ಅಂಡೇ ಪಿರ್ಕಿ ಅಮೀರ..: ಶರಣಬಸವ. ಕೆ.ಗುಡದಿನ್ನಿ
ದೋ ಅಂತ ಮೂರಾ ಮುಂಜಾನಿಯಿಂದ ಬಿಡ್ಲಾರದ ಸುರಿಯೋ ಮಳ್ಯಾಗ ಅವನ್ಗೀ ಎಲ್ಲಿ ನಿಂತ್ಕಂಡು ಚೂರು ಸುಧಾರಿಸ್ಕೆಳ್ಳಬೌದೆಂಬ ಅಂದಾಜು ಹತ್ಲಿಲ್ಲ. ಹಂಗಾ ನೆಟ್ಟಗ ನಡದ್ರ ಪೂಜಾರಿ ನಿಂಗಪ್ಪನ ಮನೀ ಅದರ ಎಡಕ್ಕಿರದೇ ಅಮೀರನ ತೊಟಗು ಮನಿಯಂಗ ಕಾಣೊ ತಗ್ಡಿನ ಶೆಡ್ಡು. ಗಂವ್ವೆನ್ನುವ ಇಂತಾ ಅಪರಾತ್ರ್ಯಾಗ ಅಮೀರನೆಂಬೋ ಆಸಾಮಿ ಹಿಂಗ್ ಅಬ್ಬೇಪಾರಿಯಂಗ ಓಣಿ ಓಣ್ಯಾಗ ತಿರಗಾಕ ಅವ್ನ ಹಾಳ ಹಣೀಬರ ಮತ್ಯಾ ಮಾಡ್ಕೆಂಡ ಕರುಮಾನ ಕಾರಣ ! ಅವ್ನ ಹೇಣ್ತೀ ನೂರಾನಿ ರಾತ್ರ್ಯಾಗಿಂದ ಒಂದ್ಯಾ ಸವನ ಹೆರಿಗಿ ಬ್ಯಾನಿ ಅಂತ … Read more