ಯುವ ಮಂದಿಯಲ್ಲಿ ತಂತ್ರಜ್ಞಾನ ಶಿಕ್ಷಣದ ಕೊರತೆ: ಕಿರಣ್ ಕುಮಾರ್ ಡಿ

ಯುವ ಪೀಳಿಗೆಯನ್ನು ದೇಶದ ಶಕ್ತಿ ಎಂದು ಹೇಳುತ್ತಾರೆ. ಅನೇಕ ಮಹನೀಯರು ಯುವ ಸಮೂಹವನ್ನು ದೇಶದ ಭವಿಷ್ಯ ಎಂದು ಕರೆದಿದ್ದಾರೆ. ದೇಶ ಕಟ್ಟಲು ಈ ಯುವಸಮೂಹ ಬಹಳ ದೊಡ್ಡ ಪಾತ್ರವನ್ನು ನಿಭಾಯಿಸುತ್ತಾರೆ. ನಮ್ಮ ದೇಶದ ಸಂಪತ್ತನ್ನು ಹೆಚ್ಚಿಸಲು ಈ ಯುವಸಮೂಹ ಬಹಳ ಶ್ರಮ ವಹಿಸುತ್ತಾರೆ. ನಮ್ಮ ದೇಶದ ಒಂದಿಷ್ಟು ಯುವಸಮೂಹ ಬಹಳಷ್ಟು ಸಾಧನೆ ಮತ್ತು ಅವಿಷ್ಕಾರಗಳನ್ನು ಮಾಡ್ಡಿದ್ದಾರೆ.

ನಮ್ಮ ದೇಶದ ಜನಸಂಖ್ಯೆ ೧೩೦ ಕೋಟಿ ಅದರಲ್ಲಿ ಯುವಸಮೂಹ ೬೦ ಕೋಟಿಗೂ ಹೆಚ್ಚು. ಈ ಎಲ್ಲಾ ಯುವ ಮಂದಿಯಲ್ಲಿ ಎಷ್ಟು ಜನ ತಂತ್ರಜ್ಞಾನದ ಬಗ್ಗೆ ತಿಳುವಳಿಕೆಯನ್ನು ಹೊಂದಿದ್ದಾರೆ? ಈಗ ಜಗತ್ತಿನಲ್ಲಿ ತಂತ್ರಜ್ಞಾನ ಅತಿ ವೇಗವಾಗಿ ಬೆಳೆಯುತ್ತಿದೆ. ಜಪಾನ್ ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದ್ದಾರೆ. ಜಪಾನ್ ನ ಶೇಕಡಾ 96 ರಷ್ಟು ಮಂದಿ ತಂತ್ರಜ್ಞಾನದ ಬಗ್ಗೆ ತಿಳಿದಿರುತ್ತಾರೆ. ನಮ್ಮ ಭಾರತ ದೇಶದ ಯುವ ಮಂದಿ ತಂತ್ರಜ್ಞಾನದ ಬಗ್ಗೆ ಎಷ್ಟು ತಿಳಿದಿದ್ದಾರೆ ಎಂದು ತಿಳಿಯೋಣ ಬನ್ನಿ.

ನಮ್ಮಲ್ಲಿ ಶೇಕಡಾ  ೪೭ರಷ್ಟು ಮಂದಿ ತಂತ್ರಜ್ಞಾನದ ಬಗ್ಗೆ ತಿಳುವಳಿಕೆ ಹೊಂದಿದ್ದಾರೆ. ನಗರದ ಬಹುತೇಕ ಮಂದಿ ತಂತ್ರಜ್ಞಾನದ ಬಗ್ಗೆ ತಿಳಿದುಕೊಂಡಿದ್ದರೆ, ನಮ್ಮ ಗ್ರಾಮೀಣ ಮಂದಿ ಸ್ವಲ್ಪ ಕಡಿಮೆ ಪ್ರಾಮಾಣದಲ್ಲಿ ತಿಳಿದುಕೊಂಡಿದ್ದಾರೆ. ಪ್ರಪಂಚದ ಕೆಲವು ದೇಶಗಳು ೬ ಜಿ ತಂತ್ರಜ್ಞಾನದ ಆವಿಷ್ಕಾರದಲ್ಲಿದರೆ, ನಮ್ಮ ದೇಶ ೪ ಜಿ ಯನ್ನೆ ಸಮರ್ಪಕವಾಗಿ ಮತ್ತು ಉತ್ತಮ ವೇಗದಲ್ಲಿ ನೀಡುತ್ತಿಲ್ಲ.  ೫ಜಿ ಈಗ ತಾನೆ ಭಾರತದಲ್ಲಿ ಕಣ್ಣು ಬಿಟ್ಟಿದೆ, ಅದು ಕೇವಲ ದೊಡ್ಡ ನಗರಗಳಲ್ಲಿ ಮಾತ್ರ. ನಮ್ಮ ಮಂದಿಗೆ ಕಂಪ್ಯೂಟರ್ ಬಗ್ಗೆ ಗೊತ್ತಿದೆ, ಆದರೆ ಅದನ್ನು ಹೇಗೆ ಸಕ್ರಿಯಗೊಳಿಸಬೇಕು ಎಂಬುದು ಬಹುತೇಕ ಮಂದಿಗೆ ತಿಳಿದೇ ಇಲ್ಲ. ಕಂಪ್ಯೂಟರ್ ಬಳಸುವುದಕ್ಕೆ ಬರುವವರಲ್ಲಿ ಕೆಲವರಿಗೆ ಅದರ ಬಿಡಿ ಭಾಗಗಳನ್ನು ಜೋಡಿಸಲಾಗದೆ ಪರದಾಡುವ ಮಂದಿ ಕೂಡ ಇದ್ದಾರೆ. ನಮ್ಮ ಯುವ ಮಂದಿಗೆ ಮೊಬೈಲ್ನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯರ್ಥ ಸಮಯ ಮಾಡುವುದು ಗೊತ್ತೇ ವಿನಹ ಆ ಮೊಬೈಲ್ನ ಪ್ರೊಸೆಸರ್ ಯಾವುದು ಎಂದು ಬಹುತೇಕ ಮಂದಿಗೆ ಗೊತ್ತಿರುವುದಿಲ್ಲ.

ನಮ್ಮ ಸರ್ಕಾರಗಳ ಜನಪ್ರತಿನಿಧಿಗಳು ಮಕ್ಕಳು ತಂತ್ರಜ್ಞಾನದಲ್ಲಿ ಮುಂದುವರೆಯಬೇಕು ಎಂದು ಹೇಳುತ್ತಾರೆ. ಇಂತಹ ಸರ್ಕಾರಗಳು ಬಾಯಿಂದ ಹೇಳುತ್ತಾರೆ ವಿನಃ ಅದನ್ನು ಕಾರ್ಯರೂಪಕ್ಕೆ ತರುವುದಿಲ್ಲ. ನಮ್ಮ ಎಷ್ಟೋ ಶಾಲೆಗಳಲ್ಲಿ ಕಂಪ್ಯೂಟರ್ ಗಳನ್ನು ನೋಡುತ್ತೇವೆ, ಆದರೆ ಅದರ ಬಗ್ಗೆ ಹೇಳಿ ಕೊಡುವ ಶಿಕ್ಷಕರು ಇಲ್ಲ. ಶಿಕ್ಷಕರು ಇದ್ದರೂ ವಿದ್ಯುತ್ ಮತ್ತು ಇಂಟರ್ನೆಟ್ ಇರುವುದಿಲ್ಲ.  ಭಾರತದಲ್ಲಿ ಶೇಕಡಾ ೩೪ರಷ್ಟು ಶಾಲೆಗಳಲ್ಲಿ ಮಾತ್ರ ಇಂಟರ್ನೆಟ್ ಸಂರ್ಪಕವಿದೆ. ನಮ್ಮ ಬಹುತೇಕ ಶಾಲೆಗಳಲ್ಲಿ ಇವತ್ತಿಗೂ ಪ್ರೊಜೆಕ್ಟರ್ ಗಳು ಇಲ್ಲ.  ನಮ್ಮ ಬಹುತೇಕ ಸರ್ಕಾರಿ ಶಾಲಾ ಮಕ್ಕಳಿಗೆ ತಂತ್ರಜ್ಞಾನದ ಬಗ್ಗೆ ಪರಿವೆ ಇರುವುದಿಲ್ಲ. ಇದು ಅವರ ತಪ್ಪು ಎಂದು ಹೇಳಲಾಗುವುದಿಲ್ಲ. ಈ ಖಾಸಗಿ ಶಾಲೆಗಳಲ್ಲಿ ಅತಿ ಹೆಚ್ಚು ಶುಲ್ಕವನ್ನು ತೆಗೆದುಕೊಂಡರು ಅವರಲ್ಲಿಯೂ ತಂತ್ರಜ್ಞಾನದ ಕೊರತೆ ಇರುವುದನ್ನು ಕಾಣಬಹುದು. ತಂತ್ರಜ್ಞಾನದಲ್ಲಿ ಮುಂದುವರೆದಿರುವ ದೇಶಗಳ ಚಿಕ್ಕ ಮಕ್ಕಳು ಕೂಡ ಅಪ್ಲಿಕೇಶನ್ ಗಳನ್ನು ಕಂಡುಹಿಡಿದಿದ್ದಾರೆ. ನಾವುಗಳು ಬಳಸುವ ಪ್ರಸಿದ್ಧ ಸಾಮಾಜಿಕ ಜಾಲತಾಣಗಳು ಮತ್ತು ಗೇಮ್ ಗಳು ಬೇರೆ ದೇಶದ ಕೊಡುಗೆಯಾಗಿದೆ. ನಮ್ಮ ದೇಶವು ನಮ್ಮದೆ ಆದ ಸ್ವಂತ ಆಪರೇಟಿಂಗ್ ಸಿಸ್ಟಮ್ ಅನ್ನು ಹೊಂದಿಲ್ಲ. ಈ ತಿಂಗಳಲ್ಲಿ  ಪ್ರಾಯೋಗಿಕವಾಗಿ ‘BharOS’ ಎನ್ನುವ ಆಪರೇಟಿಂಗ್ ಸಿಸ್ಟಮ್ಅನ್ನು ಶುರುಮಾಡಿದ್ದಾರೆ.

ನಮ್ಮ  ದೇಶ ಏಕೆ  ತಂತ್ರಜ್ಞಾನದಲ್ಲಿ ಹಿಂದುಳಿದಿದೆ ಎಂದರೆ ನಮ್ಮ ಸರ್ಕಾರಗಳು ಸಂಶೋಧನೆ ಮತ್ತು  ಅಭಿವೃದ್ಧಿ  ಕ್ಷೇತ್ರಕ್ಕೆ, ತನ್ನ ಜಿಡಿಪಿಯಲ್ಲಿ ಕೇವಲ ೦.೭ರಷ್ಟು ಮಾತ್ರ ವಿನಿಯೋಗ ಮಾಡುತ್ತಿದೆ. ಹೊಸ ತಂತ್ರಜ್ಞಾನವನ್ನು ಆವಿಷ್ಕಾರ ಮಾಡಲು ನಮ್ಮ ಯುವ ಪೀಳಿಗೆಗೆ ತಂತ್ರಜ್ಞಾನದ ಅರಿವು ಮುಖ್ಯ. ನಮ್ಮ ದೇಶದಲ್ಲಿ ಸುಮಾರು ೧೦,೦೦೦ ಶಿಕ್ಷಣ ಸಂಸ್ಥೆಗಳಲ್ಲಿ  80 ಲಕ್ಷ ಯುವ ಮಂದಿ ತಂತ್ರಜ್ಞಾನ ಕಲಿಯಲು ದಾಖಲಾಗಿದ್ದರೆ. ಅ ೮೦ ಲಕ್ಷ ಮಂದಿಯಲ್ಲಿ ಕೇವಲ ೫% ಮಂದಿ ಮಾತ್ರ ತಮ್ಮ ನೂತನ ಆವಿಷ್ಕಾರಗಳಿಗೆ ಪೇಟೆಂಟ್ ( ಹಕ್ಕುಪತ್ರ ) ಮಾಡಿಸಿದ್ದಾರೆ. ಈ ಅಂಶದಿಂದ ತಿಳಿಯಬಹುದು ನಮ್ಮ ಯುವ ಮಂದಿ ಉದ್ಯೋಗವನ್ನು ಪಡೆಯಲು ಮಾತ್ರ ಶಿಕ್ಷಣ ಕಲಿಯುತ್ತಾರೆ. ಬಹುತೇಕ ನಮ್ಮ ಮಂದಿ ಯುಟ್ಯೂಬ್ ಬಗ್ಗೆ ತಪ್ಪು ಕಲ್ಪನೆ ಹೊಂದಿದ್ದಾರೆ, ಅದೇನೆಂದರೆ ಲೈಕ್ಸ್, ಸಬ್ಸ್ ಕ್ರೈಬ್ ಇಂದ ದುಡ್ಡು ಬರುತ್ತದೆ ಎಂದು ತಿಳಿದುಕೊಂಡಿದ್ದಾರೆ. ವಾಸ್ತವವೇನೆಂದರೆ ನಾವು ಯುಟ್ಯೂಬ್ ನಲ್ಲಿ ದುಡ್ಡು ಮಾಡಬೇಕೆಂದರೆ ಕನಿಷ್ಠ ೧೦೦೦ ಮಂದಿ ಸಬ್‌ ಸ್ಕ್ರೈಬ್ ಆಗಬೇಕು ಮತ್ತು ಒಂದು ವರ್ಷದಲ್ಲಿ ನಮ್ಮ ವಿಡೀಯೂಗಳು ೪೦೦೦ ಗಂಟೆ ಪೂರ್ಣ ಮಾಡಿದ ನಂತರ, ಗೊಗಲ್ ನಮ್ಮ ಚಾನಲ್ ಅನ್ನು ಪರಿಶೀಲಿಸಿ ದುಡ್ಡು ಮಾಡಲು ನಿಮ್ಮ ಚಾನಲ್ ಅರ್ಹ ಎಂದು ತಿಳಿಸಿದ ನಂತರವೆ ನಮ್ಮಗೆ ದುಡ್ಡು ಬರುತ್ತದೆ. ನಮ್ಮ ಮಂದಿ ತಂತ್ರಜ್ಞಾನದ ವಿಷಯಗಳಲ್ಲಿ ಬಹಳಷ್ಟು ತಪ್ಪು ಕಲ್ಪನೆ ಹೊಂದಿದ್ದಾರೆ. ಅವುಗಳೆಂದರೆ : ರಾತ್ರಿಯೆಲ್ಲಾ ಮೊಬೈಲ್ ಚಾರ್ಜ್ ಗೆ ಹಾಕಿದ್ದಾರೆ ಮೊಬೈಲ್ ಹಾಳಾಗುತ್ತದೆ, ಮೊಬೈಲ್ ನಲ್ಲಿ ಪೂರ್ತಿ ನೆಟ್ವರ್ಕ್ ಇದ್ದರೆ ನೆಟ್ ವೇಗವಾಗಿರುತ್ತದೆ, ಕ್ಯಾಮೆರಾ ಗಳಲ್ಲಿ ಜಾಸ್ತಿ ಮೆಗಾಪಿಕ್ಸೆಲ್ ಇದ್ದರೆ ಫೋಟೋ ಚೆನ್ನಾಗಿ ಬರುತ್ತದೆ ಮತ್ತು ಗೂಗಲ್ ಅನ್ನು ಸರ್ಚ್ ಇಂಜಿನ್ ಎಂದು ತಿಳಿದಿಲ್ಲ. ಹೀಗೆ ಹಲವಾರು ತಂತ್ರಜ್ಞಾನದ ವಿಷಯಗಳ ಮೇಲೆ ನಮ್ಮ ಮಂದಿ ತಪ್ಪು ಕಲ್ಪನೆ ಹೊಂದಿದ್ದಾರೆ.

ನಮ್ಮ ದೇಶ ತಂತ್ರಜ್ಞಾನದಲ್ಲಿ ವೇಗವಾಗಿ ಬೆಳೆಯಬೇಕು. ನಮ್ಮ ಸರ್ಕಾರಗಳು ಎಲ್ಲಾ ಶಾಲಾ-ಕಾಲೇಜುಗಳಿಗೆ  ಇಂಟರ್ನೆಟ್ ಸೌಲಭ್ಯ ಕಲ್ಪಿಸಬೇಕು. ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ತಂತ್ರಜ್ಞಾನದ ಮಹತ್ವದ ಬಗ್ಗೆ ಜಾಗೃತಿ ಮೂಡಿಸಬೇಕು. ತಂತ್ರಜ್ಞಾನ ಕಲಿತ ಯುವ ಮಂದಿ ಬೇರೆ ದೇಶಗಳಿಗೆ ಕೆಲಸಕ್ಕೆ ಹೋಗದಂತೆ ಸರ್ಕಾರಗಳು ತಡೆದು ಅವರಿಗೆ ಇಲ್ಲಿಯೆ ಉದ್ಯೋಗ ಕಲ್ಪಿಸಬೇಕು. ಪ್ರತಿಯೊಂದು ಹಳ್ಳಿಗೆ ಇಂಟರ್ನೆಟ್ ನೀಡಿ, ಸ್ಥಳೀಯವಾಗಿ ಉದ್ಯೋಗ ನೀಡಬೇಕು. ಪ್ರತಿಯೊಂದು ಶಾಲೆಗೆ ತಂತ್ರಜ್ಞಾನ ಬರುವ ಶಿಕ್ಷಕರನ್ನು ನೇಮಕ ಮಾಡುವುದು ಅಥವಾ ಇರುವ ಶಾಲಾ ಶಿಕ್ಷಕರಿಗೆ ತಂತ್ರಜ್ಞಾನವನ್ನು ನುರಿತ ತಜ್ಞರಿಂದ ಅವರಿಗೆ ಹೇಳಿಕೊಡುವುದು. ಶಾಲಾ ದಿನಗಳಲ್ಲಿಯೇ ಮಕ್ಕಳಿಗೆ ಅಪ್ಲಿಕೇಶನ್ ಅನ್ನು ಕಂಡುಹಿಡಿಯಲು ಕೋಡಿಂಗ್ ಕಲಿಸುವುದು. ನಮ್ಮ ಯುವ ಮಂದಿ ಸಾಮಾಜಿಕ ಜಾಲತಣಗಳಲ್ಲಿ ವ್ಯರ್ಥವಾಗಿ ಸಮಯ ಹಾಳುಮಾಡದೆ, ತಮ್ಮ ವಿಧ್ಯಾಭ್ಯಾಸಕ್ಕೆ ಬೇಕಾಗುವ ಹಣವನ್ನು ಇಂಟರ್ನೆಟ್ ನಲ್ಲಿಯೇ ದುಡಿಯ ಬಹುದಾದಂತಹ ಹಲವಾರು ನಂಬಿಕಸ್ತ ಜಾಲತಾಣಗಳಿವೆ. ಯುವ ಮಂದಿ ಯುಟ್ಯೂಬ್ ಮತ್ತು ಗೂಗಲ್ ನಲ್ಲಿ ಲಭ್ಯವಿರುವ ಅಗಾದ ನಿಜ ಮಾಹಿತಿಗಳನ್ನು ತಿಳಿದು, ತಮ್ಮ  ಕೌಶಲ್ಯಗಳನ್ನು ಹೆಚ್ಚಿಸಿಕೊಳ್ಳಬೇಕು. ಯುವ ಮಂದಿ ಅನಗ್ಯತವಾಗಿ ತಮ್ಮ ಸಮಯ ಹಾಳುಮಾಡದೆ, ದೇಶದ ಪ್ರಗತಿಗೆ ಅಗತ್ಯವಾಗಿರುವ ವಿಷಯಗಳಿಗೆ ತಮ್ಮ ಅಮೂಲ್ಯವಾದಂತಹ ಸಮಯ ನೀಡಿದರೆ, ನಮ್ಮ ದೇಶ ತಂತ್ರಜ್ಞಾನದ ಕ್ಷೇತ್ರಗಳಲ್ಲಿ ಮುಂದುವರೆಯುತ್ತದೆ.

ಕಿರಣ್ ಕುಮಾರ್ ಡಿ


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x