಡ ಆಗುತ್ತಿರುವುದರಿಂದ, ಭೂಸ್ವಾಧೀನವಾಗದೇ ರಸ್ತೆ ಇಲ್ಲದ ಖಾಸಗಿ ಜಮೀನುಗಳಲ್ಲಿ ರಸ್ತೆ ಮಾಡಲು ನಮ್ಮ ಒಪ್ಪಿಗೆ ಇಲ್ಲ ಎಂದು ತಿಳಿಸಿದಾಗ ಪಿ.ಎಂ.ಜಿ.ಎಸ್.ವೈ. ಯ ಅಧಿಕಾರಿಗಳು ಕೆಲ ರಾಜಕೀಯ ಪುಡಾರಿಗಳನ್ನು ಮತ್ತು ಕೆಲ ಕೆಟ್ಟ ಹಳ್ಳಿ ಜನರನ್ನು ಸೇರಿಸಿಕೊಂಡು ನಮಗೆ ತೊಂದರೆ ಕೊಟ್ಟಿರುವ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

“ಪೋಸ್ಟ್ ಮ್ಯಾನ್ ಗಂಗಣ್ಣ (ಭಾಗ 6)”: ಎಂ.ಜವರಾಜ್

-೬- ಅವತ್ತು ಸುಡು ಬಿಸಿಲ ಒಂದು ಮದ್ಯಾಹ್ನ ಗಂಗಣ್ಣ ಸುಸ್ತಾದವನಂತೆ ಸೈಕಲ್ ಏರಿ ಬಂದವನು ಅಗಸ್ತೇಶ್ವರ ದೇವಸ್ಥಾನದ ಉತ್ತರ ದಿಕ್ಕಿನ ಬಾಗಿಲ ಪಕ್ಕದ ಪಶ್ಚಿಮದ ಕಡೆ ಮುಖ ಮಾಡಿದ್ದ ಬಸಪ್ಪನ ವಿಗ್ರಹದ ಜಗುಲಿ ಅಂಚಿಗೆ ಕುಂತು ಕಾಗದ ಪತ್ರ ಚೆಲ್ಲಿಕೊಂಡು ತೊಟ್ಟಿಕ್ಕುತ್ತಿದ್ದ ಬೆವರು ಒರೆಸಿಕೊಳ್ಳುತ್ತ ಓದುತ್ತ ಜೋಡಿಸುತ್ತಿದ್ದ. ಬಿಸಿಲು ಧಗಧಗಿಸುತ್ತಿತ್ತು. ಅದೇ ಹೊತ್ತಿಗೆ ಭರ ್ರಂತ ಬಂದ ಅರ್ಚಕರು ಅವನಿಗೆ ಎದುರಾಗಿ ಕುಂತು “ಏನಪ್ಪ ಗಂಗ ಲೆಟ್ರು ಗಿಟ್ರು ಬಂದಿದಿಯಾ” ಅಂದರು. ಗಂಗಣ್ಣನ ಮುಖ ಇನ್ನಷ್ಟು ಬೆವರಿ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ನಾಗರಾಜಪ್ಪನ ನೆರಳು: ಡಾ. ವಿಶ್ವನಾಥ ಎನ್ ನೇರಳಕಟ್ಟೆ

ನಾಗರಾಜಪ್ಪ ಠೀವಿಯಿಂದ ತನ್ನೂರಿನ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ. ಆರಡಿ ಎತ್ತರದ ಗಟ್ಟಿ ದೇಹ, ವಯಸ್ಸು ಅರುವತ್ತು ದಾಟಿದ್ದರೂ ಕುಂದದ ಕಸುವು, ತಲೆಯ ಮುಕ್ಕಾಲು ಭಾಗ ಆವರಿಸಿದ್ದ ಕಪ್ಪು ಕೂದಲು, ನೇರ ನಿಲುವು ಇವೆಲ್ಲಾ ನಾಗರಾಜಪ್ಪನನ್ನು ಯುವಕನಂತೆಯೇ ಕಾಣಿಸುತ್ತಿದ್ದವು. ಆದರೆ ನಾಗರಾಜಪ್ಪನ ಮನಃಸ್ಥಿತಿ ತೀರಾ ಭಿನ್ನವಾಗಿತ್ತು. ಮುಂದಿನ ಯುಗಾದಿಗೆ ಅರವತ್ತಾರಕ್ಕೆ ಕಾಲಿಡುವ ಆತಹತ್ತು ವರ್ಷ ಹೆಚ್ಚಾಗಿದೆ ತನಗೆ ಎಂದು ಭ್ರಮಿಸಿಕೊಂಡು ಖುಷಿಪಡುತ್ತಿದ್ದ. ವಯಸ್ಸಷ್ಟು ಹೆಚ್ಚಾದರೆ ಜೀವನಾನುಭವವನ್ನೂ ಹೆಚ್ಚಾಗಿ ಗಳಿಸಿಕೊಂಡಿದ್ದೇನೆ ಎಂಬ ಭಾವ ಆತನೊಳಗೆ ಮೂಡಿ, ಹೆಮ್ಮೆಪಟ್ಟುಕೊಳ್ಳುವಂತಾಗುತ್ತಿತ್ತು. ಇಂತಹ ನವಿರು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ